ಪ್ರವಾಸವು ಶಿಕ್ಷಣದ ಮಹತ್ವದ ಅಂಗ. ‘ದೇಶ ಸುತ್ತು-ಕೋಶ ಓದು’ ಎಂಬ ನಾಣ್ಣುಡಿಯಂತೆ ಮನುಷ್ಯನ ಜೀವನ ಓದಿನಿಂದ ಮಾತ್ರ ಪರಿಪೂರ್ಣವಾಗದೆ ಅನೇಕ ವಿಧ್ಯಮಯ ಸ್ಥಳಗಳಿಗೆ ಭೇಟಿ ನೀಡಿ ಪಡೆದುಕೊಳ್ಳುವ ನೈಜ ಅನುಭವದಿಂದ ಮಾತ್ರ ಜೀವನ ಸಾರ್ಥಕವಾಗುತ್ತದೆ ಪ್ರವಾಸದಿಂದ ಜ್ಞಾನ ಬಂಢಾರವನ್ನು ಹೆಚ್ಚಿಸಿಕೊಳ್ಳಬಹುದು. ಸರ್ವಶಿಕ್ಷಣ ಅಭಿಯಾನದಡಿಯಲ್ಲಿ ಚಿಣ್ಣರ ಕರ್ನಾಟಕ ದರ್ಶನ ಕಾರ್ಯಕ್ರಮವು ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಅನುಷ್ಠಾನದಲ್ಲಿದೆ. ಪ್ರಸಕ್ತ ಸಾಲಿನಲ್ಲಿ ಮಾನ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರ ಸಲಹೆಯಂತೆ ಸ್ವಲ್ಪ ಬದಲಾವಣೆಗೊಳಪಟ್ಟು ಚಿಣ್ಣರ ಜಿಲ್ಲಾದರ್ಶನವಾಗಿ ರೂಪುಗೊಂಡಿದೆ. ಅದರಂತೆ ಮಕ್ಕಳು ತಮ್ಮ ಜಿಲ್ಲೆಯೊಳಗಿನ ಐತಿಹಾಸಿಕ-ಧಾರ್ಮಿಕ ಪ್ರೇಕಣೀಯ ಸ್ಥಳಗಳು, ಭೌಗೋಲಿಕ ಪ್ರದೇಶಗಳು, ಕವಿಗಳು ಜನಿಸಿದ ಸ್ಥಳಗಳು ನದಿಗಳು, ಉದ್ದಿಮೆಗಳು ಇತ್ಯಾದಿಗಳ ಸ್ಥೂಲ ಪರಿಚಯವನ್ನೊಳಗೊಂಡ ಕೈಪಿಡಿಯನ್ನು ಸಿದ್ಧಪಡಿಸಲಾಗಿದೆ. ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುವಾಗ ಮಾರ್ಗದರ್ಶನಕ್ಕಾಗಿ ಶಿಕ್ಷಕರು-ಮಕ್ಕಳು ಬಳಸಲು ಸೂಕ್ತವಾದ ರೀತಿಯಲ್ಲಿ ಇದನ್ನು ರಚಿಸಲಾಗಿದೆ.

ಈ ಕೈಪಿಡಿಯನ್ನು ರಚಿಸಲು ಪೂರಕ ಮಾಹಿತಿ ಹಾಗೂ ಚಿತ್ರಗಳನ್ನು ಪೂರೈಸಿದ ಜಿಲ್ಲೆಯ ವಿವಿಧ ತಾಲೂಕುಗಳ ಬಿ.ಆರ್.ಸಿ. ಹಾಗೂ ಅವರ ಸಿಬ್ಬಂದಿ ವರ್ಗದವರಿಗೂ, ಡಯಟನಲ್ಲಿ ಏರ್ಪಡಿಸಿದ ಕೈಪಿಡಿಯ ಸಾಹಿತ್ಯ ರಚನಾ ಕಾರ್ಯಾಗಾರದಲ್ಲಿ ಭಾಗವಹಿಸಿದ ಡಯಟ್‌ನ ಸಿ.ಎಂ.ಡಿ.ಇ. ವಿಭಾಗದ ಅಧಿಕಾರಿಗಳು ಹಾಗೂ ಸಾಹಿತ್ಯ ರಚನಾ ತಂಡದ ಎಲ್ಲಾ ಸಂಪನ್ಮೂಲ ವ್ಯಕ್ತಿಗಳಿಗೂ ಕೃತಜ್ಞತೆಗಳು

 

ಬಿ.ವ್ಹಿ. ರಾಜೇಂದ್ರಪ್ರಸಾದ
ಉಪನಿರ್ದೇಶಕರು (ಆಡಳಿತ)
ಸಾರ್ವಜನಿಕ ಶಿಕ್ಷಣ ಇಲಾಖೆ
ವಿಜಾಪುರ

ಕೆ.ಹೆಚ್. ಕಾಕನೂರ
ಮುಖ್ಯ ಕಾರ್ಯನಿರ್ವಾಹಕ
ಅಧಿಕಾರಿಗಳು ಜಿಲ್ಲಾ ಪಂಚಾಯತ್,
ವಿಜಾಪುರ

ಸಿ.ವ್ಹಿ. ಹಿರೇಮಠ
ಉಪನಿರ್ದೇಶಕರು (ಅಭಿವೃದ್ಧಿ)
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ
ವಿಜಾಪುರ