ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದಲ್ಲಿ ೬-೧೪ ವಯಸ್ಸಿನ ಮಕ್ಕಳು, ನಿರಂತರವಾಗಿ ಶಾಲೆಗೆ ದಾಖಲಾಗಿ ಹಾಜರಾಗಿ, ಗುಣಮಟ್ಟದ ಶಿಕ್ಷಣ ಪಡೆಯುವತ್ತ ದಾಪುಗಾಲು ಹಾಕಿದ್ದಾರೆ. ಸರ್ಕಾರವು ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ, ಹಿಂದಿನ ವರ್ಷಗಳಲ್ಲಿ ಪ್ರತಿ ಬ್ಲಾಕ್ ನಿಂದ ೫೦ ವಿದ್ಯಾರ್ಥಿಗಳಿಗೆ ಮಾತ್ರ, ಚಿಣ್ಣರ ಕರ್ನಾಟಕ ದರ್ಶನ ಕಾರ್ಯಕ್ರಮದಲ್ಲಿ ಅವಕಾಶವಿತ್ತು. ಪ್ರಸ್ತುತ ಪ್ರತಿ ಬ್ಲಾಕ್ ನಿಂದ ೪೦೦ ವಿದ್ಯಾರ್ಥಿಗಳಿಗೆ ಆಯಾ ಜಿಲ್ಲೆಯ ದರ್ಶನ ಕಾರ್ಯಕ್ರಮ ಏರ್ಪಡಿಸಿರುವುದು ಸಂತಸದ ವಿಷಯವಾಗಿದೆ. ಮಗುವಿಗೆ ಕೇವಲ ಪಠ್ಯ ಪುಸ್ತಕದಲ್ಲಿನ ಪ್ರಾಕೃತಿಕ, ಶೈಕ್ಷಣಿಕ, ಐತಿಹಾಸಿಕ ವಿಷಯಗಳ ಬಗ್ಗೆ ತರಗತಿ ಕೊಠಡಿಯಲ್ಲಿ ಬೋಧಿಸಲಾಗುತ್ತಿದೆ. ಈ ವಿಷಯಗಳ ಕುರಿತು ಖುದ್ದು ಅಧ್ಯಯನಕ್ಕಾಗಿ ಹಾಗೂ ಬುದ್ಧಿ ವಿಕಾಸಕ್ಕಾಗಿ, ಹಾಸನ ಜಿಲ್ಲಾ ದರ್ಶನ ಪ್ರವಾಸದ ಉಪಯೋಗವನ್ನು ಜಿಲ್ಲೆಯ ಪ್ರತಿ ಬ್ಲಾಕ್ ನ ೫, ೬, ೭ನೇ ತರಗತಿಯ ಪ. ಪಂಗಡ, ಪ. ಜಾತಿ ಹಾಗೂ ಪ್ರತಿಭಾನ್ವಿತ ಮಕ್ಕಳಿಗೆ ಅವಕಾಶ ಕಲ್ಪಿಸಿದೆ. ಶಿಕ್ಷಕರು ಮತ್ತು ಮಕ್ಕಳು ಈ ಪ್ರವಾಸದಡಿಯಲ್ಲಿ ಭಿನಾತ್ಮಕ ಮನೋಭಾವನೆ ಮತ್ತು ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಲೆಂದು ಹಾರೈಸುತ್ತೇವೆ. ಚಿಣ್ಣರ ಹಾಸನ  ಜಿಲ್ಲಾ ದರ್ಶನ ಸಾಹಿತ್ಯವನ್ನು ಸಿದ್ಧಪಡಿಲು ಸಹಕರಿಸಿದ ೮ ಬ್ಲಾಕ್ ಗಳ ಎಲ್ಲಾ ಶಿಕ್ಷಣಾಸಕ್ತರು, ಸಂಪನ್ಮೂಲ ವ್ಯಕ್ತಿಗಳಿಗೆ ಹಾಗೂ ಸಹೃದಯರಿಗೆ ನಮ್ಮ ಅಭಿನಂದನೆಗಳು.

 

 

ಶ್ರೀಮತಿ ಗೌಸಿಯ ಬೇಗಂ

ಪ್ರಾಂಶುಪಾಲರು

ಪದನಿಮಿತ್ತ ಉಪನಿರ್ದೇಶಕರು(ಅಭಿವೃದ್ಧಿ)

ಡಯಟ್, ಹಾಸನ.

 

ಶ್ರೀ ಚಾಮರಾಜ ಎ.ಟಿ.

ಉಪನಿರ್ದೇಶಕರು

ಸಾರ್ವಜನಿಕ ಶಿಕ್ಷಣ ಇಲಾಖೆ

ಹಾಸನ.

 

ಶ್ರೀ ಎಸ್.ಟಿ. ಅಂಜನ್‌ಕುಮಾರ್ ಕೆ.ಎ.ಎಸ್.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ

ಜಿಲ್ಲಾ ಪಂಚಾಯತ್,

ಹಾಸನ.