ಭಾಮಿನಿ

ರಣದಿಪುಷ್ಕಳ ಬೀಳೆ ಕಾಣುತ |
ಮನದೊಳಗೆಕಳವಳಿಸೆಸೈನ್ಯವು |
ಘನತರದಕ್ಲೇಶದಲಿ | ಶತ್ರುಹನೆಡೆಗೆನಡೆತಂದು|  ||170||

ಮಣಿದುಪುಷ್ಕಕೇಳನಳಿದುದನು |
ಳ್ದನಿತರೊಳು ನಡೆತಂದು ಕುವರನ |
ಗುಣವನೆನೆವುತ ದುಃಖಿಸುತಲಿಂತೆಂದಶತ್ರುಹನು|  ||171||

ರಾಗ ಆನಂದಭೈರವಿ ಏಕತಾಳ
ಸುಂದರಕೋಮಲಗಾತ್ರದ | ಕಂದನೆನಿನ್ನನುಅಗಲಿರು ||
ವಂದವಕಾಣಿನುಶಿವಶಿವ | ಮುಂದೇನುಗತಿಯೋ|  ||172||

ಚಂದ್ರನಬಿಂಬವೋಲುವ | ಛಂದದೊಳಿಹನಿಂನಯಮೊಗ ||
ವಿಂದೆಲ್ಲಿಗೆಪೋದುದೊನಿ | ರ್ಬಂಧದೊಳೀತೆರದೀ|  ||173||

ಯೋಗೀವರನಗಸ್ತ್ಯನುತಾ | ನಾಗಿಯೆ ಬಂದೀತುರಗದ |
ಯಾಗವರಚಿಸುವುದೆನಲಾ | ರಾಘವತಾನಂಬೀ|  ||174||

ಆಗಲೆಯಜ್ಞವರಚಿಸುತ | ಬೇಗದೊಳೀತುರಗವಬಿಡೆ ||
ಭೋಗಿವಿಭೂಷಣಸುತ | ಮುನಿದೀಗೀತೆರನಾಯ್ತೇ|  ||175||

ಮತ್ತೀಯಜ್ಞದನೆವದಲಿ | ಪಥ್ವಿಪರೆಲ್ಲರಗೆಲಿದಿಹ ||
ಸತ್ವವದೇನಾದುದೋ ಮ | ತ್ಸುತನೆಹಾವಿಧಿಯೇ|  ||176||

ವ್ಯರ್ಥದಿಕೊಲಿಸಿದೆವೆಂಬಪ | ಕೀರ್ತಿಯುಬಂದೀಗತ್ಯಾ ||
ಪತ್ತಿನೊಳೇಂಗೈದೆನು ಈ | ಶತ್ರುಗಳೊಡನಿಲ್ಲೀ|  ||177||

ರಾಗ ನಾದನಾಮಕ್ರಿಯೆ ಅಷ್ಟತಾಳ

ಇಂತುಶತ್ರುಹನುದುಃಖಿಸಲಾಗ | ಕಂಡು
ಕಂತು ಹರನು ಪೇಳ್ದನತಿಬೇಗ ||
ಚಿಂತಿಸಲ್ಯಾಕಿನ್ನು ರಣದೊಳು | ಕ್ಷತ್ರ
ಪಂಥವಿರಲು ಕಾದುಕ್ಷಣದೊಳು|  ||178||

ಪಾರ್ಥಿವ ಪಂಥಾದಿಪುಷ್ಕಳ | ತನ್ನ
ಸ್ವಾರ್ಥವಪಡದುದೇವರ್ಕಳ ||
ಮಿತ್ರತ್ವಕನುವಾಗಿಪೋದನು | ಅವ
ನತ್ತಲೈದುವರೆಕಾದುವದಿನ್ನು|  ||179||

ರುದ್ರ ಕಲಶವನ್ನು ಯಿಡದಿಹ | ದಕ್ಷ
ನದ್ವರಸಮಯದಿಗೆಲಿದಿಹ ||
ಯುದ್ಧಾದಿಬಲವಂತನೆನಿಸೀದ | ವೀರ
ಭದ್ರನಿಂಮಣುಗನಜಯಸೀದ|  ||180||

ಎಂದುಮೂದಲಿಸಲು ಕೇಳುತ್ತ | ರಘು
ನಂದನನತಿ ರೋಷದಾಳುತ್ತ ||
ಇಂದುಶೇಖರಗಸ್ತ್ರವೆಸೆಯಲು | ತಾಗ
ಲಂದವನತಿಕೋಪಖತಿಯೊಳು|  ||181||

ಪ್ರತ್ಯಸ್ತ್ರದಿಂದವನೆಸಯಲು | ಬಂದು
ಶತ್ರುಹನಿಗೆತಾಗಲಾಗಳು ||
ಅತ್ಯಂತಕೋಪಾದಿಸೈವುತ | ಪೇಳ್ದ
ಕತ್ತಿವಾಸನಿಗೆ ತಾನೋಡುತ್ತ|  ||182||

ಅಗ್ರಜರಾಮನನೆನೆವುತ್ತ | ಬಲು
ವಿಗ್ರಹದಲಿಕಾ | ದಾಡುತ್ತ ||
ನಿಗ್ರಹಗೈವೆನುನೋಡೆಂದು | ಶತ್ರು
ಘ್ನಬ್ರಹ್ಮಾಸ್ತ್ರ ಬಿಡಲಿಕಂದು|   ||183||

ಭಾಮಿನಿ

ಬರುವಬ್ರಹ್ಮಾಸ್ತ್ರವನು ನೋಡುತ |
ಲುರಗಭೂಷಣನಂದುಖತಿಯೊಳು |
ಭರದಿಪ್ರತಿಶರವೆಸೆಯಲದಪರಿಹರಿಸಿ ಮುಂದೈದೆ |
ತರಣಿಕುಲಜಗೆಬಂದುತಾಗಲು |
ಧರಗೆಮೂರ್ಛಿತನಾಗಿಮಲಗಿರೆ |
ಧರಣಿಪಾಲಸುಬಾಹುಮುಖ್ಯರ ಗೆಲಿದರಾಗಣರು|  ||184||

ಭಾಮಿನಿ

ಮುನಿಪಕೇಳೈಹರನಬಲವನು |
ಮುರಿದುಹನುಮನುಮತ್ತೆ ತನ್ನೊಳು |
ರಣಕೆನಿಂತೆಲ್ಲರನು ಬಾಲದಿ ಸುತ್ತಿಬಡಿಬಡಿದೂ |
ತೆರಳಿಸಿದನುಳಿದವರರಣವನು
ಭರದಿಷಣ್ಮುಖಮುಖ್ಯರನು ಸಂ |
ಗರದಿಸೋಲಿಸಿನಡೆದ | ಹರನಿದ್ದೆಡೆಗೆವಹಿಲದಲೀ|  ||185||

ರಾಗ ಸೌರಾಷ್ಟ್ರ ತ್ರಿವುಡೆ

ಧರಣಿಪಾಲಕರಿಂತು ಮೂರ್ಛೆಯೊ | ಳೊರಗಲಾಸಮಯದಲಿಕಾಣುತ |
ಮರುತಜನುಕೋಪಿಸುತಲೆಂದನು | ಪುರಹರನೊಳು|  ||186||

ಇರುಳುಹಗಲಾರಾಹುಚಂದ್ರನ | ಸ್ಮರಿಸುತಿಹಸದ್ಭಕ್ತರಂದದೊ |
ಳರಿತವನಸಹಜಾದಿಗಳ ಸಂ | ಹರಿಸಬಹುದೇ|  ||187||

ಈಶನೊಳುರಣದೊಳಗೆ ನೀವಿ | ಶ್ವಾಸಘಾತಕತನವಗೈದುದ |
ನೀಸಮಯದಲಿನಿನ್ನಶಿಕ್ಷಿಸೆದೋಷವುಂಟೆ|  ||188||

ಎಂದುದನುಕೇಳುತ್ತಲಾ ಶಿತಿ | ಕಂಧರನುಮಾರುತಿಯನೀಕ್ಷಿಸು |
ತೆಂದತನ್ನಯಪರಿಭವವತಾ | ನಂದುಸುರ್ದ ||  ||189||

ರಾಗ ಭೈರವಿ ಝಂಪೆತಾಳ

ಮರುತಜನೆದೈನ್ಯನಹೆ | ಧುರವಿಜಯನೀನೆಂದ |
ಪರಿಗೆನಗೆಖತಿಯಿಲ್ಲ | ವರದಪೆನುನಿನಗೇ|  ||190||

ಧರಣಿಪನುತಪವೆಸಗಿ | ವರವಪಡದುದರಿಂದ |
ಪರಿವಾರಸಹಿತಲಾ | ನಿರುವೆನೀಪುರದೀ|  ||191||

ಯಾಗಾಶ್ವವನುಕಟ್ಟ | ಲಾಗಿರುಕ್ಮಾಂಗದನು |
ಈಗಳೀರಣದೊಳಿದಿ| ರಾಗಿಮೂರ್ಛಿಸಲೂ|  ||192||

ಶರಣರಾಪತ್ತು ಪರಿ | ಹರಿಸದಿರಲಪಕೀರ್ತಿ |
ಬರುವದೆಂದೀಗಳಾ | ಧುರವನೆಸಗಿದೆನು|  ||193||

ರಾಮಸೈನ್ಯವುಬೀಳೆ | ನಾನುರಣಕೈತಂದೆ |
ಸೋಮಶೇಖರನೇ | ಸಂಮವನುತೋರು|  ||194||

ರಘುವರನ ಮನದೊಳಗೆ | ನೆನದುಶರ್ವನೊಳಾಗ |
ಅನುವರಕೆನಿಂದನತಿ | ಕಿನಿಸಿನಿಂದಾಗಾ|  ||195||

ಎಂದುಮೂದಲಿಸುತ್ತ | ಲಂದು ಹನುಮನುಗಿರಿಯ |
ಲಿಂದುಶೇಖರನಹೊ | ದಂದಗೆಡಿಸುತಲೀ|  ||196||

ರಾಗ ಪಂತುವರಾಳಿ ಮಟ್ಟೆತಾಳ

ವಾತಸುತನುಶಿಲೆಯೊಳಿಡಲು ಭೂತನಾಥನೂ |
ಸೂತಧ್ವಜವುತುರಗರಥಗ | ಳಾತತೂಕ್ಷಣಾ
ಘಾತಿಸಲ್ಕೆ ನಂದಿಯಡರಿ | ಪ್ರೇತಪತಿಯಿರೇ |
ಕಾತರಿಸುತಸುರಕದಂಬ | ವೀಕ್ಷಿಸುತಲಿರೇ  ||197||

ಕನಲುತಾಗಶಿಲೆಗಳಿಂದ ಅನಿಲಜಾತನೂ |
ಘನಪರಾಕ್ರಮದಲಿಹೊಯ್ದ | ನೇನನೆಂಬೆನೂ|
ಅನಿತರೊಳುತ್ರಿಶೂಲದಿಂದ | ಪೊಡೆಯೆಶರ್ವನು |
ಹನುಮನದರಪಿಡಿವುತಾಗ | ಕ್ಷಣದಿಮುರಿದನೂ|  ||198||

ಬಳಿಕಶಕ್ತಿಯಿಂದಪೊಡೆಯೆ | ಶಿವನುಕೋಪದೀ |
ಫಳಿಲನೈದೆತಾಗಲಾಗಹನುಮ | ಕ್ಲೇಶದೀ |
ಕನಲಿಭಾರಿವಕ್ಷದಿಂದ | ಪೊಡೆಯಲಾಗಲು |
ತಳುವದಾಗಪಣಿಗಳೆಲ್ಲ | ಬಳಲುತೋಡಲು| ||199||

ಮುಸಲದಿಂದಪೊಡೆಯಲದರ | ದೆಸೆಯತಪ್ಪಿಸೀ |
ಬಿಸಜನೇತ್ರನನ್ನುಸ್ಮರಿಸು | ತಸಮಸಾಹಸೀ |
ಕುಶಲದಿಂದಖಡ್ಗಮುದ್ಗ | ರಾದಿಶರಗಳು |
ವಸುಧೆನಡುಗೆಮುರಿದುಚೂರ್ಣ | ಗೈದುಖತಿಯೊಳು|  ||200||

ಕಿತ್ತು ಪರ್ವತಗಳಹನುಮ | ಪೊಡೆಯೆಭರದೊಳು |
ಕತ್ತಿವಾಸಗೆಲಿದನದರ | ಮತ್ತೆಖತಿಯೊಳೂ |
ಮತ್ತೆಪವನಜಾತಪರ್ವ | ತಗಳಪೊಡೆಯಲು |
ಸತ್ವಗುಂದಿಶಾರ್ವನಂದಿ | ಮತ್ತೆಬೆದರಲು|  ||201||

ರಾಗ ಸಾಂಗತ್ಯ ರೂಪಕತಾಳ

ನಂದಿತ್ರಾಣವುಗುಂದಿಮುಂದುಗಾಣದೆಭಯ |  ದಿಂದಿರಲಾಗಶಂಕರನು |
ಮುಂದೆಸೆಯೊಳುಧುರಕೆಂದು ನಿಂದಿಹವಾಯು | ನಂದನನನು ಕರೆದೆಂದ| ||202||

ಇಂದುನಿನ್ನಯರಣದೊಳಗೆಸೋತೆನುಈಗ | ಮುಂದೆಸೈರಿಸುಪರಾಕ್ರಮಿಯೇ|
ಚಂದವಾಯಿತುಭಕ್ತರೊಳಗೇ ಬಲ್ಲಿದನು | ನಿನ್ನಂದದಭಕ್ತರ ಕಾಣೆ| ||203||

ರಾಮನಕಪೆಯಿಂದನಮ್ಮಗೆಲಿದೆನೆಂಬ | ಪ್ರೇಮವಿನ್ನೇನಾವೇಳುವೆನೂ |
ಕಾಮುಕನಲ್ಲಶ್ರೀಹರಿಯಸದ್ಭಕ್ತರು | ನಾಮಧಾರಕರುಬಲ್ಲಿದರೂ| ||204||

ದಾನಧರ್ಮವುಯಜ್ಞ ಹೋಮತಪವನ್ನು | ಮಾಡದೇನಂಮ್ಮನುಗೆಲಿದೇ |
ನಾನುಮೆಚ್ಚಿದೆಬೇಡು ವರವನೆಂದೆನೆಕೇಳಿ | ವಾನರೇಂದ್ರನುಪೇಳ್ದನಾಗ| ||205||

ರಾಮಾನುಗ್ರಹದಿಂದ ಕ್ಷೇಮಿಗಳೈನಾವು | ನೀಮನವಲಿದುಯುದ್ಧದಲಿ |
ಪ್ರೇಮಾದಿಂಕೇಳಿದರಿಂದಾನಾನುಸುರವೆ | ಯೀಮಹಾಪುಷ್ಕಳಾದಿಗಳಾ| ||206||

ರಣದಿಮೂರ್ಛೆಯನಾಂತುಪೆಣದಂತೆಮಲಗಿಹ | ಯಿನಕುಲೇಶಾದಿಗಳಿರವಾ | ವಿನಯಾದಿಂಜೀವಿಸಲನುವಾಗಿಪೋಪೆನು | ಘನವೇಗದಿಂ ದ್ರೋಣಗಿರಿಗೆ| ||207||

ಬರುವನಕಿವರಂಗದಿರವೇನು ಕೆಡದಂತೆ | ಯಿರುನೀನುಗಣಸಹಿತಿಲ್ಲೀ |
ಭರದಿಂದಲಿಂದ್ರಾದಿಸುರರೆಲ್ಲಜಯಿಸಿ ನಾ | ತರುವೇಸಂಜೀವನವೀಗಾ| ||208||

ಭಾಮಿನಿ

ಎಂದುನುಡಿಯನುಕೇಳುತಾಶಿತಿ
ಕಂಧರನುನಸುನಗುತಪೇಳಿದ |
ನಿಂದಿವರಕಾದಿರುವೆನೀನೌಷಧವ ತಹುದೆನಲು ||
ಮಂದಹಾಸದೊಳಾಗಪವನಜ |
ಸಿಂಧುಶಯನನಸ್ಮರಿಸಿಹಾಯ್ದನು |
ಒಂದುಕ್ಷಣದಲಿದ್ರೋಣಪರ್ವತ ಕೇನನುಸುರೆವೆನು|  ||209||

ರಾಗ ದೇಶಿ ಅಷ್ಟತಾಳ

ಕಾಣುತಾಗಳುದ್ರೋಣಪರ್ವತವ ಸು |
ತ್ರಾಣಿಮಾರುತಿಸುತ್ತಿಬಾಲದಿ | ಮಾಣದಾಕ್ಷಣಕೀಳಲು|  ||210||

ಗಿಡುಮರಂಗಳುಬುಡಸಹಿತಲ್ಲಲ್ಲಿ |
ಉಡಿದುಬೀಳಲುಕಾದಿರುವ ಸುರಂಗಡಣವೀಕ್ಷಿಸಿಬೆದರುತ|  ||211||

ಏನಿದಾಶ್ವರ್ಯವೀಮಹಾಗಿರಿಯನು |
ಹಾನಿಗೈದವರ‌್ಯಾರೆನುತಲಿರೆ | ವಾನರೇಂದ್ರನಕಂಡರು|  ||212||

ರಾಗ ಶಂಕರಾಭರಣ ಮಟ್ಟೆತಾಳ

ವಾತಸುತನನೂ | ಕಂಡುಸುಭಟರೂ |
ಖಾತಿಯಿಂದಲಸ್ತ್ರಚಯವನಾತಗೆಸದರೂ|  ||213||

ಭರದೊಳೈದುತಾ | ವಜ್ರದೇಹಕೆಸ
ರಳುನಾಂಟದಿಳೆಗೆಬೀಳು | ತಿರಲುನಿಮಿಷಕೇ|  ||214||

ಪವನಜಾತನೂ | ಶಿಲೆಗಳಿಂದಲೇ |
ದಿವಿಜಗಣವಪೊಯ್ದನಾಗ | ತವಕದಿಂದಲೇ|  ||215||

ಕಾಲಿನಿಂದಲೀ | ಬಾಲದಗ್ರದೀ |
ಕೀಳುತಾಗಹೊಯ್ದನತಿವಿರಾಲವಕ್ಷದೀ  ||216||

ಕೆಲರುಘಾಯದಿ | ಬೀಳುತೇಳುತಾ |
ಬಳಲಿಮೂರ್ಛೆಯಿಂದ ಅರುಣ | ಜಲವಕಾರುತಾ|   ||217||

ಭಾಮಿನಿ

ಮಾರುತಿಯಹೊಲಿನಲಿನಿರ್ಜರ |
ವಾರಕಂಗೆಟ್ಟೊರಲಿಭಯದಲಿ |
ಚಾರಕರುನಡೆತರುವದೀಕ್ಷಿಸು ತಾಗಸುರಪಾಲ ||
ಯಾರುನಿಮಗೀಪರಿಯಭಂಗಿಸಿ |
ಗಾರುಗೆಡಿಸಿದವೀರನೆಲ್ಲಿಹ |
ತೋರಿಸಲಿಕಾತನನುಶಿಕ್ಷಿಪೆನೆನಲಿಕುಸುರಿದರೂ|  ||218||

ರಾಗ ಮುಖಾರಿ ಆದಿತಾಳ

ಲಾಲಿಪುದೀಗನಿರ್ಜರೇಶ | ಪೇಳುವೆನಿಂಮೊ | ಳಾಲಸ್ಯವಿಲ್ಲದೆಮ್ಮಕ್ಲೇಶ |

ಚಂದ್ರದ್ರೋಣಪರ್ವತದಲ್ಲಿ | ಕಾದಿರಲುವಾನ | ರೇಂದ್ರನೋರ್ವನುಬಂದನಲ್ಲೀ ಮಂದಮತಿಯುತಾ | ನಿಂದತಿಧೈರ್ಯದಿ ಕುಂದದೆಬಾಲದಿಗಿರಿಯನುಕೀಳುವೆ
ನೆಂದೆನುತಲ್ಲಿಯೆನಿಂದಿರುತಿರಲು ಲಾಲೀಪುದೀಗ|  ||219||

ಕಂಡುಪೇಳಲುಪೋಗದಿರಲು | ನಾವೆಲ್ಲರುಮುಂ | ಕೊಂಡು ಶಸ್ತ್ರಾಸ್ತ್ರಗಳನುಬಿಡಲೂ ||
ಪುಂಡುತನದೊಳವನಂಡಲವುತಕಲು | ಗುಂಡುಮರಗಳಿಂದಿಂಡುದರಿದುರಣ |
ಮಂಡಲದೊಳಗೆ ಪ್ರಚಂಡಗೆಲಿದನು | ಲಾಲೀಪುದೀಗ|  ||220||

ಹೊಳೆವುತ್ತಲಿಹುದುವಜ್ರಾದೇಹಾ | ಪರ್ವತದಂತೆ | ಬೆಳದೀಹನೀಕ್ಷಿಸಿದೇವನಾಹಾ |
ಬಲವಂತನು ಕಪಿಕುಲದಲಿ ಶೂರನು | ಕಳವಳಗೊಳುತಿದೆ ಗೆಲುವರಸಾದ್ಯವು |
ತಳುವದೆನೀವಾಬಲಿಮುಖನೆಡೆಗೈ | ದಲಸದೆಯುದ್ದಕೆನಿಲಲಸದಳವು| ||221||

ವಾರ್ಧಕ

ಚರರನುಡಿಯನುಕೇಳಿ ಸುರಪಾಲಕೋಪದಿಂ |
ಪರಿಪರಿಯಸೇನಾಸಮೂಹಮಂಕಳುಹಲ್ಕೆ |
ಧುರದಿಕ್ಷಣಮಾತ್ರಕ್ಕೆಮೂರ್ಛೆಗೊಳಿಸಲ್ಕದರ | ಪರಿಯಕೇಳುತಲಿಂದ್ರನೂ ||
ಭರಿತರೋಷದಿಶಾಕಿನಿಯು ಡಾಕಿನಿಯು ಸಹಿತ |
ಧುರಪರಾಕ್ರಮಿಗಳಂಕಳುಹಲವರೈತಂದು |
ಮರುತಜನಪರಿಯ | ನೀಕ್ಷಿಸುತತಮ್ಮೊಳಗೆಮಾತಾಡಿದರದೇಂಪೇಳ್ವೆನೂ| ||222||