ಪಲ್ಲವಿ : ಮುದ್ದು ಕೃಷ್ಣ ನಿದ್ದೆಮಾಡು ಸದ್ದು ಅಡಗಿದೆ ಕತ್ತಲಾಯಿತು
ಮಂದೆ ಗೋವ್ಗಳು ಮನೆಗೆಬಂದವು
ಹಾಲು ಉಣಲು ಆತುರಾಗಿವೆ
ನೊರೆಯಹಾಲು ಕುಡಿದು ಮಲಗು – ಮುದ್ದು ಕೃಷ್ಣ

ಚರಣ :  ಭೂತಚೇಷ್ಟೆ ಮನೆಯ ಹೊರಗೆ ಕೆಟ್ಟಕನಸನು ಕಾಣದಿರು
ನನ್ನ ಪ್ರಾಣಗತಿಯು ನೀನೇ – ಮುದ್ದು ಕೃಷ್ಣ

ಮೆತ್ತೆಹಾಸಿಗೆ ಹಾಸುವೆ ದುರ್ಗಯಂತ್ರವ ಕಟ್ಟುವೆ
ನಿನ್ನ ಕಾಯುವೆ ಮಗ್ಗುಲಲ್ಲಿ – ಮುದ್ದುಕೃಷ್ಣ

ಜೋಗುಳಾಡುವೆ ತಟ್ಟಿ ಮಲಗುವೆ – ಮನೆಯ ಕಾಯಲು
ಭಟರನಿಡುವೆ – ಚೇಷ್ಟೆ ಚಿಂತೆಯ ಬಿಟ್ಟುಮಲಗು

ಸದ್ದು ಮಾಡದೆ ಮಲಗು ಕೃಷ್ಣ ಜಯವು ನಿನ್ನದೇ
ನಿನ್ನ ಕಡೆಗೆ ಧೈರ್ಯಲಕ್ಷ್ಮಿ ಒಲಿವಳು – ಮುದ್ದುಕೃಷ್ಣ