Categories
e-ದಿನ

ಮೇ-27

ಪ್ರಮುಖ ಘಟನಾವಳಿಗಳು:

1679: ಹೇಬಿಯಸ್ ಕಾರ್ಪಸ್ ಆಕ್ಟ್ (ಕಾನೂನುಬಾಹಿರ ಬಂಧನ ಮತ್ತು ಸೆರೆವಾಸವನ್ನು ಪ್ರಶ್ನಿಸುವ ವ್ಯಕ್ತಿಸ್ವಾತಂತ್ರ್ಯ) ಕಾಯಿದೆ ಇಂಗ್ಲೆಂಡಿನಲ್ಲಿ ಜಾರಿಯಾಯಿತು.

1895: ಬ್ರಿಟಿಶ್ ದೇಶದ ಆವಿಷ್ಕಾರಕ ಬರ್ಟ್ ಎಕರ್ಸ್ ಚಲನಚಿತ್ರದ ಕ್ಯಾಮೆರಾ/ಪ್ರಕ್ಷೇಪಕ್ಕೆ ಪೇಟೆಂಟ್ ಪಡೆದರು.

1907: ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ಲೇಗ್ ಕಾಯಿಲೆ ಹರಡಿಕೊಂಡಿತು.

1930: ರಿಚರ್ಡ್ ಡ್ರು ಅವರುಮಾಸ್ಕಿಂಗ್ ಟೇಪ್ ಅನ್ನು ಕಂಡು ಹಿಡಿದರು.

1930: ನ್ಯೂಯಾರ್ಕ್ ನಗರದ 1046 ಅಡಿ (319 ಮೀಟರ್) ಮಾನವನಿರ್ಮಿತ ಅತಿ ಎತ್ತರದ ಕಟ್ಟಡ ಕ್ರಿಸ್ಲರ್ ಬಿಲ್ಡಿಂಗ್ ಉದ್ಘಾಟನೆ ಆಯಿತು.

1931: ವಿಮಾನಗಳ ಪರೀಕ್ಷೆಗಾಗಿ ಮೊದಲ ಪೂರ್ಣ ಪ್ರಮಾಣದ ವಿಂಡ್ ಟನ್ನೆಲ್ ಆರಂಭವಾಯಿತು.

1931: ಪಿಕಾರ್ಡ್ ಮತ್ತು ಕ್ನಿಪ್ಪರ್ ಆಕಾಶಬುಟ್ಟಿಯ ಮೂಲಕ ವಾಯುಮಂಡಲದೊಳಗೆ ಹಾರಾಡಿದ ಮೊದಲಿಗರು.

1942: ಹಿಟ್ಲರ್ 10000 ಜೆಕ್ ಜನರನ್ನು ಕೊಲ್ಲಲು ಆದೇಶಿಸಿದರು.

1943: ಲಾಸ್ ಜ್ಲೋ ಬಿರೋ ಬಾಲ್ ಪಾಯಿಂಟ್ ಪೆನ್ನಿನ ಪೇಟೆಂಟ್ ಪಡೆದರು.

1951: ಸ್ಯಾನ್ ಫ್ರಾನ್ಸಿಸ್ಕೋದ ಅಕ್ವಾಟಿಕ್ ಪಾರ್ಕಿನಲ್ಲಿ ಕಡಲ ಮ್ಯೂಸಿಯಂ ಆರಂಭವಾಯಿತು.

1961: ಮೊದಲ ಬಾರಿಗೆ ಕಪ್ಪು ಬೆಳಕನ್ನು(Black light) ಮಾರಲಾಗಿತ್ತು.

1963: ಜೋಮೊ ಕೆನ್ಯಟ್ಟಾ ಅವರು ಕೀನ್ಯಾ ದೇಶದ ಮೊದಲ ಚುನಾಯಿತ ಪ್ರಧಾನಮಂತ್ರಿಯಾಗಿ ಆಯ್ಕೆಯಾದರು.

1969: ವಾಲ್ಟ್ ಡಿಸ್ನಿ ವರ್ಲ್ಡ್ ನಿರ್ಮಾಣ ಆರಂಭವಾಯಿತು.

1997: 20 ಬ್ರಿಟಿಷ್‌ ಮಹಿಳೆಯರು ಸೇರಿದಂತೆ ಮೊದಲ ಮಹಿಳೆಯರ ತಂಡವು ಉತ್ತರ ಧ್ರುವ ತಲುಪಿದರು.

2010: 2 ವರ್ಷಗಳ ಹಿಂದೆ ಬೆಂಕಿ ಅನಾಹುತದಿಂದ ಹಾಳಾಗಿದ್ದ “ಯುನಿವರ್ಸಲ್ ಸ್ಟೂಡಿಯೋಸ್” ಪುನಃ ತೆರೆಯಿತು.

2013: ರೊಮೇನಿಯಾದಲ್ಲಿ 44 ಮೈಲಿಗಳಷ್ಟು ಉದ್ದದ 5 ಟನ್ ತೂಕದ ನೂಲಿನಿಂದ ತಯಾರಿಸಲಾದ ಅತೀ ದೊಡ್ಡ ಧ್ವಜವನ್ನು ಅನಾವರಣಮಾಡಲಾಯಿತು.

2016: 3 ದಿನಗಳಲ್ಲಿ 3 ಹಡಗುಗಳು ಮುಳುಗಿ ಸುಮಾರು 700 ಜನರು ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿ ನಿಧನರಾಗಿದ್ದರು.

ಪ್ರಮುಖಜನನ/ಮರಣ:

1332: ಆಧುನಿಕ ಸಮಾಜಶಾಸ್ತ್ರ, ಇತಿಹಾಸಶಾಸ್ತ್ರ ಮತ್ತು ಅರ್ಥಶಾಸ್ತ್ರದ ಸಂಸ್ಥಾಪಕ ಪಿತಾಮಹರಾದ ಐಬಿನ್ ಖಲ್ದಿನ್ ಜನಿಸಿದರು.

1897: ಸಾಹಿತ್ಯ ಮತ್ತು ಕನ್ನಡ ರಂಗಭೂಮಿ ಎರಡರಲ್ಲೂ ವಿಶಿಷ್ಟ ಸೇವೆ ಸಲ್ಲಿಸಿದ ಬಿ.ಪುಟ್ಟಸ್ವಾಮಯ್ಯನವರು ಜನಿಸಿದರು.

1897: ಪರಮಾಣು ನ್ಯೂಕ್ಲಿಯಸ್ ವಿಭಜನೆಯ ಬಗ್ಗೆ ಸಂಶೋಧನೆ ಮಾಡಿದ ಜಾನ್ ಕಾಕ್ರಾಫ್ಟ್ ಎಂಬ ಬ್ರಿಟಿಷ್‌ ಭೌತವಿಜ್ಞಾನಿ ಜನಿಸಿದರು.

1907: ಪರಿಸರ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಿದ ಸಂಶೋಧನಾ ಪತ್ರಿಕೆ ಮತ್ತು ಪುಸ್ತಕಗಳ ಲೇಖಕ ರೇಚಲ್ ಕಾರ್ಸನ್ಜನಿಸಿದರು.

1914: ವೀಣಾ ವಿದ್ವಾಂಸರಲ್ಲೇ ಅಗ್ರಗಣ್ಯರೆನಿಸಿದ್ದ ಆರ್.ಆರ್.ಕೇಶವಮೂರ್ತಿ ರುದ್ರಪಟ್ಟಣದಲ್ಲಿ ಜನಿಸಿದರು.

1964: ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ನಿಧನರಾದರು.