ಮ್ಯಾಂಗೋಸ್ಟಿನ್ ಒಂದು ಸ್ವಾದಯುಕ್ತ ಹಣ್ಣು. ನಮ್ಮಲ್ಲಿ ಇದು ಕಾಣ ಸಿಗುವುದು ಅಪರೂಪ. ಹಣ್ಣಿಗೆ ಪಟ್ಟಣ ಮತ್ತು ಪ್ರವಾಸಿ ಕೇಂದ್ರಗಳಲ್ಲಿ ಅಧಿಕ ಬೇಡಿಕೆಯಿದೆ. ಅದೇ ರೀತಿ ವಿದೇಶಿ ಮಾರುಕಟ್ಟೆಗಳಲ್ಲೂ ಹೆಚ್ಚಿನ ಬೇಡಿಕೆಯಿದೆಭಾರತ ಹಣ್ಣು ಮತ್ತು ಅದರ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಪ್ರಕೃತ ವಿಶ್ವಮಾರುಕಟ್ಟೆಯಲ್ಲಿ ಇದಕ್ಕಿರುವ ಬೇಡಿಕೆಗೆ ಅನುಗುಣವಾದ ಪೂರೈಕೆಯಾಗುತ್ತಿಲ್ಲ. ಬೆಳೆಯನ್ನು ಕರಾವಳಿ ಕರ್ನಾಟಕ ಮತ್ತು ಕೇರಳಗಳಲ್ಲಿ ಬೆಳೆಸಲು ವಿಪುಲ ಅವಕಾಶಗಳಿವೆ, ಆದರೆ ಇದರ ಕೃಷಿಯ ಬಗ್ಗೆ ನಮ್ಮಲ್ಲಿ ಸಾಕಷ್ಟು ಪ್ರಚಾರ ಮತ್ತು ಮಾಹಿತಿಗಳಲ್ಲ. ದೃಷ್ಟಿಯಿಂದ ಮ್ಯಾಂಗೋಸ್ಟಿನ್ ಬಗ್ಗೆ ವೆಬ್ಸೈಟ್ ಮತ್ತು ಕರ್ನಾಟಕ ಸರಕಾರದ ತೋಟಗಾರಿಕಾ ನಿರ್ದೇಶನಾಯಲಗಳಿಂದ ಮಾಹಿತಿಗಳನ್ನು ಸಂಗ್ರಹಿಸಿ ತಮ್ಮ ಮುಂದೆ ಪುಸ್ತಕವನ್ನಿಟ್ಟಿದ್ದೇನೆ. ಮಾಹಿತಿ ಒದಗಿಸಿದ ಮಾಧ್ಯಮಗಳಿಗೆ ವಂದನೆಗಳು.

ನನ್ನ ಎಲ್ಲಾ ಚಟುವಟಿಕೆಗಳಿಗೆ ಪ್ರೇರಣೆಯನ್ನು ನೀಡುವ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಸ್ನೇಹಿತರಿಗೆ ನನ್ನ ನಮನಗಳು.

ನನ್ನ ಬರಹಗಳಿಗೆ ಪ್ರೋತ್ಸಾಹವನ್ನು ನೀಡುತ್ತಿರುವ ನನ್ನ ಕುಟುಂಬದ ಎಲ್ಲಾ ಸದಸ್ಯರುಗಳನ್ನು ಇಲ್ಲಿ ನೆನೆಸುತ್ತಿದ್ದೇನೆ.

ಡಾ|| ವಿಘ್ನೇಶ್ವರ ವರ್ಮುಡಿ
ವಮುಡಿ, ಗುಂಪೆ.
೨೩-೧೦-೨೦೦೪