ಅಗುರ್ದ – ಭಯಂಕರ
ಅನುಮುದ – ಹಿಗ್ಗುಹೊಂದು
ಅರಗುಲಿ – ಅರಸುಕುಲದವರು
ಅವಧಾನ – ಎಚ್ಚರಿಕೆ
ಅಸಮಸ –ಆತುರ, ದುಡುಕು
ಆರೈಯ್ಯು – ಕೇಳು
ಇಟ್ಟಣಿಸು – ದಟ್ಟಾದ
ಉಳ್ಕ – ಚಿಕ್ಕೆ
ಎಕ್ಕಟೆ – ಒಬ್ಬೊಂಟಿಗ
ಎಕ್ಕತೂಳ – ಪರಾಕ್ರಮಿ
ಕಂಚುಕ – ನಿಲುವಂಗಿ, ಕುಪ್ಪಸ
ಕಜ್ಜಳಗಿರಿ – ಕಾಡಿಗೆಬೆಟ್ಟ
ಕಟ್ಟಾಯತ – ಅತಿ ಉಚಿತ
ಕಪರ್ದಿಕ – ಕವಡಿ
ಕಲಿನ – ಕಡಿವಾಣ
ಕಲ್ಲತಗರು – ಕಲ್ಲಿಗೆ ಹಾಯುವ ಟಗರು
ಕವುರು – ಕಮರು
ಕೃತಾಂತ – ಯಮ
ಕಾಂಚನ ಕಂಜ – ಹೊಂದಾವರೆ
ಕಾಂಸ್ಯ – ಕಂಚು, ಕಂಚಿನ ಜಾಗಟೆ
ಕುಂಭಿನಿ –ಹೆಣಾನೆ
ಕುಮ್ಮರಿಗಡಿ – ಧೈರ್ಯಗುಂದು
ಕುಸುರಿದರಿ – ಚೂರುಮಾಡು, ಕೊಚ್ಚು
ಕೆಂಬಲೆ – ಕೆಂಪಾಗಿ ಹರಡು
ಕಾಯೋತ್ಸರ್ಗ – ದೇಹಬಿಡುವುದು
ಕೌಳುಡೆ – ಮೈಲಿಗೆಯ ಬಟ್ಟೆ
ಖರ್ಪರ – ಆಮೆಯ ಚಿಪ್ಪು, ಭಿಕ್ಷಾಪಾತ್ರೆ
ಖೇಟಕ – ಸಣ್ಣ ಖಡ್ಗ
ಖಳಕರ್ಮ – ನೀಚಕಾರ್ಯ
ಗೋಳೈವಾರ – ಕುದುರೆಸವಾರ
ಗ್ರೈವೇಯ – ಸ್ವರ್ಗದ ಮೇಲಿನ ಒಂದು ಸ್ಥಳ
ಚಾಪಳಿಕೆ – ಚಾಂಚಲ್ಯ
ಛದ್ಮಸ್ಥಕಾಲ – ಕೇವಲ ಜ್ಞಾನ ಆಗುವವರೆಗೆ ಗುಪ್ತವಾಗಿ ಜ್ಞಾನಮಾಡುವ ಅವಧಿ
ಜತುಗೃಹ – ಯಮುನೆ
ಜಂಘ – ಕಿರಿದೊರೆ
ಜೈವಾತ್ರಕ – ದೀರ್ಘಾಯುಷ್ಯವರಳ್ಳವನು, ಚಂದ್ರ
ಜೋಧ – ಮಾವುತ
ಡೊಕ್ಕರ – ಮಲ್ಲಯುದ್ಧದಲ್ಲಿ ಒಂದು ಒರಸೆ, ಹೊಡೆತ
ತಟ್ಟುರ್ಚು – ಸೀಳಿಕೊಳ್ಳು, ಹೊರಬರು
ತನುವಿನುತ್ಸೇದ – ದೇಹದಷ್ಟು ಎತ್ತರ
ತಂಬಸೆ – ತಡೆ
ತಸ್ಕರಶಿಲೆ – ಚೋರಕಲ್ಲು ಠಕ್ಕಿಸುವ ಕಲ್ಲು
ತಾರಲೆವಾಡು – ತಾರೆಗಿಡದ ಎಲೆಗಳ ಗೊಂಚಲನ್ನು ಹಿಡಿದುಕೊಂಡು ಹಾಡುತ್ತ ಕುಣಿಯುವ ಒಂದು ಆಟ
ತ್ರಸನಾಳ – ಜೀವಿಗಳು ವಾಸಿಸುವ ಪ್ರದೇಶ
ತಿರುಪಟ್ಟೆ – ದನಗಳ ಹಟ್ಟಿ, ಕೊಟ್ಟಿಗೆ
ದಂದಶೂಕ – ಹಾವು
ಧ್ಯಾನಪಾವಕ – ಧ್ಯಾನವೆಂಬ ಬೆಂಕಿ
ದೌವಾರಿಕ – ಪ್ರತಿಹಾರಿ, ಬಾಗಿಲು ಕಾಯುವ ದ್ವಾರಪಾಲ
ನಚ್ಚಣಿಗ – ನರ್ತಕ
ನಾರಾಚ – ಬಾಣ
ನಿತ್ಯನಿಗೋದಕ – ಅಧೋಲೋಕದ ತುದಿಯಲ್ಲಿ ಇರುವ ಜೀವಿಗಳ ಸ್ಥಳ
ನುಳಿಸರ – ಸುಳ್ಳುಸರ, ಅಣಕಧ್ವನಿ
ನೇರಣಿಗ – ತಿದ್ದುವವ, ಪಳಗಿಸುವವ
ಪಂಗುಲತೆ – ಸಾಲುಗಟ್ಟು, ದೀವಟಿಗೆ ಉರಿದಂತೆ
ಪಂಬಕ್ಕಿ – ಹಸಿ ಅಕ್ಕಿ
ಪನ್ನೊಂದನೆಯನೆಲೆ – ಶ್ರಾವಕನು ಆಚರಿಸುವ ನಡೆತೆಗಳಲ್ಲಿ ಹನ್ನೊಂದನೆಯ ಸ್ಥಾನ
ಪರಿವಟ್ಟು – ಪರಿಪಡು, ರಕ್ಷಿಸು
ಪರಿವ್ರಾಜಕ – ಸಂನ್ಯಾಸಿ
ಪಲಾಶಕೂಟ – ಎಲೆಗಳ ಗೊಂಚಲ
ಪಲ್ಮೋಪಮಾ – ಒಂದು ಎಣಿಸಲಾಗದ ಅಳತೆ
ಪಾಣ್ಬೆ – ಸೂಳೆ, ವ್ಯಭಿಚಾರಿಮಿ
ಪಾರಣೆ – ಉಪವಾಸದ ಮರುದಿನ ಆಹಾರ ಸೇವಿಸುವುದು
ಪಾಸರೆ – ಹಾಸುಗಲ್ಲು
ಪೆಣರಿಸಿ – ಹೆಣದಂತಿರುವ ಋಷಿ
ಪ್ರಜ್ಞಪ್ತಿ – ಒಂದು ಜ್ಞಾನ
ಪೃಥುವೀರ್ಯ – ಅನಂತಶಕ್ತಿಯವ, ಅನಂತಬಲದವ
ಬಂದುಗೆವಾಯ್‌ – ಒಂದುಜಾತಿಯ ಹೂವಿನ ಹಾಗೆ ತುಟಿ
ಬದರೀವನ – ಹಿಮಾಲಯದಲ್ಲಿ ಇರುವ ಒಂದು ಪುಣ್ಯಕ್ಷೇತ್ರ
ಬಲಾರಿ – ಒಂದು ಕ್ಷುದ್ರದೇವತೆಯ ಹೆಸರು
ಬಾಣಿಸಲು – ನುಡಿಸಲು
ಬಾಸಣಿಸು – ಆವರಿಸು, ಮುಚ್ಚು
ಭುಂಭುಕ – ಗೊಂಚಲು
ಬೆಸಲೆಯಾಗು – ಹಡೆ
ಬೆಳರ್ವಸದನ – ಹೊಳೆಯುವ ಬಟ್ಟೆ
ಮಂಜೂಷೆ – ಪೆಟ್ಟಿಗೆ ಸಂದೂಕ
ಮಂದಾಸ – ಪೆಟ್ಟಿಗೆ
ಮತ್ತಕಾಶಿನಿ – ಸುಂದರಿ
ಮಾತುಳ – ತಾಯಿಯ ಒಡಹುಟ್ಟಿದವ, ಸೋದರಮಾವ
ಮಾಸೋಪವಾಸಿ – ತಿಂಗಳವರೆಗೆ ಉಪವಾಸವಿರುವ ವ್ರತವನ್ನು ಕೈಗೊಂಡವನು
ಮಿಂಟೆ – ಹೆಂಟೆ, ಗುಂಪು, ಗುಂಡು
ಮುಂಬಳಿಸು – ಮೊದಲಸುತ್ತು
ಮುಸುಡಮುರುಂಕಿಸಿ – ಕೆನ್ನೆ ತಿವಿದು ಭರತ ಮೊದಲಾದಷಟ್ಟಂಡಗಳಲ್ಲಿ ಒಂದು
ಯಕ್ಕತೂಳ – ದ್ವಂದ್ವಯುದ್ಧ
ರೂಪಪರಾವರ್ತನ ವಿದ್ಯೆ – ರೂಪವನ್ನು ಬದಲಿಸುವ ಒಂದು ವಿದ್ಯೆ
ಲಾಳವಟ್ಟೆ – ಬೀಸಣಿಕೆ
ವಜ್ಜೆ – ಅಂಗಾಲು
ವಟುಕ – ಬಾಲಕ, ಬ್ರಹ್ಮಚಾರಿ
ವರೂಥಿನಿ – ರಥವೇರಿದ
ವಿಜಿಗೀಷು – ಜಯವನ್ನು ಬಯಸುವವ
ವಿದ್ರಾವಣಿ – ಬೆನ್ನಟ್ಟುವಿಕೆ, ಓಡಿಸುವಿಕೆ
ವಿಪಂಚಿ – ವೀಣೆ
ವಿಭ್ರಾಜಿತ – ಹೊಳೆವ
ವಿಲಸತ್‌ಪ್ರಜ್ಞಪ್ತಿ – ಒಂದು ತರದ ವಿದ್ಯೆ
ವೈಕುವರ್ಣ – ಧ್ವನಿಯ ಅನುಕರಣದ ಒಂದು ವಿದ್ಯೆ
ವೈಸಿಶ – ವಂಚನೆಗಾರ
ವ್ಯಾಳಶಯನ – ವಿಷ್ಣು
ಶಬ – ಶವ, ಹೆಣ
ಶುಂಡಾಲ – ಆನೆ
ಸಂಗಾಳೆ – ಸಂಗಳಿಸು, ಕೂಡು, ಸೇರು
ಸಮವಸರಣ – ತೀರ್ಥಂಕರರು ನಡೆಸುವ ಧರ್ಮಸಭೆ
ಸಸಕತಾಟಂಕ – ಮೊಲದಂತೆಜಿಗಿಯುವುದು
ಸಾಮಜವೈರಿವಿಷ್ಟರ – ಸಿಂಹಾಸನ
ಸಿಂಗಾಡಿ – ಬಿಲ್ಲು
ಸೂನುಗಾತಿ – ಪುತ್ರವಂತಿ
ಸೂಪಕಾರ – ಬಾಣಸಿಗ, ಅಡಿಗೆಮಾಡುವವ
ಸೋಳಹ – ಹದಿನಾರು, ಮಡಿ
ಸೃಗಾಳ – ನರಿ
ಹರೆ – ತಮಟೆ, ಹಲಗೆ
ಹಲಮುಸಲಗದಾ – ನೇಗಿಲ, ಒನಕೆ, ಗದೆ
ಹಾಸಂಗಿ – ಲಾಳ, ಲೆತ್ತ