ಅಡುವಲಿ – ನೈವೇದ್ಯ
ಅಪಗತ – ನಿವಾರಿತವಾದ
ಅಮೃತಶ್ರೀಜಾಯೆ – ಮುಕ್ತಿ
ಅಸ್ವಪ್ನೇಶಾರ್ಚಿತ – ಜಿನ
ಅಂತಕದಿಸೆ – ದಕ್ಷಿಣದಿಕ್ಕು
ಆಡುಂಬೊಲ – ಕ್ರೀಡಾಕ್ಷೇತ್ರ
ಅಪಣನಿಕರಂ – ಅಂಗಡಿಸಾಲು
ಇಂದ್ರಾವರಜ – ವಿಷ್ಣು
ಉದ್ವಹನಂ – ಮೇಲಕ್ಕೆತ್ತುವದು
ಉಪಕಂಠ – ಸಮೀಪ
ಎಕ್ಕೆ – ಹೆಚ್ಚಳ, ಮೇಲ್ಮೆ
ಎಡ್ಡೆಂಬಡೆದಂ – ಸುಂದರನಾಗಿಕಂಡ
ಎಱವಟ್ಟು – ಆಶ್ರಯಸ್ಥಾನ
ಎೞಗೆ – ಏಡಕ, ಟಗರು
ಕಱುತ್ತು – ಕಪ್ಪಾಗಿ
ಕೃತಾಂತ – ಯಮ
ಕಾರ್ತಸ್ವರ – ಚಿನ್ನ
ಕೂಪಾರ – ಸಮುದ್ರ
ಕೆಕ್ಕಳ – ಭಯವಿಕಾರ
ಕೆಲ್ಲಯಿಸು – ಸಿಟ್ಟಾಗು
ಖರಕರ – ಸೂರ್ಯ
ಗಿಡಿದು – ತುಂಬಿ
ಚೆಲ್ಲೆಯ – ನಿಡಿದಾದ
ಜನಾಂತ – ದೇಶ
ಜವಳಿದಲೆ – ಎರಡುತಲೆ
ಡಾಳಿಸು – ಗಾಳಿಬೀಸು, ಶಾಂತಿತೋರು
ಡಿಳ್ಳಯಿಸು – ದುರ್ಬಲಗೊಳಿಸು
ತಮಾಲ – ಹೊಂಗೆ
ತಾಮರಸ – ತಾವರೆ
ತಿರುವಾಯ್‌ – ಬಿಲ್ಲನಹಗ್ಗದಬಾಯಿ
ತಿಂತಣಿ – ಗುಂಪು
ತುಹಿನ – ಹಿಮ
ದಯಿತೆ – ಹೆಂಗಸು
ನವನಿಧಿ – ಕುಬೇರನ ಒಂಬತ್ತು ನಿಧಿಗಳು, ಪದ್ಮ, ಮಹಾಪದ್ಮ, ಶಂಖ, ಮಕರ, ಕಚ್ಛಪ, ಮುಕುಂದ, ನಂದ, ನೀಲ, ಖರ್ವ
ನಾರಾಚ – ಬಾಣ
ನೇರಾಣಿ – ಚಿನ್ನ
ಪಡ್ಡಳಿ – ಕಣಿಗಿಲೆ ಹೂ
ಪರಿಕಾಲು – ಕಾಲುವೆ
ಪರಿಮಱಿ – ಕುಣಿಯುವುದು
ಪಲಗಣ್ಣ – ಮುಚ್ಚಿಗ
ಪೆಳರ್ಚಿಸಿ – ಹೆದರಿಸಿ
ಬಱಿತು – ಗಟ್ಟಿಯಾಗಿ
ಬಿಲೇಶಯ – ಸರ್ಪ
ಭಾವರಿ – ಭಿಕ್ಷೆ
ಮಣ್ಮೞ – ರೂಪಳಿದ ಸಾವು
ಮರುತ್ಸಖದಿಕ್ಕು – ಆಗ್ನೇಯ
ಮಿನಧ್ವಜ – ಮನ್ಮಥ
ಮೊಕ್ಕಳ – ಅತಿಶಯ
ಲುಲಾಯ – ಕೋಣ
ವಟಪಕ್ವಫಲ – ಆಲದಹಣ್ಣು
ವಾಯಕೆ – ಮೋಸಕ್ಕೆ
ವ್ಯಾಲಿ – ಹೆಣ್ಣು ಹಾವು
ವಿಷಯ – ದೇಶ
ವೇಡೈಸು – ಸುತ್ತುಗಟ್ಟು
ಶಿಳೀಮುಖ – ಬಾಣ
ಸಜ್ಜುಕ – ಸಿದ್ಧವಾದ
ಸನ್ನುತ – ಹೊಗಳಿಸಿಕೊಂಡ
ಸಬ್ಬಸ –ಸರ್ವಸ್ವ
ಸಾಮಜ – ಆನೆ
ಸ್ರೋತಸ್ವಿನಿ – ನದಿ