ಭಾಮಿನಿ
[ಕೇಳು ಕೌರವ ನೀನು ಪಾಂಡವ |
ಬಾಲರಿಗೆ ರಾಜ್ಯವನು ಕೊಡದಿರೆ ||
ಮೇಲೆ ಸುರಕುಲ ನಗದೆ ಸುಮ್ಮನೆ ಪೋಗುವೆವೆ ನಾವು ||
ಲೀಲೆಯಲಿ ತೋರುವೆವು ನಮ್ಮಯ |
ಜಾಲವನು ಕೇಳೈ ಕುರುಕ್ಷಿತಿ |
ಪಾಲಕನೆ ನಿಜವಾವುದೆಂದೆನಲೆಂದ ಕ್ರೋಧದಲಿ || ೨೯೭ ||]
ರಾಗ ಪಂತುವರಾಳಿ ಮಟ್ಟೆತಾಳ
ನಡೆಯೆಲೋ ಮುರಾರಿ ಸುಖದೊಳು | ಸಲುಗೆ ಮಾತ ||
ನುಡಿದು ಪೆಟ್ಟ ತಿನ್ನದೆನ್ನೊಳು || ನಡೆ ||ಪ||
ನೀನು ಬೇಡಿದೈದು ಗ್ರಾಮದಿ | ಒಂದನಾದ | ರಾನು ಕೊಡುವನಲ್ಲ ಸಾಮದಿ ||
ಕ್ಷೆಣಿಯ ತ್ರಿಪಾದ ಗೆಯ್ದ | ಜಾಣತನವಿದೆಲ್ಲ ಗೋಪ |
ರಾಣಿಯರಲಿ ತೋರು ನಮ್ಮ | ಸ್ಥಾನದಲ್ಲಿ ಮೆರೆಯಲರಿದು || ನಡೆ || ೨೯೮ ||
ಹಲವು ತೆರದಿ ಬಟ್ಟಕುಚೆಯರ | ಒಲಿಸಿ ರಮಿಸಿ | ಕಳವಿನಿಂದ ಪೊಕ್ಕು ಗೊಲ್ಲರ ||
ನಿಳಯದಲ್ಲಿ ಪಾಲು ಮೊಸರ | ಗಡಿಗೆಯೊಡೆದು ಬೆಣ್ಣೆ ಸವಿದು |
ಕೊಳಲ ನುಡಿಸಿ ತುರುವಕಾವ | ಕುಲವಿಹೀನ ಕುಟಿಲಗಾರ || ನಡೆ || ೨೯೯ ||
ಎಂದು ಧಿಮ್ಮನೆದ್ದು ಬರುತವ | ವರ ದುಶ್ಶಾಸ | ಗೆಂದನವರನೀತ ಕುಣಿಸುವ ||
ಇಂದಿಗಿವನ ತೋಳ್ಗಳನ್ನು | ಬಂಧಿಸಿಟ್ಟು ಪಾಂಡುಸುತರ |
ತಂದು ಸೆರೆಯೊಳಿಡಲು ನಮಗೆ | ಮುಂದೆ ಪಗೆಗಳಿಲ್ಲವೆನುತ || ನಡೆ || ೩೦೦ ||
ಭಾಮಿನಿ
ಹರಿಯ ಕಟ್ಟುವೆನೆಂಬ ವಚನವ |
ನರಿತು ಗಂಗಾತರಳನುಸಿರಿದ ||
ಹರ ಹರಾ ಮುರಹರನ ಕಟ್ಟುವ ಸತ್ತ್ವ ನಿಮಗಿಹುದೆ ||
ಮರಣವನು ಬಯಸಿದಿರಲಾ ದಶ |
ಶಿರನ ಸೋದರರೈಸೆ ಇವರೆಂ ||
ದಿರದೆ ಧೃತರಾಷ್ಟ್ರಂಗೆ ತಿಳುಹಲು ಬಂದನಾಕ್ಷಣದಿ || ೩೦೧ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಶಿವ ಶಿವಾ ಮಾಧವನ ಕಟ್ಟುವ | ಕುವರರಂದವನೀಕ್ಷಿಸಲು ಪೆ ||
ತ್ತವಳ ಬರಹೇಳೆನುತ ಪೊರಳಿದ | ಬವಣೆಗೊಳುತ || || ೩೦೨ ||
ಬಂದಳಾ ಗಾಂಧಾರಿಯಳಲುತ | ನಂದನರ ದುರ್ಬುದ್ಧಿಯನು ನೆನೆ ||
ದಂದು ಬೈವುತ ತನ್ನ ಪತಿಯೊಡ | ನೆಂದಳಾಗ || ೩೦೩ ||
ಪುಟ್ಟಿದಾಕ್ಷಣದಲ್ಲಿ ಬಿಸುಡದೆ | ದುಷ್ಟರೀ ಬಾಲಕರ ಸಲಹಿದೆ ||
ಕೆಟ್ಟೆವಕಟೆಂದೆನುತಲಾ ಧೃತ | ರಾಷ್ಟ್ರನರಸಿ || || ೩೦೪ ||
ಮರುಗುತಿರಲಾ ದ್ರೋಣ ಗಂಗಾ | ತರಳರರುಹಿದರೆಲೆಗೆ ಲಕ್ಷ್ಮೀ ||
ವರನ ಬಂಧಿಸಲಾರಳವು ನೀ | ಮರುಳೆನುತಲಿ || ೩೦೫ ||
ತಿಳಿದು ವರಕೃತವರ್ಮ ಸಾತ್ಯಕಿ | ತಳುವದಾಯುಧ ರಥಪದಾತಿಯ ||
ನೊಳಗು ಮಾಡೈ ಮೋಸವಾದುದು | ಕೆಲಸವೆನುತ || ೩೦೬ ||
ಬೆರಳ ಸನ್ನೆಯೊಳವರ ನಿಲಿಸುತ | ಲಿರಲು ಮುರಹರನಿತ್ತ ಕೌರವ ||
ಹರಿಯ ಬೆಂಗಡೆಯಲ್ಲಿ ನೇಣ್ಗಳ | ಧರಿಸಿ ನಿಂದ || ೩೦೭ ||
ಭಾಮಿನಿ
ಮರುಳುಗೊಂಡಾಗಲೆ ಸುಯೋಧನ |
ಮುರವಿರೋಧಿಯ ತುಡುಕಲೀಕ್ಷಿಸಿ |
ಕರದ ನೇಣ್ಗಳಿದೇತಕೇನಿದು ಜನಪ ನಿನಗಿನ್ನು ||
ಅರಿಗಳಾ ಪಾಂಡವರು ಕಳುಹಿದ |
ಚರನ ಕಟ್ಟುವುದಾವ ಧರ್ಮವು |
ಹರ ಹರಾ ಎಂದೆನುತ ತೋರಿದ ತನ್ನ ಮಹಿಮೆಯನು || ೩೦೮ ||
ವಾರ್ಧಕ
ಹರಿಯ ಮಹಿಮೆಯ ಪೊಗಳಲರಿದು ಮತ್ತಾ ಸಭೆಯೊ |
ಳಿರುವನಚ್ಚುತನೋರ್ವ ನೋಳ್ಪ ಜನರಕ್ಷಿಗಾ |
ಪುರವರದೊಳೆಲ್ಲ ಶ್ರೀಕೃಷ್ಣ ಮಯಮಾಗಿ ಗೋಚರಿಸಿದಂ ಮನೆಮನೆಯಲಿ ||
ಪುರುಷರಂ ಧಿಕ್ಕರಿಸಿ ಪಾಲ್ಮೊಸರ ಗಡಿಗೆಯಂ |
ಜರಿದು ಬೆಣ್ಣೆಯ ಮೆಲುತಲೆಳೆವೆಣ್ಗಳಂ ಪಿಡಿದು |
ಕರಗಳಿಂದಪ್ಪಿ ಮುದ್ದಾಡಿ ಚುಂಬಿಸುತಧಿಕತರ ಲೀಲೆಯಂ ತೋರ್ದನು || ೩೦೯ ||
ರಾಗ ಮಾರವಿ ಏಕತಾಳ
ಹರಿಯ ವಿಲಾಸವ ತಾಳಲಾರದೆ ಹೊಸ | ಹರೆಯದ ಚದುರೆಯರು ||
ಮರುಗುತ ನಾಚುತ ಮಂಡೆಯ ಮುಸುಕಿನ | ಸೆರಗಿನ ದುಗುಡದೊಳು || || ೩೧೦ ||
ಬಂದು ಕುರುಕ್ಷಿತಿಪಾಲಗೆ ದೂರಿದ | ರಂದಂಗಜಪಿತನು ||
ಚಂದದಿ ತಮಗೆಸಗಿದ ಸ್ಮರಚೇಷ್ಟೆಯ | ನಂದವನೆಲ್ಲವನು || || ೩೧೧ ||
ಗೋಪಾಲಕ ನಮ್ಮಿದಿರೊಳು ತನ್ನ ಪ್ರ | ತಾಪವ ತೋರುವನೆ ||
ತಾ ಪಿಡಿಸುವೆನೀಕ್ಷಣ ಶತಸಾವಿರ | ರೂಪಾದರು ಬಿಡದೆ || ೩೧೨ ||
ನಿಲ್ಲಿರೆನುತಲಾ ಶೂರರು ಮನೆಗಳ | ನೆಲ್ಲವ ಪೊಗುತಂದು ||
ಅಲ್ಲಿಹ ಪಿಡಿ ನೋಡಿಲ್ಲಿಹನ್ನಸಲೆ | ಕಳ್ಳನ ಕಟ್ಟೆಂದು || ೩೧೩ ||
ಓಡುವನಿದಕೋ ಒಳಗಿಹ ಸತಿಯರ | ಪೀಡಿಸುತಿಹನೊರ್ವ ||
ನೋಡಿರಿ ಬೆಣ್ಣೆಯ ತಾ ಮೆಲುವನು ಕೈ | ಮಾಡಿರಿ ಬೇಗೆನುತ || || ೩೧೪ ||
ಬಾಧಿಸಿದವರನು ಭಂಗಿಸಿ ತಾಪಸ | ಮಾಧಿಗೆ ಕಾಣಿಸದ ||
ಶ್ರೀಧರ ಸಭೆಯೊಳು ವಿಶ್ವಾಕಾರವ | ತಾ ಧರಿಸುತ ನಿಂದ || ೩೧೫ ||
ವಾರ್ಧಕ
ಚರಣದಂಗುಷ್ಠದೊಳ್ ದೇವನದಿ ಸುರರು ಕಿಂ |
ಪುರುಷ ವಿದ್ಯಾಧರರು ಯಕ್ಷ ಗಂಧರ್ವ ಕಿ |
ನ್ನರ ಗರುಡ ವಸುಗಳಾದಿತ್ಯರು ಭುಜಂಗಮರು ಸನಕಾದಿ ಸಂಯಮಿಗಳು ||
ವರರೋಮರೋಮಕೂಪದ ಚೌಕದೊಳ್ ಮೆರೆಯೆ |
ಸರಸಿಜಭವಾಂಡ ಗರ್ಭದಿ ಕಂಗಳೊಳ್ ಚಂದ್ರ |
ತರಣಿ ತಾರಾಳಿಗಳ ಕಾಂತಿಯೊಳ್ ತೋರಿಸುತ ವೈಕುಂಠನೆಸೆದಿರ್ದನು || ೩೧೬ ||
ಬಲದ ಭುಜದಲಿ ಪಾರ್ಥನೆಡದಿ ಹಲಧರ ಯಮಜ |
ಕಲಿಭೀಮ ನಕುಲರುಗಳಂಘ್ರಿಯೊಳಗೆಯ್ದೆ ಸ |
ಲ್ಲಲಿತ ಹಸ್ತದಿ ಶಂಖ ಚಕ್ರಾಬ್ಜ ಗದೆಯಿಂದಲುರದಿ ಶ್ರೀರಮಣಿ ಸಹಿತ ||
ಬಳಿಕನ್ಯಮಿಲ್ಲ ಸಕಲವು ತನ್ನೊಳೈಕ್ಯಮೆಂ |
ದೊಲಿದು ವರ ವಿಶ್ವರೂಪವ ಸುಯೋಧನಗಲ್ಲ |
ದುಳಿದರ್ಗೆ ತೋರಲು ಕೃತಾರ್ಥರಾವೆನುತೆಲ್ಲರಡಗೆಡೆದರಾನಂದದಿ || ೩೧೭ ||
ಜಯ ಜಯ ಶತಾದಿತ್ಯಧಾಮ ಸೀತಾರಾಮ |
ಜಯ ಜಯ ಸುರೋತ್ತುಂಗ ರಂಗ ನೀಲನಿಭಾಂಗ |
ಜಯ ಜಯ ನಮೋ ವಿಕಸಿತಾಕ್ಷ ಪಾಂಡವಪಕ್ಷ ಜಯ ಜಯತು ಶಿಕ್ಷ ರಕ್ಷ ||
ಜಯ ಜಯತು ಶಿವಪ್ರಿಯಾನಂತ ಲಕ್ಷ್ಮೀಕಾಂತ |
ಜಯ ಜಯತು ವೈಕುಂಠವಾಸ ವೇಂಕಟಧೀಶ |
ಜಯ ಜಯತು ಗುಣವೃಂದ ನತಜನಾಪ್ತ ಮುಕುಂದ ಜಯವೆಂದರಂದದಿಂದ || ೩೧೮ ||
ಭಾಮಿನಿ
ಸಕಲ ಲೋಕಾಧೀಶ ನೀನೇ |
ಸಕಲ ಕಲ್ಮಷನಾಶ ನೀನೇ |
ಸಕಲ ಶ್ರುತಿ ಪೌರಾಣ ಶಾಸ್ತ್ರದ ಬೀಜ ನೀನೆ ಕಣಾ ||
ಸಕಲ ಜೀವಿಗಳಾತ್ಮ ನೀನೇ |
ಸಕಲ ಸಿರಿಸಾಮ್ರಾಜ್ಯ ನೀನೇ |
ಸಕಲರಿಗೆ ಕೈವಲ್ಯ ನೀನೆಂದೆನುತ ನುತಿಸಿದರು || ೩೧೯ ||
ರಾಗ ಕಾಂಭೋಜ ಝಂಪೆತಾಳ
ಎನುತ ಗಾಂಗೇಯ ಕೃಪ ಕುಂಭಸುತ ಕಣ್ವಾದಿ | ಮುನಿಗಳಾ ಮಹಿಮನಂಘ್ರಿಯಲಿ ||
ಮಣಿದಬ್ಧಿಘೋಷದಿಂ ಪೊಗಳುತಿರೆ ಸೂಸಿದರು | ಅನಿಮಿಷರು ಕುಸುಮವೃಷ್ಟಿಗಳ || ೩೨೦ ||
ಕಂಗಳುದಿಸಿದವಂಧನೃಪಗೆ ಶ್ರೀ ಹರಿಯ ದಿ | ವ್ಯಾಂಗವನು ನೋಡಿ ಕೈಮುಗಿದು ||
ಮಂಗಳಾತ್ಮಕ ನಿನ್ನ ದರುಶನದ ಮೇಲೆ ಪಾ | ಪಂಗಳೀಕ್ಷಿಸಬಾರದಿನ್ನು || ೩೨೧ ||
ನೇತ್ರವಡಗಲಿ ತನಗೆನಲ್ ಮುನ್ನಿನಂತಾಗೆ | ಮತ್ತೆ ಗಾಂಧಾರಿ ನಡೆತಂದು ||
ಭಕ್ತಿಯಲಿ ಶ್ರೀ ಮನೋಹರಗೆರಗಿ ಬೇಡಿದಳು | ಮುಕ್ತಿಯನು ಕರುಣಿಸೆನಗೆಂದು || ೩೨೨ ||
ಮುತ್ತೈದೆಯಾಗಿ ಮಂಗಲದಿಂದಲಿರಿ ನೀವು | ಮತ್ತೆ ಮುಕ್ತಿಯ ಕರುಣಿಸುವೆನು ||
ಸತ್ಯನಿಧಿ ಪಾಂಡವರ ಕೂಡಿ ಬದುಕಿರಿಯೆಂದು | ಚಿತ್ತಜನ ತಾತ ಹರಸಿದನು || || ೩೨೩ ||
ಭಾನುಮತಿ ಮುಂತಾದ ನಾರಿಯರು ನುತಿಸುತಿರ | ಲಾನಂದಮಯನು ಕರುಣದಲಿ ||
ತಾನವರ ಸಂತಯಿಸುತಿರೆ ಬಳಿಕ ಕೇಳಿದಳು | ಭಾನುಮತಿ ಮುತ್ತೈದೆತನವ || ೩೨೪ ||
ಹರಿಯು ನಸುನಗುತೆಂದ ಮರುಗಬೇಡಬಲೆ ಕೇಳ್ | ಕುರುರಾಯನೊಡನೆ ನೀ ಪೋಗಿ ||
ಕರುಣಿಸೈ ಮುತ್ತೈದೆತನವೆಂದು ಕೇಳಿದರೆ | ಕರುಣದಿಂ ಪೇಳ್ವ ಮನದಿರವ || ೩೨೫ ||
ನೀಲಗಾತ್ರನು ಮುನ್ನಿನಂಗವನು ತಾಳೆ ಭೂ | ಪಾಲ ಕೌರವನರಸಿ ಬಂದು ||
ಹೇಳಿದಳು ಪ್ರಾಣಕಾಂತನನಪ್ಪಿ ದೈನ್ಯದಲಿ | ಓಲೆಭಾಗ್ಯವನುಳುಹಿಸೆಂದು || ೩೨೬ ||
ರಾಗ ನೀಲಾಂಬರಿ ಏಕತಾಳ
ಪುರುಷರತ್ನವೆ ಲಾಲಿಸು | ನಾನೆಂಬ ಮಾತ | ಕರುಣದಿಂದಲಿ ನಡೆಸು ||
ವರಪಾಂಡುಸುತರೊಳಿನ್ನು | ಸಂಗರ ಬೇಡ | ಸೆರಗೊಡ್ಡಿ ಬೇಡುವೆನು || ೩೨೭ ||
ಕಂತುಪಿತನ ಮಹಿಮೆಯ | ಕಣ್ಣಾರೆ ನೋಡಿ | ಮುಂತೆ ಯುದ್ಧವ ಮಾಳ್ಪೆಯ ||
ಕುಂತಿಯಾತ್ಮಜರುಗಳು | ಶಿವನೊಲು ಶಕ್ತಿ | ಯಂತೆ ದ್ರೌಪದಿಯೆಂಬಳು || ೩೨೮ ||
ಅವರಿವರೊಂದಾಗಿಹರು | ಭೂಭಾರವಿಳು | ಹುವ ಯತ್ನ ಮಾಡುವರು ||
ಅವರೊಳ್ ಕಷ್ಟವ ಗಳಿಸಿ | ಕೆಡಬೇಡ ಪಾಂ | ಡವರ ಮನ್ನಿಸು ಕರೆಸಿ || ೩೨೯ ||
ಸೀತಾದೇವಿಯ ಕದ್ದೊಯ್ದ | ದಶಕಂಠಗಾದ | ರೀತಿಯ ನೆರೆ ತಿಳಿದು ||
ಭೂತಳಕಾಗಿ ಕುಂತಿಯ | ಸುತರೊಳು ವಿ | ಘಾತವೆಣ್ಣುವರೆ ಪ್ರಿಯ || ೩೩೦ ||
ಮುತ್ತಯ್ಯ ದ್ರೋಣರಾಡಿದ | ಬೋಧೆಯ ಮೀರಿ | ಮಿತ್ರಜಾದ್ಯರು ಪೇಳಿದ ||
ಸತ್ಯವೆಂದಂಬು ಕೇಳಿಗೆ | ಪೋಗಲು ನಿಮಗ | ನರ್ಥವಾದುದು ಕಡೆಗೆ || ೩೩೧ ||
ಭಾಮಿನಿ
ಕ್ಲೇಶಗೊಳುತಿಂತೆನಲು ಕೇಳ್ದವ |
ನೀಶನುಸಿರಿದನೆಲೆಗೆ ನೀನಿ |
ನ್ನೇಸು ನುಡಿದರು ಪಾಂಡವರನೊಡಗೊಂಬನಲ್ಲೆಂದ ||
ಆಸೆ ಬೇಡೆಲೆ ನಿನಗೆ ಮಗುಳೀ |
ದ್ವೇಷದಲಿ ಮಡಿದರೆ ಸುಪರ್ವಸು |
ವಾಸಿನಿಯರುಗಳೊಲಿವರೆನಲೆಂದನು ಮುರಧ್ವಂಸಿ || ೩೩೨ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಸಂಧಿಗಾನಯ್ತಂದರೆಮ್ಮನು | ಬಂಧಿಸುವ ಯತ್ನಗಳ ಮಾಡಿದೆ |
ಇಂದು ಸೊಗಸದೆ ನೀತಿ ಕೇಳೈ | ಮುಂದಿನನುವ || ೩೩೩ ||
ಎಲವೊ ಪಾತಕಿ ಬರಿದೆ ಸಾಯದಿ | ರೊಲಿದು ಪಾಂಡವರುಗಳ ಕೂಡಿಕೊ |
ಕೊಲಿಸಲಾರೆನು ಸರ್ವಥಾ ಕೊಳು | ಗುಳದಿ ನಿನ್ನ || ೩೩೪ ||
ಆರಿಹರು ಭೂತಳದಿ ನಿನ್ನಯ | ಭೂರಿ ಭಾಗ್ಯದ ಹೋಲುವೆಗೆ ನಾ |
ಸಾರಿದೆನು ಬಿಡು ಮನದ ಭ್ರಮಿತಾ | ಕಾರವನ್ನು || ೩೩೫ ||
ಎನೆ ಧರಾಧಿಪ ನುಡಿದನರಿತಿಹೆ | ದನುಜರಿಪು ನೀನಿಳೆಯ ಭಾರವ |
ನೊನೆಯಲವತರಿಸಿರುವ ಮಾಯಾ | ಮನುಜನೆಂದು || ೩೩೬ ||
ಹಿಂದೆ ರಾವಣ ಕಂಸ ಮುಖ್ಯರ | ಕೊಂದು ಮುಕ್ತಿಯ ಕರುಣಿಸಿದೆ ನೀ ||
ನೆಂದರಿತು ವೈರದಿ ತವಾಂಘ್ರಿಯ | ಹೊಂದುತಿಹೆನು || ೩೩೭ ||
ಧುರಕೆ ಬೆದರುವನಲ್ಲ ರಿಪುಗಳ | ಕರೆಸಿ ಕೊಡುವವನಲ್ಲ ರಾಜ್ಯವ |
ಹರಣದಾಸೆಗಳಿಲ್ಲ ತನಗೆಂ | ದರಸ ನುಡಿದ || ೩೩೮ ||
ಭಾಮಿನಿ
ಎಲೆ ಮುರಾಂತಕ ಲಾಲಿಸೈ ಬೆಂ |
ಬಲಕೆ ಭೂಪರ ನೆರಹಿ ಕುರುಮಂ |
ಡಲಕೆ ಸನ್ನಹಮಾಗಿ ಸಮರಕೆ ಬರಲಿ ಪಾಂಡವರು ||
ಕಲಹದಲಿ ನಿನ್ನಡಿಯೊಳೆನ್ನಯ |
ತಲೆಯನೈದೆ ಸಮರ್ಪಿಸುವೆನಿದ |
ಕಳುಕೆ ದಿಟವೆಂದೆನುತ ವೀಳ್ಯವನಿತ್ತನಚ್ಯುತಗೆ || ೩೩೯ ||
ವಾರ್ಧಕ
ನಗುತಲಾ ಮಾಧವಂ ದ್ರೋಣ ಕೃಪ ಗಾಂಗೇಯ |
ರಿಗೆ ಪೇಳ್ದ ಮರಣಮಂ ಬಯಸಿರ್ಪನೀ ಖಳಂ |
ಮಗುಳೆನ್ನ ದೂರದಿರಿ ತಿಳುಹಿ ನೀತಿಯನೆನುತ ಬಂದು ಕುಂತಿಯ ಕರ್ಣದಿ ||
ಖಗಜನೊಳು ಸರಳಬೇಡೆನುತ ರಥವೇರಲಾ |
ನಗಧರನ ಕೂಡೆ ಸಜ್ಜನರು ಬರುತವರು ಕೈ |
ಮುಗಿಯಲವರೆಲ್ಲರನ್ನುಪಚರಿಸಿ ಬೀಳ್ಗೊಟ್ಟು ಕರೆದರ್ಕಸುತಗೆಂದನು || ೩೪೦ ||
ರಾಗ ಕೇದಾರಗೌಳ ಅಷ್ಟತಾಳ
ತರಣಿಜ ಲಾಲಿಸು ಕೌಂತೇಯರೈವರ್ಗೆ | ಹಿರಿಯಾತನೈಸೆ ನೀನು ||
ದುರುಳ ಕೌರವನನೋಲೈಸುವ ಹೀನತ್ವ | ತರವೆ ನಿನ್ನಂಗಕಿನ್ನು || ೩೪೧ ||
ಕುಲದಿ ಮಿತ್ರಜ ಶಕ್ತಿ ಶೌರ್ಯಗುಣದಿ ರಘು | ಕುಲಜಾತಗೆಣೆಯು ನೀನು ||
ನೆಲನೊಡೆತನಕೆ ತಕ್ಕವನಾಗಿ ನೃಪನ ತಂ | ಬುಲಕೆ ಕೈಗೊಡುವರೇನೈ || ೩೪೨ ||
ದೃಢದಿ ಬಾರೆನ್ನೊಳು ಸಲಹುವೆ ನಿನ್ನನು | ಪೊಡವಿಯ ನೀನೆ ಆಳು ||
ಎಡದಲ್ಲಿ ಕುರುಸೇನೆ ಬಲದಿ ಪಾಂಡವರಿರಲ್ | ನಡುವೆ ಗದ್ದುಗೆಯನೇರು || ೩೪೩ ||
ಏನು ನಿನ್ನಂತರ್ಯವೆನಗರುಹೆನಲೆಂದ | ಭಾನುಜ ಕೈಮುಗಿದು ||
ಕ್ಷೆಣಿಪ ಕೌರವಗಳಿವು ಬಂತೆಂದು ನಿ | ಧಾನಿಸಿ ತಾ ತಿಳಿದು || ೩೪೪ ||
ಹರಿಯೆ ನೀನೆಂದುದು ಶ್ರುತಿವಚನಗಳೆಂಬು | ದರಿತೆ ನಾನೆಲ್ಲವನು ||
ವರ ರಾಮದೇವರಿಗೆಣೆಮಾಡಬೇಡೆನ್ನ | ನೆರೆ ವಿಹೀನನು ಕುಲದಿ || ೩೪೫ ||
ಪರಮ ದೂರ್ವಾಸಯತೀಶನಿತ್ತಿಹ ಮಂತ್ರೋ | ಚ್ಚರಣೆಯ ಗೆಯ್ದವಳು ||
ತರಣಿಧ್ಯಾನದಿ ನಿನ್ನ ಪಡೆದು ಭೀತಿಯಲಿ ಸ | ಚ್ಚರಿತೆ ಜಾಹ್ನವಿಗಿತ್ತಳು || ೩೪೬ ||
ಆ ಸಮಯದಿ ನಿನ್ನನಂಬಿಗ ಪಿಡಿದು ಭೂ | ಮೀಶ ಕೌರವಗಿತ್ತನು ||
ದೇಶದ ಜನರರಿಯದೆ ಸೂತಸುತನೆಂಬ | ರೈಸೆ ಸತ್ಕುಲಜ ನೀನು || || ೩೪೭ ||
ತಂದೆನ್ನ ಸಲಹಿದ ದಾತನಿಗೆರಡ ನಾ | ನಿಂದು ಯೋಚನೆಗೆಯ್ಯಲು ||
ಕುಂದಳೆ ಜಯಸಿರಿ ಮೆಚ್ಚುವಳೇ ರೂಢಿ | ವೃಂದಾರಕರು ನಗರೆ || ೩೪೮ ||
ಭಾಮಿನಿ
ಸರಸಿಜಾಂಬಕ ಕೇಳು ನಾಳಿನ |
ಧುರದೊಳೆನ್ನಯ ಶೌರ್ಯವೀಕ್ಷಿಸು |
ಹರುಷಗೊಳಿಸುವೆ ಮಾರಿಗೌತಣವಿತ್ತು ತೃಪ್ತಿಯಲಿ ||
ಶರಜ ಬಾಂಧವನಾಣೆ ನಿನ್ನೈ |
ವರನು ಕೊಲ್ಲದೆ ತವ ಪದಾಬ್ಜಕೆ |
ಹರಣಕಾಣಿಕೆ ಕೊಡುವೆ ಪ್ರತಿಮತವಿಲ್ಲ ತೆರಳೆಂದ || ೩೪೯ ||
ವಾರ್ಧಕ
ವೀರ ಕರ್ಣನ ನುಡಿಗೆ ಮೆಚ್ಚಿ ಭಾಪೆನುತಲಸು |
ರಾರಿ ಗಮಿಸಲ್ಕಿತ್ತಲಿನಜ ಮಂದಿರಕೆ ಬಂ |
ದಾ ರಾತ್ರಿಯಲಿ ನಿದ್ರೆಬಾರದತಿ ವ್ಯಸನದಲಿ ಕೌರವನ ಗುಣವ ನೆನೆದು ||
ಧೀರನಾ ಮರುದಿವಸ ರವಿವಾರದುದಯದಲಿ |
ಸಾರಿ ಗಂಗಾನದಿಯ ತಟಕೆ ಸ್ನಾನಾಂತರದಿ |
ಸೂರ್ಯಮಂತ್ರವ ಜಪಿಸುತರ್ಘ್ಯಮಂ ಪಿಡಿಯಲನಿತರೊಳಿಳಿದನಾದಿತ್ಯನು || ೩೫೦ ||
ಕಂದ
ಜನಕನನೀಕ್ಷಿಸುತಣುಗಂ |
ಘನತರ ಭಯಭಕ್ತಿಯಿಂದ ವಂದಿಸಲಾಗಂ ||
ಹಣೆಯಂ ತಾ ಪಿಡಿದೆತ್ತುತ |
ದಿನಪಂ ನಿಜಜಾತಗೆಂದನೀ ತೆರದೊಳಗಂ || ೩೫೧ ||
ಕ��=!��/p���n style=’font-size:12.0pt; font-family:Tunga;mso-hansi-font-family:”Times New Roman”‘> |
ಭೂಪನಿಗೆ ಬುದ್ಧಿಯನು ಪೇಳ್ದರೆ |
ಕೋಪದಿಂದವರವರ ಜರೆದನು ಬಹಳ ರೋಷದಲಿ ||
ಪಾಪಿಗಳ ತೆರದಿಂದ ಶಶಿಕುಲ |
ದೀಪನಿಂತೆನೆ ಕೇಳ್ದು ಬಳಿಕಾ |
ತಾಪಸೋತ್ತಮರಿತ್ತ ತೆರಳಲಿಕೆಂದ ಹರಿ ನಗುತ || ೨೭೯ ||]
ವಾರ್ಧಕ
ತಾಪಸೋತ್ತಮರಿಂತೆನಲ್ ಕೇಳ್ದು ಕಿನಿಸಿನಿಂ |
ದೀಪರಿಯ ಭೋಧಾವಲಂಬನವ ಬಲ್ಲೆನೆಂ |
ದಾ ಪಾರ್ವರಂ ಜರೆಯಲನ್ನೆಗಂ ಧೃತರಾಷ್ಟ್ರ ಕುಂಭಸುತ ಗಾಂಗೇಯರು ||
ಭೂಪಗೆ ವಿವೇಕ ಬುದ್ಧಿಯನೈದೆ ಪೇಳಿದುರೆ |
ಕೋಪದಿಂದಾಲಿಸದಿರಲ್ ನುಡಿದರೀ ದುಷ್ಟ |
ಭೂಪನೋಲಗ ಸಲ್ಲದೆನುತ ಸರಿಯಲ್ಕಿತ್ತ ಕೃಷ್ಣ ಕೌರವಗೆಂದನು || ೨೮೦ ||
ಭಾಮಿನಿ
ಪೊಡವಿಗೋಸುವ ಬಳಗ ಸಹಿತಲಿ |
ನಡೆಯಬೇಡ ಕೃತಾಂತನಲ್ಲಿಗೆ |
ಕೊಡು ಕುಶಸ್ಥಳ ವರವೃಕಸ್ಥಳ ವಾರಣಾವತಿಯ ||
ಬಿಡು ಬಿಡೆಲೊ ಆವಂತಿನಗರವ |
ನೊಡನೆ ಶಕ್ರಪ್ರಸ್ಥವನು ಸಹ |
ತಡೆಯದೇ ಧರ್ಮಜಗೆ ಸಾಮದೊಳೆಂದನಸುರಾರಿ || ೨೮೧ ||
ರಾಗ ನಾದನಾಮಕ್ರಿಯೆ ಆದಿತಾಳ
[ಇಂದ್ರಪ್ರಸ್ಥವನ್ನು ಗುರುವಿ | ಗೆಂದಿತ್ತೆ ನಾ ಮೊದಲೇ |
ಸಂದಿತು ವಿಜಯಂತಿ ಭಾನು | ನಂದನಗಂದು || ೨೮೨ ||
ಧರೆಯೊಳು ವೃಕಸ್ಥಳಿಯ ಗ್ರಾಮ | ದಿರವು ಕೃಪನಿಗಾಯ್ತು ಮೊದಲೆ ||
ವರಕುಶಸ್ಥಳಿಯ ಗುರುವಿನ | ತರಳಗಿರಿಸಿದೆ || ೨೮೩ ||
ಭೂರಿ ಹಿರಿಯ ಮುತ್ತಯ್ಯಗೆ | ವಾರಣನಗರದೊಳಿರಲು |
ದಾರಿಗಿಲ್ಲ ಸುಂಕವು ಕಂ | ಸಾರಿ ಪೋಗಯ್ಯ || ೨೮೪ ||
ನೊಂದರು ಕಾಂತಾರದೊಳ | ಗೆಂದು ನಾನೈದೂರ ಕೇಳ್ದ |
ರಿಂದು ಹೀಗೆ ಪೇಳ್ವುದಿದು | ಚಂದವೇನಯ್ಯ || ೨೮೫ ||
ಮೂರು ಗ್ರಾಮವನ್ನು ನಾ | ಕಾರುಣ್ಯದಿ ಕೊಟ್ಟಿರುವೆ ಮೊದಲೆ |
ಪಾರುಪತ್ಯ ಬೇಡ ನಿನಗೆ | ಊರವಿಚಾರ || ೨೮೬ ||
ಮೂರು ಗ್ರಾಮವಾಯ್ತು ಮತ್ತೆರ | ಡೂರು ತಾವೆ ಆಳ್ವರಂತೆ |
ಬೇರೆ ಬೇರೆ ನಾವು ಕೇಳ್ದೈ | ದೂರು ಕೊಡಿಸಯ್ಯ || ೨೮೭ ||
ಧಾರಿಣಿಯೊಳಗೆ ಸೂಚಿ | ಯೂರುವ ಜಾಗವ ಕೊಡೆನು |
ವೀರರಾದರವರು ಧುರದೊ | ಳೂರ ಕೊಳ್ಳಲಿ || ೨೮೮ ||
ನರನು ತಾನೈಸೆಂಬ ನಿಮ್ಮ | ಧುರದೊಳಗೆ ಕೆಡಹಿ ಮತ್ತೆ |
ಧರಣಿಯ ಕೈ ಹಿಡಿವೆನೆನ್ನು | ತೊರೆವನಾತನು || ೨೮೯ ||
ತರುಣಿಯ ಸಂತಯಿಸದವನು | ಹಿರಿಯರು ಕಿರಿಯರಿಗೇಕೋ |
ಧುರದಿ ನಮ್ಮ ಗೆಲಿದು ಧರಣಿ | ಸಿರಿಯನಾಳ್ವನೆ || ೨೯೦ ||
ಮರುತಜನಿಂತೆಂಬ ತನ್ನ | ತರುಣಿಗೆ ತಾನೊರೆದ ಭಾಷೆ |
ಧುರದೊಳಗಲ್ಲದೆ ಸಲದೆಂ | ದೊರೆವನಾತನು || ೨೯೧ ||
ಭಂಡಿ ಕೂಳ ತಿಂದ ಲಜ್ಜೆ | ಭಂಡ ಮಾಳ್ಪ ಪರಿಯ ಬಲ್ಲೆ |
ಹೆಂಡತಿಯ ಮುಂದೈಸೆ ಕೇಳ್ | ಖಂಡಿತವಿದು || ೨೯೨ ||
ಧರಣಿಗಳೀರೇಳರಲಿ | ಇರುವೆ ನಾನು ತೃಣದೊಳೆಲ್ಲ |
ಮರುಳೆ ಕೇಳ್ ಸ್ವತಂತ್ರ ಎನ್ನೊ | ಳಿರುವುದೈ ಕೇಳು || ೨೯೩ ||
ಹರಿಯೆ ನೀ ಸ್ವತಂತ್ರನೆನ್ನು | ತೊರೆದೆಯಲ್ಲ ಪಾಂಡುಸುತರ |
ಕರೆಸುವ ಬುದ್ಧಿಯನೇಕೆ | ಕರುಣಿಸೆ ಹೇಳು || ೨೯೪ ||
ಕರೆಸು ನೀ ಪಾಂಡವರನಿನ್ನು | ಧರೆಯೊಳರ್ಧವಿತ್ತರೇ ನೀ |
ಸ್ಥಿರದಿ ರಾಜ್ಯವಾಳ್ವೆಯಲ್ಲ | ದಿರಲು ಲಯವೆಂದ || ೨೯೫ ||
ಮುನ್ನ ಅವರನಡವಿಗಟ್ಟಿ | ಇನ್ನು ಧರೆಯ ಕೊಡಲು ನಾನು |
ಕನ್ಯೆಯೆಂದು ತಿಳಿಯಬೇಡ | ಮುನ್ನ ನೋಡೆಂದ || ೨೯೬ ||]
�z�rl�� ��ೊತ್ತಿಗಿನ್ನವರು ಪದುಳಿಗರು || ೨೧೬ ||
ಇನ್ನಾದರೀ ಕೌರವನೊಳು ಕೂಡಿರ್ಪೆವೆಂ | ದೆನ್ನ ಸಂಧಾನ ಕಟ್ಟಿಹರು ||
ಮನ್ನಿಸಿದರೊಳಿತು ಮಗುಳಲ್ಲದಿರಲೀ ಖಳರ | ಮಣ್ಣಗೂಡಿಸದೆ ಬಿಡರವರು || ೨೧೭ ||
ಚಿಂತಿಸದಿರವ್ವ ನಾ ಕಾದಿರ್ಪೆ ನಿಮ್ಮವರ | ಮುಂತೆ ಭಯವಿಲ್ಲವೆನುತವಳ ||
ಸಂತಯಿಸಿ ವಿದುರನೊಳು ಕೌರವನ ಸಮಯಗಳ | ನೀಂ ತಿಳಿದು ಬಾರೆಂದ ನಗುತ || ೨೧೮ ||
ಪರಮಾತ್ಮನಾಜ್ಞೆಯಿಂ ಪೋಗಿ ಭೂಪನೊಳೆಂದ | ಅರಸ ನಿನ್ನೆಡೆಗಸುರಹರನು ||
ಎರಡು ಮಾತುಗಳಾಡ್ವ ಕಾರ್ಯವಿಹುದಂತೆ ಮ | ತ್ತರಿತು ಬಾರೆಂದ ಸಮಯವನು || ೨೧೯ ||
ಎಂದಡುಸಿರಿದ ಗೋಪನಂದನಂಗೆನ್ನೆಡೆಯೊ | ಳಿಂದೇನು ಕಜ್ಜ ನಾಳಿನಲಿ ||
ಬಂದರಯ್ತರಲಿ ಪೇಳೆನುತವನ ಕಳುಹಿಸಿದ | ನಂಧನೃಪನಣುಗನಂದಿನಲಿ || ೨೨೦ ||
Leave A Comment