Categories
e-ದಿನ

ಮೇ-31

 

ಪ್ರಮುಖಘಟನಾವಳಿಗಳು:

1790: ಅಮೇರಿಕಾದ ಹಕ್ಕುಸ್ವಾಮ್ಯ ಕಾನೂನು ಜಾರಿಗೊಳಿಸಲಾಗಿತ್ತು.

1870: ಅಮೆರಿಕನ್ ಕಾಂಗ್ರೆಸ್ ಕರಿಯರ ಹಕ್ಕುಗಳಿಗೆ ಮೊದಲ ಆಕ್ಟ್ ಜಾರಿಗೊಳಿಸಿತು.

1870: ಇ ಜೆ ಡೆಸೆಂಮ್ಟ್ ಪಾದಾಚಾರಿಗಳು ನಡೆಯುವ ಸ್ಥಳಗಳಿಗೆ ಡಾಂಬರು ಹಾಕುವ ಪೇಟೆಂಟ್ ಪಡೆದರು.

1879: ಮೊದಲ ವಿದ್ಯುತ್ ರೈಲು ಬರ್ಲಿನ್ ಟ್ರೇಡ್ಸ್ ಎಕ್ಸ್ಪೊಸಿಷನ್ ನಲ್ಲಿ ತೆರೆಯಿತು.

1880: ಲೀಗ್ ಆಫ್ ಅಮೇರಿಕನ್ ವೀಲ್ಮಾನ್ ಅನ್ನುವ ಬೈಸಿಕಲ್ ಸವಾರರ ಸಂಘ ಆರಂಭವಾಗುತ್ತದೆ.

1884: ಡಾ ಜಾನ್ ಹಾರ್ವೇ “ಫ್ಲೇಕ್ಡ್ ಸಿರಿಯಲ್” ನಿಲುಕಟ್ಟು ಧಾನ್ಯಕ್ಕೆ ಪೇಟೆಂಟ್ ಪಡೆದರು.

1891: ಟ್ರಾನ್ಸ್ ಸೈಬೀರಿಯನ್ ರೈಲು ಕಾಮಗಾರಿ ಆರಂಭವಾಯಿತು.

1893: ವಿಟ್ಕಾಂಬ್ ಜುಡ್ಸನ್ “ಜಿಪ್”ಗೆ ಪೇಟೆಂಟ್ ಪಡೆದರು.

1907: ಮೊದಲ ಟಾಕ್ಸಿ ಸೇವೆಗಳು ನ್ಯೂಯಾರ್ಕ್ ನಗರದಲ್ಲಿ ಆರಂಭವಾಯಿತು.

1911: ಆರ್ ಎಂ ಎಸ್ ಟೈಟಾನಿಕ್ ಹಡಗನ್ನು ಬೆಲ್ಫಾಸ್ಟ್ ನಲ್ಲಿ ನೀರಿಗಿಳಿಸಲಾಗಿತ್ತು.

1929: ಅಟ್ಲಾಂಟಿಕ ಸಿಟಿ ಸಮಾವೇಶ ಕೇಂದ್ರ ತೆರೆಯಿತು.

1930: ಧೂಮಕೇತು 73ಪಿ/1930 (ಶ್ಸ್ವಾಸ್ಮಾನ್ – ವಾಚ್ಮಾನ್ 3) ಭೂಮಿಗೆ 0.0617 AU ಗಳಷ್ಟು ಹತ್ತಿರ ಸಮೀಪಿಸಿತು.

1937: ಒಂದೇ ಹೆರಿಗೆಯಲ್ಲಿ ಒಟ್ಟಿಗೆ ಹುಟ್ಟಿದ ನಾಲ್ಕು ಮಕ್ಕಳು ಕಾಲೇಜಿನ ಓದನ್ನು ಬೇಲರ್ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು.

1943: “ಆರ್ಚೀಸ್” ಅನ್ನುವ ಹಾಸ್ಯ ಸರಣಿ ಮೊದಲ ಬಾರಿಗೆ ರೇಡಿಯೋದಲ್ಲಿ ಪ್ರಸಾರವಾಯಿತು.

1977: ಟ್ರಾನ್ಸ್ ಅಲಾಸ್ಕಾದ ತೈಲಕೊಳವೆ ಕಾಮಗಾರಿ ಪೂರ್ಣಗೊಂಡಿತು.

2008: ಉಸೇನ್ ಬೋಲ್ಟ್ 100 ಮೀಟರ್ ಸ್ಪ್ರಿಂಟ್ ಅನ್ನು ಕೇವಲ 9.72 ಸೆಕೆಂಡುಗಳಲ್ಲಿ ಮುಗಿಸಿ ನೂತನ ವಿಶ್ವದಾಖಲೆ ಬರೆದರು.

2015: 92 ವರ್ಷ 65 ದಿನಗಳ ಹ್ಯಾರಿಟ್ ಥಾಂಸನ್ ಮ್ಯಾರಥಾನ್ ಓಟವನ್ನು ಮುಗಿಸಿದ ಅತ್ಯಂತ ಹಿರಿಯ ಮಹಿಳೆ.

ಪ್ರಮುಖಜನನ/ಮರಣ:

1819: ಮುಕ್ತಪದಗಳಲ್ಲಿ ದಾರ್ಶನಿಕತೆ ಮತ್ತು ವಾಸ್ತವಿಕತೆಯನ್ನು ತೆರೆದಿಟ್ಟ ಕವಿ ವಾಲ್ಟರ್ ವಿಟ್ಮಾನ್ಜನಿಸಿದರು.

1872: ಸೌರಶಕ್ತಿಯಲ್ಲಿ ಸಂಶೋಧನೆ ನಡೆಸಿದ ಖಗೋಳ ವಿಜ್ಞಾನಿ ಚಾರ್ಲ್ಸ್ ಗ್ರೀಲೇ ಆಬ್ಬಾಟ್ ಜನಿಸಿದರು.

1910: ವೈದ್ಯಕೀಯ ಪದವಿ ಪಡೆದ ಮೊದಲ ಮಹಿಳೆ ಎಲಿಜಿಬತ್ ಬ್ಲಾಕ್ವೆಲ್ ನಿಧನರಾದರು.

1923: ಯುರೋಪಿನ ಇತಿಹಾಸದಲ್ಲಿ ಅತ್ಯಂತ ಧೀರ್ಘಕಾಲ ಆಳ್ವಿಕೆ (56 ವರ್ಷಗಳು) ನಡೆಸಿದ ದೊರೆ ರಾಜ ರೈನೀರ್ III ಜನಿಸಿದರು.

1931: ಬಿ ಸಿ ಎಸ್ ಥಿಯರಿಯನ್ನು ಪ್ರತಿಪಾದಿಸಿದ ಭೌತವಿಜ್ಞನಾನಿ ಜಾನ್ ರಾಬರ್ಟ್ ಸ್ಕಿಫ್ಫರ್ ಜನಿಸಿದರು.

1939: ಜೈನ ಸಾಹಿತ್ಯ, ಸಿದ್ದಾಂತ, ಚರಿತ್ರೆಗಳ ಬಗ್ಗೆ ವಿದ್ವತ್ಪೂರ್ಣವಾಗಿ ಮಾತನಾಡಬಲ್ಲ ಎಸ್.ಪಿ.ಪಾಟೀಲರು ಜನಿಸಿದರು.