ವಾರ್ಧಕ
ಚಿತ್ತದೊಳಗಾ ರಾಮಚಂದ್ರನಂ ಧ್ಯಾನಿಸುತ |
ಪುತ್ರಶೋಕವನುನೀಡಾಡಿಸು ಜ್ಞಾನದಿಂ |
ಚಿತ್ರಾಂಗದೇಹವನು ಸಂಸ್ಕಾರಮಂಗೈದು | ವೂರ್ಧ್ವಕ್ರಿಯಾದಿಗಳನು |
ವಿಸ್ತರಿಸುತಾಬಳಿಕ ಹಿರಿಯಸುತದಮನಂಗೆ |
ಸ್ವಸ್ಥದಿಂಪಟ್ಟಾಭಿಷೇಚನವಗೈವುತ್ತ |
ಉತ್ಸಹದಿಸೇನಾಸಮೂಹಸಹಿತೈತಂದ ಪಥ್ವೀಶನಾ ಸುಬಾಹು ||219||
ರಾಗ ರೂಪಕತಾಳ ಸಾಂಗತ್ಯ
ಬಂದನುಬಳಿಕಸುಬಾಹುವಕಾಣುತ್ತ | ಯಿಂದೀರೇಶನ ಸಹಭವನ |
ಚಂದದಿಯಾಗದಶ್ವವು ಸಹಿತಲೆಸೇನಾ | ವಂದವನೊಡಗೊಂಡುನಡೆಯೇ| ||220||
ಇತ್ತಲಾಯಾಗದಶ್ವವು ನಡೆತರೆಬ್ರಹ್ಮ | ವರ್ತದಬಳಿಗೆಕಂಡಾಗ |
ಪಥ್ವೀಪಾಲಕರೆಲ್ಲರೈತಂದು ಕಾಣಿಕೆ | ಯಿತ್ತಿದಿರ್ಗೊಳುತಿರಲಾಗ ||221||
ಬಂದವನಿಪರಮನ್ನಿಸೆಸೇನೆಸಹಿತಲಾ | ಂದದಿಶತ್ರುಹನಂದು |
ಚಂದದಿಂದಿರೆಶೇಷನುಸುರೀದ ಋಷಿಗಳಿ | ಗಂದುವಿಸ್ತಾರದಿಕಥೆಯಾ| ||222||
ಎರಡನೆಸಂಧಿ ಪ್ರಾರಂಭವು
ವಾರ್ಧಕ
ಮುನಿಪಕೇಳೈನೀನು ಮುಂದಣಕಥಾಮತವ |
ಬಲಸಹಿತಶತ್ರುಘ್ನ ನಡೆಯೆತೇಜಃಪುರಕೆ |
ಜನಪಾಲಮಣಿಸತ್ಯವೇನನೆಂಬವನಿಂಗೆ ಚರರೈದಿಪೇಳೆಬೇಗ ||
ತನಯರುಕ್ಮನಿಗೆಪಟ್ಟವಗಟ್ಟಿತೋಷದಿಂ |
ಯಿನಕುಲೇಶನಪಾದ | ಕೆರಗಿಕಾಣಿಕೆಯಿತ್ತು
ವಿನೆಯದಿಂಬಹೆನು ಬೆಂಬಲಕೆಂದುಪೇಳಲಿಕೆ |
ಮನ್ನಿಸುತಪೊರಮಟ್ಟು ಮುಂದೆಬರಲೂ| ||1||
ರಾಗ ಕಾಂಭೋಜಿ ಝಂಪೆತಾಳ
ಶತ್ರುಹನಸೇನೆಯೊಡನೈದೆವಿದ್ಯುನ್ಮಾಲಿ | ಧೂರ್ತರಕ್ಕಸನುಮಾಯಕದೀ |
ರಕ್ತದುರ್ಮಾಂಸಕೀವಿನಮಳೆಯಸುರಿಯೆ ಕಾ | ರ್ಗತ್ತಲೆಯುಕವಿಯೆ ಮಾರ್ಗದಲೀ| ||2||
ಸಿಡಿಲುಮಿಂಚಿನ ಶಬ್ದವಡಿಗಡಿಗೆಕೇಳಿಕಂ | ಗೆಡುತಸೇನೆಯುಭಯದೊಳಾಗಾ |
ಸಡಗರದೊಳಾಗಮಖತುರಗವನುಪಿಡಿದು ನಭ | ಕಡರಿದನು ದುರುಳನತಿಬೇಗಾ| ||3||
ಪಾತಾಳ ವಾಸಿಯಾಗಿರುವರಾವಣನಸಖ | ಧೂರ್ತರಕ್ಕಸನುವೈರದಲೀ |
ಸೃಷ್ಟಿಪಾಲಕರಾಮನಶ್ವವನುಪಿಡಿದೊದ | ಧೂರ್ತರಕ್ಕಸನುಮಾಯಕದೀ| ||4||
ಬಳಿಕಮಾಯಗಳಡಗುತಂಬರದೊಳಲ್ಲಿನಿ | ರ್ಮಲವಾಗಿಬೆಳಗುತಿರಲಾಗ |
ಚಲುವಯಾಗದಹಯವುಕಾಣದಿರೆಚಿತ್ತದಲಿ | ಕಳವಳಿಸುತಿಂತೆಂದರವರು | ||5||
ರಾಗ ಆನಂದಭೈರವಿ ಏಕತಾಳ
ವಿಶ್ವವಂದ್ಯರಾಮಚಂದ್ರ | ನಶ್ವಮೇಧಹಯವಿನ್ನೆಲ್ಲಿ |
ಪೋದುದೋ | ಮತ್ತೇ | ನಾದುದೋ| ||6||
ಪರಿಕಿಸಿನೋಡಲುಮುಂದೆ | ತುರಗದಹೆಜ್ಜೆಯಕಾಣೆ |
ವೆಂದರೂ | ಬಲು | ನೊಂದರು | ||7||
ರತ್ನದಾಸೆಯಿಂದಹಯವಾ | ಯತ್ನದಿಂದವಂಚಿಸಿಯೆ |
ಪೋದರೋ | ಮೋಸ | ಗೈದರೋ| ||8||
ಇಂತೆಂದುತಮ್ಮೊಳುತಾವೆ | ಚಿಂತಿಸುತ್ತೋರ್ವರನೋರ್ವ |
ಮಾತನೋಡುತ್ತ | ||9||
ಭಾಮಿನಿ
ಮೌನಿವರಕೇಳಾಗತುರಗವೆ |
ಕಾಣದಳಲುತಲಿರಲಿಕಭ್ರದಿ |
ದಾನವೇಂದ್ರನು ತನ್ನ ಸೈನಿಕವೆರಸಿ ರಥದೊಳಗೇ |
ತಾನುಕುಳಿತಿರಲೀಕ್ಷಿಸುತಲಾ |
ಸೇನೆಶತ್ರುಹಗುಸುರುತಿರಲಾ |
ಭಾನುವಂಶಜವರಸುಮಂತ್ರನೊಳೆಂದನೀಹದನಾ| ||10||
ರಾಗ ಮಾರವಿ ಏಕತಾಳ
ಕೇಳುಸಚಿವಸುಮಂತ್ರನೀನಿದನು | ಪೇಳುವೆನಿನಗೆ ನಾ ಮನದಿತೋರ್ಪುದನು |
ಬಂದಿಹದೈತ್ಯನಾರೆಂದರಿಯೆವುಸೇನಾ | ವಂದಸಹಿತಅಭ್ರದಿಂದಘರ್ಜಿಸುತವನೂ| ||11||
ಮಂದಮತಿಯುನಮ್ಮ | ತುರಗವತನ್ನಯ |
ಸ್ಯಂದನದೊಳಗಿಟ್ಟು | ಮುಂದೆನಿಂದಿರುವನು| |12||
ದುರುಳನೀತನಗೆಲುವ | ಪರಿಯಕಾಣೆನುನಮ್ಮಾ |
ವರಮಹಾಬಲದೊಳಾ | ರಿರುವರೆಂಬುದನು| ||13||
ಪರಿಕಿಸಿನೋಡೆನ | ಗರುಹೆನೆಕೇಳುತ್ತ |
ಪರಿತೋಷದಿಂದಲಾ | ಮಂತ್ರೀತಾನುಡಿದನೂ| ||14||
ರಾಗ ಮೆಚ್ಚುಗೌಳ ಅಷ್ಟತಾಳ
ಲಾಲಿಸೈರಘುಕುಲಜಾತನೇ | ಈಗ | ಪೇಳುವೆಸಮರವಿಖ್ಯಾತನೇ |
ಖೂಳದೈತ್ಯರಗೆಲ್ವವೀರನು | ನಿಮ್ಮ | ಬಾಲಪುಷ್ಕಳನತಿಶೂರನು| ||15||
ವರಲಕ್ಷ್ಮಿನಿಧಿಯುಸುಬಾಹುಕ | ಮತ್ತೆ | ಮರುತಜನಸುಮುದನಪಾಲಕಾ |
ಧುರದೊಳುಯಿವರುಯಿಚೇಕ್ಷಣಾ | ರೆಂಬು | ದರಿತುಪೇಳಿದೆನಿನ್ನೊಳೀಕ್ಷಣಾ| ||16||
ಮಂತ್ರಿವರನಮಾತಕೇಳುತ್ತಾ | ನೃಪ | ನಂತರಂಗದಿತೋಷತಾಳುತ್ತ |
ಮುಂತೀರ್ಪಸುಭಟರನೋಡಲು | ಬಂದು | ನಿಂತೆಂದಪುಷ್ಕಳನಾಗಳು | ||17||
ರಾಗ ಕೇತಾರಗೌಳ ಆಟತಾಳ
ತಂದೆಕೇಳೀಧೂರ್ತಗಿಂದು ಸೋತರೆಶಿತಿ | ಕಂಧರನಿಗೆ ಹರಿಗೆ |
ನಿಂದಿಸಿಭೇದವನೆಣಿಸಿದ ಪಾತಕ | ಬಂದಪುದೆನಗೆಂದನೂ| ||18||
ಮೇದಿನಿಸುತೆಯಗ್ರಜನುಪೇಳ್ದ ವಿಮುಖಿತ | ನಾದರೆಯಾದೈತ್ಯಗೇ |
ವೇದನಿಂದನೆಗೈದು ಕರ್ಮಬಹಿಷ್ಕೃತ | ನಾದವಿಪ್ರನಪಾಪವು| ||19||
ಅನಿಲಜನೆಂದನೀದನುಜನಗೆಲದಿರೆ | ಘನಕಪಿಲೆಯಕ್ಷೀರವ |
ವಿನಯದಿಂದುಂಡಶೂದ್ರನಪಾಪತನಗಹು | ದೆನಲೆಂದವಾಯುಜನು| ||20||
ರಾಗ ಮಾರವಿ ಏಕತಾಳ
ಈ ಪರಿಯಲಿಲಕ್ಷ್ಮೀನಿಧಿಪೇಳಲಿ | ಕಾಪವನಜಬಳಿಕ |
ಶ್ರೀಪತಿಯನುಜನ ಬಳಿಗೈದುಸುರಿದ | ತೋಷದೊಳೀತೆರದೀ| ||21||
ಬಿಡು ಬಿಡು ಚಿಂತೆಯಪೊಡವಿಪನೀಕೇಳ್ | ದಡಿಗಖಳಾಧಮನಾ |
ಬಡಿದುರುಳಿಸುವೆನುರಣದೊಳಗೀಕ್ಷಣ | ಕೊಡಿಸೆನಗಪ್ಪಣೆಯಾ| ||22||
ಲಂಕಾದ್ವೀಪದಿಕಂಡಿಹೆಪೂರ್ವದಿ | ಬಿಂಕದದಾನವರ |
ಶಂಕಿಸದಿರುನೀನೆನೆಕೇಳುತಖಳ | ಹೂಂಕರಿಸುತನುಡಿದ| ||23||
ರಾಗ ಭೈರವಿ ಏಕತಾಳ
ಕೇಳಿರೊಸುಭಟರುನೀವು | ಬಲು | ಗಾಳಗವೆಸಗಲುನಾವು |
ಸೋಲುವರಲ್ಲೆಯಿಹಕೇ | ಬೇ | ಗೇಳಿರೆನಿಜಮಂದಿರಕೇ| ||24||
ಪಾತಾಳದಲಿನಿವಾಸೀ | ಈ | ಭೂತಳವೆಲ್ಲವಜಯಿಸೀ |
ಘಾತಕವಿದ್ಯುನ್ಮಾಲಿ | ವೆಂ | ಬಾತಿಶಯದವೆಸರಿನಲೀ | ||25||
ಬಿಡೆನೀತುರಗವನಿಂದೂ | ಮುಂ | ದಡಿಯಿಡೆಕೊಲ್ಲುವೆಬಂದು |
ಕೊಡದಿರಿಪ್ರಾಣವನೀಗ | ನಾ | ನುಡಿದಪೆಕೇಳಿರಿಬೇಗ| ||26||
ಹಿಂದೆನ್ನಯಸಖನಾದ | ದಶ | ಕಂಧರದೈತ್ಯನಗೆಲಿದ |
ಮಂದಮತಿಯು ಭರದಲ್ಲೀ ನಾ | ಕೊಂದು ಕಳವೆಕ್ಷಣದಲ್ಲೀ| ||27||
ರಾಗ ಸವಾ ಏಕತಾಳ
ಎಂದುದಕೇಳುತಲಾಗತಿಧೈರ್ಯದಿ | ಬಂದನುಪುಷ್ಕಳ ಕೋಪದಲೀ |
ನಿಂದವನಿದಿರೊಳುಮೂದಲಿಸುತಲಿಂ | ತೆಂದುಸುರಿದನುಸಘಾಡದಲೀ| ||28||
ರಾಗ ನಾದನಾಮಕ್ರಿಯ ಆಟತಾಳ
ಖೂಳದೈತ್ಯನೆಕೇಳುನಿನ್ನೊಳು | ಸತ್ಯ | ದೇಳಿಗೆಯಿರಲೀಗಲೆಂನೊಳು |
ಕಾಳಗದೊಳಗೆ ತೋರಿಸುನೀನೂ | ಯಿಂತಾ | ಜಾಲಮಾತುಗಳಾಡಿಫಲವೇನೂ| ||29||
ಹಿಂದೆದಶಾಸ್ಯರಾಘವನೊಳು | ಕಾದಿ | ಹೊಂದಿದ ಬಲಸಹಿತಾಗಳು |
ಇಂದವನಶ್ವದನೆವದಲಿ | ನಿನ್ನ | ಕೊಂದೀಗಶತ್ರುಹಕ್ಷಣದಲ್ಲೀ| ||30||
ಎಂದುಶಕ್ತಿಯಬಿಡೆಪುಷ್ಕಳ | ಶರ | ದಿಂದತರಿವುತಾಗಲಾಖಳ |
ನಿಂದಿರುತೊಲಗದಿರೆನುತಲೀ | ಕೋಪ | ದಿಂದಪೊಡದನಾತನಾಗ| ||31||
ತರಿದುತ್ರಿಶೂಲವನಾಗಳು | ಪ್ರತಿ | ಶರವೆಸೆಯಲುಬಂದುತಾಗಲು |
ದುರುಳಮುದ್ಗರದಿಂದಪೊಡೆಯಲು | ಇಳ | ಗೊರಗಿದ ಪುಷ್ಕಳನಾಗಳು| ||32||
ಎದ್ದುಪುಷ್ಕಳಶರವೆಸೆಯಲು | ಖಳ | ನಿದ್ದಲ್ಲಿಗೈವುತ್ತಲಾಗಲು |
ಬಿದ್ದುಮೂರ್ಛಿತನಾಗೆದನುಜನು ಬಂದ | ಸದ್ದಿಲ್ಲದಂತವನನುಜನೂ| ||33||
ಭಾಮಿನಿ
ಉಗ್ರದಂಷ್ಟ್ರನುಕಾಣುತಲೆ |
ನ್ನಗ್ರಜನರಥದೊಳಗೆತಾಕುಳಿ |
ತುಗ್ರತಾಪದಿಪುಷ್ಕಳನೊಳಿಂ | ತೆಂದಘರ್ಜಿಸುತಾ ||
ಶೀಘ್ರದಿಂಮುಂದೆಲ್ಲಿಗೈದುವೆ |
ನಿಗ್ರಹವಮಾಡುವೆನೆನಲು | ಬಳಿ |
ಕುಗ್ರಭಾವದಿನಿಂತುಪುಷ್ಕಳಗೆಸೆದನಸ್ತ್ರವನೂ| ||34||
ರಾಗ ಶಂಕರಾಭರಣ ಮಟ್ಟೆತಾಳ
ಎಸದಶರಗಳೂ | ತಾಗ | ಲಸುರಖತಿಯೊಳು |
ಪೊಸತ್ರಿಶೂಲದೀ | ಪೊಡೆದ | ನಸಮಕೋಪದೀ| ||35||
ಶೂಲಹತಿಯಲೀ | ಮೂರ್ಛೆ | ತಾಳುತಿಳೆಯಲಿ |
ಬೀಳೆಭರತಜ | ರೋಷ | ತಾಳಿಪವನಜ| ||36||
ಎಂದನಾಗಳೂ | ಕೋಪ | ದಿಂದಖಳನೊಳು |
ಇಂದು ನಿನ್ನನು | ರಣದಿ | ಕೊಂದು ಕಳವೆನು| ||37||
ಎನುತಬಾಲದೀ | ಕನಲಿ | ಕರದಿಚರಣದಿ |
ದನುಜಬಲವನೂ | ತತು | ಕ್ಷಣದಿಗೆಲಿದನು| ||38||
ಭಾಮಿನಿ
ಮೌನಿವರ್ಯನೆ ಕೇಳುಹನುಮನು |
ಖೂಳದೈತ್ಯರಕುಲವಸವರಿದ |
ಬಾಲದಲಿಕೈಕಾಲಿನಲಿಸದೆಬಡಿದನೇನೆಂಬೆ
ಭಾನುಕುಲಜರಮೆಚ್ಚಿಸಿದ ಸಂ |
ಗ್ರಾಮದಲಿಕೊಳುಗುಳದೊಳೀತಗೆ |
ಜಾಣರಿಲ್ಲೆಂದಮರತತಿ ಬೆರ | ಗಾಗಿನೋಡುತಿರೇ| ||39||
ರಾಗ ದೇಶಿ ಅಷ್ಟತಾಳ
ಇಂತುಸೇನೆಯಕೊಲುತಿರೆಮಾರತೀ |
ದಂತಗಡಿವುತಉಗ್ರದಂಷ್ಟ್ರನು | ನಿಂತುಶೂಲವನೆಸದನೂ | ||40||
ಬರುವಶೂಲವ ಕಾಣುತ್ತ ಮಾರುತಿ |
ಕರದಿಮುರಿಯಲುಬೆದರಿಮಾಯದಿ | ಸುರಿದಮಾಂಸದವಷ್ಟಿಯ| ||41||
ಪರ್ವತಂಗಳುಶಿರದರುಂಡಗಳಾಗ |
ಪೂರ್ವಿಯಲಿಬೀಳಲ್ಕೆ ಕಾಣುತ | ಸರ್ವಸೈನಿಕಬೆದರಲೂ| ||42||
ರಾಮಚಂದ್ರನನೆನೆವುತ್ತರೆಲ್ಲರು |
ಭಾನುವಂಶಜನನಂದುಮಿಗೆ | ನಾರಾಯಣಾಸ್ತ್ರವಬಿಟ್ಟನು| ||43||
ಮಾಯವೆಲ್ಲವು ಅಡಗಲಾರಘು |
ರಾಯನನುಜನುಬಿಟ್ಟಶರದಲಿ | ಖೂಳಮೂರ್ಛೆಗೆಬೀಳಲು| ||44||
ವಾರ್ಧಕ
ಮತ್ತೆ ಕೇಳೈಮುನಿಪಬಾಣಹತಿಯಿಂದಲಾ |
ದೈತ್ಯಕಳವಳಿಸಲ್ಕೆಸೇನೆಮುರಿದುದಕಂಡು |
ಧೂರ್ತವಿದ್ಯುನ್ಮಾಲಿಕೋಪದಿಂ ಶರವೆಸೆಯೆರಾಘವಾನುಜನುಬಳಿಕಾ ||
ಪ್ರತ್ಯಸ್ತ್ರವೆಸೆಯೆನಾರಾಯಣಾಸ್ತ್ರವಬಿಡಲು |
ಧೂರ್ತರಕ್ಕಸನಕರಗಳ ಕಡಿದುಕೆಡಹುತಿರೆ |
ಧೂರ್ತದೈತ್ಯಾನುಜಂರೋಷದಿಂ ಶತ್ರುಘ್ನಗಿದಿರಾಗುತಿಂತೆಂದನೂ ||45||
ರಾಗ ಕಾಂಭೋಜಿ ಮಟ್ಟೆತಾಳ
ಅಗ್ರಜನಕೊಂದೆನೆಂದು | ಹಿಗ್ಗಬೇಡನಿನ್ನರಣದಿ |
ನಿಗ್ರಹವನುಮಾಡದಿರಲು | ಉಗ್ರದಂಷ್ಟ್ರನೇ| ||46||
ಎಂದುಮುಷ್ಟಿಯಿಂದ ದೈತ್ಯ | ಬಂದುತಿವಿಯೆ ಶತ್ರುಹಾಖ್ಯ |
ನಂದುರೋಷದಿಂದ ಶಕ್ತಿ | ಯಿಂದಲೆಚ್ಚನೂ| ||47||
ಬಾಣಹತಿಗೆಖಳನಶಿರವು | ಕ್ಷೋಣಿಯೊಳಗೆಬೀಳಲಂದು
ಯೇನನೆಂಬೆದೈತ್ಯಕುಲವ | ಹಾನಿಗೈದುದ| ||48||
ವಾರ್ಧಕ
ಮುನಿವರನೆಲಾಲಿಸೈ ದೈತ್ಯರಂಸಂಹರಿಸಿ |
ಘನಪರಾಕ್ರಮದಿಂದ ಯಾಗದಶ್ವವುಸಹಿತ |
ಜನಪಾಲಶತ್ರುಹನು ಮುಂದಕೈತಂದ ರಣ್ಯಕಮುನಿಗೆನಮಿಸಲಂದೂ ||
ಇನಕುಲೇಶನ ದರ್ಶನವಗೈಯ್ಯಬೇಕು |
ತಾನೆನೆಕೇಳಿನೆರವಾಹನದೊಳವನಕಳುಹಲ್ಕೆ |
ಚಿನುಮಯನನೋಡಿ ಸಾಯುಜ್ಯಪದವಿಯ ಪಡೆದನೇನೆಂಬೆನಚ್ಚರಿಯನೂ| ||49||
ಭಾಮಿನಿ
ಇತ್ತ ವಾಜಿಯು ಮುಂದಕೈತರ |
ಲುತ್ತುಮದ ಯಮುನಾನದಿಯ | ಮುಳು
ಗುತ್ತಹಯಪಾತಾಳಕೈದಲು ಕಂಡುನಾರಿಯರೂ |
ಚಿತ್ತದಲಿ ಸಂತೋಷದಾಳುತ |
ಪಥ್ವಿಪತಿಯಶ್ವವನುಕಟ್ಟಿರ |
ಲಿತ್ತ ಸೈನಿಕವೈದಿ ತುರಗವೆ ಕಾಣದಳಲಿದರು| ||50||
ರಾಗ ಮಧ್ಯಮಾವತಿ ಅಷ್ಟತಾಳ
ಯಾಗದಶ್ವವುಮುಂದೆಬರುತಿರಲಾಗ | ರಾಘವಾನುಜಸಹಿತೈತಂದೆವೀಗ |
ಸಾಗಿಪೋಗಲುವಾಜಿಯೀನದಿಯೊಳಗೆ | ಅಗಲರಿಯದೆಂದುತೋರುವದೆಮಗೇ| ||51||
ನೆಲೆಯನರಿಯದೀಗಳೀನದಿಯಲ್ಲಿ | ಇಳಿದುಪೋಗಲುಮತ್ತೆನಡುಮಧ್ಯದಲ್ಲಿ ||
ಸುಳಿಯಲಿಸಿಕ್ಕಿತೋಮತಿಮೋಸದಲ್ಲೀ | ಮುಳುಗಿಪೋದುದೋಕಾಣೆಹಯವಿದರಲ್ಲೀ| ||52||
ಇಂತುತಮ್ಮೊಳುಮಾತನಾಡುತ್ತಲಾಗ | ಚಿಂತಿಸಿಶತ್ರುಹಗರು ಹಲುಬೇಗ |
ಮಂತ್ರಿಯಕರದುಸುರಿದನವನಂದು | ಕಂತುಜನಕನಶ್ವದಿರವಪೇಳೆಂದೂ| ||53||
ರಾಗ ಘಂಟಾರವ ಅಷ್ಟತಾಳ
ಎಂದುನುಡಿಯೆಶತ್ರುಹಾಖ್ಯನು | ಕೇಳುತ್ತಲಾಗ | ಚಂದದಿಂದಾಪೇಳ್ದಸಚಿವನು |
ಇಂದುನೀನೀವಾಜಿಗೋಸುಗ | ನೊಂದುಮನದಲಿಚಿಂತಿಸದಿರೈ |
ಮುಂದೆಯತ್ನವಗೈವಡುಸುರುವೆ | ನೊಂದುಪಾಯವಲಾಲಿಸೀಗಳು| ||54||
ತುರಗವೀ ನದಿಯೊಳಗೆ ಮುಳುಗುತ್ತ | ಪಾತಾಳಲೋಕಕೆ | ಸರಿಯೆನಾರಿಯರಲ್ಲಿಕಾಣುತ್ತ |
ಬರದಲಿಖಿತವನೋಡಿಚಿತ್ತದಿ | ಹರುಷಗೊಳುತಲೆಬಂಧಿಸಿಹರಾ |
ಪುರವರಕೆನೀನೈದಲೀಕ್ಷಣ | ತ್ವರಿತದಿಂದೀಕಾರ್ಯವಪ್ಪುದು | ||55||
ಭಾಮಿನಿ
ಎಂದನುಡಿಯನುಕೇಳುತಾ ರಘು |
ನಂದನನುಪುಷ್ಕಳಸಮೀರಜ |
ರಂದುಧೈರ್ಯದೊಳಾಗ | ಮುಳುಗಿದರಾಮಹಾನದಿಯಾ ||
ಮುಂದಕೈದಲುಕಂಡುನಾರೀ |
ವಂದಮನ್ನಿಸಿತುರಗವೀಯಲು |
ಬಂದುಸೈನಿಕರಿದ್ದೆಡೆಗೆ ಪೊರವಂಟರಲ್ಲಿಂದಾ| ||56||
ದ್ವಿಪದಿ
ವರಮಹರ್ಬಲಸಹಿತನದಿಯನುತ್ತರಿಸೀ |
ತುರಗದೊಡನೈತಂದರಾಗಲನುಸರಿಸಿ| ||57||
ದೇವಪುರಕಾಗಿಬರುತಿರಲುಮಾರ್ಗದಲಿ |
ಠೀವಿಯನದೇನೆಂಬೆಪರಮ ವಿಭವದಲೀ| ||58||
ಆಪುರಕೆವೀರಮಣಿಯೆಂಬನಪನಂದು |
ಗೋಪತಿಯಸತುಕರುಣದಿಂದಾಳುತಿಹನು| ||59||
ಶಿವನುಪ್ರಮಥಾದಿಗಳುಸಹಿತ ಆಪುರದೀ |
ಅವನಿಪತಿಗೊಲಿದುತಾನಿರ್ದಸಂತಸದೀ| ||60||
ವನಕೇಳಿಗೆಂದೆನುತ ನಪನ ಸುಕುಮಾರಾ |
ವಿನಯದಿಂ ಪೊರಟರುಕ್ಮಾಂದನುವೀರಾ| ||61||
ನಾನಾಸುವಾದ್ಯಘೋಷದಲಿವನಕಾಗೀ |
ಮಾನಿನೀಜನಸಹಿತ ಬಂದಲೇಸಾಗೀ| ||62||
ವಾರ್ಧಕ
ಪರಿಪರಿಯರತ್ನದಾಭರಣದಿಂ | ಚರಣದಿಂ |
ಕೊರಳಮುತ್ತಿನಹಾರ ಕಾಂತಿಯಿಂ ಶಾಂತಿಯಿಂ |
ಮೆರವಸುಂದರದಆನಂದದಿಂಚಂದದಿಂ ಮತ್ತ ಗಜಗಾಮಿನಿಯರೂ ||
ಸ್ಮರಕೇಳಿಗೊದಗುವಪ್ರವೀಣೆಯರುಜಾಣೆಯರು |
ಪುರುಷರೊಲಿಸುವ ಕಲಾವಂತೆಯರುಕಾಂತೆಯರು |
ಕಿರುನಗೆಯಮಿಸುಗುತಿಹರುಷದಿಂಸರಸದಿಂ ಶಂಗರಿಸಿನಡೆತಂದರೂ| ||63||
ರಾಗ ಕಾಂಭೋಜಿ ಝಂಪೆತಾಳ
ಪರಿಪರಿಯಪಣ್ಣು ಫಲ | ಭರಿತವಾಗಿಹಚೂತ | ಮೆರವಪನಸಾದಿ ವಕ್ಷಗಳ |
ಪರಿಯಕಂಡಾಗಳಚ್ಚರಿವಡುತಸೇವಿಸುತ | ಲಿರದೆನಡೆತಂದರತಿಬೇಗ| ||64||
ಮರುಗಮಲ್ಲಿಗೆಜಾಜಿ | ಸುರಗಿಸೇವಂತಿಗೆಯು | ಪರಿಮಳದನಾಗ ಸಂಪಿಗೆಯೂ |
ಕರವೀರಜಾಜಿ | ಪುನ್ನಾಗಕೇತಕಿಗಳಿಂ | ದಿರದೆಶೋಭಿಸುತಿರಲಿಕಾಗ| ||65||
ಮುಡಿದುಪುಷ್ಪಗಳ | ಮುಂದಡಿಯಿಡುತಲಾಗಲತಿ | ಬೆಡಗಿನಿಮ್ಮಾತನಾಡುತಲೀ ||
ಸಡಗರದಿಕುಳಿತಿರಲೂ | ಕಡುಚಲುವಮಖತುರಗ | ನಡುಬಟ್ಟೆಯೊಳಗೆಬರುತಿರಲೂ| ||66||
ಭೂರಿಸಂಭ್ರಮದಿಂದ | ಲೈತರುವವಾಜಿಯನು | ನಾರಿಯರುಕಂಡುಭ್ರಮಿಸುತಲೀ |
ಆರಿದರತಂದಿರುವರೆನುತಮಾತಾಡಿದರು | ಚಾರುನೇತ್ರೆಯರುತಮ್ಮೊಳಗೆ ||67||
ರಾಗ ಸೌರಾಷ್ಟ್ರ ರೂಪಕತಾಳ
ತಂಗೀನೋಡೀವಾಜಿ | ಯಂಗಲಾವಣ್ಯವ | ಶೃಂಗಾರವಾಗಿತೋರುತಿದೇ |
ಮಂಗಲಕರವಿದ | ರಿಂಗಿತವರಿತೀರ್ದ | ರಂಗನಾಮಣಿಯುಸುರೆನಗೇ| ||68||
ಮಂದಗಮನೆಅಕ್ಕ | ಲಾಲಿಸುಪುರಕಿಂತ | ಸುಂದರವಾಜಿಯೀವರೆಗೇ |
ಬಂದುದಕಾಣೆನು | ಪೊಸತಿದುಭಾಳದೊ | ಳೊಂದೂಲೇಖನವಿರುತಿಹುದು| ||69||
ಪಂಚವರ್ಣದಹಯ | ಕಾಂಚನಾಭರಣಾದಿ | ಮಿಂಚಿನಂದದಿಹೊಳೆಯುತಿದೇ |
ಮುಂಚೆಲ್ಲುಕಾಣೆವು | ವಂಚನೆಯಲ್ಲೀದು | ಚಂಚಲಿಸುವದೆನ್ನಾಮನವು| ||70||
ಅಕ್ಕಕೇಳೀವಾಜಿ | ಸಿಕ್ಕುವದೆಂತುಟೊ | ರಕ್ಕಸಾಂತಕಬಲ್ಲನಿದನು |
ಮಿಕ್ಕವರಿಂದಾಗ | ದೆನುತೆಲ್ಲರೊಡಗೂಡಿ | ರುಕ್ಮಾಂಗದನೊಳುಸುರಿದರು| ||71||
ರಾಗ ಕಲ್ಯಾಣಿ ಝಂಪೆತಾಳ
ಚಿತ್ತವಿಸುನಪತಿಲಕನಾನೆಂಬಮಾತ |
ಉತ್ತುಮದಕಾರ್ಯವಿಹುದೆನಲೆಂದನಾಥ| ||72||
ಮತ್ತಗಜಗಮನೆಯರಿರ್ಯಾತಕನುಮಾನ |
ಬಿತ್ತರಿಪುದೆನೆಕೇಳುದೆಂದನೀಹದನ| ||73||
ರತುನಾಭರಣದಿಂದಶೋಭಿಸುವತುರಗ |
ಪಥದಿಪೋಪುದನುತರಿಸೆನಲೆಂದನಾಗ| ||74||
ಪಥುವಿಪಾಲರಯಾಗದಶ್ವಬಲಸಹಿತ |
ಜತನದಿಂಬಹುದೆನಲುಪೇಳಿದರುನಗುತಾ| ||75||
ಚದುರನಮ್ಮಿಷ್ಟವನುಸಲಿಸದೀತೆರದೀ |
ಬೆದರುವರೆನಪರೆನಲಿಕೆಂದನತಿಮುದದೀ| ||76||
ಇದರಿಂದಅತಿಶಯದವಾಜಿಯನುನಿಮಗೆ |
ಬದಲೊಂದಕೊಡಿಸುವೆನುಕಾಡದಿರಿಯನಗೆ| ||77||
ರಾಗ ಸವಾ ಏಕತಾಳ
ಎಂದುದಕೇಳುತಲಾಗತಿದುಗುಡದಿ | ಮಂದಗಮನೆಯರುಮನದೊಳಗೇ |
ನೊಂದೀತನೊಳ್ಯಾಕುಸುರಿದೆವನುತ | ಲಿಂ | ತೆಂದರುಕೋಪಿಸಿತಮ್ಮೊಳಗೇ| ||78||
Leave A Comment