ರಾಗ ಸಾರಂಗ ಅಷ್ಟತಾಳ
ಲಾಲಿಸಬೇಕುರಾಯಾ | ನಾವೆಂಬುದು | ಜಾಲಾಮಾತಲ್ಲಜೀಯಾ |
ಪೇಳುವೆನೇನ ಸುಶೀಲನಿನ್ನಾತ್ಮಜ | ಲೀಲೆಯಿಂಮ್ರೃಿಗಬೇಟೆಗೇ | ಪೋಗಿರಲಾಗಿ| ||143||
ಸಾಕೇತಾಧಿಪರಾಮನು | ಹಯಮೇಧವ | ಸ್ವೀಕರಿಸುತಲವನು |
ಲೋಕೈಕವೀರರಗೆಲಲೆಂದು ಕಳುಹೀದ | ಲೇಖನ ಸಹಿತತಾನು | ವಾಜಿಯನು| ||144||
ಕಂಡಶ್ವವನುಕಟ್ಟಿದ | ಶತ್ರುಹನಮುಂ | ಕೊಂಡುರಣದಿಗೆಲಿದಾ |
ತಂಡತಂಡಸುಭಟರಜಯಸಿದನು | ಪ್ರಚಂಡ ನಿನ್ನಾತ್ಮಜನು | ಧುರಧೀರನೂ | ||145||
ಬಂದುಪುಷ್ಕಳಬಳಿಕಾ | ರಣಾಗ್ರಕೆ | ನಿಂದನುನಪತಿಲಕಾ |
ಅಂದವನೊಳುಕಾದಲಾರದೆಮೂರ್ಛೆಗೆ | ಸಂದುಮಲಗಿದತಾನು | ನಿಮ್ಮಮಗನು ||146||
ಭಾಮಿನಿ
ಚರರನುಡಿಯನುಕೇಳುತಾಕ್ಷಣ |
ಧರಣಿಪಾಲಸುಬಾಹುಕೋಪದಿ |
ಕರೆದುಸೇನಾಪತಿಯೊಳುಸುರಿದ | ನವುಡಗಡಿಯುತಲೀ |
ತರಳನನುಸಂಗರದಿಕೆಡಹಿದ |
ಪರಮಪಾತಕಿಜೀವದಾಸೆಗೆ |
ಪುರಹರನಮರೆಹೊಗಲು | ಬಿಡೆನೆಂದಾರ್ಭಟಿಸಿನುಡಿದಾ| ||147||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಕೇಳುಸೇನಾಪತಿಯೆರಿಪುಗಳ | ಬೀಳುಗೆಡೆವೆನುನಿಮಿಷಮಾತ್ರಕೆ |
ಕಾಳಗಕೆಸಂನಾಹಗೈವುದು | ತಾಳದೀಗಾ | ||148||
ಎಂದುನೇಮಿಸಲಾಗಸೇನಾ | ವಂದಸಹಿತಲಿತೆರಳೆಭೂಪತಿ |
ಬಂದನಪನಗ್ರಜಸುಕೇತನು | ಕುಂದದಾಗ| ||149||
ನಪನಸುತಚಿತ್ರಾಂಗನೆಂಬವ | ನಪರಿಮಿತಬಲಯುತವಿಚಿತ್ರನು |
ಶಪಥವಿಡಿದೈತಂದರಾಗಲು | ಕುಪಿತರಾಗೀ| ||150||
ಭೇರಿಕಹಳೆಮದಂಗಪಣವೆ ನ | ಗಾರಿನಾನಾವಾದ್ಯಘೋಷದಿ |
ಧಾರುಣೀಪತಿಸಮರಕೈದಿದ | ನಾರುಭಟಿಸೀ| ||151||
ರಾಗ ಸಾಂಗತ್ಯ ರೂಪಕತಾಳ
ಬಂದಾಭೂಪತಿರಣರಂಗದೊಳಗೆನಿಜ | ಸ್ಯಂದನದೊಳುಮಲಗಿರುವಾ |
ಕಂದನಕಂಡು ಮೈದಡವುತ್ತ ದುಃಖಿಸು | ತಂದುದೇಹದೊಳುನಾಂಟಿರುವ| ||152|
ಶಸ್ತ್ರವತೆಗೆದು ನೀರಿನಲೀಗಾಯವತೊಳ | ಸುತ್ತಿರಲಾಗಚೇತರಿಸೀ |
ಹಸ್ತದಿಧನುಶರ ವಿಡಿದುಕಣ್ದೆರವುತಾ | ಲಿಂತೆಂದಘರ್ಜಿಸುತ| ||153||
ಎಲ್ಲೀಗೈದಿದಪುಷ್ಕಳಾಖ್ಯಕಾಣೆನುಜೀವಾ | ಗಳ್ಳರತೆರದಿಂದಲೀಗ |
ಕೊಲ್ಲುವೆನೆನುತಿರ | ಲಿದಿರಲ್ಲಿಪಿತನಾ | ಕಂಡಲ್ಲೀಯೇಮಣಿದನುಪದಕೇ| ||154||
ಸುತನಂನುತೆಗದಪ್ಪಿ | ಅತಿಹರುಷದಿಸೇನಾ | ಪತಿಯೊಡನಿಂತೆಂದನಾಗಾ |
ಚತುರತೆಯಿಂದೆಮ್ಮ | ಸೈನಿಕವನುಕ್ರೌಂಚಾ | ಕೃತಿಯಿಂದಾರಚಿಸೆನಲೆಂದಾ| ||155||
ಮುಂದೇಸುಕೇತು | ಪಾರ್ಶವಿಚಿತ್ರಾಂಗವಿಚಿತ್ರಾ | ಹಿಂದೇನಿಂದನುತಾಬೆಂಬಲಕೇ |
ಅಂದವರುಗಳನೀಕ್ಷಿಸುತಕೇಳಲಿಕೆ | ಮತ್ತೆಂದಾಸು ಮಂತಭೂಪರೊಳು| ||156||
ರಾಗ ಸೌರಾಷ್ಟ್ರ ಆಟತಾಳ
ಚಕ್ರಾಂಕಪುರವರಾಧೀಶಸುಬಾಹುಕ | ವೀರನೀತ |
ಶಂಖಚಕ್ರಧರನಭಕ್ತಪರಮಪುಣ್ಯಾತ್ಮಕ | ವೀರನೀತ| ||157||
ದುರ್ಮಾರ್ಗರಹಿತದುಷ್ಕರ್ಮರಶೀಕ್ಷಕ | ವೀರನೀತ |
ಸತ್ಯಧರ್ಮದಿಪ್ರಜೆಪರಿವಾರವಸಲಹು | ಧೀರನೀತ ||158||
ಸಂಗರಶೂರಪರಾಕ್ರಮನಾಗಿಹ | ವೀರನೀತಾ
ರಣರಂಗದೊಳರಿಗಳ | ಜಯಿಸುವ ಸುಭಟನು | ವೀರನೀತಾ| ||159||
ಭೂತಳಧಿಪರೊಳುಖ್ಯಾತನೆಂದೆನಿರೊಸುವ | ವೀರನೀತ |
ಸುಮಹಾತಿಶಯದಿರಾಜನೀತಿಯಿಂದಿರುವನು | ವೀರನೀತ| ||160||
ಭಾಮಿನಿ
ಧಾರುಣೀಪತಿಕೇಳುಕೋಟೆಯ |
ವೀರನನುಜಯಿಸುವರೆನಮ್ಮಯ |
ಭೂರಿಬಲದೊಳುಲಕ್ಷ್ಮಿನಿಧಿ | ಹೊರ ತಾಗದನ್ಯರಲೀ |
ತಾರತಮ್ಯದಿಅರಿತುಕಾದುವ ವೀರರಿಗೆಪೇಳೆನಲುಕೇಳುತ |
ಮಾರಮಣಶ್ಯಾಲಕನು ಬಂದಿಂ | ತೆಂದಶತ್ರುಹಗೇ| ||161||
ರಾಗ ಕೇತಾಳಗೌಳ ಝಂಪೆತಾಳ
ಮಿತ್ರಕುಲಜಾತಕೇಳು | ನಿನೊಡನೆ | ವಿಸ್ತರಿಪೆನಾನೀಗಳು |
ಶತ್ರುಗಳಜಯಸಲೆಂದು | ಮನದೊಳಗೆ | ವ್ಯರ್ಥಚಿಂತಿಸದಿರಿಂದು| ||162||
ಕ್ರೌಂಚಾಕೃತಿಯಸೈನ್ಯವ | ಗೆಲಲುನಿರ್ವಂಚನೆಯೊಳ ಭಾರ್ಗವಾ |
ಮುಂಚೆಕಲಿಸಿಹ | ನುಎನಗೇ | ಬರಿದೇನೀಚಂಚಲಿಸಲ್ಯಾಕೆಹೀಗೇ| ||163||
ಅನುಮಾನವ್ಯಾತಕಿದಕೇ | ನೇಮವನು | ಯನಗಿತ್ತುಕಳುಹುಧುರಕೇ |
ಘನಪರಾಕ್ರಮಿಗಳನ್ನೂ | ಜಯಿಸುವೆನು | ರಣದೊಳಗೆ ಕೇಳುನೀನು| ||164||
ಎಂದನುಡಿಯನುಕೇಳುತ | ಚಿತ್ತದೊಳ | ಗಂದುಹರುಷವತಾಳುತಾ |
ಚಂದದಲಿಶತ್ರುಘ್ನನಾ | ಪೋಗಿಬಾ | ರೆಂದುನೇಮವನಿತ್ತನು| ||165||
ವಾರ್ಧಕ
ವರಮುನಿಪಲಾಲಿಸೈಲಕ್ಷ್ಮಿನಿಧಿಯಂಬಳಿಕ |
ಧುರಕೆಪೊರಡುತ್ತಿರಲುಪುಷ್ಕಳನುಸಹಿತಾಗ |
ಪರಿಪರಿಯಸೇನಾ | ಸಮೂಹಬೆಂಬಲಕೈದೆ | ನಾನಾಸುವಾದ್ಯದಿಂದಾ ||
ಪರಮವಿಭವದೊಳಾಗ ಶತ್ರುಘ್ನರಥವೇರಿ |
ಬರತಿರಲುಯಿತ್ತ| ಲಕ್ಷ್ಮಿನಿಧಿಯುಸುಕೇತುವನು |
ಕರದುಚಾಪವನುಜೇಂಗೈದುಕೋಪದೊಳೆಂದ | ನುರುಪರಾಕ್ರಮದಿಂದಲೀ| ||166||
ರಾಗ ಪಂತುವರಾಳಿ ಮಟ್ಟೆತಾಳ
ಯೆಲೆಸುಕೇತುರಣದೊಳಿದಿರುನಿಲಲುಬಂದೆಲಾ |
ಜಲಜನಾಭನಶ್ವವೆಂದುತಿಳಿಯದಾದೆಲಾ ||
ತಳುವದೀಗಕೊಟ್ಟುಮರೆಯಹೋಗಲುನಿನ್ನನೂ |
ಒಲಿದುರಕ್ಷಿಸುವೆನೆನಲ್ಕೆಪೇಳ್ದನಾತನು| ||167||
ಕ್ಷತ್ರಿಕುಲಜರೆಂಬಪರಿಯನರಿಯದೀಗಳು |
ವ್ಯರ್ಥವಾಗಿನುಡಿಯಲ್ಯಾಕೆಕೇಳುರಣದೊಳು |
ಸತ್ಯವೀರ್ದರೆಂಮಗೆಲಿದುಬಿಡಿಸುಹಯವನು |
ಚಿತ್ತದೊಳಗೆಗೈಹಿಸಿನೋಡೆನುತ್ತಲೆಚ್ಚನೂ| ||168||
ಎಸೆವಶರವಲಕ್ಷುಮಿನಿಧಿಯುನಡುವೆತುಂಡಿಸೇ |
ವಿಶಿಖವಾಸುಕೇತುವುರಕೆನಾಂಟಿಕೀಲಿಸೇ|
ವ್ಯಸನಹಿಡಿದುಪ್ರತಿಶರೌಘದಿಂದಲೆಸೆಯಲು |
ಉರಗಬಾಣಬಂದುಲಕ್ಷುಮಿನಿಧಿಗೆತಾಗಲು ||169||
ಬಂದುತಾಗಿತಾಗಲಕ್ಷುಮಿನಿಧಿಯದೇಹಕೇ |
ಕುಂದದಾತಬದಲುಶರಗಳಿಂದನಿಮಿಷಕೇ |
ಸ್ಯಂಧನವನುಹಾರಿಸಲಿಕೆನಪನಸಹಭವಾ |
ಸಂಧಿಸುತ್ತಲೆಸದರೋಷದಿಂದಲಸ್ತ್ರವಾ | ||170||
ವಾರ್ಧಕ
ಮುನಿಪಕೇಳೈಬಳಿಕ ಶರಹತಿಯೊಳಾಸು | ಕೇ
ತನರಥವುಸಾರಥಿಯು | ಸಹಿತಿಳಿಗೆಬೀಳಲಿಕೆ |
ಘನಪರಾಕ್ರಮದಿ ಪಥವಿಡಿದುನಿಲ್ಲಲಿಕಂಡು ಲಕ್ಷುಮೀನಿಧಿ ಕಾಣುತಾ ||
ಮನದೊಳಗೆರೋಷವನು ತಾಳ್ದುಗದೆಗೊಳುತಲಾ |
ಕಣನೊಳಗೆಮಲ್ಲ | ಯುದ್ಧವನೆಸಗುತಿರಲುನೃಪ |
ನಣುಗಚಿತ್ರಾಂಗಶರಜಾಲದಿಂ | ಕೆಡಹುತಿರೆತಡದನಾಪುಷ್ಕಳಾಖ್ಯ| ||171||
ರಾಗ ನಾದನಾಮಕ್ರಿಯೆ ಮಟ್ಟೆತಾಳ
ಧೀರಪುಷ್ಕಳಾ | ಕ್ರೂರಶರಗಳಾ |
ಧಾರುಣೀಶನಣುಗಗೆಸೆದುತೇರುಹಯಗಳಾ ||172||
ಹಾರಿಸುತ್ತಲೀ | ಸಾರಿಭರದಲೀ |
ಮೂರುಭಾರಿಸುಳಿದುಬೀಳೆಧಾರುಣೀಯಲಿ ||173||
ಬಳಿಕನಪಸುತಾ | ಮುಳಿದುಕನಲುತಾ |
ಸೆಳದಬಾಣವೆಸೆಯೆಪುಷ್ಕಳನವರರಥಾ| ||174||
ಹಾರಿತಾಗಳೂ | ತೇರುಹಯಗಳೂ|
ಭೋರವಿಳೆಗೆಬೀಳಲಾಗಳಾರುಭಟೆಯೊಳೂ| ||175||
ಭಾಮಿನಿ
ಬಳಿಕಪುಷ್ಕಳನೆಂದನಿನ್ನಯ |
ತಲೆಯಕೊಳದಿರೆಪಿಡಿದಬಾಣದಿ |
ಸಲೆಪತೀ ವ್ರತೆಯರಿಗೆ ಅಳುಪಿದಪಾತಕವುತನಗೇ |
ತಳುವದಾಚಿತ್ರಾಂಗನುಸುರಿದ |
ಯಲವೊನಿನ್ನಸ್ತ್ರವನುತುಂಡಿಸ |
ದುಳಿದರೇಕಾದಶಿಯ ಮೀರಿದ ಪಾಪ ||176||
ವಾರ್ಧಕ
ಎನಲುಕೇಳುತಲುಗ್ರ ಕೋಪದಿಂತಾಪದಿಂ |
ಕನಲಿಪುಷ್ಕಳಶರವ | ಹೂಡುತಂಮೋಡುತಂ |
ಕಿನಿಸಿನಿಂದೆಸೆಯಲ್ಕೆ | ಕಂಡುಚಿತ್ರಾಂಗ ಪ್ರತಿ | ಯಸ್ತ್ರದಿಂತುಂಡಿಸಿದನು |
ಕಣೆಯಿಂದತುಂಡಿಸಲು ಅರ್ಧಭೂಮಿಗೆಬೀಳೆ |
ಬಳಿಕಮೂಲರ್ಧ | ಚಿತ್ರಾಂಗನಶಿರಂಗಳಂ |
ಮರುಳಿಛೇದಿಸಿಕಡದು | ದೇನೆಂಬೆನದುಭತವ ಮುನಿಪಕೇಳಚ್ಚರಿಯನೂ| ||177||
ವೃತ್ತ
ಕಾಣುತ್ತಾಗಸುಬಾಹುನಪಾಲಕ |
ಕ್ಷೋಣೆಯೊಳೊರಗಿದನೇನೆಂಬೆಂ |
ವೀರಕುಮಾರನಶಿರವನುಮುದ್ದಿಸಿ |
ಭೂರಿಶೋಕಾಗ್ನಿಯೊಳಿಂತೆಂದಂ| ||178||
ರಾಗ ನೀಲಾಂಬರಿ ಆದಿತಾಳ
ಹರಹರಾ ಈಸಮರದೊಳಗೆ | ತರಳನೀನೈತಂದೂ |
ಧುರದಿಪುಷ್ಕಳನ್ನಾಶರಕೇ | ಗುರಿಯಾಗಿನೀನಿಂದು ||179||
ಹರಣವಳಿದುಪೋದುದ್ಯಾಕೇ | ಪರಿಯೊಳೆಮ್ಮನಗಲೀ |
ಕೊರತೆಯಿಂದಲೆಂತುನಿನ್ನ | ಮರೆತುನಾಜೀವಿಸಲೀ| ||180||
ಚಂದ್ರಬಿಂಬವನ್ನುವೋಲ್ವ | ಕಂದನಿನ್ನಾಮೊಗವು |
ಕಂದಿಕಾಂತಿಯಡಗಿತ್ಯಾತ | ಕಿಂದೆನ್ನಾಸತ್ಪಾತ್ರಾ| ||181||
ಸುಂದಾರಾಂಗ ನಿನ್ನಸತ್ವಾ | ದಿಂದಲಾನೀವರೆಗೆ |
ಚಂದದೀರಾಜ್ಯವಾನಾಳ್ದೆ | ಮುಂದಿನ್ಯಾರುನಮಗೇ ||182||
ಅಣ್ಣದಮನ | ಮೃಗಬೇಟೆಗೇ | ಮಿಣ್ಣನೆತಾಪೋಗೀ |
ತನ್ನಾಶೌರ್ಯಗೀತುರಗಾ | ವನ್ನು ಕಟ್ಟಲಾಗೀ| ||183||
ಚಿಣ್ಣನಿಂನಾ ಮರಣವನ್ನೂ | ಕಣ್ಣಾರೇನಾನೋಡಿ |
ಇನ್ನೆಂತುಬಾಳಲಿನಾನೂ | ಪುಣ್ಯಾಹೀನನಾಗೀ| ||184||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇಂತುನಾನಾಪರಿಯೊಳಾಭೂ | ಕಾಂತಶೋಕಿಸುತಿರಲು ಕಂಡ |
ತ್ಯಂತಕೋಪದಿನಪಸುತರುಸಲೆ | ಪಂಥವಿಡಿದೂ| ||185||
ಸುತದಮನನುವಿಚಿತ್ರಸಹಿತಲೆ | ಪಿತನಚರಣಕೆಮಣಿದುಪೇಳಿದ |
ರತಿಪರಾಕ್ರಮರಾಗಿನಾವಿ | ರೆವ್ಯಥೆಯಿದೇನೈ| ||186||
ಮಡಿದಚಿತ್ರಾಂಗನುತವಾತ್ಮಜ | ಪಡೆದವೀರಸ್ವರ್ಗವನು | ನೀ
ಬಿಡುಮನೋಚಿಂತೆಯನುಯುದ್ದವ | ತೊಡಗಿಸಿನ್ನು| ||187||
ಎಂದೊಡಂಬಡಿಸಲ್ಕೆಕೇಳುತ | ಲಂದುಶೋಕವನುಳಿದುಹರುಷದಿ |
ಸ್ಯಂದನವನಡರುತಲಿ ರಣಕೈ | ತಂದರಾಗಾ| ||189||
ಭಾಮಿನಿ
ಅತ್ತ ದಮನಾದಿಗಳುಸಮರದಿ |
ಶತ್ರುಹನಸೈನ್ಯದೊಳುಕಾದಲಿ |
ಕಿತ್ತಸೇನೆಗಳೊರಗೆಬಳಿಕ ಸ | ಮೀರಸುತಬರಲೂ |
ಪಥ್ವಿಪಾಲಸುಬಾಹುವಾತನ |
ಹತ್ತಿರಕೆನಡೆತಂದುತನ್ನಯ |
ಚಿತ್ತದಲಿನಸುನಗುತ ಕೋಪಿಸು | ತೆಂದನವನೊಡನೇ| ||190||
ರಾಗ ಸಾರಂಗ ಅಷ್ಟತಾಳ
ಕಪಿಯೇನೀನಾರೆಂತೆಬುದೆನ್ನೊಳು | ಪೇಳು | ಕುಪಿತದ ಮಾತಲ್ಲವೀಗಳು |
ಕಪಟದೊಳೆಮ್ಮಚಿತ್ರಾಂಗನ ಕೊಂದ | ಚ | ಪಳನಾರೆಂದೆನಲಾಕ್ಷಣ| ||191||
ಭೂತಾಳಧಿಪಗೆಂದನಾತನು | ಕೇಳು | ವಾತಕುಮಾರನಾಹನುಮನು |
ಘಾತಿಸಿದವನಿನ್ನ ಮಗನನು | ವಿ | ಖ್ಯಾತಪುಷ್ಕಳನೆಂಬವೀರನು ||192||
ಎಲ್ಲಿಹನವನೆಂಬುದೀಗಳು | ನೀನು | ಸೊಲ್ಲಿಸಲೀಕ್ಷಣರಣದೊಳು |
ಕೊಲ್ಲುವೆನೆನಲುಪ್ರತಾಪದಿ | ಪೇಳ್ದ | ಫುಲ್ಲನಾಭನದೂತಕೋಪದೀ ||193||
ತುರಗಪಾಲಕರಕ್ಷಣೆಗೆಂದೂ | ಬಂದು | ದರಿಯದಾದೆಯಲಾ ಶತ್ರುಹನಿಂದು |
ಅರಿಗಳೆಲ್ಲಿರನುತಾಜಯಿಸುವ | ನಿಮ್ಮ | ಧುಪರಾಕ್ರಮವನ್ನುನಿಲಿ | ಸುವಾ ||194||
ಎಲವೊಕ್ಷತ್ರಿಯ ಕುಲಜಾತರು | ನಾವು | ಸರಿವೆವೆರಣದಿಸಮರ್ಥರು |
ಮರುಳು ಕಪಿಯೆನೀನಗ್ಯಾಕೆಂದೂ | ಯೀಗ | ತೆರಳುಪುಷ್ಕಳನನ್ನು ತೋರೆಂದೂ| ||195||
ಹುಲುನಪರಾಮ ಸೈನ್ಯವನಿಂದು | ನೀನೂ | ಕೆಡದ ಕಾರಣಬಂದೆ ಕೇಳೆಂದು
ಕಲಹದಿನಿನ್ನದೇಹವನಿಂದು | ನಾನು | ಕೆಡಹದಿದ್ದರೆಹನುಮನಲ್ಲೆಂದು| ||196||
ರಾಗ ಪಂತುವರಾಳಿ ಮಟ್ಟೆತಾಳ
ಎಂದಮಾತನೂ | ಕೇಳು | ತಂದುಜನಪನು |
ಕುಂದದಾಗಪರ್ವತಾಸ್ತ್ರದಿಂದಲೆಸದನು| ||197||
ಬರುವಶರವನು | ಪಿಡಿದು | ಮರುತಜಾತನು |
ಕಂದಿಮುರಿದುಚೂರ್ಣಗೈದುತುರಗರಥವನು| ||198||
ಬಾಲತುದಿಯೊಳು | ಸುತ್ತಿ | ಮೇಲಕೆಳಿಯಲು |
ಜೋಲುತಿರಲು ಕಾಣುತಾ ನಪಾಲನಾಗಳೂ ||199||
ಯೆಸೆಯೆಬಾಣವಾ | ಬಿಂದುಮುಸುಕೆಬಾಣವಾ |
ಬಿಸುಡೆರಥವನಪತಿಯಚ್ಚಪೊಸಶರವುಘವಾ| ||200||
ವಾರ್ಧಕ
ಕಣೆಯಹತಿಯಿಂದಾಗಮಾರುತಿಯು ಕೋಪದಿಂ |
ಜನಪಾಲನುರಕೆಪಾದದೊಳೊದೆಯೆಮೂರ್ಛಿಸಲು |
ಇನಕುಲೇಶನುಸರಯುತೀರದೊಳುಯಾಗ ಶಾ | ಲೆಯಲಿದೀಕ್ಷೆಯನುತಾಳ್ದೂ ||
ಮುನಿವರರನೊಡಗೊಂಡು ಹೋಮಿಸುತಲಿರುತಿಹುದ |
ಕನಸಿನಲಿಕಾಣುತೆಚ್ಚರ್ತುಸಂತೋಷದಲಿ |
ತನುಪುಳಕನಾಗುತುಬ್ಬೇರಿಭಕ್ತಿಯೊಳಾಗ ಚಿನುಮಯನಧ್ಯಾನಿಸಿದನೂ| ||201||
ಜಯರಘುಕುಲಾಧೀಶ ಸಕಲಸಜ್ಜನಪೋಷ |
ಜಯಸೂರ್ಯಸಂಕಾಶದೈತ್ಯವಂಶವಿನಾಶ |
ಜಯತುಸೀತಾಕಾಂತನಿಶ್ಚಿಂತಗುಣವಂತ ಜಯಜಯತು ರಾಮಚಂದ್ರಾ |
ಜಯತುಸುಂದರಗಾತ್ರ ಅಮರಕುಲನುತಿಪಾತ್ರ |
ಜಯಜಯತುಕಮಲಾಕ್ಷಭಕ್ತಜನಸಂರಕ್ಷ |
ಜಯಜಯಚಿದಾಭಾಸಚಿನುಮಯಚಿದಾಕಾಶ ಜಯವೆಂದನಾಭೂಪನೂ| ||202||
ರಾಗ ಕೇತಾರಗೌಳ ಆದಿತಾಳ
ಎಂದುಭಕ್ತಿಯೊಳುಸಂಸ್ತುತಿಸುತ್ತಲಾನಿಜ | ನಂದನದಮನನೂ |
ಚಂದದಿಂಕರೆದತಿಹರುಷದಿಂದಾಗ ಸಾ | ನಂದದೊಳುಸುರಿದನು ||203||
ಕೇಳಾನುಮೂರ್ಛಿತನಾಗಿಮಲಗಿರೆ | ವಿಮಲಸ್ವಪ್ನವಕಂಡೆನು |
ಕಮಲನಾಭನುಯಾಗದೀಕ್ಷೆಯನಾಂತು ಸಂ | ಭ್ರಮದಿಂದಕುಳಿತುದನು| ||204||
ವಂದಾರಕಾದಿಮುನೀಂದ್ರರುಸಹಿತಲ್ಲಿ | ಬಂದುನಮಿಸುತಿಹುದ |
ಕಂದರ್ಪಶತಕೋಟಿತೇಜದಿ ಶ್ರೀರಾಮ | ಚಂದ್ರತಾನಿರುತೀರ್ದನು| ||205||
ರಾಗ ಸೌರಾಷ್ಟ್ರ ರೂಪಕತಾಳ
ಹಿಂದೊಮ್ಮೆ ತೀರ್ಥಯಾ | ತ್ರೆಗೆನಾನುಪೋಗಿರ | ಲ್ಕಕಂದುಕಾಂತಾರ ಮಧ್ಯದಲೀ | ಸಿಂಧುಶಯನನನ್ನು | ಕಂದೆರೆದು ನೋಡದೆ ವಂದಿಸದೆ ನಾನಿರ್ದೆಬಳಿಕ ||206||
ಮುನಿಗಳೊಡನೆತಾನು | ವಿನಯದಿಂಪೇಳಿರೆ | ಮನದಗರ್ವದಿನಾವಾದಿಸಲು |
ಚಿನುಮಯಾತ್ಮಕನಾಮೇಲೆನಗೆವಿಸ್ಮೃತಿಯಾಗ | ಲೆನುತಾಶಾಪಿಸುತಕೋಪಿಸಲು| ||207||
ಬಳಿಕಾಪ್ರಾರ್ಥಿಸೆಲೆನ | ಗೊಲಿದುಪೇಳ್ದನುಮುನಿ | ಜಲಜನೇತ್ರನುಮಖವೆಸಗೀ |
ಚಲುವಯಾಗದಹಯಾ | ಬರಲುವಾಯುಜನಿಂದ | ಕಲಹಾದೊಳಾನುಮೂರ್ಛಿಸಲು ||208||
ರಾಮನಕನಸಿಲಿ | ಪ್ರೇಮದೊಳೀಕ್ಷಿಸ | ಲಾಮೇಲೆಸ್ಮೃತಿಯಾಗಲೆನುತ |
ಆಮುನಿಯನಗಿಂತು | ನೇಮವಿತ್ತುದರಿಂದ | ನಾಮರೆತೆನುರಘುಕುಲವರನ| ||209||
ವಾರ್ಧಕ
ಕಂದಕೇಳಾರಾಮಚಂದ್ರನಶ್ವವನೀಗ |
ಛಂದದಿಂಶಂಗರಿಸಿನಾನಾಸುವಾದ್ಯಂಗ |
ಳಿಂದಕಾಣಿಕೆಗೆನವರತ್ನದಾಭರಣ ಸಹಿತಾತರುವದೀಗೆಂದನೂ| ||210||
ತಂದೆಯಭಿಮತವರಿತು | ಮನೆಗೈದಿತುರಗಸಹ |
ತಂದಲ್ಲಿಬರಲು ಕಾಣುತತೋಷದಿಂತನ್ನ |
ಬಂಧುಗಳನೊಡಗೊಂಡು ಶತಘ್ನನೆಡೆಗೈದಿ ನಮಿಸಿಮತ್ತಿಂತೆಂದನೂ| ||211||
ರಾಗ ನವರೋಜು ಆದಿತಾಳ
ಕೇಳುಶತಹರಾಯ | ಕಪಾಳುರಾಘವಪ್ರಿಯ |
ಬಾಲದಮನದು : ಶೀಲದೊಳೆಸಗಿದ | ಖೂಳತನವನೀಪಾಲಿಪುದೀಗಳೂ| ||212||
ಮೃಗಬೇಟೆಗೆಂದೆನುತ | ವಿಗಡಮಾರ್ಬಲಸಹಿತ |
ಸುಗುಣದಮನುತಾಸೊಗಸಿಲಿಪೋದವ | ಜಗಳವಗಂಟಿಕ್ಕಿದನೀತೇರದಲೀ| ||213||
ಧುರದೊಳಗಾನುಮೂರ್ಛಿಸಲು | ಶ್ರೀ | ಹರಿಯುಸಾಕೇತದೊಳು |
ತುರಗದಯಾಗವವಿರಚಿಸುತಿರಲೀ | ಪರಿಯನಿರೀಕ್ಷಿಸುತರಿತೆನುಸ್ವಪ್ನದಿ| ||214||
ಋತ್ವಿಜರುಋಷಿವರರು ಸುತ್ರಾಮಾದ್ಯನಿಮಿಷರೂ |
ಪಥ್ವೀಕರಬಲಸಹಿತಲೆ | ಶ್ರೀಪುರು ಷೋತ್ತುಮನಿರುವ ವಿ | ಚಿತ್ರವಕಂಡೆನೂ| ||215||
ರಾಗ ಸೌರಾಷ್ಟ್ರ ಅಷ್ಟತಾಳ
ಕೇಳುಸುಬಾಹುಕನೀನು | ಈಗ | ಪೇಳುವೆನಿನ್ನೊಡನಾನು |
ಬಾಲದಮನಪುರವಾಳಲಿದನು | ತವ | ಪಾಳಯಸಹಬರಲೇಳುನಮ್ಮೊಡನೀಗಾ| ||216||
ತುರಗದಬೆಂಬಳಿವಿಡಿದೂ | ನೀನು | ಬರಲುನಪರನೆಲ್ಲಗೆಲಿದು |
ಹರುಷದಿಸಾಕೇತ ಪುರಕೈದಿರಾಮನ | ದರುಶನಗೈಯ್ಯಲು ಪರಿತೋಷವಪ್ಪುದೂ| ||217||
ಎಂದುದಕೇಳುತ್ತಲಾಗ | ನಿಜ | ಮಂದಿರಕೈದತಿಬೇಗ |
ಬಂದುರಣದಿಬಿದ್ದ | ಕಂದನದೇಹವ | ನಿಂದುನೋಡುತಶೋಕದಿಂದಲಾಕ್ಷಣದೊಳು| ||218||
Leave A Comment