ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲುಗಾರಿಕೆಯ ಪ್ರತಿಷ್ಠಿತ ಯೋಜನೆ “ಸರ್ವ ಶಿಕ್ಷಣ ಅಭಿಯಾನ”. ಪ್ರಾಥಮಿಕ ಶಿಕ್ಷಣದ ಅಭ್ಯುದಯವೇ ಸರ್ವ ಶಿಕ್ಷಣ ಅಭಿಯಾನದ ಪರಮ ಗುರಿ. ೬ ರಿಂದ ೧೪ ವಯೋಮಾನದ ವಯಸ್ಸಿನ ಪ್ರತಿಯೊಂದು ಮಗು ಶಾಲಾ ವ್ಯವಸ್ಥೆಯ ಭಾಗವಾಗಿರಬೇಕು. ಸಾರ್ವತ್ರಿಕ ದಾಖಲಾತಿ, ಸಾರ್ವತ್ರಿಕ ಹಾಜರಾತಿ ಹಾಗೂ ಸಾರ್ವತ್ರಿಕ ಕಲಿಕೆ ಪರಿಣಾಮಕಾರಿಯಾಗಿ ಈಡೇರ ಬೇಕಾದರೆ ಹಲವು ಹತ್ತು ಆವಿಷ್ಕೃತ ಚಟುವಟಿಕೆಗಳನ್ನು ಗುರಿ ಸಾಧನೆಯ ಮಧ್ಯವರ್ತನೆಗಳಾಗಿ ಮಿಳಿತಗೊಳಿಸುವುದು ಅನಿವಾರ್ಯ ಮತ್ತು ಅವಶ್ಯಕ.

ಈ ಹಿನ್ನೆಲೆಯಲ್ಲಿ ಜಿಲ್ಲೆಯ ವೈವಿಧ್ಯಮಯ ಸಾಂಸ್ಕೃತಿಕ, ಐತಿಹಾಸಿಕ, ಧಾರ್ಮಿಕ ಸ್ಥಳಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಪ್ರಭುತ್ವ ಮಟ್ಟದ ಕಲಿಕೆಗೆ ಸಹಕರಿಸಿ ಪ್ರೋತ್ಸಾಹಿಸ ಬೇಕಾಗುತ್ತದೆ.

ಹಾಗಾಗಿ ಮಕ್ಕಳ ಒಳತೋಟಿಯನ್ನು ಉದ್ದೀಪಿಸುವ ಸಲುವಾಗಿ “ಚಿಣ್ಣರ ಜಿಲ್ಲಾ ದರ್ಶನ” ಕಾರ್ಯಕ್ರಮ  ರೂಪಿಸಲಾಗಿದೆ. ೫, ೬, ೭ನೇ ತರಗತಿ ಒಳಗೊಂಡಂತೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ಹಾಗೂ ಇತರೆ ಪ್ರತಿಭಾವಂತ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯಲಾಗುತ್ತದೆ.

ಇದೀಗ ಚಿಣ್ಣರ ಕರ್ನಾಟಕ ದರ್ಶನ ಕಾರ್ಯಕ್ರಮ “ಚಿಣ್ಣರ ಜಿಲ್ಲಾ ದರ್ಶನ” ಎಂದು ಬದಲಾಯಿಸಿ “ಮನೆಗೆದ್ದು ಮಾರುಗೆಲ್ಲು” ತತ್ವವನ್ನಿಲ್ಲಿ ಅಳವಡಿಸಲಾಗಿದೆ. ದಾವಣಗೆರೆ ಜಿಲ್ಲಾ ಚಿಣ್ಣರ ದರ್ಶನ ಹೊತ್ತಿಗೆಯು ಸಹ ಜಿಲ್ಲೆಯ ಪ್ರಾಮುಖ್ಯತೆ ಹಾಗೂ ಜಿಲ್ಲೆ ಒಳಗೊಂಡಿರುವ ೦೭ ಶೈಕ್ಷಣಿಕ ತಾಲ್ಲೂಕುಗಳ ಪ್ರಮುಖ ಸ್ಥಳಗಳ ಐತಿಹಾಸಿP, ಸಾಂಸ್ಕೃತಿಕ, ಪಾರಂಪರಿಕ, ಧಾರ್ಮಿಕ, ಪ್ರಾಕೃತಿಕ ಹಾಗೂ ಕಲಾತ್ಮಕ ಅಂಶಗಳನ್ನು ಚಿತ್ರ ಸಹಿತ ಬಿಂಬಿಸುತ್ತದೆ.

ಪ್ರವಾಸ ಹೊರಡುವ ಪೂರ್ವದಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ಯುವ ಶಿಕ್ಷಕರು ಪ್ರವಾಸದ ತಾಣಗಳ ಬಗ್ಗೆ ಪೂರ್ವ ಜ್ಞಾನವನ್ನು ಸಂಗ್ರಹಿಸಿ ಕೊಂಡು ಮಕ್ಕಳೊಂದಿಗೆ ಹಂಚಿಕೊಳ್ಳಬೇಕು. ಪ್ರವಾಸ ಕಾರ್ಯಕ್ರಮ ಮಕ್ಕಳ ಜೀವನದಲ್ಲಿ ಮರೆಯಲಾಗದ ಅನುಭವವಾಗಿ ಮನೋಭಿತ್ತಿಯ ಮೇಲೆ ಅಚ್ಚೊತ್ತಿ ಸದಾ ಸಂತಸ ಹೊರಸೂಸುವಂತಾಗಬೇಕು.

– ಸಹಿ –

ಪ್ರಾಂಶುಪಾಲರು ಹಾಗೂ ಪದನಿಮಿತ್ತ
ಉಪ ನಿರ್ದೇಶಕರು (ಅಭಿವೃದ್ಧಿ)
ಡಯಟ್, ದಾವಣಗೆರೆ

ಉಪ ನಿರ್ದೇಶಕರು (ಆಡಳಿತ)
ಸಾರ್ವಜನಿಕ ಶಿಕ್ಷಣ ಇಲಾಖೆ
ದಾವಣಗೆರೆ

ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು
ಜಿಲ್ಲಾ ಪಂಚಾಯತ್
ದಾವಣಗೆರೆ