ರಾಗ ಮೆಚ್ಚು ಅಷ್ಟತಾಳ

ಕುರುಪತಿನುಡಿಯನ್ನು ಕೇಳುತ್ತ | ದ್ವಿಜ | ವರನತಿರೋಷವ ತಾಳುತ್ತ ||
ಬರಲು ಕಪಟ ವಿಪ್ರನೆಡೆಗಿತ್ತ | ಕಂಡು | ಬೆರಗಾದ ಭೈಮಿಯು ನಡುಗುತ್ತ || ೨೪೮ ||

ತವಕದಿ ಕರವನ್ನು ಪಿಡಿಯಲು | ದೈತ್ಯ | ರವಗೆಯ್ದು ನಿಜವೇಷ ತಾಳಲು ||
ಅವನಿಸುರನು ಪೇಳ್ದನವನೊಳು | ಮಿತ್ರ | ತವ ಜನಕನು ಯುದ್ಧ ಬೇಡೇಳು || ೨೪೯ ||

ಕಮಲಿನಿಕಂದನು ಪೇಳ್ದನು | ರಿಪು | ಕುಮತಿ ಕೌರವ ನಿಮ್ಮ ಒಡೆಯನು ||
ಭ್ರಮಿತದ ನುಡಿಗಳು ಬೇಡೀಗ | ಯುದ್ಧ | ಕ್ರಮವಾಗಿ ಮಾಡು ನಮ್ಮೊಳು ಬೇಗ || ೨೫೦ ||

ಅಶ್ವತ್ಥಾಮನು ಕೇಳಿ ಕೋಪದಿ | ಪೃಷ | ದಶ್ವಮೊಮ್ಮಗನಿಗೆ ಬೇಗದಿ ||
ಉಶ್ವಾಸ ಬಿಡುತ ಮುಷ್ಟಿಯೊಳು | ರಾಕ್ಷ | ಸೇಶ್ವೆರನುರಕಾಗಿ ಹೊಡೆಯಲು || ೨೫೧ ||

ರಾಕ್ಷಸ ಕೂಗಿದ ಭರ ಕೇಳಿ | ಕುರು | ಪಕ್ಷವೆಲ್ಲವು ಬೆಚ್ಚಿ ಭಯದಲ್ಲಿ ||
ದಕ್ಷ ದ್ರೋಣನು ಬರೆಪುತ್ರನು | ನೋಡು | ತಾ ಕ್ಷಣ ಧುರ ಬಿಟ್ಟು ಪೋದನು || ೨೫೨ ||

ಕಡುಕೋಪದಿಂಲಾರ್ಭಟಿಸುತ್ತ | ರಿಪು | ಕಡೆಯ ಭಟರನೆಲ್ಲ ಬಡಿಯುತ್ತ ||
ಫಡಫಡಯೆನುತಾಗ ಮಾಯದಿ | ನಭ | ಕಡರಿ ಪೋದನು ದೈತ್ಯ ನಿಮಿಷದಿ || ೨೫೩ ||

ಹೊಡೆಯಲು ಗಿರಿಮರರಾಶಿಯ | ಕುರು | ಕಡೆಯ ಜನರು ಕಯ್ಯ ಜ್ವಾಲೆಯ ||
ಬಿಡುತೆಲ್ಲರೋಡಲು ಭಯದಲ್ಲಿ | ರಣ | ಪೊಡವಿ ತೋರದು ಗಾಢ ತಮದಲ್ಲಿ || ೨೫೪ ||

ಕೊಡನ ಕುವರ ಕುರುರಾಯರು | ಈರ್ವ | ರೊಡಗೂಡಿ ರವಿಜಗೆ ಪೇಳ್ದರು ||
ತಡೆಯಲಾರೆವು ದೈತ್ಯ ಬಾಧೆಯ | ನೀಗ | ತೊಡು ಬೇಗದಿಂದ್ರನ ಶಕ್ತಿಯ || ೨೫೫ ||

ಭಾಮಿನಿ

ಫಲುಗುಣನ ಧುರಕೆಂದು ನಾನದ |
ನೊಲವಿನೊಳಗಿಟ್ಟಿಹೆನು ಬಿಡೆನೆಂ |
ದಿಳೆಯಪಾಲನೊಳರುಹೆ ಮಗುಳಾ ದ್ರೋಣನಿಂತೆಂದ ||
ಕಲಹದೊಳಗಿವನಲ್ಲಿ ದೇಹವ |
ನುಳುಹಿ ಮೇಲರ್ಜುನನ ಗೆಲುವೆವು |
ಛಲವು ಬೇಡಿಂದಿನಲಿ ತೆಗೆತೆಗೆ ದಿವ್ಯ ಶಕ್ತಿಯನು  || ೨೫೬ ||

ರಾಗ ಭೈರವಿ ಝಂಪೆತಾಳ

ಕ್ಷೆಣೀಶ ಕೇಳಿನಿತು | ಬಾಣಪಂಡಿತನೆಂದ | ವಾಣಿಯನು ಕೇಳಿ ನಿಜ | ಪ್ರಾಣದಂತಿರುವ || ೨೫೭ ||

ಶಕ್ತಿಯನು ತೆಗೆದಾಗ | ಮಿತ್ರಸುತ ಬೇರೇನು | ಯುಕ್ತಿ ಕಾಣದೆ ಭೀಮ | ಪುತ್ರಗಿದಿರಾದ || ೨೫೮ ||

ಪಾರ್ಥಗಿಟ್ಟಿಹ ಶಕ್ತಿ | ವ್ಯರ್ಥವಾಯ್ತೀ ಘೋರ | ರಾತ್ರಿಚರನಿಂದೆನುತ | ಲೆತ್ತಿ ಬಿಡಲಂದು || ೨೫೯ ||

ಭಾಮಿನಿ

ಅಂಬರದಿ ಜ್ವಲಿಪರ್ಕಸಾವಿರ |
ಬಿಂಬದಂದದೊಳುರಿಯುತಲಿ ಹೈ |
ಡಿಂಬಿಯನು ಸಿಡಿಲೆರಗಿದಂದದಿ ಬಡಿಯಲಾ ಶಕ್ತಿ ||
ಭೊಂಭೆನುತ ನಳಿನಾಕ್ಷ ನಗುತಲಿ |
ಕಂಬುಧ್ವನಿಯನು ಗೆಯ್ವುತಿರೆ ಕುರು |
ಕುಂಭಿನೀಶನ ಬಲವ ಪುಡಿಗೆಯ್ದಿದನು ಹೈಡಿಂಬಿ  || ೨೬೦ ||

ರಾಗ ನೀಲಾಂಬರಿ ಆದಿತಾಳ

ಖ್ಯಾತ ದನುಜ ಧುರದೊಳರ್ಕ | ಜಾತ ಶಕ್ತಿಗೆರಗೆ ||
ಪಾರ್ಥ ಶೋಕದಿಂದ ಮರುಗಿ | ನಾಥಹರಿಗೆ ಪೇಳ್ದ  || ೨೬೧ ||

ತರಳನಭಿಮನ್ಯವಿಗೆ ಸಮನು | ಧುರದಿ ಭೀಮಸುತನು ||
ಪರಮಪುರುಷನಿವನನುಳಿಸ | ದಿರುವ ಶೌರ್ಯವೇಕೆ  || ೨೬೨ ||

ಅಟವಿಯೊಳಗೆಯಿರಲು ತಾನು | ನಿಟಿಲನೇತ್ರನೆಡೆಗೆ ||
ಹಠದಿ ಪೋಗಲಿವನು ಬಂದು | ಕಟಕ ಸಲಹಿದವನು  || ೨೬೩ ||

ಇಂಥ ಭಟನ ಬಿಟ್ಟು ಧುರದಿ | ಪಂಥ ನಮಗಿನ್ಯಾಕೈ ||
ಕಂತುಪಿತನೆ ರಣವಿನ್ನ್ಯಾಕೆ | ಎಂತು ಸಹಿಪೆ ಹರಿಯೆ  || ೨೬೪ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಶೋಕಿಸುವ ಪಾರ್ಥರನು ಕಾಣುತ | ಲೋಕನಾಯಕ ನುಡಿದ ನಿಮ್ಮೊಳು |
ಪಾಕಶಾಸನಿಯುಳಿದ ನಿಮಗಿ | ನ್ನೇಕೆ ದುಗುಡ  || ೨೬೫ ||

ಕೇಳಿರುವೆನೀ ದುರುಳ ಮುನಿಗಳ | ಗೋಳುಗುಡಿಸಿದನೆಂದು ನಿಮ್ಮಯ |
ಪಾಳಯಕೆ ಬಹನೆಂದು ಬಿಟ್ಟೆನು | ಜಾಲವಲ್ಲ  || ೨೬೬ ||

ಇಂದಿವಗೆ ಫಲವಾಯ್ತು ಪರಮಾ | ನಂದಗೊಳಿರೆಂದೆನುತ ಪೇಳಿದ |
ಮಂದರವನೆತ್ತಿರುವ ಶ್ರೀಗೋ | ವಿಂದ ನಗುತ  || ೨೬೭ ||

ಮೊದಲನೆಯ ಸಂಧಿ ಮುಗಿದುದು

 


ಎರಡನೆಯ ಸಂಧಿ

ದ್ವಿಪದಿ

ಭೂಮಿಪತಿ ಕೇಳಿಂತು ರಾತ್ರಿಯುದ್ಧದಲಿ | ಭೈಮಿಕಾಯವು ಬೀಳೆ ಬಲದ ಮಧ್ಯದಲಿ || ೨೬೮ ||

ಕಂಡು ಕೌರವ ಹರುಷಗೊಂಡು ನಗುತಿರಲು | ಪಾಂಡವರ ಬಲ ದುಗುಡದಿಂದಲಿರುತಿರಲು || ೨೬೯ ||

ಮಾಧವನು ನಸುನಗುತನೆಂದನೆಲೆ ಪಾರ್ಥ | ರಾಧೇಯ ನೆನೆದ ಕಾರ್ಯಗಳಿಂದು ವ್ಯರ್ಥ || ೨೭೦ ||

ಆದುದೀವರೆಗೆ ನಿನ್ನಸುವ ಕಾದಿಹೆನು | ಮೋದದಲಿ ಜಯಿಸು ನಿರ್ಭಯನಾದೆ ನೀನು || ೨೭೧ ||

ಕರೆಸೀಗ ಪಾಳಯದ ಪಾಂಚಾಲದೊರೆಯ | ಬರಿಸವನ  ತನಯನೀ ಸೇನೆದಳಪತಿಯ || ೨೭೨ ||

ಸುತ್ತ ಮತ್ಸ್ಯೇಶ ಮುಂತಾದ ಷಡುರಥರ | ಮತ್ತೆ ಕರಿಶತಾಧಿಕಬಲದ ಬಾಹುಜರ || ೨೭೩ ||

ಕೂಡುತಲಿ ಪೊರಡೀಗ ಸಾನುರಾಗದಲಿ | ಮಾಡು ಕದನವ ದ್ರೋಣ ಮೊದಲಾದವರಲಿ || ೨೭೪ ||

ದುಃಖಿಸಲು ಬೇಡ ರಣಕೇಳುಯೇಳೆನುತ | ರಕ್ಕಸಾರಿಯು ನುಡಿಯೆ ಕೇಳ್ದು ಕಲಿ ಪಾರ್ಥ || ೨೭೫ ||

ಜಡಜಸಖಸುತನಿದಿರು ರಥವ ನಡೆಸೆಂದು | ಜಡಜನಾಭನೊಳುಸಿರುತಿರಲು ಖತಿಗೊಂಡು || ೨೭೬ ||

ಭಾಮಿನಿ

ಮಾಧವನು ಮಣಿರಥವ ಮನದೊಳು |
ಮೋದಗೊಳುತಾ ಕ್ಷಣದಿ ಸಂಗರ |
ಮೇದಿನಿಯನಡಹಾಯ್ದು ರವಿಸುತನಿದಿರು ನಿಂದಿರಿಸೆ ||
ಕ್ರೋಧದಲಿ ಕಂಡಾಗ ಕರ್ಣನ |
ಮೂದಲಿಸಿ ಮಾರ್ಗಣಗಳೆಸೆವು |
ತ್ತಾಧನಂಜಯ ನುಡಿದ ಭಾನುಜ ಭಳಿರೆ ಭಳಿರೆಂದು  ||೨೭೭||

ರಾಗ ಶಂಕರಾಭರಣ ರೂಪಕತಾಳ

ಭಳಿರೆ ಸೂತಸುತನೆ ಕೇಳು | ಕಲಹದಲ್ಲಿ ಶಕ್ರಶಕ್ತಿ |
ಯೊಳಗೆ ಭೀಮಸುತನ ಗೆದ್ದ | ನೊಲನ ನಿಲಿಸುವೆ  || ೨೭೮ ||

ಬಲನವೈರಿತರಳ ಸಾಕು | ಗೆಲುವುದೆಲ್ಲ ಬಲ್ಲೆ ನಿಲ್ಲು |
ಸುಲಭದಲ್ಲಿ ಶಕ್ತಿ ಹೊರತು | ಗೆಲುವೆ ಶೀಘ್ರದಿ  || ೨೭೯ ||

ವೃದ್ಧನೊರ್ವ ತನ್ನ ತಲೆಯೊಳ್ | ಬಿದ್ದ ತಿಲವ ತೆಗೆದು ತಾ ಸ |
ಮೃದ್ಧನಾದ ರೀತಿ ನಿನ್ನ | ಬುದ್ಧಿ ಸಮರದಿ  || ೨೮೦ ||

ಅಡವಿಪಾಲರಿಂಗೆ ಸ್ವರ್ಣ | ಕೊಡದ ಧನವು ಸಿಕ್ಕಬಹುದೆ |
ಮೃಡನ ಒಲಿಸಿ ಯಮಜ ರಣದಿ | ಪೊಡವಿ ಬೇಡಲಿ  || ೨೮೧ ||

ಮೃಡನನೊಲಿಸಿ ತಂದ ಶರವ | ತೊಡುವೆ ನಿನಗೆ ನಿಲ್ಲೆನುತ್ತ |
ಸಿಡಿಲಿನಂತೆ ಗರ್ಜಿಸುತ್ತ | ಹೊಡೆದ ಶರಗಳ  || ೨೮೨ ||

ಭಾಮಿನಿ

ಪರಿಪರಿಯ ಮಂತ್ರಾಸ್ತ್ರವೆಸೆವು |
ತ್ತಿರಲು ವೈಮಾನಿಕರು ಭಳಿಭಳಿ |
ರರರೆ ಮೂಜಗ ನಡುಗುತಿದೆಯೆಂದುಸಿರುತಿರಲಂದು ||
ಗಿರಿಯ ಸಂಘಕೆ ಮೊದಲು ಸುರಪನು |
ಕರದ ವಜ್ರಾಯುಧದಿ ಬಡಿದಂ |
ತರಿಯ ಬಡಿಯಲು ಮರುಗಲಾ ಕುರುಬಲದ ಭೂಭುಜರು  || ೨೮೩ ||

ಕುಂಭಿನೀಪತಿ ಕೇಳು ಸುಭಟರು |
ಹಂಬಲಿಸೆ ಕಾಯ್ವರನು ಕಾಣದೆ |
ಕುಂಭಜನು ಕಿಡಿಗೆದರಿ ಕುರುಮಂಡಲಕೆ ನಡೆತಂದು ||
ಅಂಬುಜಾಕ್ಷನ ಸಮ್ಮುಖದಿ ಝಷ |
ಕುಂಭಿನಿಯ ದೊರೆಯೊಡನೆ ಸಂಗರ |
ಕಂಬುಗ ಳನೆಸೆದೆಂದ ಕಲ್ಪದಶಂಭುಶೌರ್ಯದಲಿ  || ೨೮೪ ||

ರಾಗ ತುಜಾವಂತು ಅಷ್ಟತಾಳ

ಮತ್ಸ್ಯಾಧಿಪತಿಯೆ ನೀನು | ನಿನ್ನಯ ಬಂಧು | ವಾತ್ಸಲ್ಯಗುಣಗಳನು ||
ಉತ್ಸಾಹದಿಂದಲಿ ನೆನೆದು ಬಂದುದಕೀಗ | ವತ್ಸವ ಬಗಿವೆನಿನ್ನು  || ೨೮೫ ||

ಬಡ ಪಾರ್ವ ಕೇಳು ನೀನು | ಜೀವನಕಾಗಿ | ಪೊಡವೀಶಪುತ್ರರನು ||
ಒಡಗೂಡಿ ಶರವಿದ್ಯೆ ಕಲಿಸಿ ಮತ್ತವರಲ್ಲಿ | ಕೆಡುಕ ಯೋಚಿಪೆಯಲ್ಲಿನ್ನು || ೨೮೬ ||

ತುಂಡುರಾಜನೆ ನೀ ಕೇಳು | ನಿನ್ನಯ ಭಾವ | ಪುಂಡ ಕೀಚಕನು ತಾನು ||
ಷಂಡಧೊರೆಯ ತೆರ ಕುಳ್ಳಿರಿಸಿ ಮೆರೆದುದ | ಕಂಡು ಕೂತೆಯೊ ಪೇಳಿನ್ನು || ೨೮೭ ||

ಬಲ್ಲೆ ನಿಮ್ಮಯ ಸಾಹಸ | ಪೂರ್ವದಿ ನಮ್ಮ | ಗೊಲ್ಲರ ಬೆದರಿಸುತ ||
ಎಲ್ಲ ಗೋವ್ಗಳ ಕೊಂಡುಪೋಗೆ ಪುತ್ರನು ಬಿಡಿಸಿ | ಕೊಲ್ಲದೆ ಬಿಟ್ಟನಲ್ಲೈ || ೨೮೮ ||

ಬಲು ಪರಾಕ್ರಮಿಯವನು | ಓಡಲು ಧುರ | ನೆಲದಲ್ಲಿ ನರ ತಂದನು ||
ಕಲಹದಿ ತ್ರೈಗರ್ತಕಟ್ಟಿ ಪೋಗಲು ನಿನ್ನ | ತಲೆಯ ಕಾದಿಹ ಭೀಮನು || ೨೮೯ ||

ಇನಿತು ಮೂದಲಿಸುತಲಿ | ಶೌರ್ಯದಿ ತಾವು | ಸೆಣಸುತ್ತ ಶರಜಾಲದಿ ||
ರಣರಂಗದೊಳಗೀರ್ವರಾರ್ಭಟಿಸುತ ಮಂತ್ರ | ಕಣೆಗಳನೆಸೆದಿರ್ದರು || ೨೯೦ ||

ಭಾಮಿನಿ

ಅರಸ ಕೇಳಾಕ್ಷಣದಿ ಮುಖಜರ |
ವರನು ವೈಷ್ಣವಶರವ ಜಪಿಸುತ |
ಅರಿಗೆ ಬಿಡೆ ಮೈಮರೆತು ಮತ್ಸ್ಯನು ಅರುಣಮಂಡಲವ ||
ಹರುಷದಲಿ ಭೇದಿಸುತ ನಡೆವುದ |
ನರಿತು ದ್ರುಪದನು ಹುಂಕರಿಸಿ ಬಲು |
ಶರಮಳೆಯ ತೋರಿದನು ಪೂರ್ವದ ವೈರವನು ನೆನೆದು  || ೨೯೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರರೆ ವಿಪ್ರರೆ ಸಹಜಧರ್ಮವ | ತೊರೆದು ಬಕನೊಲು ಧ್ಯಾನದಲಿ ನೀ |
ವಿರುವ ಮುನಿಯೆಂದರಿಯದರ್ಜುನ | ಧುರದಿ ಬಿಡುವ  || ೨೯೨ ||

ಮರುಳು ದ್ರುಪದನೆ ಪೂರ್ವದೊಳು ನೀ | ಬಿರುನುಡಿಯ ಪೇಳುತಲಿ ಸಭೆಯೊಳು |
ಜರೆದು ಗೋವ್ ಕೊಡದಿರಲು ಕೆಡಹಿದೆ | ಚರಣದೆಡೆಗೆ  || ೨೯೩ ||

ಬಿಡೆನು ಸಮರಾಂಗಣದಿ ನಿಮ್ಮಯ | ಒಡಲ ತೀರ್ಚುವೆ ದಿಟವು ಶಿಷ್ಯರು |
ಕಡು ವಿರೋಧಿಗಳೈಸೆ ಕಾವರ | ಹುಡುಕಿ ಬೇಗ  || ೨೯೪ ||

ಎನಲು ದ್ರೋಣನು ಭಲ್ಲದಲಿ ರವಿ | ತನಯನಲ್ಲಿಗೆ ಕಳುಹುವೆನು ನೋ |
ಡೆನುತ ಚಂದ್ರಾಕೃತಿಯ ಶಸ್ತ್ರವ | ಜನಪಗೆಸೆದ  || ೨೯೫ ||

ಭಾಮಿನಿ

ಈ ತೆರದಿ ಗುರುದ್ರೋಣ ದ್ರುಪದನ |
ಧಾತುಗೆಡಿಸಲ್ಕಿತ್ತ ಕಮಲಿನಿ |
ನಾಥ ಪೂರ್ವಾಂಗನೆಯ ನಾಸಾಮಣಿಯ ಭಾಸದಲಿ ||
ಭೂತಳವ ಬೆಳಗಿಸುತ ಕರಗಳ |
ಜಾತದಲಿ ಸಂಗರವ ನಿಲಿಸುವ |
ನೀತನೆಂಬುವ ತೆರದಿ ಗಗನಾಂಗಣದಿ ಶೋಭಿಸಿದ  || ೨೯೬ ||

ಸೃಷ್ಟಿಯರಸನೆ ಕೇಳು ದ್ರುಪದನ |
ನಟ್ಟಿದನು ಭೂಸುರನು ಸುರಪತಿ |
ಪಟ್ಟಣಕೆ ದಿಟವೆಂದು ನೋಡುತ ಭರದಿ ನಡೆತಂದು ||
ಸಿಟ್ಟಿನಲಿ ಪಲ್ ಧ್ವನಿಯ ಗೆಯ್ವುತ |
ತಟ್ಟನಾಹವಕೆದ್ದು ದ್ರೋಣಗೆ |
ತೊಟ್ಟು ಶರಗಳ ಕಡುಗಿ ಧೃಷ್ಟದ್ಯುಮ್ನನಿಂತೆಂದ  || ೨೯೭ ||

ರಾಗ ಶಂಕರಾಭರಣ ಮಟ್ಟೆತಾಳ

ಅತಿರಥಾಗ್ರಗಣ್ಯ ದ್ರೋಣ ಕೇಳು ಎನ್ನಯ |
ಪಿತನ ರಣದಿ ತಾನೆ ಗೆಲಿದೆನೆಂಬ ನಿನ್ನಯ ||
ಅತುಳ ಬಲವನೆಲ್ಲ ತೋರು ನಿಲ್ಲು ನಾಕದ |
ಪಥವ ತೋರ್ಪೆ ನಿಮಿಷಮಾತ್ರದಿಂದ ದುರ್ಮದ  || ೨೯೮ ||

ಪಿತನು ಪೋದ ಗತಿಗೆ ಬವರದೊಳಗೆ ಲೋಕದಿ |
ಸುತರು ಪೋಪುದುಚಿತ ರಣಕೆ ನಿಲ್ಲು ನಿಮಿಷದಿ ||
ಮತಿವಿಮೂಢ ಗುರುವಿನೊಡನೆ ಕದನವೇನೆಲ |
ಗತಿಯ ತೋರ್ಪೆನುಳಿದರೆನ್ನಜಾತ ಬಿಡನೆಲ  || ೨೯೯ ||

ಎನುತ ರೋಷದಿಂದ ಸಮದಿ ಕಾದುತೀರ್ವರು |
ಘನತರಾಸ್ತ್ರ ಬಿಡಲು ಕಾಣುತಾಗ ವೀರರು ||
ಮನದಿ ಚೋದ್ಯಗೊಳಲು ಕಾಣುತಾಗ ಪಾರ್ಥನು |
ಕನಲಿ ಪಾರ್ಷತನ್ನ ಬಿಡಿಸಿ ತಾನೆ ನಿಂತನು  || ೩೦೦ ||

ರಾಗ ಅಹೇರಿ ಝಂಪೆತಾಳ

ಗುರುವರನೆ ನಮ್ಮ ಬಲದ | ವೀರರನು | ಬರಿದೆ ಪುಡಿಗೆಯ್ವೆ ಧುರದ ||
ಶರಧಿಯಲಿ ಬಳಲಿರ್ಪನು | ಪಾರ್ಷತನು | ನರನೀಗ ಬಂದೆ ತಾನು || ೩೦೧ ||

ಸಿಟ್ಟಿನಲಿ ಘುಡಿಘುಡಿಸುತ | ಕರೆಸೀಗ | ಧೃಷ್ಟದ್ಯುಮ್ನನ ಧುರದಿ ತಾ ||
ನಟ್ಟುವೆನು ಪಾಂಚಾಲರ | ಸಂಯಮಿನಿ | ಪಟ್ಟಣಕೆ ಮಿಗೆ ಸರ್ವರ || ೩೦೨ ||

ಎಂದೆನುವ ಗುರುವ ನೋಡಿ | ಅರ್ಜುನನು | ಮಂದಹಾಸದಲಿ ಕೂಡಿ ||
ಇಂದು ಸಮರವ ಗೆಯ್ವೆನು | ಎನುತಾಗ | ಚಂದದಾಹವ ಗೆಯ್ದನು || ೩೦೩ ||

ಭಾಮಿನಿ

ಪೃಥಿವಿಪತಿ ಕೇಳಿನಿತು ಸಮರದೊ |
ಳತುಲಬಲರೊಂದಾಗಿ ಕಾದುತ |
ಶತಮಖಾದ್ಯಸ್ತ್ರಗಳ ಬಿಡುತಿರಲಂದು ಕಲಶಜನು ||
ರತಿಪತಿಯ ಪಿತ ಸಖನ ಬಾಣದ |
ಹತಿಗೆ ಭ್ರಮಣೆಯ ಗೊಳ್ಳುತಲಿ ತಾ ||
ರಥದಿ ಬಿದ್ದವನಿಯಲಿ ಮೂರ್ಛಿಸಲೆಂದನಾ ಪಾರ್ಥ  || ೩೦೪ ||

ರಾಗ ಪಂಚಾಗತಿ ಮಟ್ಟೆತಾಳ

ಹರಹರ ಎನ್ನಯ ಗುರುಗಳ | ಧುರದಲಿ ಕೆಡಹಿದೆ ಸರಳಿಲಿ ||
ಧರಣಿಯು ಹೊರುವುದೆ ನಿಂದಿಸ | ದಿರುವರೆ ತ್ರಿಜಗದಲಿ  || ೩೦೫ ||

ಶಿಶುತನದೊಳಸ್ತ್ರವನೆಸೆಯುವ | ಕುಶಲವನೆಲ್ಲವ ಕಲಿಸಿದ ||
ದೆಸೆಯಲಿ ಗರಡಿಯೊಳೆನ್ನೊಳ | ಗುಸಿರಿದ ತಾ ಮರೆತೆ  || ೩೦೬ ||

ವಿದ್ಯವ ಕಲಿಸಿದ ಲೋಕಪ್ರ | ಸಿದ್ಧರ ಹೊಡೆಯದಿರೆನುತಲಿ ||
ಬುದ್ಧಿಯ ಕಲಿಸಿದ ವೃದ್ಧರು | ಯುದ್ಧದಿ ಮಲಗಿಹರೈ  || ೩೦೭ ||

ನೊಂದಿರೆ ಬಹುಪರಿ ರಣದೊಳ | ಗೆಂದೆನುತಲಿ ದ್ರೋಣನ ಕರ ||
ದಿಂದೆಬ್ಬಿಸಲೇಳದೆ ಮುಖ | ಕಂದಲು ಮರುಗಿದನು  || ೩೦೮ ||

ಇಂದಿರೆಯರಸನು ವಿಜಯನ | ಅಂದವ ಕಾಣುತ ಬಹುಪರಿ ||
ನಿಂದಿಸುತೆಂದನು ವೈರಿಯೊಳ್ | ಬಂದುದೆ ದಯೆ ನಿನಗೆ  || ೩೦೯ ||

ಅಂದಿಲಿ ದ್ರೋಣನು ತನ್ನಯ | ಸ್ಯಂದನವೇರುತ ಸುರಪನ ||
ನಂದನ ಶೋಕಿಸೆ ಕಾಣುತ | ನಿಂದಿರೆ ಹರಿ ನುಡಿದ  || ೩೧೦ ||

ತೊಡು ಶರ ಬೇಗದೊಳೆಂದುದ | ನುಡಿಯನು ಕೇಳದ ಪಾರ್ಥನ ||
ದೃಢಮನ ನೋಡುತ ಮಾಧವ | ಕಿಡಿಗೆದರುತಲೆಂದ  || ೩೧೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಶ್ವೇತವಾಹನ ಕೇಳು ಎಮ್ಮಯ | ಮಾತ ಕೇಳದೆ ಕುಳಿತೆಯಲ್ಲವೋ
ವಾತ ತರಳನ ಕರೆದು ವೈರಿಯ | ವ್ರಾತವನ್ನು  || ೩೧೨ ||

ಜಯಿಸುವೆನು ನೋಡಿನ್ನು ತಂಗಿಯ | ಬಯಕೆಯನು ಪೂರೈಸುವೆನು ನಿ |
ಶ್ಚಯದೊಳೆನ್ನುತ ಕರೆಯೆ ಭೀಮನಿ | ರ್ಭಯದೊಳಾಗ  || ೩೧೩ ||

ಕೃಷ್ಣನಂಘ್ರಿಗೆ ನಮಿಸೆ ಪಾಂಡವ | ರಿಷ್ಟ ಭೀಮಗೆ ಪೇಳ್ದ ಫಲುಗುಣ |
ನೆಷ್ಟು ಪೇಳ್ದರು ದ್ರೋಣನನು ತಾ | ಬಿಲ್ವ ಸಿಕಿದು  || ೩೧೪ ||

ಕರೆದೆ ನಿನ್ನನು ವೇಗದಲಿ ಶರ | ಗುರುವಿಗಸ್ತ್ರವ ತೊಡುವುದೆಂದೆನ |
ಲರಿಯ ಬಳಿಗೆದ್ದಾಗ ನಮಿಸಲು ಭರದಿ ಕಳುಹೆ  || ೩೧೫ ||

ರಾಗ ಭೈರವಿ ಏಕತಾಳ

ಬಂದಾ ಬೀಮನು ರಣದಿ | ಋಷಿ | ನಂದನನಿದಿರಲಿ ಭರದಿ ||
ನಿಂದಿರೆ ದ್ರೋಣನು ಕಂಡು | ಶರ | ವೃಂದದಿ ಮುಸುಕಿದನಂದು  || ೩೧೬ ||

ಮಾರ್ಗಣಗಳ ತರಿಯುತಲಿ | ಸಿತ | ಕೂರ್ಗಣೆಗಳನೆಸೆವುತಲಿ ||
ಭೋರ್ಗರೆಯುತ ವಾಯುಜನು | ರಥ | ಮಾರ್ಗವ ತಡೆದು ಪೇಳಿದನು || ೩೧೭ ||

ದಾಯಾರ್ಹದ ಭಾಗವನು | ಕುರು | ರಾಯನು ಕೊಡದಿರೆ ತಾನು ||
ನ್ಯಾಯದಿ ಕಾದುವೆನಿಂದು | ತಮಗ | ನ್ಯಾಯವು ನಮ್ಮೊಳಗಿಂದು || ೩೧೮ ||

ದ್ವಿಜವರರಿಗೆ ಲೋಕದಲಿ | ಹರಿ | ಭಜನೆಯುಚಿತ ಶಾಸ್ತ್ರದಲಿ ||
ನಿಜ ನಡತೆಯ ಬಿಡುತಿಂದು | ಭೂ | ಭುಜರಲಿ ರಣ ಬೇಡಿಂದು  || ೩೧೯ ||

ದಂಡಧರನ ವೋಲಿಂದು | ಬಲ | ಚೆಂಡಾಡಿಸಬೇಡಿಂದು ||
ಭಂಡಿಯ ಪಿನ್ನೆಲೆ ತಂದು | ರಣ | ಮಂಡಲದೊಳಗಿರಲಂದು  || ೩೨೦ ||

ಕಿಡಿಕಿಡಿಯೆನುತಿರೆ ದ್ರೋಣ | ರಥ | ತಡೆಯಲು ಧುರದೊಳು ಜಾಣ ||
ಕಡು ಕೋಪವ ಕಂಡಾಗ | ನಭ | ಕಡೆಯಲಿ ಋಷಿಗಳು ಬೇಗ  || ೩೨೧ ||

ಭಾಮಿನಿ

ಬಂದು ಸಪ್ತರ್ಷಿಗಳು ವ್ಯೋಮದಿ |
ನಿಂದು ಕಲಶಜನಿರವ ನೋಡುತ |
ರೆಂದರೆಲೆ ಗುರುವರ್ಯ ಧುರ ಸಾಕಿಂದು ಬಾರೆನಲು ||
ಕಂಧರವನೆತ್ತುತಲಿ ಮುನಿಗಳ |
ವೃಂದವನು ನೋಡುತಲಿ ತಾ ಮನ |
ಗುಂದಿ ಮರುಗುತ ನುಡಿದ ಕುರುಭೂಪತಿಯ ನೆನೆನೆನೆದು  || ೩೨೨ ||

ರಾಗ ನೀಲಾಂಬರಿ ಆದಿತಾಳ

ಅಹಹ ನಾನೇಂಬೆನೆನ್ನ | ಮಹಿಪನ ದುರ್ವಿಧಿಯ ||
ಅಹಿತರೊಡನೆ ಕಾದಲಿಂದು | ಮಹಿತರೆಂದ ನುಡಿಗೆ  || ೩೨೩ ||

ದ್ರೋಣನಂತಃಪ್ರಾಣವೆಂದು | ಕ್ಷೆಣೀಶ ನಂಬಿಹನು |
ತ್ರಾಣದಿಂದ ಗೆಲಲು  ಚಕ್ರ | ಪ್ರಾಣಿ ನರನ ಬಿಡನು  || ೩೨೪ ||

ಮಗನ ಹೇಗೀ ನೃಪತಿಗಾಗಿ | ಪಗೆಗಳಿದಿರು ಬಿಟ್ಟು ||
ಅಗಲಿ ನೃಪನ ಪೋದರೆನ್ನ | ಜಗವು ನಗುವುದಾಯ್ತು  || ೩೨೫ ||

ಭಾಮಿನಿ

ಇಂತಧಿಕ ಶೋಕದಲಿ ಕುರುವರ |
ನೆಂತಿರುವನೆಂಬುದನು ಮನದಲಿ |
ಚಿಂತಿಸುತ ಮಗುಳೆದ್ದು ಧನು ಝೇಂಕರಿಸುತಲಿ ದ್ರೋಣ ||
ಪಂತಿಮುಖದವ ಬರಲಿ ಮಿಗೆ ಕಾ |
ಲಾಂತಕನು ನಿಲಲೊಮ್ಮೆ ಬಿಡೆನೆಂ |
ದಿಂತುಸಿರಿ ಪಾಂಚಾಲರನು ಪುಡಿಗೆಯ್ದನವನಾಗ  || ೩೨೬ ||

ರಾಗ ತುಜಾವಂತು ಅಷ್ಟತಾಳ

ಪೃಥ್ವೀಶ ಕೇಳಿಂತು ದ್ರೋಣ | ಧನು | ವೆತ್ತಿ ಜೋಡಿಸುತಲಿ ಬಾಣ ||
ಹತ್ತಾರು ಸಾವಿರ ದ್ರೌಪದೇಯರ ಸವ |
ರುತ್ತ ಭೈರವನಂತೆ ಬರುತಿರ | ಲಿತ್ತ ಪಾರ್ಥನೊಳೆಂದ ಮಾಧವ | || ೩೨೭ ||

ಜಾಮದಗ್ನಿಯ ಶಿಷ್ಯನೀತ | ದ್ರೋಣ | ನಾಮಾಗ್ನಿ ದಿವ್ಯಾಸ್ತ್ರಸಹಿತ |
ಕಾಮಾರಿಯಂತೆ ಪಾಂಚಾಲಾದಿ ಬಲವ ನಿ |
ರ್ನಾಮ ಗೆಯ್ದಯ್ತರುವವನು ಸಂ | ಗ್ರಾಮ ಕೊಡುವರ ಕಾಣೆ ನಮ್ಮೊಳು || ೩೨೮ ||

ಎಷ್ಟು ಯುದ್ಧವ ಮಾಡಲೀತ | ಹಿ | ಮ್ಮೆಟ್ಟನು ರಣದಿ ವಿಖ್ಯಾತ ||
ಸೃಷ್ಟಿಯ ನಿಷ್ಪಾಂಡವ ಮಾಡುವೆನೆಂದು |
ದುಷ್ಟಭಾವದಿ ಬಂದ ನಿಮ್ಮಯ | ದೃಷ್ಟ ಮುಂದೆಂತಿಹುದೊ ಕಾಣೆನು || ೩೨೯ ||

ಆದರೊಂದಿಹುದೀಗುಪಾಯ | ನೀವು | ಸಾಧಿಸಲುಳಿವುದು ಕಾಯ ||
ಈ ದಿನದೊಳಗಶ್ವತ್ಥಾಮ ಸ್ವರ್ಲೋಕಕ್ಕೆ |
ಪೋದನೆನುತಲೆ ನುಡಿಯೆ ನಮ್ಮೊಳು | ಕಾದದಾಹವ ಬಿಡುವ ದಿಟವಿದು || ೩೩೦ ||

ಅಚ್ಯುತನಿಂತೆನಲಾಗಿ | ಬಲು | ಬೆಚ್ಚುತ ನರ ಬೆರಗಾಗಿ ||
ಉಚ್ಚರಿಸದೆ ತನ್ನ ಕರಗಳಿಂದ ಕಿವಿ |
ಮುಚ್ಚುತಲಿ ನಿಂತಿರಲು ಭೀಮನ | ನೆಚ್ಚರಿಸಿ ಚಿನ್ಮಯನು ಪೇಳಿದ  || ೩೩೧ ||

ಭಾಮಿನಿ

ಭೀಮನಶ್ವತ್ಥಾಮನಾಮದ |
ಸಾಮಜವ ಕೊಂದಾಗಲಶ್ವ |
ತ್ಥಾಮಹತನೆಂದೆನುತ ಪೇರ್ಧ್ವನಿಯಿಂದ ನುಡಿಯಲ್ಕೆ ||
ಆ ಮಹಾಧ್ವನಿ ಕೇಳಿ ಕಲಶಜ |
ಭೂಮಿಯಲಿ ದುರ್ಜಯನು ಸುತನೀ |
ಭೀಮನಾಡಿದ ನುಡಿಯು ನಿಜವಲ್ಲೆಂದು ಯೋಚಿಸಿದ  || ೩೩೨ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಆ ಸಮಯದೊಳಗಿತ್ತ ಲೋಕನಿ | ವಾಸಿ ಯಮಜನ ಕರೆದು ಪೇಳಿದ |
ಬೇಸರಿಸದೀ ದ್ರೌಣಿ ಸುರರ ನಿ | ವಾಸಕಯ್ದ  || ೩೩೩ ||

ಎಂದೆನುತ ಪೇಳೆನಲು ಯಮಜನು | ನೊಂದು ಮನದಲಿ ನುಡಿಯದಿರೆ ಗೋ |
ವಿಂದ ನುಡಿದನು ಗಜವ ನೀ ನೋ | ಡೆಂದು ನಗುತ  || ೩೩೪ ||

;mso-Y��ifP���y:Calibri;mso-hansi-theme-font: minor-latin’>ತಾ ನೊಡುತಲಿ ಮನ |
ಕರಗಿ ಬಂದೆಬ್ಬಿಸುತ ಪೇಳಿದ ದೊರೆಗೆ ಮೂದಲಿಸಿ  || ೧೫೯ ||

 

ರಾಗ ಯರಕಲಕಾಂಭೋಜ ಝಂಪೆತಾಳ

ಎಲವೊ ಕೌರವರರಸನರುಹುವುದ ನೀ ಕೇಳು | ಕಲಹದೊಳು ಮಲಗಿರ್ಪ ಸುಭಟರನು ಕಂಡು ||
ಅಳಲದಿರು ಮನದಿ ಕೊಳುಗುಳದೊಳಗೆ ಮೈ ಮರೆವು | ದಿಳೆಯಪಾಲರಿಗೆ ಕೈವಲ್ಯಕಾರಣವು ||೧೬೦||

ಸತತ ಸಂಗರದೊಳಗೆ ಮತಿಗೆಟ್ಟು ಮಲಗಿ ಭೂ | ಪತಿಯಾಗಿ ಮಲಗಿರ್ಪೆಯಲ್ಲೊ ನೀನಿಂದು ||
ಅತುಳ ಬಲಗಳನು ಪರಿಮಿತಿ ತಪ್ಪಿ ಸವರುವ | ಸ್ಥಿತಿ ನೋಡಿ ಬಳಲುತಿಹ ಗತಿಯಾಯಿತಲ್ಲೊ ||೧೬೧||

ನಾವು ಕದನವ ಮಾಡಲೆಂದರೀ ದೊರೆಪತಿಯ | ಸೋವು ನೋಡುತಲಿರ್ಪ ಪಾವಮಾನಿಯನು||
ಆವ ಭೂಪನು ತಡೆಯುವನು ಭೂಪತಿಯನಾರು | ಕಾವಾತ ಭೈಮಿಯನು ಗೆಲುವಾತನಾರು  ||೧೬೨||

ಹೊಳೆಯ ತರಳನು ಪೇಳ್ದ ಸರಳಮಾರ್ಗವ ಬಿಟ್ಟೆ | ಇಳೆಗಾಗಿ ಸಹಜರನು ಅಡವಿಯೊಳಗಿಟ್ಟೆ ||
ಬಳಲುವುದು ನೀನಿಂದು ಕೊಳುಗುಳದಿ ಜಯವೆಂತೊ | ತಿಳಿಯೆ ನಾ ನಳಿನಾಕ್ಷನೊಲವೆಂತೊ ನಿನಗೆ  ||೧೬೩||

ಭಾಮಿನಿ

ರವಿಜನೆಂದುದ ಕೇಳ್ದು ಕೌರವ |
ಪವಿಧರನವೊಲ್ ಧೈರ್ಯದಲಿ ತಾ |
ವಿವಿಧ ವ್ಯಸನವ ಬಿಟ್ಟು ಕರ್ಣನ ಜರೆವುತಿಂತೆಂದ ||
ಅವಿಯ ಹೆಬ್ಬುಲಿಗಿತ್ತ ತೆರದೊಳ |
ಗಿವನ ರಿಪುಬಲದೊಳಗೆ ಸಿಲುಕಿಸು |
ತವನಿಗರ್ಪಿಸುತುಳಿದ ಷಡ್ರಥರಿದ್ದು ಫಲವೇನು  || ೧೬೪ ||

ಕುರುಪತಿಯ ನುಡಿ ಕೇಳುತಲಿ ರವಿ | ತರಳ ಕೋಪದೊಳಾಗ ಧನು ಶರ |
ಕರದಿ ಪಿಡಿದಿಂತೆಂದ ಭೂಪತಿಯೊಡನೆ ಗರ್ಜಿಸುತ ||
ಧುರದೊಳಗೆ ದಾನವನ ಕೊರಳನು | ತರಿದ ಹೈಡಿಂಬಿಯನು ನೈಋತ ||
ಪುರಕೆ ಕಳುಹುವೆನೆಂದು ನಂಬಿಗೆಯಿತ್ತನಾ ಕರ್ಣ  || ೧೬೫ ||

ಕಂದ

ಈ ಪರಿಯಲಿ ರವಿಜಂ ಕುರು |
ಭೂಪನ ಸಂತಯಿಸುತ ಜಯ ಧೈರ್ಯೋಕ್ತಿಗಳಿಂ ||
ದಾ ಪುರುಹೂತಸುತನ ಪ್ರ |
ತಾಪವ ನಿಲಿಸುವೆನೆಂದಾರ್ಭಟಿಸುತಯ್ತಂದಂ  || ೧೬೬ ||