ಅಧಿಕೋತ್ಸಾಹ ಲಯ

ಮೂರು ಮಾತ್ರೆಯ ಎರಡು ಛಂದಃಖಂಡಗಳು ಗಣಸಂಧಾನದ ಪರಿಣಾಮವಾಗಿ ಏಕೀಭವಿಸಿ ೪ + ೨ ಅಥವಾ ೨ + ೪ ಎಂದು ವಿಭಕ್ತವಾದಾಗ ಆರುಮಾತ್ರೆಯ ಛಂದೋಗತಿ ಉನ್ಮೀಲಿಸುತ್ತದೆ. ಇದನ್ನು ತ್ರಿಶ್ರಗತಿಯಲ್ಲಿ ಹಾಡಲಾಗುವುದಿಲ್ಲವೆಂಬುದನ್ನು ಗಮನಿಸಬೇಕು. ಆದುದರಿಂದ ಇಲ್ಲಿ ಉತ್ಸಾಹಗತಿಗಿಂತ ವಿಭಿನ್ನವಾದ ಗತಿ ಪರಿಣಾಮವುಂಟಾಗುತ್ತದೆ. ಈ ಷಣ್ಮಾತ್ರಾವಿನ್ಯಾಸವು ೨+೨+೨ ಎಂದೇ ವಿಭಕ್ತವಾಗುವುದರಿಂದ ಇದನ್ನು “ಅತಿದ್ರುತಗತಿ” ಎಂದೂ ಕರೆಯಬಹುದು. ಯಕ್ಷಗಾನಗಳಲ್ಲಿ ಈ ರೀತಿಯ ಗತಿವಿನ್ಯಾಸವನ್ನು ವಿವಿಧ ಛಂದೋಬಂಧಗಳಲ್ಲಿ ಕಾಣಬಹುದು.

ಜಯಜಯಶ್ರೀ. ಗಜವದನಾ.                                                 ೬.೬
ಜಯಜಯಸುಂ. ದರಸದನಾ ||                                              ೬.೬
(ಸ್ತುತಿಪದ್ಯ)
ಹುಟ್ಟಿಸಿದಾ. ಗಲೆ ಮರಣವ                                                 ೬.೬
ಕಟ್ಟಿಹುದಾ. ವಿಧಿಪಣೆಯಲಿ                                                 ೬.೬
ಕೆಟ್ಟಾ ಮೇ. ಲಲ್ಲದೆ ಮತಿ                                                   ೬.೬
ಪುಟ್ಟದು ಜೀ. ವರಿಗೆ ||                                                       ೬. ಪ
(ಕೃಷ್ಣ ಚರಿತೆ)
ಕಳುಹಿದಸುರ. ಮುನಿ ನಿಮ್ಮಯ. ಬಳಿಗೆನ್ನ. ಲ್ಲಿಂದ                    ೬.೬.೬. ಪ.
ತಿಳಿದೆನು ನಿ. ಮ್ಮಯಧರ್ಮದ. ನೆಲೆಯನು ಮುನಿ.ಯಿಂದ ||          ೬.೬.೬. ಪ.
(ಕೃಷ್ಣಾರ್ಜುನ ಕಾಳಗ)

ಇದು ಜಯಕೀರ್ತಿಯು ಹೇಳಿದ ಮದನವತಿಯ ಮಾತ್ರಾತ್ಮಕಸ್ವರೂಪ. ಅವನು ಹೇಳಿದಂತೆ ‘ಪ್ರಥಿತಯತಿಃ/ಪ್ರತಿಚರಣಂ/ದ್ವಾವಿಂಶತಿ/ಮಾತ್ರಾ’ ಎಂಬ ಗಣವಿಭಜನೆಯಂತೆ ಒಟ್ಟು ಇಪ್ಪತ್ತೆರಡು ಮಾತ್ರೆಗಳಿಗೆ ಸರಿಹೊಂದುವ ರಚನೆ. ರುದ್ರಗಣಗಳು ಷಣ್ಮಾತ್ರಾಗಣವಾಗಿ ಪರಿವರ್ತನೆ ಹೊಂದಿ ಈ ಪದ್ಯ ಬಂಧ ರೂಢಿಗೆ ಬಂದಿರಬೇಕು.

ತ್ರಿಪುಟಲಯ
ಸೌರಾಷ್ಟ್ರ-ತ್ರಿವುಡೆ

ಅರಸ. ಮುನಿದಿಹೆ. ಏಕೆ. ತನ್ನಲಿ                                             ೩.೪. ೩.೪.
ಕರುಣ. ವಿರಲೈ. ನಿನಗೆ. ಸತಿಯರ                                           ೩.೪. ೩.೪.
ತೆರದಿ. ಮಂಡೆಯ. ತಗ್ಗಿ. ಸದೆಕಣ್                                          ೩.೪. ೩.೪.
ತೆರೆದು. ನೋಡೈ ||                                                            ೩.೪.
(ಕೃಷ್ಣ ಸಂಧಾನ)

ಮಧುಮಾಧವಿ-ತ್ರಿವುಡೆ
ಧರಣಿ. ಪತಿ ಸದ್. ಭಕ್ತಿ. ಭಾವದಿ                                           ೩.೪. ೩.೪.
ಪರಿಸ. ಮಾಪ್ತಿಯ. ಗೈದು. ವ್ರತವನು                                     ೩.೪. ೩.೪.
ನರಹ. ರಿಯಭಜಿ. ಸುತ್ತ. ಕುಳ್ಳಿರೆ                                           ೩.೪. ೩.೪.
ತರುಣಿ. ಮೋಹಿನಿ. ಹರುಷ. ದೀ ||                                         ೩.೪. ೩. ಗು.
(ರುಕ್ಮಾಂಗದ ಚರಿತ್ರೆ)

ಮಧ್ಯಮಾವತಿ-ತ್ರಿವುಡೆ
ಗುರುವಿ.ನಂಘ್ರಿಗೆ. ನಮಿಸಿ. ಗಜಮುಖ                                      ೩.೪. ೩.೪.
ಗೆರಗಿ. ಬ್ರಹ್ಮಗೆ. ವಂದಿ. ಸೀ                                                   ೩.೪. ೩.ಗು.
ಗಿರಿಜೆ. ಯನುಪೂ. ಜಿಸುತಂ. ಶ್ರೀಶಂ                                        ೩.೪. ೩.೪.
ಕರನ. ಧ್ಯಾನವ. ಮಾಡು. ತಾ                                                ೩.೪. ೩.ಗು.
ವಿನಯ.ದಿಂದಾ ||                                                               ೩.೪ ||
(ಐರಾವತ)

ಶಂಕರಾಭರಣ-ತ್ರಿವುಡೆ
ಭರತ. ಗಿತ್ತನು. ರಾಜ್ಯ. ವೆಲ್ಲಭ                                            ೩.೪. ೩.೪.
ಧರಣಿ. ಪಾಲನು. ನಿನ್ನ. ನು                                                  ೩.೪.೩.ಗು.
ಕರೆದು. ಗಹನಕೆ. ಕಳುಹ. ಲಾರದೆ                                            ೩.೪. ೩.೪.
ಮರುಗು. ತಿಹನು ||                                                            ೩.೪. ||
(ರಾಮ ಪಟ್ಟಾಭಿಷೇಕ)

ಯಮುನಾಕಲ್ಯಾಣಿ-ತ್ರಿವುಡೆ
ಶರಣು. ಸಕಲಾ. ಭೀಷ್ಟ. ದಾಯಕಿ                                          ೩.೪. ೩.೪.
ಶರಣು. ತ್ರಿಭುವನ. ಪಾಲ. ಕೀ                                               ೩.೪. ೩.ಗು.
ಶರಣು. ಶ್ರೀತ್ರೈ. ಲೋಕ್ಯ. ನಾಯಕಿ                                        ೩.೪. ೩.೪.
ಶರಣು. ವರನೀ. ಲಾಳಕೀ ||                                                  ೩.೪. ೩.ಗು.
(ಕೃಷ್ಣ ಚರಿತೆ)

ಬೇಗಡೆ-ಏಕ
ಕೇಳು. ಭೀಷ್ಮಾ.ಚಾರ್ಯ. ಬಿನ್ನಪ. ವಾ |                                  ೩.೪.೩.೪. ಗು
ಸ. ತ್ಕೀರ್ತಿ. ಸದ್ಗುಣ.                                                         ಮೂ. ೩.೪.

—-
ಮೂ=ಮೂಲಾಂಶ.

ಶೀಲ. ಪೇಳುವೆ. ನೆನ್ನ. ಮನದೊಲ. ವಾ ||                                ೩.೪.೩.೪.ಗು.
ಭೂಲ. ಲಾಮರ. ಜೈಸಿ. ಮೆರೆದಿಹ.                                        ೩.೪.೩.೪.
ತೋಳಿ. ನೊಳುಬಿಗಿ. ದಪ್ಪಿ. ಮನ್ಮಥ.                                     ೩.೪.೩.೪.
ಕೇಳಿ. ಯೊಳುನೀ. ನೆನ್ನ. ಮನವನು.                                        ೩.೪.೩.೪.
ಕಾಲ. ಕಾಲಕು. ತೃಪ್ತಿ ಪಡಿಸದೆ ||                                           ೩.೪.೩.೪.
(ಭೀಷ್ಮ ವಿಜಯ)

ಭಾಮಿನಿ ಷಟ್ಪದಿ
ಘನಮ. ದೋನ್ಮತ. ದಿಂದ. ಕುಳಿತಿಹ                                      ೩.೪.೩.೪.
ಬಣಗು. ರಾಯನ. ಗರ್ವ. ವಿಳಿಸುವೆ                                         ೩.೪.೩.೪.
ನೆನುತ. ಲೊತ್ತಿದ. ಸಿರಿಚ. ರಣದುಂ. ಗುಟವ. ನವನಿಯೊ. ಳೂ||      ೩.೪.೩.೪.೩.೪. ಗು
ಜನಪ. ಕೇಳಿಳೆ. ಮಗುಚ. ಲಂಧಕ                                            ೩.೪.೩.೪.
ನಣುಗ. ಸಿಂಹಾ. ಸನವು. ಸಹ ಕೃ-                                           ೩.೪.೩.೪.
ಷ್ಣನಪ. ದಾಬ್ಜದಿ. ಕೆಡೆದಿ. ರಲ್‌ಕಂ. ಡೆಂದ. ನಸುರಾ. ರೀ ||          ೩.೪.೩.೪.೩.೪.ಗು.
(ಕೃಷ್ಣ ಸಂಧಾನ)

ತ್ರಿವುಡೆ ಷಟ್ಪದಿ
ಕೇಳು ನೃಪಕೆಲ. ವಿಹುದು. ನಿನ್ನಲಿ                                          ೩.೪.೩.೪.
ಪೇಳ. ತಕ್ಕುದು. ಬಂದೆ. ನದರಿಂ                                             ೩.೪.೩.೪.
ಪೇಳು. ವೆನುನಿ. ನ್ನಂತ. ರಂಗದ. ಲೀ                                       ೩.೪.೩.೪. ಗು.
ಆಳು. ವಿರಿಹರ. ನಾಜ್ಞೆ. ಯಿಂದಲಿ                                            ೩.೪.೩.೪.
ಲೋಲ. ಲೋಚನೆ. ಯೋರ್ವ. ಳನು ನೀ                                   ೩.೪.೩.೪.
ವಾಲಿ. ಸಿಂದಿ. ನ್ನಿಹುದು. ಮತ್ತ. ಲ್ಲೀ ||                                  ೩.೪.೩.೪. ಗು. ||
(ಶರಸೇತು ಬಂಧನ)

ಇದು ಭಾಮಿನಿ ಷಟ್ಪದಿಯ ಕಿಂಚಿತ್ ಪರಿವರ್ತಿತರೂಪ. ಅನ್ಯತ್ರ ದುರ್ಲಭವಾದ ಈ ಷಟ್ಪದೀ ಬಂಧ ಯಕ್ಷಗಾನ ಕವಿಗಳ ಸ್ವೋಪಜ್ಞ ಸೃಷ್ಟಿ.

ಮಂದಾನಿಲ ಪ್ರಭೇದ

ಚತುರ್ಮಾತ್ರಾ ವಿನ್ಯಾಸದ ಪದ್ಯಬಂಧದಲ್ಲಿ ಛಂದಃಖಂಡಗಳು ೩+೫ ಅಥವಾ ೫+೩ ಎಂದು ವಿಭಕ್ತವಾಗುವ ‘ಗಣಪರಿವೃತ್ತಿ’ಯಿಂದಾಗಿ ಈ ಪ್ರಭೇದ ಹುಟ್ಟಿಕೊಂಡಿದೆ. ಚತುರಶ್ರಗತಿಯಲ್ಲಿ ಉಂಟಾಗಬಹುದಾದ ಏಕತಾನತೆಯನ್ನು ಭಂಗಿಸಿ, ಒಂದು ಗತಿರೋಚಕತ್ವವನ್ನು ತರುವುದಕ್ಕೆ ಇದು ಸಹಕಾರಿ.

ಈಶ. ಮೌನಿಜನ. ಪೋಷ. ನಿರತಫಣಿ.                                      ೩.೫.೩.೫.
ಭೂಷ. ತ್ರಿಪುರಹರ. ಸಾಂಬಶಿ. ವಾ                                          ೩.೫.೪.ಗು.
ಕ್ಲೇಶ. ದೋಷಭವ. ಪಾಶ. ರಹಿತ. ನಭ                                   ೩.೫.೩.೫.
ಕೇಶಮ. ಹೇಶ್ವರ. ಸಾಂಬಶಿ. ವಾ ||                                        ೪.೪.೪. ಗು
(ಕುಮಾರ ವಿಜಯ)
ಒಂದೆ. ಗುಣವುನಿಮ. ಗೊಂದೆ. ಶಕ್ತಿ ಬಳಿ.                                  ೩.೫.೩.೫.
ಕೊಂದೆ. ರೂಪುಸಂ. ಬಂಧವು |                                               ೩.೫.೪.
ಹೊಂದಿ. ರೋಷವನು. ಮಂದ. ಬುದ್ಧಿಯೊಳ.                           ೩.೫.೩.೫.
ಗಿಂದು. ಕಾದಲೇಂ. ಚೆಂದವು ||                                               ೩.೫.೪. ||
(ದ್ರೌಪದೀ ಪ್ರತಾಪ)

ಅಂಶ ಛಂದಸ್ಸು

ಮಾತ್ರಾ ಛಂದಸ್ಸಿನಂತೆ ನಿರ್ದಿಷ್ಟ ಉಚ್ಚಾರಕಾಲಕ್ಕೆ ಅಳವಡದೆ, ಕರ್ಷಣಾಪ ಕರ್ಷಣಕ್ಕೆ ಒಳಗಾಗುವ ಜಾನಪದ ಜೀಕುಜೋಲಿಗಳುಳ್ಳ ಛಂದಸ್ಸಿದು. ಅಂಶಗಣಗಳ ಆದಿಯಲ್ಲಿ ಎರಡು ಮಾತ್ರಾಕಾಲದ ‘ಮೂಲಾಂಶ’ವೆಂದು ಕರೆಯಲ್ಪಡುವ ಗಣಪಂಚಾಂಗ ವಿರುತ್ತದೆ. ಈ ಮೂಲಾಂಶದ ಅನಂತರ ಒಂದು, ಎರಡು, ಮೂರು ವರ್ಣಾಂಶಗಳು (ಅಕ್ಷರಗಳು) ಬಂದಲ್ಲಿ ಕ್ರಮವಾಗಿ ಆ ಗಣಗಳನ್ನು ಬ್ರಹ್ಮಗಣ, ವಿಷ್ಣುಗಣ, ರುದ್ರಗಣಗಳೆಂದು ಕರೆಯಲಾಗುತ್ತದೆ. ಪ್ರತಿಯೊಂದು ವರ್ಣಾಂಶವೂ ಎರಡು ಮಾತ್ರಾಕಾಲಕ್ಕೆ ವ್ಯಾಪಿಸುತ್ತದೆ. ಕೆಲವೊಮ್ಮೆ ಈ ಕರ್ಷಣವು ದೀರ್ಘವಾಗಿ ‘ಅತಿಲಿಪ್ತಿ’ಯಾಗಿಯೂ, ಹ್ರಸ್ವವಾಗಿ ‘ನಿರ್ಲಿಪ್ತಿ’ಯಾಗಿಯೂ ಕಂಡುಬರುವುದಿದೆ.

ಚೌಪದಿ

ಪ್ರತಿಪಾದದಲ್ಲಿ ಒಂದು ವಿಷ್ಣು ಮತ್ತು ಒಂದು ರುದ್ರಗಣಗಳಿರುವ ಛಂದಸ್ಸಿದು. ನಾಗವರ್ಮನ ಕಾಲದಲ್ಲೇ ಪ್ರಚಲಿತವಾಗಿದ್ದ ಈ ಕಿರುಪದ್ಯ ಬಂಧವನ್ನು ಯಕ್ಷಗಾನ ಕವಿಗಳು ಸೂಕ್ತವಾಗಿ ಬಳಸಿಕೊಂಡಿದ್ದಾರೆ.

ಇವಬಲು. ಜಾರನಮ್ಮಾ                                                      ವಿ. ರು.
ನವನೀತ. ಚೋರನಮ್ಮಾ                                                     ವಿ. ರು.
ಮಾಯದ. ಶೌರ್ಯನಮ್ಮಾ                                                  ವಿ. ರು.
ಮೋಹನಾ. ಕಾರನಮ್ಮಾ ||                                                   ವಿ. ರು.
(ಸಭಾಲಕ್ಷಣ)

ಇದೇ ಬಂಧದಲ್ಲಿ ಎರಡು ಪಾದಗಳ ನಡುವೆ ಒಂದು ವರಣವನ್ನು ಸಂಯೋಜಿಸಿ ಯಕ್ಷಗಾನ ಕವಿಗಳು ‘ನೀಲಾಂಬರಿ-ಏಕ’ವೆಂಬ ಹೊಸಪದ್ಯ ಬಂಧವನ್ನು ಹೊಸೆದಿರುವುದೂ ಉಂಟು.

ನಾರದಾ. ಚ್ಯುತರಮಾತು | ಮೀ. ರಿದರಿಂದ                              ವಿ. ರು. | ಮೂ. ವಿ.
ಲೀ ರಣ. ದೊಳಗೆ ಸೋತು ||                                                ವಿ. ರು. ||
ಧಾರಿಣಿ. ಗೊರಗಿದೆನು | ತ. ನ್ನಳಲ ಇ                                      ವಿ. ರು. | ಮೂ. ವಿ.
ನ್ನಾರೊಡ. ನುಸುರುವೆನು ||                                                 ವಿ. ರು. ||
(ದ್ರೌಪದೀ ಪ್ರತಾಪ)

ಛಂದೋವತಂಸ

ನಾಗವರ್ಮನ ಪ್ರಕಾರ ಇದರ ಲಕ್ಷಣ-‘ಮಂದರಧರಗಣಮೊಂದಿರೆ ಮೊದಲೊಳ್ ಬಂದಿರೆ ನಾಲ್ಕೆಡೆ ಬಿಸರುಹಜನ್ಮಂ’. ಪ್ರತಿಪಾದದಲ್ಲಿ ಮೂರು ವಿಷ್ಣು ಗಣಗಳು ಹಾಗೂ ಕೊನೆಗೊಂದು ಬ್ರಹ್ಮಗಣವಿರಬೇಕು. ಈ ಲಕ್ಷಣಕ್ಕೆ ಸರಿಹೊಂದುವ ಅನೇಕ ಪದ್ಯಗಳು ಯಕ್ಷಗಾನದಲ್ಲಿ ದೊರೆಯುತ್ತವೆ. ಅವುಗಳನ್ನು ‘ಮಧುಮಾಧವಿ-ಏಕ’ ಎಂದು ಹೆಸರಿಸಲಾಗಿದೆ.

ಚರಣವೆ. ನಗೆಬಲು. ನೋವಾಯಿ. ತಯ್ಯಾ                               ವಿ. ವಿ. ವಿ. ಬ್ರ.
ಅರಸನೀ. ನತಿಸುಖ. ವಂತನ. ಲ್ಲಯ್ಯಾ                                   ವಿ. ವಿ. ವಿ. ಬ್ರ.
ಹರಹರ. ತನುವೇಸು. ನೊಂದಿತೋ. ನಿನಗೆ                                ವಿ. ವಿ. ವಿ. ಬ್ರ.
ಪೊರಳಬೇ. ಡೇಳೆಂದ. ನಾಸಭೆ. ಯೊಳಗೆ ||                                ವಿ. ವಿ. ವಿ. ಬ್ರ.
(ಕೃಷ್ಣ ಸಂಧಾನ)

ಇದರ ರೂಪಾರ್ಧಗಳನ್ನೂ ಯಕ್ಷಗಾನದಲ್ಲಿ ವಿಪುಲವಾಗಿ ಕಾಣಬಹುದು.
ಇವಳು ಜಾ. ನಕಿಯಲ್ಲ. ವೆಂದುನಿ. ಶ್ಚೈಸಿ
ಜವದಿಂದ. ಹೊರವಂಟ. ತರುಣಿಯ. ನ್ನರಸೀ ||
(ಉಂಗುರಸಂಧಿ)

ಇಲ್ಲಿಯ ವಿಷ್ಣುಗಣಗಳು ಪಂಚಮಾತ್ರಾತ್ಮಕವೆಂಬ ಭ್ರಮೆಗೊಳಗಾಗಿ ಮುಂದೆ ಇದೇ ‘ದ್ವಿಪದೀಬಂಧ’ವಾಗಿರುವ ಸಾಧ್ಯತೆಯಿರುವುದರಿಂದ, ದ್ವಿಪದಿಗಳು ತೆಲುಗು ಮೂಲದಿಂದ ಕನ್ನಡಕ್ಕೆ ಬಂದವೆಂದು ಭಾವಿಸುವುದು ಸಮಂಜಸವಲ್ಲ.

ಗೀತಿಕೆ
(ಕವಿರಾಜಮಾರ್ಗಪೂರ್ವ)
ಜೋಜೋ. ಗಿರಿಕುಲಾ. ಧಿಪಸುಕು. ಮಾರಿ                                ಬ್ರ.ವಿ.ವಿ.ಬ್ರ.
ಜೋಜೋ. ಪ್ರಣತಜ. ನೌಘಉ. ದ್ಧಾರಿ                                  ಬ್ರ.ವಿ.ವಿ.ಬ್ರ.
ಜೋಜೋ. ಸದ್ಗುಣ. ಭರಿತೆಸಾ. ಕಾರಿ                                     ಬ್ರ.ವಿ.ವಿ.ಬ್ರ.
ಜೋಜೋ. ಪಾವನ. ಚರಿತೆಶೃಂ. ಗಾರಿ                                     ಬ್ರ.ವಿ.ವಿ.ಬ್ರ.
(ಗಿರಿಜಾಕಲ್ಯಾಣ)

—-
ಮೂ = ಮೂಲಾಂಶ

(ಕವಿರಾಜಮಾರ್ಗೋತ್ತರ)
ಗೋಪಾಲ. ಕೃಷ್ಣ ಗೋ.ವಿಂದಾ |                                          ವಿ.ಬ್ರ.ವಿ.
ಕಾಪಾಡು. ಗೋಪಿಯ. ಕಂದ. ಮುದದಿಂದ ||                            ವಿ.ವಿ.ಬ್ರ.ವಿ.
ಶ್ರೀಪತಿ. ವರವ. ಬೇಡುವೆ |                                                   ವಿ.ಬ್ರ.ವಿ.
ಈಪದ್ಯಾ. ಲಾಪದಿ. ನಿನ್ನ. ಪಾಡುವೆ ||                                    ವಿ.ವಿ.ಬ್ರ.ವಿ.
(ಲಕ್ಷ್ಮೀ ಸ್ವಯಂವರ)

ಮಾರ್ಗೋತ್ತರಗೀತಿಕೆಯಲ್ಲಿ ವಿಷಮಪಾದದಲ್ಲಿ ಸಮಸಂಖ್ಯಾಗಣ ಬಂದಿರುವುದು ವಿಶೇಷವಾಗಿದೆ. ನಮ್ಮ ಕಂದಪದ್ಯವೂ ಹೀಗೆಯೇ ಅಲ್ಲವೆ ? ಪ್ರಾಯಃ ಕಂದಪದ್ಯಕ್ಕೆ ಪ್ರತಿಯಾಗಿ ಒಂದು ಬಂಧವನ್ನು ಕನ್ನಡದಲ್ಲಿ ರೂಢಿಗೆ ತರುವ ಪ್ರಯತ್ನ ಇದಾಗಿರಬಹುದು ! ಇದು ತ್ರಿಪದಿಯ ಗೇಯರೂಪವನ್ನು ಚಾಕ್ಷುಷಗೊಳಿಸಿದ ಪ್ರಯತ್ನವೆಂಬುದನ್ನು ಸೂಕ್ಷ್ಮಾವಲೋಕನದಿಂದ ಗ್ರಹಿಸಬಹುದು.

ಮದನವತಿ

ಏಕೆನೋಳ್ಪೆ. ನಮ್ಮೆಲ್ಲರ. ನೀಕರೆದು. ತಂದೆಯ ?                      ರು.ರು.ರು.ವಿ.
ಭೂಕಾಂತರು. ಕುಳಿತಿಹುದ. ಶ್ರೀಕರದಿ. ಕಂಡೆಯ ?                      ರು.ರು.ರು.ವಿ.
ಬೇಕಾದಂಥ. ವಸ್ತುಗಳ. ನೀತರಿಸಿ. ಕೊಂಡೆಯ ?                         ರು.ರು.ರು.ವಿ.
ಈಕಡೆಯೊಳ್. ಬಂದುನಿಲ್ಲು. ಏಕೆಮನ. ಸಂಶಯ ||                    ರು.ರು.ರು.ವಿ.
(ಐರಾವತ)

ಈ ಉದಾಹರಣೆಯಲ್ಲಿ ‘ಮದನಹರ ತ್ರಿತಯಂ ಕಡೆಯೊಳ್ ಮದನನಮ್ಮಂ ತಾಂ’ ಎಂಬ ಛಂದೋಂಬುಧಿಯ ಸೂತ್ರಪದ್ಯದ ಸೂಚನೆಗೆ ಅನುಗುಣವಾದ ಗಣವಿಭಜನೆಯನ್ನು ಕಾಣಲು ಸಾಧ್ಯ. ನಾಗವರ್ಮ ಜಯಕೀರ್ತಿಯರ ಲಕ್ಷಣಲಕ್ಷ್ಯ ಪದ್ಯಗಳನ್ನು ಬಿಟ್ಟರೆ ಸಮಗ್ರ ಕನ್ನಡ ಕಾವ್ಯದಲ್ಲಿ ಮದನವತಿಗೆ ಉದಾಹರಣೆಗಳು ದೊರೆಯದೇ ಇರುವುದರಿಂದ, ಯಕ್ಷಗಾನದ ಪದ್ಯಗಳು ತುಂಬಾ ಮಹತ್ತ್ವದ ಉಲ್ಲೇಖಗಳಾಗುತ್ತವೆ.

ಏಳೆ

ಸಿರಿವಂತೆ. ದುಃಖಿಸ                                                             ವಿ.ವಿ.
ಬೇಡೇಳು. ತಂಗಿ ನಿ-                                                            ವಿ.ವಿ.
ನ್ನಿರವೇನು. ಪೇಳು. ಪೇಳೆಂದ ||                                             ವಿ.ಬ್ರ.ವಿ. ||
(ಕೃಷ್ಣ ಸಂಧಾನ)

ಸಾಂಗತ್ಯದ ಕೊನೆಯ ಬ್ರಹ್ಮಗಣವನ್ನು ಅದರ ಹಿಂದಿನ ಗಣಸ್ಥಾನಕ್ಕೆ ತಳ್ಳಿದರೆ ‘ಏಳೆ’ ದೊರೆಯುತ್ತದೆ. ನಾಗವರ್ಮನ ಅಭಿಪ್ರಾಯದಂತೆ ಏಳೆಯಲ್ಲಿ ಆರನೇ ಗಣಮಾತ್ರ ಬ್ರಹ್ಮವಾಗಿದ್ದು, ಉಳಿದೆಡೆ ವಿಷ್ಣುಗಣಗಳಿರುತ್ತವೆ. ಆದರೆ ಜಾನಪದಲಯದ ‘ಯಲಪದ’ಗಳಲ್ಲಿ ರುದ್ರಗಣಗತಿ ವೇದ್ಯವಾಗುತ್ತದೆ. ಯಕ್ಷಗಾನದಲ್ಲಿ ಆ ರೀತಿಯ ರಚನೆಗಳನ್ನು ‘ಆನಂದಭೈರವಿ-ಏಕ’ ಎಂಬ ಛಂದಃಸೂಚನೆಯಿಂದ ಕರೆಯಲಾಗುತ್ತದೆ.

ಹರಹರಾವಿ. ಧಾತನಿಂತು                                                      ರು.ರು.
ಬರೆದನೇ ದು. ಷ್ಟಾತ್ಮನೆಂದು                                               ರು.ರು.
ಬಿದ್ದಳೂ. ಹೊರಳು. ತಿದ್ದಳೂ ||                                          ವಿ.ಬ್ರ.ವಿ. ||
(ಗಿರಿಜಾ ಕಲ್ಯಾಣ)

ಸೊಬಗಿನ ಸೋನೆ

ಸ್ಮರನರ. ಗಿಣಿಸತಿ. ಯರಶಿರೋ. ಮಣಿದಶ.                              ವಿ.ವಿ.ವಿ.ವಿ.
ಶಿರವಶ. ವಾದಳ. ಲ್ಲೋತಮ್ಮ.                                            ವಿ.ವಿ.ವಿ.
ದುರುಳಬಾ. ಧಿಸುವ ನಿ. ರ್ಬಂಧಕ್ಕೆ. ತಾನಿಂತು                            ವಿ.ವಿ.ವಿ.ವಿ.
ಗುರಿಯಾಗಿ. ಬಾಳ್ವಳ. ಲ್ಲೋತಮ್ಮ ||                                   ವಿ.ವಿ.ವಿ.
(ಪಂಚವಟಿ)

ಇದನ್ನು ಯಕ್ಷಗಾನದಲ್ಲಿ ‘ದ್ವಿಜಾವಂತಿ-ಅಷ್ಟ’ವೆಂದು ಹೆಸರಿಸಲಾಗಿದೆ. ಈ ಬಂಧದ ಯುಗ್ಮಪಾದಾಂತ್ಯಸ್ಥಾನ ಬ್ರಹ್ಮಗಣವೆನಿಸಿದಾಗ ‘ಸಾಂಗತ್ಯ’ಮೆಯ್ದಾಳುತ್ತದೆ.

ಸಾಂಗತ್ಯ

ತಂಗಿಎ. ನ್ನಯಕರ್ಮ. ಭಂಗವ. ಮಾಡಿದ                                  ವಿ.ವಿ.ವಿ.ವಿ.
ಅಂಗಜಾ. ರಿಯಸಖ. ಸುತನ                                                  ವಿ.ವಿ.ಬ್ರ.
ಹಿಂಗದೆ. ನಿನ್ನರ. ಮಣನಭ. ಯವಕೊಟ್ಟು                               ವಿ.ವಿ.ವಿ.ವಿ.
ಸಂಗಡಿ. ರಿಸಿಕೊಂಡ. ನಂತೆ ||                                                 ವಿ.ವಿ.ಬ್ರ.
(ಕೃಷ್ಣಾರ್ಜುನ ಕಾಳಗ)

ಇಲ್ಲಿಯ ಎರಡು ಮತ್ತು ನಾಲ್ಕನೇ ಪಾದಗಳಲ್ಲಿ ಒಂದು ವಿಷ್ಣುಗಣವನ್ನು ಹೆಚ್ಚು ಮಾಡಿ ‘ಮಧ್ಯಮಾವತಿ-ಏಕ’ವೆಂಬ ಹೊಸಬಂಧವನ್ನು ಯಕ್ಷಗಾನ ಕವಿಗಳು ಬಳಸಿದ್ದಾರೆ-

ಪರ್ವತ. ತುದಿಯಲ್ಲ. ಪೆರತೊಂದು. ಮರನಲ್ಲ                        ವಿ.ವಿ.ವಿ.ವಿ.
ಉರ್ವಿಯಿಂ. ದಾಕಾಶ. ಕೊನೆಪರಿ. ಯಂತ |                                ವಿ.ವಿ.ವಿ.ಬ್ರ.
ಗರ್ವದ. ಮದಗಜ. ಬಹದಾರಿ. ಮಾಳ್ಪುದು                              ವಿ.ವಿ.ವಿ.ವಿ.
ಸರ್ವಥಾ. ಯತ್ನವ. ನಾಕಾಣೆ. ನಿದಕೆ ||                                    ವಿ.ವಿ.ವಿ.ಬ್ರ.
(ಐರಾವತ)

ಉತ್ಸಾಹ

ಎಳೆಯ. ಕಪಿಗ. ಳಿದಿರು. ಲಾಗಂ. ಗಳನಿ. ರಿಂಕಿ. ನೋಡು. ತಾ
ಗಳಿಗೆ. ಗಳಿಗೆ. ಹೊಳೆವಾ. ಕಾಶ. ದೊಳಗೆ. ಭೇರಿ. ಮೊಳಗು. ತಾ
ನಳಿನ. ನಾಭ. ನಡಿಗೆ. ಸುಮದ. ಮಳೆಗ. ಳೂಬಂ. ದಿಳಿಯು. ತಾ
ಭಳಿರೆ. ರಾಮ. ಜಯಜ. ಯಾವೆಂ. ದಾರ. ತಿಗಳ. ಬೆಳಗು. ತಾ
ಒಲಿದು. ಸುರರಂ. ಬರದಿ. ಪಾಡಿ. ರಾಮ. ನಾಮ. ಪೊಗಳು. ತಾ ||
(ಅಂಗದ ಸಂಧಾನ)

ಇಲ್ಲಿ ನಾಗವರ್ಮ ಲಕ್ಷಣೋಕ್ತ ಬ್ರಹ್ಮಗಣ ಸಂದೋಹವೇ ಕಂಗೊಳಿಸುತ್ತದೆ. (ಭೂಹಿತಾರ್ಥಮೆನಿಸುವಜನ ಗಣಮವೆಯ್ದೆ ಸಪ್ತಸಂ-) ಅವುಗಳು ತ್ರಿಮಾತ್ರಾಗಣಗಳ ರೂಪಧಾರಣೆ ಮಾಡಿದಾಗ ಮುದ್ದಣನ ‘ಸುಲಲಿತಾಂಗಿ ಸಲಿಲಜಾಕ್ಷಿ ಛಲವಿದೇನೆ ಮೋಹನೇ’ ಎಂಬಂತೆ ಕಂಡು ಬರುತ್ತವೆ. ಆದರೆ ಯಕ್ಷಗಾನ ಕವಿಯ ಪ್ರತಿಭಾ ವಿಶೇಷದಿಂದ ‘ಉತ್ಸಾಹವೃತ್ತ’ ನಾಲ್ಕುಪಾದಗಳ ಬಲದಿಗೆ ಐದು ಪಾದಗಳನ್ನು ಧರಿಸಿದೆ ಎಂಬುದು ಇಲ್ಲಿ ಗಮನಾರ್ಹ!

ಕಿರುಸೀಸ

ಬೆದರಬೇ. ಡೈಕೇಳು. ಮುದದಿ ಸ್ವ.ರ್ಗವನಾಳು.                         ವಿ.ವಿ.ವಿ.ವಿ.
ಸದನಕ್ಕೆ. ನಡೆಯೆಂದು. ಸುದತಿ. ಯಂದು ||                               ವಿ.ವಿ.ಬ್ರ.ಬ್ರ.
ಚದುರೆಗೊಂ. ದಿಸಿಪದ್ಮ. ವದನೆಯ.ಪ್ಪಣೆಗೊಂಡು                     ವಿ.ವಿ.ವಿ.ವಿ.
ತ್ರಿದಶಾಧಿ. ಪತಿಹಿಂದೆ. ತೆರಳ್ದ. ನಂದು ||                                  ವಿ.ವಿ.ಬ್ರ.ಬ್ರ.

ಇಲ್ಲಿಯ ವಿಷ್ಣುಗಣಗಳು ಪಂಚಮಾತ್ರಾತ್ಮಕವೂ ಆಗಿರುವುದರಿಂದ ಝಂಪೆ ತಾಳಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಕ್ರಮೇಣ ಸೀಸಪದ್ಯದ ಛಂದೋಗತಿಯೇ ಮಾತ್ರಾತ್ಮಕವಾಗಿ ಪರಿಣಮಿಸಿರುವುದು ಗಮನಾರ್ಹ.

ತ್ಯಾಗಮಾನ

ಅಸುರ.ನಿದ್ದಲ್ಲಿಗೆ. ಹೋದನು | ಆತ
ಗಶನದ. ತುತ್ತೊಂದ. ತೂರ್ದನು ||
ಹಸನಾಗಿ. ಮತ್ತಾತ. ನುಂಡನು | ಸಂ
ತಸದಿ ರ.ಕ್ಕಸನನ್ನು. ಕರೆದನು ||
(ಆದಿ ಪರ್ವ)

ಇದನ್ನು ಯಕ್ಷಗಾನದಲ್ಲಿ ‘ನಾದನಾಮ ಕ್ರಿಯೆ-ಅಷ್ಟ’ವೆಂದು ಕರೆಯುತ್ತಾರೆ.

ಅಂಶಷಟ್ಟದ

ಮಾತ್ರಾಷಟ್ಪದಿಗಳಿಗೆ ಜನ್ಮಹೇತುವಾದ ಅಂಶಗಣಘಟಿತ ಷಟ್ಪದಗಳೂ ಯಕ್ಷಗಾನಗಳಲ್ಲಿ ಧಾರಾಳವಾಗಿ ದೊರೆಯುತ್ತವೆ. ಕನ್ನಡ ಸಾಹಿತ್ಯದಲ್ಲಿ ಇದುವರೆಗೆ ದೊರೆತ ಕೇವಲ ಹನ್ನೆರಡು ಅಂಶಷಟ್ಪದಗಳಲ್ಲಿ ಅರ್ಧದಷ್ಟು ಶಾಸನೋಕ್ತ ಉದಾಹರಣೆಗಳೇ. ಯಕ್ಷಗಾನ ಕಾವ್ಯಗಳಲ್ಲಿ ವಿಷ್ಣುಘಟಿತ ಮೂಲಷಟ್ಪದಗಳ ಜೊತೆಗೇ ಬ್ರಹ್ಮಘಟಿತ ಹಾಗೂ ರುದ್ರಘಟಿತ ಷಟ್ಪದಗಳನ್ನೂ ಕಾಣಬಹುದು.

ಬ್ರಹ್ಮಷಟ್ಪದ :

ಎತ್ತ. ಣಿಂದ                                                          ಬ್ರ.ಬ್ರ.
ಸ್ವಾರಿ. ಯಾದು                                                     ಬ್ರ.ಬ್ರ.
ದಿತ್ತ. ಮೌನಿ. ಪೊತ್ತಮಾ |                                        ಬ್ರ.ಬ್ರ.ವಿ. |
ಪೃಥ್ವಿ. ಚರಿಸಿ                                                       ಬ್ರ.ಬ್ರ.
ಸತ್ಯ. ಬೋಧಿ                                                        ಬ್ರ.ಬ್ರ.
ಸುತ್ತ. ಲಿಹನಿ. ನ್ನಾಗಮಾ ||                                      ಬ್ರ.ಬ್ರ.ವಿ. ||
(ಬ್ರಹ್ಮಕಪಾಲ)

ವಿಷ್ಣು ಷಟ್ಪದ :

ಧರೆಯೊಳ. ಗೆಸೆವಕುಂ                                              ವಿ.ವಿ.
ಜರಗಿರಿ.ಯಲಿ ಬಂದು                                              ವಿ.ವಿ.
ಸ್ಥಿರವಾಗಿ. ನೆಲೆಸಿಹ. ಗಿರಿಜಾತೆಗೆ                                ವಿ.ವಿ.ರು. |
ಚರಣಸೇ ವಕರನ್ನು                                                ವಿ.ವಿ.
ಕರುಣದಿಂ. ದೀಕ್ಷಿಸಿ                                                  ವಿ.ವಿ.
ವರಗಳ. ಕೊಡುವದು ರ್ಗಾಂಬಿಕೆಗೆ                               ವಿ.ವಿ.ರು. ||
(ಸಭಾಲಕ್ಷಣ)

ರುದ್ರಷಟ್ಪದ :

ಏತಕೆನ್ನ. ಮೇಲಣಾಸೆ                                              ರು.ರು.
ಮಾತೆಪಿತ.ರೀರ್ವರಿಂದ                                            ರು.ರು.
ಮಾತಕೇಳ್ದು. ತನುವನಾನಿ. ನ್ನಾತುಕೊಂಬೆನು.              ರು.ರು. ಅತಿರುದ್ರ
ಸಾತಿರೇಕ. ದಿಂದಲಿದ                                               ರು.ರು.
ಘಾತಿಸುವೆ. ನಣ್ಣಗೆ ಸಂ                                           ರು.ರು.
ಪ್ರೀತಿಯಾಗ.ಲೆಂದು ಪೇಳ್ದ.ಳಾತಳೋದರೀ ||               ರು.ರು. ಅತಿರುದ್ರ

ಅಂಶಲಯವು ಮಾತ್ರಾಗತಿಗೆ ಹೊರಳಿದಕಾಲಘಟ್ಟದಲ್ಲಿ ಶರ, ಕುಸುಮ, ಭೋಗ, ಪರಿವರ್ಧಿನೀ, ಭಾಮಿನಿ, ವಾರ್ಧಕಗಳು ಮೂಲಷಟ್ಪದದಿಂದಲೇ ಜನಿಸಿದವೆಂದು ವಿದ್ವಾಂಸರ ಊಹೆ. ಆದರೆ ವಿಷ್ಣು ಷಟ್ಪದಕ್ಕಿಂತಲೂ, ರುದ್ರಗಣ ಘಟಿತ ಷಟ್ಪದವೇ ಮಾತ್ರಾಷಟ್ಪದಿಗಳಿಗೆ ಜನ್ಮಹೇತುವೆಂಬುದು ಸೂಕ್ಷ್ಮಾವಲೋಕನದಿಂದ ವೇದ್ಯವಾಗುತ್ತದೆ. ಒಂದು ರುದ್ರಗಣದ ಒಡಲಿನಲ್ಲಿ ಎರಡು ಬ್ರಹ್ಮಗಣಗಳಿರುವ ಸಾಧ್ಯತೆಯಿರುವುದರಿಂದ ಭೋಗಷಟ್ಪದಿ ಹುಟ್ಟಬಲ್ಲುದು. ರುದ್ರಗಣವು ಸರ್ವಲಘುವಾದಾಗ ಕುಸುಮ ವಾರ್ಧಕ ಷಟ್ಪದಿಗಳು ಜನಿಸುತ್ತವೆ. ರುದ್ರಗಣದ ಮೂರೂ ವರ್ಣಾಂಶಗಳು ಗುರುಗಳಾದರೆ ಪರಿವರ್ಧಿನಿ ಮೂಡುತ್ತದೆ. ವರ್ಣಾಂಶವನ್ನು ‘ಯಗಣ’ವನ್ನಾಗಿಸಿದರೆ ಭಾಮಿನೀ ಷಟ್ಪದಿಯೂ, ‘ಭಗಣ’ ಅಥವಾ ‘ಸಗಣ’ವನ್ನಾಗಿಸಿದಾಗ ಅತಿದ್ರುತ ಷಟ್ಪದಿಯೂ,ಎರಡು ರುದ್ರಗಣಗಳು ಸರ್ವಲಘುವಾದಾಗ ೪+೩+೩ ರೂಪದ ಉದ್ದಂಡ ಷಟ್ಪದಿಯೂ ಸಾಕಾರಗೊಳ್ಳುತ್ತದೆ. ಈ ಹಿನ್ನೆಲೆಯಿಂದ ನೋಡಿದಾಗ ರುದ್ರಷಟ್ಪದದ ವಿವೇಚನೆ ಅತ್ಯಂತ ಕುತೂಹಲಕರವೆನಿಸುತ್ತದೆ. ನಮ್ಮ ಛಂದಸ್ಸಿನ ಚರಿತ್ರೆಕಾರರು ಈ ಬ್ರಹ್ಮ-ರುದ್ರ ಷಟ್ಪದಗಳನ್ನು ಊಹಿಸುವುದಕ್ಕೂ ಏಕೆ ಅಸಮರ್ಥರಾದರೆನ್ನುವುದು ಆಶ್ಚರ್ಯವೆನಿಸುತ್ತದೆ.

ಅಕ್ಕರಗಳು

ಅಕ್ಕರಗಳಲ್ಲಿ ಹೆಚ್ಚಾಗಿ ಬಳಕೆಯಾಗಿರುವುದು ಕಿರಿಯಕ್ಕರವೇ. ಅದನ್ನು ಯಕ್ಷಗಾನದಲ್ಲಿ ‘ಸೌರಾಷ್ಟ್ರ-ಏಕ’ ವೆಂದು ಹೆಸರಿಸಲಾಗಿದೆ.

ಚಂದ್ರಂಗೆ. ಶಾಪವ. ನಿತ್ತವನ                                     ವಿ.ವಿ.ರು
ಚೆಂದದಿಂ.ದೊಪ್ಪುವ. ಗಜಮುಖನ                             ವಿ.ವಿ.ರು
ಚಂದನ. ಕುಂಕುಮ. ಲೇಪಿತನ                                    ವಿ.ವಿ.ರು
ಇಂದ್ರಾದಿ. ಭಕ್ತರ. ಸಲಹುವನ                                   ವಿ.ವಿ.ರು.
(ಸಭಾಲಕ್ಷಣ)

ನಡುವಣಕ್ಕರವನ್ನು ಹೋಲುವ ರಚನೆಗಳೂ ಅಲ್ಲಲ್ಲಿ ಕಂಡುಬರುತ್ತವೆ.
ತೊಟ್ಟಿಲಿ. ಲ್ಲವೊನಿನ್ನ. ನಿಟ್ಟುತೂಗುವುದಕ್ಕೆ. ಮುದ್ದುಕಂದಾ ||ವಿ.ವಿ.ವಿ.ವಿ.ರು.
ಪುಟ್ಟಕೈ. ಕೊರಳಿಂಗಾ.ಭರಣಗ.ಳಿಲ್ಲವೋ. ಮುದ್ದುಕಂದಾ ||      ವಿ.ವಿ.ವಿ.ವಿ.ರು.
(ಚಂದ್ರಹಾಸ ಚರಿತ್ರೆ)

ಎರಡು ಪಾದಗಳಲ್ಲೇ ಪದ್ಯಬಂಧ ಮೂಡಿಬಂದಿರುವುದು ಇಲ್ಲಿ ಗಮನಾರ್ಹ. ಈ ಕೆಳಗಿನ ಪದ್ಯದಲ್ಲಿ ಪಿರಿಯಕ್ಕರದ ಲಕ್ಷಣವನ್ನು ಗುರುತಿಸಬಹುದು.

*          ರಾವಣ.ನೆಂಬ. ನಿ.ಶಾಚರ.ನನು ಹಿಂದೆ. ಕೋವಿದ. ಹಿಡಿದು ತಂದು |
ತಾರಾ. ದೇವಿಯ. ಮಗನತೊ.ಟ್ಟಿಲಿಗೆ ಕ.ಟ್ಟಿದ ವಾಲಿ. ದೇವೇಂದ್ರ. ಸುಕುಮಾರನು ||
(ವಾಲಿ ಸಂಹಾರ)
*          ಈ ಚಿಹ್ನೆಯಿರುವ ಸ್ಥಾನದಲ್ಲಿ ‘ಬ್ರಹ್ಮಗಣ’ ಲೋಪವಾಗಿದೆ, ಅಷ್ಟೆ.