ನಿಕಾಹದ ಕೊನೆಯ ಹಂತದಲ್ಲಿ ಚಪ್ಪರದಲ್ಲಿ ಉಲಿಯುವ ‘ವಿದಾಯ’ದ ಹಾಡುಗಳು ಸ್ಫುರಿಸುವ ಭಾವನೆಗಳು ಎಂಥವರ ಹೃದಯಗಳನ್ನೂ ಕಲಕುತ್ತವೆ:
ಕಲಿಯಾಂ ಮಂಗಾಯಿ ಬಾಜಾರಸೆ
ಗಜರೆ ಬನಾಯಿ ಗೋರೆ ಹಾಥ್ಸೆ
ಪೆಹನೋ ಬೇಟಿ ತೂ ಹೈ ಪ್ಯಾರಿ
ಹೋಗಯಿ ತೊ ಕಿನಕಿ ಪರಾಯಿ
ಕಿತನೆ ಚಾಂವಸೆ ಪಾಲಿ ಬೇಟಿ
ಕಿತನೆ ಲಾಡಂಸೆ ಪಾಲಿ ಬೇಟಿ
ಹೋಗಯಿ ತೂ ಪರಾಯಿ ತಾಬೆದಾರಿ
(ಮೊಗ್ಗುಗಳ ತರಿಸಿದೆ ಬಾಜಾರಿನಿಂದ
ಹೂ ಹೆಣೆದೆ ಶುದ್ಧ ಹಸ್ತಗಳಿಂದ
ಮುಡಿದುಕೋ ಪ್ರೀತಿಯ ಮಗಳೆ ನೀನು
ನೀನಾದೆ ಈಗ ಬೇರೆಯವರ ಸೊತ್ತು
ಎಷ್ಟು ಬಯಕೆಯಿಂದ ಸಾಕಿದ್ದೆ ನಿನ್ನ
ಎಷ್ಟು ಮಮತೆಯಿಂದ ಪೋಷಿಸಿದ್ದೆ ನಿನ್ನ
ಇಂದು ನೀನು ಬೇರೆಯವರ ಸೊತ್ತಾದೆ.)
ತಾಯಿಯ ಕರುಳ ಮಿಡಿತವಿದು. ಹೆಂಗಳೆಯರ ಸ್ವರದಲ್ಲಿ ತುಳುತುಳುಕಿ ಬರುವಾಗಿನ ಸಮಯ ಇಡೀ ಮದುವೆ ಚಪ್ಪರವನ್ನು ಶೋಕತಪ್ತಗೊಳಿಸುವುದು.
ನವಾಯಿತರಲ್ಲಿ ಇಡೀ ರಾತ್ರಿ ಹೆಣ್ಣನ್ನು ಕೂಡಿಸಿ ಹಾಡುವ ಹಾಡುಗಳು ಹತ್ತು ಪುಟದಷ್ಟು ದೀರ್ಘವಾಗಿರುತ್ತವೆ. ನವಾಯಿತ ಭಾಷೆಯ ಹಾಡಿನ ಒಂದು ಭಾಗವನ್ನು ನಾವು ಸವಿಯಬಹುದು.
ಹಮ್ ದೊಸನ ಕರ್ ಯಾವೊಂ ಮೈ ರಬ್ಬಾಚಿ
ತೇಜೆ ನಾ ವಿನ್ ರೊನಖ್ ಮಂಜಿಲಿಸ್ಪರ್ ನಾಚಿ
ಮಾನಿ ಬಾಪಾ ಝರಿಯಾ ವಾ ಡೋಸ್ ಕರೋತಾ
ಅವ್ವಲ್ ದಿನ್ಪರ್ ನೊ ದೇವಂಕ್ ಫರ್ ಮೋತಾ
ರಹಮತ್ ಝಾವೊ ಧಕ್ಕೆ ಮಾತಿ ಬಾಪಾವರ್
ಪರನೊ ದಿಲ್ ತೊ ಕಾರ್ ಬಾ ಹುಕುಮಾವರ್
ವಾಯೆ ದುಲಹನ್ ಬೀ ಸೋಂ ಮಸಲ್ ಶೆಹೆಝಾದಿ
ಆಬಾದ್ ಝಾವೊ ತು ಜೀನ್ ನಯಿ ಆಬಾದಿ
ದುಲ್ಹನ್….ವಾಟೆ ಭೂನಿಯಾರ್
ನಮೋಸಿ ರಾತಿ ಹೊರೇತ್ ಮಿಲ್ಲತ್ ಮಚಾರ್
ತೊಘೆ ನೌಷಾ ಏಚಿ ರಾತಿ ಬಾದೆಷಾ
ಮರ್ಹಬಾ, ಮರ್ಹಬಾ, ಮರ್ಹಬಾ……..||೧||
(ಅಲ್ಲಾನ ದಯೆಯು ಮದುವೆ ಆನಂದ ತಂದಿದೆ
ವಧು-ವರನ ತಂದೆ-ತಾಯಿಯರ ಮೇಲಿರಲಿ ಆ ದಯೆ
ನೀ ಶೃಂಗಾರಗೊಂಡು ಇಂದು ರಾಣಿಯಾಗಿ ಕುಳಿತಿರುವೆ
ಹೊಸ ಜೀವನವೊಂದ ನಿನ್ನಿಂದ ನಿರೀಕ್ಷಿಸುತ್ತಿರುವೆ
ನಿನ್ನ ಪತಿ ನಾಳೆಯಾಗುವನು ರಾಜ
ನೀನಾಗುವೆ ಅವನ ರಾಣಿ
ವ್ಹಾರೆವಾ…ವ್ಹಾರೆವಾ…ವ್ಹಾರೆವಾ…)
ಸಘ್ಫಟ್ ಸಾಝಾಶೆಮೆ ಗಾಝೆಢಾಗ್
ಲಾಹೂನ್ ಧರೋಂ ನೌಷಾ ಹರ್ದಂ ಹರ್ಡಾಕ್
ಭಲೀ ಪಸಂದ್ ಝೆಡೊ ನಸೀಬ್ ಝಾಲೋಗೆ
ಫೌಲ್ ಫೂಲನ್ ಅಕೇಲೆ ಒಡ್ಲೆ ಖುಷ್ಬೋಷೆ
ಇಸಂ ಕಾ ಕಲ್ತೆ ಹೊ ತೊ ತೊಕಾ ಇನ್ತೆಝಾರ್
ಕರ್ತಿ ಹೋತಿ ದುವಾ ತೊ ಬಾರ್ ಬಾರ್
ಮಾತಿ ಬಾಯ ಹೋತಿ ಒಡ್ಲಿ ಆರ್ ಝ
ಝಾಯದ್ ತೊ ಜೆ ಫರ್ನೆ ತೇಜೆರೂಬರು
ಅಲ್ಲಾ ತುಜಿ ದುಆ ಖುಬೂಲ್ ಕೆ ಲೋಗೆ
ಮಾನಿ ಬಾಪಾಕ್ ಅರ್ಮಾ ಪೂರಾ ಝೂಲೋಗೆ
ತೊಝೆ ನೌಷಾ ಏ ಚಿ ರಾಟಿ ಬಾದೆಷಾ
ಮರ್ ಹಬಾ……..ಮರ್ ಹಬಾ………ಮರ್ ಹಬಾ. ||೨||
(ಜೋಡಿಗೆ ಸರಿ ಹೊಂದುವ ಸೌಂದರ್ಯ ನಿಮ್ಮಲ್ಲಿದೆ
ಅದು ಚಿರವಾಗಿ ಎಂದೆಂದೂ ಉಳಿಯಲಿದೆ
ಈ ಜೋಡಿ ಎಲ್ಲರ ಒಪ್ಪಿಗೆಯ ಮೇರೆಗೆ ಆಗಿದೆ
ಹೂ ಅರಳಿ ಸುವಾಸನೆ ಹೊರಸೂಸಲಿದೆ
ಬಹಳ ದಿನಗಳಿಂದಲೂ ತಂದೆ-ತಾಯಿಯರಿಗೆ
ನಿಮ್ಮ ಜೋಡಿ ಕಾಣುವ ಆಸೆ ಅಡಗಿತ್ತು ಒಳಗೆ
ಈ ಶುಭ ಗಳಿಗೆ ಕಾಣುವ ಆಸೆ ಅಡಗಿತ್ತು ಒಳಗೆ
ಈ ಶುಭ ಗಳಿಗೆ ಕಾಣುವ ನಿರೀಕ್ಷೆ ನಿನಗೆ ಬಲು ದಿನದ್ದು
ಪ್ರಾರ್ಥನೆಯ ನೀ ಅದಕ್ಕಾಗಿ ಮಾಡುತ್ತಿದ್ದೆ ದಿನದಿನವು
ಅಲ್ಲಾ ನಿನ್ನ ಪ್ರಾರ್ಥನೆಯ ಒಪ್ಪಿಕೊಂಡ ಇಂದು
ನಿನ್ನ ಆಸೆಯ ಆನಂದ ಕಾಣುವೆ ಮುಂದು
ನಿನ್ನ ಪತಿ ನಾಳೆಯಾಗುವನು ರಾಜ
ನೀನಾಗುವೆ ಅವನ ರಾಣಿ
ವ್ಹಾರೆವಾ…ವ್ಹಾರೆವಾ…ವ್ಹಾರೆವಾ…)
ಮೆಹಲಿ ಝೂಲಿಸ್ ಯ ತಾ ತೋ ಗೆ ಖ್ವಾಚಿ
ಝೂಶ್ಮಾ ಮಾತಿ ಫೊಡ್ ತಾನ್ ತೋಗಿ ಚುಡ್ವಾನಚಿ
ಫೌನು ಸಿ ರಾತಿ ಝಾಯತ್ ಒಡ್ಲಿ ಗಮತ್
ಕರ್ಯತ್ ತುಕ್ ತೊಝಾ ಶೌಹರ್ ಉಲ್ಫತ್
ಸಲಾಂ ಕರೂನ್ ಕಲಾಂ ತೋಗಿ ಕರೊ ಕಲಾಸ್
ದಾಯೆಮೆ ಉಲ್ಫತ್ ದಹರೂನ್ ಅಹದ್ ಘೂನ್ ಕಾಸ್
ಝೋಜಾ ಊಪರ್ ಲಾಝಿಮ್ ಅಶೈ ಸರಾಸರ್
ಕರ್ಯತ್ ಖಿದ್ಮತ್ ಘೋವಾಜಿಕೆ ಅಖರ್ ಸರ್
ಜೆ ಕೌನ್ ಕರ್ಯತ್ ಘೋವಾ ಖಿದ್ಮತ್ ದಲೆಯನ್
ಪಾವಿಯತ್ ಒಡಲೊ ಅಜರ್ರುಬಾ ತರೈನ್
ತೂಝೊ ನೌಷಾ ಎಚಿ ರಾತಿ ಬಾದೆಶಾ
ಮರ್ ಹಬಾ…..ಮರ್ ಹಬಾ….. ಮರ್ ಹಬಾ ….
ಝಾಲಿಸ್ ತೊಗೆ ಏಚೆ ನೌಷಾ ಮಲಿಕಾ
ಮರ್ ಹಬಾ…. ಮರ್ ಹಬಾ….ಮರ್ ಹಬಾ…..||೩||
(ಇಂದು ನೀನಾದೆ ಧರ್ಮಪತ್ನಿ ನಿನ್ನ ರಾಜನ
ಕಾಣುವೆ ನಾಳೆ ರಾತ್ರಿ ಅದರ ಮಜವ
ಮಾತಾಡುವ ಮೊದಲು ಆತನಿಗೆ ಸಲಾಮು ಮಾಡು
ಆ ನಂತರ ಹುಸಿ ನಗೆಯಲಿ ಮಾತನಾಡು
ಪ್ರೀತಿಯ ಚಿರಗೊಳಿಸಿ ಸಂತೋಷ ಪಡು
ಇದುವೆ ಹೆಣ್ಣು ಅನುಸರಿಸಬೇಕಾದ ಪ್ರಮುಖ ಮಾರ್ಗ
ಕೊನೆಯವರೆಗೆ ಪತಿಯ ಸೇವೆಯಹಲಿ ಕಾಣುವೆ ಸ್ವರ್ಗ
ನಿನ್ನ ಪತಿ ನಾಳೆಯಾಗುವನು ರಾಜ
ನೀನಾಗುವೆ ಅವನ ರಾಣಿ
ವ್ಹಾರೆವಾ…ವ್ಹಾರೆವಾ….ವ್ಹಾರೆವಾ…)
ಹೊಸದಂಪತಿಗಳಿಗೆ ಅಲ್ಲಾಹ್ನಲ್ಲಿ ಒಳ್ಳೆಯದಾಗಲಿ ಎಂದು ಕೇಳಿಕೊಳ್ಳುವ ಮತ್ತು ಅವರಿಗೆ ಶುಭಾಶಯ ಕೋರುವ ಈ ಹಾಡಲ್ಲಿ ಎರಡೆರಡು ಸಾಲಿಗೆ ಅಂತ್ಯ ಪ್ರಾಸ ಇರುವುದನ್ನು ಗಮನಿಸಬಹುದು. ಹಾಡಿನುದ್ದಕ್ಕೂ ಇದು ಮುಂದುವರಿದುಕೊಂಡು ಹೋಗುತ್ತದೆ. ಒಬ್ಬ ಹೆಣ್ಣು ಮಗಳು ಅಥವಾ ಇಬ್ಬರು ಈ ಹಾಡನ್ನು ಕೊನೆಯವರೆಗೂ ಹಾಡುತ್ತ ಹೋಗುತ್ತಾರೆ. ಪಲ್ಲವಿಗೆ ಮಾತ್ರ ಎಲ್ಲ ಹೆಂಗಸರು ಧ್ವನಿಗೂಡಿಸುವರು.
ಇಲ್ಲಿ ಅನುಭವಸ್ಥ ಹೆಂಗಳೆಯರು ಹೊಸ ವಧುವಿಗೆ ಮಾರ್ಗದರ್ಶನ ಮಾಡುವ ವಿಚಾರವೂ ಇದೆ. ಆಕೆ ಗಂಡನ ಮನೆಯಲ್ಲಿ ಹೇಗೆ ನಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ರೀತಿ-ರಿವಾಜುಗಳನ್ನು ಹಾಡಿನ ಮೂಲಕ ಹೇಳಿಕೊಡಲಾಗಿದೆ. ವರನು, ವಧುವಿಗೆ ಲಚ್ಚಾ(ತಾಳಿ) ಕಟ್ಟುವಾಗ ಹೆಣ್ಣಿನ ಸುತ್ತ ನೆರೆದ ಹೆಂಗಸರು
ಅಲ್ಲಾ ಕರ ತುಮ್ಕ
ಸಲಾಮಾ ಖುಷಿ ಮುಬಾರಕ್ ಪರ್ ನಚಿ
ರಹಮತ್ ಝವಾ ಅಲ್ಲಾಚಿ
(ಅಲ್ಲಾ ಇಂತಹ ಸಂತಸದ ಸಂಭ್ರಮ
ತಂದಿದ್ದಾನೆ ಹೆಣ್ಣು-ಗಂಡಿಗೆ
ಅಭಿನಂದನೆಗಳು, ಅಲ್ಲಾಹ್ನ
ಕರುಣೆ ಸದಾ ನಿಮ್ಮಡನಿರಲಿ)
ಎಂದು ಹಾಡುತ್ತ ಶುಭಕೋರುವುದು ನವಾಯಿತರಲ್ಲಿ ಸಾಮಾನ್ಯವಾಗಿದೆ. ಹೆಣ್ಣನ್ನು ಗಂಡನೊಂದಿಗೆ ಬೀಳ್ಕೊಡುವಾಗ, ಕರುಳಿನ ತಹತಹಿಕೆಯನ್ನು ಹತ್ತಿಕ್ಕಿಕೊಂಡು ಆಕೆಗೆ ಹಿತದ ಮಾತು ಹೇಳುತ್ತಾರೆ:
ಸಬ್ಕು ಸಮ್ಜಾ ಮನಾಕೇ ತುಮ್ ಹಸ್ತಿ ಹಸ್ತಿ ರಹೇನಾ
ಜೋಭಿ ಬುರಾಯಿ ಆಯೇ ಸಬ್ಕು ನಿಭಾಕೇ ಚಲ್ನಾ
(ನೀನು ನಗುನಗುತ ಎಲ್ಲರನು ಸಮಾಧಾನಗೊಳಿಸು
ಎಂಥ ಕಷ್ಟ ಬಂದರೂ ಎಲ್ಲವನೂ ನಿಭಾಯಿಸು)
ಬರೋ ಗೋದ್ ಯಾರಬ್ ಖಿಲೆ ದಿಲ್ ಕೀ ಕಲಿಯಾ
ಮುರಾದೇ ಹೋ ಪೂರಿ ಮಿಠೇನಾ ಮುರಾದೆ
(ತುಂಬಲಿ ಮಡಿಲು ಅರಳಲಿ ಹೃದಯದ ಮೊಗ್ಗುಗಳು
ಈಡೇರಲಿ ಅಡ್ಡಿಯಾಗದೆ ಇಷ್ಟಾರ್ಥಗಳು)
ಹತ್ತಾರು ಹಸಿರು ಹಾರೈಕೆಗಳಿಂದ ವಧುವಿನ ಮನಸ್ಸನ್ನು ದೃಢಗೊಳಿಸಿ ಅವಳನ್ನು ಬೀಳ್ಕೊಡುವಲ್ಲಿ ಹೆಂಗಳೆಯರು ಆಪ್ತವಾಗಿಯೇ ಹಾಡಿಕೊಳ್ಳುತ್ತಾಋಎ.
ಹೆಣ್ಣು ಮಗಳು ಋತುಮತಿಯಾದಾಗ, ಗರ್ಭಿಣಿಯಾದಾಗ, ಆಕೆಗೆ ಹೆರಿಗೆಯಾಗಿ ಮಗುವಿನ ತೊಟ್ಟಿಲು ಕಾರ್ಯ ಮಾಡುವಾಗ ಮಹಿಳೆಯರು ಬಿಂದಾಸಾಗಿ ತಮ್ಮ ಭಾವನೆಯನ್ನು ಹಾಡುಗಳ ಮೂಲಕ ಅಭಿವ್ಯಕ್ತಿಸುತ್ತಾರೆ:
ಉಜಲೆ ಪಿಪಲ್ ಪಿಲೆ ಪಿ ಪಾನ
ಸೋನೇಕಿ ಶಾಮೆ ಜೂಲೋ
ಮುಲ್ತಾನಿ ಭಾಷಾಕಿ ದರ್ಗಾ ಮೇ
ಜೂಲೋ ಜಲೋ……
(ಬಿಳಿಯ ಅರಳಿ ಅರಿಷಿಣದ ಎಲೆ
ಬಂಗಾರದ ಸಂಜೆಯಲಿ ನೀ ತೂಗು
ಮುಲ್ತಾನಿ ಬಾಷಾರವರ ದರ್ಗಾದಲ್ಲಿ
ನೀ ತೂಗು…..ತೊಗು)
ಎಂದು ಮಗುವಿಗೆ ಜೋಗುಳ ಹಾಡುತ್ತ, ಆ ಕೂಸಿನ ಸಂಬಂಧಿಕರು ತರುವ ಉಡುಗೊರೆಯ ಬಗ್ಗೆಯೂ ಉಲ್ಲಸಿತವಾಗಿ ಉಲಿಯುತ್ತಾರೆ:
ಯೇ ತಾನೆ ಕಿ ಕೌನ್ ಹೈ ಮಾಯಿ
ಮಾಯಿ ಲಾಯೇಂಗಿ ದೂದ್ ಪಿಲಾನೇಕಿ ಗಾಯಿ
ತಾನಾಜಿಯೋ ಮೇರಾ ಬಾಲಾಜಿಯೋ
ಯೇ ತಾನೆ ಕಿ ಕೌನ್ ಹೈ ನಾನಿ
ನಾನಿ ಲಾಯೇಂಗಿ ನಾಹನೇಕೊ ಪಾನಿ
ತಾನಾ ಜಿಯೋ ಮೇರಾ ಬಾಜಿಯೋ
ಯೇ ತಾನೆ ಕಿ ಕೌನ್ ಹೈ ದಾದಿ
ದಾದಿ ಲಾಯೇಂಗಿ ಮಕಮಲ್ ಕಾ ಗಾದಿ
ತಾನಾ ಜಿಯೋ ಮೇರಾ ಬಾಲಾಜಿಯೋ
ಯೇ ತಾನೆ ಕಿ ಕೌನ್ ಹೈ ಫುಪ್ಪು
ಫುಪ್ಪು ಲಾಯೇಂಗಿ ಅಂಗಲಾ ಟೋಪಿ
ತಾನಾ ಜಿಯೋ ಮೇರಾ ಬಾಲಾಜಿಯೋ
ಯೇ ತಾನೆ ಕಿ ಕೌನ್ ಹೈ ಖಾಲಾ
ಖಾಲಾ ಲಾಯೇಂಗಿ ಮೋಹನ ಮಾಲಾ
ತಾನಾಜಿಯೋ ಮೇರಾ ಬಾಲಾಜಿಯೋ
(ಮಗುವಿನ ತಾಯಿ ಯಾರು?
ಹಾಲು ಕುಡಿಸುವ ಆಕಳ ತರುವಳು ತಾಯಿ
ಮಗುವೇ ಮುದ್ದು ಮಗುವೇ…..
ಮಗುವಿನ ನಾನಿ ಯಾರು?
ಎರೆಯಲು ನೀರು ತರುವಳು ನಾನಿ
ಮಗುವೇ ಮುದ್ದು ಮಗುವೇ….
ಮಗುವಿನ ದಾದಿ ಯಾರು?
ಮಲಗಲು ಮಕಮಲ್ ಗಾದಿ ತರುವಳು ದಾದಿ
ಮಗುವೇ ಮುದ್ದು ಮಗುವೇ…..
ಮಗುವಿನ ಅತ್ತೆ ಯಾರು?
ಮೈಗೆ ಬಟ್ಟೆ, ತಲೆಗೆ ಟೊಪ್ಪಿಗೆ ತರುವಳು ಅತ್ತೆ
ಮಗುವೇ ಮುದ್ದು ಮಗುವೇ….
ಮಗುವಿನ ಚಿಕ್ಕಮ್ಮ ಯಾರು?
ಕೊರಳಿಗೆ ಮೋಹನ ಮಾಲಾ ತರುವಳು ಚಿಕ್ಕಮ್ಮ
ಮಗುವೇ ಮುದ್ದು ಮಗುವೇ….)
ಬ್ಯಾರಿಯನ್ ಮಹಿಳೆಯರೂ ಇಂಥ ಜೋಗುಳ ಹಾಡುಗಳನ್ನು ಸಂಪ್ರದಾಯದ ಧಾಟಿಯಲ್ಲಿ ಖುಷಿಯಿಂದ ಹಾಡುವರು.
ಲಾ ಇಲಾಹ ಇಲ್ಲಲ್ಲಾಹು, ಲಾ ಇಲಾಹ ಇಲ್ಲಲ್ಲಾಹು
ಮಹಮ್ಮದುರ್ ರಸೂಲಲ್ಲ
ತಾಲೊಲಂ ತಾಲೊಲಂ ಕುಯ್ನೆಂ
ತಾಲೊಲಂ ಕೇಟನಿವೋ ರಂಗೋಣೊ ಮೋಸಿ
ಆಟವಾಯಿ ಪೈದಲೇ ಆರಂಭ ಪೊನ್ನೆ ಪೋನೆ
ಆಶಯೇ ಗುಂನಾದನೇ ಅಲ್ಲಾ ಪ್ನೋ ಕಾದಲೇ
ವೀರನಾ ಅಲಿಯರೋಡೋ ವೀರಕದಗಳ ಕೇಳಕಣಂ
ಸೂರಾನಾಯಿ ನೀದಳ ಕೇಣಂ
ವೀರದಾ ಪೊನ್ನಾರಮೇ
(ಅಲ್ಲಾಹ್ನೆಂಬ ಸೃಷ್ಟಿಕರ್ತನನ್ನು ಬಿಟ್ಟು ಅನ್ಯರಿಲ್ಲ
ಮಹಮ್ಮದ್ ಪೈಗಂಬರ್ ರವರು ಸಂದೇಶವಾಹಕರು
ಜೋ ಜೋ……… ಕಂದ
ಈ ಜೋಗುಳ ಕೇಳುತ್ ಮಲಗು ನೀ ಮಗುವೇ
ಅಲ್ಲಾನ ಇಚ್ಛೆಯ ಹೊನ್ನಿನಂತಹ ಮಗುವೆ
ಅಲಿ ಪೈಗಂಬರರಂತೆ ಅಲ್ಲಾಹನ ಪ್ರೀತಿಯಿಂದ
ಶೂರನಾಗಿ ಆ ವೀರನ ಹೆಸರನ್ನು ಕೇಳುತ್ತ
ಉಜ್ವಲ ಭವಿಷ್ಯದೊಂದಿಗೆ ನೀ ಬದುಕು
ನನ್ನ ವೀರ ಮಗುವೆ)
ಮುಸ್ಲಿಮರ ನಂಬಿಕೆ ಮತ್ತು ಶ್ರದ್ಧಾ-ಭಕ್ತಿಗಳನ್ನು ವ್ಯಕ್ತಪಡಿಸುವ ಹಾಡುಗಳನ್ನು ನಿರ್ಮಲ ಮನಸ್ಸಿನಿಂದ ಸೃಜಿಸುವಲ್ಲಿ ಮುಸ್ಲಿಮ್ ಮಹಿಳೆಯರು ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ವಲಿಗಳ ಪವಾಡಗಳನ್ನು ಕುರಿತು ಹೇಳುವ ಇಂಥ ಕೆಲವು ಹಾಡುಗಳಿವೆ:
೧
ಖಾಜಾ ಚಲತೇ ಧೇ ಸಡಕೋಂಕಿ ಉಪರ್
ಖಾಜಾ ವಜೂಮೆ ಹಮೇ ಬುಲಾವೋ
ಮೈ ಉಡಾವುಂಗಿ ಫೂಲೋಂಕಿ ಚಾದರ್
೨
ಗುಂಗುರವಾಲಿ ಪೌಡಿಮೇ ಹಮೇ ಕುಂವಾ ಬನೇಂಗೆ
ವಜು ಕರತೆ ದೂದ್ನಾನಾ
೩
ಹರೆ ಡೋಂಗರ್ ಪೆ ಜಾಕೆ ದೇಖೋ
ಕುಂವಾ ಕ್ಯಾ ಹೈ ನೂರಾನಿ
ವಜೂ ಕರತೇ ಸೋ ಜಿಲಾನಿ
ಮೇರೆ ಮೆಹಬೂಬ ಸುಹಾನಿ
೧
(ಖಾಜಾ ವಲಿಗಳು ನಡೆಯುತ್ತಿದ್ದರು
ದಾರಿಯ ಮೇಲೆ
ಕರೆಯಿರಿ ನಮ್ಮನು ವಜೂ ಮಾಡಲು
ವಲಿಗಳೆ, ಹೊದಿಸುತ್ತೇನೆ
ನಾನು ಹೂವಿನ ಚಾದರ
೨
ಗುಂಗುರು ಬೆಟ್ಟದ ಮೇಲೆ
ಬಾವಿ ತೋಡೋಣ ನಾವು
ವಜೂ ಮಾಡುವರು ಅಲ್ಲಿ
ದೂದ್ ನಾನಾ
೩
ಹಸಿರು ಗುಡ್ಡದ ಮೇಲೆ ಹೋಗಿ ನೋಡಿ
ಬಾವಿ ಎಂಥದಿದೆ ನೂರಾನಿ
ವಜೂ ಮಾಡುತ್ತಿದ್ದಾರೆ ಜಿಲಾನಿ
ನಮ್ಮ ಮೆಹಬೂಬ ಸುಹಾನಿ)
ದೇವರು ಮಹಾಶಕ್ತ ಮತ್ತು ಈ ಲೋಕದ ಸೃಷ್ಟಿಕರ್ತ ಎಂಬ ಬಲವಾದ ನಂಬಿಕೆಯನ್ನು ಇರಿಸಿಕೊಂಡ ಮಹಿಳೆ ತನ್ನನ್ನು ಪೂರ್ತಿಯಾಗಿ ಅರ್ಪಿಸಿಕೊಳ್ಳುತ್ತಾಳೆ ಮತ್ತು ತನ್ನನ್ನು ಪಥಭ್ರಷ್ಟಗೊಳಿಸುವ ಅನಾಹುತಗಳಿಂದ, ಜೀವಕ್ಕೆ ತೊಂದರೆ ಕೊಡುವ ಕಷ್ಟಗಳಿಂದ ರಕ್ಷಿಸಲು ಕೋರಿಕೆ ಸಲ್ಲಿಸುತ್ತಾಳೆ.
ಮುಜೆ ಮಸಿಹಾ ಹೈ ಯೆ
ಶಾನ್ ಸೇ ಬಚಾಲೇನಾ
ತುಮ್ಹೀ ದರದ್ದಿಯೆ ಹೈ
ತುಮ್ಹೀ ದವಾ ದೇನಾ……
(ನನಗೆ ದಾರಿ ತೋರುವವರೆ ಈ
ಗೌರವದ ಬದುಕು ರಕ್ಷಿಸಬೇಕು
ನೋವು ಕೊಡುವವ ನೀನೆ
ನೀನೇ ಅದನು ನಿವಾರಿಸಬೇಕು)
ಹೇ ಹೇ…ಜಫಾಬಿ ಕರತೆ ಹೈಂ
ಹಸ್ಹಸ್ಕೆ ರುಲಾತೇ ಹೈಂ
ಕೆ ಇನ್ಕೆ ಝಲ್ಮೋಂಸೆ
ತೂಹಿ ಖುದಾ ಬಚಾಲೇನಾ….
(ಧ್ಯಾನಿಸುವೆನು ನಿರತ ನಿನ್ನ
ನಗುನಗಿಸುತ ಅಳಿಸುವೆ ನೀನು
ಒದಗುವ ಕಷ್ಟಗಳಿಂದ ನಮ್ಮನು
ಉಳಿಸಿಕೊಳ್ಳು ಪ್ರಭು ನೀನು)
ಯಾವನು ತನ್ನ ಆತ್ಮವನ್ನು ಪರಿಶುದ್ಧಗೊಳಿಸುವನೋ ಅಂಥವನು ಕೃತಾರ್ಥನಾಗುವವನು ಎಂಬ ಭಾವನೆಯನ್ನು ಮುಸ್ಲಿಮ್ ಮಹಿಳೆ ಅಭಿವ್ಯಕ್ತಿಸುವ ರೀತಿಯಿದು.
ಶಾಮ್ ಲಿಯಾ ಜಾಯ್ ಯಾ ಸುಬಹ್ ಲಿಯಾ ಜಾಯೆ
ಸಚ್ಚೆ ದಿಲ್ ಸೇ ಮುಸ್ತಫಾಕಾ ನಾಮ್ ಲಿಯಾ ಜಾಯೆ
ಮೈ ಜಾವುಂಗಿ ಬಾಬಾ ಕೇ ದರಪರ್
(ಸಂಜೆ ಇರಲಿ ಮುಂಜಾವು ಇರಲಿ
ಪರಿಶುದ್ಧ ಮನಸ್ಸಿನಿಂದ
ಮುಸ್ತಾಫಾ ಅವರ ಹೆಸರನು
ಧ್ಯಾನಿಸುವೆ ನಾನು
ಬಾಬಾ ಅವರ ಹೊಸ್ತಿಲವರೆಗೂ
ಹೋಗುವೆನು)
ಎಂದು ಹಾಡಿಕೊಳ್ಳುವ ಸ್ತ್ರೀ ದೇವರ ಕರುಣೆಯನ್ನು ಸತತ ಬಯಸುವವಳಾಗಿದ್ದಾಳೆ. ತನ್ನ ಕುಟುಂಬದ ಸೌಖ್ಯಕ್ಕಾಗಿ ಅಲ್ಲಾಹನನ್ನು, ವಲಿಗಳನ್ನು ಸುತ್ತಿಸುವುದು ಅವಳ ಮನದ ತುಡಿತವಾಗಿದೆ.
ಹರ್ ಕೋಯಿ ಆತಾ ಹೈ ದರಸೆ ಸವಾಲಿ
ಜಾತಾನಂಹಿ ವೋ ಹಾಥ್ಸೆ ಖಾಲಿ
ಭರತಿ ಹೈ ಆಪ್ ಉನ್ಕೆ ಝೋಲಿ
ಮುರ್ತುಜಶಾ ಹೈ ಖಾದರಿ
(ನಿನ್ನ ದರುಶನಕೆ ಎಲ್ಲರೂ ಬರುವರು
ಬರಿಗೈಯಲ್ಲಿ ಹೋಗುವುದಿಲ್ಲ ಬಂದವರು
ಅವರ ಬಯಕೆ, ಇಷ್ಟಾರ್ಥಗಳ ಉಡಿ ತುಂಬುವೆ
ಅಂಥ ಮಹಿಮನು ನೀನು
ಮುರ್ತುಜ ಶಾ ಖಾದರಿ)
ಹೀಗೆ ಮೆಹಬೂಬ ಸುಹಾನಿ, ರಾಜಾಭಕ್ಷ, ಹಸನ್ಡೋಂಗ್ರಿ, ದೂದ್ನಾನಾ, ಬಂದೇ ನವಾಜ್, ಷಂಷಾವಲಿ, ಹಾಜಿಮಲಂಗ್, ಸೈಯದ ಮದ್ನಿ, ಮಲೀಕ್ರೆಹನ್ ಬಾಬಾ ಮುಂತಾದ ಪವಾಡ ಪುರುಷರನ್ನು ಗುಣಗಾನ ಮಾಡುವುದು, ಧ್ಯಾನಿಸುವುದು ಹಾಡುಗಳ ಮುಖಾಂತರವೇ ಆಗಿದೆ.
Leave A Comment