ರಾಗ ನೀತಾಂಬರಿ ಏಕತಾಳ

ತಂಗೀನೋಡಿದೆಯಾನೀನು | ರಾಯನಚಿತ್ತ | ದಿಂಗಿತವೆಲ್ಲವನು |
ತುಂಗಾವಿಕ್ರಮತಾನಾಗೀ | ನಮ್ಮಾಯಮಾನ | ಭಂಗವನೆಸಗಿದನು| ||79||

ಹರಿಹರೀಪಥವಿಡಿದೂ | ಬಂದುದ್ಯಾತಕೆ | ತುರಗವುತಾನೊಲಿದು |
ಅರುಹಲೀತನೊಳ್ಯಾತಕೇ | ಮನದಿರವನ್ನು | ಬರಿದಾದುದೆಮ್ಮಬಾಳು| ||80||

ಎಷ್ಟುಹೇಳಿದರಿವನು | ವಾಜಿಯನೀಗ | ಕಟ್ಟಿಪಲೊಲ್ಲತಾನು |
ಇಷ್ಟಾದಮೇಲೆನಾವು | ಈರಾಯನ | ಬಿಟ್ಟುಪೋಪುದೆಘನವು| ||81||

ರಾಗ ಕೇತಾರಗೌಳ ಅಷ್ಟತಾಳ

ಎಂದುತಮ್ಮೊಳುಮಾತನಾಡಲುಕೇಳುತ್ತ | ಲಂದತಿಶೌರ್ಯದಲಿ | ||82||
ಮಂದಗಮನೆಯರನೀಕ್ಷಿಸಿಅವರೊಡ |  ನೆಂದನುಪ್ರೀತಿಯಲೀ|

ಪರಿಕಿಸಲೆಂದುನಾಬರಿದೆ ಚಾಳಿಸಿದರೆ | ಪರಿಹಾಸ್ಯಗೈದಿರಲ್ಲ |
ತರಿಸುವೆನೀಕ್ಷಣತುರಗವನೆನುತಲಿ | ಚರರೊಡನುಸುರಲಾಗ| ||83||

ಕೇಳಿತುರಗವತಂದೀಯಲುನೋಡುತ | ಭಾಳದಲಿಖಿತವನು |
ಲೀಲೆಯಿಂವಾಚಿಸಿಬಾಲೆಯರಿದಿರೊಳು | ಪೇಳಿದಬಹುಸಾಹಸಿ| ||84||

ರಾಗ ಮೆಚ್ಚುಗೌಳ ಅಷ್ಟತಾಳ

ಬರದಿಹನಿದಿರೊಳುರಾಮಾ | ತಾನೆ | ಧುರಧೀರನೆಂದು ನಿಸ್ಸೀಮಾ |
ಹರನೊಲಿದಿಹನಮಗೆಂದು | ತಾನು | ಅರಿಯದಾದನೊಯಿದನೊಂದು| ||85||

ಭೂತಳದೊಳಗೆನ್ನಪಿತನೂ | ಬಹು | ಖ್ಯಾತಿಯಪಡದಿಹತಾನು |
ಸೋತಪೆನೆಂಬುದರಿಯದೇ | ಬಿಟ್ಟ | ನೀತುರಗವತಾನುಬರಿದೆ| ||86||

ಈಗಲಿರಣದೊಳುತಾನೇ | ನಿಲ | ಲಾಗಿಗೆಲುವರನ್ನುಕಾಣೇ |
ಯಾಗದಶ್ವವುಸಹಿತಾನು | ಪೋಪೆ | ನೀಗಲೆಪುರಕೆಯಿಂನೇನು| ||87||

ಎಂದುರುಕ್ಮಾಂಗದನಾಗ | ಕರ | ದೆಂದನುಚರರೊಳುಬೇಗ |
ಇಂದುನೀವೀತುರಗವನೂ | ಬೇಗ | ದಿಂದೆಂಮಪುರಕೈವುದಿನ್ನು| ||88||

ಭಾಮಿನಿ

ಇಂತುಚರರೊಳುಪೇಳಿದುದನಾ |
ಕಾಂತೆಯರುಕೇಳುತ್ತ ಆತನ |
ಚಿಂತಿತವಸಲಿಸಲ್ಕೆ ಬಳಿಕಾಹಯವುಸಹಿತಾಗ |
ಸಂತಸದಿಪುರಕೈದಿಮತ್ತಾ |
ದಂತಿಗಮನೆಯರುಗಳಮನ್ನಿಸಿ |
ಅಂತರಂಗದಿತನ್ನ ಪಿತನಡಿಗೆರಗುತಿಂತೆಂದ|  ||89||

ರಾಗ ಸೌರಾಷ್ಟ್ರ ಆದಿತಾಳ

ವನಕೇಳಿಗೆಂದು ನಾಪೋಗಿರಲಡವಿಗೆ | ತಂದೆಕೇಳು | ವಾಜಿ |
ಯನು ಕಂಡುಪಿಡಿದುವಾಚಿಸಿದೆನುಲಿಖಿತವ | ತಂದೆಕೇಳು| ||90||

ಸಾಕೇತ ಪುರವರಧೀಶ ರಾಘವನಂತೆ | ತಂದೆಕೇಳು ||
ಮೂರು ಲೋಕದಿಬಹುಖ್ಯಾತನಾಗಿರುತಿಹನಂತೆ ತಂದೆಕೇಳು| ||91||

ಬ್ರಹ್ಮಹತ್ಯಾಪಾಪಪರಿಹಾರಕೊೀಸುಗ | ತಂದಕೇಳೂ | ಬಲು
ಹೆೆಮ್ಮೆಯಿಂದಲಿ ತನ್ನತಮ್ಮಂದಿರೊಡಗೂಡಿದ | ತಂದೆಕೇಳು| ||92||

ಯಾಗವರಚಿಸಿತುರಗವಬಿಟ್ಟಿಹನಂತೆ | ತಂದೆಕೇಳೂ | ಮತ್ತೆ
ರಾಘವನನುಜಶತ್ರುಹನುಬಂದಿಹನಂತೆ | ತಂದೆಕೇಳು| ||93||

ಶೂರರೀವಾಜಿಯಕಟ್ಟುವದೆನುತಲೆ | ತಂದೆಕೇಳೂ | ರಾಮ
ನೀರೀತಿಬರದುದನೋಡಿಲ್ಲಿತಂದಿಹೇ | ತಂದೆಕೇಳು| ||94||

ವೃತ್ತ

ಕಂದನವಾಕ್ಯವನಾಲಿಸಿ |
ಚಂದದಿಭೂಪಾಲಕ |
ನಂದನನಂಮಂನಿಸೆಚಿತ್ತದೊಳಾಗಳ್ |
ಇಂದುಧರನಬಳಿಗೈದುಸುರುವೆ |
ನೆಂದೆನುತತಿಮುದದಿಂ | ಬಂದಾ |
ತಗೆನಮಿಸುತ ಲಿಂತೆಂದವನಾಗಳ್  ||95||

ರಾಗ ಸೌರಾಷ್ಟ್ರ ಏಕತಾಳ

ಚಿತ್ತವಿಸಾನೆಂಬಮಾತ | ಯೆಲೆಸಾಂಬಾ | ಎನ್ನ
ಪುತ್ರನೆಸಗಿದಪರಾಧವ | ಯೆಲೆಸಾಂಬ|  ||96||

ಪಥ್ವೀಪಾಲರಾಮಚಂದ್ರಎಲೆಸಾಂಬ | ಬ್ರಹ್ಮ
ಹತ್ಯ ನಿವತ್ತಿಗೋಸುಗಾಯೆಲೆಸಾಂಬ |  ||97||

ಬಿಟ್ಟಮಖದವಾಜಿಯನ್ನು | ಎಲೆಸಾಂಬ | ರುಕ್ಮ
ಕಟ್ಟಿತಂದನೀಗಳಲ್ಲಿ | ಯೆ | ಲೆಸಾಂಬ|  ||98||

ಸೃಷ್ಟಿಗೊಡೆಯನಾದರಾಮ ಯೆಲೆಸಾಂಬಾ | ನಮ್ಮ
ಧಿಟ್ಟತನಕಂಜುವನೆ | ಯೆಲೆಸಾಂಬಾ|  ||99||

ಶತ್ರುಗಳಗೆಲುವುದಕ್ಕೆ | ಎಲೆಸಾಂಬ | ಬಹುವಿ
ಚಿತ್ರವಾಗಿಬಂದುದಲ್ಲಯೆಲೆಸಾಂಬ|  ||100||

ಕ್ಷತ್ರಿಪಂಥಕ್ಕಾಗಿನಾವುಯೆಲೆಸಾಂಬಾ |
ನಿನ್ನಮಿತ್ರಗಹಿತರಾದೆವಲ್ಲೋ | ಯೆಲೆಸಾಂಬಾ|  ||101||

ಬುದ್ಧಿಯೇನಿದಕ್ಕೆಪೇಳು | ಎಲೆಸಾಂಬಾ | ರಣ
ಸಿದ್ಧಿಯಾಗುವಂತೆಮಾಡು | ಎಲಸಾಂಬ|  ||102||

ರಾಗ ಕೇತಾರಗೌಳ ಝಂಪೆತಾಳ

ಎಂದುದನುಕೇಳುತಾಗ | ಪರಮನದಿಹನೊಂದುಗ್ರಹಿಸುತಲಿಬೇಗ |
ಮುಂದಾಹಕಾರ್ಯಕೆಮಗೆ | ಹಸನಾದುದೆಂದೆನುತ ನುಡಿದನವಗೇ| ||103||

ಪೊಡವಿಪತಿಕೇಳುನೀನು | ತವಕುವರಪಿಡಿದ ಯಾಗದಹಯವನು |
ಬಿಡಲುನಪರೆಲ್ಲನಗರೆ | ಜರೆವುತಡಿರೆಗಡಿನಿಂದಿಸದಿರುವರೇ  ||104||

ಹರಿಯುಶ್ರೀರಾಮನೆಂದು | ತಿಳಿಯದೀ | ತುರಗವನುಪಿಡಿದುತಂದು |
ಧುರಕೆಸಂನಹಗೈದನು | ನಿನ್ನಮಗ | ಬರಿದೆಚಿಂತಿಸದಿರಿನ್ನು  ||105||

ಸಂಗರದೊಳಾರಾಮನು | ಬರುವನಾವಂಗದಿಂದಾದರಾನು |
ಅಂಗಜನಪಿತನಿಮ್ಮನು | ರಕ್ಷಿಸುವಹಾಂಗೆಯತ್ನವಗೈವೆನು  ||106||

ಭಾಮಿನಿ

ಧಾರುಣೀಪತಿಕೇಳುನಿರ್ಜರ |
ವಾರಸಹಿತಾನಿರಲುರಕ್ಷೆಗೆ |
ಮೀರಿತುರಗವನೊಯ್ಯಲಸದಳ ವಂದ್ಯರಿಂಗಿನ್ನು ||
ಮಾರಮಣನೈತರಲಿಕಾತನ |
ಚಾರುಚರಣಕೆನಮಿಸುತಾ | ರಘು
ವೀರನನುವಲಿಸುವೆನು |  ಯುದ್ಧವಗೈವುದೀಗೆಂದ|  ||107||

ರಾಗ ಮಧ್ಯಮಾವತಿ ತ್ರಿವುಡೆತಾಳ

ಎಂದುದನುಕೇಳುತ್ತಲಾನೃಪ | ಮಂದಹಾಸದಿಧುರವನೆಸಗಲಿ |
ಕೆಂದುಸನ್ನಹಗೈವುತಿರೆ ರಘು | ನಂದನನುಬಳಿಕತ್ತಲು | ಸೇನೆಯೊಡನೇ| ||108||

ಬರುತಿರಲಿಕಶ್ವವನುಕಾಣದೆ | ತರಹರಿಸುತಾಕ್ಷಣದಿತಮ್ಮೊಳಗು
ಗುಸುರುತೋರ್ವರನೋರ್ವನೀಕ್ಷಿಸು | ತಿರಲುಶತ್ರುಹಕೇಳ್ದನು | ಸೇನೆಯೊಡನೇ| ||109||

ಭೂರಿಬಲವಿರೆತುರಗವನು ನೀ | ವಾರುಕಾಣದ ತೆರದೊಳೊಯ್ಯಲು |
ಕಾರಣವದೇನೆನಲು ಕೇಳುತ | ಧಾರುಣೀಶನನೊಳೆಂದರು | ಬೆದರುತಾಗಾ| ||110||

ಮನದವೇಗದಿಮುಂದಕೈದುವ | ದನುಪಮಿತಬಲಬೆಂಬಳಿಯಲಿರೆ |
ಕ್ಷಣದಿದೃಷ್ಟಿಯಮರಸಿತಪ್ಪುವುದೆನುಯತ್ನವಗೈದರು | ಕಾಣದಂತೆ| ||111||

ಚರರವಾಕ್ಕವಕೇಳಿಶತ್ರುಹ | ಕರೆದುಮಂತ್ರಿಯೊಳೆಂದಯಾಗದ |
ತುರಗವೇನಾಯ್ತೆಂಬುದನು | ನೀ | ನರಿತುದುಸುರೆನಲೆಂದನು | ಮಂತ್ರಿತಾನೂ ||  ||112||

ರಾಗ ಭೈರವಿ ಝಂಪೆತಾಳ

ಶತ್ರುಹನೆಲಾಲಿಸೈ | ಉತ್ತುಮದದೇವಪುರ |
ಪಥ್ವಿಪತಿವೀರಮಣಿ | ಕತೀವಾಸನನು|  ||1|13|

ವಲಿಸಲವನೀಪುರದಿ | ನೆಲಸಿಹನುಗಣಸಹಿತ |
ಗೆಲವಿಂದಲೀರ್ಪನಾ | ಇಳೆಯಪಾಲಕನು|  ||114||

ಧರಣಿಪಾಲನಸುತನು | ತುರಗವನುಕಟ್ಟಿಹನು |
ಹರನಬಲದಿಂದೆಮ್ಮ | ಧುರಕಂಜನವನು|  ||115||

ಎಂದುಪೇಳಲುಕೇಳು | ತಂದುಶತ್ರುಹಸುಭಟ |
ವಂದಯುದ್ಧವಗೈವುದೆಂದುನೇಮಿಸಿದ|  ||116||

ರಾಗ ಪಂಚಾಗತಿ ಮಟ್ಟೆತಾಳ

ಬಳಿಕಸುಭಟರೆಲ್ಲರೋಷದಿಂದಲರಿಗಳ |
ಬಲವಮುಸುಕುತೆಸದರಾಗತೀವ್ರಕಣೆಗಳ |
ಅಳುಕದಾಗವೀರ ಮಣಿಯಸೈನ್ಯಕೋಪದೀ |
ಶರದುಬಿಟ್ಟರಸ್ತ್ರಚಯವಸಲೆಪ್ರತಾಪದೀ|  ||117||

ಉಭಯಬಲವುತಂಮೊಳಿಂತುಕದನವೆಸಗಲು |
ರಭಸದಿಂದರಾಮ ಸೈನ್ಯಬೆದರದಾಗಳು |
ಸಬಳಶಕ್ತಿತೋಮರಂಗಳಿಂದಲವರನು |
ಪ್ರಬಲವದಗಿಸಲ್ಕೆಕಂಡುನಪಕುಮಾರನು|  ||118||

ತುಂಗಭುಜಬಲಾಢ್ಯರುಕ್ಮಾಂಗದಾಖ್ಯನು |
ಮುಂಗಡೆಯಲಿನಿಂತುಮಾರ್ಗಣಗಳೆಸೆದನು |
ಸಂಗರದಲಿಬಲವನೆಲ್ಲಸವರುತೀರ್ದನು |
ಕಂಗೆಡಿಸುತಧೈರ್ಯದಿಂದಕರದುಸೂರ್ದನು |  ||119||

ಎಲವೊನಿಂಮಬಲದೊಳೆಂಮಗೆಲುವವೀರರು |
ಗೆಲುವರೀಗಬರಲಿಯಿದಿರುಸಮರಶೂರರು
ಕೊಲುವೆನವರನೆನುತಲಾರ್ಭಟಿಸಲಾತನು |
ಕಳುವದದನುಕೇಳುತಾಗಪುಷ್ಕಳಾಖ್ಯನು|  ||120||

ಹುಲುನಪಾಲನಣುಗನಂಮಬಲವಗೆಲಿದುದ |
ಬಲುಹನೋಳ್ಪೆನಿಲ್ಲುರಣಕೆಸಲೆಸಮರ್ತ್ಯದ |
ಫಲವತೋರ್ಪೆಘಳಿಗೆಯೊಳಗೆನೋಡುಸಹಸವ |
ತಳುವದೀಗಲೆನುತ ಸರಳಸುರಿಯಲಭ್ರವ|  ||121||

ಭಾಮಿನಿ

ತುರಗಕಸ್ತ್ರವನಾಲ್ಕುಸಾರಥಿ
ಗೆರಡುಧ್ವಜಕೊಂದೆಸವರೋಷದೊ
ಳಿರದೆಸ್ಯಂದನರಕ್ಷಕರಿ | ಗೆರಡೊಂದನಪಸುತಗೆ ||
ಕರದಧನುಹಯಸೂತರಥಸಹ |
ಧರೆಗುರುಳಿಸಿದನೆಲ್ಲಬಲವನು |
ಕರೆಸಿಪುಷ್ಕಳನೊಡನೆಕರೆದಿಂತೆಂದರೋಷದಲೀ   ||122||

ರಾಗ ಕೇತಾರಗೌಳ ಅಷ್ಟತಾಳ

ಸಮರದೊಳಿದಿರಾಗಿನಿಲದೀಗ ಪುಷ್ಕಳ | ಗಮಿಸುವದಾವಲ್ಲಿಗೇ |
ಕ್ರಮದಿಂದ ತವಸ್ಯಂದನವ ಹಾರಿಸುವೆನೊಂದು | ಕ್ಷಣದೊಳಗಂಬರಕೇ ||123||

ಎನುಸತ್ತ್ರವೆಸೆಯೆಪುಷ್ಕಳನರಥವನೊಂದು | ಕ್ಷಣನೂರ್ಯ್ಯೋಜನತನಕಾ |
ತೊಲಗುತ್ತಲಲ್ಲಲ್ಲಿತಿರುಗಲುಕಾಣುತ್ತ | ಕಣೆಯಿಂದ ಪುಷ್ಕಳನೂ  ||124||

ಎಸದುಸಮಾಧಾನಗೊಳಿಸುತ್ತವನೊಡ | ನುಸುರೀದಪುಷ್ಕಳನು |
ವಿಶಿಖವನೀಗಳಾನೆಸೆವುತ್ತನಿಂದಾನು | ವಸುಧೆಯೊಳೊರಸುವೆನು| ||125||

ಎನುತೆಚ್ಚಬಾಣವತನರಥವನುಕೊಂಡುವಾಯಿನಮಂಡಲಕೆಪೋಗಲು |
ಘನತರಕಿರಣಜ್ವಾಲೆಗೆಸೂತಹಯಮತ್ತೆ | ಸ್ಯಂದನದಹಿಸಲಾಗ ||4||

ಹರನಸ್ಮರಿಸುತರುಕ್ಮಾಂಗದಮೂರ್ಛಿಸಿ | ಧರೆಗುರುಳಲುಕಾಣುತ್ತ್ತ |
ಶರಚಾಪವಿಡಿದುಕೋಪದಿವೀರಮಣಿಬಂದು | ಧುರಕನುವಾದನಿತ್ತ| ||126||

ಭಾಮಿನಿ

ವೀರಮಣಿಯೊಳುಧುರವನೆಸಗಲು |
ಮಾರುತಿಯುಬರುತಿರಲುಕಾಣುತ |
ಮಾರಜನಕನದೂತನಿಂ | ಗುಸುರಿದನುಪುಷ್ಕಳನೂ |
ಧೀರನೀನಹೆಸೈರಿಸುವದೀ |
ಬಾರಿಗೀತನೊಳಾನುಕಾದುವೆ |
ನೋಡುನೀನೆನಲೈದೆ ಪುಷ್ಕಳಗೆಂದನವನೀಶ |  ||127||

ರಾಗ ಕಾಂಭೋಜಿ ಅಷ್ಟತಾಳ

ಕೇಳುಪುಷ್ಕಳನೆನೀನಿಂದೂ | ಎನ್ನ | ಮೇಲೆಯುದ್ಧಕೆನಡೆತಂದು |
ಬಾಳುವದೆಂತುನೀಬಾಲಕನಾಗಿಹೆ | ತಾಳುಕೋಪಿಸದಿರುಪೇಳುವೆನೀಗಳು ||128||

ಸುತನಕೆಡಹಿದಕೋಪವನ್ನೂ | ಬಿಟ್ಟು | ಖತಿಯಲ್ಲದೀಗಪೇಳುವೆನೂ |
ಜತನದಿಂದಲಿದೃಷ್ಟಿ ಪಥಕೆಬೀಳದವೋಲು | ಅತಿಶಯದಿಂಪೋಗುಹಿತದಿಂದುಲುಸುರುವೇ  ||129||

ರಾಗ ಸೌರಾಷ್ಟ್ರ ತ್ರಿವುಡೆ

ಎಂದುದನುಕೇಳುತ್ತಪುಷ್ಕಳ | ನಂದದಾಬಾಲಕನಹುದುಯೆ |
ನ್ನಿಂದನೀನತಿವದ್ಧನಾತಹು | ದಿಂದುಸಹಜ  ||130||

ಆದರೀಕ್ಷತ್ರಿಯರುರಣದಲಿ | ಕಾದಿಜಯಸುವ | ಸುಭಟಮುಖ್ಯರು |
ಮೇದಿನೀಪಾಲಕರಮತವಿದು | ನಾದರಿಸಲು|  ||131||

ತವಸುತನಸಮರದಲಿಗೆಲಿದಿಹ | ಕವಲುಬಾಣವುನಿನ್ನ ಬಯಸುವ |
ದವನಿಪಾಲಕಜೋಕೆಯಿಂದಿನ | ಬವರದೊಳಗೇ|  ||132||

ಎಂದುವಿಂಶತಿಶರವಬಿಡಲದ | ಕಂಡುನಪಮೂರಸ್ತ್ರವೆಸೆಯಲು |
ನಿಂದಿಸುತಪುಷ್ಕಳನಫಣಿಗದು | ಬಂದುನಾಂಟೇ|  ||133||

ಬಿದ್ದುಚೇತರಿಸುತ್ತಭರತಜ| ಕ್ಷುದ್ರಭೂಪನೆಹರನಬಲದಲಿ |
ಭದ್ರನಾಗಿಹೆನಿಂನಸಮರದಿ | ನಿದ್ರೆಗೈಪೇ|  ||134||

ರಾಗ ಶಂಕರಾಭರಣ ಮಟ್ಟೆತಾಳ

ಬಳಿಕನೂರುಶರವನೆಸೆಯಲಾಗಪುಷ್ಕಳ |
ಘಳಿಲನೈದಿವೀರಮಣಿಯಕುದುರೆತೇರ್ಗಳ |
ಹೊಳೆವಕವಚಧನು ಕಿರೀಟವಿಳೆಗೆಕೆಡಹಲೂ |
ಚಲುವದೇಹದಿಂದ ಅರುಣಜಲವುಸುರಿಯಲು|  ||135||

ಧರಣಿಪಾಲಪೊಸವರೂಥವಡರುತಾಗಳು |
ಭರತಸುತನೊಳೆಂದಹರಿಯಚರಣ |  ಕಪೆಯೊಳು |
ವಿರಥಗೈದರಿಂದಲೆಂಮನೀರಣಾಗ್ರದೀ |
ಹರಣವಳಿಯದಂತೆ ಕಾವುದುರುಪ್ರಯತ್ನದೀ|  ||136||

ಧಾರುಣೀಶನಿಂತುನುಡಿಯಲಾಗಖತಿಯೊಳು |
ಕ್ರೂರಶರವಸಂಖ್ಯವೆಸದನಾರುಭಟೆಯೊಳು |
ಭೂರಿಮಾರ್ಗಣಂಗಳೈವುತಾ ರಣಾಗ್ರದೀ |
ಮಾರಪಿತನಬಲವವಸವರಲುಗ್ರ ಕೋಪದೀ|  ||137||

ರಾಗ ದೇಶಿ ಆಟತಾಳ

ನೋಡುತ್ತಾ ಸೇನೆಯಳಿಯಲುಪುಷ್ಕಳ |
ಹೂಡಿ ಬಾಣವರಿಪುಬಲವನೀ | ಡಾಡಿದನು ಕ್ಷಣಮಾತ್ರದೀ|  ||138||
ಶೋಣಿತಾಂಗದಿಬಲವಿರೆನಪತಾನು |
ಕಾಣುತಲೆಪುಷ್ಕಳಗೆಸೆಯ ಸು | ತ್ರಾಣದಿಂಸಾಯಕವನು|  ||139||
ಬಂದುಪುಷ್ಕಳಧರಿಸಿದಕವಚವು |
ಚಿಮ್ಮಿಸುತಶರಪಂಜರದವೋ | ಲ್ನಿಂದರುಣಜಲಸೂಸಲು|  ||140||

ನಿಂದುರಾಮನಸ್ಮರಿಸುತ್ತಪುಷ್ಕಳ |
ನಂದುಪ್ರತಿಶರವೆಸದುನಪನೊಡ | ನೆಂದ ಕೋಪಗಳಿಂದಲೀ  ||141||

ರಾಗ ಕಾಪಿ ಅಷ್ಟತಾಳ

ವದ್ಧನಿನ್ನನು ಕೊಲಲ್ಯಾಕೆಂದು | ಬಿಡ
ಲುದ್ಯೋಗಿಸಿರುತಿರಲೈತಂದು ||
ಯುದ್ಧಾವಗೈದಪೆನಿನ್ನಾನೂ | ಗೆಲ್ದ
ಶಬ್ದವನುಸುರುವೆಕೇಳು ನೀನು|  ||142||

ಕಾಶಿಯ ನೈದಿದಮಾನವ | ತಾನು
ಲೇಸಿನೊಳಗೆಗಂಗಾಸ್ನಾನವ ||
ತೋಷದೊಳೆಸಗದೆಬಂದರೆ | ಆ
ದೋಷವುನಿನ್ನನುಗೆಲದಿರೆ|  ||143||

ಎಂದುಶಪಥವಿಡೆಕೇಳುತ್ತ | ಶರ
ದಿಂದೆಚ್ಚನಪರೋಷತಾಳುತ್ತ ||
ಬಂದುಪುಷ್ಕಳನ ಹದಯವನು | ಹೊಕ್ಕು
ಮುಂದಕೈಯಲು ಕಾಣುತಾತನು|  ||144||

ರಾಮನಹದಯದಿಸ್ಮರಿಸುತ್ತ | ಮತ್ತಾ
ಭೂಮಿಪಾಲಕನನು ನೋಡುತ್ತ ||
ಕಾಮಾರಿಯಂತುರೆಕೋಪದೀ | ಬಿಟ್ಟ
ನಾಮಹಾಸ್ತ್ರವನುಪ್ರತಾಪದೀ|  ||145||

ಭಾಮಿನಿ

ಶರಹತಿಗೆನಪಮೂರ್ಛಿಸುತಲಾ |
ಧರಣಿಗೊರಗಲು ಕಾಣುತಾಗಳು |
ತರಹರಿಸಿನಪಸೈನ್ಯಬೆದರಲು ವೀರಸಿಂಹಾಖ್ಯ ||
ಬರುವುದನುರಣದೊಳಗೆ ಕಂಡಾ |
ಮರುತಸಂಭವಖತಿಯೊಳಾತನ |
ಕರೆದುಮೂದಲಿಸುತ್ತಲುಸುರಿದನುರುಸಗಾಢದಲಿ|  ||146||

ರಾಗ ನಾದನಾಮಕ್ರಿಯೆ ಅಷ್ಟತಾಳ

ಖುಲ್ಲವೀರಸಿಂಹಮುಂದಾ
ವಲ್ಲಿಗೈದುತಿರುವೆ ನಿಲ್ಲು
ಬಲ್ಲೆ ನಿನ್ನ ಬಗೆಯ ರಣ | ದಲ್ಲಿ ಕೊಲುವೆನು  ||147||

ಎಂದುನುಡಿಯಲಾಗಕೋಪ ||
ದಿಂದವೀರಸಿಂಹಶರವ |
ಸಂಧಿಸುತ್ತ ಬಿಟ್ಟವಾಯು || ನಂದನಗಂದು|  ||148||

ತಟ್ಟ ನಂಬುತಾಗಲಾಗ |
ಸಿಟ್ಟಿನಿಂದಲನಿಲಸೂನು |
ಮುಷ್ಟಿಯಿಂದತಿವಿಯಲವನು | ಸೃಷ್ಟಿಗೊರಗಿದ|  ||149||

ಹಿರಿಯ ತಾತಮೂರ್ಛಿಸಿರುವ |
ಪರಿಯನಾಭಾಂಗಾದ್ಯಾರು ||
ಅರಿತುಶರವನೆಚ್ಚರಾಗ | ಮರುತಜಾತಗೇ|  ||150||

ತಾಳಿಕೋಪದಿಂದಹನುಮ  |
ಬಾಲದಿಂದಸುತ್ತಿ ಬಡಿಯೆ ||
ಬೀಳೆಮೂರ್ಛೆಯಿಂದಲದರ | ಪೇಳಲೇನದ|  ||151||

ಭಾಮಿನಿ

ರಾಮದೂತನಸಮರದಲಿ || ಸಂ |
ಗ್ರಾಮಕೊದಗಿದವೀರರಸುಗಳ ||
ಬೀಳಲೆಚ್ಚನುಬಲಸಹಿತ | ಮಲಗಿಸಿದಧರಣಿಯಲೀ ||
ಭೂಮಿಪತಿಸಹಿ ತೊರಗೆ ಕಾಣುತ |
ಕಾಮವೈರಿಯುನೊಂದುಮನದಲಿ |
ರಾಮಸೈನ್ಯವಮುರಿದು ಕೆಡಹುವೆ | ನೆನುತಲೈತಂದ|  ||152||

ರಾಗ ಸವಾ ಏಕತಾಳ

ಈ ಪರಿಯಲಿಬಲವಳಿದುದ ಕಾಣುತ |
ಲಾಪಶುಪತಿಮನದಲಿನೊಂದು ||
ಕೋಪಿಸುತಲಿಬಲಸಹಿತೈತಂದ ರ|
ಮಾಪತಿ ಸೈನಿಕದೆಡೆಗಂದು|  ||153||

ರಾಗ ಭೈರವಿ ತ್ರಿವುಡೆ

ಬಂದನಾಗಾ | ಸಾಂಬನು | ಬಂದನಾಗ |
ಬಂದನಾಕ್ಷಣರಾಮ ಸೈನ್ಯವ |
ಹೊಂದಿಸುವೆನೆಂದೆನುತವಹಿಲದಿ |
ಬಂದನಾಗ || ಸಾಂಬನುಬಂದನಾಗ| ||ಪಲ್ಲವಿ||

ಚಂದ್ರ ಕಿರಣದಕಾಂತಿರತ್ನಗ |
ಳಿಂದಮಕುಟವುಹೊಳೆಯಲು |
ಸ್ಯಂದನದಸತ್ತಿಗೆಯಮೌಕ್ತಿಕ |
ದಿಂದಜಲ್ಲಿಗಳುಲಿಯಲೂ |
ಮುಂದಲೆಯಜಡೆಯಿಂದಜಾನ್ಹವಿ |
ಬಿಂದುಗಳುಕೆಳಗಿಳಿಯಲು ||
ನಂದಿವಾಹನ ತನ್ನ ಭಕ್ತರು |
ನೊಂದರೆಂಬುದನರಿವುತಾರಘು |
ನಂದನನಸೈನ್ಯದೊಳುಕಾದುವೆ |
ನೆಂದುರೋಷದಿಮುಂದಕೈತರೆ |
ಬಂದನಾಗ | ಸಾಂಬನು | ಬಂದಾನಾಗ|  ||154||

ಶಿರಗಳೈದರೊಳೆಸೆವಕಾರ್ತ |
ಸ್ವರಮಯದಕುಂಡಲಗಳು |
ಕರದಪುಟದಲಿಶೋಭಿಸುತ್ತಿಹ ||
ಪರಿಪರಿಯಮುದ್ರಿಕೆಗಳು |
ಸುರಚಿರದನವರತ್ನ ಖಚಿತದಿ |
ಮೆರುವುತಿಹಭೂಷಣಗಳೂ ||
ಪುರಹರನುಪ್ರಮಥಾದಿಗಣಗಳ |
ವೆರಸಿ ನಾನಾವಾದ್ಯಘೋಷದೊಳರೆಮಿಷದಲಿಪೊರಟುಬಂದನು ||
ಧುರವನೀಕ್ಷಿಪೆನೆನುತಭರದಲಿ |
ಬಂದನಾಗಾ | ಸಾಂಬನು | ಬಂದನಾಗಾ|  ||155||

ಭಾಮಿನಿ

ಬಂದುರಣದಲಿಕಾದಿಮೂರ್ಛೆಗೆ |
ಸಂದು ಮಲಗಿದನಿಜಶರಣರನು ||
ನಿಂದುನೋಡುತಪ್ರಳಯಕಾಲದರುದ್ರನಾಗಿರಲೂ ||
ಇಂದು ಶೇಖರನಿರವಕಾಣುತ |
ಲಂದುಶತ್ರುಹನವನೆಡೆಗೆನಡೆ |
ತಂದು ಕೋಪಿಸುತಾಗಳಾ ಹರನುಡಿದನಿಂತೆಂದೂ|  ||156||

ರಾಗ ಕೇತಾರಗೌಳ ಅಷ್ಟತಾಳ

ಶತ್ರುಹಕೇಳ್ಸಮರದಲಿಪುಷ್ಕಳನು ಸದ್ಭಕ್ತರ | ಗೆಲಿದಿಹನೂ ||
ಎತ್ತ ಪೋದನು ಈಗತೋರಿದರವನ | ಕೊಂದಿಕ್ಕುವೆಸಮರದಲೀ| ||157||

ಎಂದಾಗವೀರಭದ್ರನಕರದವನೊಡ | ನೆಂದನುಕೋಪಾದಲಿ ||
ಇಂದುರಣಾ ಗೈದಿಪುಷ್ಕಳನನುಜಯಿ | ಸೆಂದೆನೆಕೇಳುತ್ತಲೀ|  ||158||

ವೀರಭದ್ರನುಬರಲಿತ್ತಲುನಂದಿಯ | ಮಾರುತಿಯಿದ್ದೆಡೆಗೇ|
ಧೀರಕುಶದ್ವಜನೆಡೆಗೆಪ್ರಚಂಡನ | ಮಾರಾರಿಕಳುಹಿದನು|  ||159||

ಭಂಗಿಯನಾಗಸುಬಾಹುವಿನೊಳುಸುಮು ದಂಗೆಚಂಡನನೇಮಿಸಿ ||
ಗಂಗಾಧರನುಂತಿರಲ್ಕೆಪುಷ್ಕಳನಿಂನುಬಾಣಂಗಳ ನೆಚ್ಚನಾಗಾ ||  ||160||

ಮಡನುತ್ರಿಶೂಲವಬಿಡಲು ಖಂಡಿಸಿದನು | ನಡುವೆಪುಷ್ಕಳನದರಾ |
ತಡೆಯದೀಕ್ಷಿಸಿ ವೀರಭದ್ರಖಟ್ವಾಂಗವ | ಪಿಡಿದಡಹಾದನಾಗ  ||161||

ರಾಗ ಶಂಕರಾಭರಣ ಮಟ್ಟೆತಾಳ

ವೀರಭದ್ರಭರತಸುತನೊಳಾರು | ಭಟಿಸುತೆಂದನಾಗ |
ಮಾರಹರನಸೇವಕರವಿಚಾರವರಿಯದೇ ||
ಶೂರತನದಿಗೆಲಿದುಬಂದ | ವೀರವಿಕ್ರಮವನುನಿಲಿಸಿ |
ಚಾರಿವರಿವೆನೋಳ್ಪುದೀಗಳೀರಣಾಗ್ರದಿ|  ||162||

ಎಂದುಖಟ್ವಾಂಗದಿಂದ | ಲಂದುಪೊಡೆಯೆಪುಷ್ಕಳನಿಗೆ ||
ಬಂದುಶಿರಕೆತಾಗೆಮೂರ್ಛೆ | ಯಿಂದಲೊರಗಿದ|  ||163||

ಒಂದುಕ್ಷಣದಿ ಚೇತರಿಸುತ | ನಿಂದುಖಟ್ವಾಂಗವನ್ನು |
ಛಿಂದಿಸಿದನು ಸಂಪ್ರತಾಪ | ದಿಂದಪುಷ್ಕಳ|  ||164||

ಕೆರಳಿ ಕೋಪದಿಂದ ಭರತ | ಸುತನುವೀರಭದ್ರನಂನು ||
ಧರೆಗೆಅಪ್ಪಳಿಸಲುಎದ್ದು | ಮರಳಿಯುದ್ಧದೀ|  ||165||

ಬಳಿಕ ಮಲ್ಲಯುದ್ಧದಿಂದ | ಛಲದೊಳೈದುದಿವಸತನಕ ||
ಕಲಹಗೈವುತೀರ‌್ದರಾಗ | ಳಲಸದೀರ್ವರೂ|  ||166||

ತಳದುಕೋಪದಿಂದ ಪು | ಷ್ಕಳನುವೀರಭದ್ರನನ್ನು |
ಕಳೆದುಬಡಿದನಂದುಪಥ್ವಿ | ಗೊರಗುತಾಕ್ಷಣಾ|  ||167||

ನೊಂದು ವೀರಭದ್ರ ಭರತ | ನಂದನನಚರಣಪಿಡಿದು ||
ನಿಂದು ಪಥ್ವಿಗಿಡಲು || ಮೂರ್ಛೆ | ಯಿಂದಲೊರಗಿದ|  ||168||

ಬಂದುಶಿರವನಾತ್ರಿಶೂಲ | ದಿಂದಬಡಿದುವೀರಭದ್ರ ||
ಇಂದುಧರನಬಳಿಗೆಪೋದ | ನಂದುತೋಷದೀ|  ||169||