Categories
e-ದಿನ

ಮೇ-24

ಪ್ರಮುಖಘಟನಾವಳಿಗಳು:

1543: ನಿಕೋಲಾಸ್ ಕಾಪರ್ನಿಕಸ್ ಖಗೋಳಶಾಸ್ತ್ರಜ್ಞ ಸೂರ್ಯ ಕೇಂದ್ರಿತ ಬ್ರಹ್ಮಾಂಡದ ಪುರಾವೆಯನ್ನು ಪ್ರಕಟಿಸಿದರು.

1830: ಸಾರಾ ಜೋಸೆಫ್ ಹೇಲ್ ಬರೆದ ಮಕ್ಕಳ ಪದ್ಯವಾದ “ಮೇರಿ ಹಾಡ್ ಅ ಲಿಟಲ್ ಲ್ಯಾಂಬ್” ಪದ್ಯ ಪ್ರಕಟಿಸಿದರು.

1830: ಅಮೇರಿಕಾದ ಮೊದಲ ಪ್ರಯಾಣಿಕ ರೈಲು ಸೇವೆ ಆರಂಭಿಸಲಾಯಿತು.

1832: ಲಂಡನ್ನಿನ ಸಮ್ಮೇಳನದಲ್ಲಿ ಗ್ರೀಸ್ನ ಮೊದಲ ಸಾಮ್ರಾಜ್ಯವನ್ನು ಘೋಷಿಸಲಾಯಿತು.

1844: ವಿಶ್ವದ ಮೊದಲ ಟೆಲಿಗ್ರಾಫ್ ಸಂದೇಶ ರವಾನಿಸಲಾಗಿತ್ತು.

1883: 14 ವರ್ಷಗಳ ಸುಧೀರ್ಘ ನಿರ್ಮಾಣದ ನಂತರ ನ್ಯೂಯಾರ್ಕಿನ ಬ್ರೂಕ್ಲಿನ್ ಬ್ರಿಡ್ಜ್ ಅನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

1899: ವಾಹನಗಳನ್ನು ದುರಸ್ತಿ ಮಾಡುವ ಅಂಗಡಿಯನ್ನು ಬಾಸ್ಟನ್‌ನಲ್ಲಿ ತೆರೆಯಲಾಗಿತ್ತು.

1915: ದೂರವಾಣಿ ಸಂಭಾಷಣೆಗಳನ್ನು ನಮೂದಿಸಲು/ದಾಖಲಿಸಲು “ಟೆಲಿಸ್ಕ್ರೈಬ್” ನ್ನು ವಿಜ್ಞಾನಿ ಥಾಮಸ್ ಕಂಡು ಹಿಡಿದರು.

1931: ಮೊದಲ ಹವಾ ನಿಯಂತ್ರಿತ ರೈಲನ್ನು ಬಿ&ಓ ರೈಲ್ ರೋಡಿನಲ್ಲಿ ಸ್ಥಾಪಿಸಲಾಯಿತು.

1940: ಇಗೋರ್ ಸಿಕೊರ್ಸ್ಕಿ ಮೊದಲ ಯಶಸ್ವಿ ಏಕ ರೋಟರ್ ಹೆಲಿಕಾಪ್ಟರ್ ವಿಮಾನವನ್ನು ನಿರ್ವಹಿಸಿದ್ದರು.

1954: ವೈಟ್ ಸ್ಯಾಂಡ್ಸ್ ಇಂದ ಹಾರಿಸಿದ್ದ ಮೊದಲ ರಾಕೆಟ್ 150 ಮೈಲಿ (241 ಕಿಲೋ ಮೀಟರ್) ಎತ್ತರ ತಲುಪಿತ್ತು.

1954: ಜರ್ಮನಿಯ ವಿಮಾನ ಸಂಸ್ಥೆಯಾದ ಲುಫ್ತಾಂನ್ಸಾ ಸ್ಥಾಪಿಸಲಾಯಿತು.

1954: ಐಬಿಎಂ ಸಂಸ್ಥೆ ನಿರ್ವಾತ ಕೊಳವೆ (ವ್ಯಾಕ್ಯುಂ ಟ್ಯೂಬ್)ಯನ್ನು ಪ್ರಕಟಿಸಿತು. ಇದು ವಿದ್ಯುಜ್ಜನಿತ ಮಿದುಳಿನಂತಿದ್ದು, ಗಂಟೆಗೆ 10 ಮಿಲಿಯನ್ ದತ್ತಾಂಶಗಳನ್ನು ನಿರ್ವಹಿಸುತ್ತದೆ ಎಂದು ಘೋಷಿಸಿದ್ದರು.

1958: ಯುನೈಟೆಡ್ ಪ್ರೆಸ್ ಮತ್ತು ಇಂಟರ್ ನ್ಯಾಷನಲ್ ನ್ಯೂಸ್ ಸರ್ವೀಸ್ ವಿಲೀನಗೊಂಡು ಯುನೈಟೆಡ್ ಪ್ರೆಸ್ ಇಂಟರ್ ನ್ಯಾಷನಲ್ ಆಗಿ ಮಾರ್ಪಾಡಾಯಿತು.

1976: ಮೊದಲ ವಾಣಿಜ್ಯ ವಿಮಾನ ಉತ್ತರ ಅಮೇರಿಕಾಗೆ ಸಂಚಾರ ಆರಂಭಿಸಿತು.

1983: ಬ್ರೂಕ್ಲಿನ್ ಬ್ರಿಡ್ಜ್ನ ಶತಮಾನೋತ್ಸವನ್ನು ಆಚರಿಸಲಾಯಿತು.

1988: ನಿಮಿಷಕ್ಕೆ 586 ಪದಗಳನ್ನು ಮಾತನಾಡಿದ ಜಾನ್ ಮಾಸ್ಚಿತ್ತ ವಿಶ್ವದಾಖಲೆ ನಿರ್ಮಿಸಿದರು.

1993: ದೂರದರ್ಶನದ ಕಾರ್ಯಕ್ರಮಕ್ಕೆ ಅತಿಥಿಯಾಗಿ ಮೊದಲ ಗಗನಯಾತ್ರಿಯಾಗಿ ಮೇ ಜೇಮಿಸನ್ ಆಗಮಿಸಿದ್ದರು.

2001: 15 ವರ್ಷದ ಬಾಲಕಿ ಶೆರ್ಪ ತೆಂಬ ಶೆರಿ ಅವರು ಮೌಂಟ್ ಎವೆರೆಸ್ಟ್ಏರಿದ ಅತಿ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು

2004: ಉತ್ತರ ಕೊರಿಯ ಮೊಬೈಲ್ ಫೋನುಗಳನ್ನು ನಿಷೇಧಗೊಳಿಸಿತು.

2011: ಬಹು ಉಪಯುಕ್ತ ಸಿಬ್ಬಂದಿ ವಾಹನ ಗಗನನೌಕೆಯ ನಿರ್ಮಾಣದ ಪ್ರಗತಿಯ ಬಗ್ಗೆ ನಾಸಾ ಸಂಸ್ಥೆ ಘೋಷಿಸಿತ್ತು.

2011: ದೊಡ್ಡ ಕಾಡಾನೆಗಳ ಸಂರಕ್ಷಣೆಗಾಗಿ 8 ದೇಶದ ಪ್ರತಿನಿಧಿಗಳು ಭಾರತದಲ್ಲಿ ಸೇರಿ ಪ್ರಾಣಿಗಳ ಮೇಲಿನ ಆಕ್ರಮಣವನ್ನು ತಡೆಯಲು ಹಾಗೂ ದಂತಗಳ ಕಳ್ಳಸಾಗಾಣಿಕೆಯ ನಿರ್ಮೂಲನೆಗೆ ಸಂಕಲ್ಪಿಸಿದರು.

2012: ಜಂಬೋ ಜೆಟ್ ಗಾತ್ರದ ಸೋಲಾರ್ ಇಂಪಲ್ಸ್, ಪ್ರಾಯೋಗಿಕ ಸೌರವಿದ್ಯುತ್ ವಿಮಾನವು ಸ್ವಿಜರ್ಲ್ಯಾಂಡ್ ಇಂದ ಉತ್ತರ ಆಫ್ರಿಕಾ ದೇಶಕ್ಕೆ ಒಂದು ವಾರದ ಅವಧಿಯಲ್ಲಿ ತಲುಪಿತು.

2013: ಟರ್ಕಿಯ ಸಂಸತ್ತು ಮದ್ಯದ ಜಾಹಿರಾತುಗಳನ್ನು ನಿಷೇದಿಸಿತು ಮತ್ತು ಅಂತಹ ಪಾನೀಯಗಳ ಮಾರಾಟದ ಮೇಲಿನ ನಿರ್ಬಂಧಗಳನ್ನು ಬಿಗಿಗೊಳಿಸುವ ಶಾಸನವನ್ನು ಜಾರಿಗೆ ತಂದಿತು.

ಪ್ರಮುಖಜನನ/ಮರಣ:

1543: ಖಗೋಳಶಾಸ್ತ್ರಜ್ಞ ನಿಕೋಲಾಸ್ ಕೋಪರ್ನಿಕಸ್ ಪೋಲೆಂಡಿನಲ್ಲಿ ನಿಧನರಾದರು.

1544: ವಿದ್ಯುತ್ ಮತ್ತು ಕಾಂತೀಯ ಧ್ರುವಗಳನ್ನು ಕಂಡುಹಿಡಿದ ಭೌತವಿಜ್ಞಾನಿ ವಿಲಿಯಂ ಗಿಲ್ಬರ್ಟ್ ಜನಿಸಿದರು.

1686: ಉಷ್ಣಮಾಪಕದಲ್ಲಿ ಪಾದರಸವನ್ನು ಬಳಸಿ ತಾಪಮಾನವನ್ನು ನೋಡಬಹುದು ಎಂದು ತೋರಿಸಿದ ಜರ್ಮನಿಯ ಭೌತವಿಜ್ಞಾನಿ  ಗೆಬ್ರಿಯಲ್ ಡೇನಿಯಲ್ ಫ್ಯಾರನ್ಹೀಟ್ ಜನಿಸಿದರು.

1819: ಮಹಾರಾಣಿ ವಿಕ್ಟೋರಿಯ ಲಂಡನಿನಲ್ಲಿ ಜನಿಸಿದರು.