ಶ್ರೀಮದಮರಪತಿಮೌಲಿಕೀಲಿತಪಾದ | ತಾಮರಸದ್ವಯನಜಗೆ |
ಕಾಮಮದೇಭಹರಿಗೆ ನೇಮಿಜಿನಪತಿ | ಗಾವೋದವೆತ್ತೆರಗುವೆನು || ೧ ||

ವಿಸ್ತರವಾಗಿ ರಂಜನೆಯನು ಹಡೆದಾ | ಹಸ್ತಿನಪುರವರದೊಳಗೆ |
ದುಸ್ತರವಿಕ್ರಯುತ ರಿಪುಭೂಜಜ | ಮಸ್ತತಕಪದ ಪಾಂಡುರಾಜ || ೨ ||

ಕರುಜಾಂಗಣದೇಶವನತಿಬಲದಿಂ | ದಿರದಾಳುತಿರಲೊಂದು ಪಗಲು |
ಪುರದವನಕೆ ಸುವ್ರತರೆಂಬ ಮುನಿಪತಿ | ಬರಲಾಬಳಿಗೆಯ್ದಿದನು || ೩ ||

ಉರುತರಭಕ್ರಿಯಿಂದೆರಗಿ ಹರಕೆಯಾಂತು | ವರಧರ್ಮೋಪರದೇಶವನು |
ನಿರವಿಸಲವರು ನಿರ್ವೇಗಚಿತ್ತದೊಳಂ | ಕುರಿಸೆ ದೀಕ್ಷೆಯ ಬೇಡಿದನು || ೪ ||

ಅನುರಾಗದಿಂ ದೀಕ್ಷೆಯ ಬೇಡೆ ಕರಮೊಳ್ಳಿ | ತೆನುತಾಮುನಿಯೆಂದನವಗೆ |
ಮನುಜಾಧಿಪತಿಕೇಳಿಂದಿಗೆ ಪದಿಮೂರು | ದಿನದಾಯುಷ್ಯವು ನಿನಗೆ || ೫ ||

ಎನೆ ಪಾಂಡುರಾಜನವರಿಗೆವಂದಿಸಿ ತನ್ನ | ಮನೆಗೆಯ್ದು ಧರ್ಮನಂದನಗೆ |
ಅನುರಾಗದಿಂ ಪಟ್ಟವ ಕಟ್ಟಿ ಮಾದ್ರಾ | ವನಿತೆ ಸಹಿತ ದೀಕ್ಷೆಗೊಂಡು || ೬ ||

ಪದಿಮೂರು ಪಗಲು ತಪಂಗೆಯ್ದು ಜೀವಿತಾಂ | ತ್ಯದಳಾಪಾಂಡುಮನೀಶ |
ವಿದಿತಾಮರಲೋಕಪ್ರಾಪ್ತನಾದನು | ಮುದದಿ ಪೃಥುವಿ ಪೊಗಳ್ವಂತೆ || ೭ ||

ಇತ್ತಕೌರವಪಾಂಡುರಂದನರನು ಮನ | ವಿತ್ತು ಭೀಷ್ಮರು ಸಾಕುತಿರಲು |
ಮತ್ತೊಂದುದಿನ ಬಿಲ್ಲೋಜನು ದ್ರೋಣನೆಂ | ಬುತ್ತಮನೋರ್ವಭೂಸುರನು || ೮ ||

ಆ ರಾಜಾನ್ವಯಾಗತನು ಕೃಪನುವಿಡಿ | ದಾರಾಜಭೀಷ್ಮರ ಕಾಣೆ |
ಕಾರುಣ್ಯದಿಂದ ಮನ್ನಿಸಿಪಾಂಡವ | ಕೌರವರುಗಳನು ಕರೆಸಿ || ೯ ||

ಇವರಿಗೆ ಬಿಲುವಿದ್ಯೆಯನು ತೋರಿಸಯೆಂದು | ಸವಿನಯದಿಂದಾಸುತರ |
ಅವನ ಕೈವಶ ಮಾಡಲಾನೂರೈವರ್ಗೆ | ವಿವಿಧಮಪ್ಪಾವಿದ್ಯೆಯನು || ೧೦ ||

ವಿನಯದಿ ತೋರುತಲಿರಲಾಕೃಪ | ನ್ನುನುಜಾತೆ ಸುಂದರಿಯೆಂಬ |
ವಜಜಾಮುಖಿನಾದ್ರೋಣಂಗೆ ಮದುವೆಯ | ವಿನಯದಿಂದಲಿ ಮಾಡಿದನು || ೧೧ ||

ಆ ಮಿಥುನದ ಗರ್ಭದೊಳಗೊಗೆದಶ್ವ | ತ್ಥಾಮವೆಸರನಂದನನು |
ಕೋಮಲಗಾತ್ರನು ಬೆಳೆದು ಜವ್ವನದೊಳು | ದ್ದಾಮ ವಿಕ್ರಮಯುತನಾದ || ೧೨ ||

ಮತ್ತಾನೂರೈವರು ಸುಕುಮಾರರ್ಗೆ | ಯತ್ತಮಶರವಿದ್ಯೆಯನು |
ಬಿತ್ತರದಿಂ ದ್ರೋಣಾಚಾರ್ಯನೇಕ | ಚಿತ್ತದಿನಭ್ಯಾಸಿಸುತ || ೧೩ ||

ಇರಲತ್ತ ಚಂಪಾಪುರದೊಳು ಭಾನಭೂ | ವರನು ಕೆನ್ನೆಯ ನೆರೆಗಂಡು |
ಧುರಧೀರ ಕರ್ಣಗೆ ಪಟ್ಟವಕಟ್ಟಿ ಬಂ | ಧುರ ಜಿನದೀಕ್ಷೆವಡೆದನು || ೧೪ ||

ಸುಭಿಗಿಮ್ಮಡಿ ಸುಭೂಜಕೆ ಮೂವಡಿ | ಪರುಷಕೆ ನಾಲ್ವಡಿಯೆಸೆವ |
ವರಚಿಂತಾಮಣಿಗೈವಡಿಯಾಗಿ ಬಂ | ಧುರದಾನಿಯಾದಕರ್ಣ || ೧೫ ||

ಇಳೆಯನಾಳುತ ಕರ್ಣನೊಂದು ಪಗಲು ತನ್ನ | ಕುಲಭೂಷಣವಿವರನು |
ತಿಳಿವೆನೆನುತ ಕೈಲಾಸಮಹಾಚಲ | ಕಲಘವಿಕ್ರಮಿ ನಡೆತಂದು || ೧೬ ||

ಆ ಶೈಲದ ಕೆಳಗೊಂದು ಸುರಮ್ಯಪ್ರ | ದೇಶದೊಳಗೆಕುಳ್ಳಿರ್ದು |
ಆ ಶುಚಿಷೋಡಶಾಕ್ಷರಮಂತ್ರಂಗಳ | ನೇ ಶುದ್ಧಮಾಗಿ ಜಪಿಸಲು || ೧೭ ||

ಅವನಿಗೆ ಜ್ವಾಲಿಮಾಲಿನಿ ವಜ್ರದ | ಕವಚ ದಿವ್ಯಾಂಸ್ತ್ರಂಗಳನು |
ಸವಿನಯದಿಂದಿತ್ತು ಬಳಿಕೇನಬೇಡೆನ | ಲವಳೋಳಗಿಂತುಸುರಿದನು || ೧೮ ||

ಎಲೆ ದೇವಿ ಎನ್ನ ಜನನಿ ಯಾರೆಂಬುದ | ನಲಸದೆ ನನಗರುಪೆನಲು |
ಜಲಜಲಿಪುರಮಾಲೆಯೆಂಬ ವಸ್ತ್ರವನಿತ್ತು | ಬಲಯುತಗಿಂತು ನುಡಿದಳು || ೧೯ ||

ಇದನಾರುಪೊದೆದುಪದಳಮಿರ್ದಾಕೆಯ | ಯಧಟ ನಿನಗೆ ಮಾತೆಯೆಂದು |
ಮುದದಿಂ ನುಡಿದಾದೇವಿ ಬೀಳ್ಕೊಡಲಾ | ಚದುರನೂರಿಗೆ ತಿರುಗಿದನು || ೨೦ ||

ಪುರವನು ಹೊಕ್ಕು ಸುಖದೊಳಿರುತಿರ್ದಾ | ತರಣಿತನುಜನೊಂದುದಿವಸ |
ವರಹಸ್ತಿನಾಪುರದೊಳಗೆ ಕೌರವ ಪಾಂಡ | ವರ ಶರವಿದ್ಯೆಯ ಕೀತಿ || ೨೧ ||

ಹರೆಯಲು ಕೇಳಿಯವರ ನಾ ನೋಳ್ಬನೆಂ | ದಿರದೆ ಪುರವ ಪೊರಮಟ್ಟು |
ಭರದಿ ಹಸ್ತಿನಪುರಕೆಯ್ದಿ ಕುಮಾರರ | ಗುರುಡಿಯಮನೆಯ ಹೊಕ್ಕು ನಿಂದು || ೨೨ ||

ಇವರೆದಿವ್ಯಶರಾಸನವಿದ್ಯಾ | ಪ್ರವರರು ಮತ್ತೀ ವಿದ್ಯೆ |
ಇವು ತಾನೈಸೆಯೆಂದೆಂಬ ಕರ್ಣನ ಮಾತ | ನವಧಾರಿಸಿ ಪಾಂಡವರ || ೨೩ ||

ಖತಿಯನು ಮನದೊಳು ತಾಳಿ ಮತ್ತೆಮ್ಮೀ | ಯತಿಶಯಮಪ್ಪ ವಿದ್ಯೆಯನು |
ನುತಿಸದೆ ಕಟಕಿಯಾಡಿದವನಿವನೆಂತ | ಪ್ಪತಿಬಲನೋಯೆಂದು ನುಡಿಯೆ || ೨೪ ||

ಆ ವೇಳೆಯೊಳಾಕೌರವ ಕರ್ಣ ನ | ಲಾವಣ್ಯಾಕಾರವನು |
ಭಾವಿಸಿಯಿವನು ಸಾಮಾನ್ಯನಲ್ಲೆನುತ ಮ | ಹಾವಿನಯದಿ ಹತ್ತಿರೆಯ್ದಿ || ೨೫ ||

ಆ ಕರ್ಣನ ಕೈವಿಡಿದು ಬಳಿಕ ತ | ನ್ನೇಕಾಸನಕೆ ಕರೆಯಲು |
ಭೂಕಾಂತ ಕೇಳು ನಾನಾರೆಂದರಿಯದೆ | ಈ ಕೃತ್ಯವನೆಣಿಸುವರೆ || ೨೬ ||

ಎನಲಿತೆಂದನು ಕೌರವನಾರವಿ | ತನುನಿಗಲೆ ಬಲವಂತ |
ಮನುಜಾಭಾಸರಿಗೀರೂಪೀವೀರ | ವನುಕರಿಸದು ಧರೆಯರಿಯೆ || ೨೭ ||

ಎಂದು ನುಡಿದು ತನ್ನರ್ಧಾಸನಕೆ | ಯ್ತಂದು ಕುಳ್ಳಿರಿಸಿಕೊಂಬಾಗ |
ಎಂದನದೋರ್ವನಿವನು ಚಂಪೆಯ ಸೂರ್ಯ | ನಂದನನೆಂಬ ನುಡಿಯನು || ೨೮ ||

ಕೇಳಿಚಿತ್ತದೊಳು ಕೌರವನತಿ ಹರ್ಷವ | ತಾಳಿ ಮತ್ತಾಕರ್ಣನೊಳು |
ಲೀಲೆಯಿಂದ ನುಡಿಯುತ್ತಿರಲಾಭೀಮ | ನಾಲೋಕಿಸಿ ಕೋಪಗೆಯ್ದು || ೨೯ ||

ಕಿಸುಗಣ್ಣಿನಿಂದ ನೋಡುತ್ತಿರಲದನರಿ | ದುಸುರ್ದನು ಕರ್ಣನಿಂತೆಂದು |
ಪಸುಳೆಕೇಳಿ ಕರಿಕಳಭದನೋಟಕೆ | ಬಸವಳಿವುದೆ ಮೃಗರಾಜ || ೩೦ ||

ಎನಲೆಂದನು ನಿನ್ನಾನಾರೆಂದರಿಯದೆ | ವಿನಯದಿ ಸರಿಗದ್ದುಗೆಯೊಳು |
ಮನಹೇಸದೆ ಕುಳ್ಳಿರಿಸಬಹುದೆಯಂ | ದನಿಲನಂದನ ಬಿರುನುಡಿಯೆ || ೩೧ ||

ಆ ನುಡಿಗಾಕುರುಪತಿ ಕೋಪದಿ ಭೀಮ | ಸೇನನನೀಕ್ಷಿಸುತಿರಲು |
ಮಾನವನೋರ್ವನು ಬಂದು ಭೀಷ್ಮರಕೂಡೆ | ತಾನಾ ವಾರ್ತೆಯನುಸಾರೆ || ೩೨ ||

ಆ ನುಡಿಯನು ಕೇಳಿ ಬಂದು ಕೌರವಭೀಮ | ಸೇನರನಾಭೀಷ್ಮನೃಪತಿ |
ಏನಿದು ಕೋಪಮೆನುತ ನಿಜಭರವನಕೆ | ತಾನೆಯ್ದಿಸಲನಿತರೊಳು || ೩೩ ||

ಕಡುನೇಹದಿಂ ಕುರುಪತಿಯಾಕರ್ಣನ | ನೊಡಗೊಂಡು ಮಂದಿರಕೆಯ್ದಿ |
ಓಡನುಂಡೋಡನುಟ್ಟೊಡೆನಾಡುತ ಪಲ | ಪೊಡವಿಯನೊಲವಿಂ ಕೊಟ್ಟು || ೩೪ ||

ತನ್ನುತ್ಪತ್ತಿಯ ವಿತ್ತದೊಳಗೆ ಸಂ | ಪನ್ನನು ದಶವಂದನನು |
ಮನ್ನಿಸಿಕೊಟ್ಟು ಬಳಿಕಾತನವನೊಳ | ಭಿನ್ನತೆಯಿಂ ಕೂಡಿಹನು || ೩೫ ||

ಎಕ್ಕೆಕ್ಕೆಯಿಂ ಕುರುಪತಿ ಭೀಮಸೇನರು | ಲೆಕ್ಕಿಸದೊಬ್ಬರೊಬ್ಬರನು |
ಮಿಕ್ಕಗದಾವಿದ್ಯಾಪರಿಣತರಾಗಿ | ಸೊಕ್ಕಾನೆಯಂತೊಪ್ಪಿದರು || ೩೬ ||

ಹೇಳಿವನೇನರ್ಜುನನು ಬಿಲ್ಲೊಳು ಬ | ಲ್ಲಾಳು ನಕುಲನು ಕೊಂತದೊಳು |
ಬಾಳಿನೊಳಗೆ ಸಹದೇವನಗ್ಗಳರಾಗಿ | ಭೂಲೋಕದೊಳಗೆ ಮೆರೆದರು || ೩೭ ||

ಒಬ್ಬರೊಬ್ಬರುಪೋದ ದಾರಿಯ ಮೆಟ್ಟರು | ಒಬ್ಬರೊಬ್ಬರೊಳು ನುಡಿದರು |
ಒಬ್ಬರೊಬ್ಬರು ನೋಡರು ಕೌರವರೊಳು | ಗಬ್ಬಿಗಳಾಗಿ ಪಾಂಡವರು || ೩೮ ||

ಅನಿಲಸುತನ ಪಲುಗುಣನ ದೋರ್ವಲದೊಂದು | ಘನತೆಯ ಕಂಡು ಕೌರವನು |
ಮನದೊಳಿರಿವನು ಘೃತಾಹುತಿಯನು ಕೊಂ | ಡನಲನೆಂಬ ಮಾಳ್ಕೆಯೊಳು || ೩೯ ||

ಇಂತವರಿರೆ ದ್ರೋಣನೊಂದು ದಿವಸತನ್ನ | ಪಿಂತಣ ಹರೆಯದ ಸಖನು |
ಕಂತುದೃಶಪಾಂಚಾಲಾಧಿಪತಿಯನು | ಸಂತಸದಿಂ ನೋಳ್ಪೆನೆಂದು || ೪೦ ||

ಕರಿಪುರವನು ಪೊಮಟ್ಟಾದ್ರುಪದಭೂ | ವರನಲ್ಲಿಗೆ ಬರಲವನು |
ಸಿರಿಮದದಿಂ ಸಖ್ಯತನವನು ಮರೆದಾ | ದರವ ಮಾಡದೆಸುಮ್ಮನಿರಲು || ೪೧ ||

ಅದಕೆ ಲಜ್ಜಿಸಿ ಬಂದಾದ್ರೋಣನತಿಕೋಪ | ಹೃದಯನು ಗಜಪುರಕೆಯ್ದಿ |
ಅಧಟನಂತಕಸುತನೊಳು ತಾನೆಯ್ದಿದ | ಹದನನುಸುರೆ ಕೇಳುತವೆ || ೪೨ ||

ಎಮ್ಮ ಗುರುವ ಮನ್ನಿಸದಾ ದ್ರುಪದನ | ಹಮ್ಮ ಬಿಡಿಸು ನೀನೆಂದು |
ತಮ್ಮನರ್ಜುನಸುಭಟರದೇವಗುಸುರಲು | ಸಮ್ಮಾನದಿಂ ಪೊರಮಟ್ಟು || ೪೩ ||

ಅತಿಕೋಪದಿಂ ಪೋಗಿ ಕಾದಿಯಾಪಾಂಚಾಲ | ಪತಿಯನು ಪೆಡಗೈಗಟ್ಟಿ |
ಕ್ಷಿತಿಯೆಲ್ಲ ಪೊಗಳಲು ತಂದು ಯುಧಿಷ್ಠಿರ | ಪತಿಯ ಮುಂಗಡೆಯೊಳು ನಿಲಿಸೆ || ೪೪ ||

ಪಾಡುಗೆಡಿಸಿ ಪಿಡಿತಂದಾ ದ್ರುಪದನ | ನೋಡೆಂದು ಗುರುವನು ಬರಿಸೆ |
ನೋಡಯೆನ್ನನು ನಾಣ್ವಿಸಿದೆಯೆನುತ ಮಾತ | ನಾಡಿ ಲಜ್ಜಿಸಿ ಬಳಿಕವನ || ೪೫ ||

ನಿಜನಗರಿಗೆ ಕಳುಹಲು ಕಂಡು ಪಾರ್ಥನ | ಭುಜವಲದೊಂದೇಳಿಗೆಗೆ |
ಗಜಪುರವೆಲ್ಲ ಪೊಗಳುತಿರಲುರಗ | ದ್ವಜನಾನುಡಿಯನು ಕೇಳಿ || ೪೬ ||

ಎಕ್ಕಟಿಗಲಿಭೀಮನ ಮೇಲಣ ಕೋಪ | ವಕ್ಕುವ ಘೃತದೊಳಗುದಕ |
ಒಕ್ಕವೊಲಾದುದರ್ಜನನ ವಿಕ್ರಮರಸ | ದುಕ್ಕೆವದಿಂ ಕೌರವಗೆ || ೪೭ ||

ಇನ್ನಿವರನು ಕೃತಕದಿ ಕೊಂದಲ್ಲದೆ | ಯೆನ್ನ ಬಾಳುವೆಯಿಲ್ಲವೆಂದು |
ತನ್ನೊಳು ತಾ ಚಿಂತಿಸಿ ಕುರುಭೂಪತಿ | ಮುನ್ನ ತನಗೆ ವಶಮಾದ || ೪೮ ||

ವಾರಣಾಸಿಪುರದೊಳು ಜತುಗೇಹವ | ನಾರರಿಯದಮಾಳ್ಕೆಯೊಳು |
ನೇರಮಾಗಿ ಮಾಡಿಸಿ ಧೃತರಾಷ್ಟ್ರ ಮ | ಹೀರಮಣನ ಬಳಿಗೆಯ್ದಿ || ೪೯ ||

ಜನಕ ಚಿತ್ತೈಸೆನ್ನ ಭಿನ್ನಪವನು ಪಾಂಡು | ತನುಜಾತರು ಮನ್ನಿಸದೆ |
ಮನದೊಳು ಬಗೆಯದುದ್ಧತರಾಗಿರ್ಪುದ | ನಿನಿಸು ತಾಳುವುದಿಲ್ಲ ನಾನು || ೫೦ ||

ಒಂದೊರೆಯೊಳಗತಿನಿಸಿತಮಪ್ಪಸಿಯೆರ | ಡೊಂದುವಣೆಯವದರಂತೆ |
ಒಂದುರೊಳಗೀರ್ವರರಸುತರನವನಾಳ್ವು | ದಂದವಹುದೆ ಭೂಪಾಲ || ೫೧ ||

ಎನಲೆಲೆ ತನುಜಾತ ನಿನ್ನಯ ಮನಸಿಗೆ | ಯನುವಪ್ಪಂತು ಮಾಡುವೆನು |
ಎನುತವನನು ಬೀಳ್ಕೊಟ್ಟು ಬಳಿಕ ಧರ್ಮ | ತನುಜನ ಕರೆಯಿಸಿಕೊಂಡು || ೫೨ ||

ಮಗನೆ ಕೇಳು ಧರ್ಮಜ ನಾನು ನಿನಗೊಂದು | ಸೊಗಯಿಪ ಮಾತನೊರೆವೆನು |
ಬಗೆಗೊಂಡಾ ನುಡಿಯನು ಕೈಕೊಳ್ಳೆಂದು | ಮಿಗಲಾಗಿ ಬೋಧಿಸಿ ನುಡಿಯೆ || ೫೩ ||

ಆ ನುಡಿಗಿಂತೆಂದನೆಲೆ ಪ್ರಿಯಜನಿಕಾ | ನೀನೆನಗುಸುರುವ ನುಡಿಯ |
ನಾನು ಮೀರುವುದಿಲ್ಲ ನಿರವಿಸಿಮೆನಲಾ | ಭೂನುತನುಸುರಲು ಕೇಳಿ || ೫೪ ||

ನಿಮ್ಮೀರ್ವರುಭೂವರರೊಳಗೋರ್ವರು | ನಮ್ಮ ದೇಶದೊಳೊಂದು ಪುರಕೆ |
ಸಮ್ಮದದಿಂ ಪೋಗಿ ನಿಮ್ಮದೇಶಮನಾಳ್ವು | ದೆಮ್ಮನುಮತವೆಲೆ ಮಗನೆ || ೫೫ ||

ನೀವೇ ಪೊದಪಿರೋ ಅಲ್ಲದೊಡೆ ಕುರು | ಭೂವರನನು ಕಳುಹುವೆವೊ |
ಈ ವಿಧವನು ನಿನ್ನ ಮನದೊಳಗೆರಡಿಲ್ಲ | ದೇವಸುರುವುದೆಲೆ ಮಗನೆ || ೫೬ ||

ಎಂದು ನುಡಿದ ನುಡಿಯನು ಕೇಳಿಯಾಧರ್ಮ | ನಂದನನಿಂತು ನುಡಿದನು |
ತಂದೆ ಕೇಳು ನಿಮ್ಮಯ ಚಿತ್ತಕೆ ಬಂದು | ದೊಂದೂರಿಗಾನು ಪೋದಪೆನು || ೫೭ ||

ಎನಲೆಂದನು ನಿನ್ನನುಜರು ಸಹಿತಾ | ಜನನುತ ವಾರಾಣಸಿಗೆ |
ಅನುರಾಗದಿಂ ಪೋಗಿ ಸಲೆ ಸುಖದಿಂ | ನಿಮ್ಮ ಜನಪದವನು ರಕ್ಷಿಸುವುದು || ೫೮ ||

ಎಂಬುದಂತೆಗೆಯ್ವೆನೆಂದು ಸದ್ಗುಣನಿಕು | ರುಂಬನವನ ಬೀಳ್ಕೊಂಡು |
ಇಂಬುವಡೆದ ಶುಭದಿನದೊಳಗನುಜರು | ಬೆಂಬಳಿಯೊಳು ಪೊರಮಾಡಲು || ೫೯ ||

ಅನುರಾಗದಲಿ ಭೀಷ್ಮರಿಗೆ ವಂದಿಸಿ ಬಂದು | ಜನಗಳನುರೆ ಬೀಳ್ಕೊಂಡು |
ಅನಿಮಿಷಪತಿವಿಭವದಿ ಪೊರಮಟ್ಟನು | ಜನನುತ ನಾಗಪುರವರವನು || ೬೦ ||

ಭರದಿಂದ ಪೊರಮಟ್ಟವಾರಾಣಸೀ | ಪುರಕೆ ಪೋಗಲಲ್ಲಿರ್ದ |
ಕುರುರಾಜನ ಪೆರ್ಗಡೆ ಸುಲೋಚನನೆಂಬ | ನುರುಮುದದಿಂದಿದಿರ್ಗೋಂಡು || ೬೧ ||

ಕೃತಕದಿಂದ ಮಾಡಿದರಗಿನಮನೆಗಾ | ಕ್ಷಿತಪಕುಮಾರರ ಹೊಗಿಸಿ |
ಅತಿಸುಖದಿಂದಿರಲಲ್ಲಿಗೆ ವಿದುರನು | ನ್ನತಿವಡೆದ ಮರುಕದೊಳು || ೬೨ ||

ತೊಳಪರಗಿನಮನೆಯನು ಮಾಡಿ ದೀಪಾ | ವಳಿಯೊಳಗಾದೀವಿಗೆಗಳ |
ಬೆಳಗುವ ನೆವದಿಂದಾಮನೆಯನು ಸುಟ್ಟು | ತುಳಿಲಾಳು ನಿಮ್ಮೆನೆಲ್ಲರನು || ೬೩ ||

ಕುರುಪತಿ ಕೊಲುವ ಕಜ್ಜಮನೆಸಗಿದನಿದು | ನಿರುತಮೆಂದು ಗೂಢಚರರ |
ತ್ವತಿತದಿನೆಯ್ದಿಸಲಾ ಮಾತನವರು ಬಂ | ದೊರೆಯಲದನು ತಾನರಿದು || ೬೪ ||

ಮುನ್ನಸುರಂಗವೆಂಬೊಂದು ಬಿಲವು ತಾನು | ಚೆನ್ನಾಗಿ ಸಮೆದುಕೊಂಡಿರಲು |
ಅನ್ನೆಗನ ದೀಪಾವಳಿ ಬರಲಾ | ಸನ್ನೆಯ ಸಂಕೇತದವರು || ೬೫ ||

ದೀವಿಗೆಗಳನು ಬೆಳಗಲಾವುರಿ ಲಾ | ಕ್ಷಾವಾಸವನಿರದಡರೆ |
ಅವುತ್ತಮಸತ್ವೋಪೇತರು ಕೊಂತಿ | ದೇವಿ ಸಹಿತ ಪೊರಮಟ್ಟು || ೬೬ ||

ಆ ಸುರಚಿರಬಿಲದಿಂ ನಡುವಿರುಳಿನೊ | ಳೋಸರಿಸದೆ ನಡೆತಂದು |
ಭಾಸುರಮೂರ್ತಿಗಳದಿರದೆ ಹೊಕ್ಕರೊಂ | ದಾಸುರಮಪ್ಪಡಿವಿಯನು || ೬೭ ||

ಅಲ್ಲಿ ಕಿಮ್ಮಾರನೆಂಬೋರ್ವ ದಾನವನತಿ | ಬಲ್ಲಿದ ನಾನಿರ್ದೆಡೆಗೆ |
ನಿಲ್ಲದೆ ಬಂದವರಾರೆಂದಿದಿರಾಗಿ | ಪೊಲ್ಲದ ಮುನಿಸಿನಿಂ ಬಂದು || ೬೮ ||

ಹಿರಿಯದೊಂದು ಮರವನು ಕಿಳ್ತು ತಿರ್ರನೆ | ತಿರುಹಿ ಹೊಡೆವೆನೆಂಬಾಗ |
ಉರುಕೋಪದಿಂದ ಗದೆಯ ಕೈವಿಡಿದಾ | ಮರುತನಂದನನಿದಿರಾಗಿ || ೬೯ ||

ಪರ್ವತವನು ವಜ್ರದಂಡವನ ಪಿಡಿದು ಸು | ಪರ್ವಾಧಿಪತಿ ಪೊಡೆವಂತೆ |
ದೋರ್ವಲಶಾಲಿಯಸುರನ ಹೊಡೆದು ಕೊಂದ | ನುರ್ವಿಯೆಲ್ಲದಿರುವಂದದೊಳು || ೭೦ ||

ಇತ್ತ ಕೌರವನಾಪಾಂಡಭೂಪಾ | ಲೋತ್ತಂಸರರಗುವನೆಯೊಳು |
ಸತ್ತರೆಂಬ ವಾರತೆಗೇಳಿ ಸಂತಸ | ವೆತ್ತು ನಿಶ್ಚಿಂತದಿಂದಿರ್ದ || ೭೧ ||

ಅರಗಿನಮನೆಯೊಳಗಾಪಾಂಡುತನುಜರು | ಮರಣವಡೆದ ವಾರ್ತೆಯನು |
ಹರಿವಂಶದವನೀಶ್ವರರೆಲ್ಲರು ಕೇಳಿ | ಪಿರಿದು ದುಃಖವ ತಾಳಲಿತ್ತ || ೭೨ ||

ಆಮಹಿಮರು ತದ್ವಿಪಿನರಕ್ಷಕರನು | ದ್ಧಾಮಸತ್ವೋಪೇತನಾದ |
ಕಾಮುದನಸುರನ ಕೊಂದುದಯದೊಳಭಿ | ರಾತೆಯನು ನೆರೆಪಡೆದ || ೭೩ ||

ಕಾಸಾರಮೆಂಬ ಪುರದ ವನದೊಳಗಾ | ಸಾಸಿಗರಿಲಲ್ಲಯರಸು |
ವಾಸವನಿಭದಾನ್ಯರಾಜನರಮಣಿ ಧ | ರಾಸುಂದರಿಯೆಂಬವಳು || ೭೪ ||

ಅವರೀರ್ವರ ಸುತೆ ಕುಸುಮಮಾಲಿನಿಯೆಂಬ | ಯುವತಿಯಪ್ರತಿಮವಿಲಾಸೆ |
ಅವಳನು ಧರ್ಮನಂದನಗಲ್ಲದೀಯೆನೆಂ | ದವರನುನಯದಿಂದಿರಲು || ೭೫ ||