ನಗು, ನಗು, ನಗು,

ಓ ಮುದ್ದು ಮಗೂ!
ಮೊಗ್ಗು ಮೊಗದ ನೀನು ನಗೆ
ಹೂವು ಕಣಾ ಜಗದ ಹಗೆ :
ಎದೆಯ ಕಿಚ್ಚು ಮನದ ಹೊಗೆ
ಎಲ್ಲ ತೊಲಗಿ ಜೀವ ಬೆಳಗಿ
ಮುಗಿಲಿಲ್ಲದ ತಿಳಿಬಾನಿನ
ನೀಲಿಯಹುದು ಬಾಳ ಬಗೆ!
ನಗು, ನಗು, ನಗು,
ಓ ಮುದ್ದು ಮಗೂ!