ನಾಲತವಾಡ

ದೂರ:
ಜಿಲ್ಲಾ ಕೇಂದ್ರದಿಂದ-೧೦೦ ಕಿ.ಮೀ.
ತಾಲೂಕ ಕೇಂದ್ರದಿಂದ-೨೦ ಕಿ.ಮೀ.

ಶ್ರೀ ವೀರೇಶ್ವರರು

೨೦ನೇ ಶತಮಾನದ ಶರಣ ಶ್ರೇಷ್ಠರಾದ ಶ್ರೀ ವೀರೇಶ್ವರರ ಜನ್ಮಭೂಮಿ ನಾಲತವಾಡ. ಇದು ವಿಜಾಪುರದಿಂದ ೧೦೦ ಕಿ.ಮೀ. ಹಾಗೂ ಮುದ್ದೇಬಿಹಾಳದಿಂದ ೨೦ ಕಿ.ಮೀ. ದೂರವಿದೆ. ವೀರೇಶ ಶರಣರು ಶಿಕ್ಷಕರಾಗಿ, ಕೃಷಿಕರಾಗಿ ಜಂಗಮ ದಾಸೋಹದಲ್ಲಿ ನಿರತರಾಗಿದ್ದ ಶರಣರು. ಗ್ರಾಮ ದೇವತೆಯ ಜಾತ್ರೆಯಲ್ಲಿ ಪ್ರಾಣಿ ಬಲಿ ಕೊಡುವುದನ್ನು ವಿರೋಧಿಸಿದರು. ಇವರು ಹುಟ್ಟಿ ಬೆಳೆದದ್ದು ನಾಲತವಾಡವಾದರೂ ಸಾಧನೆ ಮಾಡಿದ ಕ್ಷೇತ್ರ ಸೋಲಾಪುರವು ಆಗಿದೆ. ಇಲ್ಲಿ ಶರಣರು ಹುಟ್ಟಿ ಬೆಳೆದ ಮಹಾಮನೆ ಇರುತ್ತದೆ.

 

ಸರೂರ

ದೂರ:
ಜಿಲ್ಲಾ ಕೇಂದ್ರದಿಂದ-೮೫ ಕಿ.ಮೀ.
ತಾಲೂಕ ಕೇಂದ್ರದಿಂದ-೦೫ ಕಿ.ಮೀ.

ಶ್ರೀ ರೇವಣ್ಣಸಿದ್ದೇಶ್ವರ ದೇವಸ್ಥಾನ (೭ ಗುಡಿ)

 

ಶ್ರೀ ರೇವಣ್ಣಸಿದ್ದೇಶ್ವರ ದೇವಸ್ಥಾನ

ವಿಜಾಪುರದಿಂದ ೮೫ ಕಿ.ಮೀ. ಹಾಗೂ ಮುದ್ದೇಬಿಹಾಳದಿಂದ ೫ ಕಿ.ಮೀ. ದೂರದಲ್ಲಿರುವ ಪುಟ್ಟ ಗ್ರಾಮ ಸರೂರ. ಅಲ್ಲಿ ದೊರೆತ ಶಾಸನದ ಪ್ರಕಾರ ೧೨೧೨ರಲ್ಲಿ ನಿರ್ಮಿಸಿದ ಚಾಲುಕ್ಯ ಶೈಲಿಯ ಸಿದ್ಧರಾಮೇಶ್ವರ ದೇವಸ್ಥಾನವಿದೆ. ಇದಕ್ಕೆ ಈಗ ರೇವಣಸಿದ್ಧೇಶ್ವರ ದೇವಾಲಯವೆಂದೂ ಕರೆಯುತ್ತಾರೆ. ಇದರಲ್ಲಿ ಐದು ಗೋಪುರಗಳ ಹಾಗೂ ಎರಡು ಗೋಪುರಗಳ ಎರಡು ದೇವಸ್ಥಾನಗಳಿದ್ದು, ಅವು ಏಳು ಗುಡಿಯೆಂದೂ ಹೆಸರುವಾಸಿಯಾಗಿವೆ. ಇದನ್ನು ಹೊನ್ನಗುಂದದ ಬೀಚಗೌಡನು, ಅರಸನಾಳದ ಮಂಕಿಸಿದ್ಧನಿಂದ ಕಟ್ಟಿಸಿದನು.

 

ಯಲಗೂರ

ದೂರ:
ತಾಲೂಕಾ ಕೇಂದ್ರದಿಂದ – ೨೫ ಕಿ.ಮೀ.
ಜಿಲ್ಲಾ ಕೇಂದ್ರದಿಂದ-೬೫ ಕಿ.ಮೀ.

ಜಿಲ್ಲಾ ಕೇಂದ್ರದಿಂದ ೬೫ ಕಿ.ಮೀ. ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ ೧೩ರ ಮೇಲೆ ಯಲಗೂರ ಗ್ರಾಮವಿದೆ. ಕೃಷ್ಣಾ ತಟದಲ್ಲಿರುವ ಇಲ್ಲಿ ಪ್ರಸಿದ್ಧ ಆಂಜನೇಯ (ಯಲಗೂರದಪ್ಪ) ದೇವಸ್ಥಾನವಿದೆ. ಈ ದೇವಾಲಯಕ್ಕೆ ೩೫೦ ವರ್ಷಗಳ ಇತಿಹಾಸವಿದೆ. ನಾಡಿನ ಜನ ಇಲ್ಲಿಗೆ ಆಗಮಿಸಿ ದರ್ಶನ ಪಡೆಯುತ್ತಾರೆ

 

ತಂಗಡಗಿ

ದೂರ:
ಜಿಲ್ಲಾ ಕೇಂದ್ರದಿಂದ-೯೮ ಕಿ.ಮೀ.
ತಾಲೂಕ ಕೇಂದ್ರದಿಂದ-೧೮ ಕಿ.ಮೀ.

ರಕ್ಕಸ ತಂಗಡಗಿ ಸೇತುವೆ ಹಾಗೂ ಶರಣೆ ನೀಲಾಂಬಿಕ, ಹಡಪದ ಅಪ್ಪಣ್ಣನವರ ಸಮಾಧಿಗಳು

ತಂಗಡಗಿಯು ಒಂದು ಐತಿಹಾಸಿಕ ಸ್ಥಳವಾಗಿದೆ. ಮುದ್ದೇಬಿಹಾಳದಿಂದ ೧೮ ಕಿ.ಮೀ. ಅಂತರದಲ್ಲಿ ಕೃಷ್ಣಾ ತಟದಲ್ಲಿದೆ. ಮಹಾತ್ಮ ಬಸವಣ್ಣನವರ ಆಚಾರ ಪತ್ನಿ ನೀಲಾಂಬಿಕೆ ಲಿಂಗೈಕ್ಯ ಹೊಂದಿರುವ ಸ್ಥಳದಲ್ಲಿ ಈ ಸ್ಮಾರಕ ನಿರ್ಮಿಸಲಾಗಿದೆ. ಜೊತೆಗೆ ಮಹಾಶಿವಶರಣ ಹಡಪದ ಅಪ್ಪಣ್ಣನವರ ಸ್ಮಾರಕವೂ ಇಲ್ಲಿದೆ. ಐತಿಹಾಸಿಕ ರಕ್ಕಸ-ತಂಗಡಗಿ ಯುದ್ಧ ನಡೆದ ಸ್ಥಳ ಇದಾಗಿದೆ.

 

ಮಿಣಜಗಿ

ದೂರ:
ಜಿಲ್ಲಾ ಕೇಂದ್ರದಿಂದ-೭೫ ಕಿ.ಮೀ.
ತಾಲೂಕ ಕೇಂದ್ರದಿಂದ-೨೦ ಕಿ.ಮೀ.

ಮಿಣಜಗಿ ಗ್ರಾಮವು ವಿಜಾಪುರದಿಂದ ಪೂರ್ವಕ್ಕೆ ೭೫ ಕಿ.ಮೀ. ಹಾಗೂ ಮುದ್ದೇಬಿಹಾಳದಿಂದ ಈಶಾನ್ಯಕ್ಕೆ ೨೦ ಕಿ.ಮೀ. ದೂರದಲ್ಲಿದೆ. ಇಲ್ಲಿನ ಭೂ ಗರ್ಭದಲ್ಲಿ ಪದರು ಶಿಲೆಯ ಸಂಪತ್ತಿದೆ. ಈ ಪರಸಿ ಕಲ್ಲುಗಳನ್ನು ಮನೆ, ಮಠ, ಮಂದಿರಗಳಿಗೆ ನೆಲ ಹಾಸಿಗೆ ಮತ್ತು ಕಟ್ಟಡಕ್ಕಾಗಿ ಬಳಸುತ್ತಾರೆ.