ಪ್ರಮುಖಘಟನಾವಳಿಗಳು:
1506: ಕ್ರಿಸ್ಟೋಫರ್ ಕೊಲಂಬಸ್ ತನ್ನ ಮಗನಾದ ಡಿಯಾಗೋನನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿದರು.
1662: ಇಂಗ್ಲೆಂಡಿನ ಏಕರೂಪತೆಯ ಕಾರ್ಯವು ಜಾರಿಗೆ ಬಂದಿತು.
1848: ಮೊದಲ ಡಿಪಾರ್ಟ್ ಮೆಂಟಲ್ ಸ್ಟೋರ್ ಕಾರ್ಯಾರಂಭ ಮಾಡಿತು.
1857: ವಿಲಿಯಂ ಫ್ರಾನ್ಸಿಸ್ ಚಾನಿಂಗ್ ಮತ್ತು ಮೊಸೆಸ್ ಜಿ ಫಾರ್ಮರ್ ವಿದ್ಯುತ್ ಬೆಂಕಿ ಅಲಾರಾಂಗೆ ಪೇಟೆಂಟ್ ಪಡೆದರು.
1885: ಪಾದರಕ್ಷೆಗಳ ಸಾಮೂಹಿಕ ಉತ್ಪಾದನೆ ಆರಂಭಿಸಲಾಯಿತು.
1892: ಚಾರ್ಲ್ಸ್ ಬ್ರಾಡಿ ನ್ಯೂಮಾಟಿಕ್ ಸುತ್ತಿಗೆಯನ್ನು ಕಂಡುಹಿಡಿದರು.
1892: ಅಮೇರಿಕಾದ ವಸಾಹತು ಶಾಹಿ ಡೇಮ್ಸ್ ರಾಷ್ಟ್ರೀಯ ಸೊಸೈಟಿಯು ಸ್ಥಾಪನೆಯಾಯಿತು.
1896: ಕಾರ್ಲ್ ಬೆನ್ಜ್ ಕಂಡುಹಿಡಿದ ಮೊದಲ ಆಟೋ ನೆದರ್ಲ್ಯಾಂಡ್ ನಲ್ಲಿ ಚಾಲನೆಯಾಯಿತು.
1898: ಅಮೇರಿಕಾದ ಕಾಂಗ್ರೆಸ್ ಖಾಸಗೀ ಮೈಲಿಂಗ್ ಆಕ್ಟ್ ಅನ್ನು ರವಾನಿಸುತ್ತದೆ. ಈ ಕಾಯ್ದೆಯಲ್ಲಿ ಖಾಸಗೀ ಪ್ರಕಾಶಕರು ಮತ್ತು ಪ್ರಿಂಟರ್ ಗಳು ಈ ಪೋಸ್ಟ್ ಕಾರ್ಡ್‌ಗಳನ್ನು ತಯಾರಿಸಲು ಅನುವು ನೀಡುತ್ತದೆ.ಆದರೆ 1901ರವರೆಗೆ ಈ ಪೋಸ್ಟ್ ಕಾರ್ಡ್‌ಗಳ ಮೇಲೆ “ಖಾಸಗಿ ಅಂಚೆ ಕಾರ್ಡ್” ಮುದ್ರಿಸಬೇಕಿತ್ತು.ನಂತರ ಇದನ್ನು “ಸೌವೆನಿರ್ ಕಾರ್ಡ್” ಎಂದು ಬದಲಾಯಿಸಲಾಯಿತು.
1900: ವಿಶ್ವದ ಅತ್ಯಂತ ಉದ್ದವಾದ ರೈಲು ಸುರಂಗ ತರೆಯಲಾಯಿತು. ಈ ಸುರಂಗ ಇಟಲಿ ಮತ್ತು ಸ್ವಿಜರ್ಲ್ಯಾಂಡ್ ಸಂಪರ್ಕಿಸುತ್ತದೆ.
1910: ಹಾಲಿ ಕಾಮೆಟ್ ಬಾಲದ ಮೂಲಕ ಭೂವಿಯು ಹಾದು ಹೋಯಿತು.
1928: ಮೊದಲ ಕಪ್ಪೆ ಜಿಗಿತ ಮಹೋತ್ಸವದ ಮೊದಲ ವಾರ್ಷಿಕೋತ್ಸವದಲ್ಲಿ 51 ಕಪ್ಪೆಗಳು ಪಾಲ್ಗೊಂಡಿದ್ದವು.
1930: ದಕ್ಷಿಣ ಆಫ್ರಿಕಾದಲ್ಲಿ ಬಿಳಿ ಮಹಿಳೆಯರು (ವೈಟ್ ವುಮೆನ್) ಮತದಾನದ ಹಕ್ಕನ್ನು ಪಡೆದರು.
1939: ಚರ್ಚಿಲ್ ಬ್ರಿಟಿಷ್-ರಷ್ಯಾ ನಾಝಿ ವಿರೋಧಿ ಒಪ್ಪಂದಕ್ಕೆ ಸಹಿ ಹಾಕಿದರು.
1940: ಆಂಸ್ಟರ್ ಡ್ಯಾಮ್ ಸಮಯವನ್ನು ಮಧ್ಯ ಯೂರೋಪಿನ ಸಮಯವೇ ಆಗಿ ಮಾನ್ಯ ಮಾಡಲಾಯಿತು.
1950: ನ್ಯೂಯಾರ್ಕ್ ಟೈಮ್ಸ್ ಪ್ರಪಂಚದ ಅತಿ ಚಿಕ್ಕ ಮತ್ತು ಮೂರ್ಖ ಯಾಂತ್ರಿಕ ಮೆದುಳಿನ ವರದಿ ಮಾಡಿತ್ತು.
1959: ಎರಡು ಪರಮಾಣು ರಿಯಾಕ್ಟರ್ ಹೊಂದಿದ್ದ ಮೊದಲ ಜಲಾಂತರ್ಗಾಮಿ “ಯು ಎಸ್ ಎಸ್ ಟ್ರಿಟಾನ್” ನಿರ್ಮಾಣ ಪೂರ್ಣವಾಯಿತು.
1964: ಯು ಎಸ್ ರಾಜತಾಂತ್ರಿಕರು ಮಾಸ್ಕೋ ದೂತಾವಾಸದಲ್ಲಿ ಗುಪ್ತಚಾರಿಕೆ ಉದ್ದೇಶದ ಕನಿಷ್ಠ 40 ರಹಸ್ಯ ಮೈಕ್ರೋಫೋನ್ ಗಳನ್ನು ಕಂಡುಹಿಡಿದರು.
1968: ಉತ್ತರ ಇಂಗ್ಲೆಂಡಿನಲ್ಲಿ ಮೊದಲ ಬಾರಿ ಪೈರೇಟ್ ರೇಡಿಯೋ ಕೇಳಿಸಿತು.
1971: ರಷ್ಯಾ “ಮಾರ್ಸ್ 2” ಮೊದಲ ಬಾಹ್ಯಾಕಾಶನೌಕೆ ಮಂಗಳ ಗ್ರಹದ ಮೇಲೆ ಕುಸಿಯಿತು.
1976: ಚಿನ್ನದ ಮಾಲೀಕತ್ವವನ್ನು ಆಸ್ಟ್ರೇಲಿಯಾದಲ್ಲಿ ಕಾನೂನುಬದ್ಧಗೊಳಿಸಲಾಯಿತು.
1983: ನಾಸಾ ಇಂಟೆಲ್ ಸಾಟ್ 5 ಉಪಗ್ರಹವನ್ನು ಹಾರಿಸಿತು.
1987: ಅಮೇರಿಕಾದ ಮೊದಲ ಹಾಸ್ಯ ಪ್ರಶಸ್ತಿಯನ್ನು ಜಾನಿ ಕಾರ್ಸನ್ ಮತ್ತು ಬೆಟ್ಟಿ ವೈಟ್‌ಗೆ ನೀಡಿತು.
ಪ್ರಮುಖಜನನ/ಮರಣ:
1839: ಟಾಟಾ ಸಂಸ್ಥೆಯ ಸಂಸ್ಥಾಪಕಾದ ಜಂಷೆಡ್ಟಾಟಾ ಜನಿಸಿದರು.
2008: ಭಾರತೀಯ ನಾಟಕಕಾರ ಮತ್ತು ಚಿತ್ರಕಥೆಗಾರ ವಿಜಯ್ ತೆಂಡುಲ್ಕರ್ ನಿಧನರಾದರು.
1910: ಗಾಂಧೀಜಿ ಹತ್ಯೆಗೈದ ನಾಥೂರಾಂ ಗೋಡ್ಸೆ ಜನಿಸಿದರು.
1938: ಹಿರಿಯರಂಗಕರ್ಮಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ ಕಾರ್ನಾಡ ಅವರು ಜನಿಸಿದರು.
1947: ಹಿರಿಯ ಚಲನಚಿತ್ರ ನಟ ಲೋಕೇಶ್ ಅವರು ಜನಿಸಿದರು.