ರಾಗ ಕೇದಾರಗೌಳ ಅಷ್ಟತಾಳ
ಕಡು ಕೋಪದಿಂದಲಾರ್ಭಟಿಸಿ ವರೂಥವ | ನಡರಿ ಬರುವ ವೀರನ ||
ತಡೆದು ಘಟೋತ್ಕಚನಿದಿರು ನಿಲಿಸಿಕೊಂಡು | ನುಡಿಸಿದ ಸೂರ್ಯಜನ || ೧೬೭ ||
ಸೃಷ್ಟಿಯೊಳಗೆ ವೀರನೆಂದು ನಿನ್ನನು ಧೃತ | ರಾಷ್ಟ್ರನ ಸುತನು ತಾನು ||
ಇಷ್ಟರಾಜ್ಯವನಿತ್ತು ಸಲಹಿ ಧೈರ್ಯದಿ ನಂಬಿ | ಕೆಟ್ಟನೈ ಧುರದೊಳಿಂದು || ೧೬೮ ||
ಕೆಟ್ಟತನವು ನಿಮ್ಮ ದನುಜರೊಳಗೆ ದಿಟ | ದಿಟ್ಟೆ ನಿನ್ನಯ ಮಾತೆಯು ||
ಪುಷ್ಟ ಭೀಮಗೆ ಮರುಳಾಗುತಣ್ಣಗೆ ತನ್ನ | ಕೆಟ್ಟತನವ ತೋರ್ದಳು || ೧೬೯ ||
ಮೂಢ ಕೇಳೆಲೊ ಮಾತೆ ಭೀಮಾದಿಗಳಿಗೆ ನೀ | ನಾಡುವೆ ಕೆಡುಮಾತನು ||
ಕೇಡನರಿಯೆ ವೀರಪಾರ್ಥ ಕೇಳಲು ನಿನ್ನ | ಝಾಡಿಸಿ ಬಿಡುವ ನೋಡು || ೧೭೦ ||
ಹುಲ್ಲು ದಾನವ ಕೇಳಿನ್ನೊಂದು ಪೇಳುವೆ ಪಾರ್ಥ | ಬಿಲ್ಲುಮಂಗಳ ದಿನದಿ ||
ಬಲ್ಲವನ್ಯಾರೆಂದು ನೋಡಿ ನಮ್ಮನು ಮುಖ | ತಲ್ಲಣಿಸಿದನರಿಯೆ || ೧೭೧ ||
ಬಲ್ಲೆ ನಿನ್ನನು ಧನುರ್ಧರನೆಂದು ದ್ರುಪದನ | ಬಿಲ್ಲನೆತ್ತಲು ಕೂಡದೆ ||
ಫುಲ್ಲಲೋಚನೆಯನ್ನು ಬಿಟ್ಟೆ ಯುದ್ಧದಿ ಪಾರ್ಥ | ಕೊಲ್ಲದೆ ಬಿಟ್ಟನಲ್ಲೈ || ೧೭೨ ||
ಹಿಂದೆ ನಮ್ಮಯ ಕರಿಪುರದೊಡೆಯನ ಜರಾ | ಸಂಧ ನೃಪತಿಯ ತಾನು ||
ಬಂಧಿಸಿ ಕೊಂಡೊಯ್ಯೆ ಕಾಶಿದೇಶಕೆ ಪೋಗಿ | ಚಂದದಿ ಬಿಡಿಸಿದೆನೈ || ೧೭೩ ||
ಅಂಗಧೀಶನೆ ನಿನ್ನ ಕೂಡಿ ಕೌರವ ಕಾ | ಳಿಂಗಪುತ್ರಿಯ ವಿವಾಹ ||
ಭಂಗಿಸೆ ಮಗಧೇಶ ಕಟ್ಟೊಯ್ಯೆ ಭೀಮನು | ಹಿಂಗದೆ ಬಿಡಿಸಲಿಲ್ಲೈ || ೧೭೪ ||
ಹುಚ್ಚರಂದದಿ ಯುದ್ಧಮಧ್ಯದಿ ನೀ ಮಾತ | ನುಚ್ಚರಿಸುವುದೇತಕೆ ||
ಹೆಚ್ಚಿನ ಪೌರುಷ ಪಾರ್ಥ ಬಂದರೆ ಮತ್ತೆ | ಬೆಚ್ಚದೆ ತೋರಿಸುವೆ || ೧೭೫ ||
ಮಾಧವಸಖ ಪಾರ್ಥ ನಿನಗೇಕೊ ಮೂಢನೆ | ಕಾದಲು ತಾನಿರಲು ||
ಮೇದಿನಿಯೊಳು ಬಾಲರ್ ಚಂದ್ರನ ಬಯಸುವ | ಗಾದೆಯಂತಾಯಿತಲ್ಲೊ ||೧೭೬||
ಭಾಮಿನಿ
ಎಲೆ ಘಟೋತ್ಕಚ ಕೇಳು ಕಲಹದೊಳ್ |
ನೆಲನ ಪಾಲಾಗುವೆಯೊ ನಮ್ಮನು |
ಗೆಲುವ ಸಾಹಸವೆಲ್ಲ ನಿಲಿಸುವೆ ಘನಸಮರ್ಥಿಕೆಯ ||
ಗೆಳೆಯರಿದಿರಲಿ ವಿಶಿಖಶರಧಿಯೊಳ್ |
ಬಳಲುತಿರೆ ತಡೆಯುವರು ಯಾರೀ |
ಕೊಳುಗುಳದೊಳೆನುತೆಚ್ಚ ಕರ್ಣನು ಸ್ವರ್ಣಪುಂಖಗಳ || ೧೭೭ ||
ರಾಗ ಭೈರವಿ ಏಕತಾಳ
ಮತ್ತಾ ದಿನಪತಿಸುತನು | ಬಲು | ಯತ್ನದಿ ರಿಪುಸೇನೆಯನು ||
ಕತ್ತರಿಸುತ ವೇಗದಲಿ | ರಿಪು | ಮಸ್ತಕದಲಿ ಹೊಡೆಯುತಲಿ || ೧೭೮ ||
ಕತ್ತಲೆಯೊಳಗಟವಿಯಲಿ | ತಿರು | ಹುತ್ತಲೆ ತಾಪಸರಲ್ಲಿ ||
ಸತ್ವವ ತೋರ್ದುದನಲ್ಲಿ | ನಿಲಿ | ಸುತ್ತಿರ್ಪೆನು ಧುರದಲ್ಲಿ || ೧೭೯ ||
ಧೈರ್ಯದಿ ನಿನ್ನನು ನಂಬಿ | ದೊರೆ | ಕಾರ್ಯವ ಸಾಧಿಪೆನೆಂಬೀ ||
ಶೌರ್ಯವ ನಿಲಿಸುವೆನಿಲ್ಲಿ | ಕುರು | ಮರ್ಯಾದೆಯ ತೋರಿಲ್ಲಿ || ೧೮೦ ||
ಸೂತನ ಸುತ ಕೇಳಿನ್ನು | ಪುರು | ಹೂತನ ಸುತ ಧುರವನ್ನು ||
ಘಾತಿಪೆ ತಾನೆಂದೆನುತ | ಬರೆ | ಮಾತುಗಳಾಡಿದೆ ವ್ಯರ್ಥ || ೧೮೧ ||
ರಾಗ ನೀಲಾಂಬರಿ ಅಷ್ಟತಾಳ
ಎಲೆ ಘಟೋತ್ಕಚ ನಿನ್ನ ಶೌರ್ಯವ | ನೀಗ | ನಿಲಿಸುವೆನೆನುತಗ್ನಿ ಬಾಣವ ||
ಸೆಳೆದಾತಗಾಕ್ಷಣ ಬಿಡಲು | ದೈತ್ಯ | ಬಲವೆಲ್ಲ ಬೆದರಿತು ಭರದೊಳು || ೧೮೨ ||
ವಾಯುಜತರಳನು ಕೋಪಿಸಿ | ರಿಪು | ನಾಯಕರಿಗೆ ಬಾಣ ಮಂತ್ರಿಸಿ ||
ತೋಯಮಯವ ಮಾಡೆ ರಥಿಕರು | ಧನು | ಸಾಯಕಸಹಿತ ತೇಲಿದರು || ೧೮೩ ||
ಬೆದರದೆ ರವಿಜ ಭೈಮಿಯೊಳು | ಪೇಳ್ದ | ಕದನದಿ ನೋಡೀ ಚಿತ್ರಗಳು ||
ಇದ ನೋಡು ಗಿರಿಗಳ ಮಳೆಯ | ನೆಂ | ದೊದರಿ ಬಿಟ್ಟನು ಬಲು ಗಿರಿಯ || ೧೮೪ ||
ದಿಟ್ಟ ಸೂತಜನೆ ಕೇಳಿದನು | ನೀನು | ಬಿಟ್ಟ ಮಾರ್ಗಣ ಧುರದೊಳಿನ್ನು ||
ಬೆಟ್ಟದ ನಿಕರಕ್ಕೆ ನಾ ಪವಿ | ಶರ | ತೊಟ್ಟು ಕಡಿದೆ ನೋಳ್ಪುದೀ ಸವಿ || ೧೮೫ ||
ವಾರ್ಧಕ
ಅರಸ ಕೇಳಾದಿತ್ಯಸುತ ಭೀಮತನುಜರೀ |
ಪರಿಯಿಂದ ಕಾದುತ್ತಲಿರಲಾಗಲಂಬರದಿ |
ಸುರರೆಲ್ಲ ಬೆರಗಾಗಿ ಪರಿಮಳದ ಸುಮಗಳನು ಸುರಿದರೇನೆಂಬೆನದನು ||
ಪರಿಪರಿಯ ಶಸ್ತ್ರಾಸ್ತ್ರವೆಸೆದು ಸರಿಸಮದಿಂದ |
ಲಿರುತಾಗಲುದ್ರಿಕ್ತ ವಿದ್ವೇಷದಿಂದ ಕೇ |
ಸರಿಯವೋಲ್ ಹರಣಾಸೆ ಬಿಡುತವರು ತಮ್ಮೊಳಗೆ ಧುರನೆಲವು ತೋರದಿರಲು || ೧೮೬ ||
ಅತ್ತಲಾ ಕುರುವರನ ಸಖಶಿಖಾಮಣಿ ಕರ್ಣ |
ನೆತ್ತ ನೋಡಲು ಸುಭಟರ್ ನಾಲ್ದೆಸೆಯೊಳ್ ಕಾಣದಿರೆ |
ಕತ್ತಲೆಯು ಕುರುಭಟರ ಮೊತ್ತವನು ಮುಸುಕಲ್ಕೆ ಬಳಲುವುದ ಕಂಡಾಗಳು ||
ನೆತ್ತಿನೇತ್ರನ ತೆರದಿ ಕಿಡಿಗೆದರಿ ಕೋಪದೊಳು |
ವಿಸ್ತರಿಪ ಬಾಣಗಳನೆಡೆಬಿಡದೆ ತಡೆವೆನೆಂ |
ದೊತ್ತಿರಲು ದೈತೇಯಬಲವು ಕಾಣದೆ ತನ್ನ ಚಿತ್ತ ವಿಸ್ಮಯಗೊಳ್ಳಲು || ೧೮೭ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಪೊಡವಿಗೊಡೆಯನೆ ಕೇಳು ಭೀಮನ | ಹುಡುಗ ಸೌಬಲಿಸುತನನುರೆ ಕಂ |
ಗೆಡಿಸಿ ಮಾಯದಿ ಮಾಂಸರುಧಿರವ | ಹೊಡೆದನಾಗ || ೧೮೮ ||
ಅಂತರಿಕ್ಷದೊಳಸುರ ಗಿರಿಗಳ | ನಿಂತು ಹೊಡೆದನು ರವಿಜಸೈನ್ಯಕೆ |
ನಂತರದಿ ಕಲ್ಮಳೆಯು ಸಿಡಿಲುಗ | ಳಂತೆ ತೋರ್ದ || ೧೮೯ ||
ಕಂಡು ಕಪಟದ ಯುದ್ಧದೊಳು ಜನ | ತಂಡ ಮರುಗಲು ರವಿಜ ಪೇಳಿದ |
ಪುಂಡ ಭೈಮಿಯ ಮಥಿಸದೀರ್ದಡೆ ಗಂಡುಸಹುದೇ || ೧೯೦ ||
ಬೊಬ್ಬಿರುವ ಸೈನಿಕಕೆ ಕೋಪದೊ | ಳುಬ್ಬಿ ಪೇಳ್ದನು ಭೀರುಜನರಿಂ |
ಗಬ್ಬರಿಸಿದನು ಬೆದರದಿರಿಯೆಂ | ದಾರ್ಭಟಿಸುತ || ೧೯೧ ||
ಧೀರನಾಗಿರೆ ನಿಲ್ಲು ಸಮ್ಮುಖ | ತೋರು ಸತ್ತ್ವವ ಕದನರಂಗದೊಳ್ |
ನಾರಿಯಂದದಿ ಮರೆಯ ಕದನವು | ವೀರಗೇಕೈ || ೧೯೨ ||
ಭಾಮಿನಿ
ಅಕ್ಷಯಾಸ್ತ್ರವ ಜಪಿಸಿ ರವಿಸುತ |
ಲಕ್ಷ್ಯನೋಡಲು ಕಾಣದಿರೆ ರಿಪು |
ಕಕ್ಷ ಬೆದರುವ ತೆರದಿ ಶರಗಳ ಪಸರಿಸುತಲಿರಲು ||
ವೃಕ್ಷಗಳ ತೆಗೆತೆಗೆದು ಬಡೆಯುವ |
ದಕ್ಷ ಭೀಮನ ತರಳನಂತ |
ರಿಕ್ಷದಲಿ ಸ್ಥಿತಿ ತೋರದಿರೆ ಬೆರಗಾಗುತಿಂತೆಂದ || ೧೯೩ ||
ವಾರ್ಧಕ
ಧರಣಿಪನೆ ದಾನವರ ಕುಲತಿಲಕಕನೀಪರಿಯ |
ಶರಮಳೆಯ ಧಿಕ್ಕರಿಸುತ ತೌಶನಸವಿದ್ಯದಿಂ |
ದುರುಮಾಯಮಂ ತಾಳಿ ಹರದಶ್ವಕುವರನಂ ಬೆರಗಿಸುವೆನೆಂದು ಮನದಿ ||
ಕುರುರಾಯವೇಷದಿಂದಾ ಬಲವ ಪೊಗುತಾಗ |
ವರರಥಿಕ ವೃಂದದಿಂದುದಯಾದ್ರಿಪೀಠದೊಳು ||
ಮೆರೆವ ಮಾರ್ತಾಂಡನಂತಿರುವ ಭಾಸ್ಕರಿಯ ಕುರುಧರೆಯೊಳಗೆ ಮೋಹಿಸಿದನು || ೧೯೪ ||
ರಾಗ ಮುಖಾರಿ ಝಂಪೆತಾಳ
ಬಲಶಾಲಿ ರವಿಜ ಕೇಳ್ | ಬಳಲಿರುವೆ ಬಹುಪರಿಯ | ಕಲಹದೊಳಗೀಗ ದೈತ್ಯನಲಿ ||
ಚೆಲುವ ಚಂದ್ರಾನ್ವಯದಿ | ಜನಿಸಿರುವ ಕುರುಕುಲಕೆ | ಬಳಗ ನೀನೆಂದು ನಂಬಿದೆನು || ೧೯೫ ||
ಈಗ ಕೇಳುವುದೆನ್ನ | ಭಾಷಣವ ನಿಜವು ನೋಡ್ | ಸಾಗದೀ ಕದನ ಪಾರ್ಥರೊಳು ||
ಬೇಗದೊಳ್ ಕರೆದೀಗ | ಸಾನುರಾಗದಿದಾಯ | ಭಾಗ ಧರ್ಮಜಗೆ ಕೊಟ್ಟವನ || ೧೯೬ ||
ಮನ್ನಿಸುವೆನವನ ಕೇ | ಳಿನ್ನು ವೈರವ ಬಿಟ್ಟೆ | ಘನ್ನತಿಕೆಗಳ ತೋರಿಸುವಡೆ ||
ಎನ್ನ ಯತ್ನಗಳಿಲ್ಲ | ಇನ್ನು ಜಯವೆಂತಿಹುದೊ | ಮುನ್ನ ಸಂಧಾನವೇ ಲೇಸೈ || ೧೯೭ ||
ಕರೆಸು ಧರ್ಮಜನ ಕೈ | ಸರಿಸು ಯುದ್ಧವು ಬೇಡ | ಧರೆಯ ಕೊಡಿಸುವೆನೆಂದು ನುಡಿಯೆ ||
ಗಿರಿಯ ಮೇಲೆಸದಿರ್ಪ | ಪವಿಯ ವೋಲ್ ಕಿಡಿಗೆದರಿ | ದೊರೆಯೊಡನೆ ಕೋಪಿಸುತ ಪೇಳ್ದ || ೧೯೮ ||
ಭಾಮಿನಿ
ಕಡಲತನುಜಾನ್ವಯದ ಕೇಸರಿ |
ನುಡಿವೆಯಾ ಸಂಗರದಿ ನಮ್ಮಯ |
ಷಡುರಥರ ವೃಂದವನು ಬಹುಪರಿ ಪುಡಿಯಗಯ್ದಿರ್ಪ ||
ಕಡು ವಿರೋಧಿಗಳೊಡನೆ ಕಲಹವ |
ಬಿಡುವೆನೆಂಬೀ ತೆರದ ನಿನ್ನಯ |
ನಡತೆ ಸಲ್ಲದು ಧುರದಿ ಮಾರ್ಗಣ ತೊಡುವನಲ್ಲಿನ್ನು || ೧೯೯ ||
ಧರೆದೊರೆಯೆ ಕೇಳಿತ್ತ ದನುಜಪ |
ರರಸ ಮಾಯದಿ ಮೋಹಿಸಲು ದಿನ |
ಕರತರಳ ಧುರಕಂಕಣವ ಕುರುವರಗೆ ಬಿಸುಟೆಂದ ||
ಸುರನದಿಜ ಸೈಂಧವನು ಮುಂತಾ |
ಗಿರುವ ಷಡುರಥರೆಲ್ಲ ಪೋದರು |
ಧುರದಿ ಪೊರೆವೆನುತಾಗ ಶೌರ್ಯದೊಳ್ಮೆರೆದು ಫಲವೇನು || ೨೦೦ ||
ರಾಗ ನೀಲಾಂಬರಿ ರೂಪಕತಾಳ
ಸೂರ್ಯಸುತನು ಬಲು | ಕೋಪಿಸಿ ಭೂಪನ |
ಕಾರ್ಯದಿ ಮೋಹಿಸಿ | ನಡೆಯೆ ದಾನವನು || ೨೦೧ ||
ಬಂದು ನೋಡುತ್ತ ರವಿ | ಕಂದ ಯುದ್ಧವ ಬಿಟ್ಟ |
ನೆಂದು ಮನದಿ ಸಾಂದ್ರ | ನಂದವ ಪಟ್ಟ || ೨೦೨ ||
ಜಗಳ ಜಯಿಸಿದ ಧೊರೆ | ಯೆಂದಾಗ ಮಾರ್ಬಲವು |
ಸೊಗಸಿನಿಂದಲಿ ಜಯ | ಭೇರಿ ಬಡೆದವು || ೨೦೩ ||
ಮೋದದ ನಿನದವ | ಕೇಳುತ ಕುಂಭಜನು |
ಮೇದಿನೀಶನ ಕೇಳ್ದ | ಜಯದ ಬೀಜವನು || ೨೦೪ ||
ಅರಿಯೆ ನಾನಿದನೆಂದು | ಕುರುರಾಯ ಭಯದಿಂದ |
ಮರುಗುತ್ತ ರವಿಜನ | ಹುಡುಕಲೀಕ್ಷಿಸಿದ || ೨೦೫ ||
ನೋಡಲು ರವಿಜ ಸೈ | ನ್ಯದಿ ಕಾಣದಿರುತಿರಲ್ |
ರೂಢಿಪ ವಿಪ್ರರು | ನಡೆದರ್ ಶಿಬಿರಕೆ || ೨೦೬ ||
ಸಡಗರದಿಂದಲಾ | ಜಡಜಾತಬಾಂಧವನ |
ಹುಡುಗನೆಡೆಗೆ ಬರೆ | ಮಲಗಿರಲವನ || ೨೦೭ ||
ಪಿಡಿದು ಕೌರವನೆಬ್ಬಿ | ಸಲು ಏಳದಿರುತಿರಲ್ |
ಕೊಡನ ತರಳ ನೀ ನೊಂ | ದೆಯೊ ಪೇಳೆನಲು || ೨೦೮ ||
ಭಾಮಿನಿ
ಕಿಡಿಗೆದರಿ ಕೋಪದಲಿ ರವಿಸುತ |
ಸಿಡಿಲಗರ್ಜನೆಯಂತೆ ವಿಪ್ರನೊಳ್ |
ನುಡಿದನೆಮ್ಮನು ಜರೆವುದೇಕೈ ಕಡು ವಿರೋಧಗಳ ||
ಬಿಡುವೆ ಪಾಂಡವರೊಡನೆ ಹಿತದಲಿ |
ಕೊಡುವೆ ಮೇದಿನಿಭಾಗವನುಯೆಂ |
ದೊಡೆಯ ಪೇಳ್ದುದರಿಂದ ಯುದ್ಧವು ಸಡಲಿಸಿರಲಾಯ್ತು || ೨೦೯ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಏನ ಪೇಳುವೆ ಬರಿದೆ ಭ್ರಮಿಸಿದೆ | ವಾಣಿಯಹುದೇ ಬಿಡು ಬಿಡಾ ನುಡಿ |
ಕ್ಷೆಣಿ ಪಾಂಡವರಿಂಗೆ ಕೊಡುವೆನೆ | ಭಾನುಕಂದ || ೨೧೦ ||
ಕನಸು ಕಂಡವನಂತೆ ನುಡಿವೆಯೊ | ಸನುಮತಿಯು ತನಗಾಪುದೇ ಯಮ |
ತನುಜರಲಿ ಸೌಹಾರ್ದ ಬರುವುದೆ | ರಣದ ನಡುವೆ || ೨೧೧ ||
ಕಲಶಜನು ಯೋಚಿಸುತ ಪೇಳಿದ | ನಿಳೆಯಪಾಲನೆ ಕೇಳು ಪಾಂಡವ |
ಬಳಗ ರಕ್ಕಸ ಗೆಯ್ದ ಮಾಯದ | ಬಲುಮೆಯಹುದೈ || ೨೧೨ ||
ಭೇದಬುದ್ಧಿಯು ಜನಿಸಿ ನಮ್ಮೊಳಗಾದುದೀ ತೆರವೆಂದು ಪೇಳಲು |
ಮೇದಿನೀಶನು ಮರುಗೆ ರವಿಜನು | ಕಾದಲೆದ್ದ || ೨೧೩ ||
ವಾರ್ಧಕ
ಕ್ಷೆಣಿಪನೆ ಕೇಳಾಗ ರಾಧೇಯ ರೋಷದೊಳು |
ಬಾಣಚಯ ಧನುಶರವ ಕೊಂಡೇಳೆ ಭೂಸುರನು |
ಧ್ಯಾನಿಸುತ ಪೇಳಿದನು ಸಾನುರಾಗದೊಳರ್ಕಸೂನುವಿನ ಸಮ್ಮೇಳದಿ ||
ಮಾನನಿಧಿ ಕೇಳ್ ನೀನು ದಾನವನ ಸಾಹಸಗ |
ಳಾಣಿಶರಗಳ ತೊಟ್ಟು ಕಾಣಗೊಡದಂತೆ ನೀ |
ಶಾಣೆತನ ತೋರ್ದಾಗ ತಾನು ಬಾರದೆ ಧುರದ ಕ್ಷೆಣಿ ಬಿಡಲಾಗದೆಂದ || ೨೧೪ ||
ಭಾಮಿನಿ
ಸೇನೆಗೊಡೆಯನ ನುಡಿಯ ಕೇಳುತ |
ಭಾನುತನುಜನು ಸನುಮತದಿ ರಿಪು |
ಚೂಣಿಸಮ್ಮುಖಕೆಂದು ಪೊರಡಲು ಆ ನರಾಶನಿಯು |
ಮಾನವರ ದೃಕ್ಪಥಕೆ ಮಾಯದಿ |
ಕಾಣಗೊಡಿಸದೆ ಕೇಳುತಲಿ ಧುರ |
ಕಾನುವರೆ ನಿಶಿಯೊಳಗೆ ಮಾನವರೆಂದು ಯೋಚಿಸಿದ || ೨೧೫ ||
ರಾಗ ಮಾರವಿ ಏಕತಾಳ
ದಿನನಾಥನ ಸುತ ಧನುವೆತ್ತುತಲರಿ | ಸನುಮುಖಕಯ್ತಂದು ||
ದನುಜನೊಳರುಹಿದನಂದಿನ ಮಾಯವ | ಸೆಣಸಿ ತೀರ್ಚುವೆನೆಂದು || ೨೧೬ ||
ಸೆಣಸುವ ಸಾಹಸ ನಿಲಿಸುವೆ ನಾ ಮುಂ | ದಣದಾಹವದೊಳಗೆ ||
ಎಣೆಗಾರರು ತ್ರಿಭುವನದೊಳಗಂಧಕ | ನಣುಗನಿಗಿನ್ಯಾರೈ || ೨೧೭ ||
ಬಾಯಬಡಿಕತನವೇತಕೆ ನಿನ್ನನು | ಕಾಯ್ವರ ಕರೆಸೆಂದು ||
ಘಾಯವಡದ ಹುಲಿಯಂದದಿ ಬಹುತರ | ಸಾಯಕ ಬಿಡುತೆಂದ || ೨೧೮ ||
ಭೂರಿ ಶರಗಳುರಿಗಾಪಿಶಿತಾಶನ | ಪಾರಗೊಳದೆ ಭರದಿ ||
ಹೇರಂಬನ ಪಿತನಿತ್ತಿಹ ಶಕ್ತಿಯ | ನಾರುಭಟಿಸುತೆಚ್ಚ || ೨೧೯ ||
ಭಾಮಿನಿ
ಬರುವ ಶತಯೋಜನದ ಶಕ್ತಿಯ |
ತರಣಿತನಯನು ಕಂಡು ಧೈರ್ಯದಿ |
ಶರಧಿಗರ್ಭದೊಳಿಪ್ಪ ಬಡಬಾನಲವೆ ಬರುತಿಹುದೊ ||
ಪರಿ ಪರಿಯ ಯೋಚನೆಯ ಗೆಯ್ವುತ |
ತಿರುಗಿ ತನ್ನೊಳಗರಿಯ ಶರವೆಂ |
ದರಿತು ರಥದೊಳಗಡರಿ ಪಿಡಿದನು ಕರದೊಳೇನೆಂಬೆ || ೨೨೦ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಶಕ್ತಿಯನು ಪಿಡಿದಾಗ ಕರ್ಣನು | ಚಿತ್ತದಲೆ ಧೃತಿಗೊಂಡು ಭೀಮನ |
ಪುತ್ರನಿಗೆ ಮಗುಳೆಸೆದ ತನ್ನಯ | ಸತ್ವದಿಂದ || ೨೨೧ ||
ಬಂದು ಶಕ್ತಿಯು ಭೈಮಿಯೇರಿದ | ಸ್ಯಂದನವ ಪುಡಿಗೆಯೈ ರಥಿಕರ |
ವೃಂದ ನಡನಡುಗುತಿರೆ ಕಾಣುತ | ಲಂದುಭಟನು || ೨೨೨ ||
ಸಾಯಕವಗೊಂಡಾಗ ವಿವಿಧೋ | ಪಾಯದಲಿ ಶಕ್ತಿಯನು ವಂಚಿಸಿ ||
ವಾಯುಮಾರ್ಗದಿ ಚರಿಸಿದನು ಖಗ | ರಾಯನಂತೆ || ೨೨೩ ||
ಇರಲು ಭಾಸ್ಕರಭವನು ಮಾಯದ | ಪರಿಯನರಿಯದೆ ಹರುಷಗೊಳ್ಳುತ |
ಲರಿಜಯವು ತನಗಾಯಿತಿಂದಿನ | ಧುರದೊಳೆಂದು || ೨೨೪ ||
ಈ ತೆರದಿ ಭಾವಿಸುತ ಭಾಸ್ಕರ | ಜಾತನಿರುತಿರಲಿತ್ತ ಭೈಮಿಯು |
ವಾತಪಥದಲಿ ನಿಂತು ಬಹುಶರ | ವ್ರಾತವನ್ನು || ೨೨೫ ||
ಬಿಟ್ಟು ರಥಿಕರನಟ್ಟಿದನು ಸುರ | ಪಟ್ಟಣಕೆ ನಿಮಿಷಾರ್ಧದಲಿ ಜಗ |
ಜಟ್ಟಿ ಪಾಂಡವರಿಷ್ಟ ಗೆಯ್ದನು | ದಿಟ್ಟತನದಿ || ೨೨೬ ||
ಭಾಮಿನಿ
ಅಂಗುಳದ ದೇಹಗಳು ವಿಧವಿಧ |
ದಂಗಗಳ ಧರಿಸುತಲಿ ನೋಳ್ಪರ |
ಕಂಗಳಿಗೆ ಭಯ ಜನಿಸಿತಾ ರಣರಂಗದೊಳಗಂದು ||
ಅಂಗನೃಪತಿಯು ಕಂಡು ನಿಜ ಸ |
ರ್ವಾಂಗ ಪುಳಕಿತನಾಗಿ ವರನೂ |
ರಂಗವೇರುತ ದಿವ್ಯತ್ವಾಷ್ಟ್ರಾಸ್ತ್ರವನು ಬಿಡುತೆಂದ || ೨೨೭ ||
ರಾಗ ನೀಲಾಂಬರಿ ರೂಪಕತಾಳ
ಎಷ್ಟು ಭಾರಿ ಖಳನ ಮಾಯ | ದಟ್ಟುಳಿಯನು ತೆಗೆವೆನೆನುತ |
ತ್ವಾಷ್ಟ್ರ ಶರವ ಬಿಡಲು ನಮ್ಮ | ನಟ್ಟಿ ಬರುವನು ||
ತ್ವಾಷ್ಟ್ರಶರವ ಬಿಡಲು ನಮ್ಮ | ನಟ್ಟಿ ಬರುವ ಭೈಮಿಯನ್ನು |
ಸೃಷ್ಟಿಯೊಳಗೆ ಗೆಲುವನ್ಯಾವ | ದಿಟ್ಟನಿರುವನು || ೨೨೮ ||
ಮುನ್ನ ಕುರುಕುಲೇಶ ಭೂಮಿ | ಯನ್ನು ಬಯಸಿ ಪ್ರೇಮದಿಂದ |
ಎನ್ನ ನಂಬಿದವನ ಭಾಷೆ | ಯನ್ನು ಸಲಿಸದೆ ||
ಎನ್ನ ನಂಬಿದವರ ಭಾಷೆ | ಯನ್ನು ಸಲಿಸದೀಗ ಭಾರ್ಗ |
ವನ್ನ ಸೇರಿ ಕಲಿತ ವಿದ್ಯ | ತಣ್ಣಗಾಯಿತೆ || ೨೨೯ ||
ಭಾರಿ ಭಾರಿ ಸಾರಶರವ | ಭೂರಿ ಜಪಿಸಿ ಬಿಡಲು ದೈತ್ಯ |
ಸೂರೆಗೊಂಡನೆಂತು ಜಯದ | ಪಾರ ದೊರೆವುದೆ ||
ಸೂರೆಗೊಂಡನೆಂತು ಧುರದ | ಪಾರ ದೊರೆವುದಲ್ಲದೀಗ |
ಧೀರನಾಗಿ ಕದನ ಬಿಟ್ಟಿ | ನ್ಯಾರ ಸೇರಲಿ || ೨೩೦ ||
ಎಲ್ಲಿ ನೋಡಲಿಲ್ಲ ವೈರಿ | ಬಿಲ್ಲುಧ್ವನಿಯ ಗೆಯ್ವನಲ್ಲಿ |
ಕೊಲ್ಲಲಿವನು ಮಡಿವನಲ್ಲ | ಹುಲ್ಲುಶರದಲಿ ||
ಕೊಲ್ಲಲಿವನು ಮಡಿವನಲ್ಲ | ಬಲ್ಲಿದವನು ತಾನೆನುತ್ತ |
ನಿಲ್ವೆನಲ್ಲದೀಗ ಧುರವು | ಸಲ್ಲದಿವನೊಳು || ೨೩೧ ||
ಯುಕ್ತಿಯೊಳಗೆ ರಿಪುವ ಗೆಲಿವ | ಹೊತ್ತಿದಲ್ಲ ದಿಟವು ದೈತ್ಯ |
ತುತ್ತುಗೊಂಬನೇನೊ ಬಹಳ | ಶಕ್ತಿಯಿಂದಲಿ ||
ತುತ್ತುಗೊಂಬನೇನೊ ಬಹಳ | ಶಕ್ತಿಯಿಂದ ಖಳನ ಗೆಲಲು |
ಕೃತ್ತಿವಾಸಗಾದಡೊಮ್ಮೆ | ಸತ್ತ್ವಸಾಲದು || ೨೩೨ ||
ಭಾಮಿನಿ
ಇಂತೆನುತ ರಣನೆಲದಿ ಚಿಂತಿಸಿ |
ಪಂಥ ತಾ ಬಿಡೆನೆಂದು ರವಿಜನು |
ನಿಂತಿರಲು ದೈತೇಯ ಮಾಯವನಾಂತು ನಡೆತಂದು ||
ಸಂತಸದಿ ಶರಪಂಡಿತಾಕೃತಿ |
ಯಂತೆ ತೋರಿಸುತರ್ಕಸುತ ತಾ |
ನಿಂತ ಬಳಿಗಯ್ತಂದು ಮೋಹಿಸುತೆಂದನವನೊಡನೆ || ೨೩೩ ||
ರಾಗ ಕೇದಾರಗೌಳ ಅಷ್ಟತಾಳ
ಭಾನುಜ ಕೇಳ್ ಕುರು ಸೇನೆಯೊಳಗೆ ನಿನ | ಗಾನುವರುಂಟೆ ನೋಡು ||
ದಾನವನೊಳು ಸರಿಸರಿ ಕದನದಿ ಬಹು | ಮಾನ ಪಡೆದೆ ಜಗದಿ || ೨೩೪ ||
ಕಂಡು ಕಪಟಯುದ್ಧದಿಂದ ನಮ್ಮಯ ಧುರ | ಬಂಡಾಯಿತಯ್ಯ ನೋಡು ||
ಚಂಡ ದಾನವ ಮಾಯದಿಂದಲಿಂದ್ರನ ಶಕ್ತಿ | ಕೊಂಡೊಯ್ವನೆಂದರಿತು || ೨೩೫ ||
ಬಂದೆ ನಿನ್ನೆಡೆಗೆ ನಾನಿಂದುಶೇಖರನಾಣೆ | ಸಂದೇಹಿಸದೆ ಶಕ್ತಿಯ ||
ಇಂದೆನ್ನೊಳಿತ್ತರೆ ದನುಜನ ಜಯದ ಮೇಲ್ | ತಂದುಕೊಡುವೆ ದಿಟವು || ೨೩೬ ||
ನುಡಿದ ಮಾತಿಗೆ ರವಿತರಳ ಸಂಶಯಗೊಳ್ಳೆ | ಕಡುಕೋಪದಿಂದಲಾಗ ||
ನಡೆವೆ ನಾನೆನುತೇಳಲ್ ಮೋಹಿಸುತಲಿ ವೀರ | ತಡೆಯೆ ಕಪಟ ವಿಪ್ರನ || ೨೩೭ ||
ಮಾಯಾಸಂಗರದಲ್ಲಿ ಮತಿಗೆಟ್ಟು ಮಲಗಿರ್ಪ | ರಾಯರ ನೋಡುತಲಿ ||
ವಾಯ ತಪ್ಪಿತು ಧುರದೊಳಗೆನುತಲಿ ಕುರು | ರಾಯ ಕರ್ಣನ ಬಳಿಗೆ || ೨೩೮ ||
ಬರುತ ಕರ್ಣನ ಕಂಡು ಪಿಡಿದಪ್ಪಿ ಪೇಳ್ದನು | ದುರುಳ ಮಾಯದಿ ನಮ್ಮಯ ||
ವರರಥಿಕರನೆಲ್ಲ ಶರಮಳೆಗರೆದೀಗ | ಬೆರಗು ಮಾಡಿದನಿಂದಿಲಿ || ೨೩೯ ||
ಗೆಲ್ಲಲಿವನ ಪೂರ್ವದಲಿ ಶಚಿಯ ಧವ | ಗಲ್ಲಿ ಕವಚ ಕುಂಡಲ ||
ಎಲ್ಲ ಕೊಡುತ ತಂದ ಬಲ್ಲಿದ ಶಕ್ತಿಯ | ಬಿಲ್ಲಿನೊಳ್ತೊಡು ಬೇಗದಿ || ೨೪೦ ||
ಪಾರ್ಥಗಿಟ್ಟಿಹಶಕ್ತಿ ಬಿಡೆನನ್ಯರಿಗೆ ಕುರು | ಸಾರ್ಥದೊಡೆಯ ಕೇಳಯ್ಯ ||
ತೀರ್ಥಯಾತ್ರೆಗೆ ಪೂರ್ವದೊಳಗೊಬ್ಬ ಚಕ್ರಿಯ | ನರ್ಥಕ್ಕೆ ಮಾರಿದಂತೆ || ೨೪೧ ||
ಭಾಮಿನಿ
ಕೇಳುತಲಿ ಕೃತ್ರಿಮದ ಭೂಸುರ |
ಮೇಲುವರಿದುದು ಕಾರ್ಯವೆನುತಲಿ |
ಗೋಳುಗುಡಿಸುವೆ ಕರ್ಣ ಕುರುನರಪಾಲರೊಳಗೆಂದು ||
ಕಾಳಗದಿ ಕಲಿಕರ್ಣ ನಿನ್ನಯ |
ಸೋಲುಗೊಡಿಸುವೆನೆಂದು ಬಂದಿಹ |
ಖೂಳನಿವನಾಡಿದುದ ಕೇಳದೆ ಕೊಡುವುದೆನಗೆಂದ || ೨೪೨ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಕಪಟ ವಿಪ್ರನ ನುಡಿಯ ಕೇಳುತ | ತಪನಸುತ ಬಂಧಿಸುತ ಭ್ರುಕುಟಿಯ |
ಕುಪಿತನಾಗುತ ಕುರುಕುಲೇಶಗೆ | ವಿಪುಲಹತಿಯ || ೨೪೩ ||
ಕೊಡಲು ಕಂಗೆಡುತಾಗ ಕೌರವ | ನುಡಿದನೆಲೆ ರಾಧೇಯ ನಮ್ಮನು |
ಬಡಿವೆ ಏತಕೆ ನಿಜವನರಿಯದೆ | ತಡೆತಡೆನುತ || ೨೪೪ ||
ಅಂಗರಾಜ್ಯವನಿತ್ತುದಕೆ ನ | ಮ್ಮಂಗವನು ಪುಡಿಗೆಯ್ದೆ ಸಾಕೆಂ |
ದಂಗುಲಿಯ ಮುಖಕಿಡುತ ನುಡಿದನು | ತ್ತುಂಗರವದಿ || ೨೪೫ ||
ಆ ಮಹಾಧ್ವನಿ ಕೇಳುತಶ್ವ | ತ್ಥಾಮ ಬಂದಾ ಕ್ಷಣದಿ ಸಂಗರ |
ಭೂಮಿಯಲಿ ಕೌರವನ ಬಿಡಿಸಲು | ದ್ದಾಮ ಬಲನು || ೨೪೬ ||
ಭಾಮಿನಿ
ಅರುಹಿದನು ಕುರುದೊರೆಯ ದ್ರೋಣನ |
ತರಳನೊಳಗಾ ವೇಳ್ಯದಲಿ ತಾ |
ಮರುಗುತಲಿ ಸಖ ಕರ್ಣನೆನ್ನನು ಬರಿದೆ ಬಡಿದಿರ್ಪ ||
ದುರುಳ ರಕ್ಕಸ ನಿಮ್ಮ ಜನಕನ |
ತೆರದಿ ವೇಷವ ಧರಿಸುತೆನ್ನನು |
ತರಣಿಜಾತಗೆ ಕಪಟದೊರೆಯೆಂದೊರೆದು ಮೋಹಿಸಿದ || ೨೪೭ ||
i�}�moP���eme-font: minor-latin’>ಶೋಕದೊಳ್ ಧರೆಗೆ ಮಕುಟವನು ||
ಭರದಿ ಚಾಚುತ ಬೀಳುತಿರುವುದ |
ತರಣಿಸುತ ತಾ ನೊಡುತಲಿ ಮನ |
ಕರಗಿ ಬಂದೆಬ್ಬಿಸುತ ಪೇಳಿದ ದೊರೆಗೆ ಮೂದಲಿಸಿ || ೧೫೯ ||
ರಾಗ ಯರಕಲಕಾಂಭೋಜ ಝಂಪೆತಾಳ
ಎಲವೊ ಕೌರವರರಸನರುಹುವುದ ನೀ ಕೇಳು | ಕಲಹದೊಳು ಮಲಗಿರ್ಪ ಸುಭಟರನು ಕಂಡು ||
ಅಳಲದಿರು ಮನದಿ ಕೊಳುಗುಳದೊಳಗೆ ಮೈ ಮರೆವು | ದಿಳೆಯಪಾಲರಿಗೆ ಕೈವಲ್ಯಕಾರಣವು ||೧೬೦||
ಸತತ ಸಂಗರದೊಳಗೆ ಮತಿಗೆಟ್ಟು ಮಲಗಿ ಭೂ | ಪತಿಯಾಗಿ ಮಲಗಿರ್ಪೆಯಲ್ಲೊ ನೀನಿಂದು ||
ಅತುಳ ಬಲಗಳನು ಪರಿಮಿತಿ ತಪ್ಪಿ ಸವರುವ | ಸ್ಥಿತಿ ನೋಡಿ ಬಳಲುತಿಹ ಗತಿಯಾಯಿತಲ್ಲೊ ||೧೬೧||
ನಾವು ಕದನವ ಮಾಡಲೆಂದರೀ ದೊರೆಪತಿಯ | ಸೋವು ನೋಡುತಲಿರ್ಪ ಪಾವಮಾನಿಯನು||
ಆವ ಭೂಪನು ತಡೆಯುವನು ಭೂಪತಿಯನಾರು | ಕಾವಾತ ಭೈಮಿಯನು ಗೆಲುವಾತನಾರು ||೧೬೨||
ಹೊಳೆಯ ತರಳನು ಪೇಳ್ದ ಸರಳಮಾರ್ಗವ ಬಿಟ್ಟೆ | ಇಳೆಗಾಗಿ ಸಹಜರನು ಅಡವಿಯೊಳಗಿಟ್ಟೆ ||
ಬಳಲುವುದು ನೀನಿಂದು ಕೊಳುಗುಳದಿ ಜಯವೆಂತೊ | ತಿಳಿಯೆ ನಾ ನಳಿನಾಕ್ಷನೊಲವೆಂತೊ ನಿನಗೆ ||೧೬೩||
ಭಾಮಿನಿ
ರವಿಜನೆಂದುದ ಕೇಳ್ದು ಕೌರವ |
ಪವಿಧರನವೊಲ್ ಧೈರ್ಯದಲಿ ತಾ |
ವಿವಿಧ ವ್ಯಸನವ ಬಿಟ್ಟು ಕರ್ಣನ ಜರೆವುತಿಂತೆಂದ ||
ಅವಿಯ ಹೆಬ್ಬುಲಿಗಿತ್ತ ತೆರದೊಳ |
ಗಿವನ ರಿಪುಬಲದೊಳಗೆ ಸಿಲುಕಿಸು |
ತವನಿಗರ್ಪಿಸುತುಳಿದ ಷಡ್ರಥರಿದ್ದು ಫಲವೇನು || ೧೬೪ ||
ಕುರುಪತಿಯ ನುಡಿ ಕೇಳುತಲಿ ರವಿ | ತರಳ ಕೋಪದೊಳಾಗ ಧನು ಶರ |
ಕರದಿ ಪಿಡಿದಿಂತೆಂದ ಭೂಪತಿಯೊಡನೆ ಗರ್ಜಿಸುತ ||
ಧುರದೊಳಗೆ ದಾನವನ ಕೊರಳನು | ತರಿದ ಹೈಡಿಂಬಿಯನು ನೈಋತ ||
ಪುರಕೆ ಕಳುಹುವೆನೆಂದು ನಂಬಿಗೆಯಿತ್ತನಾ ಕರ್ಣ || ೧೬೫ ||
ಕಂದ
ಈ ಪರಿಯಲಿ ರವಿಜಂ ಕುರು |
ಭೂಪನ ಸಂತಯಿಸುತ ಜಯ ಧೈರ್ಯೋಕ್ತಿಗಳಿಂ ||
ದಾ ಪುರುಹೂತಸುತನ ಪ್ರ |
ತಾಪವ ನಿಲಿಸುವೆನೆಂದಾರ್ಭಟಿಸುತಯ್ತಂದಂ || ೧೬೬ ||
Leave A Comment