ಬಳಿಕ ಜಿನಭವನಮಂ ಪೊರಮಟ್ಟು ವೈಶ್ಯಕುಲ |
ತಿಲಕನಾ ತುರಗರತ್ನಮನಾ ಸುರೇಂದ್ರನೊಂ |
ದಳವನನುಕರಿಸಿಯೋರೋಹಣಂಗೆಯ್ದು ಮಾರುತಮಾರ್ಗದಿಂದ ಬಂದು ||
ನಿಳಯಮಂ ಹೊಕ್ಕು ನಿಶ್ಚಿಂತಮಾನಸನಾಗಿ |
ಯಲಸದೀ ತೆರದಿನುತ್ತಮಮಪ್ಪ ಪರ್ವತಿಥಿ |
ಯೊಳಗಾ ಮಹೀಧರಕ್ಕೆಯ್ದಿ ಜಿನವಂದನಂಗೆಯ್ದು ಮುಗುಳುತ್ತಿರ್ಪನು || ೪೧ ||

ಇಪ್ಪತ್ತನಾಲ್ವರುತ್ತಮತೀರ್ಥನಾಥರೊಸೆ |
ದೊಪ್ಪದಿಂ ಕರ್ಮಕ್ಷಯಂ ಮಾಡಿದಾ ನೆಲಕೆ |
ನಿಪ್ಪೊಸತ್ತೆನಿಪ ಭಕ್ತಿಯೊಳಾ ಹಯಮನೇರಿ ಪೋಗಿಯಭಿವಂದನೆಯನು ||
ತಪ್ಪದೇ ಮಾಳ್ಪನೀ ಮನುಜಾವನೀತಳದೊ |
ಳಿಪ್ಪ ವೈತ್ಯಾಲಯಕೆ ಪೋಗಿ ವಂದನೆಗೆಯ್ದು |
ಬಪ್ಪನಾ ವೃಷಭದಾಸಂ ಮಾಡಿಕೊಂಬ ಪುಣ್ಯಮನೇನ ಬಣ್ಣಿಸುವೆನು || ೪೨ ||

ಇಂತು ಪುಣ್ಯೋಪಾರ್ಜನೆಯನು ಪಲಪಗಲು ನಿ |
ಶ್ಚಿಂತದಿಂ ಮಾಡಿಕೊಳುತಿರಲಾ ಸುದಂಡಭೂ |
ಕಾಂತನಹಿತಾವನೀಪಾಲ ಜಿನಸತ್ಯನೆಂಬುವ ತನ್ನ ಪುರವರದೊಳು ||
ಸಂತೋಷದಿಂದೋಲಗದೊಳು ಕುಳ್ಳಿರಲೊರ್ವ |
ನಿಂತೆಂದನಾ ಸುಬ್ಜಕೌಶಂಬಿಯಲ್ಲಿಯ |
ತ್ಯಂತ ಜಾತ್ಯಶ್ವವಂಬರಗಾಮಿಯದೆಯೆಂದು ನುಡಿದ ನುಸಿಯಂ ಕೇಳುತ || ೪೩ ||

ಒಚ್ಚತಂ ತನಗುಳ್ಳ ರಾಜ್ಯದೊಳಗರ್ಧವಂ |
ಪಚ್ಚುಗೊಡುವೆಂ ತತ್ತುರಂಗಮಂ ತಂದರ್ಗೆ |
ಮುಚ್ಚು ಮರೆಯೇಕೆಂಬ ನುಡಿಗೆ ಕುಂದಲನೆಂಬ ಭಟನೆಳ್ದು ಕಯ್ಯ ಮುಗಿದು ||
ಅಚ್ಚುತಂಬಡೆವುದಕ್ಕೇನು ಕಾರಣಮಿದೇ |
ನಚ್ಚರಿಯೆ ನಾನು ತಹುದಕ್ಕೆ ಈ ಪಂಥ ಪಡಿ |
ಪುಚ್ಚಮೇ ಕೊಡು ವೀಳೆಯಮನೆಂದು ಬಲ್ಲಿತಂ ನುಡಿದು ಬೀಳ್ಕೊಂಡು ಬಂದು || ೪೪ ||

ದೇಶದೇಶದೊಳು ತೊಳಲುತ್ತೊಂದು ನಗರಪ್ರ |
ದೇಶದೊಳಗೊರ್ವ ಸಾಗರಚಂದ್ರರೆಂಬ ಯೋ |
ಗೀಶನಂ ಕಂಡು ಕಾಪಟ್ಯಹೃದಯಂ ನಮಸ್ಕರಿಸಿ ಸದ್ಬ್ರಹ್ಮಚಾರಿ ||
ವೇಷಮಂ ಧರಿಸಿ ಸಮ್ಯಗ್ದೃಷ್ಟಿಯೆಂಬಂತಿ |
ರಾಶಾಸ್ತ್ರದೋಜೆಗಳನರಿದು ಸಚ್ಚರಿತದೊಳ್ |
ಕೌಶಲ್ಯನಾದನಾ ಕುಂಡಲಭಟಂ ತನ್ನ ಕಾರ್ಯಂ ನಿಮಿತ್ತಮಾಗಿ || ೪೫ ||

ಬಳಿಕ ಕೌಶಂಬಿಪುರಕೆಯ್ದಿ ಸಚ್ಚರಿತಗುಣ |
ನಿಳಯನಾ ವೃಷಭದಾಸಂ ಮಾಡಿಸಿದ ಚೈತ್ಯ |
ನಿಲಯಮಂ ಪೊಕ್ಕು ಕಪಟದಿನೀತನೇ ಪರಮಸತ್ಯನಿಧಿಯೆಂಬ ತೆರದಿ ||
ಒಳಗುದೋರದೆ ಚಕ್ಷುರೋಗ ಬಲ್ಲಿತ್ತಿದಂ |
ಕಳೆಯಲಳವಲ್ಲವೆಂದೊಂದರುವೆಯಂ ದಿಟ್ಟಿ |
ಗಳ ಮೇಲೆ ಕಟ್ಟಿಯುಪವಾಸಮಂ ಕೊಂಡನೆಲ್ಲವರುಮ್ಮಳಿಸುವಂದದಿ || ೪೬ ||

ಈ ವಿಧದಿ ಕೃತ್ರಿಮಬ್ರಹ್ಮಚರಿಯಿರಲತ್ತ |
ಲಾ ವೃಷಭದಾಸ ರಾಜಶ್ರೇಷ್ಠಿಯಾಲಯಕೆ |
ದೇವಿಲಂ ಬರಲಿಂತು ಬೆಸಗೊಂಡನತಿಥಿಗಳನ್ನಮ್ಮ ಚೈತ್ಯಾಲಯಕ್ಕೆ ||
ಈ ವೇಳೆಯಲ್ಲಿ ಬಂದವರುಂಟೆ ಎನಲೆಂದ |
ನಾ ವೈಶ್ಯವಿಭುವಿರೊಳಗೊರ್ವನಕ್ಷಿವ್ಯಾಧಿ |
ಯಾವರಿಸಿದಾತನುತ್ತಮನೊರ್ವ ಬ್ರಹ್ಮಚರಿ ಬಂದನೆಂಬುದನು ಕೇಳಿ || ೪೭ ||

ಜಿನಭವನಕೆಯ್ದಿ ಜಿನಪತಿಗೆ ವಂದನೆಮಾಡಿ |
ಅನುನಯದಿನಾ ಬ್ರಹ್ಮಚಾರಿಗಿಚ್ಛಾಕಾರ |
ವನೆ ಮಾಡಿ ಬಳಿಕೆಂದನೆಲೆ ತಪಸ್ವಿ ನಿಮಗೆ ನಯನರೋಗಂ ಬಲ್ಲಿತು ||
ಅನಿತರಿಂ ನಮ್ಮ ಮನೆಗೆಯ್ದಿದೊಡೆ ಮಾಣಿಸುವೆ |
ನೆನೆ ಬ್ರಹ್ಮಚಾರಿಗಳ್ ಗೃಹದೊಳಗೆ ಬಂದಿರ್ಪು |
ದನುಚಿತಮೆನಲ್ಕೆಂದನತಿಥಿಗಳ್ಗಿದು ಗೃಹಮುಮಿದರಣ್ಯಮೆಂಬುದುಮಟೇ || ೪೮ ||

ನಿರುತದಿಂ ಸುಖದುಃಖವೆರಡು ರೋಗಮರೋಗ |
ವೆರಡು ಹಗೆಕೆಳೆಯೆರಡು ಸಾವುಹುಟ್ಟೆರಡು ಸಲೆ |
ಸಿರಿಬಡತನಂಗಳೆರಡಾ ಪ್ರಮೋದವಿಷಾದವೆರಡು ಮಾನಾಪಮಾನ ||
ಎರಡು ಭೋಗಪಭೋಗವೆರಡು ಪಸಿವುನಿಃಪಸಿ |
ವೆರಡು ರುಚಿಯರುಚಿಯೆಂಬೆರಡು ಭಾವಿಸಿ ನೋಡೆ |
ವರವೀತರಾಗರ್ಗೆ ಸಮವಾಗಿ ತೋರದಿಹುದೇ ಮಹೀಮಂಡಲದೊಳು || ೪೯ ||

ಎಂದು ಪರಿದಾಗ್ರಹಂಗೆಯ್ದು ನಿಜಮಂದಿರಕೆ |
ತಂದಿರಿಸಿಕೊಳಲದಂ ಕೇಳಿ ಕೆಲ ಧೂರ್ತರಿಂ |
ತೆಂದರೀ ಚಪಳನತಿಕಪಟದಿಂದೀ ಜೈನವೇಷಮಂ ಧರಿಸಿಕೊಂಡು ||
ಬಂದನಾಗಲೆವೇಳ್ದುಮದರಿನಿವನಂ ನಂಬಿ |
ಮಂದಿರದೊಳಿರಿಸಿಕೊಂಡೊಡೆ ಕೇಡು ತಪ್ಪದೇ |
ಬಂದಲ್ಲದೇ ಮಾಣದದುಕಾರಣದಿನಿವನನೊಳಕೊಂಬುದುಚಿತಮಲ್ಲ || ೫೦ ||

ಆವನಾನೊರ್ವನಾಗಲಿ ಪೊಸಬನೆಯ್ತರಲ್ |
ಭಾವಜ್ಞರಾದವರ್ ಪತ್ತೆಂಟು ಪಗಲವನ |
ಭಾವಮಂ ನೋಡಿಯೊಳ್ಳಿದನಾದೊಡೊಳಕೊಳ್ಳಬೇಕು ದುರ್ಜನನಾದೊಡೆ ||
ಓವದೇ ಹೊರ ಹಾಕಬೇಕಲ್ಲದೊಡೆಯವಂ |
ಗಾವರಿಪುದಪಕೀರ್ತಿ ಕೇಡುಸಂಭವಿಸುವುದು |
ಭೂವಲಯಕಲ್ಲದೇ ಹೋಹನವನೀ ನೀತಿ ನಿಜವೆಂದು ನಂಬಬೇಕು || ೫೧ ||

ಎನಲೆಂದನೆಲೆ ನಿಂದಕರಿರ ಉತ್ತಮಮಪ್ಪ |
ಜಿನರೂಪಧರಿಸಿ ಸಮ್ಯಗ್ಧೃಷ್ಟಿಯಾಗಿ ಜನ |
ವಿನುತ ವ್ರತವನು ಕೈಕೊಂಡು ಪಂಚೇಂದ್ರಿಯಮನತಿನಿಗ್ರಹಂ ಮಾಡಿದಾ ||
ಮುನಿಗಳೀ ಕಾಲಕ್ಕಪೂರ್ವಮಂತವರ ದು |
ರ್ಜನಿಸಿದೊಡೆ ಜನ್ಮಜನ್ಮಾಂತರಕೆ ದೋಷ ಸಂ |
ಜನಿಸದೇ ಬಿಡದದರಿನಿವರನೀಯಂದದಿಂ ಕೆಡೆನುಡಿವುದುಚಿತವಲ್ಲ || ೫೨ ||

ಚಾರುಚಂಪಕಮನಾ ಚಂಚರೀಕಂ ತಿರ |
ಸ್ಕಾರಮಂ ಮಾಡುವುದು ಪಗಲ ಕಂಡೊಡೆ ಗೂಗೆ |
ಸೇರದಿರ್ಪುದು ಚಂದ್ರನಂ ಕಂಡ ಚಕ್ರವಾಕಂ ದುಃಖಮಂ ಮಾಳ್ಪುದು ||
ಕ್ಷೀರಮಂ ಪೈತ್ಯಜ್ವರಂ ಪಿಡಿದವಂ ಕಾಣೆ |
ದೂರೀಕೃತಂ ಮಾಳ್ಪುದುತ್ತಮರುಮಂ ಕಂಡ |
ಕ್ರೂರಮಾನಸರು ನಿಂದಿಸಿ ಮಾತನಾಡುವುದು ನಿಜವಿಳಾಮಂಡಲದೊಳು || ೫೩ ||

ಇಂತೆಂದು ತನ್ನ ಹತ್ತಿರೊಳಿರ್ದ ಧೂರ್ತರಂ |
ಕಂತುನಿಭವೃಷಭಸೇನಂ ತಿರಸ್ಕಾರಮ |
ಪ್ಪಂತು ನುಡಿದಾ ನುಡಿಯ ಕೇಳಿ ಕುಟಿಲಬ್ರಹ್ಮಚಾರಿಯೆಲೆ ವೈಶ್ಯವಿಭುವೇ ||
ಎಂತಾನುಮೊಂದ ನುಡಿದೊಡೆ ನಿನ್ನವರನು ನೀ |
ನಿಂತು ನಿರ್ದಾಟಿಸುವರೇ ಲೋಕದಲ್ಲಿ ಗುಣ |
ವಂತರ್ಗೆಯಾವನಾನೊರ್ವವಂ ತಪ್ಪಿದೊಡೆ ಮೊಗದೆಡಿಸುವುದು ಧರ್ಮವೇ || ೫೪ ||

ಕಣ್ಣನೊಂದಾನೊಂದುವೇಳೆ ತಾಗಿದ ಕೆಯ್ಯ |
ಮೊಣ್ಣಾಗುವಂತೆ ಮಾಡುವೆನೆಂಬುದುಚಿತಮೆ |
ಚಿಣ್ಣದರಯಂ ಮೊದಲ್ತನ್ನ ತನುವಿಂಗೆ ಬೆಕಾದನ್ನಜೀರ್ಣಿಸದಿರೆ ||
ಉಣ್ಣದದನೆಂದಿಂದಿಗಂ ತೊರೆವುದೊಳ್ಳಿತೇ |
ಬಿಣ್ಣಿತಂಬಡೆದ ಭವ್ಯೋತ್ತಮರ್ ಕಡುಮುನಿದು |
ಬಣ್ಣಗೆಡಿಸುವರೆ ತಮ್ಮವರೊಂದು ವೇಳೆಯೊಳ್ತಪ್ಪುಮಾತಂ ನುಡಿದೊಡೆ || ೫೫ ||

ಈ ಪರಿಯೊಳುತ್ತಮಿಕೆಯಂ ನುಡಿದ ತಾಪಸನ |
ಕಾಪಟ್ಯವರಿಯದೇ ಮತ್ತಲ್ಲಿ ಕೆಲಬರ್ಮ |
ಹಾಪುರುಷರಿಂತೆಂದರಿವರವನಿಗುತ್ತಮರ್ಸತ್ಯಪ್ರವೀಚಾರರು ||
ಕಾಪುರುಷರಾದವರನೊಳ್ಳಿತಾದವರನೊಂ |
ದೇ ಪರಿಯೊಳಂ ಕಾಣ್ಬ ಸಜ್ಜನಪ್ರತತಿಗೆ |
ನ್ನೀ ಪೃಥ್ವಿಯಲ್ಲಿ ಸರಿಯಾದವರ ಸಂಗಮಂ ಮಾಡಿದೊಡೆ ಪುಣ್ಯಮುಂಟು || ೫೬ ||

ಬಿತ್ತಿ ಬಿನ್ನಣದಿಂದ ಗೆಯ್ದು ನೀರೆರೆದವರ್ಗೆ |
ತತ್ತರಂದರಿದುರಿಯೊಳಿಟ್ಟು ಬೇಯಿಸಿದವರ್ಗೆ |
ಉತ್ತಮದ ರಸಮನೊಂದೇ ಪರಿಯೊಳು ಕೊಡುವ ರಸದಾಳಿಯೆಂಬಂದದಿ ||
ಚಿತ್ತಶುದ್ಧಿಯೊಳು ಜೀವಸು ಸಂಭವಿಸಿದವರ್ಗೆ |
ವೊತ್ತಿಕಾಪಟ್ಯಮಂ ಮಾಡಿದ ಮನುಷ್ಯರ್ಗೆ |
ಅತ್ತಿತ್ತಲೊಂದು ಪರಿಯಾಗದೇ ಸಜ್ಜನರ್ಪುರುಷಾರ್ಥಮಂ ಮಾಳ್ಪರು || ೫೭ ||

ಎಂದು ಕೊಂಡಾಡುತಿರಲಾ ಧರ್ಮವಾತ್ಯಲ್ಯ |
ದಿಂದ ನಿಜಮಂದಿರದೊಳಿರಿಸಿ ಪಿರಿದಾಗಿ ಮನ |
ಸಂದು ತದ್ಬ್ರಹ್ಮಚಾರಿಯ ಮನಕೆ ಒಪ್ಪಂತೆ ತನ್ನ ಬಸಿರಿಂದ ಬಂದಾ ||
ನಂದನರ ಮೇಲತಿಪ್ರೀತಿಯಂ ಮಾಳ್ಪ ತೆರ |
ದಿಂದ ವೈಯ್ಯಾವೃತ್ಯಮಂ ಮಾಡಿದಂ ಮನುಜ |
ಮಂದಾರನಾಶ್ರಿತಜನಾಧಾರನಾ ವೃಷಭದಾಸನುತ್ತಮಶೀಲನು || ೫೮ ||

ತನ್ನನುದರದೊಳು ಗರ್ಭೀಕರಿಸಿಕೊಂಡಿರ್ದ |
ಮುನ್ನೀರನಾ ವಡಬಶಿಖಿ ಹೀರುವಂದದಿಂ |
ತನ್ನಂಗೀಕರಿಸಿಕೊಂಡಿರ್ದ ಭೂರುಹಮನಾ ಅಗ್ನಿ ಸುಡುವಂದದಿ ||
ಚೆನ್ನಾಗಿ ತನ್ನ ಮನೆಯೊಳಗೆ ತಂದಿರಿಸಿಕೊಂ |
ಡುನ್ನತಿಕೆವಡೆದ ಪರಿರಕ್ಷಣೆಯ ಮಾಡಿದಾ |
ಸನ್ನುತಗುಣಭರಣಭೂಷಿತಂಗಾ ದುಷ್ಟಮಾನಸಂ ಕೇಡನೆಣಿಸಿ || ೫೯ ||

ಮತ್ತೊಂದು ದಿನದ ಮಧ್ಯಮರಾತ್ರೆಯಲ್ಲಿಯ |
ತ್ಯುತ್ತಮ ವೃಷಭವಾಸನೊರಗಿರ್ಪ ವೇಳೆಯಂ |
ದತ್ತಾವಧಾನದಿಂ ಕಾದುಕೊಂಡಿರ್ದು ಜತನದೊಳು ಮಂದಿರದೊಳಿರ್ದಾ ||
ಹತ್ತಿ ಯೋಯ್ದಾ ಚಮ್ಮವಟ್ಟಿಗೆಯ ಹುಯ್ಲಿಗೆ ಕ |
ರತ್ತು ನಭಕುಪ್ಪರಿಸೆ ಜಗುಳ್ದಧೋಗತಿಗೆ ಬೀಳ್ವಂದದಿಂ ಬಿಳ್ದನವನು || ೬೦ ||

ಮೃಗಿಗಂ ಮಳೂಕಂ ಜನಿಸಿ ತತ್ತಿಯೊಳಗಿಂ |
ದೊಗೆದು ಪಕ್ಷಬಲದಿನಾ ನಭೋಮಾರ್ಗಕ್ಕೆ |
ನೆಗೆವಂದಿನಶ್ವಮೋ ದೇವದಾನವನಿಕರಮೆಲ್ಲವುಂ ಮಥಿಸುವಾಗ ||
ಸೊಗಸುಗಡಲೊಳ್ಪುಟ್ಟಿಯಾ ಅಮರಲೋಕಕ್ಕೆ |
ಮಿಗೆ ಹಾರುವುಚ್ಚೈಶ್ರವವೊ ತಾನಿದೆಂಬಂತೆ |
ಗಗನಗಾಮಿನಿತುರಂಗಂ ಪಾರಿತತಿಭರದಿನಾ ಪ್ರಭುಂಜನಮಾರ್ಗಕೆ || ೬೧ ||

ಪಸುರ್ವಟ್ಟೆಯೆಸೆವ ಪೊಸಲೇವೆಯಾ ಮೆಯ್ವಣ್ಣ |
ಕಿಸುಗಲ್ಲಕೀಲಣೆಯ ಮೊಗಮುಟ್ಟೆ ನವಚಂಚು |
ಮಿಸುಕಿ ಸೂತ್ರಿಕೆಯೊಳಿಕ್ಕಿದ ವಾಘಯಂಗಳೆಯಾ ಕೊರಲ್ವಿಡಿದ ರೇಖೆ ||
ಮಿಸುಗುವಂಕಮೆ ಕಾಲ್ಗಳಾಕಾಲೆ ಕೋಡುಗರಿ |
ಯೆಸಕಮಂ ಪಡೆಯೆ ತದ್ವಾಜಿಯಾಕಾಶದೊ |
ಳ್ಕುಸಮಬಾಣನ ರಥದ ಗಿಳಿಯಂತೆ ವಿಜಯಾರ್ಧಗಿರಿಯ ಬಸದಿಗೆ ಪಾರಿತು || ೬೨ ||

ಆ ಗಳಿಗೆಯಲ್ಲಿಯರವಿಂದಬಾಂಧವನುದಯ |
ಮಾಗಲಲ್ಲಿಗೆ ಚಾರಣವ್ರತೀಂದ್ರರ್ಮನೋ |
ರಾಗದಿಂ ಬಂದು ಬಸದಿಯ ಹೊಕ್ಕು ದೇವತಾವಂದನಂಗೆಯ್ಯುತಿರಲು ||
ಆ ಗಗನಪಥವಿಡಿದು ವಿದ್ಯಾಧರೇಂದ್ರ ಚಿಂ |
ತಾಗತಿವೆಸರನೊರ್ವಯ್ತಂದು ತದ್ವೀತ |
ರಾಗಂಗೆ ನಮಿಸಿಯಾ ಗುರುವಿನಡಿದಳಕೆರಗಿ ಕುಳ್ಳಿರಲ್ಕತಿ ಭರದೊಳು || ೬೩ ||

ವಿಶ್ರುತಮೆನಿಪ್ಪ ವಿಬುಧಾಚಲೇಂದ್ರಮನಾವ |
ನುಶ್ರುತಂ ಮೂಲೋಕಮೆಲ್ಲಮರಿವಂದದಿಂ |
ದಶ್ರಮದಿ ತಿರಿತರ್ಪೆವೆಂಬುದಂ ತತ್ಖೇಚರಾವನಿಪಾಲಕಂಗೆ ||
ಆ ಶ್ರುತಾಂಬುಧಿಚಂದ್ರಮುನಿಗಳೆ ತೋರುವ ಸ |
ಹಸ್ರಕಿರಣನ ತೇರತೇಜಿಯೆಂಬಂತೆ ಮು |
ಕ್ತಿಶ್ರೀಮನೋವಲ್ಲಭನ ಗೃಹವ ಬಲವಂದುದಾ ವಾಜಿ ನೆಲಮುಟ್ಟದೆ || ೬೪ ||

ಅದನು ಕಂಡಾ ಖಚರವಲ್ಲಭಂ ಕರಮನುರು |
ಮುದದಿ ಮುಗಿದೆಲೆ ಮುನಿಕುಲೋತ್ತಂಸನೇ ಕೇಲು |
ಹೃದಯಶುದ್ಧಿಯೊಳು ನವರತ್ನಮಯಸಂಜೋಗವೆರಸಿ ಲೋಕಾಧೀಶನಾ ||
ಸದನಮಂ ಸನ್ಮಾರ್ಗದಿಂ ಪ್ರದಕ್ಷಿಣೆಗೆಯ್ವ |
ಕುದುರೆ ತಾನೆಲ್ಲಿಯದೆನಲ್ಕೇಳಿ ಕರುಣದಿಂ |
ಸದಮಲಜ್ಞಾನಸಂಪನ್ನರದುಬಂದ ಕಥನಮನಿಂತು ಪೇಳ್ದರಾಗ || ೬೫ ||

ಇದು ಸುಬ್ಜಕೌಶಂಬಿಯರಸಿನ ತುರಂಗಮಿಂ |
ತಿದು ಗಗನಗಾಮಿಯಿದನಾ ವೃಷಭದಾಸನತಿ |
ಮುದದಿನಾರೋಹಣಂಗೆಯ್ದಿಲ್ಲಿಗೆಯ್ದಿ ದಿನಚರಿತೀರ್ಥವಂದನೆಯನು ||
ಹೃದಯಶುದ್ಧಿಯೊಳೊಸೆದು ಮಾಡಿ ಮುಗುಳುತ್ತಿರ್ಪ |
ನಿದನೊರ್ವ ತಸ್ಕರಂ ತದ್ಗುಣಾಂಬೋಧಿಯಂ |
ಚೆದುರಿಸಿ ಬಳಿಕ್ಕ ಕಳ್ದೇರಿ ನಿಷ್ಠುರದಿಂದ ಕರಘಾತಮಂ ಮಾಡಲು || ೬೬ ||

ಅದನು ಸೈರಿಸಲಾರದಾ ಖಳನನಾ ನೆಲ |
ಕ್ಕೊದರಿ ಮುಗ್ಗಿರಿವಂತೆ ಕೆಡಹಿ ತಾನನುದಿನಂ |
ಸದಮಲಗುಣಾಲಂಕೃತನ ಕೊಂಡುಬಂದುದೊಂದಭ್ಯಾಸಕೀ ಶಿಖರಿಗೆ ||
ಪದೆದು ಬಂದತ್ತು ಬಳಿಕಿದರೊಂದು ಕಥನದಿಂ | ವಿದಿತ ಗುಣಮಣಿಗೆ ತದ್ಭೂಪನಿಂದುಪಸರ್ಗ |
ವೊದವಿರ್ಪುದೀಗವದರಿಂದ ನೀನಿದಂ ತತ್ಪುರಕೆ ಕೊಂಡುಪೋಗು || ೬೭ ||

ತಡಮಾಡದೆಂಬ ನುಡಿಯಂ ಕೇಳಿಯಾ ಹಯಮ |
ನಡರಿಯಾಕಾಶಮಾರ್ಗದೊಳಾವಿಯಚ್ಚರಂ |
ನಡೆದುಬರುತ್ತಿರಲತ್ತಲಾ ವಂಚಕಂ ತನ್ನ ಛಿದ್ರಿಸಿ ನಭೋಗಾಮಿಯಿಂ ||
ತಡೆಯದೇ ಕಳ್ದೊಯ್ದುದಂ ಕಂಡು ಬೆದರಿ ಎದೆ |
ಧಡರೆಂದು ಬಡಿಯಲಿನ್ನೇವೆನಕಟಕಟ ಎ |
ನ್ನೊಡೆಯನಾರುಂ ನಂಬದನ ನಂಬಿಯತಿಜತನಮತಿಜತನಮಾರದೆಂದು || ೬೮ ||

ಕೊಟ್ಟ ಕುದುರೆಯನು ಮನಮುಟ್ಟಿ ನೋಡದೆ ನನ್ನೊ |
ರಟ್ಟತನದಿಂದಮೀ ವಂಚಕನೊಳಗೆ ತಂ |
ದಿಟ್ಟು ಕುದುರೆಯನು ನೀಗಾಡಿ ಬಳಿಕೀ ಮಹಿಪಾಲಕಂಗೀ ಮನೆಯನು ||
ಮುಟ್ಟುಗೋಳಿಂಗೀಡುಮಾಡಿ ಮನೆಮಕ್ಕಳುಂ |
ಕೆಟ್ಟು ಪೋಪಂತೆ ಮಾಡಿದೆನಲಾ ಎಂದು ಬಾ |
ಯ್ವಿಟ್ಟು ಹಂಬಲಿಸಿ ಮುಂದಣ ಕೇಡಿನೊದವನಾರ್ಬಲ್ಲರೀ ಭೂತಳದೊಳು || ೬೯ ||

ಹಿಂದೆ ನಾನೆಸಗಿದಘವಶದಿ ಬಂದಿತ್ತೈಸೆ |
ಎಂದು ತಲೆಯಂ ತೂಗುವಾಗ ಕೆಲಬರ್ನ್ನುಡಿದ |
ರಂದು ನಾನವನತಿ ಶಠಂ ಸಿತಗನವನನೊಳಕೊಳಲು ಕೇಡಿರದಪ್ಪುದು ||
ಎಂದ ಮಾತಂ ಕಿವುಡುಗೇಳ್ದೆಯ್ಯಲ್ಲಾ ಎನ |
ಲ್ಮಂದಮತಿ ನಾನವನ ಸಭ್ಯತನಮಂ ಸತ್ಯ |
ಮೆಂದುದಂ ಕಾದೆನವನಿಯೊಳು ಕಾಪಟ್ಯಮಂ ಭೇದಿಸಲ್ಬಲ್ಲರಾರು || ೭೦ ||

ತನ್ನ ತಾನಂ ತರಿಯದಿರದೀ ಕುಠಾರಮೆಂ |
ದೆನ್ನದೇಯದಕೆ ಕಾವಂ ತನ್ನ ಕೊಂಬಿಂದ |
ಮುನ್ನರಿಯದೇ ಕೊಡುವ ಮರದಂತೆ ನನಗೆ ಕೇಡಂ ಮಾಳ್ಪನೆಂದರಿಯದೆ ||
ನನ್ನ ಮನೆಯೊಳಗಿರಿಸಿಕೊಂಡು ಪುರುಷಾರ್ಥಮಂ |
ಚೆನ್ನಾಗಿಮಾಡಿ ಕೇಡಿಂಗೆ ಭಾಜನನಾದೆ |
ಮುನ್ನ ಮಾಡಿದ ಕಿಲ್ಬಿಷದ ಫಲದಿನಿನ್ನೆನಗೆ ಶರಣು ಸಮ್ಯಗ್ದರ್ಶನ || ೭೧ ||

ಎನುತೀಗ ಬಂದೀ ಮಹೋಪಸರ್ಗಂ ಪಿಂಗು |
ವನಿತು ಸಮಯಂ ಮನೋವಾಕ್ಕಾಯಶುದ್ಧಿಯೊಳು |
ಹಿನರಾಜನೇ ಸಾಕ್ಷಿಯಾಗಿಯಾಹಾರಮೆನ್ನೀ ಶರೀರಂ ನಿವೃತ್ತಿ ||
ಎನುತ ಸನ್ಯಸಮಂ ಕೈಕೊಂಡು ಕೈಯಿಕ್ಕಿ |
ಜನವಿನುತ ಗುಣಮಣಿಗಣಾಭರಣರಂಜಿತಂ |
ಜಿನಪದಾಂಭೋಜಾತಮತ್ತಮಧುಕರ ವೃಷಭದಾಸನೊಪ್ಪಿರ್ದನಾಗ || ೭೨ ||

ಆ ಸಮಯದಲ್ಲಿ ಹಯರತ್ನಮಂ ತದ್ವೃಷಭ |
ದಾಸನೊಳು ವಿಡ್ಡಿಯಂ ಮಾಡಿ ಕೆಡಿಸಿದುದನರಿ |
ದಾ ಸುದಂಡಾವನೀಶಂ ಕೆಕ್ಕಳಂಗೆರಳಿಯಾಜ್ಞೆಯುಮನಾ ದ್ರೋಹಿಗೆ ||
ಓಸರಂ ಮಾಡದೇ ಮಾಡಬೇಕೆಂಬಾಗ |
ಳಾ ಸಮೀಪಸ್ಥರಿಂತೆಂದರವನೆಸಗಿರ್ದು |
ದಾಸೀನಮಂ ಕಂಡು ಸೈರಿಸುವರಾರಿದಕ್ಕೊಡಬಡುವರಾರಿಳೆಯೊಳು || ೭೩ ||

ಈ ರೀತಿಯಂ ನುಡಿದ ನುಡಿಯುಕ್ಕುವಾಜ್ಯದೊಳ್ |
ನೀರನಿರದೇ ಹುಯ್ಯಲತಿಗಳಯಪ್ಪಂತೆ |
ಭೂರಮಣನೊಡಲೊಳುದಯಿಸಿದಾ ಮುನಿಸುಗಿಚ್ಚು ದಂದಹ್ಯಮಾನಮಾಗೆ ||
ಧಾರುಣೀತಳಮನೆಲ್ಲವನು ಸುಡುತಿರಲು ನಗ |
ರೀರಕ್ಷಕನ ಕರಿಸಿ ಈಗಳಿನಮಾತ್ರದೊಳ |
ಗಾರಯ್ಯದಾ ದ್ರೋಹಿಗಾಜ್ಞೆಯಂ ಕಡುಭರದಿ ಮಾಡೆಂದು ಕಳುಹಲಾಗ || ೭೪ ||

ಅರಸಿನ ದುರಾಗ್ರಹಂ ಕಂಡು ಪುರರಕ್ಷಕಂ |
ಭರದಿಂದ ಬಂದು ಬಸದಿಯೊಳು ಕುಳ್ಳಿರ್ದ ಬಂ |
ಧುರಮೂರ್ತಿಯಾ ವೃಷಭದಾಸನನುಪಮಶೀಲಗಾಜ್ಞೆಯಂ ಮಾಳ್ಪೆನೆಂದು ||
ಕರವಾಳಮಂ ಜಡಿಯುತೊಳಹೊಗುವ ಸಮಯದೊಳ್ |
ಪುರದ ಜನಮೆಲ್ಲ ನಡೆನೋಡುತಿರಲ್ ಯಕ್ಷ |
ರಿರದೆಯ್ದಿ ಮರವಾನಸರತೆರದಿ ಕೀಲಣಂಗೆಯ್ಯಲಾ ಸಮಯದಲ್ಲಿ || ೭೫ ||

ಮತ್ತಮಾಪೊಳಲಜಿನಮಂದಿರದ ವಂದನೆ ನಿ |
ಮಿತ್ತಂ ಮನೋರಾಗದಿಂ ರಾಜರಾಜನಾ |
ಉತ್ತರದಿಶಾಭಾಗದಿಂ ನಿಜವಾಹನಮನೇರಿ ನಡೆತರ್ಪ ತೆರದಿ ||
ಉತ್ತಮಗುಣಾಭರಣನಾ ಖೇಚರಾವನಿ |
ಪೋತ್ತಂಸನಂಗದೊಳ್ ಭೂಷಣದ ಮಣಿರುಚಿ ತ |
ಳತ್ತಳಿಸೆ ತತ್ತುರಂಗಮನೊಲವಿನಿಂದೇರಿ ಹರುಷದಿಂ ಬಂದನಾಗ || ೭೬ ||

ಅಪ್ರಬುದ್ಧಿಕೆಯಿನಾದವನಿಪನ ಲಗ್ಗಮಂ |
ನಿಃಪ್ರಚಂಚೆಗೆಲಸಲಂ ತಾನೆ ತಿದ್ದುವೆನೆಂದು |
ತತ್ಪ್ರಭೆಯ ತೀವ್ರವಂ ಬಿಸುಟು ತನ್ನಾ ತೇರತೇಜಿಯಂ ತೆಗೆದುಕೊಂಡು ||
ಸುಪ್ರಭಾತಾರ್ಕ್ಕನೆಯ್ದುವ ಮಾಳ್ಕೆಯಿಂದ ನಗ |
ರೀಪ್ರಜೆಗಳೆಲ್ಲರಾಶ್ಚರ್ಯವಡುವಂತೆ ಖಚ |
ರಪ್ರಭು ಸರಾಗದಿಂದಾ ಕದುರೆಯೇರಿ ನಭದತ್ತಣಿಂದಿರದೆ ಬಂದು || ೭೭ ||

ಇಳಿದು ಕುದುರೆಯನು ಬಲವಂದು ಬಳಿಕಾ ಚೈತ್ಯ |
ನಿಳಯಮಂ ಪೊಕ್ಕು ನಿಜಪತಿಗೆ ವಂದನೆಗೆಯ್ದು |
ಸುಲಲಿತವ್ರತಿ ವೃಷಭದಾಸನಂ ಪಲವುಸೊಳ್ಕೀರ್ತನಂ ಮಾಡುತಿರ್ಪಾ ||
ಗಳಿಗೆಯೊಳಗಾಕಾಶಮಂಡಲದೊಳಮರಸಂ |
ಕುಲಮೆಲ್ಲ ನೆರೆದು ಪಂಚಾಶ್ಚರ್ಯಮಂ ಮನಂ |
ಗೊಳೆ ಮಾಡಲಿಂತದಂ ಕೇಳ್ದಾ ಸುದಂಡಭೂಪಾಲನತಿ ಭೀರುವಾಗಿ || ೭೮ ||

ಪ್ರವಿದಿತನಿವಂಗಾಪ್ರಮಾದದೋಷದಿ ಬಂದ |
ನೆವವನೇ ನೆರವಳಿಗೆ ಮಾಡಿ ಮುಂಗೋಪದಿಂ |
ವಿವಿಧೋಪಸರ್ಗಮಂ ಮಾಡಿಸಿದ ದುಷ್ಕರ್ಮನಾನಲಾ ಎಂದು ಬಗೆದು ||
ತವಕದಿಂದೆಳ್ದು ಕಠೀರವಾಸನದಿ ನಿಜ |
ಭವನಮಂ ಪೊರಮಟ್ಟು ಮಂಡಲಾಧೀಶ್ವರರ |
ನಿವಹವೆಡಬಲನ ಹಿಡಿದೋಲೈಸಿಬರಲು ಕಡುವಿರಿದು ನಡನಡ ನಡುಗುತ || ೭೯ ||

ಬಂದು ಭರವಸದಿನಾ ಭವಬದ್ಧಭಂಜನನ |
ಮಂದಿರಕ್ಕೆಯ್ದಿ ಜಿನಪತಿಗೆ ವಂದಿಸಿ ಮನುಜ |
ಮಂದಾರನಾ ವೃಷಭದಾಸಂಗೆ ಉಪಸರ್ಗ ಪರಿಹರಮಾಯ್ತು ಕೆಯ್ಯನೆತ್ತು ||
ಎಂದು ಕೆಯ್ಯುತ್ತಿಸಿ ಬಳಿಕ್ಕುತ್ತಮಕ್ಷಮೆಯು |
ಮೆಂದು ನುಡಿದಾ ವಿಯಚ್ಚರಗೆ ಸತ್ಕಾರಮಂ |
ಮಂದೇತರಪ್ರಿಯದಿ ಮಾಡಿ ಬೀಳ್ಕೊಟ್ಟು ಜಿನಧರ್ಮಮಂ ಕೊಂಡುಕೊನೆದು || ೮೦ ||

ಕಟಕಟಾ ಕರುಣಹೀನಂ ನಾನು ಪಿರಿದು ನಿಃ |
ಕುಟಿಲನಿವನೆಂದು ಭಾವಿಸದೆ ಮಾಡಿಸಿದ ಸಂ |
ಕಟಮೆಲ್ಲಮಿವನ ವಿಮಲಶ್ರಾವಕವ್ರತದ ಫಲದಿಂದ ಪರಿಪಟ್ಟುದು ||
ಅಟಮಟದಿನಾಳ್ವರಸುತನಮುಮಂ ಪರಿಹರಿಸಿ |
ದಿಟಮಾಗಿ ದೀಕ್ಷೆಯಂ ಕೈಕೊಂಡು ತಪಸಿನೊ |
ಳ್ಪಟುವಾದವಂಗೆ ಮುಕ್ತಿಶ್ರೀಯ ಸಂಗಡಂ ಸಂಜಾತಮಾಗದಿರದು || ೮೧ ||

ಎನುತ ನಿರ್ವೇಗಮಾನಸನಾಗಿ ತನ್ನ ನಿಜ |
ತನುಜಂಗೆ ರಾಜ್ಯಮಂ ಕೊಟ್ಟು ತನ್ನೊಡನೆ ಕೆಲ |
ಮನುಜೇಶ್ವರರ್ಸುಮತಿಮಂತ್ರೀಶ ಸುರದೈವವೈಶ್ಯವಿಭು ವೃಷಭದಾಸಂ ||
ಮನಮೊಸೆದು ಬರಲು ಗುಣನಂದಿಯೆಂದೆಂಬೊರ್ವ |
ಮುನಿಗಳ ಸಮೀಪದೊಳ್ ದೀಕ್ಷೆಯಂ ಧರಿಸಿದಂ |
ತನುಮನೋವಾಕ್ಯದ್ಧಿಯಿಂದ ಧರಣೀತಳಂ ಕೀರ್ತನಂಗೆಯ್ವ ತೆರದಿ || ೮೨ ||

ಶ್ರೀಮತಿವೆಸರಕಂತಿಯರ ಸಮಕ್ಷದೊಳ್ ತ |
ದ್ಭೂಮೀಶ್ವರನ ಸುದತಿ ವಿಜಯೆ ಮತ್ತಲ್ಲಿ ಕೆಲ |
ಭಾವಿನಿಯರೊಡಗೂಡಿ ದೀಕ್ಷೆಯಂ ಪಡೆದಳಾ ನಗರಿಯಲ್ಲಿ ಕೆಲರು ||
ಶ್ರೀಮನ್ಮಹಾಶ್ರಾವಕವ್ರತವ ಧರಿಸಿದ |
ರ್ಪ್ರೇಮದಿಂ ಕೆಲಬರಿದುವೇ ಧರ್ಮಮೆಂದು ಪರಿ |
ಣಾಮಿಸಿದರಂದು ನನಗಾ ಸಮಯದೊಳ್ ಶ್ರದ್ಧೆ ಸಂಜಾತಮಾದುದೆಂದು || ೮೩ ||

ಆದ್ಯಂತಮಾಗಿಯಭಿನವ ಶಾರದಾದೇವಿ |
ವಿದ್ಯುಲ್ಲತಾಭಾಮೆ ಪೇಳ್ದ ಕಥೆಯಂ ಕೇಳಿ |
ಷೋದ್ಯವಡೆದಾ ಸತಿಯರಾ ವೈಶ್ಯವಲ್ಲಭನುಮಿಚ್ಛಾಮಿಯೆಂಬ ನುಡಿಗೆ ||
ವಿದ್ಯುಲ್ಲತಾಪಾಂಗೆ ಕುಂದಲತೆಯೆಂದಳೀ |
ಸದ್ಯ ಫಲವಡೆಯದೀ ಕಾರ್ಯಕ್ಕೆ ನಾನೆಂತು |
ಚೋದ್ಯಮಂ ಮಾಳ್ಪೆನೆನಲಾ ಮರದೊಳಿರ್ದ ನೃಪಸಚಿವರ್ಕಳಿಂತೆಂದರು || ೮೪ ||

ಇನ್ನೇಕೆ ತಡವು ಬೆಳಗಾಗುತಿದೆ ಮೂಡುಗಡೆ |
ಮುನ್ನೇಸರೊಗೆಯಲೊಡನರಮನೆಯಬಾಗಿಲ್ದೆ |
ಗನ್ನಗಾತಿಯನಿವಳ ಮುಂದಲೆಯ ಸುತ್ತಿಹಿಡಿತರಿಸಿ ನೋಳ್ಪಂತೆಲ್ಲರು ||
ಅನ್ನೆಯವನುಡಿದ ಬಾಯೊಳು ಬಿಸಿಯ ಬೂದಿಯಂ |
ಚೆನ್ನಾಗಿಡಿಸಿದ ಬಳಿಕ್ಕ ಬೊಕ್ಕಣದಲ್ಲಿ |
ಮನ್ನಣೆ ಕೆಡುವ ತೆರದಿ ಕೊಲಿಸಬೇಕೆನಲು ತಚ್ಚೋರನಿಂತೆಣಿಸುತಿರ್ದಂ || ೮೫ ||

ಕಾರಕಾಲದ ಕಂದರದ ನುಣ್ಚರಕ್ಕಾ ಮ |
ಯೂರನೊಲವಿಂ ನರ್ತಿಪಂತೆ ಕಾಳ್ಕೋಳಿ ಕೇ |
ಕಾರಯ್ದು ನಲಿವುದೇ ಉತ್ತಮರ ನುಡಿಗೆ ಸಜ್ಜನರಂತೆ ದುರ್ಜನಾಳಿ ||
ಸೇರುವುದೆಯೆಂದೆನುತ್ತಿರಲು ವಿದ್ಯುಲ್ಲತೆಯ |
ಸಾರತರಮಪ್ಪ ನುಡಿಗೇಳಿ ಸಂತಸವಡೆದ |
ನಾ ರಾಜವೈಶ್ಯನರ್ಹದ್ದಾಸ ಜಿನಸಮಯವಾರ್ಧಿವರ್ಧನಚಂದ್ರನು || ೮೬ ||

ಇದು ತ್ರಿದಶಪತಿವಿನುತಮಿದು ವಿಬುಧಜನವಿನತ |
ಮಿದು ವಿದಿತಜಿನಸಮಯಶರಧಿಸಂಪೂರ್ಣೇಂದು |
ಸದಮಲಚರಿತ್ರ ಚಂಗಾಳ್ವಭೂವರನ ಸಚಿವಾನ್ವಯಾಂಬರಹಂಸನು ||
ಮದನಸಮರೂಪನುತ್ತಮಗುಣಕರಂಡಕಂ |
ಚದುರಮಂಗರಸ ರಚಿಸಿದ ಕಥೆಯೊ |
ಳೊದವಿದುದು ವಿದ್ಯುಲ್ಲತಾಸತಿಯ ಸಮ್ಯುಕ್ತ್ವ ಕಥನ ಪನ್ನೊಂದು ಸಂಧಿ || ೮೭ ||

ಅಂತು ಸಂಧಿ ೧೧ ಕ್ಕಂ ಪದನು ೭೩೮ಕ್ಕಂ ಮಂಗಳ ಮಹಾ