ರಾಗ ನಾದನಾಮಕ್ರಿಯ ಆದಿತಾಳ

ಈಕೀಶನಗೆಲಲಾರದೇ | ಸೋತು | ನಾಕೇಶಗರುಹಲುಮಾಜದೇ |
ತಾಕಳುಹಿದನಮ್ಮನ್ಯಾತಾಕೇ | ಇಂಥಾ | ಈಕಪಿಯೊಳಗೆರನಾಗ್ರಕೇ  ||223||

ಮಂಗನಂತಿರುವಯೀವೀರನು | ರಣ | ರಂಗದೊಳಿವನತಿಶೂರನು |
ತಂಗಿನಿಂನೊಡನಾಗದೀತನಾ | ಗೆಲು | ವಂಗಬೇರಿಹುದುನೋಡೀಕ್ಷಣಾ| ||224||

ಎನುತಮಷ್ಟಿಯೊಳಾಗಶಾಕಿನೀ | ತಿವಿ | ವನಕೃತಿನ್ನುವನೆಂದಾಡಾಕಿನೀ |
ಕನಲಿಬಾಯ್ದೆರವುತ್ತಬರಲಾಗ | ಕಂಡು | ವನಜಾಕ್ಷದೂತನೆಂದನುಬೇಗಾ| ||225||

ನೀಲಪಿಶಾಚರಂದದಿಬಂದೂ | ಕಾದಿ | ಸಾವಿರಿವ್ಯರ್ಥನಂಮೊಡನಿಂದು |
ಆವೀರನೊದೆಯಲುಮೂರ್ಛಿಸೀ | ಬಿದ್ದು | ಜೀವಿಸುತೆಂದರುಕೋಪೀಸೀ| ||226||

ವಾನಾರನಾಗೀನೀಬೆದರಾದೇ | ಕಾದಿ | ದಾನವಸ್ತ್ರಿಯರಿವರಿಯದೇ |
ಪ್ರಾಣವಕೊಡದಿರೆನುತಲಾಗಾ | ಸ | ತ್ರಾಣದಿಪೊಡೆಯೇ ಮಾರುತಿಬೇಗಾ| ||227||

ಬಾಲದಿಸುತ್ತಿಬಡಿಯಲಂದು | ಬೀಳು | ತ್ತೇಳುತೋಡುತಲೀರ್ದರವರಂದೂ |
ತಾಳಿಕೋಪವನು ಮಾರುತಸೂನು | ಸುರ | ಪಾಲಸುಭಟರೊಡನೆಂದನು| ||228||

ರಾಗ ಭೈರವಿ ಆದಿತಾಳ

ಸುರಭಟರಿರನಿಮ್ಮನೂ | ಕಂಡೀಗಳು | ಪರಿತೋಷವಾಯಿತಿನ್ನೂ |
ಧುರದೊಳೀಕ್ಷಣಯಮಪುರಕಟ್ಟಿಕೀರ್ತಿಯ | ಮೆರಸುವೆನೋಡೆಂದನು| ||229||

ಕೇಳಿರೋಷದಿಸುರರೂ | ಕಪಿಯನಸ್ತ್ರ | ಜಾಲದಿಮುಸುಕೀದರು |
ಶೂಲಮುಸುಲ ಮುದ್ಗರಾದಿಗಳಿಂದ ಮ | ರಾಳಿರೋಷದಿಪೊಯ್ಯಲು| ||230||

ಬಳಿಕನಿಲಜನವರ | ಬಾಲದೊಳಿಂದು | ಕಳದುಪೊಡೆಯೆಸುರರ |
ಬಲವುಮುರಿಯೆಕೇಳಿವೈರಿತಲೆಗತ್ತಿ | ಗುರುವಿನೊಳೆಂದನಾಗ  ||231||

ರಾಗ ಕಲ್ಯಾಣಿ ಅಷ್ಟತಾಳ

ಲಾಲಿಸುಗುರುವರನೇ | ವೇದಾಂತವಿ | ಶಾಲಕಪಾಕರನೇ |   ||ಪ||

ಚಂದ್ರದ್ರೋಣದಗಿರಿಗೇ | ಕಾವಲನಿಟ್ಟು | ಬಂದಿರಲೀವರೆಗೇ |
ಚಂದದೊಳಿರುತಿರಲೂ | ಧುರಧೀರ | ವಾನರನೈದೀಗಳು  ||232||

ಬಾಲವಸುತ್ತುತಲೀ | ಪರ್ವತವನ್ನು | ಕೀಳುವಸಮಯದಲೀ |
ತಾಳಿಕೋಪವಭಟರು | ಯುದ್ಧವಗೈದು | ಸೋಲುತ್ತಅನಿಮಿಷರು ||233||

ಬಂದೆನ್ನೊಳರುಹಲಿಕೇ | ನಿರ್ಜರಸೇವಾ | ವಂದವನಾಕ್ಷಣಕೇ |
ಕುಂದದೆಕಳುಹಿಸಲು | ಯರಡುಭಾರಿ | ಗುಕೊಂದನುನಿಮಷದೊಳು| ||234||

ಎಂದುದಕೇಳುತ್ತಲೀ | ಗುರುವರನುತಾ | ನಂದತಿಹರುಷದಲೀ |
ಇಂದ್ರನನೀಕ್ಷಿಸುತಾ | ಕೇಳಿದನವ | ನಂದುತಾನಸುನಗುತಾ  ||235||

ರಾಗ ಸೌರಾಷ್ಟ್ರ ತ್ರಿವುಡೆ

ಸುರಪಕೇಳ್ತವಶತ್ರುವಾಗಿಹ | ದುರುಳದಶಕಂಠಾದಿಗಳ | ಸಂ
ಹ್ಮರಿಸಿರುವಶ್ರೀರಾಮಚಂದ್ರನ | ಶರಣನೀತ|  ||236||

ಆರಮಾಪತಿತುರಗಮೇಧವ | ತಾರಚಿಸುತಶ್ವವನುಬಿಟ್ಟಿರೆ |
ವೀರಮಣಿಯಾತ್ಮಜನುಕಟ್ಟಲು | ಶೂರತನದೀ|  ||237||

ರಾಮನನುಜಾದಿಗಳರಣದಲಿ | ಸೋಮಶೇಖರಗೆಲಿದಿರಲು | ನಿ
ಸ್ಸೀಮಮಾರುತಿಬಂದಿಹನು ಸು | ತ್ರಾಮಕೇಳೈ|  ||238||

ನೂರುವತ್ಸರಕಾದಲಾ ಕಪಿ | ವೀರಸೋಲನುಹರನಗೆಲಿದಿಹ |
ಚಾರುಸಂಜೀವನವೆನಿತ್ತುಪ | ಚಾರದಿಂದಾ|  ||239||

ಭಾಮಿನಿ

ಗುರುವರನವಾಕ್ಯವನುಕೇಳುತ |
ಸುರಪನುಸುರಿದನೀಗಳಾನಾ |
ಮರುತಜನಯೆಡೆಗೆಂತುಪೋಗುಲಿ ಕೋಪದಿಂದಿಹನು ||
ಸುರಕುಲದಜೀವನವುಮತ್ತಾ |
ಪರಮಸಂಜೀವನವನೀವಡೆ |
ಕರುಣದಿಂನೀವೆಮ್ಮೊಡನೆ ಬಹುದೀಗಳೆಂದೆನಲು|  ||240||

ರಾಗ ಸವಾಯಿ ಏಕತಾಳ

ಸುರಪಾಲಕಸಹಿತೈದಿದನಾಗಳು | ಮರುತಜನೆಡೆಗೆ ಬೃಹಸ್ಪತಿಯೂ |
ಚರಣದೊಳೆರಗೆಸುರೇಶ್ವರಮನ್ನಿಸಿ | ಹರುಷದೊಳಿರುತಿರೆಮಾರುತಿಯು| ||241||

ರಾಗ  ಸಾಂಗತ್ಯ ರೂಪಕತಾಳ

ಅನಿಲಜನೊಡನೆಬೃಹಸ್ಪತಿಯುಸುರೀದ | ಅನಿಮಿಷಾಧಿಪನಜ್ಞಾನದಲಿ |
ಘನಪರಾಕ್ರಮಿನಿನ್ನ ಸತ್ಯವನರಿಯದೆ | ಕನಲಿಸಿದುದಕ್ಷಮಿಸುವದು| ||242||

ಎಂದುಪಚರಿಸಿದೌಷಧವಿತ್ತು ಕಳುಹಲಾ | ನಂದದಿಮಾರುತಿಯಾಗ |
ಸಿಂಧುವನುತ್ತರಿಸುತಲಭ್ರಮಾರ್ಗದಿ | ಬಂದನು ಸೇನೆಯಿದ್ದೆಡಗೇ| ||243||

ದ್ವಿಪದಿ

ಮಡಿದಿರುವಪುಷ್ಕಳನ ಶಿರವಪವನಜನು |
ಸಡಗರದಿಕಂಧರಕೆಸಂಧಿಸುತಾತನನು |  ||244||

ರಾಮಚಂದ್ರನೊಳು ಸದ್ಭಕ್ತಿಯಿರಲೆನಗೇ |
ಈಮಹಾಪುಷ್ಕಳನು ಜೀವಿಸುವದ್ಹೀಗೆ|  ||245||

ಎನುತೌಷಧವನೀಯಲೆದ್ದು ಪುಷ್ಕಳನು |
ಕ್ಷಣದಿಜಯಸುವೆನೆಂದವೀರಭದ್ರನನು|  ||246||

ಶತ್ರುಘ್ನನೆಡೆಗೈದಿ ಬ್ರಹ್ಮಚರ್ಯದಲಿ |
ಸತ್ಯವಿರೆ ತನ್ನಲಿವನೀಗಜೀವಿಸಲಿ|  ||247||

ಎಂದುಸಂಜೀವನಿಯನೀಯೆಶತ್ರುಹನು |
ನಿಂದುಶಿವನೆತ್ತಲೈದಿದನೆನುತಲವನು|  ||248||

ಕಂಡುಸಂತೋಷದಲಿತೆಗೆದುಬಿಗಿಯಪ್ಪಿ |
ಇಂದುನಮ್ಮಧ್ವರವಕಾಯ್ದೆನೆನುತಪ್ಪಿ|  ||249||

ಬಿದ್ದವರನೆಲ್ಲಎಬ್ಬಿಸಿಯೆಹನುಮಂತ |
ಧೂರ್ಜಟಿಯಕರದಿತ್ತಬಲಸಹಿತಲತ್ತ|  ||250||

ಉಭಯಬಲವೆಲ್ಲರೇಳಲ್ಕೆಸಂತಸದೀ |
ಒದರಿದವುನಿಸ್ಸಾಳೆಕಹಳಗಳುಮುದದೀ|  ||251||

ವಾರ್ಧಕ

ರಣದಿಮೂರ್ಛಿಸಿದವರನೆಲ್ಲರಂಜೀವಿಸಲು |
ಅನಿತರೊಳುತಂತಮ್ಮಶಸ್ತ್ರಾಸ್ತ್ರಗಳಪಿಡಿದು |
ಮಣಿರಥವನೇರಿಪುಷ್ಕಳವೀರಭದ್ರನೊಳು ಮಾರುತಿಯುನಂದಿಯೊಡನೇ|
ಘನಪರಾಕ್ರಮದಿಂದವೀರಮಣಿಯೊಡನೆತಾಂ |
ಧನು ಪಿಡಿದು ಶತ್ರುಹನು ಕಣೆಗಳಂ ಸುರಿಸಲ್ಕೆ |
ಧನುಜೇಂದ್ರ ವಾರುಣಾಸ್ತ್ರವನು ಮಂತ್ರಿಸುತಾಗ ಭರದಿಂದ ತಾನೆಚನೂ ||252||

ರಾಗ ಶಂಕರಾಭರಣ ಮಟ್ಟೆತಾಳ

ವಾರುಣಾಸ್ತ್ರಹತಿಗೆಬಲತು | ಷಾರದಿಂದಬೆದರಲಾಗ |
ಮಾರುತಾಸ್ತ್ರವೆಸದನಾಗ | ವೀರಶತ್ರುಹಾ |  ||253||

ಗಾರುಗೆಡಿಸುತಿರಲಿಕಾಗ | ವೀರಮಣಿಯುಪರ್ವತಾಸ್ತ್ರ
ವಾರುಣಾಸ್ತ್ರದೊಳಗೆಬಿಡಲು | ಭೂರಿಕೋಪದೀ|  ||254||

ಕಾಣುತಾಗಲೆಸದಕುಲಿಶ | ಬಾಣಗಳನುಶತ್ರುಹಾಖ್ಯ |
ಮಾಣದಾಗಗಿರಿಗಳೆಲ್ಲಚ | ಧರ್ಣವಾಗಲೂ |  ||255||

ಆನರೇಂದ್ರಕೋಪದಿಂದ | ಭಾನುಕುಲಜಗಂದುಬ್ರಹ್ಮ |
ಸಾಣಿಯಲಗಿನಿಂದಲೆಚ್ಚ | ನೇನನೆಂಬೆನೂ  ||256||

ಬಳಿಕಮೋಹನಾಸ್ತ್ರದಿಂದ | ಜಲಜನೇತ್ರನನುಜನೆಸೆಯೆ |
ಯಿಳೆಯಪಾಲರೆಲ್ಲಮೂರ್ಛೆ | ಯೊಳಗೆಬೀಳಲು ||  ||257||

ಹನುಮಪುಷ್ಕಳಾದಿಭಟರು | ಧುರದಿವೈರಿಬಲವನೆಲ್ಲ |
ಗಣನೆಯಲ್ಲದಂತೆ ಸವರ್ದ | ರಲಘುವೀರರು|  ||258||

ಕಂಡುಗಣರುಮುಸಕಲಾಗ | ಗಂಡುಗಲಿಯುಹನುಮನವರ |
ತಂಡವೆಲ್ಲಬಾಲದಿಂದ | ದಿಂಡುಗೆಡೆಯಲೂ ||   ||259||

ಕಂಡುಹರನುಭಕ್ತರೆಲ್ಲ | ರಿಂದುಸೋತರೆಂಬುದರಿದು |
ಬಂದುಶರ್ವಮುರಿಯೆಬಲವ | ಕಂಡುಶತ್ರುಹ|  ||260||

ಧೀರರೀರ್ವರಾಗರಣದಿ | ಘೋರಯುದ್ಧವೆಸಗುತಿರಲು |
ಮಾರಹರನಖತಿಯೊಳಂದು | ವೀರಶತ್ರುಹಾ ||   ||261||

ಗಾರುಗೆಡುತಮನದೊಳಂದು ಮಾರಮಣನಸ್ಮರಿಸುತಿರಲು |
ಭೂರಿಕರುಣದಿಂದಬಂದ ಪಾರಮಹಿಮನೂ|  ||262||

ಭಾಮಿನಿ

ಪರಮಪಾವನಮೂರ್ತಿರಾಮನ |
ಚರಣಕಮಲಕೆಮಣಿದುಶತ್ರುಹ |
ನಿರಲುಮಾರುತಿಬಂದುನಮಿಸಿದರಾಘವನಪದಕೇ |
ಹರನು ರಾಮನ ಬರವಕಾಣುತ | ಸ್ಮರಿಸುತೈತಂದಡಿಗೆರಗುತಿರೆ |
ಕರಕಮಲದಿಂದೆತ್ತಿಮನ್ನಿಸಲೀಶನಿಂತೆಂದ|  ||263||

ರಾಗ ಮಾರವಿ ಏಕತಾಳ

ಲಾಲಿಪುದೆನ್ನಬಿನ್ನಪವಶ್ರೀನಾಥಾ | ಪಾಲಿಸಬೇಕುದುರ್ಗುಣವಪ್ರಖ್ಯಾತಾ |
ಮೂಲವೇಕತ್ವವಾಗಿರಲಿಕಾದಿಯಲೀ | ಮೇಲೆತ್ರೈಮೂರ್ತಿಗಳಾದೆವಂದಿನಲೀ| ||264||

ಸೃಷ್ಟಿಯುತ್ಪನ್ನಕೋಸುಗಬ್ರಹ್ಮನೆನಿಸಿ | ಶಿಷ್ಟರಕ್ಷಣೆಗಾಗಿನೀನವತರಿಸೀ |
ಸಿಟ್ಟಿನಿಂದುಗ್ರರೂಪದಿನಾಶಗೈವಾ | ನಿಷ್ಟುರಕಾರ್ಯಕಾನಾದೆನುದೇವಾ | ||265||

ತವಚರಣದಿಜನಿಸೀರ್ಪಜಾನ್ಹವಿಯಾ | ತವಕದಿಶಿರದೊಳಾಂತುದನುನೀನರಿಯಾ |
ಅವನಿಪವೀರಮಣಿಯುಉಜ್ಜನಿಯಲೀ | ವಿವಿಧಭಕ್ತಿಯೊಳುತಪಃಶ್ಚರಣೆಯಲೀ| ||266||

ಒಲಿಸುತ್ತಕೇಳ್ದಪ್ರಮಥಗಣಸಹಿತಾ | ನಲವಿಂದಲೀಪುರದೊಳಗಿಹುದೆನುತಾ| ಇಳಯಪಾಲಕಗಿತ್ತಭಾಷೆಗೆಂದಾನೂ | ಉಳಯಲೀತೆರನಾದುದೇನೆಂಬೇನೀನೂ ||267||

ರಾಮನದರುಶನವಾಗುವಾತನಕಾ | ಪ್ರೇಮದಿಂತವಮಂ ದಿರದೊಳೀರ್ಪೆಬಳಿಕಾ | ನೀಮನಬಂದಂತಿರುವದೆನುತವಗೇ | ನಾಮುನ್ನ ವರವಿತ್ತುದಾಯ್ತುಈವರೆಗೇ| ||268||

ಭಾಮಿನಿ

ಇತ್ತಭಾಷೆಯಸಲಿಸಲೋಸುಗ |
ಪಥ್ವಿಪನರಕ್ಷಣೆಗೆಯುದ್ಧದಿ |
ಶತ್ರುಹಾದಿಗಳೊಡನೆಸೆಣಸಿದೆಕ್ಷಮಿಸಬೇಕೆನಲು ||
ಚಿತ್ತದಲಿಪರಿತೋಷಗೊಳುತರ |
ಘೂತ್ತಮನುನಿನಗೆನಗೆಭೇದಗ |
ಳೆತ್ತಣದು ಸದ್ಭಕ್ತರನುಪಾಲಿಪೆನುತಾನೆಂದೆ|   ||269||

ರಾಗ ಮಾರವಿ ತ್ರಿವುಡೆ

ವೀರಮಣಿಮುಖ್ಯರನುಬಳಿಕಾ |  ಮಾರಹರನೆಬ್ಬಿಸುತಕರತಂ
ದಾರಘೂತ್ತುಮನೊಡನೆಪೇಳಿದ | ಭೂರಿಕರುಣದೊಳಾಗಳು|  ||270||

ತವಕರುಣದಿಂದೀವರಗೆನಾ | ನಿವರಕಾದಿಹೆನೀಗಳೀತನು |
ಅವನಿಧನಕನಕಾದಿವಸ್ತುವ | ತವಚರಣಕೊಪ್ಪಿಸುವನು|  ||271||

ಎನಲುಕೇಳುತವೀರಮಣಿಯಾ | ಜನಪರಾಮನ ಪದಕೆಮಣಿಯಲು |
ಘನತರದಸಂತಸದೊಳಾತನ | ವಿನಯದಿಂ ಮನ್ನಿಸಿದನೂ||272||

ಬಳಿಕತುರಗವಲಂಕರಿಸುತಲಿ | ಜಲಜಲೋಚನನಡಿಯೊಳೊಪ್ಪಿಸೆ |
ನಲವಿನಿಂದಲಿವೀರಮಣಿ ಬೆಂ | ಬಲಕೆನುತಪೊರವಂಟನು| ||273||

ರಾಮನಂತರ್ಧಾನವಾಗಲು | ಸೋಮಶೇಖರಪುರಕೆಪೋಗಲು |
ಭೀಮವಿಕ್ರಮವೀರಮಣಿಸಹ | ಪ್ರೇಮದಿಂದಿರಲಿತ್ತಲು| ||274||

ವಾರ್ಧಕ

ವರಮಹಾರ್ಬಲಸಹಿತಶತ್ರುಘ್ನನಾ ಯಾಗ |
ತುರಗದೊಡನೈದಲ್ಕೆ ಕುಂಡಲಾಪುರದೊಳಗೆ
ಧರಣಿಪಾಲಕಸುತನಶ್ವವಂಕಟ್ಟಿಪುಷ್ಕಳಮುಖ್ಯರನುಬಂಧಿಸೀ |
ಭರದಿಕೊಂಡ್ಯೊಯ್ವುತಿವರನುನಪತಿರಾಜಮಂ
ದಿರಕಾಗಿ ಸೆರೆಮನೆಯೊಳಿ | ಡೆಮರುತಜಾದಿಗಳು |
ಸ್ಮರಿಸಲ್ಕೆರಾಘವಂಕಪೆಯೊಳೈತಂದಾಗ ಬಿಡಿಸಿದನುನಿಜಸೈನ್ಯವಾ| ||275||

ಧುರದಿಮೂರ್ಛಿಸಿದವರು ಜೀವಿಸುತಬಲಸಹಿತ
ಲಿರದೆ ಮುಂದೈದಲ್ಕೆ ಜಾಹ್ನವಿಯತೀರದೊಳು
ಪರಮಋಷಿವಾಲ್ಮೀಕೀ ಯಾಶ್ರಮಸಮೀಪದೊಳು ಲವನುಯಾಗದಹಯವನು |
ತ್ವರಿತದಿಂಕಟ್ಟಲಾ ಬಳಿಕಶತ್ರುಘ್ನಾದಿ |
ಧುರವಿಜಯರೆಲ್ಲರೈತಂದುಕಾದಲಿಕಾಗ |
ತರಳಲವಕುಶರುಗಳುಗೆಲಿದಿರಲು ವಾಲ್ಮೀಕಿಯೊಡಬಡಿಸಿಕಳುಹಿಸುತಲೀ| ||276||

ರಾಗ ಸೌರಾಷ್ಟ್ರ ತ್ರಿವುಡೆತಾಳ

ವರಮಹಾರ್ಬಲಸಹಿತಶತ್ರುಹ ಪರಿಪರಿಯನಾನಾಸುವಾದ್ಯದಿ |
ತುರಗಸಹನಿಜಪುರಕೆಬಂದುದನರಿವುತಂದೂ|  ||277||

ಬಂಧುವರ್ಗವುಸಹಿತಲಕ್ಷ್ಣಣ | ನಂದಿದಿರ್ಗೊಂಡೊದುಮನ್ನಿಸೆ |
ಸಿಂಧುಶಯನನುಕರಿಸಿದನು ನಲ | ವಿಂದಸತಿಯಾ|  ||278||

ಸೀತೆಬರಲಾಕ್ಷಣದಿಕುಂಭಜ | ನೂತನದವಿಗ್ರಹವತೆಗದತಿ |
ಪ್ರೀತಿಯಿಂಕುಳ್ಳಿರಿಸಲಾ ರಘು | ನಾಥನಂದು|  ||279||

ಋತ್ವಿಜರನುದ್ಗಾತಹೋತಗ | ಳತ್ಯಧಿಕಹರುಷದಲಿಮನ್ನಿಸು |
ತಿತ್ತುದ್ರವ್ಯಾದಿಗಳನೆಲ್ಲರ | ತಪ್ತಿಪಡಿಸೀ |    ||280||

ಗುರುವಸಿಷ್ಠನಗಸ್ತ್ಯವ್ಯಾಸಾ | ದ್ಯರನು ಪೂಜಿಸುತಾಗ ನಾನಾ |
ಪರಿಯರತ್ನಾದಿಗಳನಿತ್ತುಪ | ಚರಿಸಿಬಳಿಕ|  ||281||

ರಾಗ ಭೈರವಿ ಝಂಪೆತಾಳ

ಬಳಿಕಚೌಷಷ್ಬಿನದಿ | ಜಲವತರಿಸುತಲಿಮನ |
ವೊಲಿದುಗುರುವರನಾಗ | ಜಲಜಾಕ್ಷಗಂದು|  ||282||

ಅಭಿಷೇಕವನುಗೈಸಿ | ಶುಭಕರದಖಡ್ಗವನು |
ಅಭಿಮಂತ್ರಿಸುತಕೊಡಲು | ತ್ರಿಭುವನೇಶ್ವರಗೆ|  ||283||

ತುರಗದೊಡನೆಂದ ನೀ | ಪರಿಯಪಶುಜನ್ಮವನು |
ಪರಿಹರಿಸಿಸದುಗತಿಯು | ದೊರಕಲೆಂದೆನುತಾ|  ||284||

ಕರುಣಾಳುವದಪಿಡಿದು | ತುರಗ ಪಷ್ಠದಮೇಲ|
ಕಿರಿಸೆಗಂಧರ್ವಾನಾ | ಗಿರಲುಕಂಡೆಂದ|  ||285||

ಆರುನೀಪೂರ್ವದಲಿ | ಸೇರಿತೀಜನ್ಮನಿನ
ಗಾರಿಂದಲೆನಲೆಂದ | ನಾರಮೇಶನೊಳು|  ||286||

ರಾಗ ಸಾಂಗತ್ಯ ರೂಪಕತಾಳ

ಕ್ಲೇಶರಹಿತರಾಮಲಾಲಿಸೈಪೂರ್ವದಿ | ಭೂಸುರನಾಗಿಮೌನದಲೀ |
ತೋಷದಿನದಿಯತೀರದಿತಪವೆಸಗೆ ದೂ | ರ್ವಾಸನೈತಂದನಾಕ್ಷಣಕೇ| ||287||

ಬಂದಮುನಿಯನುಸತ್ಕರಿಸದಿರಲುಪಶು | ವಂದಜನ್ಮವು ಎಂದುಶಪಿಸಿ |
ಮುಂದೇನುಗತಿಯೆಂದು ಕೇಳಲಿಕೆ ನಿ | ನ್ನಿಂದಸದ್ಗತಿಯಹುದೆಂದ ||288||

ಪರಮಪುರುಷತವಕರುಣದೊಳಾಶಾಪ | ಪರಿಹಾರವಾದುದಿಂದಿನಲೀ |
ಸುರಲೋಕಕ್ಕಾಗಿಪೋಗುವೆನೆಂದುನಮಿಸುತ್ತ | ತೆರಳಿದಸ್ಯಂದನವೇರಿ | ||289||

ಗುರುವಸಿಷ್ಠನುಮಂತ್ರೋಚ್ಚರಣೆಯಿಂದಲ್ಲಿಯೇ | ಕರಸುತ್ತಲಾದೇವರ್ಕಳನು |
ವರಕರ್ಪುರಾಜ್ಯಸಹಿತಲಾಗಹವಿಯ | ಸತ್ಕರಿಸಿದಯಜ್ಞಕಾಲದಲೀ| ||290||

ದಾನದಕ್ಷಿಣೆಧರ್ಮಪಾನಭೋಜನದಿಂದಾ | ತಾನುಪಚರಿಸಿ ರುತ್ವಿಜರಾ |
ಭಾನುಕುಲೇಶ ಪೂರ್ಣಾಹುತಿಯಿತ್ತು ಮ | ತ್ತಾನಂದದಿಂದಿರುತಿಹನು| ||291||

ವಾರ್ಧಕ

ಗುರುವಸಿಷ್ಠಾದಿಗಳುಸಹಿತಲಾರಾಘವಂ |
ಧರಣಿಪಾಲಕರೆಲ್ಲರೊಡಗೊಂಡುಸಂತಸದಿ |
ಸರಯುತೀರಕೆಪೋಗಿ ಅವಭತಸ್ನಾನಮಂ ಗೈವುತತಿಸಂಭ್ರಮದೊಳು |
ಪರಿಪರಿಯನಾನಾಸುವಾದ್ಯ ಘೋಷದೊಳುಮಂ |
ದಿರಕೈದಿಯಜ್ಞವಂ ಪೂರೈಸಿಸತಿಸಹಿತಹರಿಯುರತ್ನಾಸನದೊಳೊಪ್ಪಿರಲು
ಸತಿಯರಾರತಿಯೆತ್ತಿಪಾಡುತಿಹರು|  ||292||

ರಾಗ ಡವಳಾರ ತ್ರಿವುಡೆತಾಳ

ಮಂಗಳಶ್ರೀರಾಮಚಂದ್ರ್ರಗೇ | ಚಲ್ವ | ಅಂಗಜಪಿತನಿಗಾರತಿಯೆತ್ತಿರೇ |
ಮಂಗಳಶ್ರೀರಾಮಚಂದ್ರಾಗೇ| || ಪಲ್ಲವಿ ||

ದುರುಳದೈತ್ಯರಬಾಧೆಗಿರಲಾರೆವೆನುತಲೆ | ಧರಣಿದೇವಿಯುಕಮಲಜಗುಸುರೇ |
ಸುರಪಾಲಾದ್ಯರುಬಂದುಮೊರೆಯಿಡೆಸಾಕೇತ | ಪುರದೊಳಗುದಿಸಿದರಘುರಾಮಗೇ | ||293||

ತಾಮಸದೈತ್ಯರುಹೋಮವಕೆಡಿಸೆ ವಿ | ಶ್ವಾಮಿತ್ರನೊಡನೆ ಲಕ್ಷ್ಮಣಸಹಿತ |
ಪ್ರೇಮದೊಳೈದಿಸುಬಾಹುಮುಖ್ಯರನು | ನಿರ್ನಾಮವಗೈದಶ್ರೀರಾಮನಿಗೇ |  ||294||

ಧರಣಿಸಂಜಾತೆಯವರಿಸುತ್ತಕೋಸಲ | ಪುರದಿಂದ ಸೀತೆಲಕ್ಷ್ಮಣಸಹಿತ |
ವರಪಂಚವಟಿಗೈದಿಖರದೂಷಣಾದ್ಯರ | ಶಿರವನರಿದಪುರುಷೋತ್ತುಮಗೆ | ||295||

ಶಶಿಮುಖಿಸೀತೆಯದಶಕಂಠನೊಯ್ಯಲಾ | ವ್ಯಸನದಿಸೇತುವನುತ್ತರಿಸೀ |
ಅಸುರರಕೊಂದುಸಂತಸದಿಸೀತೆಯತಂದ | ಬಿಸಜಲೋಚನನಿಗಾರತಿಯತ್ತಿರೇ ||296||

ಕೆಕ್ಕಾರವಾಸಗೆರಕ್ಕಸಾಂತಕನಿಗೆ | ಭಕ್ತವತ್ಸಲತಪೋರಾಮನಿಗೇ |
ಮುಕ್ತಿದಾಯಕನಿಗೆಸೀತೆಗೆಸಹಿತಲಾ | ತಕ್ಕಸಕುಚೆಯರಾರತಿಯೆತ್ತಿರೇ |  ||297||

ಭಾಮಿನಿ

ಬಳಿಕರಾಘವಬಂಧುಬಾಂಧವ | ರೊಲವನರಿ ತುಡುಗೊರೆಯನಿತ್ತಾ |
ಚಲುವಷಡ್ರಸಭೋಜನದಿಸತ್ಕರಿಸಿವಿನಯದಲೀ |
ನಲವಿನಿಂಸರ್ವರನುಮನ್ನಿಸಿ
ಯಿಳೆಯಪಾಲರುಸಹಿತನೇಮವ |
ಗೊಳುತಂತಮ್ಮಾಲಯಕ್ಕೈತಂದರೊಲವಿನಲೀ|  ||298||

ಜನಪರಾಘವನಂದುತನ್ನಯ |
ವನಿತೆಸುತಸಹಜಾತರುಗಳಿಂ |
ವಿನಯದಿಂಸಾಕೇತಪುವನ್ನಾಳುತಿರುತೀರ್ದ |
ಘನಚರಿತ್ರವಶೇಷನುಸುರಿದ |
ಮುನಿಪವಾತ್ಸ್ಯಾಯಾದಿಋಷಿಗಳಿ |
ಗಿರದೆಪೇಳಿದಕಥೆಯ ಸಾಂಗೋಪಾಂಗದಿಂದೊಲಿದು||  ||299||

ಆಮಹಾಮುನಿವರರಿಗಿಂತಾ |
ರಾಮಚಾರಿತ್ರವನುಸುರಿದಾ |
ರಾಮಣೀಯಕವೆನಲುರಚಿಸಿದೆಯಕ್ಷಗಾನದಲೀ |
ಭೂಮಿಯೊಳಗಿದಹೇಳಿಕೇಳಿದ |
ರಾಮಹಾತ್ಮರಿಗೊಲಿದು| ಶ್ರೀರಘು
ರಾಮಸಲಹುವೆನೆಂದು
ಶೇಷನುಮುನಿಗಳಿಂಗುಸುರ್ದ |  ||300||

ವಚನ

ಇಂತೀಕಥೆಯಂಭಕ್ತಿಯಲಿ | ಹೇಳಿಕೇಳುವರ್ಗಂ |
ಸೀತಾಕಾಂತಂಪಾಲಿಪ | ನಿಹಪರಸೌಖ್ಯಹರೀ||  ||301||

ಯಕ್ಷಗಾನ ರಾಮಾಶ್ವಮೇಧಯಾಗವು ಸಮಾಪ್ತವಾದುದು.