ಕೇಂದ್ರ (ಆರ್.ಆರ್.ಎಸ್)

ಜಿಲ್ಲೆಯಿಂದ ೩೦ ಕಿ.ಮೀ
ತಾಲ್ಲೂಕಿನಿಂದ ೩ ಕಿ.ಮೀ

ಬೆಂಗಳೂರು ವಿಶ್ವವಿದ್ಯಾನಿಲಯದ ಆಡಳಿತದಡಿಯಲ್ಲಿ ರೈತರಿಗೆ ಅತೀ ಉಪಯುಕ್ತವಾದ ವಿವಿಧ ಜಾತಿಯ ಭತ್ತದ ತಳಿಗಳು, ಅಡಿಕೆ ತಳಿ, ಕಾಫಿ ತಳಿ, ತೆಂಗು ತಳಿ ಬೆಳೆಗಳ ಅಭಿವೃದ್ದಿಗೆ ಬೇಕಾಗುವ ಬೀಜಗಳ ಪರಿಷ್ಕರಣಾ ಕೇಂದ್ರ ಹಾಗೂ ಹೊಸ ತಳಿ ಸಂಶೋಧನಾ ಕೇಂದ್ರ ಇದರ ಬಗ್ಗೆ ಪದವಿ ಅಧ್ಯಯನ ಕೇಂದ್ರವಿದ್ದು, ಇಲ್ಲಿ ಅನೇಕ ಜನ ವಿದ್ವಾಂಸರು ಸಂಶೋಧನೆ ಮಾಡಿ ವಿವಿಧ ಬೆಳೆಗಳ ತಳಿಗಳ ಬೀಜೋತ್ಪಾದನಾ ಕೇಂದ್ರವಾಗಿದೆ.

ಇದು ವೈಜ್ಞಾನಿಕವಾಗಿ ಬೆಳೆಗಳಿಗೆ ತಗಲುವ ರೋಗಗಳ ನಿವಾರಣೆಗೆ ಮಾಹಿತಿ ಕೇಂದ್ರವು ಆಗಿದೆ. ಈ ಕೇಂದ್ರದ ಪ್ರಮುಖ ವಿಷಯವೆಂದರೆ ಲಕ್ಷಾಂತರ ವಿವಿಧ ಜಾತಿಯ ವಿಸ್ಮಯಕಾರಿ ಕೀಟಗಳನ್ನು ಸಂಗ್ರಹ ಮಾಡಿ ಅದನ್ನು ಪ್ರದರ್ಶಿಸಿ ಕೀಟಗಳಿಂದ ಸಸ್ಯಗಳಿಗೆ, ಬೆಳೆಗಳಿಗೆ ಹಾನಿ ಉಂಟಾಗುವ ಬಗ್ಗೆ ಪರಿಚಯಿಸಿ ಅವುಗಳ ಸಂರಕ್ಷಣೆ ಬಗ್ಗೆ ಹಾಗೂ ತ್ರೈಮಾಸಿಕಕ್ಕೊಮ್ಮೆ ರೈತರಿಗೆ ಸಲಹೆ, ಸೂಚನೆ ತರಬೇತಿ ಕಾರ್ಯಾಗಾರಗಳು ನಡೆಯುತ್ತಿರುತ್ತವೆ. ಈ ಭಾಗದ ಜನರಿಗೆ ಆರ್.ಆರ್.ಎಸ್ ಎಂದೇ ಬಾಯಿ ಪಾಠವಾಗಿದ್ದು,

 

ಗಂಗಾಮೂಲ

ಜಿಲ್ಲೆಯಿಂದ ೬೫ ಕಿ.ಮೀ
ತಾಲ್ಲೂಕಿನಿಂದ ೩೫ ಕಿ.ಮೀ

ಮೂಡಿಗೆರೆ ತಾಲ್ಲೂಕಿನ ಹೆಸರಾಂತ ಹೇಮಾವತಿ ನದಿಯ ಉಗಮ ಸ್ಥಾನ ಇದೇ ಗಂಗಾಮೂಲ. ಇದು ಜಾವಳಿ ಗ್ರಾಮ ಪಂಚಾಯಿತಿಯಲ್ಲಿ ಜಾವಳಿಯಿಂದ ೨ ಕಿ.ಮೀ ದೂರದಲ್ಲಿದೆ. ಇಲ್ಲಿಯ ಉದ್ಭವ ಗಣಪತಿ ಮೂರ್ತಿಯ ದೇವಾಲಯವಿದೆ. ಇಲ್ಲಿಂದ ಹೇಮಾವತಿ ಹರಿದು ಬರುವಾಗ ಅಣತಿ ದೂರದಲ್ಲಿ ಜಲಪಾತಗಳನ್ನು ಉಂಟುಮಾಡಿ ಆ ರಮಣೀಯ ಸ್ಥಳಗಳನ್ನು ನೋಡುವುದೇ ನಮ್ಮ ಭಾಗ್ಯ. ಇದೊಂದು ಪವಿತ್ರ ಸ್ಥಳವು ಹೌದು, ಗಂಗಾಮೂಲಕ್ಕೆ ಹೋಗುವುದೇ ಒಂದು ವಿಶೇಷ ಅನುಭವ. ಇದು ಕೊಡಗಿನ ತಲಕಾವೇರಿಯಷ್ಟೆ ಪವಿತ್ರ ಸ್ಥಳವಾಗಿದೆ. ಇದೇ ಗ್ರಾಮ ಪಂಚಾಯಿತಿಯ ಪ್ರಮುಖ ವಿಶೇಷವೆಂದರೆ ಟೀ ತೋಟಗಳು, ಮೂಡಿಗೆರೆಯಿಂದ ಕುದುರೆಮುಖಕ್ಕೆ ಸಾಗುವ ದಾರಿಯಲ್ಲಿ ರಮಣೀಯವಾದ ಟೀ ತೋಟಗಳು ಇವೆ. ಕನ್ನಡ ಚಿತ್ರರಂಗದವರು ಅನೇಕ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಇದು ಕ್ಯಾಮರಾ ಕಣ್ಣಿಗೆ ವಿಸ್ಮಯಕಾರಿ ದೃಶ್ಯ. ಈ ವನಸಿರಿಯ ಟೀ ತೋಟಗಳ ವೀಕ್ಷಣೆ ಟೀ ಕುಡಿದಷ್ಟೆ ಸ್ವಾದಮಯವಾಗಿರುತ್ತದೆ.

 

ಕಳಸೇಶ್ವರ ಸ್ವಾಮಿಯ ದೇವಾಲಯ

ಜಿಲ್ಲೆಯಿಂದ ೧೦೧ ಕಿ.ಮೀ
ತಾಲ್ಲೂಕಿನಿಂದ ೭೧ ಕಿ.ಮೀ

ದಕ್ಷಿಣ ಕಾಶಿಯೆಂದೆ ಪ್ರಮುಖವಾಗಿರುವ ಶ್ರೀ ಕಳಸೇಶ್ವರ ಮಹಾ ತಪಸ್ವಿ ಅಗಸ್ತ್ಯ ಮಹರ್ಷಿಗಳಿಗೆ ಗಿರಿಜಾ ಕಲ್ಯಾಣದ ದರ್ಶನವನ್ನು ಕರುಣಿಸಿರುವುದಾಗಿ ಶ್ರೀ ವಿಶ್ವೇಶ್ವರನು ನೀಡಿದ ವರದಂತೆ ಅಗಸ್ತ್ಯರ ಜನ್ಮ ಸ್ಥಳವಾದ ಕಳಸ ಕ್ಷೇತ್ರದಲ್ಲಿ ಶ್ರೀ ಕಾಶಿ ವಿಶ್ವೇಶ್ವರನು ತನ್ನ ಪರಿವಾರ ದೇವರುಗಳೊಂದಿಗೆ ನೆಲಸಿ ಉದ್ಭವ ಲಿಂಗ ಸ್ವರೂಪದಲ್ಲಿ ಶ್ರೀ ಕಳಸೇಶ್ವರನಾಗಿ ನಮ್ಮೆಲ್ಲರಿಗೂ ದರ್ಶನವನ್ನು ಕರುಣಿಸಿ ಕಳಸವನ್ನು ದಕ್ಷಣ ಕಾಶಿಯೆಂದು ಪ್ರಖ್ಯಾತಗೊಳಿಸಿರುವುದು ನಮಗೆಲ್ಲ ವೇದ್ಯವಿದೆ. ಕಳಸ ಕ್ಷೇತ್ರದಲ್ಲಿ ನೆಲೆಸಿರುವ ಋಷಿ ಮುನಿಗಳು ಮತ್ತು ರಾಜ ಮಹಾರಾಜರು ಆರಾಧಿಸುವುದಲ್ಲದೆ ಹಲವಾರು ಆಭರಣಗಳನ್ನು , ಭೂಮಿಯನ್ನು ಸೇವಾ ರೂಪದಲ್ಲಿ ನೀಡಿರುತ್ತಾರೆ. ಶ್ರೀ ಕ್ಷೇತ್ರದಲ್ಲಿ ನೆಲೆಸಿರುವ ಸಮಸ್ತ ಭಕ್ತರು ಸೇವೆ ಸಲ್ಲಿಸಿದ ಕೆಲವು ಅಧಿಕಾರಿಗಳು ಹಾಗೂ ದೇಶ ವಿದೇಶಗಳಲ್ಲೂ ಶ್ರೀ ಕಳಸೇಶ್ವರನ ಭಕ್ತರಿರುವುದು  ನಮ್ಮೆಲ್ಲರಿಗೂ ತಿಳಿದ ವಿಷಯ.

ಶ್ರೀ ಕ್ಷೇತ್ರವು ಮೂಡಿಗೆರೆಯಿಂದ ೭೧ ಕಿ.ಮೀ. ದೂರವಿದ್ದು, ಇಲ್ಲಿಗೆ ರಾಜ್ಯದ ಎಲ್ಲಾ ಮೂಲೆಗಳಿಂದ ಬಸ್ಸಿನ ಸೌಕರ್ಯ ಕಲ್ಪಿಸಲಾಗಿದ್ದು, ವನಸಿರಿಯ ಮಧ್ಯೆ ಪ್ರಯಾಣಿಸುವುದೇ ರೋಚಕ ಅನುಭವ.

 

ಶ್ರೀ ಕ್ಷೇತ್ರ ಹೊರನಾಡು

ಜಿಲ್ಲೆಯಿಂದ ೧೦೦ ಕಿ.ಮೀ
ತಾಲ್ಲೂಕಿನಿಂದ ೨ ಕಿ.ಮೀ

ಹೊರನಾಡಿನ ಆದಿದೇವತೆ ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಾಲಯವು ಹೊರನಾಡು ಮೇರುತಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿದೆ. ಪುಟ್ಟ ಗುಡ್ಡದ ಮೇಲಿರುವ ಶ್ರೀ ಆದಿ ಶಕ್ತ್ಯಾತ್ಮಕ ಅನ್ನ ಪೂರ್ಣೇಶ್ವರಿ ದೇವಾಲಯ ಸವಿಸ್ತಾರವಾದುದು. ಅಲ್ಲಿಯ ನಿಸರ್ಗ ರಮಣೀಯ ಪರಿಸರವಿದೆ. ಅಪೂರ್ವವಾದ ಪಶ್ಚಿಮ ಘಟ್ಟಗಳ ತಾಣ ಪ್ರವಾಸಿ ಕೇಂದ್ರವಾಗಿದ್ದು, ಜನಪ್ರಿಯವಾಗಿದೆ. ದೇಶದ ವಿವಿದೆಡೆಯಿಂದ ಭಕ್ತ ಸಮೂಹವನ್ನು ಆಕರ್ಷಿಸಿದೆ. ಹಲವು ಐತಿಹ್ಯಗಳು ಶ್ರೀ ಕ್ಷೇತ್ರವನ್ನು ಪ್ರಭಾವಗೊಳಿಸಿವೆ. ಎಲ್ಲಿ ನೋಡಿದರು ಹಸಿರು ನೀಲಿ ಆಗಸದೆಡೆಗೆ ಚಾಚಿ ನಿಂತ ಗಿರಿ ಶಿಖರ ತರುಲತೆಗಳು ಅವುಗಳ ನಡುವೆ ಮಂಜುಳ ನೀನಾದ ಗೈಯ್ಯುತ್ತಾ ಹರಿದು ಬರುವ ಭದ್ರಾ ನದಿ ಪರಾತ್ಪರ ಚಿಂತನೆಗೆ ಯೋಗ್ಯವಾದ ಪ್ರಶಾಂತ ಸ್ಥಳ. ಅಪರೂಪದ ಜಲಧಾರೆಗಳು ಸುತ್ತಲೂ ದಟ್ಟವಾದ ಕಾಡು, ಕಾಫಿ, ಭತ್ತ, ಅಡಿಕೆ, ಏಲಕ್ಕಿ ತೋಟಗಳಿಂದ ಕಂಗೊಳಿಸುವ ನೆಲೆ ಸರ್ವ ಧರ್ಮ ಸಮನ್ವಯತೆಯ ಬೀಡಾಗಿದೆ. ಭದ್ರಾ ನದಿಯ ಸಾಂಗತ್ಯದಿಂದ ಪುಣ್ಯ ಕ್ಷೇತ್ರವಾಗಿದೆ. ಈ ಕ್ಷೇತ್ರವು ಅಗಸ್ತ್ಯ ಮಹಾ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಅನ್ನಪೂರ್ಣೇಶ್ವರಿ ದೇವಿಯ ಪ್ರಭಾವದೊಂದಿಗೆ ಅವಿಚ್ಛಿನ್ನ ಪರಂಪರೆಯಾಗಿ ಮುಂದುವರೆದು ಬಂದಿದೆ.

 

ಹೊಯ್ಸಳರ ಮೂಲಸ್ಥಾನ ಅಂಗಡಿ

ಜಿಲ್ಲೆಯಿಂದ ೫೦ ಕಿ.ಮೀ
ತಾಲ್ಲೂಕಿನಿಂದ ೨೦ ಕಿ.ಮೀ

ಮೂಡಿಗೆರೆ ತಾಲ್ಲೂಕಿನ ಒಂದು ಚಿಕ್ಕ ಹಳ್ಳಿ. ೧೧,೧೨ ನೇ ಶತಮಾನದ ಶಾಸನದಲ್ಲಿ ಇದನ್ನು ಸೊಸೆಯೂರು, ಸೊಸೆ ಊರು ಎಂದು ಕರೆದಿದೆ. ಬುಕ್ಕರಾಯನ ಕಾಲದಲ್ಲಿ ೧೩೫೯ ರಲ್ಲಿ ಇದೇ ಹೆಸರಿತ್ತು. ಆದರೆ ಅಚ್ಯುತರಾಯನ ಕಾಲದಲ್ಲಿ ೧೫೩೯ ರ ಹೊತ್ತಿಗೆ ಅಂಗಡಿಯೆಂಬ ಹೆಸರು ಪ್ರಚಾರದಲ್ಲಿತ್ತು. ವಿಷ್ಣುವರ್ಧನನ ಕಾಲದಲ್ಲಿ ಶಶಪುರ ಹಾಗೂ ಶಶಕಪುರ ಎಂಬ ಹೆಸರುಗಳಿವೆ. ಈ ಸೋಸೆಯೂರೆ ಹೊಯ್ಸಳರ ಮೂಲ ಸ್ಥಾನ. ಇಲ್ಲಿ ಸಳನು ಹುಲಿಯನ್ನು ಕೊಂದು ಹೊಯ್ಸಳ ವಂಶದ ಹೆಸರಿಗೆ ಕಾರಣನಾದವನು ಎಂದು ಶಾಸನ ತಿಳಿಸುತ್ತಿದೆ. ನೃಪಕಾಮ ಮಗನಾದ ವಿನಯಾದಿತ್ಯನು ದ್ವಾರಸಮುದ್ರಕ್ಕೆ ತನ್ನ ರಾಜಧಾನಿ (ಈಗಿನ ಹಳೇಬೀಡು) ಬದಲಾಯಿಸಿದನು. ಸಳನ ವಂಶದ ೪ ನೇಯ ರಾಜನೇ ವಿಷ್ಣುವರ್ಧನ ಪ್ರಭಾವಶಾಲಿಯಾಗಿದ್ದ ಹೊಯ್ಸಳರ ಸ್ವತಂತ್ರ ರಾಜ.

ಇಲ್ಲಿ ಸಪ್ತ ಮಾತೃಕೆಗಳಿವೆ. ೫ ವಿಗ್ರಹಗಳು ಮಾತ್ರ ಇಲ್ಲಿವೆ. ಅವುಗಳೆಂದರೆ, ಬ್ರಾಹ್ಮಿಣಿ, ಕೌಮಾರಿ, ವೈಷ್ಣವಿ, ವರಾಹಿ, ಮಹೇಶ್ವರಿ ಇವುಗಳು. ಇಂದ್ರಾಣಿ ಮತ್ತು ಚಾಮುಂಡಿ ಸೇರಿ ಸಪ್ತ ಮಾತೃಕೆಗಳು ಈ ಭಾಗದಲ್ಲಿ ವಸಂತ ಪರಮೇಶ್ವರ ಅಥವಾ ವೈಷ್ಣವಿ ದೇವಿಯ ಪ್ರಧಾನ ಪೂಜೆ ಹಬ್ಬವಾಗಿದೆ. ಚೈತ್ರ, ವೈಶಾಖ ಮಾಸದಲ್ಲಿ ಸುಗ್ಗಿ ಹಬ್ಬ ವಿಜೃಂಭಣೆಯಿಂದ ನಡೆಯುತ್ತದೆ. ಇಲ್ಲಿ ಮುಖ್ಯ ದೇವತೆ ವಸಂತಮ್ಮ ಅಥವಾ ವಾಸಂತಿ ದೇವಿ ಕುಲದೇವತೆಯಾಗಿದೆ. ಅನೇಕ ಜೈನ ಯತಿಗಳು ಇಲ್ಲಿದ್ದು ಬಸದಿಗಳನ್ನು ಕಟ್ಟಿಸಿರುವುದು ಶಾಸನಗಳಲ್ಲಿ ಕಂಡುಬಂದಿದೆ.

 

ಶಿಶಿಲ ಪರ್ವತ ಶ್ರೇಣಿ:

ಜಿಲ್ಲೆಯಿಂದ ೬೫ ಕಿ.ಮೀ
ತಾಲ್ಲೂಕಿನಿಂದ ೩೫ ಕಿ.ಮೀ

ಮೂಡಿಗೆರೆಯಿಂದ ೩೫ ಕಿ.ಮೀ ದೂರದಲ್ಲಿದ್ದು ದುರ್ಗಮವಾದ ಕಲ್ಲುಬಂಡೆಗಳಿದು, ಚಾರಣಿಗಳಿಗೆ ಅತ್ಯಂತ ವಿಸ್ಮಯ ಮತ್ತು ಆಕರ್ಷಕವಾಗಿದೆ. ಈ ಪ್ರಕೃತಿ ಸೌಂದರ್ಯದಲ್ಲಿ ಅನೇಕ ವಿಸ್ಮಯಕಾರಿ ಪ್ರಾಣಿ ಪಕ್ಷಿಗಳನ್ನು ಚಾರಣಿಕರು ವೀಕ್ಷಿಸಬಹುದು. ಅತಿ ಎತ್ತರವಾಗಿದ್ದು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು ಮೂರು ಜಿಲ್ಲೆಗಳ ಮಧ್ಯದಲ್ಲಿ ಕಳಸದಂತೆ ಎತ್ತರವಾಗಿ ನಿಂತಿದೆ.

 

ನಾಣ್ಯ ಭೈರವೇಶ್ವರ ದೇವಸ್ಥಾನ

ಜಿಲ್ಲೆಯಿಂದ ೫೩ ಕಿ.ಮೀ
ತಾಲ್ಲೂಕಿನಿಂದ ೨೩ ಕಿ.ಮೀ

ತಾಲ್ಲೂಕು ಕೇಂದ್ರ ಮೂಡಿಗೆರೆಯಿಂದ ೨೩ ಕಿ.ಮೀ ಚಿಕ್ಕಮಗಳೂರಿಂದ ೫೫ ಕಿ.ಮೀ ದೂರದಲ್ಲಿರುವ ಸುಮಾರು ೯೫೦ ವರ್ಷ ಹಳೆಯದಾದ ಪಾಳೇಗಾರ ವಂಶಸ್ಥರಿಂದ ಸ್ಥಾಪಿಸಿಕೊಂಡ ಶ್ರೀ ಭೈರವೇಶ್ವರ ದೇವಾಲಯವು, ಕರ್ನಾಟಕದಲ್ಲಿ ೪ ಪ್ರಮುಖ ಭೈರವೇಶ್ವರ ದೇವಾಲಯಗಳಿದ್ದು, ೫ ದೇವಾಲಯ ಮಲೆನಾಡು ಪ್ರದೇಶದಲ್ಲಿವೆ.

ಶ್ರೀ ಕಾಲ ಭೈರವೇಶ್ವರ, ದುರ್ಗದಹಳ್ಳಿ

ಶ್ರೀ ಭೈರವೇಶ್ವರ, ದೇವರಮನೆ,

ಶ್ರೀ ನಾಣ್ಯ ಭೈರವೇಶ್ವರ, ಬೈರಾಪುರ

ಶ್ರೀ ಬೆಟ್ಟ ಭೈರವೇಶ್ವರ, ಮರುಗುಂದ

ಶ್ರೀ ಘಾಟಿ ಭೈರವೇಶ್ವರ, ಕುಮಾರಹಳ್ಳಿ, ಸಕಲೇಶಪುರ ತಾಲ್ಲೂಕು.

ಶ್ರೀ ನಾಣ್ಯ ಭೈರವೇಶ್ವರ ಸ್ವಾಮಿಯು ದೇವರ ಮನೆಯಿಂದ ನಾಣ್ಯ ತುಂಬಿ ಕುಂಭದಲ್ಲಿ ಹೊತ್ತು ತರುವಾಗ ಬೈರಾಪುರ ಗ್ರಾಮದಲ್ಲಿ ಹಾವು ನವಿಲು ಬದ್ದ ವೈರಿಗಳಾಗಿದ್ದರು ಸಹ ಜೊತೆಯಲ್ಲಿ ಆಟವಾಡುತ್ತಿರುವುದನ್ನು ಗಮನಿಸಿ ಇದೆ ಪ್ರಾಸಸ್ತ್ಯ ಸ್ಥಳವೆಂದು ಈ ಕ್ಷೇತ್ರದಲ್ಲಿ ಶ್ರೀ ನಾಣ್ಯ ಬೈರವೇಶ್ವರ ಸ್ಥಳವೆಂದು ಈ ಕ್ಷೇತ್ರದಲ್ಲಿ ಶ್ರೀ ನಾಣ್ಯ ಬೈರವೇಶ್ವರ ಸ್ವಾಮಿ ಸ್ಥಾಪಿತವಾದದೆಂದು ಪ್ರತೀತಿ.