ಶ್ರೀಪಾಲಚರಿತೆ :

೧. ಹರಿ ವಿರಂಚಿಗಳು ತಂತಮ್ಮ ಪೆಂಪಿಗೆ ಹೋರಿ ಹರನಡಿಮುಡಿಗಾಣಲೆಂದು ಇರದಿಟ್ಟ ಬಟ್ಟೆಗಳೆನಲಿಹವಾಪುರಕುರುಖಾತಿ ಪ್ರಕಾರ ೧ – ೭೦.

೨. ಗಿರಿಜೆಯ ಕಥನದಿಂ ಸತ್ತಾಮೃತಧರೆಯಿಂ ಮರುಹುಟ್ಟು ಹಡೆದು ಧುರಧೀರನಾಗಿರ್ದು ತಟ್ಟುವನಾಕಂತು ಹರನನಿನನ್ನೊಮ್ಮೆ ನೋಡೆಂದು ೩ – ೭೨.

೩. ಕಾಡುರಿ ಕಣ್ಗಿಸೆದಿರಲಾಗಿ ಪಡಿಯಾದುದಾ ತ್ರಿಣಯನಿಗೆ ೪ – ೪೮.

೪. ಬೆಂಗದಿರನನುವಿನ ಕಾಂತಶಿಲೆಯಗ್ನಿ ಸಿಂಗಿವಾವಿನ ಪಜ್ಜೆಗಳಾ ಜಂಗುಳಿಮರಗೊಂಬಿ ನೊತ್ತುರಿಯಿಂದುರುಲಿಂಗಂಬೋಲಾದುಆ ಶಿಖರ ೪ – ೫೧.

೫. ಒಡಲಾಂತ ತನುವೀತನ ನೆವದಿಂದೆಂದು ಕಡುಗಳ್ದಾಕಾಶಮೆಂಬ ಮೃಡನುರಿಗಣ್ಣತೆರೆದವೊಲು ನಡುನೇಸರಡಸಿದುದಂದು ಬಲ್ಬಿಸುಪು ೪ – ೫೪.

೬. ಲಲನೆಯುಪ್ಪರಿಯನಿಳಿದಳು ಶಂಭುವ ತಲೆಯನಿಳಿವ ಗಂಗೆಯಂತೆ ೪ – ೮೬.

೭. ಶಿವನ ಕಣ್ಣುರಿಗಿಚ್ಚು ಜಲಜಬಾಣನತೆರನಾಯ್ತು ೫ – ೬೦.

೮. ಹರನ ಜಡೆಯ ಮೆರೆಯನು ಹೊಕ್ಕ ಹೆರೆಗುರಗನ ಭಯಬಿಟ್ಟುದಿಲ್ಲ ೫ – ೧೧೦.

೯. ಮೊರೆವೊಕ್ಕ ಕಾವನ ಕೊಡುಕೊಲ್ವೆನೆಂದಾಕರೆಗೊರಲನ ದಿಟ್ಟಿಗಿಚ್ಚು ತರೆಸಂದು ಮುತ್ತು ಮೂವಳಿಸಿದವೊಲು ಜ್ವರ ಉರೆಕಾದವವಳಂಗದೊಳು ೭ – ೨.

೧೦. ಬಿಯದರಾಡುವ ಬಲು ಬೇಟೆಯಾರ್ಭಟೆಗತಿಭಯಮುತ್ತೊಂದು ಮಯೂರ ಜಯವನಿತೇಶನ ಕಾಲೆಡೆ ಹಾಯೆ ಶೂಲಿಯ ಸುಕುಮಾರನಂತೆಸೆದ ೭ – ೭೨.

೧೧. ಹರನ ವರದಿ ಹಲರೆದೆಯೊಳಂಗೋದ್ಭವನಿರೆ ರಶಿ ತಾನೊರ್ವಳೆಂದು ಪಿರಿದಪ್ಪ ಬಹುರೂಪುವಡೆದವೋಲಾವಾರತರುಣಿಯರುಗಳು ೯ – ೯

೧೨. ಉರುಮುದದಿಂದಂಗೋಪಾಂಗದೊಳಿನಿಸೆರವಿಲದೆ ಗಾಢವೆತ್ತ ಪರಿರಂಭಣಮೊಪ್ಪಿದುದರ್ಧ ನಾರೀಶ್ವರನ ತೆರನನುಕರಿಸಿ ೧೧ – ೧೩.

೧೩. ಉರಗನ ಹೆಡೆಯ ಮಾಣಿಕವೊಪ್ಪಿತಾಹರನುರಿಗೈಯ್ಯ ವರವ ಕೊಂಡ ದುರುಳ ರಕ್ಕಸನ ವಾಮೇತರಹಸ್ತದ ಬೆರಲುಂಗುರರನ್ನದಂತೆ ೧೧ – ೬೯.

೧೪. ಧರಣಿಪತಿಯೊಪ್ಪಿದನಂದಿನುರಗಾಭರಣನೆಂದೆಂಬ ಮಾಳ್ಕೆಯೊಳ್ ೧೧ – ೭೬.

೧೫.    ಸೇನಾಪಧಸಂಜಾತಮಾದ ಕೆಂಧೂಳು ರಂಜಿಸಿ ನಭಕೇಳಲಾವ್ಯೋಮಕೇಶಗೆ ಕೆಂಜೆಡೆಯಾದುದಂದಿಂದ ೧೩ – ೯೫.

೧೬     ಅಮೋಘವೆಂದೆಂಬ ಶರವನಿಟ್ಟರಸೆಸೆದನು ತ್ರಿಪುರವನೆಸುವೆರೆದಲೆಯನಂದದೊಳು ೧೩ – ೧೧೯.

ಸಮ್ಯಕ್ತ್ವಕೌಮುದಿ :

೧       ಎಳೆ ಮುತ್ತಿನಕ್ಷತೆಯನಿಟ್ಟು ಸಂಭ್ರಮದಿ ಪೂಜಿ ಮಲ್ಲಿಕಾಲಿಂಗವೊ ಎನಲ್ ೧ – ೩೮

೨       ಅಂಬಿಕಾಪತಿಯ ಮತ್ಸರದಿ ದಕ್ಷಬ್ರಹ್ಮನೆಂಬವಂ ರಚಿಸುವಾಯಾಗಕ್ಕೆ ದೇವನಿಕರುಂಬಮೆಲ್ಲಂ ಬರ್ಪತೆರದಿ….. ೭ – ೧೮.

ನೇಮಿಜಿನೇಶ ಸಂಗತಿ :

೧       ಹರನೊಳು ಹುಸಿದ ದೋಷಿಗಳೆಮ್ಮ ಹೊರೆಯೊಳಗಿರಬೇಡವೆಂದು ಕೋಪದೊಳು ವರವನ ಸತಿ ನೂಂಕಿದಂತೆ ಬೇಲಿಗಳೊಳು ಪಿರಿದೊಪ್ಪಿದವು ಕೇತಕಿಗಳು (೧ – ೬೪)

೨       ಆ ರಮಣೀಮಣಿಯೊಳಗಿಭ್ಯಕೇತುಕುಮಾರನೊಸೆದು ಕೂಡಿಹನು ಗೌರಿಯೊಡನೆ ನೇಹದಿಂ ರಾಜಶೇಖರನೋರಣದಿಂ ಕೂಡಿದಂತೆ ೨ – ೧೨೩

೩       ಕಡೆಗಾಲದ ಸೂಲಿ ತೆರೆದ ನೊಸಲಕಣ್ಣ ಕಡುಗಿಚ್ಚಿನಂತೆ ೩ – ೧೦೩

೪       ಜನಿಸಿದರು ಕೊಂತಿಮಾದ್ರೆಯರೆಂಬವರು ಪಾರ್ವತಿ ಗಂಗೆಯಂತೆ ವಿಲಾಸವಡೆದರು ೪ – ೯೦

೫       ಗಿರಿಸುತೆ ಗಂಗಾಸುದತಿಯರೊಳಗಿಂದುಧರನೊಲವಿಂ ಕೂಡಿದಂತೆ ಗುರುವೆಯರೀರ್ವ ರೊಳುಕೂಡಿದನಾ ವರಗುಣನಿಧಿವಸುದೇವ ೮ – ೧೫೪

೬       ಧರೆಗುರುಳುವನೃಪತಿಯ ಕಂಡುನ್ಮದ ಕರಿದಂತಯುಗದಿಂದ ತಿವಿಯೆ ಹರನಡಿಗಾಣಲೆಂದಾ ಹರಿಯಿಳೆಯ ಸೂಕರನಾಗಿ ತಿವಿದಂತಾಯ್ತು ೯ – ೧೨

೭       ವರವಜ್ರವಿಲ್ಲೆದೆಯ್ದಿದ ಸುರಪತಿಯೊ ಅಲರಂಬನುಳಿದಂಗಜನೊ ಉರಿಗಣ್ಣ ಬಿಸುಟುಗ್ರನೊಯೆಂದು ನೋಡಿದರಿರದಾ ತರುಣಿಯರವನ ೧೦ – ೬೯

೮       ಹರಿವಿರಿಂಚಿಗಳ ಹೋರಟೆಯಿಂದಾ ಉಗ್ರದುರಿಲಿಂಗವಾದಂದದೊಳು ದುರುಳನವನು ಮಾಡಿಸುವ ಹೋಮದುರಿಯಿಂ ಕರಮೊಪ್ಪಿತಾ ಸೌಮ್ಯಶಿಖರಿ || ೧೧ – ೪೨

೯       ಅಸಿಯಳಾಟದೊಳಭಿನಯಿಪ ಕರಾಂಗುಲಿಯೆಸಕದಿಂದಾ ಶಶಿಮೌಳಿ ನೊಸಲ ನಯನದಿಂದುರುಪಲು ಮೈಯಳಿದಸಮಾಸ್ತ್ರಗೆ ಮರುಜವಳಿ ೧೨ – ೧೨

೧೦     ರಾಜಾಧಿರಾಜಕದಂಬವ ಬಿಸುಟಾರಾಜಶೇಖರಗೆ ಸೂಡಿದಳು ಓಜೆಯಿಂದಾ ಅಭಿನವಪಾರ್ವತಿ ವಿಭ್ರಾಜಿಸುವಲರಮಾಲೆಯನು ೧೨ – ೫೪

೧೧     ಇದಿರ್ವಂದು ಕಡೆಗಾಲದ ರುದ್ರನೇರುವಗ್ಗದ ಗೂಳಿಯೆಂಬಂದದೊಳು ಒದಗಿಬಪ್ಪಾವೃಷಭನ ಕಂಡು ಬಂದದರ ಕೊಂಬೆರಡನು ಪಿಡಿದು ೧೬ – ೧೦

೧೨     ವ್ಯೋಮಕೇಶನ ತಲೆಯೇರುವ ಗಂಗಾಭಾಮಿನಿಯೆಂಬದದೊಳು ೨೧ – ೪೫

೧೩     ಮೇರುಶಿಖರಿ ಇಳೆಯೆಂದೆಂಬ ಪೀಠದ ಮೇಲೆ ಥಳಥಳಿಪ ಬೆಳ್ಳಿಯ ಲಿಂಗವಾಯ್ತು. ೨೨ – ೧೪೬

೧೪     ಅಲ್ಲಿಯೋರ್ವಳು ಹರನುರಿಗಣ್ಣಿನಳಿದಲರ್ವಿಲ್ಲಬಲ್ಲಹನಗಲ್ಕೆಯೊಳು ನಿಲ್ಲದೆ ರತಿ ತಪಮಿರ್ದ ಪಳೋಯೆನೆ ಪುಲ್ಲಾಕ್ಷಿ ತಪಗೈಯುತಿರಲು ೨೩ – ೮೭.

೧೫ ಮಂಜುವೆಟ್ಟನ ಮಗಳು ಶಂಕರನ ದಿಟ್ಟಿದೆರೆದು ನೋಡಿದಂತಾ ಸತಿ – ೨೩ – ೯೨

೧೬     ಕಾಳಗೂಳಿಯನೇರಿ ಕಡುಗೋಪದಿಂದ ನಿಜಬಾಲಲೋಚನವನು ತೆರೆದಾ ಕಾಲರುದ್ರನ ವೊಲಾನೆಯನೇರಿ ೨೭ – ೧೫೦ ತ್ರಿಪುರವ ಕಂಡ ತ್ರಿಲೋಚನನಂದದಿ ೨೭ – ೧೭೩.

೧೭     ಹರನ ಹಣೆಗಣ್ಣು ಭೇದಿಸಬಾರದಿರವಿನಂತೆಸೆವ ವಾಹಿನಿಯಲ್ಲಿ ಸೈಂಧವನನ್ನಿರಿಸಿ ೨೮ – ೧೨೪

೧೮     ಹಸಿದ ಭೈರವನಂದದೊಳು ನೊಸಲ ನಯನದಂತೆ ೨೮ – ೧೩೧

೧೯     ಬಿಲ್ಗೆಯೆಂಬ ಹೂಡಿ ಮುಪ್ಪರವನೆಸೆವ ಮೃಡಮೂರ್ತಿಯ ಮಾಡಿದಂದದಿ ೨೯ – ೮೮

೨೦     ತ್ರಿಪುರವನಾಮೃಡ ಸುಡುವುರಿ ಹೊಗೆಯಂತೆ ೩೦ – ೨೫

೨೧     ಕಡೆಯಕಾಲದೊಳು ಕಪರ್ದಿ ಕನಲಿ ತನ್ನ ತೊಡವಿನ ಕಾಳಸರ್ಪನನು ಬಿಡಲದು ಬರ್ಪಂದದಿನೆಸಲಾಕಣೆ ಘುಡು ಘುಡಿಸುತ ನಡೆತರಲು ೩೦ – ೩೧

೨೨     ಲಯದಿನದ ಈಶನಂದದಿ ೩೦ – ೪೬

೨೩     ಹರನುರಿಗಣ್ಣ ತೆಗೆದಂತಾಹ್ನಿಬಾಣ ೩೧ – ೪೬

೨೪     ಅಂತ್ಯಕಾಲದಮೃಡ ಮುನಿಸಿದಂದೆವೆದೆಗೆದ ಕಿಡಿಗಣ್ಣಿನ ಕುಳಿಕನದೊಂದುಷ್ಣವ ಪಡೆದಂತೆ ೩೧ – ೫೬

೨೫     ಆ ರುದ್ರನಳಿಕಾಂಬಕದಗ್ನಿಯಾ ಮೂರೂರುನುಂಡಂದಿಂದ ಮೊದಲು ೩೪ – ೧೧೦

ಜಯನೃಪಕಾವ್ಯ :

೧       ಗಿರಿರಾಜಂ ಗಿರ್ವಾಣನೀಕದ ಪೊರೆಯೊಳ್ ಪೊಣ್ಮುವ ವೈಭವದಿಂದಾ ತರುಣ ಶಶಾಂಕಧರಂಗೆ ಭವಾನಿಯನೊಲದೀವಂದದೊಳು ೧೩ – ೩೧

೨       ವಸುಧಾವಿಷ್ಟರದುಪರಿಮದೊಳ್ ರಂಜಿಸುವೆಳವೆಶಕಿನ ಲಿಂಗಂಬೊಲು ಮೇಣಸಮಾಯುಧನಂ ಗೆಲ್ದಭವಂ ನಿರಿಸಿದ ಹರಲಮಿಸುಪ ಜಯಸ್ತಂಬಂಬೊಲು…. ತೊಳಗಿದುದಾಕೈಲಾಸಾದಿ ೧೫ – ೫

೨       ಅಂಗನೆ ನಡೆತಂದಳು ಸಿರಿ ಹರಿಯಿರ್ದಿಂಗಡಲಿಗೆ ಬರ್ಪಂತೆ ೨ – ೫೩

೩       ಪುರುಷವೇಷವನುಳಿದಾ ಕೋಮಲೆ ಬಂಧುರವಾದಳಂದಿನ ವಿಷ್ಣು ಉರಿಗೈಯ ರಕ್ಕಸನನು ಕೊಲೆ ಹರಿ ಪೆಣ್ಣರಿಜ ಕೈಕೊಂಡ ಮಾಳ್ಕೆಯೊಳು ೩ – ೨೪

ನೇಮಿಜಿನೇಶಸಂಗಿ :

೧       ಧರೆಯ ನಡುವೆ ನಿಂದು ಮಾನುಷೋತ್ತರಗಿರಿಗಿರಿಸಿ ತಿರುಗುವ ವಿಷ್ಣುವಿನ ಚರಣಮೊಪ್ಪಿತು ಬಿದಿ ನೆಲವ ನಿರ್ಮಿಸುವಂದು ತಿರುಹುವ ಕವೆಯರದಂತೆ ೧೧ – ೭೯

ಶಿವ – ವಿಷ್ಣಪರ ಉಪಮೆ – ರೂಪಕಗಳು :

ಜಯನೃಪಕಾವ್ಯ :

೧       ನೀರನಿಧಿಯಸುತೆ ನವನೀಲಾಂಗನ ಪೇರುರಮಂ ಪೆರೆದಲೆಯನ ಮೆಯ್ಯ ಗೌರಿ…..ಕೌರವನಂ ಸುಲೋಚನೆಯೊಲಿದಿಹಳು ೧೫ – ೫

೨       ಹರನೆನೆನ ಸಕಲಕಲಾಭೃತ್ಪೂಜ್ಯಂ ಹರಿಯೆನೆ ಸಲ್ಲಲಿತವಿಚಾರಂ… ವಿಭ್ರಾಜಿಸಿದಂ ಕಾಂಚನವರ್ಮನರೇಂದ್ರ ೧೩ – ೩೫

ನೇಮಿಜಿನೇಶಸಂಗತಿ :

೧       ಅಸುರನ ಕೊಂದವನೊಯ್ದವನಿಯ ತಂದು ಹಸಮಾಡಿ ಮುಂದದಕಾರೂ ಮುಸುಕದಂದದಿ ಹರಿಗೆಯ್ದ ನೀರಗಳೆನಲೆಸಕವಡೆದುದಾ ಜಲಧಿ ೧ – ೪೬

೨       ಆ ರಾಜೇಂದ್ರಚೂಡಾರತ್ನಕೆ ಗಾಂಧಾರಿವೆಸರ ಸತಿಯಿಹಳು ನೀರಭುಡಾಗಾರದ ಸುಕುಮಾರಿ ಮುರಾರಿಗೆ ಮಡದಿಯಾದಂತೆ ೩ – ೨೩

೩       ವೃಷಭೇಶನಂತುರುತರ ಶೃಂಗಾನ್ವಿತ ವಿಷಮವಿಲೋಚನನಂತೆ ವಿಷಭೃದ್ಭಾಸಿ ವಿಷ್ಣುವಿನಂತೆ ನಾಗದ್ವಿಷಭಾಸುರಮಾ ಶಿಖರಿ ೨೪ – ೬೮

ಶ್ರೀಪಾಲ ಚರಿತೆ :

೧       ಪಿರಿದಪ್ಪಕೋಪದಿತಮವೆಂಬಸುರನತುರಿಹದಿಕೊಲೆ ಪಗಲೆಂಬರಿಯಿಟ್ಟಪಾರುಂಬಳೆ ಯೆಂಬವೋಲಾತರಣಿಮಂಡಲವೊಪ್ಪಿದುದು ೬ – ೨೮

೨       ಶ್ರೀವಿಷ್ಣುವ ಶಾಂಭವಿ ಶಂಭುವ ಮಾಕ್‌ಶ್ರೀದೇವನಳ್ಕರಿಂದ ಭಾವಿಸುವಂತೆ ನೋಡಿದಳಭಿನವ ರತಿಭಾವೋದ್ಭವಸನ್ನಿಭನ ೧೦ – ೨

೩       ಹರನ ಮಹಿಮೆ ಹರಯೈಸಿರಿ ವಾಣೀವರನ ಬಲ್ಲವಿಕೆ ಮನ್ಮಥನ ವರರೂಪಿನಿಂ ಕಣ್ಗೊಪ್ಪಿದನಾ ಭೂವರಕುಲಮಣಿಭೂಪನು ೧೦ – ೧೦೩

೪       ಮುನ್ನೀರಣುಗಿ ಮುರಾರಿ ಬಲ್ಮೊರಡಿಯ ಕನ್ನೆ ಕಪರ್ದಿ ವಾಗ್ದೇವಿ ಸನ್ನುತ ಬಿದಿಗಳೊಪ್ಪಿದವೋಲೊಪ್ಪಿದರತ್ಯುನ್ನತಿಕೆಯೊಳಾಪ್ರಯರು ೧೧ – ೩೭

ಇತರ ಉಪಮೆ – ರೂಪಕ ಅಲಂಕಾರಗಳು :

ಶ್ರೀಪಾಲಚರಿತೆ :

೧.      ಎಲರೊಲುಪಕೆ ನನೆವೋದೆಳಲತೆ ಮೆಲ್ಲನೊಲೆವಂತೆವೊಲುಪಳೆಗೊರಡು ಅಲುಗದು ಸಜ್ಜನರಾಲಿಸುವಂದದಿ ವೊಲಿಯರೀ ಕೃತಿಗೆ ದುರ್ಜನರು ೧ – ೨೨

೨.      ಮುಸುಕುವ ಮುಂದಿಂಗಳ ಸವಿಗರ್ದಿಗಂಡೊಸರ್ವಿಂದೂಪಲದಂತೆ ರಸಿಕರೆನ್ನಯ ಸತ್ಕೃತಿಯನೆ ಕೇಳಿ ಸಂತಸವನೆದೆಗ ತಾರದಿಹರೆ ೧ – ೨೩

೩.      ರತಿ ಕುಸುಮಾಯುಧನೊಳು ಸಾಗರಸುತೆ ಶತಪತ್ರದಳನಯನನೊಳು ಕ್ಷಿತಿಧರಸುತೆಯೈ ಮೊಗದನೊಳಿರ್ಪಂತೀ ಸತಿ ಪತಿಯೊಳು ಸುಖಮಿಹಳು ೨ – ೧೦

೪.      ಸತಿಯರು ಪುರುಷರಿಗೊಲಿವರಲ್ಲದೆಯಾ ಸತಿಯರು ಸತಿಗೆ ಮೋಹಿಪುದು ಅತಿಚಿತ್ರವಾತನದೆಂತೆನೆಯವರೊಳುಮತಿಮಹಾಲಕ್ಷ್ಮಿಗಳಿರಲು ೩ – ೭೩

೫.      ಗಂಡನೆನಗೆ ಗುಣಪಾಲನಂದನ ಪೆಂಡತಿ ನಾನೆನಗುಳಿದ ಗುಂಡುಗಳೆಲ್ಲ ಸಹೋದರರೆಂದೀ ತೊಂಡೆಯವಾಬಲೆ ನುಡಿದಳು ೫ – ೮೬

೬.      ಪಿಡಿದಹಿಯುಗುಳ್ದ ಬಳಿಕ ಶಶಿಮಂಡಲದೊಡಲಮೃತಮನುಂಬೆವೆಂದು ಕಡುಹಸಿದನಿಮಿಷಾಂಗನೆಯರಿರ್ಪಂತವೆಮಿಡುಕದಿರ್ಪರು ಕೋಮಲೆಯರು ೬ – ೨೩

೭.      ಸಿರಿ ಸಂಜೆಗೆಂಪು ಸೋದರರಿಂದ್ರಧನು ತನು ಹರಿಮೇಖಲೆ ದೇಶಕೋಶ ಮರುತನಿದಿರ ದೀಪದಂತೆಯದೃಷ್ಯವೀ ಪಿರಿದು ನೆಚ್ಚಲು ಬೇಡವೆಂದ ೬ – ೪೬

೮.      ನೆತ್ತರನೀಂಟಿ ಸೊಕ್ಕಿದ ಪಾರ್ದಾ ಪುರುಷೋತ್ತಮನಡಿಗಾಲ್ವಾಯೆ ಬಿತ್ತರಮಾದುದಂದಿನ ಹರಿಯೇರಿದ ಕರ್ತಾಕಕ್ಷನ ತೆರನಾಗಿ ೮ – ೪೩

೯.      ಮುಡಿದ ಹೂ ಬಾಡಲೀಡಾಡಲೋರ್ವಳು ತನ್ನ ಕಡುಚಲ್ವಿಕೆಗೆ ನಿನ್ನ ರೂಪು ಪಡಿಯಾದೊಡೆತ್ತೆಂದು ರತಿಯೊಳು ಮುಂಡಿಗೆ ಇಡುವಂತೆ ಕಣ್ಗೊಪ್ಪದಳು ೯ – ೨೨

೧೦.    ಪರಭೃತವಾಣಿಯೊಳೊರ್ವಲು ತಾ ಸಲಹುವ ತರುಣಚಾತಕಪಕ್ಷಿ ಪಸಿಯೆ ಕರುಣದಿ ಮೇಘರಂಜಿಯ ಪಾಡಿ ಸುರಿವ ಬೇಳ್ಸರಿಯ ಕುಟುಕನಿತ್ತಳಾಗ ೯ – ೨೭

೧೧.    ಲವಲವಿಸಿ ಕೂಡಿದರಾ ಎಣೆಗುಬ್ಬಿಯ ಮಾಳ್ಕೆಯೊಳು ೧೧ – ೨೯

೧೨.    ಬಿಸುಸುಯ್ಲಿಂ ರೇಚಕ ಪೂರಕವ ಮಾಳ್ಪ ಮಸಿವಣ್ಣದ ಫಣಿಯಂಗ ಎಸೆದುದಂತಕನೆಂದೆಂಬೋಜನ ಕಯ್ಯ ಹೊಸತಿದಿಯೆಂಬ ಮಾಳ್ಕೆಯೊಳು ೧೧ – ೬೭

೧೩.    ಇಂಗಡಲ ಕಡೆವ ಬೆಟ್ಟ ಸುತ್ತಿದ ಶೇಷನಂದದೊಳು ೧೧ – ೭೩

೧೪.    ಬಿಗಿದ ಹಾವಿನ ಸುತ್ತಳಿದು ವಿಕ್ರಮಶಾಲಿನಿ ಗರ ತೆಗೆದು ನೋಯಿಸಲು ಬಗೆವಂದನುದಿನ ಹರಿ ಕಾಳಿಂಗನ ಮಿಗೆ ಮರ್ದಿಸಿದ ಮಾಳ್ಕೆಯೊಳು ೧೧ – ೭೪

ನೇಮಿಜಿನೇಶ ಸಂಗತಿ :

೧       ಸೌಂದರಿದೇವಿ ತಾಂ ತಳೆದಳು ದೀಕ್ಷೆಯನು ಮುಂತೆ ವಸಂತ ಬಂದೊಡೆ ಮಲ್ಲಿಕಲತೆ ಪಿಂತೆ ಬಾರದೆ ಸುಮ್ಮನಿಹುದೆ ೩ – ೧೨

೨       ಬಂದ ಸೊಗಸಿಗನಾಗ ನಿರಿನಿಂಬಿವಣ್ಣಯ್ಯನೆಂದಗ್ನಿಕುಂಡದಿನೆಳ್ದುನಿಂದ ಮಾಸತಿಯೆಸೆದಳು ದ್ರುಪದಾತ್ಮಜೆಯಂದಿರಿಯಿಂ ಪುಟ್ಟಿದಂತೆ ೮ – ೨೩

೩       ಕಾರ್ಗಾಲದ ಮುಗಿಲನು ಕುಡಿಮಿಂಚು ಹತ್ತುವಂದದೊಳು ತಡಮಾಡದೆ ತತ್ಕರಿಯ ಬೆಂಗಡೆಗಾಕಡುಗಲಿಯಣ್ಮತೇರಿದನು ೯ – ೧೯

೪       ಪರಿಮಳವನ್ನು ಕಳ್ದೊಯ್ದನಿಲನ ಬೆನ್ನರಿದು ಪಿಡಿವ ತುಂಬಿಯಂತೆ ಅರಸನಕೊಂಡೊಯ್ವ ಖಚರನ ಬೆನ್ನ ಪಲ್ಮೊರೆವುತೆಯ್ದಿದಳಾತರುಣಿ ೯ – ೪೦

೫       ಕಡುಗೋಪದಿಂ ಕೊಂದಾದುರ್ಗಿಯ ಕೈ ಮಡಿದು ಬಳಿಕ ಮರುಹುಟ್ಟು ಹಡೆದು ಬಪ್ಪಾ ಮಹಿಷಾಸುರನೋಯೆನೆ ನಡೆತಂದುದೊಂದು ಕಾಡ್ಗೋಣ ೧೦ – ೨೩೪.

೬       ಕರಮೆಸೆವಾಕೃಷ್ಣೋರಗಶಯ್ಯೆಯೊಳರಮಗನೊರಗಿಯೊಪ್ಪಿದನು ಒರೆಗಲ್ಲೊಳು ಕಡೆಯಾಣಿಯ ಚಿನ್ನವನೊರೆದ ರೇಖೆಯ ತೆರನಾಗಿ ೧೧ – ೭೯.

೭       ಆಶಾವನಿತೆಯರಂಗವ ನೆರಹತ್ತಿ ಮಾಸಿ ಕೆಡಿಪ ತಿಮಿರವನು ಸಾಸಿರ ಕರದಿಂ ತುರಸಿ ಕೆಡಿಸುತ ಮತ್ತಾಸೂರ್ಯನಂದು ಮೂಡಿದನು ೧೩ – ೮೧

೮       ಅಂಬರಶರಧಿಯೊಳಭವ ರಾಜಶ್ರೇಷ್ಠಿಯಿಂಬಾಗಿ ಧರ್ಮವಿತ್ತವನು ತುಬಿದ ಸಮವಸರಣಭೈತ್ರದ ಕೂವಕಂಭ ಮಾನಸ್ತಂಭಮಾಯ್ತು ೧೪ – ೬೯.

೯       ಸುಮ್ಮನೆ ಕುಣಿವವರಿಗೆ ಹರೆಯನು ಹುಯ್ಯೆ ಸುಮ್ಮಾನವೇಳುವಂದದೊಳು. ೧೯ – ೧೧೩.

೧೦.    ಬೇರುವೆರಸಿ ಬಿಸಿಲೊಳು ಕಿಳ್ತ ಲತೆಯಂತೆ – ೧೯ – ೨೯

೧೧.    ಅಡಿವರನಾಗಲಾನೆಯ ಬೆನ್ನವರ ಮೆಲಡರಿದರಸುಮಕ್ಕಳನು ಬಡಿವ ಬಲ್ಲದೆಯೆ ಕೊಡತಿಯಾಗಲಾಭೀಮ ಮಡಿವಳನಂತೊಪ್ಪಿದನು. ೨೯ – ೨೭.

೧೨.    ಲಲಿತಾಂಗದೊಳು ಮುಳುಗಿದಂಬಿನಗರಿಗಳಿನಾಭೀಷ್ಮರೊಪ್ಪಿದರು ತಳುವದೆ ಬೀರಸಗ್ಗಕೆ ಪಾರಲೆಣಿಸುವಗ್ಗಳದ ಮಾನಸವಕ್ಕಿಯಂತೆ ೨೯ – ೯೨.

೧೩     ರವಿಯನು ರಾಹುಗ್ರಹಿಸಿದೊಡೆಳ್ಳೆ ನೀರೊಳು ತಲೆಯೆತ್ತುವಂತೆ. ೩೪ – ೧೨೫.

ಜಯನೃಪಕಾವ್ಯ :

೧.      ಉಕ್ಕುವ ಘೃತಕುದಕಂಬೊಯ್ದಡೆ ಮೇಲುಕ್ಕರಿಯೇಳ್ವಂದದಿ ೬ – ೧೧

೨.      ಬಲಮೆಲ್ಲಂ ಬೆನ್ನೀರ್ವೊನಲೆಯ್ದಿದ ಬಿಲದೊಳಗಣ ಬೆಳ್ಳಿಲಿವಿಂಡನವೊಲ್ ತಳಮಳ ಗೊಂಡತ್ತು ೬ – ೫೫

೩.      ಬಾಲವಿಡಿದು ಬಾಗಿದ ವನಚರನೊಪ್ಪಿದನದನೊರ್ಕೈಯಿಂದೊತ್ತುವ ಕಮ್ಮರನಂತೆ ೧೫ – ೩೪

ಗಾದೆಮಾತು – ಆಡುನಿಡಿ :

ಪ್ರಭಂಜನ ಚರಿತೆ :

೧.      ಕಳಿಲೆಯೊಳಗೆ ಕಡಿಯದೆ ಸುಮ್ಮನಿರ್ದೊಡೆ ಬೆಳೆದು ಬಲಿದು ರಿಪುವಂಗಾ ೨ – ೧೨