ಮ್ಯಾಕ್ಸ್ ಪ್ಲಾಂಕ್

 

 

(ಕ್ರಿ. ಶ. ೧೮೫೮-೧೯೪೭) (ಶಕಲ ಸಿದ್ಧಾಂತ)

 

ಅಗೋಚರ ಪರಮಾಣು ಪ್ರಪಂಚವನ್ನು ಗಣಿತೀಯ ವಿಧಾನದ ಮೂಲಕ ಅಧ್ಯಯನ ಮಾಡುವುದಕ್ಕೆ ಭದ್ರ ಬುನಾದಿಯನ್ನು ಹಾಕಿದವರು, ಭೌತ ವಿಜ್ಞಾನಿ ಮ್ಯಾಕ್ಸ ಪ್ಲಾಂಕ್. ವಸ್ತು ಹೇಗೆ ಪರಮಾಣುಗಳ ಸಮುಚ್ಚಯವಾಗಿರುತ್ತದೆಯೋ ಹಾಗೆಯೇ ಶಕ್ತಿಯು ಪುಟ್ಟ “ಶಕ್ತಿ ಪೊಟ್ಟಣಗಳ” ಅಥವಾ “ಶಕ್ತಿ ಕಟ್ಟುಗಳ” ಧಾರೆಯಾಗಿರುತ್ತದೆಂದು ಅವರು ತೋರಿಸಿಕೊಟ್ಟರು.

ಮ್ಯಾಕ್ಸ್ ಪ್ಲಾಂಕ್ ಏಪ್ರಿಲ್ ೨೩, ೧೮೫೮ರಂದು ಬಾಲ್ಟಿಕ್ ಸಮುದ್ರ ತೀರದ ಡೇನಿಷ್ ರೇವು ಕೀಲ್ ಎಂಬಲ್ಲಿ ಜನಿಸಿದರು. ತಂದೆ-ತಾಯಿ ಜರ್ಮನ್ ಮೂಲದವರು. ನ್ಯಾಯವಾದಿಗಳ ಮನೆತನ. ತಂದೆ ನ್ಯಾಯಶಾಸ್ತ್ರದ ಪ್ರಾಧ್ಯಾಪಕ.

ಮ್ಯೂನಿಕ್ ವಿಶ್ವವಿದ್ಯಾಲಯದಲ್ಲಿ ಉನ್ನತ ಪ್ರಾಧ್ಯಾಪಕನಾಗಿ ಕೆಲಸ ಮಾಡಲು ಆಹ್ವಾನ ಬಂದಾಗ ಈ ಕುಟುಂಬ ಅಲ್ಲಿಗೆ ಹೋಯಿತು. ಮ್ಯಾಕ್ಸ್ ಕೂಡ ಅಲ್ಲಿಗೆ ಹೋಗಬೇಕಾಯಿತು.

ಮ್ಯಾಕ್ಸ್ ಪ್ಲಾಂಕ್ ಗೆ ಶಾಲೆಯಲ್ಲಿ ಉತ್ತಮ ಶಿಕ್ಷಣ ದೊರಕಿತು. ಭೌತವಿಜ್ಞಾನ ಮತ್ತು ಗಣಿತ ವಿಜ್ಞಾನ ಅವರ ಆಸಕ್ತಿಯ ವಿಷಯಗಳಾಗಿದ್ದವು. ಮುಂದೆ ದವರು ಮ್ಯೂನಿಕ್ ಮತ್ತು ಬರ್ಲಿನ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡಿದರು.

ಮ್ಯಾಕ್ಸ ಪ್ಲಾಂಕ್ ಶಕ್ತಿಯ ಮಾಪನೆಗೆ E=hv ಎಂಬ ಸರಳ ಸೂತ್ರವನ್ನು ನೀಡಿದರು. ‘E’ ಶಕ್ತಿ ಪೊಟ್ಟಣ, ‘ v ‘ ಇದಕ್ಕೆ ಕಾರಣವಾದ ಆವೃತ್ತಿ. ‘h’ ಇವುಗಳ ಅನುಪಾತ. ‘h’ ಒಂದು ನಿಯತಾಂಕವೆಂದು ಪ್ಲಾಂಕ್ ಸಾಧಿಸಿದರು. ‘E’ ಯನ್ನು ಅವರು ಶಕಲ (ಕ್ವಾಂಟಂ) ಎಂದು ಕರೆದರು.

ಶಕಲ ಸಿದ್ಧಾಂತದ ಜನಕ ಮ್ಯಾಕ್ಸ್ ಪ್ಲಾಂಕ್ತ ಅಕ್ಟೋಬರ‍್ ೩, ೧೯೪೭ರಂದು ನಿಧನರಾದರು.

 

ಪರಿಷ್ಕರಿಸಿದವರು: ಡಾ. ಎಸ್.ಕೆ. ನಟರಾಜು

 

This page was last modified on 05 December 2009 at 10:33.