ರಾಗ ಸಾಂಗತ್ಯ ರೂಪಕತಾಳ

ಸಿಂಧುಭೂವರ ಕೇಳು ಪಾಶುಪತವನಮ |
ರೇಂದ್ರನ ಸುತನಿಗಿತ್ತಿಹೆನು ||
ಕುಂದದೆನ್ನಯ ಸತ್ತ್ವವದರಿಂದ ನಿನ್ನ ಧು |
ರಂಧರಿಕೆಯು ತಾ ಬಗೆಯದು ||308||

ಆ ಸುಭಟೋತ್ತಮನಿರದಿರೆ ಪಾಂಡವ |
ರೇಸಿದ್ದರೊಂದೆ ವಾಸರದಿ ||
ನೀ ಸಂಗರವನು ಜೈಸೆಂದಂತರ್ಧಾನವ |
ನೀಶನು ಗೈದನಂದಿನಲಿ ||309||

ಶಿತಿಕಂಠನಾಡಿದ ನುಡಿ ಕೇಳಿ ಮರಳಿದ |
ನತಿಕ್ಲೇಶದಲಿ ಜಯದ್ರಥನು ||
ಅತಿದುಃಖದಲಿ ಪಾಂಡುಸುತರಿರ್ದರಡವಿಯೊಳ್ |
ಕ್ಷಿತಿನಾಥ ಕೇಳು ಮುಂಗಥೆಯ ||310||

ಈ ಪರಿ ಚಿಂತೆಯೊಳಿರಲು ಮಾರ್ಕಂಡೇಯ |
ತಾಪಸೋತ್ತಮ ನಡೆತರಲು ||
ಭೂಪ ಧರ್ಮಜನಿದಿರ್ಗೊಂಡು ಸತ್ಕರಿಸಿ ಪ್ರ |
ಳಾಪದಿ ಮುನಿಯೊಡನೆಂದ ||311||

ರವಿಶಶಿಕುಲದೊಳು ನಮ್ಮಂಥ ನಪತಿಗಳ್ |
ಭವಣೆಬಟ್ಟರೆ ಸತಿಸಹಿತ ||
ಶಿವ ಶಿವ ಕರ್ಮಿಗಳಾವೆನೆ ಯಮಜಂಗೆ |
ವಿವರಿಸಿದನು ಮುನಿರಾಯ ||312||

ಅರಸ ಕೇಳ್ ನಿನ್ನ ಪಾಡೇನು ವಿಶ್ವಂಭರಾ |
ಧರ ಭಗುಮುನಿಯ ಶಾಪದಲಿ ||
ನರರೂಪವನೆ ತಾಳಿ ಬಂದ ದುಸ್ಥಿತಿಯ ವಿ |
ಸ್ತರಿಸಲಿನ್ನದರೆನಗಳವೆ ||313||

ಅಡವಿಯೊಳಗೆ ರಾಮನಿರಲಾತನರಸಿಯ |
ಬಿಡದೆ ಕದ್ದೊಯ್ದ ರಾವಣನು ||
ಕಡಲನ್ನು ಕಪಿಸೇನೆಯಿಂದ ಬಂಧಿಸಿ ಖೂಳ |
ನೊಡಲ ಛೇದಿಸಿ ತಂದ ಸತಿಯ ||314||

ಎಂದು ರಾಮಾಯಣದನುಭವಾಮತವನ್ನು |
ಚಂದದಿ ಧರ್ಮಜಗುಸಿರಿ ||
ಕಂದು ಕಸರಿಕೆಯ ಕಳೆದು ನಿರ್ಮಲರಾಗಿ |
ರೆಂದು ಯೋಗಿಪ ತೆರಳಿದನು ||315||

ಅರಸ ಕೇಳನಿತರೊಳ್ ಮುನಿಯ ರಾಣಿಯನೊಂದು |
ಹರಿಣ ಕೊಂಡೊಯ್ವುದೆಂದೊರೆಯೆ ||
ಮೆರೆವ ತಮ್ಮಂದಿರನೊಡಗೊಂಡು ಧರ್ಮಜ |
ತೆರಳಿದ ಮಗ ಬೇಟೆಗಾಗ ||316||

ದಾನವಮಗವ ರಾಘವನಟ್ಟಿ ದಣಿದಂತೆ |
ಕಾನನವನು ಸುತ್ತಿ ಬಳಲಿ ||
ಮೌನಿಯ ರಾಣಿಯೊಯ್ದ ಮಗವ ಪಿಡಿದು ಬಲು |
ಪಾನಾಭಿಲಾಷೆಯೊಳೊರಗಿ ||317||

ನಕುಲಾಂಕ ಪೋಗಿ ತಾರಯ್ಯ ಕ್ಷಿಪ್ರದಿ ಗಂಗೋ |
ದಕವನ್ನು ಸರಸಿಯಿಂದೆನಲು ||
ಅಕುಟಿಲ ಬಂದು ಪುಷ್ಕರದಂಟುಗೊಳಲು ಮಾ |
ಯಕದಭ್ರನುಡಿಯಾದುದಾಗ ||318||

ಮಾತನಾಲಿಸದಾ ನಕುಲಾಂಕನು ನೀರ್ಗೊಂಡು |
ಧಾತುಗೆಟ್ಟಿರೆ ಸಹದೇವನನು ||
ಕಾತರದಲಿ ಧರ್ಮಸುತ ಕಳುಹಲು ಬಂದೀ |
ರೀತಿಯೊಳೊರಗಿದನವನು ||319||

ಮತ್ತೆ ಭೀಮಾರ್ಜುನರೈತಂದು ನೀರ್ಗೊಳ |
ಲುತ್ತರ ಪಾಲಿಸದಂದು ||
ಚಿತ್ರದಿಂ ಮೂರ್ಛೆಗೊಂಡೊರಗಲು ನಪ ತಾನು ವಿ |
ಚಿತ್ರದಿಂದೈತಂದು ಕಂಡ ||320||

ಹಲುಬಿದನಂದು ತಾ ನೀರ್ಗೊಂಡು ಬಳಿಕಿವ |
ರುಳಿವಂದವನು ಕಾಂಬೆನೆಂದು ||
ಕೊಳವಿಳಿಯಲ್ ಮಾರುತ್ತರವ ಕೊಟ್ಟಾಮೇಲೆ |
ಕೊಳ್ ನೀರು ಧರ್ಮಜನೆನುತ ||321||

ವಾರ್ಧಕ

ವಿತತ ಶರನಿಧಿಗೆ ಸರಿ ಸರಸಿಯಾವುದು ನೆಲಕೆ |
ಹಿತನಾದವನು ಮರ್ತ್ಯರಿಗೆ ಮಾತೆ ಯಾರು ಶೋ |
ಭಿಪ ಸೂರ್ಯಕಾಂತಿಗೆಣೆಯೇನು ಪೇಳೆನೆ ಖಚರಗೆಂದನಾ ಧರ್ಮರಾಯ ||
ಸತತಮಾಕಾಶಮಂಬುಧಿಗೆ ಸರಿ ಸರಸಿ ಸುರ |
ಪತಿಹಿತನು ಜಗಕೆ ಮನುಜರ್ಗೆ ಮಾತೆಯು ಗೋವು |
ಗತವಿಲ್ಲದಮಲ ಸತ್ಯವೆ ಗಗನಮಣಿಗೆಣೆಯೆನಲ್ ಖಚರಪತಿ ನುಡಿದನು ||322||

ನಯವಿದನೆ ಕೇಳಾವನೇ ಕ್ಷತ್ರಿಯೆಂಬುದ |
ನ್ವಯದೊಳಾರದು ಶ್ರೋತ್ರಿಯುಂ ಸುಜನರೊಳ್ ಪುಣ್ಯ |
ಮಯ ಪುರುಷನಾರು ಶೋಧಿಸಲು ಮಹದೇವತಾಪ್ರಿಯನಾರು ಕಪಟಿಯಾರು ||
ದಯವಂತನೊಲಿದು ಪೇಳೆನಲೆಂದ ಯಮಸುತಂ |
ಭಯರಹಿತ ಕ್ಷತ್ರಿಯಂ ಶ್ರುತಿಚತುಷ್ಟಯವರಿತ |
ಪ್ರಿಯಶೋತ್ರಿಯವನಖಿಳ ಹಿಂಸೆಗೊಳಗಾಗದವನಾತನೆ ಮಹಾಪುರಷನು ||323||

ಸತತಂ ಪರೋಪಕಾರದೊಳಿಹಂ ವೇದಪ್ರ |
ತತಿವಂದ್ಯನಾತನೆ ವಿಚಾರಿಸಲ್ ಪರರ ಸಂ |
ಗತಿ ಗುಣಾಗುಣಗಳಂ ತಿಳಿದು ಗುಣವಂ ಪೇಳದವ ಕಪಟಿಯೆಂದನರಸ ||
ಪಥಿವೀಶ ಕೇಳ್ ಧರ್ಮಸುತನೆಂದ ನುಡಿಗವಂ |
ಹಿತವಂತನಾಗಿ ಪೇಳೆಂದನವಗಾ ಖಚರ |
ಪತಿಯೊಲಿದು ಲೋಕದೊಳ್ ನಿಂದ್ಯನಾರಭಿವಂದ್ಯನಾರು ಶೋಧಿಸಿ ನೋಡಲು ||324||

ಜೀವವಿರೆ ಮತನೆನಿಸಿಕೊಂಬವನದಾರು ದೇ |
ಶಾವಳಿಯದಾವ ದೆಸೆಯಿಂದಳಿವುದಾಗಿರ್ದ |
ಪಾವನಮಖಂ ನಿಷ್ಫಲಮದೆಂತು ಪೇಳೆನಲು ಧರ್ಮಸುತನಿಂತೆಂದನು ||
ಭಾವಿಸಲ್ ಪರನಿಂದಕರೆ ನಿಂದ್ಯ ಹಿತವ ಸಂ |
ಭಾವಿತನೆ ಹಿತವಂತ ಮಾನವಿರಹಿತನೆ ನಿ |
ರ್ಜೀವಿ ಮನೆದೇಳಿದಿಚ್ಛೆಗೆ ನಡೆವ ನಪನಿಂದ ನಾಶವಹುದಾ ದೇಶವು ||325||

ಸಂದ ಯಜ್ಞಕೆ ಧನಂ ಸಾಲದಿರೆ ಕೆಡುವುದೆನೆ |
ದಂದುಗದ ನರಕಿ ಯಾವನು ಸಾಧು ಜನರೊಳ್ಮ
ದಾಂಧ ಬಾಹಿರನಾರು ಹರಣವಿರೆ ಹೊಂದಿದನದಾರು ಭೂಪಾಲಕರಲಿ ||
ಮಂದಗುಣ ಮರುಳನಾವನು ಮಾನಭಂಗದಿಂ |
ನೊಂದುಕೊಂಡವನಾರು ಪೇಳಿದಂ ಸಂತೋಷ |
ದಿಂದ ಸರಸಿಯೊಳುದಕಮಂ ಕುಡಿಯೆನಲ್ ಧರ್ಮರಾಯನೊಲಿದಿಂತೆಂದನು ||326||

ಕುವರ ಕೇಳ್ ತವ ಸತ್ಯಗುಣಕೆ ಮೆಚ್ಚಿದೆನಡವಿ |
ಯವಧಿಯಾದುದು ನಿಮಗೆ ದೈವಬಲವುಂಟು ಮುನಿ |
ನಿವಹಮಂ ಬೀಳುಗೊಂಡಜ್ಞಾತವಾಸಕ್ಕೆ ಮನವ ಮಾಡೆಂದನೊಲಿದು ||
ವಿವರಿಸಲ್ ನೀವು ಪಾಂಡವರೆಂದು ಸಕಲಜನ |
ವವನಿಯೊಳಗರಿಯದಿರಲೆಂದು ವರವಿತ್ತು ಸಂ |
ಭವನ ಮನ್ನಿಸಿ ದಂಡಧರನೈದಲಿತ್ತ ಮುನಿಯರಣಿಯಂ ತಂದಿತ್ತರು ||327||

ರಾಗ ಪಂಚಾಗತಿ ತ್ರಿವುಡೆತಾಳ

ಶ್ರೀಮಾರುತತನುಜನಿಗೆ | ಸೋಮಕುಲಾಂಬುಧಿಚಂದ್ರನಿಗೆ |
ಗೋಮಿನಿಯರಸನ ಮಿತ್ರನಿಗೆ | ಮಿತ್ರಗೆ ಮಿತ್ರಾತ್ಮಜಪುತ್ರಗೆ |
ಪ್ರೇಮದಿ ಮುನಿಜನ ಜಯವೆನಲು | ಶೋಭಾನೆ ||328||

ಜಗದಾಜೀವನನಂದನನಿಗೆ | ವಿಗಡರೇಕ ಚಕ್ರವಿದಳಿತಗೆ |
ಸುಗಧಾಯುಧನಿಗೆ ಭೀಮನಿಗೆ | ಭೀಮಗೆ ನಿಸ್ಸೀಮನಿಗೆ |
ಯೋಗಿಸ್ತೋಮಗಾರತಿಯ ಬೆಳಗಿರೆ ಶೋಭಾನೆ ||329||

ವರ ಸೌಭದ್ರೆಯ ವರನಿಗೆ | ಹರನೊಳು ಸೆಣಸಿದ ಧುರಧೀರಗೆ |
ಹರಿಯ ಮೈದುನಗೆ ನರನಿಗೆ | ನರನಿಗೆ ಗಾಂಡೀವಧರನಿಗೆ |
ಸುರುಚಿರದಾರತಿಯ ಬೆಳಗಿರೆ ಶೋಭಾನೆ  ||330||

ಮಾದ್ರೀದೇವಿಯ ಬಾಲಕರಿಗೆ | ಛಿದ್ರತತಿ ಭೀಷಣನಿಗೆ |
ಅದ್ರಿರಿಪು ತನುಜಾನುಜರಿಗೆ | ಅನುಜರಿಗೇ ಯಮಳರಿಗನುಪಮ |
ಭದ್ರದಾರತಿಯ ಬೆಳಗಿರೆ ಶೋಭಾನೆ ||331||

ಪಾಂಚಾಲೆಗೆ ಪಾವನೆ ಶಿವೆಗೆ | ಚಂಚಲನೇತ್ರೆಗೆ ಸುಚರಿತ್ರೆಗೆ |
ಪಂಚಪಾಂಡವರ ರಮಣಿಗೆ | ರಮಣಿಗೆ ದ್ರೌಪದೀದೇವಿಗೆ |
ಕಾಂಚನದಾರತಿಯ ಬೆಳಗಿರೆ ಶೋಭಾನೆ ||332||

ವಾರ್ಧಕ

ಬಳಿಕಲ್ಲಿ ಮುನಿಗಳಾಶೀರ್ವಾದಮಂ ಕೊಂಡು |
ತಳುವದೈತಂದ ಪಾಂಚಾಲ ಮೊದಲಾಗಿರ್ದ |
ಸಲೆ ಮಿತ್ರಭೂಪರಂ ಬೀಳ್ಗೊಂಡು ಧೌಮ್ಯಾದಿ ಮುನಿಗಳಂ ಕಳುಹಿ ಮುದದಿ ||
ನಳಿನಮಿತ್ರಗೆ ಕನಕಪಾತ್ರೆಯನ್ನಿತ್ತಧಿಕ |
ಗೆಲವಿನಿಂದಜ್ಞಾತವಾಸಕ್ಕೆ ಮನಮಾಡಿ |
ಕಳೆವುತಿರ್ದಂ ಧರ್ಮರಾಯನಾ ಮಧ್ವಪತಿ ಕೃಷ್ಣನ ಕಟಾಕ್ಷದಿಂದ ||333||

ರಾಗ ಮುಖಾರಿ ಝಂಪೆತಾಳ

ಶ್ರೀಮನೋಹರಗೆ ಮುಖ್ಯಪ್ರಾಣರಂಜಿತಗೆ |
ಸೋಮಕುಲತಿಲಕ ಧರ್ಮಜವರದಗೆ ||
ಭೀಮಾರ್ಜುನರಿಗೆ ಸಾರಥಿಯಾಗಿ ಯಮಳರಂ |
ಪ್ರೇಮದಿಂ ಪೊರೆದ ರುಕ್ಮಿಣಿಯರಸಗೆ ||
ಜಯ ಮಂಗಳಂ ನಿತ್ಯ ಶುಭ ಮಂಗಳಂ ||334||

ಕುಡುಮಪುರವಾಸನಿಗೆ ಕೋಟಿರವಿಭಾಸನಿಗೆ |
ಬಿಡದೆ ಸುಜನರನು ಸಲಹುವ ದೇವಗೆ ||
ಪೊಡವಿಗೆ ಚತುಃಶರಧಿವಲಯದಿ ಪ್ರಕಾಶಿಸುವ |
ಒಡೆಯ ಶ್ರೀಮಂಜುನಾಥೇಶ್ವರನಿಗೆ ||
ಜಯ ಮಂಗಳಂ ನಿತ್ಯ ಶುಭ ಮಂಗಳಂ ||335||

ಮಧುಕೈಟಭಾಹಿತೆಗೆ ಮರಾಳವಾಹನಸತಿಗೆ |
ಮಧುರವಾಣಿಗೆ ಮಹಿಷಖಳನಾಶೆಗೆ ||
ಮಧುರಸಪ್ರಿಯೆಗೆ  ಧೂಮ್ರಾಕ್ಷಮರ್ದಿನಿಗೆ ವರ |
ಮಧುಪಕುಂತಳೆಗೆ ಮನುಮುನಿವಂದ್ಯೆಗೆ ||
ಜಯ ಮಂಗಳಂ ನಿತ್ಯ ಶುಭ ಮಂಗಳಂ ||336||

ಸಂಗೀತಲೋಲನಿಗೆ ಸರಸಗುಣಶೀಲನಿಗೆ |
ಮಂಗಳಾಂಗಗೆ ಮಹೇಶ್ವರಬಾಲಗೆ ||
ಶಂಗಾರದಿಂದ ಧರ್ಮಸ್ಥಳದಿ ಶೋಭಿಸುವ |
ಬಂಗಾರ ಗಜಮುಖದ ಗಣನಾಥಗೆ ||
ಜಯ ಮಂಗಳಂ ನಿತ್ಯ ಶುಭಮಂಗಳಂ ||337||

ಅವತಾರತ್ರಯಿಗೆ ಮಾಯಾವಾದಿದಲ್ಲಣಗೆ |
ಪವಮಾನಸುತಗೆ ಪಾವನ ಚರಿತಗೆ ||
ಭುವನಜೀವನ ಮಧ್ವಪತಿಕೃಷ್ಣ ಸುಪ್ರಿಯಗೆ |
ದಿವಿಜವಂದಿತಗೆ ತತ್ತ್ವಜ್ಞರಾಯನಿಗೆ ||
ಜಯ ಮಂಗಳಂ ನಿತ್ಯ ಶುಭಮಂಗಳಂ ||338||

ಭಾಮಿನಿ

ವರಮಹಾಭಾರತಪುರಾಣದೊ |
ಳೆರಕವಾಗಿಹ ಪಾಂಡವರ ಶುಭ |
ಚರಿತೆಗಳನರುಹಿದೆನು ಸಾಂಗದಿ ಯಕ್ಷಗಾನದಲಿ ||
ವಿರಚಿಸಿದ ಕತಿಯೊಳಗೆದೋಷಗ |
ಳಿರಲು ತಿದ್ದುತ ಮೆರಸಬೇಕೆನು |
ತೆರಗಿ ಪೇಳುವೆ ಸಲಹುವನು ನರಸಿಂಹನನವರತ ||339||

ಮಂಗಲ

ರಾಗ ರೇಗುಪ್ತಿ ಏಕತಾಳ

ಮಂಗಲ ನೀಲಾನಿಭಾಂಗನಿಗೆ | ಜಯ |
ಮಂಗಲ ಗರುಡತುರಂಗನಿಗೆ ಮಂಗಲ  || ಪಲ್ಲವಿ ||

ಇನಶತಕೋಟಿಪ್ರಕಾಶನಿಗೆ | ಜನನಮರಣಭಯನಾಶನಿಗೆ ||
ಮನುಮಥಜನಕ ರಮೇಶನಿಗೆ | ವನಧಿಶಯನ ಪರಮೇಶನಿಗೆ || ಮಂಗಲ ||340||

ಪರತರರೂಪಗೆ ಪಾವನಗೆ | ಕರುಣಾಕರನಿಗೆ ಶ್ರೀಕರಗೆ ||
ಶರಣಾಗತರನು ಪೊರೆವನಿಗೆ | ದುರಿತವಿನಾಶಗೆ ಕೇಶವಗೆ || ಮಂಗಲ ||341||

ಜಡಜಾಕ್ಷಗೆ ದಾಮೋದರಗೆ | ಕೊಡಲಿಯ ಧರಿಸಿದ ಭಾರ್ಗವಗೆ ||
ಮಡದಿಯರೊಡನಾಡಿದ ಹರಿಗೆ | ಉಡುಪತಿಪುರಪತಿ ಕೃಷ್ಣನಿಗೆ || ಮಂಗಲ ||342||

ಕಂದ

ಶ್ರೀಕಷ್ಣಾಚ್ಚುನಿಶಾಂತದೊ |
ಳೀ ಕತಿಯನು ಮುದ್ರಿಸುತಲಿ ಪ್ರಕಟಿಸಿದಿದನುಂ ||
ಪ್ರಾಕತಭಾಷಾಭಿಜ್ಞರ್ |
ಸ್ವೀಕತವನು ಗೈದು ಮುದದಿ ಾಚಿಸಲನಿಶಂ ||343||

 

 || ಯಕ್ಷಗಾನ ಚಿತ್ರಸೇನಕಾಳಗ ಮುಗಿದುದು ||