ಶಾರ್ದೂಲವಿಕ್ರೀಡಿತ

ರಾಮಂದೈತ್ಯಕುಲಾಂತಕಂ ರಘುವರಂ | ರಾಜೀವನೇತ್ರಂ ಹರಿಂ|
ಶ್ಯಾಮಾಂಗಂ ಶಶಿಶೇಖರಪ್ರಿಯ ಸಖಂ | ದಾಮೋದರಂಧಾರ್ಮಿಕಂ |
ಸೋಮಾರ್ಕಂ ಶತಕೋಟಿ ತೇಜಮನಘಂ | ಪೀತಾಂಬರಾಲಂಕತಂ |
ಕ್ಷೇಮಾರೋಗ್ಯಪ್ರದಾಯಕಂ ಗುಣನಿಧಿಂ | ಶ್ರೀ ರಾಮಚಂದ್ರಂಭಜೆ | ||1||

ರಾಗ ನಾದನಾಮಕ್ರಿಯೆ ಝಂಪೆತಾಳ

ರಕ್ಷಮಾಂ ಗಣನಾಥಾ | ಸುಕ್ಷೇಮಸುಖದಾತ |
ಪಕ್ಷಿವಾಹನಪ್ರೀತಾ | ಯೀಕ್ಷಿಸನವರತಾ | ಜಯತು ಜಯತೂ| ||2||

ಜಯತುಜಯಗಜವದನ | ಜಯಸುಹತ್ಸದನ |
ಜಯತು ಪಾರ್ವತಿಕರುಣ | ಜಯತುಸತುಕರುಣಾ | ಜಯತುಜಯತೂ ||3||

ಲೋಕೇಶ್ವರ ನಿವಾಸ | ನಾಕಪಾಲರಪೋಷ |
ಏಕದಂತಗಣೇಶ | ಶೋಕಭಯನಾಶ | ಜಯತುಜಯತೂ | ||4||

ಭಾಮಿನಿ

ಭಾರತಿಗೆತಲೆವಾಗಿ ನಿರ್ಜರ |
ವಾರಕಭಿವಂದಿಸುತಗುರು ಚರ |
ಣಾರವಿಂದಕೆ ಮಣಿದು ಸತ್ಕವಿ ಗಳನು ಪ್ರಾರ್ಥಿಸುತ |
ನಾರದಾದಿಮುನೀಂದ್ರರುಗಳನು |
ಸಾರವಾಗಿಯೆನುತಿಸಿಪೇಳುವೆ |
ಮಾರಹರತ್ರೈಲೋಕ್ಯ ನಾಥನ ಕಪೆಯೊಳೀಕಥೆಯ| ||5||

ದ್ವಿಪದಿ

ಶ್ರೀ ಮಹಾಪದ್ಮ ಪೌರಾಣವನು ಪಠಿಸಿ
ರಾಮಾಶ್ವ ಮೇಧವನು ಪೇಳ್ವೆನನುಸರಿಸಿ ||6||

ವಾತ್ಸಾಯ ಮುಖ್ಯಮುನಿಗೊಲಿದು ಮಹಶೇಷಾ|
ಉತ್ಸಾಹದಿಂದ ಪೇಳಿದನಿದು ವಿಶೇಷಾ ||7||

ಶ್ರೀ ರಾಘವೇಂದ್ರ ಭಾರತಿಗಳವರಡಿಯಾ|
ಓರಂತೆಭಜಿಸಿ ವಿರಚಿಸುವೆ ನೀಕೃತಿಯಾ ||8||

ಕೇಳಿ ತಪ್ಪಿರೆ ತಿದ್ದಿ ಮೆರಸಿಬಲ್ಲವರೂ|
ಶೀಲಗುಣ ಸಂಪನ್ನ ಸುಜನರಾದವರೂ ||9||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಒಂದುದಿನಶೇಷನಪದಕೆಮಣಿದೆಂದತಾ ವಾತ್ಸ್ಯಾಯಮುನಿ ರಘು |
ನಂದನನ ಚರಿತವನು ವಿಸ್ತರ | ದಿಂದಪೇಳೈ| ||10||

ಪರಮಪಾವನ ಮೂರ್ತಿಗೆತ್ತಣ | ಹರಿಗೆಪಾತಕವೆಂತು ಘಟಿಸಿತು |
ತುರಗಮೇಧವನ್ಯಾಕೆ ಮಾಡಿದ | ನರರತೆರದೀ| ||11||

ಸುಮುದನೊಳುಕಾಣಿಕೆಯಗೊಳುತಲಿ | ವಿಮಲನಪ ಸಹಿತಾಗ ಶತ್ರುಹ |
ಧಮನ ವಿದ್ಯುನ್ಮಾಲಿಮುಖ್ಯರ | ಕ್ರಮದಿಗೆಲಿದಾ| ||12||

ಅಂಗಜನಪಿತನಶ್ವವವನು ರು | ಕ್ಮಾಂಗದನು ಬಂಧಿಸಿದನ್ಯಾತಕೆ |
ಸಂಗರದೊಳವನೆಂತು ಪುಷ್ಕಳ | ನಿಂಗೆಸೋತಾ| ||13||

ವೀರಮಣಿಯನು ಗೆಲಿದು ಪುಷ್ಕಳ | ವೀರಭದ್ರನೊಳ್ಯಾಕೆ ಸೋತನು |
ಮಾರಹರ ತಾನ್ಯಾತಕಾಪುರ | ಸಾರಿನಿಂದ  ||14||

ಕಾಮಿನಿಯುಸಹಿತವನರಥ ಶ್ರೀ| ರಾಮಚಂದ್ರನ ಸ್ಮರಣೆಯಿಂದಲಿ |
ಸೋಮಶೇಖರನಿರುತಿರಲು ಸಂ | ಗ್ರಾಮಕೈದಾ| ||15||

ಘನಪರಾಕ್ರಮಿಶತ್ರುಹನೊಳಾ | ಮನುಮಥಾರಿಯುಧುರವನೆಸಗುತ |
ಅನಿಲಸುತನೊಳು ಸೋತನ್ಯಾತಕೆ | ನಮಗೆಪೇಳೈ ||16||

ತಂದು ಸಂಜೀವನವ ಸೇನಾ | ವಂದವನು ಮಾರುತಿಯು ಜೀವಿಸಿ |
ದಂದವನುಪೇಳೆಮಗೆಕಥೆಯನು | ಸಾಂಗದಿಂದಾ| ||17||

ವಾರ್ಧಕ

ಲಾಲಿಸು ಮುನೀಂದ್ರ ಪೂರ್ವದಲಿತ್ರೇತಾಯುಗದಿ |
ತಾಳಲಾರದೆ ದೈತ್ಯರುಪಟಳವ ಭೂದೇವಿ |
ಶ್ರೀಲತಾಂಗಿಯರಮಣಗರುಹಲ್ಕೆರಾಮಾವತಾರದಿಂಜನಿಸಿಬಳಿಕ ||
ಬಾಲ್ಯದೊಳು ತಾಟಕಿಯ ಮುರಿದು ದೈತ್ಯರ ಸವರಿ |
ಪಾಲಿಸಿದ ಕೌಶಿಕನ ಯಾಗಮಂಮಿಗೆ ಜನಕ |
ನಾಲಯಕ್ಕೈದಿಸೀತೆಯನೊಲಿಸಿ ಮಾರ್ಗದೊಳು ಭಾರ್ಗವನ ಜಯಿಸಿ ಮುಂದೆ | ||18||

ಪಿತನಾಜ್ಞೆಯಂ ತಾಳ್ದು ಸೀತೆಲಕ್ಷ್ಮಣ ಸಹಿತ
ಪಥವಿಡಿದು ವನಕೈದಿ ಸತಿಯನಗಲುತ ಮತ್ತೆ
ಮಥಿಸಿ ವಾಲಿಯಗೆಲಿದು ಸುಗ್ರೀವನೊಡಗೊಂಡು ವಾರಿಧಿಗೆ ಸೇತುಬಲಿದು |
ಜತನದಿಂದಾ ಲಂಕೆಯಂ ಸೇರ್ದು ವರಬಲಾ
ನ್ವಿತನಾದ ದುಷ್ಟಖಳ ರಾವಣನ ಸಂಹರಿಸಿ
ಸತಿಯೊಡನೆ ಸಾಕೇತಕೈತಂದು ರಾಜ್ಯವನ್ನಾಳಿದಂ ಶ್ರೀರಾಮನು ||19||

ಭಾಮಿನಿ

ಹತ್ತು ಸಾವಿರವರುಷತನಕ  ಮ |
ಹೋತ್ಸವದಿರಾಜ್ಯವನುಪಾಲಿಸೆ |
ಪಥ್ವಿಜಾತೆಯುಗರ್ಭವಾಂತಿರೆ ತಿಂಗಳೈದಾಗೇ |
ಧೂರ್ತರಜಕನದುರ್ನುಡಿಯ ಕೇ
ಳುತ್ತಡವಿಯೊಳು | ಸೀತೆಪಡೆದಳು
ಸತ್ಕುಮಾರಕರೀರುವರವಾಲ್ಮೀಕಿಯಾಶ್ರಮದೀ ||20||

ರಾಗ ಕಾಂಭೋಜಿ ಝಂಪೆತಾಳ

ಇತ್ತಲನುಜರುಸಹಿತ | ಸಾಕೇತಪುರವನಾ | ಳುತ್ತಿರಲು ಶ್ರೀರಾಮನಂದೂ |
ಪುತ್ರಪೌತ್ರಕಳತ್ರ ಮಿತ್ರ ಬಂಧುಗಳಿಂ ಸ | ಮಸ್ತ ಪ್ರಜೆಪರಿವಾರವಿರಲೂ| ||21||

ಎಲ್ಲಿ ನೋಡಿದರು ತೋರಣಕುರುಜಮೇರುವೆಗಳ | ಳಲ್ಲಲ್ಲಿಧ್ವಜಪತಾಕಗಳೂ|
ಚಲ್ವನವರತ್ನದಿಂ ವಿರಚಿಸಿದಸೋಪಾನ | ಗಲ್ಲಿಗಲ್ಲಿಯೊಳುರಂಜಿಸಿತೂ ||22||

ಹಿರಿಯವರ ಮುಂದೆ ಮರ | ಣಗಳಿಲ್ಲ ಕಿರಿಯಂಗೆ | ತರುಣಿಯರೊಳಿಲ್ಲ ವಿಧವೆಯರೂ |
ದುರಿತದುಃಖಾದಿಸಂಕಷ್ಟಗಳು ದಾರಿದ್ರ್ಯ | ಬರಲಿಲ್ಲರಾಮರಾಜ್ಯದೊಳೂ| ||23||

ಆನೆಕುದುರೆರಥಾದಿ | ಸೇನಾಸಮೂಹದಿಂ | ದೇನೆಂ ಬೆನಾಸಭಾಲಯವೂ ||
ಗಾನ ಗೀತಮದಂಗ | ನಾನಾ ಸುವಾದ್ಯದಿಂ | ದಾನಂದವಾಗಿ ಶೋಭಿಸಿತೂ| ||24||

ಪರಿಪರಿಯ ರತ್ನಖಚಿ | ತದ ಸಿಂಹವಿಷ್ಟರದಿ | ಹರಿಯು ಒಡ್ಡೋಲಗದೊಳಿರಲೂ |
ಪರಮಋಷಿಕುಂಭಸಂ | ಭವನುಬರುತಿರೆ ಕಂಡು | ಭರದಿಂದಲೆದ್ದು ರಾಘವನೂ| ||25||

ರಾಗ ಸಾಂಗತ್ಯ ರೂಪಕತಾಳ

ಬಂದಾಮುನಿಯನಿದಿ | ರ್ಗೊಂಡುಮಂನಿಸಿ ಕರ | ತಂದೂಪೀಠವನೇರಿಸುತಲಿ|
ಚಂದದಿಕುಳ್ಳಿರಿಸುತಲರ್ಘ್ಯ ಪಾದ್ಯಾಗ | ಳಿಂದಪೂಜಿಸುತಲಿಂತೆಂದಾ| ||26||

ತಾಪಸೋತ್ತಮ ತವದರ್ಶನದಿಂ ಜನ್ಮ | ಸಾಫಲ್ಯವಾಯಿತಿಂದಿನಲೀ |
ಪಾಪಗಳೆಲ್ಲಾ ನಿರ್ಲೇಪವಾಯ್ತೆನುತಲಿ | ಶ್ರೀಪತಿ ಪೊಗಳಲಿಂತೆಂದಾ ||27||

ಯಾತಕಿಷ್ಟುಪಚರಿಸುವೆ ತವನಾಮ ವಿ | ಖ್ಯಾತವಾಗಿಹುದೂ ಮೂಜಗದೀ |
ಪಾತಕವನುಪರಿಹರಿಸುವದಿದುರಾಜ | ನೀತಿಗೋಸುಗ ಪೇಳ್ವುದೈಸೇ| ||28||

ಧರೆಯೊಳು ದಶಕಂಠ ಕುಂಭಕರ್ಣಾದ್ಯರು | ವುರು ಪರಾಕ್ರಮಿಗಳು ಜನಿಸೀ |
ಸುರಪಾಲಾದ್ಯಮರರ ವರತಪಸಿಗಳನು | ದಿನಬಾದಿಸುವ ದೈತ್ಯರನ್ನೂ| ||29||

ಕೊಂದೆನೀಸಮರದಿ ಸಂದೇಹವಿಲ್ಲವಾ | ನಂದಾವಾಯ್ತೀಗ ಸರ್ವರಿಗೇ ||
ಬಂದಾರಕಾದಿ ಮುನೀಂದ್ರರೆಲ್ಲರು ಸೌಖ್ಯ | ದಿಂದಿಹರೈನಿನ್ನದಯದೀ| ||30||

ಭಾಮಿನಿ

ಎಂದನುಡಿಯನು ಕೇಳುತಾ ರಘು |
ನಂದನನುಬೆಸಗೊಂಡನಾದಶ |
ಕಂಧರಾದಿಗಳಾವವಂಶಜರೆಂತು ಜನಿಸಿದರೂ |
ಒಂದುಳಿಯದೆನಗರುಹಬೇಕೆನ |
ಲಿಂದುಮನದಲಿ ಸ್ಮರಿಸಿ ಶ್ರೀರಘು |
ನಂದನಗೆ ದಾನವರ ಮೂಲಸ್ಥಿತಿಯನುಸುರಿದನೂ| ||31||

ವಾರ್ಧಕ

ಲಾಲಿಸೈ ರಘುವರನೆ ದೈತ್ಯರುದುಭವಿಸಿದುದ |
ನಾಳಿಕೋದ್ಭವನಿಂದ ಪೌಲಸ್ತ್ಯಮುನಿಜನಿಸಿ |
ಶೀಲಗುಣಯುತನಾತ ಗುದಿಸಿದಂವಿಶ್ರವಸು | ವಿಂಗೀರ್ವರಮಣಿಯರೊಳು ||
ಲೋಲಲೋಚನೆ ಹಿರಿಯನಾರಿಮಂದಾಕಿನಿಯು |
ಮೇಲೆರಡನೆಯ ಯುವತಿ ಕೈಕಸೆಯು ಸಹಿತಸ |
ಲ್ಲೀಲೆಯಿಂದೀರ್ದ ಅನುಭವಿಸುತಿರಲುದಿಸಿದಂ ಮಂದಾಕಿನಿಗೆಧನಪನೂ| ||32||

ಎರಡನೆಯ ಯುವತಿ ಕೈಕಸೆಯಳಿಗೆ ಮತ್ತುದಿಸಿ
ಖಳರು ದಶಕಂಠ ಕುಂಭ ಶ್ರವಣ |
ವರ ವಿಭೀಷಣ ಶೂರ್ಪನಖಿಯೆಂಬ ರಕ್ಕಸಿಯು ಜನಿಸಿದರದೇಂಪೇಳ್ವೆನೂ |
ಹಿರಿಯಮಗ ದಶಕಂಠ ಕುಂಭಕರ್ಣನುಸಹಿತ |
ಪರಮೇಷ್ಟಿಯಂ ಭಜಿಸಿ ವರವ ಪಡೆದುದರಿಂದ |
ಧುರವಿಜಯರೆನಿಸಿ ತ್ರೈಲೋಕ್ಯಮಂಬಾಧಿಸುತ ಬಳಿಕನಿನ್ನಿಂದಳಿದರು ||33||

ಭಾಮಿನಿ

ಮುನಿವರನವಾಕ್ಯವನುಕೇಳುತ |
ಘನತರದಸಿಡಿಲೆರಗಿದಂದದಿ |
ಜನಪಮೂರ್ಛಿತ ನಾಗಿಮಲಗಿದ | ಮೋಡದಿನನಂತೇ ||
ಅನಿತವೀ ಸಭೆಕಳವಳಿಸುತಿರು | ವನಿತರಲಿ ಮಷಿಮೈದಡವಿ |
ತ್ತಿನಕುಲೇಶನು ದುಃಖಿಸುತಪೇಳಿದನುಮುನಿಯೊಡನೇ ||34||

ರಾಗ ಕಾಂಭೋಜಿ ಏಕತಾಳ

ಏನಮಾಡಲಿಮುನಿಯೇ | ಪಾತಕವಿದು | ಮಾಣಿಸು ಗುಣಮಣಿಯೇ|   || ಪಲ್ಲವಿ ||

ಕ್ಷತ್ರವಂಶಜರು ನಾವೂ | ದ್ವಿಜರಪೂಜಿ | ಸುತ್ತ ನಿರಂತರವೂ |
ಭಕ್ತಿಭಾವದೊಳಿಹೆವು |  ಬಂದುದುಬ್ರಹ್ಮ | ಹತ್ಯದಪಾತಕವೂ| ||35||

ಇಂದುಮುಖಿಯನೆವದೀ | ಕೋಪದಿದಶ | ಕಂಧರಾದ್ಯರರಣದೀ |
ಮಂದಮತಿಯಲಿನಾನೂ | ಬ್ರಹ್ಮವಂಶಜ | ರೆಂದರಿಯದೆಕೊಂದೆನೂ| ||36||

ಬಂದಪಾತಕವಿದನೂ | ಪರಿಹರಿಸಲು | ಮುಂದೇಯತ್ನವಕಾಣೆನೂ |
ಇಂದುಧರನೆ ಬಲ್ಲನೂ | ಯನಲುನಗು | ತೆಂದನುಮುನಿವರನೂ| ||37||

ರಾಗ ಮಧ್ಯಮಾವತಿ ಏಕತಾಳ

ಲಾಲಿಸು ನಾನೆಂಬಮಾತರಾಜೇಂದ್ರಾ | ಜಾಲಮಾತಲ್ಲಿದುಸದ್ಗುಣಸಾಂದ್ರಾ |
ನೀಲನಿಭಾಂಗ ನಿತ್ಯಾತ್ಮನಿರ್ಮುಕ್ತ | ಕಾಲಕರ್ಮವಿದೂರಕಲ್ಮಷರಹಿತಾ| ||38||

ದನುಜರಾವಣಕುಂಭಕರ್ಣರೆಂಬವರೂ | ಅನುಗಾಲನುವೈಕುಂಠದ್ವಾರಪಾಲಕರೂ |
ಸನಕಸನಂದರುಶಪಿಸಲಿಕಂದೂ | ಜನಿಸೀರ್ದರಾಜಯವಿಜಯರೈತಂದೂ| ||39||

ಪರಮಪುರುಷ ಪರಮಾತ್ಮನೀನಾಗಿ | ನರನಾಟಕವ ತೋರಲೆಂಬುದಕಾಗೀ |
ಪರಿಪರಿಮಾಯವ ಚರಿಸಲ್ಯಾಕಿನ್ನು | ಅರುಹುವೆಕೇಳು ಮುಂದಾಹಕಾರ್ಯವನು| ||40||

ರಾಗ ಸೌರಾಷ್ಟ್ರ ತ್ರಿವುಡೆ

ಪರಮಪುರುಷಪರೇಶ ನೀನೀ | ಪರಿಯ ಚಿಂತಿಸಲ್ಯಾಕೆ ನಿನ್ನಯ|
ಸ್ಮರಣೆ ಮಾತ್ರವೆ ಸಾಕು ಪಾಪವ| ಪರಿಹರಿಪಡೆ ||41||

ಆದಡಿದಕೊಂದುಂಟುಪಾಯವು | ಸಾಧಿಸಿಹರೈನಿಮ್ಮಪೂರ್ವಜ |
ರಾದಮರುತನಪಾಲಮುಖ್ಯರು | ಮೇದಿನಿಯೊಳೂ ||42||

ರಾಮಕೇಳೈತುರಗಮೇಧವ | ನೇಮದಿಂದಲಿ ಮಾಡು ಅಘನಿ |
ರ್ನಾಮಮಹುದೆಂದೆನುತ ಪೇಳಿದ | ನಾ ಮುನೀಂದ್ರಾ| ||43||

ರಾಘವನುಮಗುಳೆಂದ ಮತ್ತೀ | ಯಾಗದಶ್ವವಿದ್ಯಾವ ತೆರನಿಹು |
ದಾಗಮೋಕ್ತ ವಿಧಾನವಾವುದು | ಯೋಗಿವರ್ಯಾ| ||44||

ರಾಗ ಕೇತಾರಗೌಳ ಅಷ್ಟತಾಳ

ರಾಘವನುಸುರಿದನುಡಿಯನ್ನೆ ಕೇಳುತ | ಲಾಗ ಮುನೀಶ್ವರನೂ |
ಯಾಗದ ಹಯದ ಲಕ್ಷಣವನ್ನು ನಗುತಲಿ | ಬೇಗದಿಂದುಸುರಿದನೂ| ||45||

ಕುಲದೊಳುಚ್ಚೈಶ್ರವನಾಗಿರಬೇಕದು | ಚಲುವ ಮನೋವೇಗವೂ |
ಚಲುವರಕ್ತಾಸ್ಯಮೈಬಣ್ಣವೀಕ್ಷಿಸೆ ಗಂಗಾ | ಜಲದಂತೆ ತೋರುವುದು| ||46||

ಬಾಲವುಪೀತವಾಗಿರುವದೊಂದೇಕಿವಿ | ನೀಲವರ್ಣದತುರಗವೂ |
ಮೇಲೆದ್ವಾತ್ರಿಂಶತಿಲಕ್ಷಣದಿಂದವಿ | ಶಾಲವಾಗಿರುತಿಹುದು ||  ||47||

ಮಾಸವೈಶಾಖಪೂರ್ಣಮಿಯದಿವಸ ವಿ | ಶೇಷವಾಚರಿಸಾಲೇಕೆ |
ತೋಷದಿಯಜ್ಞದೀಕ್ಷೆಯನಾಂತುಕ್ರಮದಿಂದ | ಲೇಸಾಗಿರಚಿಸೆಂದನೂ| ||48||

ತುರಗವಪೂಜಿಸಿಬರೆದು ಲೇಖನವನ್ನೂ | ವರಬಾಹುರ್ಬಲಸಹಿತ |
ಧರಣಿಪಾಲಕರನ್ನು ಗೆಲಿದೊಂದುವರುಷಕೆ | ಬರಬೇಕುಹಯವೆಂದನೂ| ||49||

ದಕ್ಷಿಣೆದಾನಧರ್ಮಗಳಿಂದ ಸರ್ವರ | ಪೇಕ್ಷೆಯಾಸಲಿಸುವದೂ |
ಭಕ್ಷಭೋಜನದಿಂದಸಂತರ್ಪಣೆಗಳಿಂದ | ಲಕ್ಷಣದಿಂಗೈವುದು ||50||

ದ್ವಿಪದಿ

ಮುನಿಪನೆಂದುದಕೇಳಿ ಸರಯುತೀರದಲೀ |
ಕನಕಮಯಯಜ್ಞ ಶಾಲೆಯ ವಿರಚಿಸುತಲೀ| ||51||

ಗುರುವಸಿಷ್ಠನಗಸ್ತ್ಯವ್ಯಾಸಶೌನಕರಾ |
ವರಕಾಶ್ಯಪತ್ರಿ | ಕೌಶಿಕರನಾರದರಾ| ||52||

ಸನಕಭಾರದ್ವಾಜಗಾರ್ಗ್ಯಮುಖ್ಯರನೂ |
ವಿನಯದಿಂಕರೆಸಿದನು ಬಂಧುವರ್ಗವನೂ| ||53||

ಯಜ್ಞಸಮಯದಿ ಪತ್ನಿ ಹೊರತಾಯಿತೆನಲು |
ಅಜ್ಞಾನವಶದಿಂದ ಸೀತೆಯಅಗಲಿರಲು| ||54||

ಸ್ವರ್ಣಮಯದಿಂದ ವಿಗ್ರಹವರಚಿಸುತಲಿ |
ಸುಜ್ಞಾನದಲಿದೀಕ್ಷೆತಾಳ್ದನೊಲವಿನಲೀ| ||55||

ಪದುಮಾಕ್ಷಯಾಗದಶ್ವವನು ತಾತರಿಸೀ |
ವಿಧವಿಧದೊಳಾಭರಣದಿಂದಲಂಕರಿಸೀ ||56||

ರಾಗ ಸಾಂಗತ್ಯ ರೂಪಕತಾಳ

ಆಸಮಯದೊಳು ತಮ್ಮೊಳಗೆಮಾತಾಡುತ್ತ | ವಾಸುದೇವರಸ್ಮರಿಸುತ್ತಾ |
ಭೂಸುರರೇನು ಸಂತೋಷದೊಳೈತಂದ | ರಾಸಭಾಂತರಕೇತೋಷದಲೀ||57||

ರಾಗ ನಾದನಾಮಕ್ರಿಯೆ ಏಕತಾಳ

ನಿಂಗೋವೆಯಂಮನೆಗೆಬಂದು | ರಂಗನೆಂಬಾಮಾಣಿನಿಂದು |
ಯಂಗೋವರಿಯನಂತೇ ತಂದೂ | ಸಂಗಡಿಲ್ಲಾವಾಯಿತಿಂದೂ| ||58||

ಯಕ್ಕಡಾಸುಂಜೀವವೆಂನಾರೂ | ಯವರುಮಿಕುಚಪ್ಪಿನಾರು |
ಯಿಕ್ಕಡಯಿಂದೂಕುನೊಂದಾರೂ | ದಕ್ಷಿಣೆತೀಸ್ಕೋದಾಳುಮೀರು| ||59||

ರಾಘವಾಜೆಯಜ್ಞ ಸಾಟಿ | ಪಾಗೊಟಿಘಾತ್ಲೊಮೀಮೊಟೀ |
ಆಗತನಾಹಿತೊಣಿಹಿಕಡೆ ಮಾಗತಗೆಲೆಪಷ್ಮಳತಿಗಡೆ| ||60||

ಕಂಕಂಗಲಕೀವಾಂಗಡಜ್ಯಾಗಿ | ಕಂಕಂಪಾವಲಿನುಭಾರಜ್ಯಾಗಿ
ಪ್ಪಂಹು ಙಸುದುಕ್ತಾಮುಕ್ಕಾ | ಚೋತಾಸಬಲಾ ಕುಂಕಿತಾಕಾ| ||61||

ರಾಮಚಂದ್ರಅಪನೆಪರಾಕು | ಹೊಮ್ಮುಬುಆಟಿಹೊಮ್ಮು |
ನಾಮಸುನಕರಾಆಯಹ್ಯೂಕೂ | ಶ್ಯಾಮಹೊಂಗಾಜಾನಹೊಕೂಂ| ||62||

ದಾವಕಿಲ್ಲಾದಂತೇನಮಗೇ | ವಾತನೊದನಾಕಿಗೆಗೆ |
ದೇವರಪೆಟ್ಟಿಗೆ ಬಗಲಾಗಂಟು | ದಾವೆಲ್ಲಿಗೊತೊ ಕೊಡಬಳೆಗಂಟೂ| ||63||

ರಾಗ ಭೈರವಿ ಝಂಪೆತಾಳ

ರಾಘವನುಬಳಿಕಂತು | ಯೋಗಿವರರನುಮತದಿ |
ಆಗಮೋಕ್ತವಿಧಾನ | ವಾಗಿಯಜ್ಞವನು ||64||

ಅನುಕರಿಸುತಶ್ವವನು | ಘನವೇಗದಿಂತರಿಸಿ |
ಮನವಲಿದುಪೂಜಿಸಿದ | ಜನಪಾಲನಂದು ||65||

ಪರಿಪರಿಯಬಿರಿದುಗಳ | ಬರದಶ್ವಮಸ್ತಕಕೆ |
ತ್ವರಿತದಿಂಕಟ್ಟಿಸಿದ | ಧರಣಿಪಾಲಕನೂ ||66||

ರತ್ನಭೂಗೋದಾನ | ಮತ್ತೆ ಭೋಜನದಿಂದ |
ತಪ್ತಿಪಡಿಸಿದನಾ ದ್ವಿ | ಜೋತ್ತಮಾದಿಗಳಾ ||67||

ಆನೆಕುದುರೆರಥಾದಿ | ಸೇನಾಸಮೂಹದೊಳು |
ನಾನಾರಥದಶಸ್ತ್ರ | ಪಾಣಿಯಿಂದಿರಲೂ ||68||

ಭಾಮಿನಿ

ಇಂತೆಸವ ಸಭೆಯೊಳಗೆಶತ್ರುಹ |
ನಂತರಂಗದಿ ಕರೆದು ರಣದಲಿ |
ನಿಂತುಕಾದುವಪರಿಯ ಮರ್ಮವ ನೀತಿಶಾಸ್ತ್ರವನೂ |
ಕಂತುಪಿತನುಪದೇಶವಿತ್ತವ |
ನಂತೆಗದುಬಿಗಿದಪ್ಪಿ ಸೇನಾ |
ಸಂತತಿಯ ಬೆಂಬಲಕೆ ಪೋಗೆಂದೆನುತನೇಮಿಸಿದಾ | ||69||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಥಳಥಳಿಪನವರತ್ನ ಖಚಿತದ| ಹೊಳೆವ ಹೊಂಬಟ್ಟಲಲಿವೀಳ್ಯವ||
ನಳಿನನಾಭನು ಪಿಡಿದಿರಲು ಪು | ಷ್ಕಳನು ನುಡಿದಾ| ||70||

ಬೊಪ್ಪಲಾಲಿಸು ಜಯಿಸಿರಿಪುಗಳ | ಕಪ್ಪವನು ಕೈಕೊಳುತ| ಆಕಿರಿ
ಯಪ್ಪನೊಡನಾಂ ಪೋಪೆಕೊಡಿಸೆನಗಪ್ಪಣೆಯನೂ| ||71||

ಎಂದುದನು ಕೇಳುತ್ತಲಾ ನಿಜ| ನಂದನಗೆ ಸೇನಾಧಿಪತ್ಯವ|
ನಂದುನೇಮಿಸುತಿತ್ತವೀಳ್ಯವ| ನಿಂದಿರೇಶಾ | ||72||

ಸೀತೆಯಗ್ರಜ ಲಕ್ಷ್ಮಿಮಿನಿಧಿಯನು | ಪ್ರೀತಿಯಲಿಸತುಕರಿಸಿರಘುವರ |
ತಾತತೂಕ್ಷಣಕರದುಸುರ್ದನು | ವಾತಸುತಗೆ| ||73||

ರಾಗ ಸೌರಾಷ್ಟ್ರ ಆದಿತಾಳ

ಕೇಳೈಯಹನುಮಂತಾ| ರಘುಕುಲ | ಪಾಲಕಗುಣವಂತಾ|
ಶೀಲಗುಣೈಕ ವಿಶಾಲ ಪರಾಕ್ರಮಿ| ಪೇಳುವೆನಿಂ | ನ್ನೊಳು ಮೇಲಹಕಾರ್ಯವ| ||74||

ಶರಧಿಯನುತ್ತರಿಸಿ ಲಂಕಾಪುರವನುವುರಿಗೊಳಿಸಿ|
ದುರುಳ ನಿರಾಚರ ಪರಿವಾರವ ಸಂ | ಹರಿಸುತ ಕೀರ್ತಿಯ ಮೆರೆಸಿದೆಪೂರ್ವದಿ| ||75||

ಯಾಗದ ತುರಗವನೂ| ರಕ್ಷಣೆ | ಗಾಗಿಯೇ ಶತ್ರುಹನೂ|
ಪೋಗುವ ಪುಷ್ಕಳ ಸಹಿತಲಿ ಬೆಂಬಲವಾಗಿಯೆ ನೀನೊಲಿದೀಗಲೆ ಪೋಪುದೂ| ||76||

ಭಾಮಿನಿ

ಜನಪನೆಂದುದಕೇಳುತಾಕ್ಷಣ |
ಹನುಮತೋಷದೊಳಿರಲಿಕಿತ್ತಲು |
ಘನಪರಾಕ್ರಮಿ ಜಾಂಬವಂಗದ ನೀಲನಳಮೈಂದಾ ||
ಇನಸುತನುಗವಯನಗವಾಕ್ಷನ |
ವಿನಯದಿಂದಸುಷೇಣ ದಧಿಮುಖ |
ಪನಸ ಕೇಸರಿಮುಖ್ಯರನುಕಳುಹಿದನು ಬೆಂಬಲಕೇ| ||77||

ರಾಗ ಕೇತಾರಗೌಳ ಅಷ್ಟತಾಳ

ಇಂತುನಾನಾಪರಿಯಿಂದುಪಚರಿಸುತ್ತ | ಕಂತುಜನಕ ಬಳಿಕಾ |
ಸಂತಸದಿಂದ ಸುಮಂತನನೀಕ್ಷಿಸು | ತಿಂತೆಂದನವನೊಡನೇ| ||78||

ಯಾಗದತುರಗದರಕ್ಷಣೆಗೋಸುಗ | ಪೋಗುವ ಶತ್ರುಹನೂ |
ಬೇಗನೀನವನೊಡನೈದೆ ಜಯವ|ಲೇಸಾಗಿಸಾಧಿಪುದೆಂದನೂ|  ||79||

ಬಳಿಕಪುಷ್ಕಳತನ್ನನಿಳಯಕೆಂದೆನುತಲಿ | ನಲವಿಂದಲೈತರಲೂ|
ಜಲಜಾಕ್ಷಿಯಾತನಕಾಂತೆತಾನತಿಬಲು | ಸೊಬಗೀನೊಳಿರುತಿರಲೂ| ||80||