ಮೇಲು ಮಂಟಪದಲ್ಲಿ ನೋಡಣ್ಣಾ |
ಪಾಲಾಕ ಪರಬ್ರಹ್ಮ ತನ್ನೊಳಿಹನು
ಕಾಣಾಣ್ಣ | ಕೀಳು ಮೇಲು ಮಾಡತಾರಣ್ಣ
ಮೇಲೆ ಮಾಡುತಾಯ್ತು | ಗಾಳಿ ಗೋಪುರ
ಗಗನದಲ್ಲಿ ಬಾಲಿ ಕೃಷ್ಣನ ಲೀಲೆಯಲ್ಲಿ || ಮೇ ||

ಎಷ್ಟು ದಿನ ಎಲ್ಲಿದ್ಯಾರೇನಣ್ಣಾ | ಈ ಲೋಕದೊಳಗೆ
ಕಷ್ಟವಾಯು ತಿಳಿಯೋ ನಮ್ಮಣ್ಣಾ
ಅನ್ಸಾವಳದ ಕಮಲದಲ್ಲಿ ಇಸ್ಯಲಿಂಗನ
ಕೋಣೆಯಲ್ಲಿ ಮುಟ್ಟಿ ಪುಜಿಯ ಮಾಡುವನ್ನು
ಯೋಗ ಹಠವ ಸಾಧಿಸಣ್ಣಾ || ಮೇ ||

ವ್ಯಾನ ದ್ಯಾನ ಪ್ರಾಣ ಆಪಾನ ಸಾಮನ್ಯರೊ |
ನಿನ್ನೆ ಒಳಗೆ ಇಹರು ನೋಡಣ್ಣಾ |
ವ್ಯಾನ ದ್ಯಾನ ಪ್ರಾಣ ಆಪಾನ ಸಾಮನ್ಯರೊ ||
ನಿನೆ ಒಳಗೆ ಇಹರು ನೋಡಣ್ಣಾ |
ಪ್ರಾಣನಾಥನ ಪಟ್ಣದಲ್ಲಿ ಪ್ರಜ್ಞೆ ಇರುವ
ಜ್ಞಾನದಲ್ಲಿ | ನಾನು ನೀನೆಂಬ ಭೇದವು
ಏನೋ ಕಾರಣ ಒಂಡೀತಣ್ಣಾ || ಮೇ ||

ಯೋಗ ಉಂಟನ್ನು ನೋಡ್ಯ
ಬೇಡಣ್ಣಾ | ನಿಗುಣ ರಾಜ | ಯೋಗಿ
ತನ್ನೊಳು ಇಂತನು ಕಾಣದಲ್ಲಿ | ನಾಗ ಕೂರ್ಮ
ದೇವುದನುಜ ಯಾರಿರುವರಣ್ಣಾ | ಬಾನಿಲು
ಒಂಬತ್ತು ಮುಟ್ಟಿ ಧೋಗಿ ಸಯದ ಸೇವಿಸಣ್ಣ ||
|| ಮೇಲು || ಜೀವಸ್ಥಾನ ಯಾವುದೊಳಣ್ಣಾ
ನಿನ್ನೊಳಗೆ ಇರುವ ಜೀವನಾರೆ ಎಲ್ಲಿ ಇಂತ್ರವಣ್ಣಾ
ಜೀವ ಶಿವರಿಬ್ಬರಿಗೂ ಸರ್ವಸಾಕ್ಷಿ
ಬಲ್ಲಿರಣ್ಣಾ | ಜೀವ ಶಿವರೈಕ್ಯಗುವ
ಸ್ಥಾನವೆ ಬಾಲು ಗೋವಸ್ವಣ್ಣಾ || ಮೇಲು ||

ಜ್ಞಾನವಂತನಾಗಬೇಕಣ್ಣಾ ಕೇಳಣ್ಣಾ
ಕೇಳು ಜ್ಞಾನವನ್ನು ಖಂಡಿಸಲು ಚೀರಣ್ಣಾ |
ಜ್ಞಾನವೆಂಬೋ ಖಂಡಿಸಲು ಅಜ್ಞಾನವೆಂಬೋ
ಕುರಿಯ ಕಡಿದು ಜ್ಞಾನ ಗುರುವಿನ ಪಾದ
ಪಿಡಿದು ತಾನು ಧಾನ್ಯನಾಗೆ ಬೇಕು || ಮೇಲು ||

ಕರ್ಮ ಕತ್ತಲೆ ಅಳಿಯ
ಬೇಕಣ್ಣಾ ಹರಿಭಕ್ತನಾದರೇ ಗುರು ಪೂಜೆ
ಮಾಡಬೇಕಣ್ಣಾ ಗುರುವ ಪೂಜೆ ಮಾಡಬೇಕು
ಗುರಿಕ ತನ್ನೊಳು ಇರಿಸಬೇಕು ಅರಿವತೋರಿದ
ಗುರುವು ಕಂಡರೆ ಮರೆಯದಿರುವುದ
ಮರ್ಮವಣ್ಣಾ || ಮೇಲು ||

* * *

ಹರಿಯ ದಾಸ ಸಂಘ ದೋರಕೀತು ಯನಗೀಗ
ಇನ್ನೇನು ಇನ್ನೇನು | ವರ ಗುರು ಉಪದೇಶ ನೆರ
ವಾಯ್ತು ಯನಗೀಗಾ ಇನ್ನೇನು ಇನ್ನೇನು || ಪ ||

ಮಾಯ ಸಂಸಾರದ | ಮಮಕಾರ ಬಿಡಿಸಿದಾ
ಇನ್ನೇನು ಇನ್ನೇನು ತೋರಿಯಜ್ಞಕ್ಷನ ಧ್ಯಾನ
ಹೃದಯದೊಳ್ ನೆಲೆನೀತು ಇನ್ನೇನು ಇನ್ನೇನು

ಹಲವು ದೈಯಗಳೆಂಬ ಹಂಬಲ ಬಿಡಿಸಿತೋ
ಇನ್ನೇನು ಇನ್ನೇನು | ಜಲ ಜನಾರ್ದನ ನಾಮ ಜಪ್ವೆ
ಯೊಳ್ ನೆಲಸಿತು ಇನ್ನೇನೂ ಇನ್ನೇನು

ತಂದೆ ತಾಯಿ ಮುಕುಂದ ವರದನು ಆದಾ ಇನ್ನೇನು
ಇನ್ನೇನು | ಸ್ವರಿದೇಂಕವಿಲ್ಲ ಮುಕುಂದಾ
ದಯಮಾಡಿದಾ ಇನ್ನೇನು ಇನ್ನೇನು

ಎನೆಂದು ಹೇಳಲಿ ಆನಂದ ಸಂಭ್ರಮ ಇನ್ನೇನು
ಇನ್ನೇನು ಎನ್ನೆ ವಂಶಗಳೆಲ್ಲ ವಿದಿಲಯಯ್ವ
ದೊರಕಿದಾ ಇನ್ನೇನು ಇನ್ನೇನು