ಮುಳುಗಿಹೋದಿಯಲ್ಲೋ | ಭವದಲಿ ||
ತಿಳಿಯದೆ ಜ್ಞಾನವ ಗುರುಮುಖದಿಂದಲಿ |
ಹೊಲೆತನು ನಾನೆಂಬ ಮೋಹಕೆ ಶಿಲ್ಕಿ                  || ಅಪ ||

ಕುಲಛಲ ಗೋತ್ರಗಳು | ಪಿತಸುತ | ಲಲನೆಯ ಮೋಹದೊಳು ||
ಶಿಲುಕಿದ ಮನವನು ತೆಗೆಯದೆ ನರಕದ |
ಹುಳುವಿನ ಪರಿ ಸಂಸಾರದಕೂಪದಿ           || ೧ ||

ಓದಿ ತರ್ಕಶಾಸ್ತ್ರ | ತತ್ವದ | ಹಾದಿ ತಿಳಿಯದಿರಲು ||
ಸಾಧಿಸಿ ಶಿವ – ರಾಮೆನುತ ಗಂಭೀರದಿ |
ಓದಿದ ಗಿಣಿಮಲ ತಿಂದಂತಹುದು             || ೨ ||

ಪಾಯಸವನು ಕೊಡಲು | ತಿನ್ನದ | ನಾಯಿಕುನ್ನಿಯಂತೆ |
ರಾಯ ಶ್ರೀ ಗುರು ಮಹಲಿಂಗ ನೆನ್ನಯ ||
ಕಾಯದಿ ಇರುವದ ಕಾಣದೆ ವ್ಯರ್ಥದಿ                   || ೩ ||