ಶ್ರೀಮದಮರಪತಿಮೌಲಿಕೀಲಿತಪಾದ | ತಮರಸದ್ವಯನಜಗೆ |
ಕಾಮಮದೇಭಹರಿಗೆನೀಮಿಜಿನಪತಿ | ಗಾಮೋದವೆತ್ತೆರಗುವೆನು || ೧ ||

ಆ ಲಲಿತಾಂಗಿಯ ಗರ್ಭ ಬೆಳೆದು ಬಳಿ | ಕೇಳಿ ತಿಂಗಳು ಸಮನಿಸಿದ |
ವೇಳೆಯೊಳಾಪಾತಕಿ ಕಂಸನಿರದೆ ತ | ನ್ನಾಲಯಕೊಡಕೊಂಡು ಪೋಗಿ || ೨ ||

ಅಂತರಂಗದ ಹಗೆ ಬಹಿರಂಗ ಹಿತ | ವಂತಿಕೆಯಿಂ ದುಷ್ಟನಿರಲು |
ಅಂತದನರಿದಾ ಮುನಿವಾಕ್ಯವ ನಂಬಿ | ಕಾಂತೆ ನಿಶ್ಚಿಮತಮನಿರ್ದು || ೩ ||

ನವಮಾಸವು ತೀವಿ ವಜ್ರದೇಹಿಗಳಪ್ಪ | ಜವಳಿಮಕ್ಕಳನು ಹಡೆಯಲು |
ತವಕನಿಂದ್ರನ ಬೆಸದಿಂ ನೈಗಮ | ದಿವಿಜಾತನು ಬಳಿಗೈದಿ || ೪ ||

ಲಲನೆಗೆ ಮಾಯಾನಿದ್ರಯನೊದವಿಸಿ | ಯಳಕೆ ಹೆತ್ತಾ ಸಿಸುಗಳನು |
ತಲುವದೆತಂದಲ್ಲಿ ಮಡಗಿಮತ್ತಾಶಿಶು | ಗಳನಲ್ಲಿಗೆ ಕೊಂಡುಪೋದ || ೫ ||

ಆಸಮಯದೊಳೈತಂದು ಹೆರಿಸಬಂ | ದಾ ಸೂನುಗಾತಿಗೆ ಹೇಳಿ |
ಓ ಸರಿಸದೆಯರೆಯಾಯುಷ್ಯವ ಹಡೆ | ದಾ ಶಿಶುಗಳ ಕೊರಲುಗಳ || ೬ ||

ಆರಗುಲಿತನದಿಮುದಿಸಿ ಬಹಿರಂಗದ | ಮರುಕದಿನಾ ದೇವಕಿಯನು |
ನೆರೆಯುಪಚರಿಸಿ ನೋಯದ ಕಣ್ಗಳಿಂ ನೀರ | ನೊರಯಿಸಿ ನಿಶ್ಚಿಂತಮಿರ್ದ || ೭ ||

ಇಂತು ಮೂರುಸೂಳವಳಿಮಕ್ಕಳನು ಕೃ |ತಾಂತನಂದದಿನಕಂಸ |
ಅಂತಿರಿಸದೆ ಹತಿಯಿಸಿ ಮುನಿವಚನವ | ನೆಂತಾನುಗೆಲಿದೆನೆಂದೆನುತ || ೮ ||

ಘನತರವಹಕೃತಕದಿನಿರದಾ ಕಂಸ | ಮನೆಮರೆಯೊಳು ಮಾಡಿಸಿದ |
ಮುನಿಸುಗಿಚ್ಚು ಹೊರಮೊಮ್ಮಿದುದಡುಗೆಯ | ಮನೆಯ ಕಿಚ್ಚಿನ ಹೊಗೆಯಂತೆ || ೯ ||

ಈ ತೆದಿಂ ಕಪಟವ ಮಾಡಿ ಮತ್ತಾ | ಪಾತಕಿ ನಿಶ್ಚಿಂತಮಿರಲು |
ಆ ತನುಜಾತರಗಲ್ಕೆಯಂದುಃಖದಿ | ನಾ ತರುಣೀಮಣಿಯಿರಲು || ೧೦ ||

ಒಂದು ದಿವಸ ಋತುಮತಿಯಾಗಿ ನಾಲ್ನೀರ | ಮಿಂದು ಬಿಳಿಯ ತೊಡವುಟ್ಟು |
ಕಂದರ್ಪನಿಭವಸುದೇವನ ಸೂಳ್ಗೈ | ತಂದುರತಿಯೊಳೋಲಾಡಿ || ೧೧ ||

ಬೆಳಗಪ್ಪ ಜಾವದೊಳಗೆ ರವಿಶಶಿಕರಿ | ಕಳಭಕೇಸರಿ ಚಕ್ರಗಳನು |
ಲಲನೆ ಕನಸಿನೊಳುಕಂಡುಪ್ಪವಡಿಸಿ | ಬಳಿಕದನಿಯನೊಳುಸುರೆ || ೧೨ ||

ಬಾಲೆ ನೀನು ಕಂಡಕನಸಿನಿಂವಿಕ್ರಮ | ಶಾಲಿವಿಶ್ವಂಭರೇಶ್ವರನು |
ಬಾಲಕ ನಿನಗೋರ್ವನಪ್ಪನೆಂಬುದ ಕೇಳಿ | ಲೀಲೆಯೊಳಾ ಸತಿಯಿರಲು || ೧೩ ||

ಆ ನಿರ್ನಾಮಿಕಚರದೇನೆಯ್ತಂದು | ಮಾನಿನಿಯಮಲಗರ್ಭದೊಳು |
ತಾನಿರುದದಯಿಸಿದನು ಶುಕ್ತಯೊಳು ಪುಟ್ಟು | ವಾನವಮೌಕ್ತಿಕದಂತೆ || ೧೪ ||

ಕೇಡನೆಣಿಸುವೆನೆಂಬಾ ಕಂಸಗೆ ಮಿಳ್ತು | ಮೂಡಿ ಬೆಳೆವ ಮಾಳ್ಕೆಯೊಳು |
ಮೂಡಿ ಬೆಳೆದು ಗರ್ಭಚಿಹ್ನಕಾಣಿಸಿತಾ | ಗಾಡಿಕಾತಿ ದೇವಕಿಗೆ || ೧೫ ||

ಕರವನೀಡುವಕಂಸನ ನುಂಗುವೆನೆಂ | ದುರುಗರ್ಭನಿಧಿಯ ಮೇಲಿರ್ದ |
ಕರಿಯನಾಗರಮೊಲಿರ್ದುದು ರೋಮಾವಳಿ | ಸರಸಿಜದಳಲೋಚನೆಗೆ || ೧೬ ||

ಕಡುಗಲಿ ಕಂಸನ ಹಣೆಯಕ್ಕರವನಿಂ | ತಡಗಿಪೆನೆಂದು ತೋರ್ಪ್ತೆ |
ಮಡದಿಯೊಡಲ ಸಿಸು ಬೆಳೆದು ತ್ರಿವಳಿಗಲ | ನಡಗಿಸಿದನೇನೆಂಬೆ || ೧೭ ||

ಈ ವಿಧದಿಂ ಸಿಸುವಿನಗರ್ಭಮಾ ವಸು | ದೇವನ ಪಟ್ಟದಸುದತಿ |
ದೇವಕಿದೇವಿಗೆ ಬೆಳೆದೇಳು ತಿಂಗಳು | ತೀವಿದುತ್ತಮಲಗ್ನದೊಳು || ೧೮ |

ದುಷ್ಟಚತುಷ್ಟಯಕ್ಟಮಚಂದ್ರನ | ದೃಷ್ಟನಾಗಿ ಪಡೆವಂತೆ |
ಅಷ್ಟಮಿಯರ್ಧರಾತ್ರಿಯೊಳರ್ಧಚಕ್ರಿಯ | ನಿಷ್ಟದಿನವಳು ಪಟೆದಳು || ೧೯ ||

ನೀಲದಪುತ್ರಿಕೆಗಸುಪೂರಿಸದಂತೆ | ಬಾಲಕ ಸೊಗಯಿಸಿತಿರ್ಪ |
ವೇಳೆಯೊಳೋಸಗೆಯ ದೇವದುಂದುಭಿಯಂತೆ | ಮೇಲೆ ಗುಡುಗು ಮೊಳಗಿದುದು || ೨೦ ||

ಆ ವಸುದೇವಕುಮಾರನ ನಿಜವೈರಿ | ಭೂವರತತಿಪಕೀರ್ತಿ |
ಅವರಿಸುವಮಾಳ್ಕಯೊಳು ದಿಕ್ತಟವನು | ತೀವಿದುದಾ ಕಾಳಮೇಘ || ೨೧ ||

ಇಂತೊಡ್ಡಿ ಕಣ್ಣ ಹುಯ್ವರ ಕಾಳಲ್ವಾರ | ದಂತಾದ ಮಳೆಉ ಮೋಡದೊಳು |
ಅಂತರಮಿಲ್ಲದೆಸುರಿವ ಸೋನೆಯೊಳು ಭೂ | ಕಾಂತನಾಶಿಶುವನು ನೋಡಿ || ೨೨ ||

ಹಿಂದೆ ಹುಟ್ಟಿದ ಮಕ್ಕಳನಾಪಾತಕಿ | ಕೊಂದನು ಮತ್ತಾತೆರದಿ |
ಇಂದೀ ಶಿಶುವನು ಕೊಲ್ಲದೆ ನಿಲ್ವನ | ಲ್ಲೆಂದು ಪಿರಿದು ಮರುಕದೊಳು || ೨೩ ||

ಮತ್ತಾಮಗುವನು ಕಂಡು ನಿಕ್ಷೇಪವ | ನೆತ್ತುವಂತಾವಸುದೇವ |
ಎತ್ತಿಕೊಂಡಾಮನೆಯನು ಪೊರಮಟ್ಟು ಬ | ರುತ್ತಿರಲಕಾವಳದೊಳು || ೨೪ ||

ಧಾತ್ರೀವಲುವೆನ್ನೀ ತಮ್ಮಗೇಕ | ಚ್ಛತ್ರವೆಂಬಂತೊಂದು ಕೊಡೆಯ |
ಮಿತ್ರತ್ವದಿಂ ಬಲರಾಮ ಪಿಡಿಯಲಾ | ರಾತ್ರಿಯೊಳಗೆ ನಡೆತಂದು || ೨೫ ||

ಆ ಪುರವರದ ಕಡೆಯ ಹೆಬ್ಬಾಗಿಲ | ಗೋಪುರ ಪರಿಯಂತರೈದಿ |
ಆ ಪಡಿಹೊಚ್ಚಿರಲಲ್ಲಿಂ ಮುಂದಕೆ | ಪೋಪ ಹಾದಿಯನು ಪಡೆಯದೆ || ೨೬ ||

ಪಿರಿದು ಚಿಂತಿಸುತಿರಲಾ ಪುಣ್ಯಶಿಶುವಿನ | ಚರಣಾರುಣರುಚಿ ಸೋಂಕೆ |
ತರಣಿಕಿರಣವ ಕಂಡಾಕಂಜಮಲರ್ವಂತೆ | ಬಿರದುವಾಪೊಳಲಕವಾಟ || ೨೭ ||

ಪಡಿದೆಗೆಯಲು ಪಸುಳೆಯ ಪುಣ್ಯಕೆ ಚೋದ್ಯ | ವಡುತಲ್ಲಿಂ ಪೊರಮಟ್ಟು |
ಇಡಿಕಿರಿದಾಗಿ ದಾರಿಯೊಳು ಮುಂದಕೆ ಹೋಹ | ಹಡೆಯದೆ ಚಿಂತಿಸುತಿರಲು || ೨೮ ||

ಮತ್ತಾಮಗುವಿನ ಸುಕೃತದೇವತೆಯೆರ | ಡುತ್ತುಂಗಮಪ್ಪ ಕೊಂಬಿನೊಳು |
ಪೊತ್ತುಪಜ್ಜಳಿಪ ದೀಪವನು ವೃಷಭರೂಪ | ವೆತ್ತು ಮುಂದಕೆ ನಡೆತರಲು || ೨೯ ||

ಆ ವೃಷಭನ ಬೆಂಬಳಿಗೊಂಡುಬಂದು ಮ | ತ್ತಾವಿಭುಗಳು ಮುಂಗಡೆಯೊಳು |
ತೀವಿ ಪರಿವ ಜುಗನೆಯ ಕಂಡಿಂತಿದ | ನಾವಂದದಿ ದಾಂಟುವೆವು || ೩೦ ||

ತಳುವದೆಂದಿಂತು ಚಿಂತಿಸುತಿರಲಾ ಗೂಳಿ | ನಳನಳಿಸುತ ಪರಿತಪ್ಪ |
ಹೊಳೆಯ ಹಾಯಲು ಕಟ್ಟೆಯ ಕಟ್ಟಿದ ಮಾಳ್ಕೆ | ಯೊಳಗದರೊಳು ಕಾಣಿಸುತು || ೩೧ ||

ಈ ವಿಧದಿಂ ದಾರಿದೋರಿದ ಪೊಳೆಯೊಳ | ಗಾ ವಸುದೇವನಾ ಬಲನು |
ಆವೃಷಭನ ಬೆಂಬಿಡಿದಾಚೆಯ ತಡಿ | ಗೋವದೆ ನಡೆತಂದದರಾಗ || ೩೨ ||

ಆನದಿಯನು ದಾಂಟಿ ಕೆಲದೂರ ನಡೆತಂ | ದಾ ನೆಲೆಯೊಳದಿಪ್ಪುದೊಂದು |
ಮಾನಿತಮಪ್ಪ ಯಕ್ಷಿಯಗೃಹಪರಿಯಂತ | ದಾನದಂದದಿಂದೈದಿದರಯ || ೩೩ ||

ಆವೇಳೆಯೊಳಗದೃಶ್ಯತೆಯನು ಹಡೆ | ದಾ ವೃಷಭನು ಪೋಗಲಾಗ |
ಆ ವಸುದೇವನಾಸುತಗುಡಿಯಾ ಯಕ್ಷಿ | ಯಾವಾಸಕೆ ಹೋಗಿರಲು || ೩೪ ||

ನಂದನೆಂಬವನು ಕೈದೀವಿಗೆ ಸಹಿತಾ | ಮಂದಿರಕೆಯ್ತರುತಿರಲು |
ಬಂದಪನಾಕಂಸನೆಂದಂಜಿ ದೇವಿಯ | ಹಿಂದೆಯಡಿಗಿಕೊಂಡಿರಲು || ೩೫ ||

ಅನಿತರೊಳೊಂದು ಪೆಣ್ಗೂಸನು ಕೊಂಡಾ | ಮನೆಯೊಕ್ಕಾಗೋವಳನು |
ವಿನಯವಿದೂರನಾ ಯಕ್ಷಿಯ ಮುಂದೆ ನಿಂ | ದಿನಿಸು ಕೋಪಾಟೋಪದಿಂದ || ೩೬ ||

ಎಲೆ ದೇವಿಯೆನ್ನ ನಂಬಿಸಿ ಗಂಡು ಮಗುವನು | ಒಲಿದು ವರವನೀವೆನೆಂದು |
ಹಲವು ತೆರದಿ ಹಸನಾದ ಪೂಜೆಯನಾ | ಹಲವು ಹಗಲು ಕೈಕೊಂಡು || ೩೭ ||

ಬಲದೇವನ ಕೈಯ ಕೊಟ್ಟಾ ದೇವಿಯ | ನಿಲಯದ ಬಾಗಿಲ್ಗೆಯ್ದಿ |
ಎಲೆ ಕೋಪ ನಿನಗೊಂದು ಗಂಡು ಮಗುವನಾ | ನೊಲಿದೀವೆನು ತಿರುಗೆನಲು || ೪೧ ||

ತಿರುಗಿ ನೀಲದಬೊಂಬೆಯಂದದಿ ತೊಳಗುವ | ತರುಣನನೊಸೆದೆತ್ತಿಕೊಂಡು |
ವರವನಿತ್ತಾಳು ದೇವಿಯೆಂದು ಏನತನಾಗಿ | ಹರಿಸದಿ ಮನೆಗೆಯ್ಯಂದು || ೪೨ ||

ಯಕ್ಷಿಯೆನ್ನನುಕರೆದೀಗಂಡುಮಗುವ ಪ್ರ | ತ್ಯಕ್ಷದಿನಿತ್ತಳೆಮ್ಮಂತೆ |
ಈ ಕ್ಷಿತಿಯೊಳು ಪುಣ್ಯವಂತರುಂಟೇ ಕಮ | ಲಾಕ್ಷಿ ಕೈಕೊಳ್ಳೊಲವಿಂದ || ೪೩ ||

ಎಂದಾನಂದದಿನಾನಂದನಾಕೂಸ | ನಂದು ಕೊಡಲು ಕೈಕೊಂಡು |
ಇಂದುವದನೆ ಕಣ್ಗುರುಡರ್ಗೆ ಕಣ್ಗಳು | ಬಂದಂತೆ ಹರುಷವೆಯ್ದಿದಳು || ೪೪ ||

ಆ ಕೃಷ್ಣಯಕ್ಷಿಯ ವರದತನುಜನೆಂ | ದಾಕುವರಗೆ ಕೃಷ್ಣವೆಸರ |
ಗೋಕುಲದಧಿಪತಿಯಾನಂದನೊಲವಿಂ | ಸ್ವೀಕಾರವ ಮಾಡಿದನು || ೪೫ ||

ವಸುದೇವನಿತ್ತಲಾ ಬಾಲೆಯನೆತ್ತಿಕೊಂ | ಡೊಸೆದಾಮಧುರೆಗೆ ಬಂದು |
ಆಸಿಯಳು ದೇವಕಿಯೊಡನಾಪ್ರಪಂಚಮ | ನುಸುತಿಯಾಮಗುವನು ಕೊಡಲು || ೪೬ ||

ಏಳು ತಿಂಗಳಗರ್ಭದೊಳಗಾದೇವಕಿ | ಬಾಲಕಿಯನು ಪೆತ್ತಳೆಂದು |
ಕೇಳಿ ಮತ್ತಾಕಂಸ ತನ್ನೊಳಗಿಂತೆಂ | ದಾಳೋಚನೆಯ ಮಾಡಿದನು || ೪೭ ||

ಆ ಪೆಣ್ಮಗುವಿನ ಗಂಡನದೆಸೆಯಿಂ | ದಾಪತ್ತು ತನಗಪ್ಪುದೆಂದು |
ಆ ಪಸುಳೆಯ ಮೂಗನಾರರಿಯದವೊಳು | ಪಪಕರ್ಮಿಯೊತ್ತಿಸಿದನು || ೪೮ ||

ಈ ಪತಿಯಿಂದಮಯೋಗ್ಯಮಪ್ಪಂತೆಕು | ರೂಪಾಗಿ ಸಂತತ ಬೆಳೆದು |
ಆ ಪೆಣ್ಣಾರೂಪಿಗೆ ತಾನೇ ಹೇಸಿ | ತಾಪಸರೂಪನು ತಾಳಿ || ೪೯ ||

ಭಾವಶುದ್ಧಿಯೊಳು ವಿಂದ್ಯವ ಹೊಕ್ಕು ತಪಗೆಯ್ದು | ದೇವಲೋಕದೊಳುದ್ಭವಿಸಲು |
ಆವನಚರರಾರೂಪವ ಗದ್ದುಗೆಯದಿ | ರಿತ್ತು ಬಿದ್ದುದು ಪೂಜಿಪರು || ೫೦ ||

ಇತ್ತ ಕಂಸನ ಮನೆಯೊಳು ಸುರಿದುದು ಕ | ನೆತ್ತರಹನಿಮತ್ತವನ |
ಸತ್ತಿಗೆ ಮುರುದುದವನ ಗದ್ದುಗೆಯದಿ | ರಿತ್ತು ಬಿದ್ದುದು ಪಗಲುಳ್ಕು || ೫೧ ||

ಮನೆದೇವತೆಗಳತ್ತವು ಕೂರಸಿಗಳ | ಮೊನೆಯೊಳು ಕಿಡಿ ಸೂಸಿದವು |
ಘನತರಮಪ್ಪದುಭುತವ ಹಡೆದು ಸಂ | ಜನಿಸಿತು ಭೂಕಂಪನವು || ೫೨ ||

ಕಂಸನಂತದ ಕಂಡು ಮುಗಿಲದನಿಯ ಕೇಳ್ದ | ಹಂಸನಂದದಿದೇನೆಂದು |
ಹಂಸಹಾರಿಯೋರ್ವಶಕುನಿಗನೊಳಗೆ ಪ್ರ | ಶಂಸೆಯನಿಂತು ಮಾಡಿದನು || ೫೩ ||

ಏನು ಕಾರಣಮೀ ಉತ್ಪಾತವೆನಲೆಂದ | ನೀ ನೆಲದೊಳು ಭೂಪ ನಿನಗೆ |
ಭೂನುತವಿಕ್ರಮಶಾಲಿ ಪಗೆವನೋರ್ವ | ನಾನದೆ ಬೆಳೆಯುತಲಹನೆ || ೫೪ ||

ಎಂದ ಮಾತಿಗೆ ಶಂಕೆಗೊಂಬ ವೇಳೆಯೊಳಾ | ಪಿಂದಣ ಭವದೊಳು ತನ್ನ |
ಬಂದು ಬೆಸನಬೇಡಿದ ದೇವತೆಗಳೈ | ತಂದು ಕಂಸಾವನಿಪಾಲಾ || ೫೫ ||

ಮುನಿಪತಿ ನೀನಾಗಿರ್ದ ಜನ್ಮದೊಳಾವು | ನಿನಗೆ ಬೆಸನ ಮಾಡಿವೆವು |
ಎನಲು ಮುಂದಣ ಜನ್ಮಕೊದಗಿಯೆಂದಯಲಾ | ಅನಿತರಿಂದೀಗಲೆಯ್ದಿದೆವು || ೫೬ ||

ಅರಸುಗೊಳ್ವವಾರನು ನಿನಗೆರಗಿಪಎ | ವಾರ ಬೀವನು ಬಾರಿಪೆವು |
ಆರನೊಣೆವೆವಾರ ದಿಗುಬಲಿಗೊಡುವೆ | ವಾರನಾರಂತೆ ಸೀಳುವೆವು || ೫೭ ||

ಬೆಸಸು ಬೆಸಸು ಕಂಸಭೂಪತಿಯೆನಲೀ | ವಸುಧೆಯೊಳನಗೋರ್ವ ವೈರಿ |
ಎಸಕದಿ ಬೆಳೆವುತಲಹನೆ ನೀವಿರದೆಯ್ದಿ | ಮಸಕದಿನವನ ಕೊಲುವುದು || ೫೮ ||

ಎನಲಾ ದೇವತೆಯರು ತಾಮೇಳ್ವರು | ವಿನುತವಿಭಂಗಬೋಧದೊಳು |
ವನರುಹನಾಭನು ಬೆಳೆವ ನೆಲಯನರಿ | ದೆನಿತು ಕೋಪದಿನಲ್ಲಿಗೆಯ್ದಿ || ೫೬ ||

ನಾವೆಲ್ಲರು ಕೂಡಿಕೊಲ್ವಡೆ ನರಕೀಟಕ | ಮೀವೈರಿಯಂತದರಿಂದ |
ನಾವೋಬ್ಬರೋಬ್ಬರೆ ಪೋಗಿ ಕೊಲ್ಲುವೆವಂ | ದೋವದೆ ಪೂತಿನಿಯೆಂಬ || ೬೦ ||

ದೇವತೆಯಗೋಪಿ ನೀರ್ಗೆ ಪೋದೆಡೆಯೊಳ | ಗಾವಾಸಕೆ ನಡೆತಂದು |
ಆ ವನಜಾಕ್ಷಿ ಯಶೋಧೆಯ ರೂಪನಂ | ದೋವದೆ ತೀವಿ ಕೋಪದೊಳು || ೬೧ ||

ತೊಟ್ಟನೆ ಬಂದು ಹಸಿದೆ ಮಗನೇಯೆಂದು | ತೊಡ್ಡೊಲೊಳಿರ್ದ ಮಗುವನು |
ಕಟ್ಟೊಲಮೆಯವೊಲು ತೆಗೆದು ತನ್ನದೆಯ ಮೇ | ಲಿಟ್ಟುಕೊಂಡಳು ಮುದ್ದಾಡಿ || ೬೨ ||

ಹಸಿದೆಯಲಾಯೆನ್ನ ಹಿಡಿಹೀರಿಕೊಳ್ಳೆಂದು | ವಿಷವನೂಡಿದ ತನ್ನಮೊಲೆಯ |
ಮಸಕದಿ ಕೊಡೆ ಪುಣ್ಯಪ್ರಭಾವದಿನಾ | ಸಿಸು ಬೇಗದೊಳು ಮೊಲೆಗರ್ಚಿ || ೬೩ ||

ವಿಷವನೆಲ್ಲವನುಂಡಾ ಮೊಲೆಯೊಳಗುಳ್ಳ | ಬಿಸಿ ರಕ್ತವನೆಲ್ಲವನು |
ಹಸಿವುಹೋಗದೆ ಮತ್ತೆ ನೆರೆಹೀರುತಿರಲು | ಬ್ಬಸಮಾಗಿ ತಳಹೊಳಗೊಂಡು || ೬೪ ||

ಉಸುರಿಗುಬ್ಬಸಮಾಗಿಯಸುರರಿಗಿದು ತಾ | ನಸುರನಾಗಿದೆಯೆಂದವಳು |
ಅಸವಸದಿಂದ ಮೊಲೆ ತೂನಲ್ಕಾ | ಸಿಸು ಕಚ್ಚಿ ಬಿಡದಿರಲಾಗ || ೬೫ |

ಮತ್ತಾಮಗುವಿನ ಬಾಯೊಳು ಮೊಲೆದೊಟ್ಟು | ಕಿತ್ತು ಹೋಹಂದದಿ ತುಯ್ದು |
ನೆತ್ತರು ಸುರಿವುತಿದೆಲ್ಲಿಯ ಮಿಳ್ತುದೆ | ನುತ್ತ ರಕ್ಕಸಿ ಪೋದಳಿತ್ತ || ೬೬ ||

ಮತ್ತೆ ಯಶೋಧೆ ನೀರನು ತಂದು ಮನೆವೊಕ್ಕು | ನೆತ್ತರೊಕ್ಕಿರಲಲ್ಲಿ ಕಂಡು |
ಒತ್ತಿ ಬೆದರಿ ಕೆಟ್ಟೆ ಮನಗೆಯಿನ್ನೇವೆನೆ | ನುತ್ತ ತೊಟ್ಟಿಲ ಬಳಿಗೈದಿ || ೬೭ ||

ಆ ರಕ್ಕಿಸಿಯ ಮೊಲೆದೊಟ್ಟು ಬಾಯೊಳು ಸಿಕ್ಕಿ | ಯ ರಕುತದಿ ಧಾರೆ ಸುರಿವ |
ಚಾರು ಕಪೋಲ ಸಹಿತ ಬಾಲಕೃಷ್ಣನು | ಧಾರುಣಿಯೊಳು ಬಿದ್ದಿರಲು || ೬೮ ||

ಎತ್ತಿಕೊಮಡ ಮೊಲೆದೊಟ್ಟ ತೆಗೆದು ಬಾಯ | ಹತ್ತಿದ ನೆತ್ತರ ತೊಳೆದು |
ಮತ್ತೆ ತೂಪಿರಿದು ಮುಂಡಾಡಿ ಮೊಲೆಯನೊಲಿ | ದಿತ್ತು ಮೊದವನೋಡಿದಳು || ೬೯ ||

ಹರಕೆದೆಗೆದು ಮತ್ತಾ ಕೃಷ್ಣಯಕ್ಷಿಗೆ | ಹರಿಸದಿಂದಾ ಹಸುಳೆಯನು |
ಕೊರಲದೇವರ ಹೊನ್ನನೋವುವವೊಲು ಕಡು | ಹರಿಸದಿ ಸಾಕುತಲಿರಲು || ೭೦ ||

ಹೊಂಬಣ್ಣದಂಬುಜದೊಳು ಝೇಂಕರಿಸುತ | ತುಂಬಿ ಪಸುಳೆ ಬೆಳೆವಂತೆ |
ತುಂಬಿಗರೆವುತ ಕೃಷ್ಣನು ಹೊನ್ನತೊಟ್ಟಿಲೊ | ಳಿಂಬಾಗಿ ಬೆಳೆವುತಲಿರ್ದ || ೭೧ ||

ಮರುಳಚಾಣೂರ ಮುಷ್ಟಿಗರನೊದೆದು ಗುದ್ದಿ | ಯರಸುವ ಮಲ್ಲವಿದ್ಯೆಯನು |
ಭರದಿ ಸಾಧಿಸುವಂತೆ ತೊಟ್ಟಿಲೊಳಾ ಹರಿ | ಕರಚರಣವನಾಡಿಸುವನು || ೭೨ ||

ಕಾಕಾಕಾರವಕೈಕೊಂಡು ಕೋಪದಿ | ಮಾಕಾಳಿಯೆಂಬೋರ್ವಳಸುರೆ |
ಆ ಕುಲಿಶೋಪಮನಿಶಿತಚಂಚುವಿನಿಂ | ದಾ ಕೃಷ್ಣನಿರ್ದೆಡೆಗೈದಿ || ೭೩ ||

ದಿಟ್ಟಿಗಳನು ಕುಟುಕುವ ಸಮಯದೊಳಾ | ದಿಟ್ಟನು ಪೊರೆಕೈಯಿಂದ |
ಮುಟ್ಟಿ ಬೀಸಲು ಬೀಳ್ದುದಿಂದ್ರನು ಹೊಡೆದಾ | ರಟ್ಟೆಯ ಬೆಟ್ಟ ಬೀಳ್ವಂತೆ || ೭೪ ||

ಕಾಕಾಕಾಯೆಂದು ಕೊಕ್ಕ ನೆಲಕ್ಕೂರಿ | ಮಾಕಾಳಿ ಕೆಟ್ಟೆ ನಾನೆಂದು |
ಕಾಕಾಕಾರವ ಬಿಟ್ಟದೃಶ್ಯತೆವೆತ್ತು | ಸಾಕಿದೆನುತ ಪೋಗಲಿತ್ತ || ೭೫ ||