ಪಲ್ಲವಿ : ಮೈನವಿರೇಳುವ ಕೃಷ್ಣನ ಕಥೆಯನು
ಹೇಳುವೆ ಕೇಳಿರಿ ಭಕ್ತ ಜನಂಗಳೆ

ಚರಣ :  ಬಕನೆಂಬ ರಕ್ಕಸ ಕೊಕ್ಕರೆ ರೂಪದಿ
ಬಾಲಕೃಷ್ಣನ ನುಂಗಿದನಂತೆ
ಪಕ್ಷಿ ಹೊಟ್ಟೆಯಲಿ ಸೇರಿದ ಕೃಷ್ಣನು
ಬೆಂಕಿಯ ರೂಪದಿ ಅವನನು ಕೊಂದ

ಹಸುಗಳ ಮಂದೆಯಲಿ ಕರುವಾಗಿ ಸೇರಿದ
ಮಾಯಾ ರಕ್ಕಸನ ಕೊಂದನು ಕೃಷ್ಣ
ಹೇಳಿಕೊಳ್ಳುವ ಕೃಷ್ಣನ ಕಥೆಗಳ
ಮತ್ತೆ ಮತ್ತೆ ನಾವು ಜಯವನು ಹೇಳುವ