ಅಗಪೆ – ಸಟ್ಟುಗ, ತೆಂಗಿನ ಚಿಪ್ಪಿನ ಚಿಕ್ಕ ಸೌಟು
ಅಗುಹಿಕ್ಕು – ಬೇಯಿಸು, ಕುಚ್ಚು
ಅಂಗರವಳಿಗೆ (ಅಂಗಾರವೋಳಿಗೆ) – ಕೆಂಡದ ರೊಟ್ಟಿ
ಅಡವಾದ – ಹದವಾಗಿ ಬೇಯಿಸಿದ
ಅತ್ತರ (ಅಂತರ, ಅತ್ತಳ) – ಪಾತ್ರೆಯೊಳಗೆ ಹಬೆಯಲ್ಲಿ ಬೇಯಿಸಲು ಬಳಸುವ ಸಧನ, ಅಟ್ಟಣೆ
ಅಪ್ಪೆಮಣಿ – ಮಣಿಯಾಕಾರದ ಗೋಧಿ ಸೇವಗೆ (?)
ಅಮ್ಮಿಕಲ್ಲು – ಅರೆಯುವ ಕಲ್ಲು, ಅಸಿಕಲ್ಲು
ಅರೆವಲ – ಅರ್ಧಹಲ, ಒಂದೂವರೆ ರೂಪಾಯಿ ತೂಕ
ಅರೆವಲ – ಅರ್ಧಹಲ, ಒಂದೂವರೆ ರೂಪಾಯಿ ತೂಕ
ಅಳಗೆ – ಅಗಲವಾದ ಬಾಯುಳ್ಳ ದೊಡ್ಡ ಮಡಕೆ
ಅಳಿಗೆಂಡ – ಕಾವು ಕಡಮೆಯಾದ ಕೆಂಡ
ಕಗ್ಗುಂಬುಳ – ಬಲಿತ ಸಿಹಿ ಕುಂಬಳ
ಕಟುಕ – ಕಾರ
ಕಟ್ಟಾರು – ಬೇಯಿಸಿದ ಬಳಿಕ ದ್ರವವಾರು, ನೀರಾರು
ಕಡಿಯಕ್ಕಿ – ನುಚ್ಚಕ್ಕಿ, ಮೊನೆ ಮುರಿದ ಅಕ್ಕಿ
ಕಂದಲು – ಮಣ್ಣಿನ ಪಾತ್ರೆ, ಮಡಕೆ
ಕಂದುರಿ – (ತಾಂದೂರ – ಸಂ)ಒಂದು ವಿಧದ ಅವಿಯ ಪಾಕ
ಕನ್ನಡಿ ಎಲೆ – ಬಾಳೆ ಮೋತೆಯ ಎಲೆ
ಕಳಸಿಗೆ – ಬಾಯಿ ಅಗಲವಾದ ದೊಡ್ಡ ಪಾತ್ರೆ
ಕಳಿವದ – ಹಿಟ್ಟಿನ ಹದ
ಕಾರಗೆಣಸು – ಹಸಿಶುಂಟಿ
ಕುದುಪಲಕ್ಕಿ – ಬೆಂದ ಬತ್ತದ ಅಕ್ಕಿ, ಕುರುಬಲಕ್ಕಿ
ಕುಮ್ಮು – ಒನಕೆಯಿಂದ ಮೆದುವಾಗು ಕುಟ್ಟು
ಕುಯಿಕೀರೆ – ಒಂದು ವಿಧ ಕೀರೆಸೊಪ್ಪು
ಕೆಲಱಿಗೆ – ಪಕ್ಕಗಳಿಗೆ
ಗಹ್ವಲೆ – ಗೋಧಿ ರವೆಯ ಸೇವಿಗೆ
ಗೀಜು – ಸಿಪ್ಪೆಯ ಕೂಡ ಇರುವ ನಾರು
ಗುಳ್ಳ – ಒಂದು ವಿಧ ಬದನೆಯ ಕಾಯಿ
ಗೋಳಕ – ಕೆನೆ ತೆಗೆಯದೆ ಕಡೆದ ಮಜ್ಜಿಗೆ
ಚಕ್ಕವತ್ತ – ಚಕ್ಕೋತ, ಒಂದು ವಿಧ ಸೊಪ್ಪು
ಚಾತುರ್ಜಾತಕ – ಲವಂಗ ಚೆಕ್ಕೆ, ಲವಂತ ಪತ್ರೆ, ನಾಗಕೇಸರಿ, ಏಲಕ್ಕಿ ಈ ನಾಲ್ಕರ ಮಿಶ್ರಣ
ಚಿಂಚ ಕುಸುಮ – ಹಿಣಿಸೆಯ ಹೂ
ಚಿತ್ತಣಿ – ಹದಪಡಿಸು, ಸಣ್ಣ ಸಣ್ಣ ಚೂರುಮಾಡು (?)
ಬೊಟ್ಟೆ – ಚಿಪ್ಪು, ಚಿಪ್ಪಿನ ಸೌಟು
ತಂಗರಗ – ತಣ್ಣನೆಯ ಮಡಕೆ
ತಱುಪಿನೆಮ್ಮೆ – ಕರಾವು ಬಿಡಿಸಿಕೊಳ್ಳುವ ಸಮಯದ ಎಮ್ಮೆ
ತೆರಟುವಾಲು – ಖೋವದ ಹದಕ್ಕೆ ಕಾಯಿಸಿದ ಹಾಲು
ತೊಳಸು – ಸೌಟು ಮೊದಲಾದ ಸಾಧನಗಳಿಂದ ತಿರುಗಿಸು
ತ್ರಿಜಾತಕ – ದಾಲ್ಚಿನ್ನಿ, ಏಲಕ್ಕಿ, ಮಾಚಿ ಪತ್ರೆ ಈ ಮೂರರ ಮಿಶ್ರಣ
ದದ್ದು – ಒಡೆದ ಹಾಲಿನ ಗಟ್ಟಿ ಭಾಗ, ಹಾಲೊಡಪು
ನಡುಗಂತಿ – ಮಧ್ಯ ವಯಸ್ಸಿನ ಕರೆಯುವ ಹಸು (?) ಕರಾವಿನ ಮಧ್ಯಕಾಲ (?)
ನಱುವಲು – ಒಂದು ವಿಧ ಸೊಪ್ಪು
ನಾರಳದಂಟು – ಲಾಳದ ಕಡ್ಡಿ, ನಾರಳ ಕಡ್ಡಿ
ನಿದಾಘ – ಬೆಸಗೆ
ನೀರಶನ – ನೀರಿನೊಳಗೆ ಹಾಕಿರುವ ಅನ್ನ
ಪಂಚಧಾರೆ ಸಕ್ಕರೆ – ತವರಾಜ ಸಕ್ಕರೆ, ಒಂದು ವಿಧ ಉತ್ತಮವಾದ ಸಕ್ಕರೆ
ಪಳದ್ಯ (ಪಳದೆ) – ಮಜ್ಜಿಗೆ ಹುಳಿ
ಪುಲ್ಲಸೊಜ್ಜಿಗೆ – ದಪ್ಪ ರವೆ
ಪುಲ್ಲಿಗೆ – ಹೋಳಿಗೆ (ದ್ಭ)
ಪುಳ್ಗಿಯೋಗರ – ಹುಗ್ಗಿ, ಪೊಂಗಲು
ಬಕ್ಕೆ – ಒಂದು ಬಗೆ ಹಲಸು
ಬಾವನ್ನ – ಶ್ರೀಗಂಧ
ಬಿಳಿಯುಳ್ಳಿ – ಬೆಳ್ಳುಳ್ಳಿ
ಬೆಸಳಿಗೆ – ಅಗ್ಗಿಷ್ಟಿಕೆ, ಕೆಂಡವಿರುವ ಒಂದು ಪಾತ್ರೆ
ಬೆಳವಹಣ್ಣು – ಬಿಲ್ವಪತ್ರೆಯ ಹಣ್ಣು (?)
ಮರೆ – ಮಜ್ಜಿಗೆ ಇಡುವ ಮರದ ಪಾತ್ರೆ, ಮರಗೆ
ಮುತ್ತ – ಬಲಿತ, ವಯಸ್ಸಾದ
ವಡಿಸಣದೋಱು – ನೀರಾರಿಸು, ಬಸಿ
ಶಾಕವಂಗಿ – ಒಂದುವಿಧ ಅಡಿಗೆ
ಸದ್ಯೋಘೃತ – ಹೊಸಬೆಣ್ಣೆಯ ತುಪ್ಪ
ಸಂಪಳ – ದೋಸೆ ಹಿಟ್ಟಿನ ಹದಕ್ಕೆ ಕಲಸಿ ತಯಾರಿಸಿದ ಹಿಟ್ಟು, ಸಂಪಣ
ಸಿಡಿಯಳೆ – ತಿಳಿಮಜ್ಜಿಗೆ
ಸಿತಪಾಕ – ಸಕ್ಕರೆಯ ಪಾಕ
ಸಿಂಧು – ಮೂರು ಭಾಗ ಮೊಸರಿಗೆ ಒಂದು ಭಾಗ ನೀರು ಹಾಕಿ ಕಡೆದು ಬೆಣ್ಣೆ ತೆಗೆದ ಮಜ್ಜಿಗೆ
ಸೀಱುಮಣ್ಣು – ಮೆತ್ತಲು ಉಪಯೋಗಿಸುವ ತೆಳುವಾದ ಮಣ್ಣು
ಸೊಜ್ಜಿಗೆ – ರವೆ, ನುಚ್ಚು
ಹಡಲ – ಪಡವಲಕಾಯಿ
ಹನಿಹೊತ್ತು – ಬೆಳಗಿನ ಝಾವ
ಹರುಹೆ – ಕೀರೆಸೊಪ್ಪು
ಹಾರುಗೂಳು – ಬಿರಿಸಾದ ಅನ್ನ
ಹಾಸುಗಾಯ್‌ – ಉದ್ದುದ್ದಕ್ಕೆ ಸೀಳಿರುವ ಕಾಯಿ
ಹೂದಿಕ್ಕು – ತುರಿ
ಹೈತಿಗೆ – ಒಂದು ವಿಧ ಕಬ್ಬು
ಹೊಂಗು – ಉಕ್ಕು
ಹೊಳಚಿ – ಕತ್ತರಿಸಿ (?)