ನನಗೆ ಮದುವಾಗಿ ಒಂಭತ್ತು ವರ್ಷ. ಇಬ್ಬರು ಮಕ್ಕಳು, ವಯಸ್ಸು ಎಂಟು, ಆರು. ಇಬ್ಬರೂ ಶಾಲೆಗೆ ಹೋಗುತ್ತಿದ್ದು ಓದಿನಲ್ಲಿ ಹಿಂದುಳಿದಿದ್ದಾರೆ. ಅವರ ಮೆದುಳ ಬೆಳವಣಿಗೆ ಸಮರ್ಪಕವಾಗಿಲ್ಲ. ಅವರಲ್ಲಿ ಬುದ್ಧಿಮಾಂದ್ಯತೆ ಇದೆ, ಮನೋವೈದ್ಯರಿಗೆ ತೋರಿಸಿ ಎಂದು ಟೀಚರ್ ನಮಗೆ ಸಲಹೆ ಇತ್ತಿದ್ದಾರೆ. ನಾನು, ಯಜಮಾರು ಆರೋಗ್ಯವಂತರಾಗಿದ್ದು, ನಮ್ಮ ಫ್ಯಾಮಿಲಿಯಲ್ಲಿ ಯಾರಿಗೂ ಮಾನಸಿಕ ಕಾಯಿಲೆ ಇಲ್ಲ. ನಮ್ಮ ಮಕ್ಕಳ ಈ ಸ್ಥಿತಿಗೆ ಕಾರಣವೇನು?

ಹುಡುಗರ ಪರೀಕ್ಷೆ ಮಾಡದೆ ಬುದ್ಧಿಮಾಂದ್ಯತೆ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಉಪಾಧ್ಯಾಯಿನಿ ಸಲಹೆ ಇತ್ತ ಹಾಗೆ ನಿಮ್ಮ ಸಮೀಪದ ಮನೊವೈದ್ಯರಲ್ಲಿ ಕರೆದುಕೊಂಡು ಹೋಗಿ ನಿಮ್ಮ ಮಕ್ಕಳ ಪರೀಕ್ಷೆ ಮಾಡಿಸಿದರೆ ಒಳಿತು. ದಯವಿಟ್ಟು ಗಮನದಲ್ಲಿಡಿ. ಮಕ್ಕಳಲ್ಲಿನ ಬುದ್ಧಿಮಾಂದ್ಯತೆಯನ್ನು ಗಮನಿಸಲು ಉಪಾಧ್ಯಾಯರೇ ಅತ್ಯಂತ ಸೂಕ್ತ ಸಾಧನ. ದಿನಕ್ಕೆ ಕನಿಷ್ಠ ಆರರಿಂದ ಎಂಟು ಗಂಟೆ ಕಾಲ ವಿದ್ಯರ್ಥಿಗಳೊಂದಿಗೆ ಒಡನಾಡುವ ಉಪಾಧ್ಯಾಯನಿಗೆ ಅವರ ಬುದ್ಧಿಶಕ್ತಿ ಬಗ್ಗೆ ಖಚಿತವಾಗಿ ತಿಳಿದುಕೊಳ್ಳುವ ಅವಕಾಶವಿರುತ್ತದೆ. ನಿಮ್ಮ ಮಕ್ಕಳಿಗೆ ಬುದ್ಧಿಮಾಂದ್ಯರೆಂದು ಹಣೆಪಟ್ಟಿ ಕಟ್ಟಲು ಉಪಾಧ್ಯಾಯರಿಗೆ ಸ್ವಾರ್ಥಸಾಧನೆ ಏನೂ ಇಲ್ಲ. ಅವರು ತಮಗೆ ಅನ್ನಿಸಿದ್ದನ್ನು ಪ್ರಾಮಾಣಿಕವಾಗಿ ನಿಮಗೆ ತಿಳಿಸಿದ್ದಾರಷ್ಟೇ. ಬುದ್ಧಿಮಾಂದ್ಯತೆ ಉಂಟಾಗಲು ಸಾಮಾನ್ಯ ಕಾರಣ.

ಮೆದುಳಿನ ಬೆಳವಣಿಗೆಯಲ್ಲಿನ ದೋಷ

ಭ್ರೂಣಾವಸ್ಥೆಯಲ್ಲಿ ಮಗುವಿನ ಮೆದುಳಿಗೆ ಆಘಾತವಾಗುವ ಸಾಧ್ಯತೆಯುಂಟು. ಪ್ರಸವದ ಸಮಯದಲ್ಲಿ ಹಾಗೂ ಹೆರಿಗೆಯಾದ ನಂತರ ಬಾಲ್ಯದ ಮೊದಲ ಮೂರರಿಂದ ಆರು ತಿಂಗಳೊಳಗೆ ಮೆದುಳನ್ನು ದುರ್ಬಲ ಮಾಡುವ ಕೆಲವು ಖಾಯಿಲೆಗಳಿಂದಲೂ ಬುದ್ಧಿಮಾಂದ್ಯ ಉಂಟಾಗಬಹುದು.

ಕೆಳಗಿನ ವರ್ಗೀಕರಣ ಹೆಚ್ಚಿನ ಮಾಹಿತಿ ನೀಡಲು ಕಾರಣಗಳು.

ತಾಯಿಯ ಬಸಿರಿನಲ್ಲಿ ಉಂಟಾಗುವ ಕಾರಣಗಳು.

ವಂಶವಾಹಿನಿಯ ಮಾರ್ಪಾಡು ಸ್ವಸಂಬಂಧಿ ವಿವಾಹದಿಂದ ವಂಶವಾಹಿನಿಗಳು ಮುಕ್ಕಾಗಿ ಬುದ್ಧಿಮಾಂದ್ಯ ಎರಡು ಅಥವಾ ಮೂರು ತಲೆಯಮಾರಿನ ನಂತರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ, ಲೈಂಗಿಕ ಕೊಂಡಿ ಇರುವ ವಂಶವಾಹಿನಿಗಳು ದೋಷಪೂರಿತವಾಗಿದ್ದರೆ, ಗಂಡು ಮಕ್ಕಳು ಮಾತ್ರ ರೋಗದಿಂದ ನರಳಿ ಹೆಣ್ಣು ಮಕ್ಕಳು ಕೇವಲ ಈ ರೋಗದ ವಾಹಕರಾಗುತ್ತಾರೆ. ಪ್ರತಿಯೊಂದು ಬೀಜಾಣುವಿನಲ್ಲೂ ಇಪ್ಪತ್ತೆರಡು ಜೊತೆ ವರ್ಣತಂತುವಿರುತ್ತದೆ. ಇವುಗಳ ಸಂಖ್ಯೆಯಲ್ಲಿ ಏರುಪೇರಾದರೂ, ಅಥವಾ ವರ್ಣತಂತುಗಳ ವೇದನೆಯಿಂದಲೂ ಬುದ್ಧಿಮಾಂದ್ಯ ಕಾಣಿಸಿಕೊಳ್ಳಬಹುದು.

ತಾಯಿ ಗರ್ಭವತಿಯಾದ ಮೊದಲ ಮೂರು ತಿಂಗಳಲ್ಲಿ ತಾಯಿಗೆ ಸಿಡುಬು, ವೈರಸ್ ಬೇನೆ, ಧಡಾರ, ಅಮ್ಮ, ಜರ್ಮನ್ ಮಿಸಲ್ಸ್ ಮುಂತಾದ ಖಾಯಿಲೆಗಳು ಭ್ರೂಣದ ಮೆದುಳಿಗೆ ಆಘಾತ ಉಂಟು ಮಾಡುತ್ತದೆ.

ಗರ್ಭ ನಿರೋಧಕ ಮಾತ್ರೆಗಳ ಸೇವನೆ, ಗರ್ಭಧಾರಣೆಯ ಪರೀಕ್ಷೆಗೆಂದು ಕೆಲವು ಔಷಧಿಗಳ ಸೇವನೆ.

ಸಸಾರಜನಕ ಪೌಷ್ಠಿಕಾಂಶದ ಕೊರತೆ.

ಗರ್ಭಧಾರಣೆಯ ವಿಷಮ ಸ್ಥಿತಿ.

ಗರ್ಭಿಣಿಯರಲ್ಲಿ ಅನವಶ್ಯಕವಾದ ಕ್ಷ-ಕಿರಣ ಪರೀಕ್ಷೆ ಹಾಗೂ ಗರ್ಭಕೋಶಕ್ಕೆ ಪೆಟ್ಟು.

ಪ್ರಸವಕಾಲದ ಕಾರಣ: ಮಗು ಹುಟ್ಟಿದ ಕೂಡಲೆ ಅಳುವುದು ಪ್ರಕೃತಿ ಸಹಜ ನಿಯಮ. ಮಗುವಿನ ದೈಹಿಕ ಹಾಗೂ ಮೆದುಳಿನ ಬೆಳವಣಿಗೆ ಸಮರ್ಪಕವಾಗಿ ಆಗಿದೆ, ಮೆದುಳಿನಲ್ಲಿ ರಕ್ತದ ಚಲನೆ ಸಮಾಧಾನಕಾರಿಯಾಗಿದೆ ಎಂದು ಸೂಚಿಸುವ ಮುಖ್ಯವಾದ ಹಂತ. ಮಗು ಹುಟ್ಟಿದ ಕೂಡಲೇ ಅಳದಿದ್ದಲ್ಲಿ ಮೆದುಳಿನ ಜೀವಾಣುಗಳಿಗೆ ಆಮ್ಲಜನಕ ದೊರೆಯದೆ ಧಕ್ಕೆಯಾಗುವ ಸಾಧ್ಯತೆಯುಂಟು. ಇದನ್ನು ಜನನ ಕಾಲದ ಆಘಾತ ಎಂದು ಕರೆಯಬಹುದು. ಮಗು ನೀಲಿ ಬಣ್ಣದಿಂದ ಪ್ರಕಟವಾಗುತ್ತದೆ. ಮಗುವಿನಲ್ಲಿ ಮುಂದೆ ಕಾಣಿಸಿಕೊಳ್ಳಬಹುದಾದ ಅಪಸ್ಮಾರ ಬೇನೆಗೆ ಇದೇ ಕಾರಣ.

ಪ್ರಥಮ ಹೆರಿಗೆ ಹಲವಾರು ಗಂಟೆಗಳ ಕಾಲ ಮುಂದುವರೆಯದಿರುವಿಕೆ. ಹಾಗೂ ಅನುಭವವಿಲ್ಲದವರು ಇಕ್ಕಳದಿಂದ ಮಾಡಿಸುವ ಹೆರಿಗೆ.

ಪೂರ್ಣಾವಧಿ ತುಂಬದೆ ಹುಟ್ಟುವ ಮಕ್ಕಳು, ಹುಟ್ಟುವಾಗ ಮಗುವಿಗೆ ಕಾಮಾಲೆ, ಅಥವಾ ನೀಲವರ್ಣವಿರಬಹುದು.

ತಂದೆತಾಯಿಯರ ರಕ್ತದ ಗುಂಪಿನಲ್ಲಿ ಆರ್‌.ಹೆಚ್ ಘಟಕದ ಹೊಂದಾಣಿಕೆ ಇಲ್ಲದಿದ್ದರೆ ಹಾಗೂ ಮಗುವಿನ ರಕ್ತದಲ್ಲಿ ಸಕ್ಕರೆ ಅಂಶದ ಕೊರತೆ.

ಮಗವಿನ ಬಾಲ್ಯ: ಮೆದುಳು ಜ್ವರ, ಮೆದುಳು ಹಾಗೂ ಮೆದುಳಿನ ಪದರಿಜನ ಜ್ವರದಲ್ಲಿ ಕ್ರಿಮಿಗಳು ಸೇರಿಕೊಂಡು ಮೆದುಳಿನ ಸುತ್ತಲೂ ಕೀವು ಪಸರಿಸಿಕೊಂಡು ಮೆದುಳಿಗೆ ಆಘಾತವಾಗುವ ಸಾಧ್ಯತೆ.

ಮಗುವಿನ ತಲೆಗೆ ಪೆಟ್ಟಾದಲ್ಲಿ ಥೆರೋಕ್ಸಿನ್ ರಸಸ್ರಾವದ ಕೊರತೆ.

ಪೌಷ್ಠಿಕಾಂಶ ಮತ್ತು ಐಯೋಡಿನ್ ಕೊರತೆ.