ಪ್ರಮುಖಘಟನಾವಳಿಗಳು:

 • 1721: ದಕ್ಷಿಣ ಕಾರೋಲಿನಾ ಔಪಚಾರಿಕವಾಗಿ ರಾಜಯೋಗ್ಯ ವಸಾಹತು ಆಗಿ ರೂಪಿತಗೊಂಡಿತು.

 • 1851: ಸೊಜೌರ್ನರ್ ಟ್ರುತ್ ಮೊದಲ ಕಪ್ಪು ಮಹಿಳೆಯರ ಹಕ್ಕುಗಳ ಸಮಾವೇಶದಲ್ಲಿ ಮಾತನಾಡಿದರು.

 • 1884: ಮೊದಲ ರಸ್ತೆರೈಲು ಹೈಗೇಟ್‌ನಲ್ಲಿ ಆರಂಭವಾಯಿತು.

 • 1886: ರಸಾಯನಶಾಸ್ತ್ರಜ್ಞ ಜಾನ್ ಪೆಂಬರ್ಟನ್ ಕೋಕಾಕೋಲಾವನ್ನು ಜಾಹೀರಾತು ಪಡಿಸಿದರು.

 • 1900: ಓಟೀಸ್ ಎಲಿವೇಟರ್ ಸಂಸ್ಥೆಯಿಂದ ಎಸ್ಕಲೇಟರ್ ಟ್ರೇಡ್ ಮಾರ್ಕ್ ನೋಂದಾಯಿಸಲ್ಪಟ್ಟಿತು.

 • 1916: ಅಮೇರಿಕಾ ಅಧ್ಯಕ್ಷರ ಅಧಿಕೃತ ಧ್ವಜವನ್ನು ಅಳವಡಿಸಲಾಯಿತು.

 • 1919: ಚಾರ್ಲ್ಸ್ ಸ್ಟ್ರೈಟ್ ಪಾಪ್ ಅಪ್ ಟೋಸ್ಟರ್ ಯಂತ್ರಕ್ಕೆ ಪೇಟೆಂಟ್ ಪಡೆದರು.

 • 1919: ಆಲ್ಬರ್ಟ್ ಐನ್ಸ್ಟೈನ್ ಅವರ ಬೆಳಕು-ಬಾಗುವ ಊಹೆಯನ್ನು ಆರ್ತುರ್ ಎಡ್ಡಿಂಟನ್ ಧೃಡೀಕರಿಸಿದರು.

 • 1935: ಹೇಗ್ ಸ್ಥಳೀಯ ವಸ್ತುಸಂಗ್ರಹಾಲಯ ತೆರೆಯಲಾಯಿತು.

 • 1940: ಅಡಾಲ್ಫ್ ಕೀಫರ್ 58.8 ಸೆಕೆಂಡಿನಲ್ಲಿ 100 ಗಜಗಳಷ್ಟು ಹಿಮ್ಮುಖವಾಗಿ ಈಜಿ ವಿಶ್ವದಾಖಲೆ ನಿರ್ಮಿಸಿದರು.

 • 1943: ಅಮೇರಿಕಾದಲ್ಲಿ ಮಾಂಸ ಮತ್ತು ಚೀಸ್ ಗಳನ್ನು ದಿನಭತ್ಯೆಯಂತೆ ನೀಡಲಾಗಿತ್ತು.

 • 1951: ಏಕ ಇಂಜಿನ್ ವಿಮಾನದಲ್ಲಿ ಮೊದಲ ಬಾರಿಗೆ ಉತ್ತರ ಧ್ರುವಕ್ಕೆ ಪ್ರಯಾಣಿಸಲಾಗಿತ್ತು.

 • 1953: ಎಡ್ಮಂಡ್ ಹಿಲ್ಲರಿ ಮತ್ತು ತೇನ್ ಸಿಂಗ್ ನೋರ್ಜ್ ಅವರುಗಳು ಮೌಂಟ್ ಎವೆರೆಸ್ಟ್ ಶಿಖರಾಗ್ರವನ್ನು ತಲುಪಿದ ಮೊದಲಿಗರು.

 • 1994: ಉತ್ತರ ಸಮುದ್ರದ ಮೇಲೆ ಧೂಮಕೇತು ಕಾಣಿಸಿಕೊಂಡಿತು.

 • 1997: ಸ್ಪೇನ್ ದೇಶದ ವಿಜ್ಞಾನಿಗಳು 780,000 ವರ್ಷಗಳಷ್ಟು ಹಳೆಯ ಪಳೆಯುಳಿಕೆಯಲ್ಲಿ ಹೊಸ ಮಾನವ ಜಾತಿಯ ಅಸ್ಥಿತ್ವವನ್ನು ಘೋಷಿಸುತ್ತಾರೆ.

 • 1999: ಬಾಹ್ಯಾಕಾಶ ನೌಕೆ ಡಿಸ್ಕವರಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೊದಲ ಡಾಕಿಂಗ್ ಪೂರ್ಣಗೊಳಿಸಿತು

 • 2012: ಅಪರೂಪದ ಗುಲಾಬೀ ಬಣ್ಣದ 12 ಕ್ಯಾರೆಟ್ ವಜ್ರವನ್ನು ಹಾಂಗ್‌ಕಾಂಗಿನಲ್ಲಿ 17.4 ಮಿಲಿಯನ್ ಡಾಲರುಗಳಿಗೆ ಹರಾಜು ಮಾಡಲಾಯಿತು.

 • 2013: ಫ್ರಾನ್ಸ್ ದೇಶದಲ್ಲಿ ಮೊದಲ ಸಲಿಂಗಕಾಮಿ ವಿವಾಹ ನಡೆಯಿತು.

 • 2015: ಭಾರತದ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಕೇಂದ್ರೀಕೃತವಾದ Heat wavesನಿಂದಾಗಿ ಒಂದು ವಾರದಲ್ಲಿ 1800 ಜನರು ಮೃತರಾದರು.

ಪ್ರಮುಖಜನನ/ಮರಣ:

 • 1736: ಅಮೇರಿಕಾ ಸ್ಥಾಪನೆಗೆ ಶ್ರಮಿಸಿದ ಪಿತಾಮಹರಲ್ಲಿ ಒಬ್ಬರಾದ ಪ್ಯಾಟ್ರಿಕ್ ಹೆನ್ರೀ ಜನಿಸಿದರು,

 • 1874: 20ನೇ ಶತಮಾನದ ಪ್ರಮುಖ ಸಾಹಿತಿಯಾಗಿದ್ದ ಜಿ.ಕೆ. ಚೆಸ್ಟರ್ಟನ್ ಜನಿಸಿದರು.

 • 1906: ಮೈಸೂರು ಶೈಲಿಯ ಭರತನಾಟ್ಯದ ಪ್ರವರ್ತಕರಲೊಬ್ಬರಾದ ಡಾ.ಕೆ.ವೆಂಕಟಲಕ್ಷ್ಮಮ್ಮ ಜನಿಸಿದರು.

 • 1914: ನೇಪಾಳದ ಭಾರತೀಯ ಪರ್ವತಾರೋಹಿ ತೇನ್‌ಸಿಂಗ್ ನೋರ್ಜ್ಅವರು ಜನಿಸಿದರು,

 • 1920: ಆಟದ ಸಿದ್ಧಾಂತವನ್ನು ಪ್ರಸ್ತಾಪಿಸಿದ ಅರ್ಥಶಾಸ್ತ್ರಜ್ಞ ಜಾನ್ ಚಾರ್ಲಸ್ ಹರ್ಸಾನಿ ಜನಿಸಿದರು.