ನಿರಂಜನ ಹರಿಚಿದ್ಘನ ಮೂರುತಿಯನು ನೆನೆಯೋ
ನಿರಂತರ-ಮೋಹನ ಮೂರುತಿಯನು ನೆನೆಯೋ

ಅನುಪಮ ತೇಜನ, ಸುಂದರ ರೂಪನ
ಭಕ್ತರ ಎದೆಯಲಿ ರಂಜಿಪನ,
ಕೋಟಿ ಚಂದ್ರಸಮ ಕಾಂತಿಯ ನಾಚಿಸಿ
ಮಿಂಚಿನಂತೆ ನಮ್ಮೆದೆಯೊಳು ರಂಜಿಸಿ
ಮೋಹಿಪನ-
ನಿರಂಜನ ಹರಿಚಿದ್ಘನ ಮೂರುತಿಯನು ನೆನೆಯೋ
ನಿರಂತರ-ಮೋಹನ ಮೂರುತಿಯನು ನೆನೆಯೋ.

ಹೃದಯ ಪದ್ಮದಲಿ ಪೂಜಿಸು ಆತನ,
ಶಾಂತ ಮಾನಸದಿ ಜ್ಞಾನ ನಯನದಲಿ
ಅಪೂರ್ವ ದರ್ಶನ ಮೋಹನನ,
ಭಕ್ತಿ ಯೋಗದಾವೇಶದಿ ಮುಳುಗಿಪ
ಚಿದಾನಂದ ರಸ ಸಾಗರನ-
ನಿರಂಜನ ಹರಿಚಿದ್ಘನ ಮೂರುತಿಯನು ನೆನೆಯೋ
ನಿರಂತರ-ಮೋಹನ ಮೂರುತಿಯನು ನೆನೆಯೋ.