ವಚನ
ಈ ರೀತಿಯಿಂದ ಬಂದ ರಾಯರನ್ನು ಏನೆಂದುಚರಿಸುತ್ತಿದ್ದನು –
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇತ್ತ ಮಾಳವನತ್ತ ಗೌಳವ | ನೊತ್ತಿನಲಿ ಮಲಯಾಳನು |
ಸುತ್ತಣರಸರ ಪುತ್ಥಳಿಯ ಬೊಂಬೆಯೊಳೊತ್ತಿ ಸಾರಿಸವೆಂದನೂ |
ದ್ರುಪದ ಭೂಪಾಲ ||358||
ಅಂಗನಪ ಗುರ್ಜರದ ರಾಯರೆ | ಅಂಗದೇಶದ ಅರಸರೆ |
ಮಂಗಳವೆ ಮಾಳವರೆ ಸುಭಟೋತ್ತುಂಗ ಮಾಗಧ ಕ್ಷೇಮವೆ |
ಎನುತಲಾಗ ||359||
ವನದಿ ತೊಳಲುವ ಮುನಿಸಮೂಹವು | ವನಜ ಮುಖಿಯರ ಸಂಗವು |
ನಿನಗೆ ಸಾಲದೆ ಕೃಷ್ಣ ಹಲಧರ ಘನದಿ ಬಳಲುತ ಬಂದಿರೈ ||360||
ವನಜಲೋಚನ ವಾರಿಜೋದ್ಭವ | ಜನಕ ಸುರಮುನಿ ವಂದಿತ |
ಮುನಿ ಮನೋಹರ ಮಾಧವಾರ್ಚಿತ | ಘನ ಕಪಾಳು ನಮೋ ನಮೋ |
ದ್ರುಪದ ಭೂಪಾಲ ||361||
ವಚನ
ಇಂತೆಂದು ಅರಮನೆಯ ವಳಗಿಂದ ಬಂದು ದ್ರೌಪದಿಯ ಶಂಗಾರವ ಮಾಡೆನಲು ನಾರಿಯರು ಶಂಗಾರ ಮಾಡಿದರದೆಂತೆನೆ –
ರಾಗ ಮಾರವಿ ಝಂಪೆತಾಳ
ಪನ್ನೀರ ಪಂಕಜಾಕ್ಷಿಗೆ ಜಳಕವ ರಚಿಸಿ |
ಚಿನ್ನಗಳ ರಚಿಸಿದರು ಚದುರೆ ನಾರಿಯರು ||362||
ನವದುಕೂಲವನುಡಿಸಿ ನವ್ಯ ತಿಲಕವ ರಚಿಸಿ |
ಯುವತಿ ಪಾಂಚಾಲೆ ನೀ ಬಾರೆಂದರವರು ||363||
ಏನೆ ಮಾನಿನಿ ರನ್ನೆ ಏನೆ ಸೊಬಗಿನ ಸೋನೆ |
ನೀನೇಕೆ ನಾಚುವೆಯೆ ನೋಡು ನಲ್ಲರನು ||364||
ಇನಿತು ದಿನ ಪರಿಯಂತ ನಿನ್ನ ಕೂಡಾಡಿದೆವು |
ಘನ ಪ್ರಾಯ ನಿನಗಾಯಿತು ನಡೆ ನಲ್ಲನೆಡೆಗೆ ||365||
ವಚನ
ಇಂತೆಂದು ದ್ರೌಪದಿಯ ಶಂಗರಿಸಿ ದ್ರೌಪದಿಯ ಪಲ್ಲಕ್ಕಿಯ ಮೇಲಕ್ಕೆ ಧಷ್ಟದ್ಯುಮ್ನನು ನಪರನ್ನು ತೋರಿಸುವನದೆಂತೆನೆ –
ರಾಗ ಸೌರಾಷ್ಟ್ರ ಅಷ್ಟತಾಳ
ಛಪ್ಪನ್ನ ದೇಶದ ರಾಯರ ಪಂಙ್ತಿಯ ನೋಡೆ ತಂಗಿ |
ಮನಬಪ್ಪರನ್ನು ಮಾಜದೆ ಪೇಳು ಎನ್ನೊಳು ನೋಡೆ ತಂಗಿ ||366||
ಈತ ಮಾಳವ ಪಾಂಡ್ಯನಾತ ಗೌಳವರಾಯ ನೋಡೆ ತಂಗಿ |
ನೂತನದವನಂಗ ವಂಗ ದೇಶದ ನಪನೋಡೆ ತಂಗಿ ||367||
ಭೂತಳಕರಸನು ಬರ್ಬರದರಸನು ನೋಡೆ ತಂಗಿ |
ಸೋತವನಲ್ಲ ಸಂಗರದಿ ಕಾಳಿಂಗನ ನೋಡೆ ತಂಗಿ ||368||
ಗೋರಾಷ್ಟ್ರ ಗೋಡ ಮುಖದ ಮಹರಾಯರ ನೋಡೆ ತಂಗಿ |
ಮಾರಾಷ್ಟ್ರವಡ್ಡಿಯ ಕಾಂಬೋಜದರಸರ ನೋಡೆ ತಂಗಿ ||369||
ಸೌರಾಷ್ಟ್ರ ಮಲಯಾಳ ಕೊಟ್ಟಯ ರಾಯರ ನೋಡೆ ತಂಗಿ |
ಮಾರಾಷ್ಟ್ರ ಬರ್ಬರ ಹಮ್ಮೀರದರಸರ ನೋಡೆ ತಂಗಿ ||370||
ನಿಗಮ ಗೋಚರ ಕೃಷ್ಣ ಬಲರಾಮ ಸ್ವಾಮಿಯ ನೋಡೆ ತಂಗಿ |
ಸುಗುಣ ಸುಯೋಧನ ಸೂರ್ಯಾತ್ಮಜ ಕರ್ಣನ ನೋಡೆ ತಂಗಿ ||371||
ಜಗದೇಕವೀರ ಜೋನಗದೇಶದರಸನ ನೋಡೆ ತಂಗಿ |
ಹಗಲರಸನು ಈ ಹಮ್ಮೀರದರಸನು ನೋಡೆ ತಂಗಿ ||372||
ವಚನ
ಇಂತೆಂದು ಧಷ್ಟ್ರದ್ಯುಮ್ನ ದ್ರೌಪದಿಗೆ ನಪರಂ ತೋರಿಸಲು ಕಂಡು ಕರ್ಣನ ಮನಃಪೂರ್ವಕದಿ ನೋಡಿ ಕೃಷ್ಣಗೆ ನಮಸ್ಕರಿಸಿ ಧಾರಾಮಂಟಕ್ಕೆ ಬಂದರದೆಂತೆನೆ –
ರಾಗ ದ್ವಿಪದಿ ಝಂಪೆತಾಳ
ಈ ಮಗಳು ಎನಗೇಕೆ ಪುಟ್ಟಿದಳೊ ಎಂದು |
ಭೂಮಿಯೊಳು ಮೂರ್ಛೆಯಂ ಬಿದ್ದವನಂದು ||373||
ಮತ್ತೆ ಚೇತರಿಸಿ ಮತ್ಸ್ಯದ ರೂಪ ಬರಸಿ |
ಕತ್ತಿ ವಾಸನನಟ್ಟ ಹಾಸದೊಳಗಿರಿಸಿ ||374||
ಗಂಧಾಕ್ಷತೆಗಳಿಂದಲಂಕರಿಸಿ ಬಂದು ನಿಂದು |
ಇಂದುಧರ ಭಾರಿ ಧನುವೆತ್ತಿರ್ನೀವೆಂದು ||375||
ಮತ್ಸ್ಯಲಾಂಛನವ ನೀರೊಳಗೆ ನೋಡುತ |
ಉತ್ಸಾಹದಿಂದೆಸೆವ ನಪಗೆಯೆನ್ನುತ್ತ ||376||
ಸಾರಿ ಸರ್ವರಿಗೆ ಧನುವೆತ್ತಿರೈ ಯೆನುತ |
ಧೀರ ಪಾಂಚಾಲ ಪೇಳಲು ಮಗಧ ನಗುತ ||377||
ಬೇಗದಿಂದೈತಂದ ಧನುವಿದ್ದ ಬಳಿಗೆ |
ನಾಗಭೂಷಣಗೆ ವಂದಿಸುತ್ತಲಾಗಳಿಗೆ ||378||
ಮುರಿವೆ ಯಂತ್ರವನೆಂದು ಬರಲು ಮದದೊಳಗೆ |
ಧರಣಿಯಿಂದಗಲದಿರೆ ರುಧಿರಾಗ ಚೆಲ್ಲೆ ||379||
ಗಂಡು ಹಿಮ್ಮೆಟಿದನು ಮಗಧ ಭೂಪಾಲ |
ತಂಡ ತಂಡದಿ ತೆರಳಿತವನಿಪರ ಜಾಲ ||380||
ಮನುಮಥಾರಿಯ ಬಿಲ್ಲ ನಿಂದು ನೋಡಿದನು |
ಧನುವಿಗೆ ನಮೋ ನಮೋ ಎಂದು ಸಾರಿದನು ||381||
ತರುಣಿಯರು ಕರಪೊದು ನಗುತಲಿರುವಾಗ |
ದುರುಳ ದುರ್ಯೋಧನನು ಬಂದು ಶಿರವೆರಗೆ ಬೇಗ ||382||
ಹಿಂದೆ ನಡೆದರೆ ಕಂಡು ಕರ್ಣ ಮಾರಾಂತ |
ಒಂದೆರಡು ಕ್ಷಣಮಾತ್ರ ಧನುವಿಡಿದು ನಿಂತ ||383||
ಸಾಗದಿರೆ ಕಂಡು ಒದಗಿದನು ಶಿಶುಪಾಲ |
ಮೂಗಿನಲಿ ಬೆರಳಿಟ್ಟು ಪೋಗೆ ಸ್ಮರಪಾಲ ||384||
ನಡೆದು ಬರುತಿರೆ ಕಂಡು ನಂದನಂದನನು |
ತಡೆದು ಹಿಡಿದನು ಕರವ ತನ್ನ ಅಗ್ರಜನ ||385||
ಕುಂತಿಯಾತ್ಮಜರು ನಿನಗೇನಹರು ಎಂದು |
ಅವರಕಾಂತೆ ನಮಗನುಜೆಯೆನೆ ಕೃಷ್ಣ ರಾಮೆಂದೂ ||386||
ಉರಿಮನೆಯೊಳಳಿದವರ ಸುದ್ದಿಯನು ಪೇಳ್ವೆ |
ಕರಗಳೆರಡನು ಮುಗಿದು ಶಿರವೆರಗಿನಿಂದು ||387||
ಎನಲು ಬಲರಾಮ ಕೃಷ್ಣರು ಎದ್ದು ನಿಂತು |
ನಿಮಗೆ ಸಂಶಯಬೇಡ ವಸುದೇವರಾಣೆ ||388||
ವಚನ
ಅತ್ತಲಾ ದ್ರುಪದರಾಯ ಏನೆನುತ್ತಿದ್ದನೋ –
ರಾಗ ಪಾಡಿ ಏಕತಾಳ
ಧರಣೀಶರೈತಂದು ಧನುವೆತ್ತಲಾರದೆ |
ತಿರುಗಿದರಯ್ಯಯ್ಯೋ ವಿಧಿಯೆ |
ಸುರಪನಂದನಗೆಂದು ಸುತೆಯನಾ ಪಡೆದೆನು ಅರಗಿನ ಗಹದಲ್ಲಿ ಪೋದ ||389||
ಇನ್ನು ಮಾಡುವುದೇನು ಈ ತೆರನಾದ ಮೇಲೆ |
ಬನ್ನಿರೋ ಬ್ರಾಹ್ಮಣರು ಇತ್ತಿತ್ತ |
ಚೆನ್ನಾಗಿ ಧನುವೆತ್ತಿ ಚಂದದಿಂದೊಪ್ಪುವ | ಕನ್ನೆಯ ಮದುವೆಯಾಗೆಂದ ||390||
ವಚನ
ಇಂತೆನಲಾಗಿ ಬ್ರಾಹ್ಮಣರು ಏನೆನುತಿದ್ದರೊ –
ತುಪ್ಪ ಶಾಕಗಳು ಅಪ್ಪಾಲು ಅತಿರಸ ಹಪ್ಪಳ ಸಂಡಿಗೆಯು ಪಾಯಸವಿದ್ದರೆ |
ಚಪ್ಪರಿಸಿ ತಿನ್ನುವುದಕೆ ಚದುರರು ನಾವು ||391||
ನೀತಿ ಶಾಸ್ತ್ರದಲ್ಲಿ ನಮ್ಮ ಮಾತನಾಡಿಸಿ ನೋಡು ಮತ್ತೆ ಚಲತ್ವಗಳ |
ಧಾತು ಪದಕ್ರಮ ಜಟೆಗಳಿಂದ ತರುಣಿಯ ಗೆಲ್ವೆವೆಂದು ವಿಪ್ರರು ನುಡಿದರು ||392||
ರಾಗ ದ್ವಿಪದಿ ಝಂಪೆತಾಳ
ಇಂತು ಹಾಸ್ಯದ ಮಾತ ಯಮಜ ಕೇಳಿದನು |
ಇಂದ್ರನಂದನಗೆ ಕಣ್ಸನ್ನೆ ಮಾಡಿದನು ||393||
ಆಗಳರ್ಜುನನೆದ್ದು ನಭಕೆ ಕೈಮುಗಿದು |
ನಾಗಶಯನಗೆ ನಮಿಸಿ ಬೇಗದಿಂ ನಡೆದು ||394||
ಬರುವದನು ಕಂಡು ಕಂಡು ಬ್ರಾಹ್ಮಣರು ಹಾಸ್ಯವಾಡೆ
ಅರಸರೆಲ್ಲರು ನೋಡಿ ಆಶ್ಚರ್ಯವಾಡೆ ||395||
ವಚನ
ಇಂತೀ ಬ್ರಾಹ್ಮಣರು ಏನೆನುತ್ತಿದ್ದರು –
ರಾಗ ಸೌರಾಷ್ಟ್ರ ಅಷ್ಟತಾಳ
ಭೂಸುರ ನಿನಗೇನು ಭ್ರಾಂತಿ ಹಿಡಿಯಿತೇನೋ ಮಾತ ಕೇಳು |
ಈ ಸುರಸತಿಯು ಬೇಕೆ ನಮ್ಮೊಳಿಲ್ಲವೆ ಹೆಣ್ಣು ಮಾತ ಕೇಳು ||396||
ಚೌಕದ ಮಣೆಯ ಮೇಲೊರಗಿ ಮಾಡಿಸಿ ಉಂಡ ಹಾಗಲ್ಲ ಕಾಣೊ |
ಬೇಕಾದ ಶಾಕವ ತುಪ್ಪದಲದ್ದಿ ಸವಿದುಂಡ ಹಾಗಲ್ಲ ಕಾಣೊ ||397||
ಜೋಕೆ ಶಾಲಿಗ್ರಾಮವನು ಪೂಜಿಪ ಹಾಗಲ್ಲ ಕಾಣೊ |
ಲೋಕೈಕ ವೀರರು ಧನುವ ಜಯಿಸಲಿಲ್ಲ ಬಾರೊ ಕಾಣೊ ||398||
ವಚನ
ಇಂತೆಂದು ಬ್ರಾಹ್ಮಣರು ಆಡಿದ ಮಾತಂ ಕೇಳಿ ಅರ್ಜುನ ಏನೆನುತಿದ್ದನೋ –
ರಾಗ ಶಂಕರಾಭರಣ ತ್ರಿವುಡೆತಾಳ
ಯಾಕೆ ಎನ್ನನು ಕಂಡು ನಗುವಿರಿ |
ಎರಗುವೆನು ವಿಪ್ರೌಘಕೆ ||
ಲೋಕದಲಿ ಬಡತನವು ಕಷ್ಟವು ಬೇಡಿಕೊಂಬೆನು ನಿಮ್ಮನು ||399||
ಉಟ್ಟ ಧೋತ್ರವು ಮಲಿನವಾದರೆ |
ದಿಟ್ಟತನವದು ಮಲಿನವೆ ||
ಭಟ್ಟನಾದರೆ ವಿಕ್ರಮವು ತಾ | ಮುಟ್ಟಲಿಲ್ಲವೆ ಭೂಸುರ ||400||
ನಂಟತನ ನಿಮ್ಮೊಳಗೆ ಸೇರಲು | ಬಂಟತನ ನಮಗಿಲ್ಲವೆ ||
ಶುಂಠನೆಂದೆನುತೀಗ ನಗುವಿರಿ |
ಉಂಟು ನಮಗತಿ ಪೌರುಷ ||401||
ನಿನ್ನ ಕೈಯಲಿ ಚಿನ್ನದುಂಗುರ | ಎನ್ನ ಕಯ್ಯ ಪವಿತ್ರವು ||
ಎನ್ನ ನಿನ್ನಂತರವ ನೋಡುವ |
ಚೆನ್ನಕೇಶವ ರಾಯನು ||402||
ವಚನ
ಅತ್ತಲಾ ನಾರಿಯರು ಏನೆನುತಿದ್ದರೂ –
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇತ್ತ ನೋಡಲು ಬಾರದೇನಕ್ಕ |
ಯಿತ್ತ ವಿಪ್ರರ ಸಭೆಯೊಳು ||
ಚಿತ್ತಜನ ಪೋಲುವನು ದರ್ಭ ಪವಿತ್ರವನು ಧರಿಸಿರುವನು ||403||
ಚರಣ ಪರ್ಯಂತರವು ಧೋತ್ರವು |
ಬದಿಯ ಜೋಲುವ ಕಚ್ಚೆಯು |
ಸ್ಮರನ ನೋಡೆಲೆ ದ್ರುಪದ ನಂದನೆ ಅರರೆ ನಿನ್ನಯ ಭಾಗ್ಯವು ||404||
ಶಿರದೊಳಗೆ ಸಕಲಾತಿ ಮುಕುಟವು |
ಕರದೊಳಗೆ ಜಪಸರಗಳು |
ಧರಣಿ ಸುರವರನ ನೋಡಲೆ | ತರಳ ಪ್ರಾಯದ ಭಾಮಿನಿ ||405||
ನೆಲನ ನೋಡುವುದೇನು ಸೈರಿಸು |
ಬಲು ಕುಶವ ಪೊತ್ತಿರ್ದನು |
ಪುಲಿದೊಗಲ ಮುಚ್ಚಳದ ಪೆಟ್ಟಿಗೆಗಳನು ಕಂಕುಳೊಳಾಂತಿಹ ನೋಡೆಯಕ್ಕಾ ||406||
ವಚನ
ಇತ್ತಲಾ ಕೃಷ್ಣಸ್ವಾಮಿಯು ಬಲರಾಮನೊಡನೆ ಏನೆನುತಿದ್ದನೋ –
ರಾಗ ಮಾರವಿ ಏಕತಾಳ
ನೋಡಿದಿರೆ ಅಣ್ಣ ನೋಡಿದಿರೆ |
ಇವ ನಾಡಾಡಿಯವನಲ್ಲ ನರನೈದಿಬಹುದನ್ನು ||
ನೋಡಿದಿರೆ ಅಣ್ಣ | ನೋಡಿದಿರೆ ||
ಭೂಸುರ ಸಭೆಯೊಳಗೆ | ಮಾಸಿದ ಧೋತ್ರವನುಟ್ಟು |
ವೇಷವ ಮರಸಿ ಮೆಲ್ಲನೆ ಅಡಿಯಿಡುವಾತ |
ವಾಸವಾಂಘ್ರಿಯರಿಗೆ ಈಶನೈಋತ್ಯ ವರುಣವಾಸ ಮರುತರಿಗೆ |
ಶರಣೆಂಬಾತರ್ಜುನ ನೋಡಿದೆ ಅಣ್ಣ ||407||
ತಗಧಿತ್ತ ತಗಧಿತ್ತ ತಗಧಿತ್ತ ಎಂಬ ಗಣಿಕೆಯ ಸೊಗಸುನತ್ಯವ ನೋಡದೆಯಿತ್ತ ಯೀಕ್ಷಿಸು |
ಜಗದೇಕವೀರ ಝಂ ಝಣ ಝಣ ಝಣರೆಂಬ ತಾಳದ ಬಗೆಯಂತೆ ಬಹುದನು ನಮ್ಮ |
ನೋಡಿಹೆಯಣ್ಣ ನೋಡಿದಿರೆ ||408||
ವಚನ
ಅತ್ತಲಾ ಅರ್ಜುನ ಏನೆನುತ್ತಿದ್ದನೋ –
ರಾಗ ಭೈರವಿ ಪಂಚಘಾತ ಮಟ್ಟೆತಾಳ
ಬಿಲ್ಲ ಮೊದಲು ಒಪ್ಪುವಿಲ್ಲ ನನಗ್ರಜಗೆ | ನಿಲ್ಲ-ದೆರಗಿದ |
ನಿಲ್ಲದೆರಗಿದ | ಕಲ್ಲನಾರಿಗೆ ಕೈವಲ್ಯವಿತ್ತಗೆ |
ಮತ್ತಲ್ಲಿಯೆ ನಮಿಸಿದ | ಮತ್ತಲ್ಲಿಯೆ ನಮಿಸಿದ ||409||
ಎಲ್ಲರ ಹೊರೆವ ಗೌರೀ ದೇವಿಯ ವಲ್ಲಭಗೊಂದಿಸಿದ |
ಬಲ್ಲಿದ ಕರ್ಣದಲ್ಲಣ ಪಾರ್ಥ |
ಭುಲ್ಲೆಸಿ ಭುಜವನು ಭುಲ್ಲೆಸಿ ಭುಜವನು ||410||
ರಾಗ ಕಾಂಭೋಜಿ ಅಷ್ಟತಾಳ
ಇಂದ್ರನಂದನನು ಸಕಲರಿಗೆ ವಂದನೆಯೆಂದನು |
ಮುದದಿಂದ ಧನುವೇರಿಸಿ ನಿಂದನು ||
ಶರವನೆದೆಚ್ಚೆಸೆಯಲು ಯಂತ್ರಮತ್ಸ್ಯ ಧರೆಗೆ ಬೀಳಲು |
ಪಾಂಚಾಲೆಗದ ಪೇಳಲು |
ಆಗ ಕುಸುಮಶರನ ಪಟ್ಟದಾನೆಯಂದದಿ ಬೇಗ |
ಬಂದಳು ಕೂಡೆ ನಿಂದಳು | ವರನ ಕಂಡಳು ||
ಮತ್ತೆ ಅಸಮ ಸಾಹಸಗೆ ಪೂಮಾಲೆಯನಿಕ್ಕಿ |
ಎಸೆವ ನಲ್ಲನ ನೋಡಿ ನಗುತ ಹಿಗ್ಗಿದಳು |
ಇಂದ್ರನಂದನನು ಸಕಲರಿಗೆ ವಂದನೆಯೆಂದನು ||411||
ಕಂಡರು ಬುಧರೆಲ್ಲ ಸಂತೋಷದಿಂದ |
ಬ್ರಾಹ್ಮರಿಗಿವನಿಂದ ಚಂಡತೇಜಗಳೆಂದರು |
ಭುಜವ ಹೊಯ್ದು ನಿಂದರು ಭಲರೆಯೆಂದರು |
ಭೂಮಂಡಲದೊಳಗೆಣೆಯಿಲ್ಲೆಂದು ಹಿಗ್ಗುತ |
ಮಂಡೆ ಶಿಖೆಗೆ ನೇವರಿಸುತಲಿಹರಯ್ಯ | ಇಂದ್ರನಂದನನು ||412||
ವಚನ
ಇಂತೆಂದು ದ್ರೌಪದಿಯ ಅರಮನೆಗೆ ಕರಕೊಂಡು ಹೋದ ಮಾರ್ಗದಲ್ಲಿ ನಾರಿಯರು ಏನೆಂದು ಹಾಸ್ಯವಂ ಮಡುತ್ತಿದ್ದರೋ –
ರಾಗ ಶಂಕರಾಭರಣ ಏಕತಾಳ
ಅಕ್ಕ ಹಾರುವತಿಯೆಮ್ಮ ಗಹಕೆ |
ಗಕ್ಕನೆ ಬರಬೇಡಿ ಸೊಕ್ಕ ಮುರಿವೆವು |
ಚಿಕ್ಕ ಹರೆಯ ನಿನಗುಕ್ಕುವ ತಾಪಕ್ಕೆ |
ತಕ್ಕ ನಲ್ಲನು ಬಂದ ಠಕ್ಕುಗಳೆಲ್ಲ ||
ಅಕ್ಕ ಹಾರುವತಿಯೆಮ್ಮ ಗಹಕೆ ||413||
ಮನೆ ಮನೆ ತಪ್ಪದೆ ತಿರಿದುಂಬ |
ಘನಭಾಗ್ಯದ ವರನ ನಲ್ಲನ ಕಂಡೆ |
ದಿನಪನುದಯದಲೆದ್ದು ವನಧಿಗೆ ಪೋಗಿ |
ಬಿನುಗರಂದದಿ ಮೀಯಲು ಬಹುದಮ್ಮ ||
ಅಕ್ಕ ಹಾರುವತಿ ಯೆಮ್ಮ ಗಹಕೆ ||414||
ಮಾಂಸವ ಮೆಲುವ ಜನರು ನಾವೆಲ್ಲ |
ಹಿಂಸೆಯೆ ನಿಮ್ಮ ಕುಲಕ್ಕದು ಸಲ್ಲ |
ನಾವು ಸುಮ್ಮನೆಯಿದ್ದರೆ ತರವಲ್ಲ |
ಕಂಸಾರಾತಿಯ ಮಹಿಮೆಯಿದೆಲ್ಲ |
ಅಕ್ಕ ಹಾರುವತಿ ಯೆಮ್ಮ ಗಹಕೆ ||415||
ವಚನ
ಇಂತೆಂದು ದ್ರೌಪದಿಯ ಅರಮನೆಯ ಒಳಯಿಂಕೆ ಕರಕೊಂಡು ಪೋಗಲಾಗಿ | ಇತ್ತಲಾ ರಾಯ ರಾಯರು ಏನೆನುತಿದ್ದರು-
ರಾಗ ಕಾಂಭೋಜಿ ಅಷ್ಟತಾಳ
ಏನಿದು ಪಾಂಚಾಲ ಮಾಡಿದುದಿಂದು |
ಮಾನವಾಧಿಪರೆಲ್ಲ ಕಂಡಿರೆಯಿಂದು |
ಹೀನ ಹಾರುವನಿಗೆ ಹೆಣ್ಣನೆ ಕೊಟ್ಟು |
ಮಾನಭಂಗವ ಮಾಡಿದ ಹೋಯಿತು ಗುಟ್ಟು ||
ಏನಿರೋ ನೀವು ಕಂಡಿರೆ ||416||
ತರುಣಿಯ ನಾವಿತ್ತ ಎಳಕೊಂಡು ಬರುವ |
ತಿರುಕ ಹಾರುವ ಮತ್ತೆ ತಿರಿದ್ಹೊಟ್ಟೆ ಹೊರೆವ |
ಕರಿರಥವೇರಿ ಸರಳ ಮಳೆಗರೆವ |
ವರದುರ್ಗವನೆ ಮುತ್ತಿ ಬೇಗದಲ್ಲಿರಿವ || ಏನಿರೋ … ||417||
ನಮ್ಮನಿಲ್ಲಿಗೆ ಬರಹೇಳಲದೇಕೆ |
ಹೆಮ್ಮಯಿಂದಿಳೆಯಲಿ ಧನು ತೋರನೇಕೆ |
ಅಮ್ಮಮ್ಮ ನಮ್ಮೊಡನೆ ದ್ರುಪದ ಪರಾಕೆ |
ಸುಮ್ಮನೆ ಹೋದರೆ ಪಂಥಸಾಕೆ || ಏನಿರೋ ||418||
ವಚನ
ಇಂತೆಂದು ರಾಯರು ಪಾಂಚಾಲನ ಮೇಲೆ ದಂಡೆತ್ತಿ ಬಂದರದೆಂತೆನೆ –
ರಾಗ ದೇಸಿ ಏಕತಾಳ
ಬಾರಯ್ಯ ಮಗಧ ಭೂಪಾಲ || ಧೀರ ಪಾಂಚಾಲ |
ಬಾರಯ್ಯ ಮಗಧ ಭೂಪಾಲ ||
ನೂರು ವರುಷ ತಲೆಯೂರಿ | ತಪದಿ ಕೈ
ಸೇರುವ ಬಾಲೆಯ ಹಾರುವನೊಯ್ದ | ಬಾರಯ್ಯ ||
ವೀರತ್ವಗಳೆಲ್ಲ ಹಾರಿತೊ ನಮಗೇನು |
ಕಾರಣ ತನ್ನಿರೊ ತೋರೋ ತೋರೋ ಮಾಲೆಗಳ | ಬಾರಯ್ಯ … ||419||
ಅರಿಗಳ ತಿಮಿರ ಮಾರ್ತಾಂಡ |
ಮಾರುತಿ ಚಂಡಕರ ತೇಜದಿ ಉದ್ದಂಡ |
ಮರನ ಮುರಿದು ಶಲ್ಯನುರವ ಬಡಿದು | ಕೌರವ ಹಿಮ್ಮೆಟ್ಟಿಸಿ |
ತಿರುಗಿ ಕುಲಾಲ ಮಂದಿರಕೈದಲು ||420||
ಏನೆಲೊ ಭೂಸುರ ನೀನಿಂಥ ಕನ್ನೆ ಮ
ದ್ದಾನೆಯನೊಡಗೊಂಡು ನೋಡುತ |
ಕೋಣೆಯಲಿರ್ದರೆ ಕ್ಷೋಣೀಶರೆಲ್ಲರು
ಬಾಣದಲೆಸೆವರು ||421||
ವಚನ
ಇಂತೆಂದು ಆ ವೇಳ್ಯದಲ್ಲಿ ರಾಯರಾಯರು ಏನೆನುತಿದ್ದರು –
ರಾಗ ಭೈರವಿ ಪಂಚಘಾತ ಮಟ್ಟೆತಾಳ
ಸಣ್ಣ ಹರೆಯದೆಣ್ಣ ನೋಡುತ |
ಹಣ್ಣ ಫಲವನುಣ್ಣದಂತೆ ನುಣ್ಣಗವನ ಕಣ್ಣಮುಂದೆ ||422||
ಬಣ್ಣಗಾತಿಯ ತರುವೆವು ಧಣ್ಣನೆಂದು ಬಾಣವೆಸೆಯೆ
ಕರ್ಣ ಸೆಳೆದು ಪೂರ್ಣವೆಸೆಯೆ | ||423||
ನಿಂತಿರಲು ಬೇಡವಿನ್ನಂತರಿಸದ ಮುನ್ನ |
ನಂತಬಾಣಗಳ ಕುಂತೀಜಾತನೆಸೆಯಲು ||424||
ಪಾರ್ಥ ಸರಳ ಬಿಡಲು ಕಣರ್ |
ಧುರವಿಂದಿಗೆ ಸಾಕು ಬೇಡ | ಕುರುಪತಿಯೆಂದಾಗ ||425||
ಇಂತೆಂದು ಕರ್ಣ ಸರಳುಗಳ ಎಸೆವುತಿರ್ದ |
ಅಂತುರುಳಿತು ತಲೆ ಬಹಳ ||426||
ಮಾರಾಂತಮನ್ನೆಯರೆಲ್ಲ ನಿಂತು ಕಾದುತಿರೆ ||427||
ರಾಗ ದೇಶಿ ಏಕತಾಳ
ಬಾರಯ್ಯ ಕರ್ಣ ಕೇಳೆಂದನು | ನಮ್ಮ |
ಊರಿಗೆ ಹೋಗುವ ನೀ ಸಾರು | ಕದನ ಬೇಡ ಬಾರಯ್ಯ ||
ನಮ್ಮ ನಗರಕ್ಕೆ ಹೋಗುವ ದಮ್ಮಯ್ಯ ಎಂದನು ಕೌರವ |
ನಾಳೆ ಸುಮ್ಮಾನದಿಂದ | ಇವನ ಹೆಮ್ಮೆ ಮುರಿವ || ಬಾರಯ್ಯ ||428||
ವಚನ
ಇಂತೆಂದು ರಾಯರೆಲ್ಲ ಪೋಗಲಾಗಿ –
ರಾಗ ಮಾರವಿ ಝಂಪೆತಾಳ
ಅತಿ ಪ್ರೀತಿಯಿಂದಾನು ಅಗ್ನಿಯಲಿ ಪಡೆದ |
ಸುತೆಯ ವಿಪ್ರ ಕರಕೊಂಡು ಪೋದ ||429||
ಮಗಳ ಸಂಗತದಲ್ಲಿ ಮತ್ತಾರುಯಿಲ್ಲ |
ಮಗನೇತ್ರೆಯೇನೆಂದು ಮರುಗುವಳೋ ಬಲ್ಲ ||430||
ಸುಗುಣ ಧಷ್ಟದ್ಯುಮ್ನ ಸದ್ಯದಲಿ ಪೋಗು |
ನಗುವಳೋ ನಮ್ಮೆಲ್ಲ ನೆನೆವಳೋ ಈಗ ||431||
ಕುಲನಾಲ್ಕರೊಳಗಾರು ಕುಶಲರೋ ಎಂದು |
ಹಲವಂಗದಲಿ ತಿಳಿಯೋ ಹೋಗು ನೀನೆಂದು ||432||
ದ್ರುಪದಯಿಂತೆನಲು ಧಷ್ಟದ್ಯುಮ್ನ ಬೇಗ |
ಗುಪಿತದಿಂದೈತಂದು ಗಳಿಗೆಯೊಳಗಾಗ ||433||
ತಿರುಗಿ ಬಂದನು ತನ್ನ ಪಿತನ ಬಳಿಗೆ |
ಶಿರವೆರಗಿ ಪೇಳ್ದನಾ ಸುಗುಣನಾ ನಪಗೆ ||434||
Leave A Comment