ಕುರುಡಮಲೆ

ತಾಲ್ಲೂಕು ಕೇಂದ್ರದಿಂದ : ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೪೦ ಕಿ.ಮೀ

38_Kolar

ಕುರುಡಮಲೆ ದೇವಾಲಯ

ಶ್ರೀವಿನಾಯಕನ ಆರಾಧನೆಗೆ ಪ್ರಖ್ಯಾತಿಯಾಗಿರುವ ಕುರುಡುಮಲೆ ದೇವಾಲಯವು ಹೊಯ್ಸಳ,ವಿಜಯನಗರ ಅರಸರ ಕಾಲದ ಶೈಲಿಗೆ ಹೋಲುತ್ತದೆ. ಇದು ಬೆಟ್ಟ ಗುಡ್ಡಗಳಿಂದ ಕೂಡಿದ್ದು ನಯನ ಮನೋಹರವಾಗಿದೆ. ಬೆಟ್ಟಕ್ಕೆ” ಕೌಂಡಿಣ್ಯಗಿರಿ”ಎಂಬ ಹೆಸರಿದೆ.ಇದರ ತಪ್ಪಲಿನಲ್ಲಿ ಮಹಾಗಣಪತಿ ದೇವಾಲಯವಿದೆ.ಸುಮಾರು ಎಂಟೂವರೆ ಅಡಿ ಎತ್ತರವಿರುವ ವಿನಾಯಕನ ಮೂರ್ತಿಯು ಎಂತಹವರನ್ನೂ ಅಕರ್ಷಿಸುತ್ತದೆ. ಈಚೆಗೆ ಧರ್ಮಸ್ಥಳ ದೇವಾಲಯ ಅಭಿವೃದ್ಧಿ ಸಮಿತಿಯವರು ದೇವಾಲಯದ ಒಂದು ಭಾಗವನ್ನು ದುರಸ್ಥಿ ಮಾಡುವಾಗ ಅಪರೂಪದ ವ್ಯಾಲಿ ಮೆಟ್ಟಿಲು ಸಿಕ್ಕಿದೆ. ಇದೇ ಗ್ರಾಮದ ಮತ್ತೊಂದು ಪುರಾತನ ಸೋಮೇಶ್ವರ ದೇವಾಲಯ ಅಪರೂಪದ ಶಿಲ್ಪ ಕಲೆಗಳಿಂದ ಕೂಡಿದ್ದು, ಬೇಲೂರು ಹಳೇಬೀಡನ್ನು ನೆನಪಿಸುತ್ತದೆ.

 

ಶ್ರೀ ಆಂಜನೇಯ ಸ್ವಾಮಿ ದೇವಾಲಯ, ಮುಳಬಾಗಿಲು

ತಾಲ್ಲೂಕು ಕೇಂದ್ರದಿಂದ : ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೩೦ ಕಿ.ಮೀ

39_Kolar

 

ಡಿ.ವಿ.ಜಿ.ಶಾಲೆ

ಡಿ.ವಿ.ಜಿ.ಶಾಲೆ

ಮುಳಬಾಗಿಲು ರಾಜ್ಯದ ಪೂರ್ವ ದಿಕ್ಕಿನಲ್ಲಿದ್ದು ಮೂಡಲ ಬಾಗಿಲು ಎಂದು ಹೆಸರಾಗಿದೆ. ವಿಜಯನಗರ ಸಾಮ್ರಾಜ್ಯದ ಎರಡನೇ ರಾಜಧಾನಿಯಾಗಿತ್ತು. ಪಟ್ಟಣ ದೇವಾಲಯಗಳ ಬೀಡು. ಸುಮಾರು ನೂರಕ್ಕೂ ಹೆಚ್ಚು ದೇವಾಲಯಗಳು ಪಟ್ಟಣದಲ್ಲಿವೆ. ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಶ್ರೀ ಆಂಜನೇಯಸ್ವಾಮಿ ದೇವಾಲಯವು ಪಾಂಡವರಲ್ಲಿ ಒಬ್ಬನಾದ ಅರ್ಜುನನಿಂದ ನಿರ್ಮಿಸಲ್ಪಟ್ಟಿದೆ ಎಂದು ಇತಿಹಾಸವಿದೆ.

ಕನ್ನಡ ದಾಸ ಸಾಹಿತ್ಯದ ಪ್ರಥಮ ಆದ್ಯರು ಶ್ರೀಪಾದರಾಜರು, ಪ್ರಥಮವಾಗಿ ಸಂಸ್ಕೃತದಿಂದ ಕನ್ನಡಕ್ಕೆ ದೇವರನಾಮಗಳನ್ನು ೬೦೦ ವರ್ಷಗಳ ಹಿಂದೆಯೇ ಕನ್ನಡಕ್ಕೆ ತರ್ಜಿಮೆ ಮಾಡಿ, ದಾಸ ಸಾಹಿತ್ಯವನ್ನು ಪ್ರಸಿದ್ಧಗೊಳಿಸಿದರು. ಪಟ್ಟಣದ ಸುತ್ತಮುತ್ತಲು ಹಲವಾರು ದೇವಾಲಯಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಂಜನೇಯಸ್ವಾಮಿ ದೇವಾಲಯಗಳು ಕಂಡು ಬರುತ್ತವೆ. ಪಟ್ಟಣದ ಬಾಬಾ ಹೈದರ್ ಆವಾಲಿಯಾ ದರ್ಗಾ ದೇಶದಲ್ಲಿ ಪ್ರಸಿದ್ಧವಾದುದು. ವರ್ಷಕ್ಕೊಮ್ಮೆ ಉರುಸ್ ನಡೆಯುತ್ತದೆ.

ಕನ್ನಡದ ಪ್ರಸಿದ್ಧ ಕವಿ ಮಂಕುತಿಮ್ಮನ ಕಗ್ಗ ಕೃತಿ ಡಿ.ವಿ. ಗುಂಡಪ್ಪನವರು ಹುಟ್ಟಿದ್ದು ಮುಳಬಾಗಿಲು ಪಟ್ಟಣದಲ್ಲಿ ಡಿ.ವಿ.ಜಿ.ಯವರ ಮನೆಯನ್ನು ಶಾಲೆಯನ್ನಾಗಿ ಪರಿವರ್ತಿಸಲಾಗಿದೆ.

 

ವಿರೂಪಾಕ್ಷಿ

ತಾಲ್ಲೂಕು ಕೇಂದ್ರದಿಂದ: ೩ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೩೩ ಕಿ.ಮೀ

ವಿರೂಪಾಕ್ಷಿ ದೇವಾಲಯ

ವಿರೂಪಾಕ್ಷಿ ದೇವಾಲಯ

ತಾಲ್ಲೂಕಿನ ವಿರೂಪಾಕ್ಷಿ ದೇವಾಲಯದ ಸಮುಚ್ಛಯ ಸುಮಾರು ೫ ಎಕರೆ ವಿಸ್ತೀರ್ಣವುಳ್ಳ ಬೃಹತ್ ದೇವಾಲಯವಾಗಿದೆ. ವಿಜಯನಗರದ ಎರಡನೇ ರಾಜಧಾನಿಗೆ ವಿರೂಪಾಕ್ಷಿ ಕೇಂದ್ರವಾಗಿತ್ತು. ರಥಸಪ್ತಮಿಯ ದಿನ ಸೂರ್ಯನ ಕಿರಣ ಗರ್ಭಗುಡಿಯ ವಿಗ್ರಹದ ಮೇಲೆ ಬೀಳುತ್ತದೆ. ವಿಜಯನಗರ ಅರಸರ ದಂಡನಾಯಕರಾದ ಲಕ್ಕಣ್ಣ ಮತ್ತು ಮಾದಣರು ಈ ಭವ್ಯವಾದ ದೇವಾಲಯವನ್ನು  ಕಟ್ಟಿಸಿರುತ್ತಾರೆ. ದೇವಾಲಯದ ಮುಖ್ಯ ದ್ವಾರವು ಮೂಡಣದ ದಿಕ್ಕಿನಲ್ಲಿದ್ದು ಎದುರಿಗಿರುವ ಗೋಪುರವು  ದೇವಾಲಯಕ್ಕೆ ಶೋಭೆಯನ್ನು ತರುತ್ತಿದೆ.


ಆವಣಿ

ತಾಲ್ಲೂಕು ಕೇಂದ್ರದಿಂದ : ೧೨ ಕಿ.ಮೀ
ಜಿಲ್ಲಾ ಕೇಂದ್ರದಿಂದ : ೪೨ ಕಿ.ಮೀ

ಆವಣಿ ರಾಮಲಿಂಗೇಶ್ವರಸ್ವಾಮಿ ದೇವಾಲಯ

ಆವಣಿ ರಾಮಲಿಂಗೇಶ್ವರಸ್ವಾಮಿ ದೇವಾಲಯ

ಮತ್ತೊಂದು ಪುರಾತನ ಶಿಲ್ಪ ಕಲೆಯ ಸುಂದರ ದೇವಾಲಯ ಸಮುಚ್ಛಯ ಆವಣಿ ಗ್ರಾಮದಲ್ಲಿ ಕಾಣಬಹುದು. ರಾಮಲಿಂಗೇಶ್ವರ ಸ್ವಾಮಿಯ ಆವರಣದಲ್ಲಿ ೧೨ ದೇವಾಲಯ ಸಮುಚ್ಛಯಗಳಿವೆ. ಚೋಳರಿಂದ ವಿಜಯನಗರದ ಕಾಲದ ವರೆಗೂ ಈ ದೇವಾಲಯಗಳು ಅಭಿವೃದ್ಧಿ ಹೊಂದಿರುತ್ತದೆ. ದೇವಾಲಯದ ಸುತ್ತಲೂ ಕನ್ನಡ ಮತ್ತು ತಮಿಳು ಶಿಲಾಶಾಸನಗಳಿವೆ.