ಸಮ್ಯಕ್ತ್ವಕೌಮುದಿ

ಅವಧಿಜ್ಞಾನ – ಪೂರ್ವಾಪರ ಭವಗಳ ಜ್ಞಾನ.

ಆಶ್ಚರ್ಯ ಪಂಚಕಂ – ಸುರಪುಷ್ಪ ವೃಷ್ಟಿ, ಹೊಮ್ಮಳೆ, ಮಂದಾನಿಲ, ದೇವದುಂದುಭಿ, ಸುರರ ಅಹೋನಾದ

ಎಂಟುಕರ್ಮಂಗಳು – ಜ್ಞಾನಾವರಣೀಯ, ದರ್ಶನಾವರಣೀಯ, ವೇದನೀಯ, ಮೋಹನೀಯ, ಆಯುಷ್ಯ, ನಾಮ, ಗೋತ್ರ, ಅಂತರಾಯ.

ಎಂಟು ಗುಣಗಳು – ಸಮ್ಯಗ್‌ಜ್ಞಾನ, ಸಮ್ಯಗ್‌ದರ್ಶನ ಸಮ್ಯಕ್ಚಾರಿತ್ರ, ವೀರ್ಯ, ಸೂಕ್ಷ್ಮತ್ವ, ಅವಗಹನ, ಅಗುರುಲಘುತ್ವ, ಅವ್ಯಾಭಾಧ.

ಏಳು ಋದ್ದಿಗಳು – ಬುದ್ಧಿ, ತಪ, ವಿಕ್ರಿಯಾ, ಔಷಧ, ರಸ, ಬಲ ಅಕ್ಷೀಣ.

ಏಳು ತತ್ವಗಳು – ಜೀವ, ಅಜೀವ, ಅಸ್ರವ, ಬಂಧ, ಸಂವರ, ನಿರ್ಜರೆ, ಮೋಕ್ಷ.

ಏಳು ಭಯ – ಇಹಲೋಕ ಭಯ, ಪರಲೋಕ ಭಯ, ಅನುರಕ್ಷಕ ಭಯ, ಅಕಸ್ಮಾತ್‌ ಭಯ, ಮರಣ ಭಯ, ವೇದನಾಭಯ, ಅಗುಪ್ತಿ ಭಯ.

ಚಂದ್ರಗತಿ – ಮುನಿಗಳು ಉಪವಾಸಾಂತರದ ಪಾರಣೆಗೆಂದು ಬರುವಲ್ಲಿ ನಡೆವ ರೀತಿಗೆ ಚಂದ್ರಗತಿ ಎಂದು ಹೆಸರು.

ನವವಿಧ ಪದಾರ್ಥಗಳು – ಜೀವ, ಅಜೀವ, ಆಸ್ರವ, ಬಂಧ, ಸಂವರ, ನಿರ್ಜರೆ, ಮೋಕ್ಷ, ಪುಣ್ಯ, ಪಾಪ.

ಪಂಚಾಸ್ತಿಕಾಯ – ಧರ್ಮ, ಅಧರ್ಮ, ಕಾಲ, ಆಕಾಶ, ಪುದ್ಗಲ

ರತ್ನತ್ರಯ – ಸಮ್ಯಕ್‌ದರ್ಶನ ಸಮ್ಯಕ್‌ಜ್ಞಾನ, ಸಮ್ಯಕ್‌ ಚಾರಿತ್ರ.

 

ಜಯನೃಪಕಾವ್ಯ

ಅವಧಿಜ್ಞಾನ – ದ್ರವ್ಯ, ಕ್ಷೇತ್ರ, ಕಾಲ ಮತ್ತು ಭಾವ – ಇವುಗಳಿಂದ ಮರ್ಯಾದಿತವಾದ ಪದಾರ್ಥಗಳನ್ನು ಹಾಗೂ ಕರ್ಮಬದ್ಧಜೀವಿಗಳ ಭವಾಳಿಗಳನ್ನು ತಿಳಿದುಕೊಳ್ಳುವ ಜ್ಞಾನ.

ಉಪಸರ್ಗ – ತಪಸ್ಸಿನ ಏಕಾಗ್ರತೆಗೆ ದೇವ ನಾರಕ ತಿರ್ಯಕ್‌ ಮತ್ತು ಮನುಷ್ಯರಿಂದ ಉಂಟಾಗುವ ಹಿಂಸೆ ಹಾಗೂ ತೊಂದರೆ.

ಕಷಾಯ – ಆತ್ಮದ ಶುದ್ಧಚಾರಿತ್ರ್ಯ ಗುಣವನ್ನು ಮರೆಮಾಡುವ ಕರ್ಮ.

ಕಾಯೋತ್ಸರ್ಗ – ನಿಂತುಮಾಡುವ ತಪಸ್ಸು.

ಕಿಲ್ಬಿಷ – ಕಿಲ್ಬಿಷ ಎಂದರೆ ದೋಷ. ಘಾತಿ ಮತ್ತು ಅಘಾತಿಕರ್ಮಗಳನ್ನು ಕಿಲ್ಬಿಷವೆನ್ನುವರು.

ಕೇವಲಿ – ಜ್ಞಾನಾವರಣ, ದರ್ಶನಾವರಣ, ಅಂತರಾಯ ಮತ್ತು ಮೋಹನೀಯ ಕರ್ಮಗಳನ್ನು ನಾಶಪಡಿಸಿ ಅನಂತಜ್ಞಾನದರ್ಶನಸುಖವೀರ್ಯಗಳನ್ನು ಪಡೆದವನು.

ಗಂಧಕುಟಿ – ಸಮವಸರಣದಲ್ಲಿ ತೀರ್ಥಂಕರನು ಕುಳಿತು ಉಪದೇಶ ಮಾಡುವ ಮಂಟಪ.

ಚರಮಶರೀರಿ – ಕೊನೆಯ ದೇಹ, ಆ ದೇಹ ಬಿದ್ದಮೇಲೆ ತಿರುಗಿ ಹುಟ್ಟಿದೆ ಮುಕ್ತನಾಗುವನು.

ಚರಿಗೆ – ಜೈನಮುನಿ ಭಿಕ್ಷೆಗೆ ಹೋಗುವುದು

ಜಿನಪತಿ – ಅಷ್ಟಕರ್ಮಗಳನ್ನು ಧ್ವಂಸಮಾಡಿ ಅನಂತಚುಷ್ಟಯ ಪಡೆದ ಜೀವ.

ನಿರ್ಜರೆ – ಜೀವಕ್ಕೆ ಹರಿದು ಬರುವ ಕರ್ಮ ಕಳಚಿಬೀಳುವುದು.

ಭವ್ಯ – ಮುಂದೆ ಸಿದ್ಧಿಪಡೆಯುವ ಸಾಮರ್ಥ್ಯವನ್ನು ಹೊಂದಿರುವವರು.

ಸಮವಸರಣ – ಕೇವಲಜ್ಞಾನೋತ್ಪತ್ತಿಯಾದ ಮೇಲೆ ತೀರ್ಥಂಕರನು ಧರ್ಮೋಪದೇಶ ಮಾಡುವುದಕ್ಕಾಗಿ ದೇವೇಂದ್ರನ ಅಪ್ಪಣೆಯಂತೆ ಕುಬೇರನು ನಿರ್ಮಿಸಿದ ಮಂಟಪ.