ಅಂಕ – ರಿಕಾಪು
ಅಂಕಮಾಲಾಕ್ಷರ – ಬಿರುದುಗಳಪಟ್ಟೆ ಅಂದಲ ಪಲ್ಲಕ್ಕಿ
ಅಕ್ಕಡ – ಅಖಾಡ, ಕುಸ್ತಿಮಾಡುವ ಸ್ಥಳ
ಅಗಿನು – ಅಗಿಲು, ಒಂದು ವಿಧದ ಸುಗಂಧ ದ್ರವ್ಯ
ಅಡಿಯಾರರವಕ್ಕಿ – ದುಂಬಿ
ಅರ್ಜುನ – ಬಿಳುಪು
ಅಮಳ್ದಲೆವಕ್ಕಿ – ಗಂಡಭೇರುಂಡ
ಅಱ – ಧರ್ಮ
ಅಲತಗೆ – ಕಾಲಿಗೆ ಬಳಿಯುವ ಬಣ್ಣ
ಅಶನಿ – ವಜ್ರ
ಅಸವಸ – ಆತುರ
ಅಸುಗೆ – ಅಶೋಕವೃಕ್ಷ
ಆಗಸವಟ್ಟೆವೆಣ್ಗಳು – ದೇವಲೋಕದ ಹೆಣ್ಣುಗಳು
ಆಲವಾಲ – ಗಿಡಗಳಿಗೆ ನೀರು ಹಾಕಲು ಮಾಡುವ ಪಾತಿ
ಉಪರಿಮ – ಮೇಲುಭಾಗ
ಎಂಟಡಿಗ – ಶರಭ
ಏರಾಫಲ – ಏಲಕ್ಕಿ
ಓಡು – ಬಿರುಕುಬಿಡು, ರೊಟ್ಟಿ ಸುಡುವ ಮಣ್ಣಿನ ಸಾಧನ
ಕಂಕೆಲ್ಲಿ – ಅಶೋಕವೃಕ್ಷ
ಕುಂಬಿಕಾಱ – ಕಾವಲಗಾರ
ಕುಂಭವಲಿ – ಕಳಶದ ಶಾಸ್ತ್ರ
ಕುಂಭಿನಿ – ಹೆಣ್ಣಾನೆ
ಕಕೋಕ – ಕಕೋಕ ಎನ್ನುವವನು ರಚಿಸಿದ ಕಾಮಶಾಸ್ತ್ರ
ಕರಗ – ಮಣ್ಣಿನ ಸಣ್ಣಗಡಿಗೆ
ಕಱುತ್ತು – ಕೋಪ, ಸಿಟ್ಟು
ಕಲುಹಾರ – ಕಲ್ಹಾರ, ಕೆಂದಾವರೆ
ಕಾಕಿಣಿ – ಒಂದು ರತ್ನ
ಕಾಗಿನವಸ್ತ್ರ – ಕಪ್ಪುಬಟ್ಟೆ
ಕಾಮಪಟ್ಟ – ಮಣ್ಣು ಕೆಲಸದವ, ಕಾಮಾಟ
ಕೀಳ್ನಾಡು – ತಗ್ಗು ಪ್ರದೇಶ, ಕರಾವಳಿ ನಾಡು
ಕೀಳ್ನೆಲ – ನಾಗಲೋಕ, ಪಾತಾಳಲೋಕ
ಕೂಪಾರ – ಸಮುದ್ರ
ಕೂವಕಂಭ – ಹಡಗಿನ ಮಧ್ಯದ ಕಂಬ
ಕೆನ್ನರೆ – ಕೆಂಪು ಕಲ್ಲುಬಂಡೆ
ಕೇಕರಾಂಶು – ನವಿಲುಬಣ್ಣ
ಕೇಸುರಿ – ಕೆಂಪುಜಾಲ್ವೆ
ಕೈಪಿಡಿ – ಕನ್ನಡಿ
ಕೌರು ಸುವಾಸನೆಯ ಹೊಗೆ
ಖರ್ವಡ – ಬೆಟ್ಟದಿಂದ ಆವರಿಸಿದ ಊರು
ಖೇಡ – ಬೆಟ್ಟ ಮತ್ತು ನದಿಗಳಿಂದ ಕೂಡಿದ ಊರು
ಗಮ್ಮತಿ – ಕುಚ್ಚು
ಗುಬ್ಬಿಮುಚ್ಚುಳ – ಕಿವಿಗೆ ಧರಿಸಿದ ಆಭರಣ
ಗೇಣ್‌ – ಖಡ್ಗ
ಚೀಕಂ – ಸುಟ್ಟು ಸುರುಟಿಕೊಳ್ಳು
ಚುಳ್ಕಾಡು – ತುಳುಕಾಡು
ಜಿಂಜೇರಿ – ಗೂಡು
ಜೇವಣಿಗೆ – ಸೀಹಾಲೆಸೊಪ್ಪು
ಝಲ್ಲಿಮಿಗ – ಚಮರಿಮೃಗ
ಡೆಂಕಣಿ – ಕೋಟೆಯ ಬುರುಜು, ಧ್ವಜಸ್ತಂಭವಿರುವ ಸ್ಥಳ
ಡವಕೆ – ಪೀಕದಾನಿ
ಡಿವಳಿ – ಸುಗಂಧಪೂರಿತ ಹೂವ ಬಿಡುವ ಮರ
ತದುಕುಗಾನು – ಜೊಂಡುಬೆಳೆದ ಕಾಡು, ತಗ್ಗುಪ್ರದೇಶದ ಕಾಡು
ತನ್ನಂಗಿ – ಹೆಂಗಸು
ದಂಡಸೂಕಾರಿ – ಗರುಡ
ದಣಿಬ – ವಸ್ತ್ರ, ಬಟ್ಟೆ
ದರು – ಕುದುರೆಯ ಬಾಲದ ಕೆಳಭಾಗ
ಧಾಮಾಂಬು – ಬೆಳಕಿನ ಕಿರಣ
ದೀವ – ಕಾಡುಪ್ರಾಣಿಗಳನ್ನು ಹಿಡಿಯಲು ಬಳಸುವ ಸಾಕಿದ ಪ್ರಾಣಿ
ದೀವರ –ಬೇಟೆಗಾರ
ದುಱುದುಂಬಿತನ – ಅಧರ್ಮ
ದ್ರೋಣಾಮುಖ – ನದೀದಡದ ಮೇಲಿರುವ ಊರು
ನಾಗವಲಿ – ಮದುವೆಯಲ್ಲಿ ಮಾಡುವ ಒಂದು ಶಾಸ್ತ್ರ
ನಾಲೆಗರುಗ – ನಾರಳೆಕಡ್ಡಿ, ವಾಟಿಕಡ್ಡಿ
ನಿಳಿಂಪ – ದೇವತಾಸಮೂಹ
ನಿಸ್ತ್ರಿಂಶ – ಕತ್ತಿ
ನೇರಾಣಿ – ಚಿನ್ನ
ನೈಹಂಚಿ – ಬಿಳಿಹಂಚಿಕಡ್ಡಿ
ಪಟ್ಟೆಗಾಱ – ರೇಷ್ಮೆ ವ್ಯಾಪಾರಿ
ಪಂಚಧಾರೆ – ಅಸ್ಕಂದಿತ, ಧೌರಿತಕೆ ರೇಚಿಕ, ವಲ್ಲಿತ, ಪುತ್ಲ ಎನ್ನುವ ಕುದುರೆಯ ಐದುವಿಧ ನಡಿಗೆ
ಪುಣ್ಯವೀಧಿ – ಸೂಳೆಗೇರಿ
ಪತ್ತಳೆಗೂಳು – ಎಂಜಲನ್ನ
ಪರಿರಂಭಣ – ಆಲಿಂಗನ
ಪಳಿ – ಬಾವುಟ
ಪುಷ್ಪಭಾಂಡಾಸನ – ಬ್ರಹ್ಮ
ಬಂದೊಕಾಧರ – ತೊಂಡೆಹಣ್ಣಿನ ತುಟಿ
ಭುಂಬುಕ – ಶಂಖಧ್ವನಿ
ಬಲೀಮುಖ – ಕೋತಿ
ಬಿಜ್ಜಾದರ –ವಿಧ್ಯಾಧರ
ಬಿದಿರ್‌ – ಹರಡು
ಬಿಯದ – ಬೇಡ
ಬೆಚ್ಚುನೀರ್‌ – ಮಕ್ಕಳ ಹೆದರಿಕೆ ಹೋಗಿಸಲು ಎರಚುವ ನೀರು
ಬೆರಂಟು – ಕೆರೆ
ಬೋಸರಿಗ – ವಂಚಕ
ಭರಿಕೈ – ಆನೆಯ ಸೊಂಡಿಲು
ಮಂಜಿಸಿಕೆ – ಕೆಂಪು ಹೂ ಬಿಡುವ ಬಳ್ಳಿ, ಮಂಜಿಷ್ಠೆ
ಮಕರಿಕಾಪತ್ರ – ಕೆನ್ನೆಯ ಮೇಲೆ ಬರೆಯುವ ಚಿತ್ರ
ಮಡಂಬ – ಐದನೂರು ಗ್ರಾಮವನ್ನೊಳಗೊಂಡ ಮುಖ್ಯಪಟ್ಟಣ
ಮತ್ತಕಾಶಿನಿ – ಹೆಂಗಸು
ಮಧುಗಂಡೂಷ – ಜೇನಿನಿಂದ ಬಾಯಿ ಮುಕ್ಕಳಿಸುವುದು
ಮಾಸಾಳು – ಶೂರ, ವೀರ
ಮೇಕ – ಹೆಣ
ಮೊರೆ – ಸಂಬಂಧ, ಫರ್ಜಿಸು
ಮೊಲಗಳ್ತಲೆ – ಮುಸ್ಸಂಜೆ
ಮುಂಡಿಗೆ – ಸವಾಲು, ಕಂಬ
ಎಕ್ಕಲಗಾಣ – ಯಕ್ಷಗಾನ
ರಾಣು – ಸೇನೆ
ಲಾಜೆ –ಬತ್ತದ ಅರಳು
ಲುಲಾಯ – ಕಾಡೆಮ್ಮೆ
ಲುಳಿ – ಕಾಲಿನ ಆಭರಣ, ಸುತ್ತು
ವರೂಥ – ಯುದ್ಧಕವಚ
ವಾಹಿಣಿ – ಕುದುರೆ ಓಟದ ಒಂದು ಬಗೆ
ವಿಚಕಿಲ – ಒಂದು ಜಾತಿಯ ಮಲ್ಲಿಗೆ
ಸಂಜೋಗ – ಅಂಬಾರಿ
ಸಿಂಗವಣೆ – ಸಿಂಹಾಸನ
ಸಜ್ಜುಕ – ಮೊಗ್ಗು
ಸಂತಸವಾಡು – ಸೋಬಾನೆಪದ
ಸ್ವಾಹಾತರುಣಿ – ಬೆಂಕಿಯ ಮಗಳು
ಸೀರ್ಪನಿ – ತುಂತುರು ಹನಿ
ಸೀಱುಂಬಳ – ಚಲ್ಲಾಪಿಲ್ಲಿ
ಸುಟ್ಟುತೋಱು – ಬೆರಳುಮಾಡಿ ತೋರಿಸು
ಸುಧಾಸೂತಿ – ಚಂದ್ರ
ಹನಿವೊತ್ತು – ಬೆಳಗಿನಜಾವ
ಹಸರ – ಅಂಗಡಿ
ಹಸುಬ – ಒಂದು ಬಗೆಯ ಹಕ್ಕಿ
ಹುರುಕಾತಿ – ಒರಟುಹೆಣ್ಣು, ಬೆಡಗುಗಾತಿ
ಹೆಟ್ಟುಗೆ – ಹೆಂಡತಿ
ಹೇರಾಲಯ – ಶ್ಮಶಾನ
ಹೋರಜೆ – ಆನೆಯ ಕತ್ತಿಗೆ ಹಾಕುವ ಪಟ್ಟಿ