ಎದ್ದೇಳು! ಎದ್ದೇಳು!

ಬಿದ್ದಿರುವೆ ಏಕೆ?
ನಿದ್ದೆಯಿಂದೆದ್ದೇಳು
ಮೊದ್ದುತನವೇಕೆ?

ಭಯರಹಿತ ನೀನು,
ಲಯರಹಿತ ನೀನು!
ಬದ್ದಾತ್ಮನಲ್ಲ,
ಶುದ್ಧಾತ್ಮ ನೀನು!

ದಾಸ ನೀನಲ್ಲ;
ಈಶನೋ ನೀನು!
ಮೂಷಿಕವು ಅಲ್ಲ,
ಕೇಸರಿಯು ನೀನು!

ಪಾಪ ನಿನಗಲ್ಲ,
ಪುಣ್ಯ ನಿನಗಲ್ಲ;
ಎಲ್ಲವನು ಮೀರ —
ಬಲ್ಲೆ ನೀ ಧೀರ!