ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ಕೇಳಿತ್ತಲು ಸುಯೋಧನ | ಕರೆಸಿ ಗುರು ಗಾಂಗೇಯ ಕೃಪರೊಡ ||
ನಿರದೆ ಮನದಾಲೋಚನೆಯ ತಾ | ನೊರೆದನಾಗ  || ೮೪ ||

ಬಿಡಲಿ ರಾಜ್ಯವನೆಂದಹಿತ ನ | ಮ್ಮೆಡೆಗೆ ಕಳುಹಲು ನಾ ರಣಾಗ್ರದಿ ||
ಕೊಡುವೆನೆಂದಚ್ಯುತಸಹಾಯವ | ಪಡೆಯಲಾಗಿ  || ೮೫ ||

ಭೋರನೊದಗಲು ಪಾರ್ಥ ಮುಂಬರಿ | ದಾ ರಮೇಶನನೊಯ್ದ ನಮಗಾ ||
ಧೀರ ಬಲರಾಮಾದಿ ಯದುಪರಿ | ವಾರವಾಯ್ತು  || ೮೬ ||

ಇನ್ನು ಭಯವೇನವರು ಭೂತಳ | ವನ್ನು ಸೋತಿಹರೈಸೆ ಮತ್ತಾ ||
ರಣ್ಯವಾಸಿಗಳೊಡನೆ ಜಗಳವ | ಹಣ್ಣದಿಂದು  || ೮೭ ||

ರಸೆಯನಿತ್ತರೆ ಪಾರ್ಥಿವರ ಪೌ | ರುಷಕೆ ಬಹುದಪಕೀರ್ತಿ ಮಗುಳನಿ ||
ಮಿಷರು ನಗುವರು ಜರೆವರೈ ನಾ | ಲ್ದೆಸೆಯಧಿಪರು  || ೮೮ ||

ಭಾಮಿನಿ

ಪಾಂಡುಜಾತರನೈದೆ ಸಮರದಿ |
ಭಂಡುಮಾಡಿಯೆ ನಮ್ಮ ಭೃತ್ಯರ ||
ತಂಡದಲಿ ಸೇರಿಸದಿರಲ್ಕಿದು ಮೀಸೆಯಲ್ಲೆಂದು ||
ಗಂಡುಗಲಿ ತಾ ನುಡಿಯೆ ಗುರುಕೃಪ |
ರಂಡಲೆದು ನೀತಿಗಳ ಪೇಳಿದ ||
ರಂಡಜಾಧಿಪರಥನ ಭಕ್ತರೊಳಹಿತ ಬೇಡೆಂದು  || ೮೯ ||

ರಾಗ ಕೇದಾರಗೌಳ ಅಷ್ಟತಾಳ

ಎಲೆ ಭೂಪ ಕೇಳ್ ಪಾಂಡುಜಾತರೊಡನೆ ನೀನು | ಗಳಿಸದಿರಹಿತವನು ||
ನಳಿನಾಕ್ಷನಾ ಕಡೆಗಾದಮೇಲ್ ಜಯದ ಹಂ | ಬಲು ಬೇಡ ಸಾರ್ದೆವಿನ್ನು || ೯೦ ||

ತಿಳಿದು ನೋಡವರ ನೀ ಹಳುವಕಟ್ಟಿದರೂ ಶ್ರೀ | ನಿಳಯನ ಕರುಣದಲಿ ||
ಕಳೆದು ವಿವೇಕದೊಳಿಳೆಯೆ ಕೇಳ್ದರೆ ನಿನ | ಗಳಲೇನು ಸಹಜರಲಿ  || ೯೧ ||

ಆರಿಗವನಿ ಸ್ಥಿರ ಸಾಮ್ರಾಜ್ಯ ಮರುಳೆ ಕೇಳ್ | ಮೂರು ದಿನದ ಬಾಳ್ವೆಗೆ ||
ಮೀರಿದೆ ಸತ್ಯವನೆನಿಸಿಕೊಳ್ಳಲು ಬೇಡ | ಧಾರಿಣಿ ಕೊಡಿಸವರ್ಗೆ  || ೯೨ ||

ನೀತಿಯ ಪೇಳ್ದರೆ ನಾವೀಗ ಮನಕೆ ಸಂ | ಪ್ರೀತಿಯಪ್ಪುದೆ ನಿನಗೆ ||
ಸೂತಜಾದಿಗಳಾಪ್ತರವರ ಬಿಟ್ಟಂತರ್ಯ | ವೇತಕೆ ನಮ್ಮೊಳಗೆ  || ೯೩ ||

ಕಂಡಕಂಡವರ ಬೋಧೆಯ ಕೇಳಿ ಕುಣಿದಾಡಿ | ಭಂಡಾಗಬೇಡ ನೀನು ||
ಪಾಂಡುಜಾತರನೊಡಗೂಡಿ ಸ್ವಾಮಿಯ ಮರೆ | ಗೊಂಡೀಗ ಬದುಕೆಂದನು || ೯೪ ||

ವಾರ್ಧಕ

ಕೋವಿದರ ನುಡಿಗೆಂದ ಕನಲುತ್ತ ಪ್ರಾಜ್ಞರೆಂ |
ದೀ ವಿಬುಧರೊಡನೆ ನಮ್ಮಂತರ್ಯಮಂ ಪೇಳ್ದ |
ಡಾ ವೈರಿಗಳ ಪೊಗಳ್ವ ಜಾತಿಸ್ವಭಾವಮಂ ಬಿಡುವರೇನೀ ಪಾರ್ವರು ||
ದೇವ ಬಲಭದ್ರಾದಿ ಯದುಬಲದ ಮುಂದೆ ತುರು |
ಗಾವವನ ವಿಪಿನವಾಸಿಗಳಿಂದಲಪ್ಪುದೇ |
ನೀ ವಿಷಯಕೆಂದು ಜರೆದಾ ಕರ್ಣನಾನನವನೀಕ್ಷಿಸಲು ವಿವರಿಸಿದನು || ೯೫ ||

ರಾಗ ಮಾರವಿ ಏಕತಾಳ

ಲಾಲಿಸು ಕೌರವ ವಿಪ್ರರ ಪೌರುಷ | ದೇಳಿಗೆ ಭೋಜನದಿ ||
ಲೀಲೆಗಳಲ್ಲದೆ ಮೆರೆವುದೆ ರಿಪುಸ | ಮ್ಮೇಳದ ಸಮ್ಮುಖದಿ  || ೯೬ ||

ಇವರೆಂದೆಂದಿಗು ಪಾಂಡುಸುತರ ಪೊಗ | ಳುವರೈ ಕ್ಷಿಪ್ರದಲಿ ||
ಇವರತ್ತಲು ಹೊರಡಿಸು ನಾನಿಹೆನಾ | ಹವಕೆ ಸರಾಗದಲಿ  || ೯೭ ||

ರಕ್ಷಿಪಂಗಹಿತವಪೇಕ್ಷಿಸುವರಮೊಗ | ವೀಕ್ಷಿಸಬಹುದೇನೈ ||
ಈಕ್ಷಣ ಕಳುಹಿಸೆನಲೀಕ್ಷಿಸುತೆಂದರು | ಪೇಕ್ಷೆಯೊಳರ್ಕಜಗೆ  || ೯೮ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಲವೊ ಸೂತನ ಮಗನೆ ನಿನ್ನಯ | ಬಲವ ಪೂರ್ವದೊಳರಿತು ಬಲ್ಲೆವು ||
ಲಲನೆಯರ ಸಮ್ಮುಖದಿ ವಿಟರ | ಗ್ಗಳಿಕೆಯಂತೆ  || ೯೯ ||

ಧೀರನಹುದಾಗಿರಲು ಖೇಚರ | ವೀರನೀತನನೊಯ್ವ ಸಮಯದೊ ||
ಳಾರ ಮರೆಯಲಿ ಸೇರಿ ಬದುಕಿದೆ | ನಾರಿಯಂತೆ  || ೧೦೦ ||

ತುರುವಿಗೋಸುಗ ಬಂದು ಪಾರ್ಥಿವ | ರೆರೆಯ ಫಲುಗುಣ ನಿಲ್ಲಲಾತನ ||
ಹೊರೆಯೊಳೀ ಪೌರುಷವ ಮೆರೆಸದೆ | ಮರಳಿದೇಕೈ  || ೧೦೧ ||

ಮೂಢರಿಗೆ ಬಹು ನೀತಿಮಾರ್ಗವ | ನಾಡಿ ಫಲವೇನೊದಗಿ ಬರುತಿಹ ||
ಕೇಡನರಿಯದೆ ಬಗುಳುತಿಹೆ ರಣ | ಹೇಡಿಯಂತೆ  || ೧೦೨ ||

ನೋಡದಿರು ನೀನೆಮ್ಮ ವದನವ | ನೀಡಿಸೈ ವೀಳೆಯವ ರಿಪುಗಳ ||
ಕೂಡುವೆವು ತೋರಲ್ಲಿ ಶೌರ್ಯಸ | ಗಾಢಿಕೆಯನು  || ೧೦೩ ||

ಭಾಮಿನಿ

ಕೇಳುತಲಿ ಕಲಿ ಕರ್ಣ ಕಲ್ಪದ |
ಶೂಲಿಯಂತಾರ್ಭಟಿಸುತವದಿರ |
ಕೋಳುಗೊಂಬೆನೆನುತ್ತ ಖಡ್ಗವ ಜಡಿದು ಮುಂಬರಿಯೆ ||
ಮೇಲುವರಿದುದು ಕಾರ್ಯವೆಂದು ನೃ |
ಪಾಲನುಭಯರ ಮನದ ರೋಷವ ||
ಬೀಳುಗೊಳಿಸಿದ ನಿಮ್ಮೊಳಗೆ ಕಡಿದಾಟ ಬೇಡೆಂದು  || ೧೦೪ ||

ವಾರ್ಧಕ

ಅರಸ ಕೇಳನಿಬರಂ ಕೌರವನೊಡಂಬಡಿಸಿ |
ಕರೆದು ಸಂಜಯನ ಧರ್ಮಜನಲ್ಲಿಗಂ ಪೋಗಿ |
ಧರೆಯ ಸೋತವರಿಗಂ ಮಗುಳೆ ಯುದ್ಧದಿ ಸೋಲುಗೆಲವರಿಯದಿತ್ತರಿಳೆಯ ||
ಹರುಷಗೊಳ್ಳದು ಪಾರ್ಥಿವರಿಗೆ ಯೋಗ್ಯವಿದಲ್ಲ |
ಹರಿಬದೊಳು ಸತ್ಯದಿಂ ಕಾದಲನುವಾಗಲೆಂ |
ದರುಹಿ ಬಾರೆನಲಾತನಯ್ದಿದಂ ತವಕದಿಂದಂತಕಾತ್ಮಜನ ಬಳಿಗೆ  || ೧೦೫ ||

ಭಾಮಿನಿ

ಜನಪನಾ ಸಂಜಯನ ಕಾಣುತ |
ಸನುಮತದೊಳುಪಚರಿಸುತಿರಲಾ |
ವನಜಸಖನಪರಾಬ್ಧಿಗಿಳಿಯಲು ಕಳೆದು ಯಾಮಿನಿಯ ||
ದಿನಪ ಮೂಡಣ ಗಿರಿಯೊಳೆಸೆಯಲು |
ದನುಜದಲ್ಲಣನಾಜ್ಞೆಯಲಿ ಯಮ |
ತನುಜನೋಲಗವಿತ್ತನಿಂದ್ರನ ಸಭೆಗೆ ಮಿಗಿಲೆನಿಸಿ  || ೧೦೬ ||

ರಾಗ ಕೇದಾರಗೌಳ ಅಷ್ಟತಾಳ

ಕರೆಸಿ ಸಂಜಯನ ಕುಳ್ಳಿರಿಸಿ ಧರ್ಮಜ ಕೇಳ್ದ | ಗುರುಭೀಷ್ಮ ಮುಂತಾಗಿರ್ದ ||
ಹಿರಿಯಯ್ಯ ಗಾಂಧಾರಿಯಣುಗರ ಕ್ಷೇಮವ | ಸರಸಿಜಾಂಬಕನುಸಿರ್ದ || ೧೦೭ ||

ಕೃತ್ರಿಮದಲಿ ಪಾಂಡುಪುತ್ರರ ಸೋಲಿಸಿ | ಧಾತ್ರಿಯನೆಲ್ಲವನು ||
ಶತ್ರುಗಳಿಲ್ಲವೆಂದಾಳುವ ಭೂಪಗೆ ಸ್ವಸ್ಥವೇನುಸಿರೆಂದನು  || ೧೦೮ ||

ಬಳಿಕನಿಲಜನೆಂದ ನಿಮ್ಮೊಡೆಯನ ತೊಡೆ | ಗಳಿಗೆ ಸುಖವೆ ನಿರತ ||
ಬಲವಂತ ದುಶ್ಯಾಸನಾದ್ಯರ ಕಾಯ ಕೋ | ಮಲತರವೇನೆನುತ  || ೧೦೯ ||

ಬೆಸಗೊಂಡನರ್ಜುನ ಗೋಗ್ರಹಣದಿ ಮೊನ್ನೆ | ವಸುಧೀಶ ಕರ್ಣಾದ್ಯರು ||
ಬಸವಳಿದಿಹ ತಾಪವಡಗಿಯೆ ಗಾತ್ರದಿ | ಕುಶಲರೆ ಪೇಳೆಂದನು  || ೧೧೦ ||

ತರುಣಿ ಪೇಳ್ದಳು ಭಾವನವರನುಜರು ಸಹ | ಶರಕೇಳಿಗಯ್ದಾಗಲು ||
ವರಚಿತ್ರಸೇನ ಬಂಧಿಸಿದ ನೇಣಿನ ನೋವು | ಸರಿದೀಗ ಸುಖವೆ ಪೇಳು || ೧೧೧ ||

ಭಾಮಿನಿ

ಎನಲು ಸಂಜಯ ನುಡಿದ ತನ್ನೊಳ |
ಗಿನಿತು ವೈರಾಗ್ಯಗಳು ಏತಕೆ |
ಜನಪನವನಿಯ ಸೋತಮೇಲನುವರದೊಳಾಯುಧದ ||
ಮೊನೆಯೊಳೀವುದು ಕ್ಷಾತ್ರವಂಶದ |
ಗುಣದ ಪದ್ಧತಿ ಸತ್ಯದಿಂದಲೆ |
ಸೆಣಸಲನುವಾಗಿರಲಿ ಪೇಳೆನಲೈದೆ ತಾನೆಂದ  || ೧೧೨ ||

ರಾಗ ಕಾಂಭೋಜ ಝಂಪೆತಾಳ

ಅನಘ ಕೇಳ್ದಾಗ ಕಾನನವಾಸಿಗಳಿಗೆ ಕುಂ | ಭಿನಿಯಾಳ್ವ ಕಡುಬಲಾಢ್ಯರಲಿ ||
ಸೆಣಸುವ ಪರಾಕ್ರಮಗಳುಂಟೆ ವನವೇ ಸೌಖ್ಯ | ರಣದಿ ಸೋಲ್ವುದರಿಂದಲೆನಲು || ೧೧೩ ||

ನಳಿನಾಕ್ಷ ನಗುತ ಕೌರವ ಜಾತಿವಾತ್ಸಲ್ಯ | ಗಳ ತಪ್ಪಿ ನಡೆವನಲ್ಲೆಂಬ ||
ನೆಲೆಯರಿತೆವಂತಿರಲಿ ಸತ್ಯವಿದ್ದರೆ ಸೋತ | ನೆಲನ ಜೈಸುವರನಿಬರೆಂದ || ೧೧೪ ||

ಮರುತಸಂಭವ ಗದೆಯನಾಡಿಸುತಲಂತಕನ | ಪುರದಿ ಠಾಣ್ಯಗಳನ್ನು ನೋಡಿ ||
ತರುಣಿ ತನಯರಿಗೆ ಗರಳವನಿತ್ತು ನಿಮ್ಮವರ | ಧುರಕೆ ಬರಹೇಳೆಂದ ನಗುತ || ೧೧೫ ||

ಇಂದ್ರಸುತನೆಂದ ಜೂಜಿನ ಸಭೆಯೊಳಾಡಿದುದ | ನೊಂದ ಮರೆಯದೆ ಸೆರಗಿಲದನು ||
ಚಂದದಲಿ ಗಂಟಿಕ್ಕಿಕೊಂಡು ತೀರ್ಚಲಿ ರಣದೊ | ಳಂದು ಪೇಳ್ದಿಹ ಭಾಷೆಗಳನು || ೧೧೬ ||

ತರುಣಿ ದ್ರೌಪದಿ ಪೇಳ್ದಳಂದು ಬಿಡಿಸಿದ ಮುಡಿಯ | ಮರಳಿ ಬಂಧಿಸಲಿಲ್ಲವೆನುತ ||
ಮರುಗುತಿಹಳಿನ್ನು ಕಟ್ಟಿಸುವಂತೆ ಪೇಳ್ದಳೆಂ | ದರುಹು ದುಶ್ಯಾಸನನೊಳೆನುತ || ೧೧೭ ||

ವೈರಾಟ ಪಾಂಚಾಲ ಮಾದ್ರೇಯರಾಗ ಖತಿ | ಯೇರಿ ಕುರುಬಲವನಸಿಯರೆದು ||
ಈ ರಸೆಯ ಧರ್ಮಜಗೆ ಮಾಳ್ಪೆವೆಂದಾರ್ಭಟಿಸ | ಲಾ ರವಿಜಸುತ ಸೈರಿಸಿದನು || ೧೧೮ ||

ಭಾಮಿನಿ

ಕೆಡಿಸದಿರಿ ಕಾರ್ಯವನು ರೋಷವ |
ಬಿಡಿರಿ ಗುಣ ಮುಂದಿರ್ಪುದೆನುತಾ |
ಕಡುವಿರೋಧವ ನಿಲಿಸಿ ಸಂಜಯಗೆಂದ ನಾಳಿನಲಿ ||
ಖಡುಗವಾಗಲಿ ನೀತಿಯಾಗಲಿ |
ಒಡೆಯ ಲಕ್ಷ್ಮೀರಮಣನಯ್ತಹ |
ಪೊಡವಿಪಗೆ ಪೇಳೆನಲು ನಡೆದ ಮುರಾರಿಗಭಿನಮಿಸಿ  || ೧೧೯ ||

ವಾರ್ಧಕ

ಅರಸ ಕೇಳ್ ಸಂಜಯಂ ಗಜನಗರಮಂ ಪೊಕ್ಕು |
ಧರಣೀಶ ಧೃತರಾಷ್ಟ್ರಗೀಪರಿಯ ಸೂಚಿಸಲ್ |
ಮರುಗುತಾ ರಾತ್ರಿಯಲಿ ನಿದ್ರೆ ಬಾರದೆ ವಿದುರನಂ ಕರೆಸುತವನಿಂದಲಿ ||
ವರನೀತಿತತ್ತ್ವ ಧರ್ಮಂಗಳ ರಹಸ್ಯಮ |
ನ್ನರಿತು ಪೇಳಿನ್ನು ತನಗಾತ್ಮವಿದ್ಯೆಯ ನೆಲೆಯ |
ಪರಮ ಮಂತ್ರಾಕ್ಷರದ ಬೀಜವನೆನಲ್ಕೆ ಕೈಮುಗಿದೆಂದನಂಧನೃಪಗೆ  || ೧೨೦ ||

ಭಾಮಿನಿ

ಅರಸ ಕೇಳ್ ಪರತತ್ತ್ವವಿದ್ಯೆಯ |
ನರುಹಿಸುವಡೆ ಸನತ್ಕುಮಾರನೆ |
ಹೊರತು ಮಿಕ್ಕಾದವರಿಗಸದಳವಾ ಮುನೀಶ್ವರನ ||
ಸ್ಮರಿಸೆನಲು ಮಾನಸದಿ ನೆನೆದರೆ |
ಕರುಣದಿಂದಯ್ತರಲಿಕಾತನ |
ಚರಣಪೂಜೆಯ ಮಾಡಿ ಬಲಬಂದೆರಗುತಿಂತೆಂದ  || ೧೨೧ ||

ರಾಗ ಸಾಂಗತ್ಯ ರೂಪಕತಾಳ

ಮುನಿಪ ಕೇಳ್ ಕರುಣದಿ ಬ್ರಹ್ಮೋಪದೇಶವ | ನೆನಗೆ ನೀ ಶ್ರುತಗೊಳಿಸಯ್ಯ ||
ಎನಲಾಗ ಪರತತ್ತ್ವವಿದ್ಯಾತಿಶಯಗಳ | ನನುಕರಿಸಿದು ಬಳಿಕೆಂದ  || ೧೨೨ ||

[ತೋರುವ ಸಕಲ ಪ್ರಪಂಚವೆಲ್ಲವು ಮಾಯೆ | ತೋರುವುದಕೆ ನಾಶವುಂಟು ||
ತೋರದಿರುವ ವಸ್ತುವಿಗೆ ನಾಶವಿಲ್ಲ ಕೇಳ್ | ತೋರದಿರ್ಪುದೇ ಪರಬ್ರಹ್ಮ || ೧೨೩ ||

ಮೂರು ತನುವು ಮೂರು ಗುಣವು ಕಾಲಂಗಳು | ಮೂರವಸ್ಥೆಯು ಮೂರೀಷಣವು ||
ಮೂರು ಶಕ್ತಿಯು ತೊಂಭತ್ತಾರು ತತ್ತ್ವಂಗಳ | ಮೀರಿರ್ಪುದೇ ಪರಬ್ರಹ್ಮ || ೧೨೪ ||

ಮರೆವುದಾ ಸಕಲವ ಮನದಲ್ಲಿ ಮನವನ್ನು | ಮರೆವುದಾ ಮತಿಯಿಂದ ಮತಿಯ ||
ಮರೆವುದಾತ್ಮಾನಂದದೊಳಗಾತ್ಮಾನಂದವ | ಮರೆವುದು ಬರಿಯರಿವಾಗಿ || ೧೨೫ ||

ಮನವಳಿದೇಕತ್ವವಾಗಿರಲದು ಮುಕ್ತಿ | ಯೆನುತ ಬೋಧಿಸುತಂಧನೃಪನ ||
ಮನದ ಸಂದೇಹವನೆಲ್ಲ ಬೀಳ್ಗೊಳಿಸುತ್ತ | ಪುನರಪಿ ಪೇಳ್ದನಾ ನೃಪಗೆ || ೧೨೬ ||]

ಜನಪ ಕೇಳ್ ನಿನ್ನ ನಂದನರು ಪಾಂಡವರೊಳು | ರಣಕೆ ಸನ್ನಹ ಗೆಯ್ವರಂತೆ ||
ಘನತೆಯಲ್ಲನಿಬರ ತನುವಿಗೆ ಹೊಣೆಯಾಗಿ | ದನುಜಾರಿ ಕಾಯ್ದುಕೊಂಡಿಹನು || ೧೨೭ ||

ದೇಶಕೋಶವನೆಲ್ಲ ಸೆಳೆಕೊಂಡು ಕಾಂತಾರ | ವಾಸಕಟ್ಟಿದರಿನ್ನವರ್ಗೆ ||
ವಾಸುದೇವನ ಕೃಪೆಯಿಲ್ಲದಿರ್ದಡೆ ಮತ್ತೆ | ಲೇಸಾಗಲುಂಟೆ ನೀ ನೋಡೈ || ೧೨೮ ||

ಕ್ಷೆಣಿಭಾರಕರ ನೀನೇಸು ಮಕ್ಕಳ ಪೆತ್ತ | ರೇನಂಗವಾಯ್ತಯ್ಯ ಜಗದಿ ||
ವಾನರಧ್ವಜನೊಬ್ಬ ನಿಲಲಾತನುರುಬೆಗಿ | ನ್ನಾನುವರುಂಟೆ ತ್ರೈಜಗದಿ || ೧೨೯ ||

ಇನ್ನಾದರೊಮ್ಮೆ ನಿನ್ನುಣುಗರ್ಗೆ ಬುದ್ಧಿಯ | ಚೆನ್ನಾಗಿ ತಿಳುಹಿ ಧರ್ಮಜನ ||
ಮನ್ನಿಸಿ ಕೃಷ್ಣನ ಮರೆ ಹೊಕ್ಕು ಬದುಕುವು | ದನ್ಯೋನ್ಯವೆಂದನಾ ಮುನಿಪ || ೧೩೦ ||

ಭಾಮಿನಿ

ಇನಿತು ನಾನಾ ವಿಧದ ಬೋಧೆಗ |
ಳನು ಧರಾಧಿಪಗೊಲಿದು ಪೇಳ್ದಿರ |
ಲನಿತರಲಿ ದಿನಮಣಿಯುದಯಿಸಲು ನೃಪನ ಸಂತಯಿಸಿ ||
ಮುನಿಪ ತನ್ನಾಶ್ರಮಕೆ ತೆರಳಲು |
ಜನಪನಿತ್ತಲು ನಂದನರ ದು |
ರ್ಗುಣಗಳನು ನೆನೆನೆನೆದು ಚಿಂತಿಸುತಿರ್ದ ದುಗುಡದಲಿ  || ೧೩೧ ||

ರಾಗ ನೀಲಾಂಬರಿ ಆದಿತಾಳ

ಅಕಟ ನಾನೇನೆಂಬೆ ಮಮ ಬಾ | ಲಕರ ದುರ್ಬುದ್ಧಿಯನು ||
ರಕುತಮದದಿ ಪಿತನಿಲ್ಲದ | ಸುಕುಮಾರಕರನ್ನು  || ೧೩೨ ||

ಸಕಲ ಬಗೆಯೊಳಳಲಿಸುವುದ | ಪ್ರಕಟಿಸಲೇಕಿನ್ನು ||
ಸುಕೃತಿಗಳಾದುದರಿಂದ ಕಾಯ್ದ | ವಿಕಸಿತಾಕ್ಷ ತಾನು  || ೧೩೩ ||

ದೇಶಕೋಶಾದಿಗಳ ಬಿಡಿಸಿ | ಮೋಸದಿ ಕಾನನದ ||
ವಾಸಕಟ್ಟಿದರು ಸತ್ಯ | ದಾಸೆಯೊಳು ನಡೆದ  || ೧೩೪ ||

ಭಾಷೆ ಕಳೆದ ಮೇಲೆ  ತಪ್ಪೇ | ನಾ ಸೂನುಗಳಿಂದ ||
ನಾಶವಹರು ಇಳೆಯ ನೆವದೊ | ಳೀ ಸುತರಿನ್ನೆಂದ  || ೧೩೫ ||

ಭಾಮಿನಿ

ಏಕೆ ತನಗವಸಾನ ಬಾರದು |
ಆ ಕಮಲಸಂಭವನ ಬರಹವು  |
ಏಕವಾದುದೆ ಫಣೆಯೊಳಕಟಾ ಸುತರ ದುರ್ಗುಣರ ||
ಲೋಕಲೋಕ ಪ್ರಸಿದ್ಧವಾಯ್ತು ಪು |
ರಾಕೃತದ ಫಲ ಮುಪ್ಪಿನಲಿ ಮೈ |
ಸೋಕಿತಕಟೆನ್ನಂತ ಪಾಪಿಗಳಾರು ಎನುತಿರ್ದ  || ೧೩೬ ||

ವಾರ್ಧಕ

ರಾಜಕುಲತಿಲಕ ಕೇಳಿತ್ತಲು ಸುಯೋಧನಂ |
ರಾಜೀವಮಿತ್ರನುದಯದೊಳೋಲಗಂಗೊಟ್ಟು |
ರಾಜಪತಿ ಧೃತರಾಷ್ಟ್ರ ಗುರು ಭೀಷ್ಮ ಶಕುನಿ ಕೃಪ ಕರ್ಣಾದಿ ಭಟರು ಸಹಿತ ||
ರಾಜಿಸುವ ಛತ್ರ ಚಾಮರ ಗೀತ ವಾದ್ಯದಿ ವಿ |
ರಾಜಿಪ ಸಭಾಸ್ಥಳಕೆ ಸಂಜಯನ ಕರೆದು ಯಮ |
ರಾಜನಣುಗನ ವಾರ್ತೆಯಂ ಪೇಳ್ವುದೆನಲಾಗ ಬಿನ್ನವಿಸಿದಂ ಭರದೊಳು || ೧೩೭ ||

ರಾಗ ತೋಡಿ ಅಷ್ಟತಾಳ

ಲಾಲಿಸು | ಭೂಪ | ಲಾಲಿಸು  ||ಪ||

ಲಾಲಿಸು ಕುರುಭೂಪಾಲಕ ಚಿತ್ತವಿಟ್ಟು |
ಶೀಲ ಧರ್ಮಜನ ವಾರ್ತೆಯ ಕಿವಿಗೊಟ್ಟು || ಲಾಲಿಸು   ||ಅ||

ಶಿವ ಶಿವ ಯಮಜನೋಲಗಸಿರಿಯನ್ನು |
ವಿವರಿಸಲರಿದು ಫಣೀಶ್ವರಗಿನ್ನು ||
ಹವಣವಲ್ಲೆನಗೆ ಕೇಳ್ ಹರಿಯ ಕಾರುಣ್ಯ |
ಭವನವಾಗಿಹುದನಿಬರ್ಗೆ ಸಂಪನ್ನ || ಲಾಲಿಸು  || ೧೩೮ ||

ನಿಮ್ಮ ಸರ್ವರ ಕುಶಲವ ಕೇಳ್ದ ನೃಪನು |
ನಮ್ಮಯ ಬರವೇನೆನಲು ನೀನೆಂದುದನು ||
ಧರ್ಮಜಗುಸಿರಲು ವನವಾಸಿಗಳಿಗೆ |
ಮರ್ಮವೇತಕೆ ಭೂಪರೊಳಗೆಂದ ಕಡೆಗೆ || ಲಾಲಿಸು  || ೧೩೯ ||

ಶ್ರೀಲೋಲನೆಂದ ಪಾಂಡವರ ಕೃತ್ರಿಮದಿ |
ಸೋಲಿಸಿ ಪಗೆಯಿಲ್ಲೆಂದಿಹ ಭೂಪ ಸುಖದಿ ||
ಬಾಳಿಕೊಂಡಿರ್ಪನೆ ಸತ್ಯಗಳಿರಲು |
ಆಳುವರಿಳೆಯ ಸೋತವರೆಂದು ಕೇಳು || ಲಾಲಿಸು  || ೧೪೦ ||

ಮಿಗೆ ಭೀಮ ಕೇಳ್ದ ನಿನ್ನೂರುಗಳ್ಸುಖವ |
ಮಗುಳೆ ದುಶ್ಶಾಸನಾದ್ಯರ ಕಾಯದೊಲವ ||
ಖಗಜಪುರದೊಳಿಂಬ ನೋಡಿ ಸಂಗರವ |
ನೆಗಳಲೆಂದನು ಸತಿಯರಿಗಿತ್ತು ಗರವ || ಲಾಲಿಸು  || ೧೪೧ ||

ನರನುಸಿರಿದನು ಗೋಗ್ರಹಣದಿ ನೊಂದ |
ಧುರಪರಿಶ್ರಮವಡಗಿತೆ ಕೌರವೇಂದ್ರ ||
ತರಣಿಜಾದ್ಯರು ದ್ಯೂತಸಭೆಯೊಳ್ ತಾವೆಂದ |
ವರಭಾಷೆಯನು ಮರೆಯದೆ ತೀರ್ಚಲೆಂದ  || ೧೪೨ ||

ಶರಕೇಳಿಯಲಿ ಬಳಲಿದ ಭಾವಂದಿರಿಗೆ |
ಹರುಷವೇನೈ ಎಂದು ಪಾಂಚಾಲೆ ಕಡೆಗೆ ||
ತುರುಬ ಬಂಧಿಸಲಿಲ್ಲವೆಂದು ದುಃಖಿಪಳು |
ಭರದಿ ಬಂಧಿಸಹೇಳೆಂದಳು ದುಶ್ಯಾಸನೊಳು || ಲಾಲಿಸು  ||೧೪೩||

ಮಗುಳೆ ನಕುಲ ಸಹದೇವಾದಿ ಭಟರ |
ದುಗುಡವೇನೆಂದಿರುತಿರಲಾ ಯಮಕುವರ ||
ಜಗಳವಾಗಲಿ ನೀತಿಯಾಗಲಿ ಕಡೆಗೆ |
ನಗಧರನಯ್ದುವನೆಂದ ನಿನ್ನೆಡೆಗೆ || ಲಾಲಿಸು  ||೧೪೪||

ಭಾಮಿನಿ

ವ್ಯಾಕುಲವ ಬಿಡು ನೃಪತಿಯವರೊಳು |
ನೀ ಕಲಹಕನುವಾಗದಿರು ಜಯ |
ಸೋಕಲರಿಯದೆನಲ್ಕೆ ಕೌರವ ನುಡಿದನಬ್ಬರಿಸಿ ||
ನೂಕಿರೋ ಸಂಜಯನ ನಮ್ಮಿದಿ |
ರಾ ಕುಚೇಷ್ಟರ ಪೊಗಳುತಿಹನು |
ದ್ರೇಕವಾಯ್ತರಿಗಳು ಭಯಂಕರವೀತಗೆಂದೆನುತ  || ೧೪೫ ||

ವಾರ್ಧಕ

ಖೂಳನೀ ಸಂಜಯನ ಮಾತೇನು ಕೌಂತೇಯ |
ರಾಳುತನವಂತಿರಲಿ ಶಿವನನೊಮ್ಮೆಗೆ ಗೆಲುವ |
ತೋಳಬಲುಹೆನಗುಂಟು ಜೀಯ ಬೆದರದಿರೆಂದು ಕನಲಿದಂ ಕಲಿ ಕರ್ಣನು ||
ಖೂಳನೇ ಸಂಜಯನು ಭರ್ಗನೊಳು ಕಾದುವ ಸು |
ಶೀಲ ಸಾಹಸಿಯಹುದೆಲೈ ರವಿಜ ಬಲ್ಲೆವು ನೃ |
ಪಾಲ ನಿನಗೇಕೆ ಭಯ ಮೈಗೊಬ್ಬಿನುತ್ತರವಿದೆಂದರಾ ಗುರು ಭೀಷ್ಮರು || ೧೪೬ ||

ರಾಗ ಮಧುಮಾಧವಿ ತ್ರಿವುಡೆತಾಳ

ಆ ಸಮಯದೊಳಗಂಧನೃಪ ತ | ಕ್ಕೈಸಿ ಕೌರವಗೆಂದ ಮಗನೇ ||
ಈ ಶಕುನಿ ಕರ್ಣಾದಿಗಳ ಸಹ | ವಾಸ ನಿನಗವಸಾನವು || ಕಂದ ಕೇಳು || ೧೪೭ ||

ನೀನವರಿಗಪರಾಧಿಯಾದರು | ಮಾನನಿಧಿಗಳು ನಿನಗೆ ಬಂದಪ ||
ಮಾನಗಳ ಕಾಯ್ದುದನು ಮರೆತೆಯ | ಹೀನಬುದ್ಧಿಗಳಿಂದಲಿ || ತರುಣ ಕೇಳು || ೧೪೮ ||

ಒಡೆಯ ಕೃಷ್ಣನ ಪಾದಸೇವಕ | ರೊಡನೆ ನಿನ್ನಯ ಛಲವು ಕೊಳ್ಳದು ||
ಬಿಡುಬಿಡಿನ್ನಾ ಕುಟಿಲವಿದ್ಯೆಯ | ಕೊಡಿಸು ರಾಜ್ಯವನವರಿಗೆ || ಚಂದದಿಂದ || ೧೪೯ ||

=’ma’+ܶ-op���argin-right:0mm;margin-bottom:5.0pt; margin-left:0mm;mso-pagination:none;mso-layout-grid-align:none;text-autospace: none’>ಧುರದೊಳು ನಿಂತು ಕಾದಲು | ಸಾಮರ್ಥ್ಯವುಂಟೆ | ಹರಿಯೆ ನೀನರಿತು ಪೇಳು ||
ಶರಣರಾಧೀನನೆಂದು | ಸ್ಮೃತಿಯೊಳ್ ಪೇಳು | ತಿರಲು ಸುಳ್ಳಹುದೆ ಎಂದು || ೭೧ ||

 

ಚರಿಸಿ ಕಾಂತಾರದೊಳಗೆ | ಬಳಲಿದೆವು | ಪರರ ಸೇವೆಯೊಳ್ ಕಡೆಗೆ ||
ಅರಿಗಳೊಳ್ ಸೋಲುವುದರಿಂದ | ಪ್ರಾಣವನಿಲ್ಲಿ | ತೊರೆವುದೊಳ್ಳಿತು ಗೋವಿಂದ || ೭೨ ||]

ರಾಗ ಕಾಂಭೋಜ ಝಂಪೆತಾಳ

[ಎಂದು ಸಾಷ್ಟಾಂಗದಿಂದೆರಗಿ ದುಃಖಿಸಿ ಚರಣ | ದ್ವಂದ್ವದಲಿ ಬಿದ್ದು ನುತಿಸುತಿರೆ ||
ಇಂದ್ರಜಾತನ ನೋಡಿ ಮನಮರುಗಿ ವಸುದೇವ | ನಂದನನು ಕರುಣದಿಂದೊಲಿದು || ೭೩ ||]

[ನರ ನಿನ್ನ ಧೈರ್ಯ ಸಾಹಸ ಪರೀಕ್ಷಿಸಲಾನು | ಒರೆದುದಲ್ಲದೆ ಬೇರೆಯುಂಟೆ ||
ಬರಿದೆ ಬೆದರದಿರು ಶುಕ ನಿಮಗೆ ಪಂಜರನೆಂಬ | ಪರಿಯನರಿಯದೆ ಬೆಚ್ಚಿದೆಯಲಾ ||] || ೭೪ ||

ಪಾದಾಂಬುರುಹಕೆ ಪೊಡಮಟ್ಟು ನುತಿಸುವ ನರನ | ಮಾಧವನು ಸಂತಯಿಸಿ ನುಡಿದ ||
ನೀ ಧೈರ್ಯ ತಾಳು ಸಾರಥಿತನವ ಮಾಳ್ಪೆನೆಂ | ದಾ ಧನಂಜಯನೊಡನೆ ಪೊರಟ || ೭೫ ||

ಭಾಮಿನಿ

ಅರಸ ಕೇಳ್ ಬ್ರಹ್ಮಾಡಕೋಟಿಯ |
ಧರಿಸಿ ಗರ್ಭದಿ ಮೆರೆವ ಚಿನ್ಮಯ |
ನರನ ಸಾರಥಿಯಾದಮೇಲುಳಿದವರಪಾಡೇನು ||
ಹರ ಹರಾ ಮನುಜಾತರಲಿ ಸಿತ |
ತುರಗ ತಾನಿನ್ನೇಸು ಧನ್ಯನೊ |
ಶರಣರಲಿ ಮಗುಳೆಂತು ದಯವೋ ಭಕ್ತವತ್ಸಲಗೆ  || ೭೬ ||

ರಾಗ ಭೈರವಿ ತ್ರಿವುಡೆತಾಳ

ಈ ತೆರದೊಳಸುರಾರಿ ದಿವ್ಯ ವ | ರೂಥವಡರಿದು ಗಾಯಕರ ಸಂ ||
ಗೀತ ಪೊಗಳಿಕೆ ವಾದ್ಯನಿನದದಿ | ಜಾತಿಗಣಿಕೆಯರುಗಳ ನಾಟ್ಯದೊ ||
ಳೋತು ಮನಿವಿಟ್ಟಂಬುಜಾಸನ | ತಾತ ಕಂಸವಿಘಾತ ಲಕ್ಷ್ಮೀ ||
ನಾಥ ಸಾತ್ಯಕಿಸಹಿತ ಯಮಸಂ | ಜಾತನೆಡೆಗೆಯ್ತಂದನತ್ಯಾ ||
ನಂದಕರದಿ | ನರನೊಡ | ನಂದು ಭರದಿ  || ೭೭ ||

ವರ ಯುಧಿಷ್ಠಿರನಿತ್ತ ಮುರಹರ | ನರನಿಗೊಲಿದನೊ ಕೌರವೇಂದ್ರಗೆ |
ಕರುಣವಾದನೊ ಎನುತ ಚಿಂತಿಸು | ತಿರಲು ಚಾರಕ ಬಂದು ಪೇಳ್ದನು ||
ಹರಿ ಕಿರೀಟಿಗೆ ಸೂತನಾಗಿಯೆ | ತೆರಳಿ ಬಹನಿನ್ನಾರು ಲೋಕದಿ ||
ಸರಿಸಮಾನರು ನಿನ್ನ ಭಾಗ್ಯಕೆ | ಸರಸಿಜಾಕ್ಷನನಿದಿರುಗೊಳ್ಳೆಂ ||
ದೆರಗಿ ನಿಂದ | ಭೂಪಗೆ | ಹರುಷದಿಂದ  || ೭೮ ||

ವಾರ್ಧಕ

ಕೇಳ್ದವನಿಪಂ ಚಿಂತೆಯನ್ನುಳಿದು ಧೈರ್ಯಮಂ |
ತಾಳ್ದಾ ವಿರಾಟ ದ್ರುಪದಾದ್ಯರೊಡಗೊಂಡು ಸಿರಿ |
ಯಾಳ್ದಿಹನ ಬಳಿಗೆ ಪೊಂದಳಿಗೆಯಂ ದರ್ಪಣವ ಪಿಡಿದವರ ಶೋಭಾನದಿ ||
ಪೋಲ್ದಪ್ಸರಾಂಗನೆಯರಿಂ ನರ್ತಿಸುವ ಪೆಣ್ಗ |
ಳೋಳ್ದಿವ್ಯತರವಾದ ಬಿರುದಿನಿಂ ವಾದ್ಯರವ |
ದೋಳ್ದಾನವಾರಿಯಂ ಕರೆತಂದು ಕಾಂಚನದ ಪೀಠವನ್ನೇರಿಸಿದನು || ೭೯ ||

ಕಂದ

ಅಚ್ಯುತನಂ ಅತಿಭಕ್ತಿಯೊ |
ಳರ್ಚಿಸಿ ಪದತೀರ್ಥವ ತಾ ಶಿರದೊಳಗಾಂತಂ ||
ಸಚ್ಚಿನ್ಮಯನಂಘ್ರಿಯೊಳಂ |
ಸಚ್ಚರಿತಂ ಪೊಡಮಡುತಿಂತೆಂದಂ ನಯದಿಂ  || ೮೦ ||

ರಾಗ ಮಧ್ಯಮಾವತಿ ಏಕತಾಳ

ದೇವ ನೀ ಚಿತ್ತೈಸಿದೇನಯ್ಯ ನಿನ್ನ | ಸೇವಕರ್ಮೇಲಾಯ್ತೆ ಪೂರ್ಣ ಕಾರುಣ್ಯ ||
ನಾವೆ ಧನ್ಯರು ನಮಗಿನ್ನಾವ ಭವದ | ನೋವಿಲ್ಲವೆನಲೆಂದ ಸಾಮಜವರದ || ೮೧ ||

ದೇವತನವು ನಮಗಿನ್ನೆಲ್ಲಿ ನರಗೆ | ನಾವೆ ಸಾರಥಿಯಾದ ಮೇಲಿನ್ನು ನಿಮಗೆ ||
ಭೂವಳಯದೊಳೆಣೆಯಾರೆಂದಚ್ಯುತನು | ಕೇವಲ ಕೃಪೆಯೊಳಪ್ಪಿದ ಕಾಲಜನನು || ೮೨ ||

ದೇವರ ದೇವ ನೀನಹುದು ಮೂಜಗದಿ | ದೈವ ಬೇರಿನ್ನುಂಟೆ ಭಕ್ತರ ಮುದದಿ ||
ಆವಾವ ರೀತಿಯೊಳ್ ಪೊರೆವೆಯೊ ಎಂದು | ಪಾವನಚರಿತನ ನುತಿಸಿದನಂದು || ೮೩ ||