ಅಕ್ಕಜಂ – ಆಶ್ಚರ್ಯ
ಅಗಳ್‌ – ಕಂದಕ
ಅಂಗವಿಸು – ಅಪೇಕ್ಷಿಸು
ಅಟ್ಟುಳಿ – ಹಿಂಸೆ
ಅಡಕ – ಹತೋಟಿ
ಅಡುವಲಿ – ಬಳುವಳಿ
ಅಡಂಗು – ಮಾಂಸ
ಅಣಿ – ಪಡೆ, ದಳ
ಅಣಿಯರಕೆ – ಸೊಗಸು
ಅಂಡಲೆ – ಬಾಧೆ, ಪೀಡೆ
ಅನುವರ – ಯುದ್ಧ
ಅಪವರ್ಗಸತಿ – ಮೋಕ್ಷಲಕ್ಷ್ಮಿ
ಅರಗುಲಿ – ಪಾತಕಿ, ಪಾಪಿ
ಅಲವರಿಕೆ – ಬೇಸರ
ಅಲಸಿ – ಬೇಸರ
ಅಸವಸಿ – ಅವಸರ
ಅಳ್ತಿ – ಪ್ರೀತಿ
ಅಯಿಲಂ – ಕೆಟ್ಟನಡತೆ
ಅರಡಿ – ಪೀಡೆ
ಅರಡಿಕಾರ – ಗಲಭೆಕಾರ
ಆರವೆ – ಕೊಳ
ಆಳಮೇಳಂ – ಸಹವಾಸ
ಉಕ್ಕು – ಪೌರುಷ
ಉದುಪು – ತಾಣ, ಬಲ, ಶಕ್ತಿ
ಉದ್ದುಡಿಕೆ – ದುಷ್ಟತನ
ಉಮ್ಮಳಿಕೆ – ವ್ಯಸನ
ಉರ್ಚಿ – ಕಿತ್ತು, ಎಳೆದು
ಊಣೆಯಂ – ಅಪಮಾನ
ಎಕ್ಕಲ – ಕಾಡಹಂದಿ
ಎಕ್ಕಸಿಕ್ಕಂ – ತಬ್ಬಿಬ್ಬು
ಎಗ್ಗ – ಮೂಢ
ಎರಕ – ಪ್ರೀತಿ
ಎಲರುಣಿ – ಹಾವು
ಎಸಕ – ಉದ್ಯೋಗ
ಎಸಳಿಕ – ಒಂದು ತರದ ಮರ
ಏರಿಂ – ಗಾಯ
ಒಚ್ಚತಂ – ಉಚಿತವಾಗಿ
ಒಡ್ಡು – ಸಮೂಹ
ಒಬ್ಬುಳಿ – ಕೂಟ, ರಾಶಿ
ಒಸೆ – ಪ್ರೀತಿಸು, ಪ್ರಸನ್ನನಾಗು
ಓತು – ಒಂದಾಗಿ
ಓಸರಿಸು – ತಿರಸ್ಕರಿಸು
ಓಸಳಿಕುಮಾಡದೆ – ಉಪೇಕ್ಷೆ ಮಾಡದೆ, ಉದಾಸೀನವಿಲ್ಲದೆ
ಓಳಿ – ಪಂಕ್ತಿ, ಗುಂಪು, ಸಮೂಹ
ಕಕ್ಕಸ – ಕ್ರೂರ
ಕಜ್ಜಳ – ಕಾಡಿಗೆ
ಕಟ್ಟುಕ – ಕಲ್ಪನೆ
ಕಡುಪು – ವೇಗ, ರೋಷ
ಕಡುಹೆಬಗ – ಬಡವ
ಕಂತು – ಮನ್ಮಥ, ಕಾಮ
ಕಪ್ಪರ – ಕೊಪ್ಪರಿಗೆ
ಕಬ್ಬೆವಣ್ಣ – ಕೆಂಪುಬಣ್ಣ
ಕರತ್ತು – ಎಣಿಸು, ಗುರಿಯಿಡು
ಕರ್ವಿನ – ಕಬ್ಬಿನ
ಕರುತ್ತು –ಹಿಂಸಿಸಿ
ಕಾವಳ – ನೆಳಲು
ಕುಡಿಯರರು – ಒಕ್ಕಲಿಗರು
ಕುಪ್ಪಿಗೆ – ಕರಂಡ
ಕೂನು – ಡೊಂಕು, ವಕ್ರ
ಕೇಣ – ಅಭಿಮಾನ, ಮತ್ಸರ
ಕೈಡ – ಕೇಡು
ಕೊಂಡೆಯರ್‌ – ಹಿಸುಣರ್, ಚಾಡಿಕೋರರು
ಕೊನಬರು – ಪುಂಡರು
ಕೋಳ – ಲೂಟಿ, ಕೊಳ್ಳೆ
ಗಡಿವಾಡ –ಇಕ್ಕಡ
ಗನ್ನಗಾತಿ – ಮೋಸಗಾರ್ತಿ
ಗರವತಿಗೆ – ಗರವಟ್ಟಿಗೆ, ಸೂತ್ರ
ಗಾಳಿವಟ್ಟೆ – ಆಕಾಶ
ಗುಜ್ಜುಗುರುಕ – ನಿಟ್ಟುಸಿರು, ವ್ಯಸನ
ಜೊತ್ತು – ಕಪಟತನ, ಮೋಸ
ಟೆಂಟನಿಸು – ಕೋಪಿಸು
ಡಾಣೆ – ಡೊಣ್ಣೆ, ಬಡಿಗೆ
ಡೆಂಕಣಿ – ಧ್ವಜಸ್ತಂಭ
ಢಾಳ – ಪ್ರತಾಪ
ತಕ್ಕಳಿದು – ಎದೆಗೆಟ್ಟು
ತದಕು – ಆನೆಬೇಲ, ಗಜಭಕ್ಷ್ಯ
ತಳಿ – ತೊಲೆ, ಕೊರಡು, ಸೇಚನೆ
ತಿಟ್ಟೆ – ದಿಣ್ಣೆ
ತಿಬ್ಬಳಿ – ಬಿಲ್ಲನಾರಿ
ತೆನೆ – ಪ್ರಾಕಾರ
ತೊಡಂಬೆ – ಗೊಂಚಲು
ದಡಿ – ಕೋಲು
ದಂದುಗ – ಕಷ್ಟ
ದಸಿ – ಗೂಟ
ದುತ್ತಂಡಿಕೆ – ದುಷ್ಟತನ
ದೇಹಾರ – ಕೆಟ್ಟಗತಿ, ಕೆಡು
ದೋರೆವಣ್‌ – ಇನ್ನೂ ಮಾಗದ ಹಣ್ಣು
ನಳಿಗೆ – ನಲಿಕೆ
ನಳುಹ – ವಕ್ರತೆ
ಪಡಕಣ – ಮಲಗುವಮನೆ
ಪಡಲಿಗೆ –ಹರಿವಾಣ, ತಟ್ಟೆ
ಪರಿಜು – ವೇಷ
ಪರಿಪಡಿಸು – ಹೋಗಲಾಡಿಸು
ಪಳವಿಗೆ – ಪತಾಕೆ ; ಧ್ವಜನ
ಪೆಕ್ಕಣ – ಪ್ರೋಕ್ಷಣ, ನೋಟ
ಪೊರವಾರು – ನಿತಂಬ, ತಿಗ
ಬಕ್ಕೆ – ಹಲಸು
ಬಚ್ಚಣಿ ಮಾತು – ಬಣ್ಣದ ಮಾತು
ಬಜ್ಜಡ – ಕಲ್ಮಷ, ಪಾಪ
ಬಣಗಾಗಿ – ವ್ಯರ್ಥವಾಗಿ
ಬದ್ದರ –ಆನೆ
ಬಲ್ಲಿದ – ಬಲಿಷ್ಠ
ಬವರ – ಯುದ್ಧ
ಬಿನುಗು – ಗರ್ವದ, ಸೊಕ್ಕಿನ
ಬಿಸವಂದ – ಆಶ್ಚರ್ಯ
ಬೀಟೆ – ಬಿರುಕು
ಮಗಿಲು – ಕೊಳೆ
ಮುತ್ತಕಾಶಿನಿ – ಪ್ರಮದೆ, ನಾರಿ
ಮಾಣವಕ – ಹುಡುಗ
ಮಾಮಸಕ – ಅತಿರೋಷ
ಮಾರ್ಮಲ – ಶತ್ರುಸೇನೆ
ರಾಣುವೆ – ಪ್ರಭುತ್ವ
ಲಗ್ಗ – ತಪ್ಪು
ಲಾವುಕೋವು – ಕಪಟ
ವಿಡ್ಡಿ – ವಿರೋಧಿ
ವೆಸಂ – ವಿರೋಧ
ವೆಸಂ – ಕಪ್ಪು
ಶ್ರುತ – ಶಾಸ್ತ್ರ
ಸಜುಕಂ – ಮೊಗ್ಗೆ, ಕುಟ್ಮಲ
ಸವಗ – ಕವಚ
ಸಿತಗ – ಪೋಕರಿ, ಪುಂಡ, ಜಾರ
ಸಿಬ್ಬದಿ – ಮೊಡವೆ
ಸುಠಿ – ಸಾಮರ್ಥ್ಯ
ಸಮ್ಮಾನ – ಗರ್ವ
ಸೊಮ್ಮು – ಒಡವೆ
ಸೋವಿಲೊಳು – ಮಡಿಲಲ್ಲಿ
ಹರಿ – ಸಿಂಹ
ಹರಿಗೆ – ಅಡ್ಡಣಿ, ಗುರಾಣಿ
ಹರಿದಾಳಿ – ಮುತ್ತಿಗೆ
ಹರಿಬ – ಹೆಂಬಲು
ಹಲ್ಲಣಿಸು – ಸಜ್ಜುಗೊಳಿಸು
ಹವಣ್‌ – ಪ್ರಮಾಣ, ಅಳತೆ
ಹಳು – ಅಡವಿ
ಹುರುಡು – ಮತ್ಸರ
ಹೆಡ್ಡಯಿಸು – ತಿರಸ್ಕರಿಸು
ಹೊಡಕುಳಿ – ಸಂತಾಪ