ಬಳಿಕುತ್ತಮಕ್ಷೇಮ ಕುಶಲವಾರ್ತೆಯ ಕೇಳಿ | ಲಲಿತಾಂಗನು ತನ್ನ ಜನನಿ |
ಲಲನೆ ಮಿತ್ರಾವತಿ ಮೊದಲಾದವರು ಸುಖ | ದೊಳಗೆಯಿರ್ದಪರೆಂದು ಕೇಳಿ || ೨೪೧ ||

ಕೋವಿದಕುಲಚಿಂತಾಮಣಿ ನಿನ್ನ ಸ | ದ್ಭಾವನೆ ತಮ್ಮ ತನುವಿಗೆ |
ಜೀವಮಾಗಿ ನೀನು ಬಂದುದು ಮೊದಲಾಗಿ | ಜೀವಿಸಿಕೊಂಡಿರುತಿಹರು || ೨೪೨ ||

ಎನುತ ನುಡಿದು ರುದ್ರಮತ್ತಮತ್ತಿಂತೆಂದ | ನಿನನನಬ್ಜಿನಿ ನೆನೆವಂತೆ |
ವನಿತೆವಸಂತತಿಲಕೆ ನಿನ್ನ ಬರವನೆ | ಯನುನಯದಿಂ ಹಾರುತಹಳೆ || ೨೪೩ ||

ಎನೆ ಚಾರುದತ್ತನವರೊಳಿಂತೆಂದನು | ದಿನಚರಿತನಿಗರದೆರಗಿ |
ಅನುರಾಗದಿಂದುಂಬರುಂಬಿಯಗಲೆ ಕುಮು | ದಿನಿ ಬಳಿಕದನು ಹಾರುವುದೆ || ೨೪೪ ||

ವಿಟರನಗಲಿದವಿಟೀಜನಕತಿ ಸಂ | ಕಟವುಂಟು ವಿಹರದೊಳೆಂಬ |
ಕುಟಿಲವನಚವನೆಲೇ ಚಿಕ್ಕಯ್ಯನೆ | ದಿಟವೆಂದು ನಂಬಲುಬಹುದೆ || ೨೪೫ ||

ಎಂದ ಮಾತಿಗೆ ರುದ್ರದತ್ತನು ಹರಿಸಖ | ರೆದರು ನೀನು ತೊಲಗಿದ |
ಅಂದಿಂದುಳಿದ ವಿಟರು ತನ್ನ ಸೋದರ | ರೆಂದು ಭಾವಿಸಿಕೊಂಡಿಹಳೆ || ೨೪೬ ||

ವಿಲಸಿತ ವಿಚಲಕಿವಲ್ಲರಿಮುದರಿತು | ತೊಲಗಲಲರ ಬಿದಿರ್ವಂತೆ |
ಲಲಿತಾಂಗ ನೀನಗಲ್ದಂದಿಂದಾ ಕೋ | ಮಲೆ ತೆಗೆದಳು ತೊಡವುಗಳ || ೨೪೭ ||

ಕಾರಕಾಲಮನಿಶ್ಚೈಸಿ ಚಾತಕಪಕ್ಷಿ | ನೀರುಣಲೊಲ್ಲದಂದದೊಳು |
ಧೀರಲಲಿತ ನಿನ್ನ ಬರವ ಹಾರೈಸಿ ಯಾ ನಾರಿಯುಣಿಸನು ತೊರೆದಳು || ೨೪೮ ||

ವಿತತ ವಸಂತವಲ್ಲಭನನಗಲಿ ಪರ | ಭೃತ ಮೌನಗೊಂಡಿರ್ಪಂತೆ |
ಅತನುಸದೃಶ ನೀನಗಲಿದಂದಿಂದಾ | ಸತಿಯೊಬ್ಬರೊಡನೆ ನುಡಿಯಳು || ೨೪೯ ||

ಇಂದುಬಿಂಬವನಲ್ಲದುಳಿದವಸ್ತುವ ನೋಡೆ | ನೆಂದು ಮುಗಿವ ಕುಮುದಿನಿಯ |
ಅಂದದಿನಬಲೆ ನೀನಲ್ಲದನ್ಯರನೋಡೆ | ನೆಂದು ವ್ರತವ ಧರಿಸಿದಳು || ೨೫೦ ||

ಎಂದು ವಂಸತತಿಲಕೆಯಂದಮನಿ | ರ್ದಂದದಿನವರು ನುಡಿಯಲು |
ಮುಂದೇತರಮಪ್ಪ ಹರುಷಮನಾನವ | ಕಂದರ್ಪನು ತಾಳಿದನು || ೨೫೧ ||

ತನಗೆ ಬಂದಾಪತ್ತನವರೊಳಗುಸುರುತ | ಜನನುತನಲ್ಲಿಂದೆಳ್ದು |
ಅನುರಾಗದಿಂ ನಡೆತಂದಾ ಪಶ್ಚಿಮ | ವನಧಿಯ ತಡಿಯೊಳಗೆಸೆವ || ೨೫೨ ||

ಬಿತ್ತರಮಾದ ರಜತಮೆಂಬ ಪರ್ವತ | ದೊತ್ತಿನ ಪಾರ್ಶ್ವಕಮೆಂಬ |
ಪತ್ತನವನು ಪೊಕ್ಕು ಬಳಿಕಲ್ಲಿಯಾ ರುದ್ರ | ದತ್ತನ ಮುಖದಿಂದಾಗ || ೨೫೩ ||

ಅಲ್ಲಿ ಸಕಲದೇಶಭಾಷೆಗಳೆಲ್ಲವ | ಬಲ್ಲ ಪಾರಸಿಕನೋರ್ವನನು |
ಸಲ್ಲೀಲೆಯಿಂದ ಕರೆದುಕೊಂಡವನೊಳು | ನಿಲ್ಲದಿಂತೆಂದಾಡಿದನು || ೨೫೪ ||

ಉತ್ತರಮಪ್ಪ ರತ್ನದ್ವೀಪಕೆ ಬಟ್ಟೆ | ಯೆತ್ತಮದೇಕಡೆಯಿಹುದು |
ಮತ್ತಮದಕೆ ಪೋಪತೆರನೆಂತುಟದ ನೀನು | ಬಿತ್ತರಿಸೆನೆಂದನವನು || ೨೫೫ ||

ಆ ರಮ್ಯಮಪ್ಪ ರತ್ನದ್ವೀಪಮಪರಾಂ | ಭೋರಾಶಿಯ ನಟ್ಟನಡುವೆ |
ಸೇರಿಹುದುತ್ತಮಮಪ್ಪರತ್ನಂಗಳ | ಭೂರಿಯಿಂದದನೇಪೊಗಳ್ವೆ || ೨೫೬ ||

ವಾರಿಧಿಯೊಳು ನಾಲ್ವೆರಳಗಲದಕಲ್ಲ | ದಾರಿ ಮತ್ತದರಿಕ್ಕೆಲದೊಳು |
ಆರಯ್ಕೆ ಪಿರಿದುಮಗಾಧೋದಕಮಿಪ್ಪು | ದಾರು ಪೊಗುವುದಳವಲ್ಲ || ೨೫೭ ||

ಆಡಿನ ಬೆನ್ನೊಳು ಕುಳ್ಳಿರ್ದು ಮನದೊಳ | ಳ್ಕಾಡದೆ ಪೋಗಲುಬೇಕು |
ರೂಢಿವಡೆದ ರತ್ನದ್ವೀಪವ ದಾರಿ | ನಾಡಾಡಿಗಳಿಗದು ವಶವೆ || ೨೫೮ ||

ಎಂದ ಮಾತನು ಕೇಳಿ ನಾವಿದನೋಡುವೆ | ವೆಂದಾಡುಗಳನು ತರಿಸಿ |
ಕಂದರ್ಪನಿಭನೇರಿಸಿಯಮದಿಲಮೇಲೆ | ಅಂದದಿ ನಡೆಗಲಿಸಿದನು || ೨೫೯ ||

ಈ ತೆರದಿಂ ನಡೆಗಲಿಸಿ ಮತ್ತಾಯೇಳು | ಹೋತಿನ ನಡುಬೆನ್ನನೇರಿ |
ಆತುರದಿಂದೆಯ್ದಿಯಂಬುನಿಧಿಯ ರಂಜಿ | ದೀವಿಗೆಯೋರ್ವನೆ ಪೋಗಿ || ೨೬೦ ||

ಆ ವಾರಾಶಿಯ ತಡಿಯೊಳು ನಿಂದಾ | ಕೋವಿದನಿಂತುಸುರಿದನು |
ನೀವರುವರು ತಡೆದಿರಿ ನಾನಾ ರನ್ನ | ದೀವಿಗೆಯೋರ್ವನೆ ಪೋಗಿ || ೨೬೧ ||

ಅದರಳಬಳವನರೀಕ್ಷಿಸಿ ಬಳಿಕೀ | ಉದಧಿಯ ತಡಿಗೆಯ್ದಿ ಮತ್ತೆ |
ಪದುಳದಿ ನಾಮೆಲ್ಲರು ಪೋಪೆವೆಂದಾ | ಸದಮಲನವರನಲ್ಲಿರಿಸಿ || ೨೬೨ ||

ಅರ್ಗಿನಿಸಳವಲ್ಲದಂಭೋರಾಶಿಯ | ಮಾರ್ಗದೊಳದಿರದೆ ಪೋಗಿ |
ಭೋರ್ಗರೆವಾರಣ್ಯದ ನಡುವಣ ರತ್ನ | ದುರ್ಗವನೋಡಿ ಮುಗುಳಿದ || ೨೬೩ ||

ಇತ್ತಲು ರುದ್ರದತ್ತಾದಿಗಳು ಚಾರು | ದತ್ತನೇತಕೆಬಾರನೆಂದು |
ಅತ್ತಲು ಮುಖವಾಗಿಯಾಹೋತಿನ ಬೆನ್ನ | ಹತ್ತಿ ನಡೆದು ಬರುತಿರಲು || ೨೬೪ ||

ಭೋರನೆ ತನಗಿದಿರೆಯ್ದುವರನು ಕಂಡು | ಚಾರುದತ್ತನು ಶಂಕೆಯಿಂದ |
ಆರಯ್ಯದಿಂತೆಯ್ದುವರೆಯೆಂದೆನೆ ಮ | ತ್ತಾರುದ್ರದತ್ತನಿಂತೆಂದ || ೨೬೫ ||

ನೀನಾಗ ಕುರಿತವೇಳೆಗೆ ಬಾರದಿರೆ ಕಂಡಿ | ದೇನೆಂದು ಶಂಕೆಯಿಂದಾವು |
ಆನದೆ ನಿನ್ನ ನೋಡುವೆವೆಂದು ವಿಚಾರ | ಮಾನಸರಾಗಿಯೈದಿಹೆವು || ೨೬೬ ||

ಇಟ್ಟಣಿಸಿದವಾರಾಶಿಯ ನಡುವೆ ನಾ | ಲ್ವೆಟ್ಟಗಲದದಾರಿಯೊಳಗೆ |
ನೆಟ್ಟನೆ ಬರುತ ಪಿಂದಕೆ ತಿರುಗುವೆನೆಂಬ | ದಿಟ್ಟಿರುಂಟೇ ವಿಚಾರಿಸಲು || ೨೬೭ ||

ಎಂದು ನುಡಿದಾ ನಾನೀ ನೀರನಿಧಿಯೊಳು | ಹೊಂದಿ ನಿಮ್ಮನು ಕಳುಹುವೆನು |
ಎಂದಾ ಗುಣಭೂಷಣನ ನುಣ್ನುಡಿಗಿಂ | ತೆಂದರು ಹರಿಸಖಾದಿಗಳು || ೨೬೮ ||

ಲೋಕದೊಳಗೆ ನಮ್ಮಂತಪ್ಪಮನುಜರ | ನೇಕರುಂಟು ಭಾವಿಸಲು |
ಏಕಾಂಗವೀರ ನಿನ್ನಂತಪ್ಪಗುಣರ | ತ್ನಾಕರದೆಂದಿಗಾಗುವರು || ೨೬೯ ||

ಅದರಿಂ ನಾವಿಲ್ಲಿ ಹರಣವ ನೀಗುವೆ | ವಿದನು ನೀ ಕಳೆದು ಹೋಗೆನಲು |
ಅದಕೆ ನಿಮ್ಮೆಲ್ಲರ ಕೊಂದು ಬಂದಪಕೀರ್ತಿ | ಯೊದವ ನಾನೆಂತು ನೀಗುವೆನು || ೨೭೦ ||

ಎಂದು ತನ್ನತಿಚಾತುರ್ಯವ ನೋಡುವೆ | ನೆಂದು ನಮಸ್ಸಿದ್ಧೇಭ್ಯ |
ಎಂದತ್ಯವಧಾನದಿಂದ ಹೋತಿನ ಬೆನ್ನಿ | ನಿಂದೆಡಗಡೆಗಾಗಿ ಜಗುಳಿ || ೨೭೧ ||

ಒಂದಂಘ್ರಿಯನಾ ಬಟ್ಟೆಯೊಳಿಟ್ಟು ಮ | ತ್ತೊಂದಘ್ರಿಯ ಮೇಲಕೆತ್ತಿ |
ನಿಂದತಿ ಕುಶಲತೆಯಿಂದಾ ಹೋತನ | ಮುಂದಕೆ ನಸು ಜಾರಿಸುತ || ೨೭೨ ||

ಮುಂದಣವೆರಡಡಿಯನುಮ ಸರಣಿಯೊ | ಳ್ತಂದಿಟ್ಟು ಗರಿಯಂದದೊಳು |
ಪಿಂದಣವೆರಡು ಕಾಲನು ಮೆಲ್ಲನೆ ತಿರಿ | ತಂದು ಸಸಿನವ ಮಾಡಿದನು || ೨೭೩ ||

ಇಂತು ಸಸಿನ ಮಾಡಿಯಾಹೋತಿನ ಬೆನ್ನ | ನಂತರಿಸಿದೆ ತಾನೇರೆ |
ಪಿಂತಣ ರುದ್ರದತ್ತಾದಿಗಳೀಕ್ಷಿಸಿ | ಸಂತಸವನೆ ಮಾಡಿದರು || ೨೭೪ ||

ಬಳಿಕ ನಿಶ್ಚಿಂತಹೃದಯರಾಗಿಯಲ್ಲಿಂ | ತಳೆದಾ ಕಿರುವಟ್ಟೆವಿಡಿದು |
ತಳುವದೆಯಾರತ್ನದ್ವೀಪಕೆ ಪೋಗಿ | ಜಲಧಿಯ ತಡಿಯೊಳಿಳಿದರು || ೨೭೫ ||

ಮತ್ತಾ ದ್ವೀಪದ ನಾಲ್ದೆಸೆಯನು ನೋ | ಡುತ್ತಿರ್ದೊಂದೆಡೆಯಿರ್ಪ |
ಉತ್ತರಮಪ್ಪ ಕೊಳನ ಕಂಡಲ್ಲಿಗೆ ಚಿತ್ತಜಸನ್ನಿಭನೆಯ್ದಿ || ೨೭೬ ||

ಕರಚರಣಾನನವನು ತೊಳೆದಲ್ಲಿಂ | ದುರುಮುದದಿಂದೆಯ್ತಂದು |
ಸರಸಚೂತವನೊಂದ ಕಂಡಲ್ಲಿ ನಿದ್ರೆಯೊ | ಳಿರೆ ರುದ್ರದತ್ತನೆಯ್ತಂದು || ೨೭೭ ||

ಒರಗಿದ ಚಾರುದತ್ತ ಬಡಪರಿಯ | ಚ್ಚರದಂತೆಯೊಯ್ಯಾರದಿಂದ |
ತುರುಗೆವೆದಿಟ್ಟಗಂಜವಿಟ್ಟಾಮೈ | ಮರೆವಂದದಿ ಮಾಡಿಬಳಿಕ || ೨೭೮ ||

ಆ ರುದ್ರದತ್ತನು ತನ್ನೊಳು ಮೊದಲಾ | ಪಾರಸಿಕನು ಪೇಳ್ದಂತೆ |
ಕ್ರೂರಕರ್ಮಿಯಂದಾಯೇಳಾಡಿನ | ಹೋರಿಯ ತಲೆಯನು ಕಡಿದು || ೨೭೯ ||

ಕತ್ತಿಯಿಂದವರ ತೊಲವ ಸೀಳಿ ಮಾಂಸವ | ಕಿತ್ತಿಟ್ಟಾತೊವಲುಗಳ |
ಒತ್ತಿದಮಗುಚಿ ತಿದಿಯನು ಮಾಡಿಯಾಚಾರು | ದತ್ತನನದರೊಳು ಹೊಗಿಸಿ || ೨೮೦ ||

ಅದರಬಾಯನುಸೊಮ್ಮಿಬಳಿಕುಮಿದಾಡಿನ | ತಿದಿಯೊಳಗರುವರುಹೊಕ್ಕು |
ಪದುಳದಿನಾಬಾಯಿಗಳಹೊಲಿದಿರ್ಪಾ | ಪದದೊಳುತಾರ್ಪಬಳಿಗೆ || ೨೮೧ ||

ಸುರಪತಿತಮ್ಮರಟ್ಟೆಯವದಂಜಿ | ಶರಧಿಯಹೊಕ್ಕಶೈಲಗಳು |
ಇದರಲ್ಲಿಂಪೊರಮಟುವಂತೆಯ್ದಿದ | ವುರುತರಮೆಂಟುಭೇರುಂಡ || ೨೮೨ ||

ಅಂತುಬಂದವರೊಳಗಾರುಖಗಂಗಳು | ಮುಂತಿರ್ದಾರುತಿಯನು |
ಅಂತರಮಾಡಿದೆರಗಿಜಚ್ಚಿಕೊಂಡಾ | ಅಂರತಿಕ್ಷಕೆಪಾರಿದವು || ೨೮೩ ||

ಚಾರುದತ್ತನುಪೊಕ್ಕತಿದಿಯನೊಕ್ಕಣ್ಣಿನ | ಭೇರುಂಡಕಚ್ಚಿಯಗಸಕೆ |
ಭೋರನೆಪಾರುತ್ತಿರಲಿಲ್ಲಮತ್ತೊಂದು | ಭೇರುಂಡಗಿಕಚ್ಚಿದುದು || ೨೮೪ ||

ದಿಟ್ಟೆಯಿಲ್ಲದಕಡೆಯಿಂದಾವಿಹಗನ | ಮುಟ್ಟಿಬಂದದನುಸುಲಿಯಲು |
ಬಿಟ್ಟೋಡಲಾತಿದಿಬೀಳುತಮಿರೆಕಂಡು | ತೊಟ್ಟನೆರಗಿಕಚ್ಚಿದುದು || ೨೮೫ ||

ಅದರಕೈಯಿಂದಾಯೇಕಾಕ್ಷಬೇರುಂಡ | ನದರಂತೆಯದನುಕರ್ದುಕಲು |
ಅದುಬಿಡಲಾತಿಮತ್ತೆಬೀಳುತ್ತಿರೆ | ಯೊದವಿಪಿಡಿದುದಾಪಕ್ಷಿ || ೨೮೬ ||

ಈತೆರದಿಂದೊಂದತಿಕೋಪದಿ | ನಾತಿದಿಗಾಗಿಹೋರಟೆಯ |
ಆತುರದಿಂದೇಳುಸೂಳ್ವರಮಾಳ್ವಾಗ | ಭೂತಳಕದುಬಿಳ್ದುದಾಗ || ೨೮೭ ||

ಭೇರುಂಡವೆರಡರಹೋರಟೆಯಿಂದಾ | ನೀರಧಿಯಮಧ್ಯದೊಳು |
ಚಾರುದತ್ತನು ಹೊಕ್ಕಾತಿದಿ ಬೀಳ್ದುದು | ಪ್ರಾರಬ್ದಕರ್ಮವಶದೊಳು || ೨೮೮ ||

ಶರಧಿಯತೆರಹೊಯ್ಲಿಂದೊಂದುಕುರುವಕೆ | ಬರಲಾತಿದಿಯನುಕೊಯ್ದು |
ಅರುಹನೆಗತಿಯೆಂದಾಚಾರುದತ್ತನು | ಭರದಿಂದಪೊರಮಟ್ಟನಾಗ || ೨೮೯ ||

ಆ ಕುರುವದೊಳಿರ್ದುದೊಂದು ಕಾಸಾರವ | ನಾಕಂತುರೂಪನುಹೊಕ್ಕು |
ಸೌಕುಮಾರಾಂಗವೆಲ್ಲವ ಪ್ರಕ್ಷಾಲಿಸಿ | ಲೋಕೈಕನಾಥನ ನೆನೆದು || ೨೯೦ ||

ಏನಿದುಮುನ್ನೆಸಗಿದಕರ್ಮವಶದಿನಂ | ಭೋನಿಧಿಯೀಕುರುವದೊಳು |
ನಾನೋರ್ವನೆಸಿಲುಕಿದೆನಿಂತಿದಕೆಚಿಂತೆ | ಯೇನರುಹನೆ ಗತಿಯೆಂದು || ೨೯೧ ||

ಇದಕೆಮನಗ್ಲಾನಿಯಮಮಾಡುವುದಿದು | ಸದಮಲರಂಗವಲ್ಲೆನುತ |
ಅಧಟರದೇವನಲ್ಲಿರ್ದೊಂದುಕಲ್ಲೇರಿ | ಮುದದಿನಾಲ್ದೆಸೆಯನೋಳ್ಪಾಗ || ೨೯೨ ||

ಕಾಯೋತ್ಸರ್ಗದಿನೊಂದುನವಾಮ್ರ | ಚ್ಛಾಯೆಯೊಳಗೆಕೈಯಿಕ್ಕಿ |
ಕಾಯಜಮದಮರ್ದನನೋರ್ವನುಜತಿ | ರಾಯನಿರಲುಕಂಡನಾಗ || ೨೯೩ ||

ತನಗೆ ಬಂದಾಪತ್ತೆಲ್ಲಾ ಮುನಿ ದರು | ಶನದಿಂ ವಿಚ್ಚಿನ್ನಮಾಗೆ |
ಅನುನಯದಿಂದೆಯ್ದಿ ಗುರುಭಕ್ತಿಪೂರ್ವಕ | ವಿನಮಿತನಾಗಲು ಕಂಡು || ೨೯೪ ||

ಯೋಗಮನುಪಸಂಹರಿಸಿ ತಚ್ಚಾರಣ | ಯೋಗಿ ಕೈಗಳನೆತ್ತಿ ಬಳಿಕ |
ಆಗಲಿವನ ಮರುಕದಿ ನೋಡಿ ಪಿರಿದನು | ರಾಗದಿ ಮಿಗೆ ಹರಸಿದರು || ೨೯೫ ||

ಒದವಿದ ಬೋಧದಿನಾಚಾರುದತ್ತನೆಂ | ಬುದನು ತಿಳಿದು ಕರುಣದೊಳು |
ಸದಮಲಗುಣಿ ನಿನಗಿಂತಪ್ಪವಸ್ಥೆ ಬಂ | ದುದು ಪೂರ್ವಕೃತ ಪಾಪದಿಂದ || ೨೯೬ ||

ಎಂಬಾಗಲಂಬರದಿಂದಾ ದಿನಮಣಿ | ಬಿಂಬವಿಳಿದು ಬರ್ಪಂತೆ |
ಕೆಂಬಸದನವಿಟ್ಟು ಹರಿಕೇತುವೆಂಬೋರ್ವ | ನಂಬರಚರ ನೃಪವರನು || ೨೯೭ ||

ವಿಲಸಿತ ವಿಮಲಮಾಣಿಕ್ಯವಿಮಾನದಿಂ | ದಿಳಿದು ತತ್ಪಿತೃಗುರುಪದಕೆ |
ಅಲಘುಭಕ್ತಿಯೊಳೊಂದಿಸಲಾ ಮುನಿಕುಲ | ತಿಲಕ ಹರುಸುತಿಂತೆಂದ || ೨೯೮ ||

ಹರಿಕೇತು ಕೇಳು ನಮ್ಮನು ಚಂಪಾಪುರ | ವರದ ನದಿಯ ತಡಿಯೊಳಗೆ |
ಭರದೊಳಗಾ ವೈರಿ ಶೂಲದೊಳಿಕ್ಕಲು | ಕರುಣದಿಂದೆಮ್ಮ ರಕ್ಷಿಸಿದ || ೨೯೯ ||

ಉತ್ತಮಗುಣಮಣಿಭೂಷಣನಾ ಚಾರು | ದತ್ತನೀತಗೆ ನಮ್ಮಿಂದ |
ಮತ್ತೆ ವೆಗ್ಗಳದ ಪಿತೃಸ್ಥಾನಮೀಪುರು | ಷೋತ್ತಮನನು ಕೊಂಡುಪೋಗಿ || ೩೦೦ ||

ಒಸೆದು ನಿನ್ನುಯ ಸಾಮ್ರಾಜ್ಯಪದವಿತ್ತು | ಬೆಸಕೆಯ್ದು ಬಾಳು ನೀನೆಂದು |
ಬೆಸಸಲಂತೇಗೆಯ್ವೆನೆಂದಾ ಹರಿಕೇತು | ಮುಸುಕಿದ ಸಂತಸದಿಂದ || ೩೦೧ ||

ಚಾರುದತ್ತನ ನಿರ್ಮಲತರ ಮೃದುಪದವಾರಿಜಕಳಿಸಿಸುವಾಗಿ |
ಅರಯ್ಯದೆರಗಿ ಕುಳ್ಳಿರ್ಪ ಸಮುಯದೊಳು | ನೀರದಪಥದಿಂದಿಳಿದು || ೩೦೨ ||

ಕುಸುಮಶೇಖರನೆಂಬ ದಿವಿಜನೋರ್ವನು ಬಂ | ದೊಸೆದಾ ಮುನಿಗಳಿರ್ದಂತೆ |
ರಸಿಕನು ಜಾರುದತ್ತೆಗೆ ಭಕ್ತಿಯಿಂದ ಬಂದಿಸಿ ಮತ್ತೆ | ಮುನಿಪದಕೆರಗಿ || ೩೦೩ ||

ಹರಿಕೇತುವಿಂತೆಂದನೆಲೆ ದಿವಿಜಾತ | ವರಗುರುವಿರ್ದ ಮಾಳ್ಕೆಯೊಳು |
ಉರುಭಕ್ತಿಯಿಂದ ಗೃಹಸ್ಥಗೆರಗುವುದು | ನಿರುತಮೆಯೆನಲೆಂದನವನು || ೩೦೪ ||

ರಸಕೂಪದೊಳು ಬೀಳ್ದಜ್ಞಾನದಿಂ ಸಾ | ವೆಸಗಿ ದುರ್ಗತಿಗೆ ಪೋಪವನ |
ಒಸೆದೆನ್ನ ಕಿವಿಯೊಳು ಪಂಚಪದವ ಕಟ್ಟಿ | ಹಸನಪ್ಪ ಗತಿಗೊಳಿಸಿದನು || ೩೦೫ ||

ಇದು ದೈವವಿದು ಗುರುವಿದು ಸದ್ಧರುಶನ | ವಿದು ಸಚ್ಚರಿತಿವೆಂಬುದನು |
ವಿದಿತಮಾಗಿಯರಿವೀ ಬೋಧವೆನಗೀ | ಸದಮಲನಿಂ ಸಂಭವಿಸಿತು || ೩೦೬ ||

ಅದು ಕಾರಣದಿಂತೆಸಗಿದನೆಂದು | ಪದೆದಾ ಕುಸುಮಶೇಖರನು |
ಮದನಸದೃಶಚಾರುದತ್ತನ ನವಕುಸು | ಮದೊಳಭಿಷೇಕ ಮಾಡಿದನು || ೩೦೭ ||

ಕೊರಗದಲರು ಮಾಸದ ನವಚ್ಚಿತ್ರಾಂ | ಬರನೆನೆದಂದದೊಳಪ್ಪ |
ವರರತ್ನಾಭರಣಗಳಿಂದಾ ಬಂ | ಧುರುನನಲಂಕರಿಸಿದನು || ೩೦೮ ||

ಇಂತು ಪೂಜಿಸಿ ದೇವನಾಗುಣಮಣಿಯನು | ನಂತ ಸೂಳಿರದೆ ಕೊಂಡಾಡಿ |
ಕಂತುಸದೃಶ ನಿಮ್ಮಚಂಪಾನಗರಿಗೆ | ಸಂತದಿಂ ಪೋಪವೇಳು || ೩೦೯ ||

ಎಂದ ಮಾತನು ಕೇಳಿ ಮನಗೊಡಲಾಮುನಿ | ವೃಂದಾರಕನಾನೃಪನು |
ಒಂದಾಗಿ ನಮ್ಮ ಪಟ್ಟಣಕೆಯ್ದಲುಬೇ | ಕೆಂದು ತಡೆಯಲಾ ಕ್ಷಣದೊಳು || ೩೧೦ ||

ಬಳಿಕಾ ಕುಸುಮಶೇಖರನದು ಲೇಸೆಂ | ದಲಘುಭಕ್ತಿಯೊಳು ಬೀಳ್ಕೊಂಡು |
ತಳರ್ದನಮರಲೋಕಕಿತ್ತಲಾ ಖಗಕುಲ | ತಿಲಕನು ಹರಿಕೇತುನೃಪತಿ || ೩೧೧ ||

ಚಾರಣರನು ಬೀಳ್ಕೊಂಡತಿವಿನಯೋಪ | ಚಾರದಿ ಪುಷ್ಪಕವೇರಿ |
ಚಾರುವಿಭವದಿಂದೊಡಗೊಂಡು ಪೋದನು | ಚಾರುದತ್ತನ ತಮ್ಮ ಪುರಕೆ || ೩೧೨ ||

ಹರುಷದಿ ಕೊಂಡೊಯ್ದರುಸುತನಮನಾ | ದರಿಂದ ಕುಡಲೊಲ್ಲದಿರಲು |
ಅರಸುಮಕ್ಕಳನೀರೇಣ್ವರಬಲೆಯರ | ನಿರದೆ ಮದುವೆಮಾಡಿದನು || ೩೧೩ ||

ಆ ರಮಣಿಯರೊಳಗನುರಾಗಮಿರ್ದಾ | ಭೇರುಂಡಗಳು ಕೊಂಡು ಪೋದ |
ಆ ರುದ್ರದತ್ತನು ಹರಿಸಖಾದಿಯ ಸಖ | ರಾರತ್ನದ್ವೀಪದೊಳಗೆ || ೩೧೪ ||

ಇರಲಲ್ಲಿಗೆ ಸಿಂಹಕೇತುಖೇಚರನನು | ಚರರು ವಿದ್ಯಾಧರರುಗಳ |
ಬರಿಸಿ ಕಳುಹಿದಯವರಿಂದಾ ಚಂಪಾ | ಪುರಕೆವರನು ಕಳುಹಿಸಿದ || ೩೧೫ ||

ಇಂತು ಸುಖದೊಳಿರ್ದ ಹರಿಕೇತುವಿನಪ್ರ | ತ್ಯಂತ ಪೃಥಿವಿಪಾಲಕರ |
ಅಂತಕನಿಭಕೋಪನಾಚಾರುದತ್ತನು ನಿ | ಸ್ಸಂತಾನವ ಮಾಡಿದನು || ೩೧೬ ||

ಧರುದೊಳಗರಿಭೂಪರನಾ ನೆಲದೊಳು | ನೆರಪಿಯಾಹರಿಕೇತುವಿನ |
ಅರಸುತನಕೆ ನಿಷ್ಕಂಟಕವನು ಮಾಡಿ | ಹರುಷದಿ ಕೆಲದಿನಮಿರ್ದು || ೩೧೭ ||

ಹರಿಕೇತುಕುವರನೊಡನೆ ನಮ್ಮಾನಿಜ | ಪುರಕೆಯ್ದಲುಬೇಕೆನಲು |
ಅರಸುತನವ ಬಿಟ್ಟು ಜನಕ ನಿಮ್ಮೊಡನಾ | ನಿರದೆಯ್ದುವೆನೆಂದನವನು || ೩೧೮ ||

ಎಂದ ನುಡಿಯ ಕೇಳುತಾ ಚಾರುದತ್ತನಿಂ | ತೆಂದನೆಲೆ ಸುಕುಮರ |
ಇಂದು ನಿನಗೆ ನಾ ರಾಜಮನಿತ್ತೆನು | ಸಂದೇಹ ಬೇಡವೆನ್ನಾಣೆ || ೩೧೯ ||

ಎಂದು ನಾನಾವಿಧಮಪ್ಪೊಡಂಬಡಿಕೆಗ | ಳಿಂದೊಡಂಬಡಿಸಲಾ ಕುವರ |
ಕಂದರ್ಪರೂಪಗೆ ಕೈಗಳ ಮುಗಿದಿಂ | ತೆಂದನೆಲೆ ಪ್ರಿಯಜನಕ || ೩೨೦ ||

ತುರುಣೀಮಣಿಯೆನ್ನಿಂದ ಕಿರಿಯಳಾ | ಸಿರಸರಸತಿ ಪಾರ್ವತಿಗೆ |
ಸರಿ ಮಿಗಿಲೆನಿಪೀ ಗಾಂಧರ್ವದತ್ತೆಯ | ಗರುವೆ ನಿನ್ನ ನಂದನೆಯ || ೩೨೧ ||

ವರಿಯಪ ಚೆನ್ನಗಂಡುಗಳೆಮ್ಮ ವಿದ್ಯಾ | ಧರಲೋಕದೊಳಗಾರಿಲ್ಲ |
ಧರೆಯರಸುಗಳೊಳಗೀಕೆಗೆ ತಕ್ಕೋರ್ವ | ಪುರುಷಗೆ ನೀನೀವುದೆಂದು || ೩೨೨ ||

ಅನುಜೆಯನೊಪ್ಪಿಸಿಕೊಡಲಾ ಗುಣಮಣಿ | ನೆನೆಯ ತತ್ಕುಸುಮಶೇಖರನು |
ಅನುರಾಗದಿಂದಿನಿಮಿಷರ ಬಲವ ಕೂಡಿ | ಯನಿಲಪಥದೊಳಯ್ತಂದು || ೩೨೩ ||

ಕಂತುರೂಪನನನುನಯದಿ ಪೂಜಿಸುತಮ | ನಂತ ಸೂಳಿರದೆ ಕೊಂಡಾಡಿ |
ಸಂತಸದಿಂ ತಂದುಕೊಟ್ಟನು ಸುರಧೇನು | ಚಿಂತಾರತ್ನಂಗಳನು || ೩೨೪ ||

ಈ ತೆರದಿಂದಾದೇವ ಕೊಡಲು ಸಿಂಹ | ಕೇತು ಸಹಿತ ತತ್ಪುರವ |
ಆ ತರುಣಿಯರೀರೆಣ್ಬರು ಸಹಿತ ವಿ | ಖ್ಯಾತನು ಪೊರಮಟ್ಟನಾಗ || ೩೨೫ ||

ಮಾನಿತ ಮಣಿಮಯರಂಜಿತಮಪ್ಪ ವಿ | ಮಾನದ ಮೇಲೆ ಕುಳ್ಳಿರ್ದು |
ಮಾನನಿಧಾನನಂಬರಪಥವಿಡಿದು ಸು | ಮ್ಮಾನಮೊದವಲೆಯ್ದಿದನು || ೩೨೬ ||

ಸುರಸೇನ ವಿದ್ಯಾಧರಸೇನೆ ಸಹಿತಾ | ದರದಿಂ ಚಂಪಾಪುರದ |
ಸುರಚಿರಮಪ್ಪ ಬಹಿವ್ವನದೊಳಗಾ | ಸ್ಮರರೂಪನು ಬೀಡಬಿಡಿಸಿ || ೩೨೭ ||

ಅರಸು ವಿಮಲವಾಹನನಂತದ ಕೇಳಿ | ಪುರದೊಳಗಷ್ಟಶೋಭೆಯನು |
ವಿರಿಚಿಸಿ ವಿಭುದಾಧೀಶ ವಿಭವದಿಂ | ಹರಿಸದೊಳುದಿರ್ವಂದನಾಗ || ೩೨೮ ||

ಅರಸಗೆರಗಿ ಹಿರಿಯರ್ಗಭಿವಂದಿಸಿ | ಹರುಷದಿನುಳಿದು ನಂಟರಿಗೆ |
ಉರುತರಮಪ್ಪಾದರವಚನಂಗಳ | ನೊರೆದು ಬಳಿಕ ಚಾರುದತ್ತ || ೩೨೯ ||

ಜನನಿ ದೇಯಿಲೆಯ ಕೈಯಿಂ ಬೆಲೆಗೊಂಡಾ | ಮನೆಯೊಳಗಿರ್ದ ವೈಶ್ಯಂಗೆ |
ವಿನಯದಿಂದವೆ ನೂರುಮಡಿ ಹೊನ್ನನು ಕೊಟ್ಟು | ಅನುವುಮಾಡಿಸಿದನಾಕ್ಷಣದೊಳು || ೩೩೦ ||

ಅರಸೊಡವರೆ ಮೇಲೆ ವಿದ್ಯಾಧರ ಸೇನೆ | ಸುರಸೇನೆಬುಹುವಿಭವದೊಳು |
ಪುರವನು ಹೊಕ್ಕರಸನ ಬೀಳ್ಕೊಂಡುರೆ | ಹರಿಸದಿ ಮನೆಗೆಯ್ದಿದನು || ೩೩೧ ||

ಜನನಿ ದೇಯಿಲೆಗಬಿವಂದಿಸಿ ನಿಜಸತಿ | ಜನನುತೆ ಮಿತ್ರಾವತಿಗೆ |
ವಿನಯಮನುಸುರಿಯುಳಿದ ಬಂಧು ಸುದತೀ | ಜನಕುಪಚರವ ಮಾಡಿದನು || ೩೩೨ ||

ಅನಿತರೊಳಾದೇವಕುಸುಮಶೇಖರನಾ | ದಿನದೊಳು ಹೊನ್ನಮಳೆಯನು |
ಮಿನುಗುವ ರತ್ನವೃಷ್ಣಿಯನು ಕರೆದು ಜನ | ವಿನುತನ ಬೀಳ್ಕೊಂಡು ಪೋದ || ೩೩೩ ||

ಹರುಷದಿ ಹತ್ತೆಂಟುದಿನ ಸಿಂಹಕೇತುವ | ನಿರಿಸಿಕೊಂಡಿರ್ದಕ್ಕರಿಂದ |
ಪುರುಷಾರ್ಥನಿಧಿ ಶಿವಮಂದಿರಪುರಕಾ | ದರದಿಂ ಕಳುಹಿ ಮತ್ತಿತ್ತ || ೩೩೪ ||

ಪರವಿಟಜನವಿಕಸಿತನವಚಂಪಕ | ವರವನಕಳಿಸಿಸುವಾದ |
ತರುಣಿ ವಸಂತತಿಲಕೆಯನು ಮುದದಿಂದ | ಕರೆಯಿಸಿದನು ತನ್ನ ಮನೆಗೆ || ೩೩೫ ||

ಮತ್ತೆ ಪೊಳಲಪೊರವನದ ನಡುವೆಯ | ತ್ಯುತ್ತಮಮಪ್ಪರತ್ನಗಳ |
ತೆತ್ತಿಸಿ ಪದಿನೆಟು ಕರುಮಾಡಂಗಳ | ಬಿತ್ತರಿದಿಂ ಮಾಡಿಸಿದನು || ೩೩೬ ||

ಅಲ್ಲಿ ಮಿತ್ರಾವತಿಯನು ವಿದ್ಯಾಧರ | ವಲ್ಲಭೆಯರು ಷೋಡಶರನು |
ಸಲ್ಲಿಲಿತಾಂಗಿ ವಸಂತತಿಕೆಯನು | ಸಲ್ಲೀಲೆಯೊಳಿರಿಸಿದನು || ೩೩೭ ||

ಚಿತ್ತಜನಂತವರೊಡನಿರ್ದು ಗಾಂಧರ್ವ | ದತ್ತೆಗೆ ಹೊನ್ನಮಾಡುವನು |
ಎತ್ತಿಸಿಕೊಟ್ಟು ಕುಬೇರನಂದದಿ ಚಾರು | ದತ್ತನು ಸಂತಸಮಿರ್ದ || ೩೩೮ ||

ಮಾರಸದೃಶರೂಪ ಶರನಿಧಿನಿಭಗಂ | ಭೀರ ಸುರಭಿಸಮದಾನಿ |
ಸಾರಸದ್ಗುಣಿ ಸುದತೀಜನಹೃದಯ | ಕ್ಷೀರವಾರಾಶಿ ಚಂದ್ರಮನು || ೩೩೯ ||

ಇದು ಜಿನಪದಸರಸಿಜಮದುಮಧುಕರ | ಚದುರಮಂಗರಸ ರಚಿಸಿದ |
ಮದನಾರಿ ನೇಮಿಜಿನೇಶಸಂಗತಿಯೊಳ | ಗೊದಾವಿದಾಶ್ವಾಸಗಳ್ಪತ್ತು || ೩೪೦ ||

ಹತ್ತನೆಯ ಸಂಧಿ ಸಂಪೂರ್ಣಂ