Categories
e-ದಿನ

ಮೇ-25

ಪ್ರಮುಖಘಟನಾವಳಿಗಳು:

ಕ್ರಿ.ಪೂ 585: ಗ್ರೀಸ್ ದೇಶದ ಥೇಲ್ಸ್ ಎಂಬುವವರು ಮೊದಲ ಸೂರ್ಯ ಗ್ರಹಣವನ್ನು ಊಹಿಸಿದ್ದರು.

1844: ಮೊದಲನೇ ಟೆಲಿಗ್ರಾಫ್ ಸುದ್ಧ ಪ್ರಸಾರವನ್ನು ಬಾಲ್ಟಿಮೋರ್ ಪೇಟ್ರಿಯಾಟ್ ನಲ್ಲಿ ಪ್ರಕಟಿಸಲಾಯಿತು.

1844: ಗ್ಯಾಸೋಲೈನ್ ಇಂಜಿನ್ನನ್ನು ಸ್ಟುವರ್ಟ್ ಪೆರ್ರಿ ಪೇಟೆಂಟ್ ಪಡೆದರು.

1895: ಬರಹಗಾರ ಮತ್ತು ಕವಿ ಆಸ್ಕರ್ ವೈಲ್ಡ್ ನನ್ನು ಅಸಭ್ಯತೆಗಾಗಿ 2 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು.

1927: ಹೆನ್ರಿ ಫೊರ್ಡ್ ಅವರು ತಮ್ಮ ಮಾಡೆಲ್ ಆದ “ಟಿ-ಫೋರ್ಡ್”ನ ಉತ್ಪಾದನೆಯನ್ನು ಅಂತ್ಯಗೊಳಿಸುವ ಬಗ್ಗೆ ಘೋಷಿಸಿದರು.

1932: ಗೂಫಿ ಅಕಾ ಡಿಪ್ಪಿ ಡಾಗ್, ವಾಲ್ಟ್ ಡಿಸ್ನಿ ಅವರ “ಮಿಕ್ಕೀಸ್ ರೆವ್ಯೂ”ನಲ್ಲಿ ಮೊದಲನೆ ಬಾರಿಗೆ ಕಾಣಿಸಿಕೊಂಡಿತು.

1935: ಮಿಚಿಗನ್ನಿನ ಆನ್ ಆರ್ಬರ್ ನಲ್ಲಿನ ಫೆರ್ರಿ ಫೀಲ್ಡ್ ನಲ್ಲಿ ನಡೆದ ಬಿಗ್ ಟೆನ್ ಕ್ರೀಡಾ ಸಮಾವೇಶದಲ್ಲಿ ಕ್ರೀಡಾ ಪಟು ಜೆಸ್ಸಿ ಓವೆನ್ಸ್ 45 ನಿಮಿಷಗಳಲ್ಲಿ 4 ವಿಶ್ವ ದಾಖಲೆಗಳನ್ನು ಹಿಮ್ಮೆಟ್ಟಿಸಿ ನೂತನ ದಾಖಲೆ ನಿರ್ಮಿಸಿದರು.

1965: ಭಾರತ ಪಾಕಿಸ್ತಾನದ ನಡುವೆ ಯುದ್ದ ಆರಂಭವಾಯಿತು.

1967: ಜಾನ್ ಲೆನಿನ್ ತನ್ನ ವಿಲಕ್ಷಣ ಬಣ್ಣದಿಂದ ಚಿತ್ರಿಸಿದ ರೋಲ್ಸ್ ರಾಯ್ಸ್ಕಾರನ್ನು ಪಡೆದರು.

1978: ರಾಷ್ಟ್ರದ ಮೊದಲ ಕಾನೂನು ಬದ್ಧವಾದ ಕ್ಯಾಸಿನೋವನ್ನು ನೆವಾಡದ ಹೊರಾಂಗಣದಲ್ಲಿದ್ದ ಅಟ್ಲಾಂಟಿಕ್ ಸಿಟಿಯಲ್ಲಿ ತೆರೆದಿತ್ತು.

1983: ಅಮೇರಿಕಾದ ಮೊದಲ ರಾಷ್ಟ್ರೀಯ ಕಾಣೆಯಾದ ಮಕ್ಕಳ ದಿನ ಎಂದು ಘೋಷಿಸಲ್ಪಟ್ಟಿದೆ.

2001: ಕೊಲೊರಾಡೋ ದೇಶದ 32 ವರ್ಷದ ಎರಿಕ್ ವೇಹನ್ಮೇಯರ್, ಮೌಂಟ್ ಎವೆರೆಸ್ಟ್ ಶಿಖರ ಏರಿದ ಮೊದಲ ಅಂಧ ವ್ಯಕ್ತಿ ಆಗಿದ್ದಾರೆ.

2005: 1000 ಮೈಲಿ ಅಳತೆಯ ವಿಶ್ವದ ಅತಿ ಉದ್ದದ ತೈಲ ಕೊಳವೆ ಅಜರ್ ಬೈಜಾನಿನಿಂದ ಆರಂಭವಾಗಿ ಮೆಡಿಟರೇನಿಯನ್ ಸಮುದ್ರವನ್ನು ತಲುಪುತ್ತದೆ.

2008: ನಾಸಾದ ಫೀನಿಕ್ಸ್ ಮಾರ್ಸ್ ಲ್ಯಾಂಡರ್ ಮಂಗಳದ ಆರ್ಕ್ಟಿಕ್ ಬಯಲು ಪ್ರದೇಶದಲ್ಲಿ ಇಳಿಯಿತು.

2011: ಸತತ 25 ವರ್ಷಗಳನ್ನು ಪೂರೈಸಿದ “ ಒಪ್ರ ವಿನ್ಫ್ರೀ ಶೋ”ದ ಕೊನೆಯ ಪ್ರದರ್ಶನ ಆಯಿತು.

2012: ಪಾರ್ಕ್ ಎ ಸ್ಪೇಸ್ ಎಕ್ಸ್ ಡ್ರಾಗನ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ನಿಂತ ಮೊದಲ ವಾಣಿಜ್ಯ ಗಗನನೌಕೆಯಾಗಿದೆ.

2013: ಪಾಕಿಸ್ತಾನದ ಗುಜ್ರಾಟ್ನಲ್ಲಿರುವ ಶಾಲಾ ಬಸ್ಸಿನಲ್ಲಿ ಅನಿಲ ಸಿಲೆಂಡರ್ ಸ್ಫೋಟಿಸಿ 17 ಮಕ್ಕಳು ಮೃತಪಟ್ಟಿದ್ದರು.

2013: ಜಪಾನ್ ದೇಶದ ಯುಚಿರೋ ಮಿಯುರ (80 ವರ್ಷ) ಮೌಂಟ್ ಎವೆರೆಸ್ಟ್ ಶಿಖರ ಏರಿದ ಅತ್ಯಂತ ಹಿರಿಯ ವ್ಯಕ್ತಿ.

2013: ಯುಕ್ರೇನಿನ ಮೊದಲ ಸಲಿಂಗಕಾಮಿ ಹೆಮ್ಮೆಯ ಮೆರವಣಿಗೆ ದೇಶದ ರಾಜಧಾನಿ ಕೀವ್‌ನಲ್ಲಿ ಸುಮಾರು 100 ಮಂದಿ ಪಾಲ್ಗೊಂಡರು.

ಪ್ರಮುಖಜನನ/ಮರಣ:

1886: ಭಾರತದಲ್ಲಿ ಬ್ರಿಟೀಶರ ವಿರುದ್ಧ ಹೋರಾಡಿದ ರಾಸಬಿಹಾರಿ ಬೋಸ್ ಜನಿಸಿದರು.

1889: ಮೊದಲ ಯಶಸ್ವಿ ಹೆಲಿಕಾಪ್ಟರ್‌ನ್ನು ತಯಾರಿಸಿದ ಅಮೇರಿಕಾದ ವಾಯುಯಾನ ಇಂಜಿನಿಯರ್ ಇಗೋರ್ ಸಿಕರ್ಸ್ಕಿ ಜನಿಸಿದರು.

1907: ಅಮೇರಿಕಾದ ಸಾಗರ ಜೀವಶಾಸ್ತ್ರಜ್ಞ, ಸಂರಕ್ಷಕ, ಬರಹಗಾರ ರೇಚರ್ ಕಾರ್ಸನ್ ಜನಿಸಿದರು.

1919: ಆಫ್ರಿಕನ್-ಅಮೇರಿಕನ್ ಮೊದಲ ಮಿಲೆನಿಯರ್ ಉದ್ಯಮಿಮ್ಯಾಡಂ ಸಿ.ಜೆ.ವಾಕರ್ ನಿಧನರಾದರು.

1954: ಹಂಗೇರಿಯಾದ ಯುದ್ಧ ಛಾಯಾಗ್ರಾಹಕ ರಾಬರ್ಟ್ ಕಾಪಾ ಅಸುನೀಗಿದರು.