ಹೆಸರು: ಸಾವಿತ್ರಿ
ಊರು: ಸರಗೂರು.

ಪ್ರಶ್ನೆ: ನಾನು ೧೭ ವರ್ಷದ ವಿದ್ಯಾರ್ಥಿನಿ. ನನ್ನ ಸವಸ್ಯೆ ಏನೆಂದರೆ ನನ್ನ ಮುಖದ ಮೇಲೆ ಮೊಡವೆಗಳು ಇವೆ. ಇದಕ್ಕೆ ಏನಾದರು ಮನೆ ಮದ್ದು ತಿಳಿಸಿ. ಅಥವಾ ಯಾವುದಾದರೂ ಚಿಕಿತ್ಸೆ ಇದ್ದರೆ ತಿಳಿಸಿ.

ಉತ್ತರ: ನೀವು ಮುಖಕ್ಕೆ ACNE Gel ಕ್ರೀಂ ಅನ್ನು ದಿನಕ್ಕೆ ಮುಖ ತೊಳೆದ ನಂತರ ಹಚ್ಚಿಕೊಳ್ಳಿ. ಆದಷ್ಟು ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಮುಖವನ್ನು ದಿನಕ್ಕೆ ಎರಡಕ್ಕಿಂತ ಹೆಚ್ಚು ಬಾರಿ ತೊಳೆಯಿರಿ. ಶುಭ್ರವಾದ ಒಣಗಿದ ಬಟ್ಟೆಯಿಂದ ಮುಖವನ್ನು ಒರೆಸೆ, ಹೆಚ್ಚಾಗಿ ನೀರು ಕುಡಿಯಿರಿ. ಮಾನಸಿಕ ಒತ್ತಡ, ಖಿನ್ನತೆಗಳಿಂದ ದೂರ ಇರಿ. ಅದಕ್ಕಾಗಿ ದಿನ ನಿತ್ಯ ವ್ಯಾಯಾಮ ಮಾಡಿ, ಯೋಗಾಸನ ಮತ್ತು ಧ್ಯಾನಗಳನ್ನು ಮಾಡುವುದು ಒಳ್ಳೆಯದು.

ಮೊಡವೆಗಳನ್ನು ಕೀಳುವುದಾಗಲೀ, ಚಿವುಟುವುದಾಗಲಿ ಮಾಡಬಾರದು. ಇದರಿಂದ ಮೊಡವೆಗಳು ಹೆಚ್ಚಾಗಿ ಹರಡುತ್ತವೆ. ಪೌಷ್ಠಿಕ ಆಹಾರವನ್ನು ಸೇವಿಸಿ. ಹೆಚ್ಚಿನ ರಾಸಾಯನಿಕಗಳಿಲ್ಲದ ಸೋಪನ್ನು ಉಪಯೋಗಿಸಿ, ಇತರರು ಬಳಸಿದ ಸೋಪನ್ನಾಗಲೀ, ಕರವಸ್ತ್ರವನ್ನಾಗಲಿ ಬಳಸಬೇಡಿ.