ಭಾಮಿನಿ

ಹರಿಯ ಮಾಯದ ನುಡಿಗೆ ಧರ್ಮವ |
ಮರೆತು ಧರ್ಮಜನೆಂದನಿಂದಿನ |
ಧುರದೊಳಶ್ವತ್ಥಾಮ ನಾಕಿಯ ಪುರಕೆ ತೆರಳಿದನು ||
ಕರಿಯುಯೆಂದೆನಲಾ ರಮಾಪತಿ |
ದರವ ಧ್ವನಿಯನು ಗೆಯ್ಯೆ ಕುಂಭಜ |
ಖರೆಯೊ ಪೇಳೆಂದೆನಲು ನಿಜ ನಿಜ ನಿಜವು ಗಜವೆಂದ  || ೩೩೫ ||

ಧರ್ಮಜನ ನುಡಿ ಕೇಳಿ ಕುಂಭಜ | ಮರ್ಮಭೇದಿತನಾಗಿ ಕದನದ |
ಕರ್ಮ ಸಾಕೆಂದೆನುತ ತನ್ನೊಳು ಯೋಚಿಸಿದನಂದು ||
ವರ್ಮ ಪಾಂಡವರಲ್ಲಿ ಬಿಡೆ ಸ | ದ್ಧರ್ಮದಲಿ ಗೆಲಲೆಮ್ಮ ಧೊರೆ ದು |
ಷ್ಕರ್ಮಿಯಾಗಿಹನಿಂತು ಪಾರ್ಥಗೆ ಸುಕೃತ ಕೂಡಿಹುದೊ  || ೩೩೬ ||

ಬಡತನದೊಳಾತ್ಮಜಗೆ ಕ್ಷೀರವ | ಕೊಡಲು ದಾರಿದ್ರ್ಯದಲಿ ಗೋವ್ಗಳ |
ಹುಡುಕುತಲಿ ಬರೆ ಹಸ್ತಿನಾವತಿಪುರದ ಬಳಿಗೆಂದು ||
ಪೊಡವಿಪತಿ ಧೃತರಾಷ್ಟ್ರ ಭೀಷ್ಮರು | ನಡತೆಗಳ ನೋಡುತಲಿ ತನ್ನಯ |
ಹುಡುಗನಿಗೆ ಕ್ಷೀರಾನ್ನ ಮೋದದಿ ಕೊಡುತ ಸಲಹಿದರು  || ೩೩೭ ||

ಮತ್ತೆ ಭೂಪತಿಯಣುಗರಿಗೆ ಸ | ರ್ವಾಸ್ತ್ರ ವಿದ್ಯವ ಕಲಿಸೆ ತಮ್ಮೊಳು |
ಲತ್ತೆಯಾಟದಿ ಪಾಂಡುಜರು ಸೋಲುತ್ತ ವನಕೆಂದು ||
ಅತ್ಯಧಿಕ ದುಗುಡದಲಿ ಪೊರಡಲು | ಹಸ್ತಿನೇಶನು ದ್ರೌಪದಿಯ ಬಾ |
ರಿತ್ತ ತನ್ನಂಕವನುಯೇರೆಂದೆನಲು ಮಾರುತಿಯು  || ೩೩೮ ||

ಬಡಿವೆ ನಿನ್ನಯ ತೊಡೆಯ ತಮ್ಮನ | ಒಡಲ ಪುಡಿಗೈಯ್ಯುವೆನು ದಿಟವೆಂ |
ದೊಡೆಯ ದುರ್ಯೋಧನಗೆ ಪೇಳಲು ನಡುಗಿ ನಮ್ಮಡಿಯ ||
ಬಿಡದೆ ನಮಿಸುತಲೆಂದ ನಿಮ್ಮಯ | ಹುಡುಗ ಭೀಷ್ಮಾದಿಗಳು ನಮ್ಮಯ |
ಕಡೆಗೆ ನೀವೆಂದವನ ಯುದ್ಧದಿ ಬಿಡುವೆ ತಾನೆಂತು  || ೩೩೯ ||

ವಿಷಸಹಿತ ಬಾಣಗಳು ತನ್ನೆದೆ | ಗೆಸೆದವೋಲಾ ದ್ರೋಣ ಧನುಶರ |
ಬಿಸುಟು ಕಾಂಚನರಥದಿ ಚಿತ್ರಾರ್ಪಿತನ ಭಾವದಲಿ ||
ಅಸುರಹರ ಶ್ರೀಕೃಷ್ಣನಂಘ್ರಿಯ | ವಶದಿ ಮಾನಸವಿಟ್ಟು ಕಾಯವ |
ವಸುಧೆಯೊಳಗೀಡಾಡಿ ಸುರಮಂಡಲಕೆ ತೆರಳಿದನು  || ೩೪೦ ||

ರಾಗ ಮಾರವಿ ಏಕತಾಳ

ಏನೆಂಬೆನು ರಣಮಂಡಲದಲಿ ಮಹ | ದ್ರೋಣನ ಕಾಯವನು ||
ಕಾಣುತ ಧೃಷ್ಟದ್ಯುಮ್ನನು ದಿವ್ಯ ಕೃ | ಪಾಣವನೆತ್ತಿದನು  || ೩೪೧ ||

ಕಡಿವೆನು ಖಡ್ಗದಿ ಬಡಪಾರ್ವನ ಕೈ | ತಡೆವರು ಯಾರೆನುತ ||
ನುಡಿಯುತ ಮುಂದಡಿಯಿಡಲಾ ಪಾರ್ಥನು | ತಡಿ ತಡಿ ತಡಿಯೆಂದ || ೩೪೨ ||

ಈ ತೆರವೆಂದುದ ಕೇಳದೆ ಪಾರ್ಷತ | ಭೀತಿಯಿಲ್ಲದೆ ಭರದಿ ||
ಭೂತಳದೊಳಗಾ ದ್ರೋಣನ ಖಡ್ಗದಿ | ಘಾತಿಸುತಲಿ ಬಿಸುಟ  || ೩೪೩ ||

ರಾಗ ಯರಕಲಕಾಂಭೋಜ ಝಂಪೆತಾಳ

ಫಲುಗುಣನು ನೋಡುತ್ತ ಕುಂಭಜಾತನ ದೇಹ | ವಿಳೆಯ ಪಾಲಾಗಿರ್ಪ ಭವಣೆಗಳನಾಗ ||
ಬಳಲುತಲಿ ಶೋಕದೊಳಗಿಳೆಯೊಳಗೆ ಬಿದ್ದ ಗುರು | ಚೆಲುವ ದೇಹವ ನೋಡಿ ನುಡಿದ || ೩೪೪ ||

ಸೇನಾಧಿಪತಿಯೆ ನೀ ಕೇಳು ನಮ್ಮವರ ಗುರು | ಮಾನನಿಧಿಗಳನೀಗ ಏನ ಗೆಯ್ದಿರ್ಪೆ ||
ಮಾನಸದೊಳವರಷ್ಟ ಪದ್ಮಪೀಠದಿ ಕೃಷ್ಣ | ಧ್ಯಾನದಲಿ ಮೈಮರೆತ ಮುನಿಯ || ೩೪೫ ||

ಕಟುಕರಂದದಿ ನಮ್ಮ ಮಾತ ಕೇಳದೆ ಮರುಳೆ | ಕುಟಿಲಭಾವದೊಳಸ್ತ್ರಗುರುಗಳನು ತರಿದೆ ||
ಭಟನು ನೀನೆಂದರಿತು ಕೊಟ್ಟಿಹೆವು ಸೇನೆಗಳ | ಕಟಕದೊಡೆತನವ ತಾನಕಟ || ೩೪೬ ||

ರಾಗ ಸುರುಟಿ ಆದಿತಾಳ

ಶ್ವೇತವಾಹನ ಕೇಳು | ಎನ್ನಯ | ಮಾತನು ಸಮರದೊಳು ||
ನೀತಿಯೆ ಭೂರಿಶ್ರವಸನ ಕರವನು | ಘಾತಕರಂದದಿ ತರಿದೆಯೊ ನೀನು || ೩೪೭ ||

ಭಾರಿ ಮಾತುಗಳೇಕೊ | ನಡತೆ ವಿ | ಚಾರಿಸಿ ನೋಡಿದಕೊ ||
ಶೂರ ಸಾತ್ಯಕಿ ಮೆಯ್‌ಮರೆಯಲು ಶಿರವನು | ಕೂರಸಿಲರಿವುದ ತರಿದಿಹೆ ಕರವನು || ೩೪೮ ||

ಸವ್ಯಸಾಚಿ ತಾಳು | ದ್ರೋಣನು | ಕ್ರವ್ಯಾದನ ವೋಲು ||
ದಿವ್ಯಾಸ್ತ್ರದಿ ಪಿತ ಮೊದಲಾಗಿಹರನು | ಹವ್ಯವಾಹನ ತೆರ ಭಕ್ಷಿಸೆ ಬಿಡುವೆನೆ || ೩೪೯ ||

ಫಡ ದ್ರುಪದಜ ನೀನು | ಕಡಿದೆಯೊ | ಕೊಡನ ಕುವರನನ್ನು ||
ನಡೆ ನಿನ್ನಯ ವಿಪ್ರಘ್ನನ ನೋಡಲು | ಜಡಜಸಖನ ಮೊಗವೀಕ್ಷಿಸ ಬೇಕೈ || ೩೫೦ ||

ಅಂಗದಿ ಮಾರ್ಗವನು | ಕೊಟ್ಟು ಮ | ತಂಗಜಮಿಗೆ ತಾನು ||
ಭಂಗವ ಪಡುವವೋಲಾಯಿತು ದುರ್ನುಡಿ | ತಂಗಿಯ ಕೊಟ್ಟುದರಿಂದಲಿ ಸಹಿಸಿದೆ || ೩೫೧ ||

ಸಿಟ್ಟಿಲಿ ಫಲುಗುಣನು | ಪೇಳಿದ | ನಿಷ್ಠುರ ನುಡಿಗಳನು ||
ಎಷ್ಟು ನುಡಿವೆ ಸಾಕೀ ಕ್ಷಣ ನಡೆನಡೆ | ದೃಷ್ಟಿಯೊಳೀಕ್ಷಿಸಲಾರೆನು ನಿನ್ನನು || ೩೫೨ ||

ಭಾಮಿನಿ

ದುಷ್ಟ ನುಡಿಗಳ ಕೇಳಿ ಪಾರ್ಷದ |
ಧೃಷ್ಟದ್ಯುಮ್ನನು ಕೋಪದಲಿ ತಾ |
ನಿಟ್ಟುಸಿರ ಬಿಡುತೆಂದ ಸಹಜೆಯ ಪುಟ್ಟ ಬಾಲಕರ ||
ಇಷ್ಟ ಸಾಧಿಪೆನೆಂದು ಬರುತಿರ |
ಲಿಷ್ಟು ಪೇಳಿದೆಯಲ್ಲೊ ಬವರದಿ ||
ದಿಟ್ಟತನ ತೋರ್ದುದಕೆ ಫಲವೆಂದೆನಲು ಸಾತ್ಯಕಿಯು  || ೩೫೩ ||

ರಾಗ ನೀಲಾಂಬರಿ ಅಷ್ಟತಾಳ

ದ್ರುಪದನಂದನನೆ ಕೇಳು | ದ್ರೋಣನ ಶಿರ | ಕಪಟದಿ ಕಡಿದೀಗಳು ||
ವಿಪರೀತ ಮಾತುಗಳಾಡುವ ವಿಪ್ರಘ್ನನ | ಶಪಥದಿ ಕಡಿವೆ ನೋಡು || ೩೫೪ ||

ಘಾತಕವೃತ್ತಿಯೊಳು | ಜೀವಿಪೆಯಲ್ಲೊ | ಸಾತ್ಯಕಿಯನ್ಯರೊಳು ||
ಪಾತಕವೆಣಿಸುವೆ ಭೂರಿಶ್ರವನ ಪಾರ್ಥ | ಘಾತಿಸೆ ಕೊಂದೆಯಲ್ಲೊ  || ೩೫೫ ||

ಸೇನಾಧಿ ಪತ್ಯವನ್ನು | ಕೈಕೊಳ್ಳುತ್ತ | ವಾನರಕೇತನನು ||
ಜಾಣನೆಂದೆಣಿಸುತ್ತ ಜಗಳಗೆಯ್ದರೆ ಯಮ | ಠಾಣ್ಯವ ತೋರ್ಪೆನಿನ್ನು || ೩೫೬ ||

ಭಾಮಿನಿ

ಇಂತು ಸಾತ್ಯಕಿ ದ್ರುಪದತರಳರು |
ನಿಂತು ಜೊತೆಯಲಿ ಕಾದಲಾ ಕ್ಷಣ |
ಕಂತುಜನಕನು ನೋಡಿ ಬೇಗದಿ ಭೀಮ ಬಿಡಿಸೆನಲು ||
ಪಂಥವೇಕೆಂದೆನುತ ಭೀಮನು |
ಸಂತವಿಸಿ ನೀವೆಂದೆನುತಲುರೆ |
ದಂತಿರಾಜನ ತೆರದೊಳೀರ್ವರ ನಿಲಿಸುತಿಂತೆಂದ  || ೩೫೭ ||

ರಾಗ ಭೈರವಿ ಅಷ್ಟತಾಳ

ಕೇಳಯ್ಯ ಪಾರ್ಥ ಕೇಳಯ್ಯ |  ||ಪ||

ಕೇಳಯ್ಯ ಪಾಂಚಾಲಸುತ ಸಾತ್ಯಕಿಯರು | ಕಾಳಗಕನುವಾಗುತಿರ್ಪರಲ್ಲಯ್ಯ ||
ಪಾಳಯದೊಳು ಕಡಿದಾಟವಿದೇನು | ಪೇಳದೆ ಬುದ್ಧಿಯ ಕುಳಿತೆಯಲ್ಲಿನ್ನು || ೩೫೮ ||

ಕೇಳಲೀ ವಾರ್ತೆಯ ದ್ರುಪದಜೆ ನಮ್ಮ | ಮೇಲೆ ಕೋಪಿಸುವಳೊ ಏನೆಲೊ ತಮ್ಮ ||
ಕಾಳಗದೊಳು ಗುರುಬಂಧುಗಳೊಳಗೆ | ಸೋಲಬಹುದೆ ಕ್ಷತ್ರಿಪದ್ಧತಿಯೊಳಗೆ || ೩೫೯ ||

ಬಾಲಕನಲ್ಲವೆ ದ್ರುಪದನ ಕಂದ | ಪೇಳಿದ ವಚನದಿ ಕ್ರೋಧ ಬೇಡೆಂದ ||
ಕಾಳಗಕನುವಾಗಿ ತಂದಿರ್ಪ ಸುಬಲ | ಪಾಲಕನೊಳು ಕೋಪಿಸಲು ಬೇಡ ಬಾಲ || ೩೬೦ ||

ಭಾಮಿನಿ

ವಿಧವಿಧದ ಬೋಧನೆಯ ಭೀಮನು |
ಕದನರಂಗದಿ ಪೇಳ್ದು ಪಾರ್ಥಗೆ |
ಮೃದುಳ ವಾಕ್ಯವನುಸಿರಿ ಸಾತ್ಯಕಿದ್ರುಪದಸುತರಿಂಗೆ ||
ಅಧಿಕ ಮೈತ್ರಿಯ ಕೊಳಿಸಲಿತ್ತಲು |
ವಿಧುಕುಲೇಶ ಕಿರೀಟಿ ಹರಿಯೊಳು |
ಮದಗಜದವೋಲ್ ಬರುವ ದ್ರೌಣಿಯ ತಡೆವರಾರೆನಲು  || ೩೬೧ ||

ರಾಗ ಜಂಜೂಟಿ ಆದಿತಾಳ

ದ್ರೋಣಪುತ್ರನನ್ನು ತಾನೆ ತಡೆವೆ ಪಾರ್ಥ | ರಣದಿ |
ಜಾಣ ತಾನೆ ಭೀಮನಿರಲು ಶೋಕ ವ್ಯರ್ಥ  || ೩೬೨ ||

ತ್ರಾಣವಿರಲು ಧುರದೊಳಶ್ವತ್ಥಾಮ ಬೇಗ | ಬರಲು |
ಶಾಣೆತನವನೆಲ್ಲ ತೋರ್ಪೆನರಿಯೊಳೀಗ  || ೩೬೩ ||

ಇನಿತು ಪೇಳಲ್ ಬಂದು ಕೃಪನು ಭಾವನನ್ನು | ಕರೆದು |
ಕುಣಪ ಖಂಡಿಸಿದುದ ನೋಡಿ ಮನದಿ ತಾನು  || ೩೬೪ ||

ಅಹಹ ಏನಿದೇನು ದ್ರೋಣಕಾಯವನ್ನು | ಕಡಿದ |
ಕುಹಕರಿಂದು ಬಿಡರೆನ್ನುತ್ತ ನಡೆದ ತಾನು  || ೩೬೫ ||

ರಾಗ ಸುರುಟಿ ಅಷ್ಟತಾಳ

ಅಷ್ಟರೊಳಗೆ ಕೃಪನೊಳ್ ಧೃತ | ರಾಷ್ಟ್ರಸುತನು ಬಂದು ನಮ್ಮ |
ಬಿಟ್ಟು ಭಯದಿ ಪೋಗಲೀಗ | ಕಷ್ಟವೇನು ಪೇಳಿರೆಂದ  || ೩೬೬ ||

ಅಂದುದನ್ನು ಕೇಳಿ ಕೃಪನು | ಕುಂದಿ ಮರುಗಿ ಪೇಳ್ದ ದ್ರುಪದ |
ಕಂದ ತಾನು ದ್ರೋಣಾ | ತ್ಯಂತ ಶ್ರೇಷ್ಠ ಗುರುಗಳೆಂದು |
ಪಂಥದಿಂದ ಕಾದಿ ಪೋದ | ರಿಂತು ನಮಗೆ ಕದನವೇಕೈ  || ೩೬೭ ||

ಭಾಮಿನಿ

ಎನಲು ಕುರುಬಲವೆಲ್ಲ ಮರುಗಲು |
ಕನಲುತಾರ್ಭಟಿಸುತ್ತ ದ್ರೋಣನ |
ತನಯನಾ ವೇಳೆಯದಲಿ ಕಲ್ಪದ ಸಿಡಿಲಿನಂದದಲಿ ||
ಘನ ಪರಾಕ್ರಮದಿಂದ ಬಂದಾ |
ಕ್ಷಣದಿ ಭೂಪನ ಭುಜವ ಪಿಡಿಯುತ |
ಹನನವಾಗಿದೆ ಬಲವು ಭೀತಿಯ ಬೀಜವೇನೆಂದ  || ೩೬೮ ||

ರಾಗ ಪಂಚಾಗತಿ ಮಟ್ಟೆತಾಳ

ಗುರುಕೃಪರನು ಪಿಡಿದಪ್ಪುತ | ಕುರುಪತಿಯರುಹಿದ ಶರಗುರು |
ತರಳನಿಗರುಹುವುದೆಂದೆನೆ | ಶರದ್ವಂತಜ ನಡುಗೆ  || ೩೬೯ ||

ಬಿಡಿ ಬಿಡಿ ಭಯವನು ನಡುಗದೆ | ನುಡಿಯಿರಿ ತನ್ನೊಳು ರಿಪುಗಳ |
ಕಡೆ ವೀರರ ಧುರವೇನೈ | ಕೊಡನಾತ್ಮಜರೆಲ್ಲಿ  || ೩೭೦ ||

ತವ ಪಿತನನು ಪಾಂಚಾಲಿಯು | ಸವರಿದ ದಿಟ ತಾ ನೋಡಿದೆ |
ಬವರದೊಳೆಂದೆನಲಾ ಕೃಪ | ಭವಶೌರ್ಯದಿ ನುಡಿದ  || ೩೭೧ ||

ಭಾಮಿನಿ

ಸಿಟ್ಟಿನೊಳಗುರೆ ದ್ರೌಣಿ ಕರಗಳ |
ನೊಟ್ಟಿನಲಿ ಚಟಚಟನೆ ಸೆಳೆಯುತ ||
ಸೃಷ್ಟಿಯರಸನೆ ನಡೆ ಶಿಬಿರಕೆಂದಟ್ಟಿ ಧನುಗೊಂಡು ||
ಅಷ್ಟರಲಿ ಕೃಪ ನೇತ್ರಜಲಗಳ |
ಬಟ್ಟೆಯೊಳಗೊರಸಲ್ಕೆ ಕ್ರೋಧದಿ |
ತಟ್ಟನಾಹವಕೇಳೆ ನಡುಗಿತು ವಿಷ್ಟಪವು ಭಯದಿ  || ೩೭೨ ||

ಕಂದನಶ್ವತ್ಥಾಮ ನಾನಿರ |
ಲಿಂದು ಜನಕನ ಕಚವ ಧೈರ್ಯದಿ |
ಬಂಧಿಸುತ ಪಿಡಿದೆಳೆದು ಖೂಳನು ತೋರ್ದ ಸಾಹಸವ ||
ಕಂಧರವ ಕಡಿದಿಪ್ಪ ದ್ರೋಹಿಯ |
ಬಂದು ಪಾರ್ಥರು ಬಿಡಿಸೆ ಬಿಡೆ ಬಿಡೆ |
ನಿಂದು ಹರಿಶರ ತೊಟ್ಟು ವೈರಿಯ ಬಡಿವೆ ದಿಟ ದಿಟವು  || ೩೭೩ ||

ಅರ್ಭುತದ ಶೌರ್ಯದಲಿ ವೀರರ |
ಗರ್ಭ ನಡುಗುವ ತೆರದಿ ಕೇಸರಿ |
ಯಾರ್ಭಟೆಯ ಗೆಯ್ವುತ್ತಲಶ್ವತ್ಥಾಮ ಬರೆ ಧುರಕೆ ||
ನಿರ್ಭಯದಿ ಬೇಗದಲಿ ದ್ರುಪದನ |
ಅರ್ಭಕನು ನಡೆತಂದು ಸೈನಿಕ |
ದರ್ಬುದವ ನೆರಸುತ್ತ ನಿಂತನು ಭಲರೆ ಭಲರೆಂದು  || ೩೭೪ ||

ರಾಗ ಕಾಂಭೋಜ ಮಟ್ಟೆತಾಳ

ರಿಪುವ ಕಾಣುತಶ್ವತ್ಥಾಮ ನುಡಿದ ಕೋಪದಿ |
ಕಪಟದಿಂದ ಪಿತನ ಕಡಿದ ಹೇಡಿ ನಿಮಿಷದಿ ||
ಶಪಥದಿಂದ ಯಮನ ಪುರವ ತೋರ್ಪೆ ಧುರದಲಿ |
ವಿಪುಳಹತಿಯ ಸಹಿಸೆನುತ್ತ ಹೊಡೆಯೆ ಸರಳಲಿ   || ೩೭೫ ||

ಫಡಫಡೆಂದು ಧೃಷ್ಟದ್ಯುಮ್ನ ನಿಮ್ಮ ಜನಕನ |
ಕಡಿದ ಖಡ್ಗವೆಂದು ನುಡಿದು ತೋರುತಾಕ್ಷಣ ||
ಕೊಡುವುದೀಗ ನಿಮಗೆ ಬವರದೊಳಗಿದುತ್ತರ |
ಒಡನೆ ಕಡಿವೆ ಕೌರವೇಂದ್ರ ಕಡೆಯ ವೀರರ  || ೩೭೬ ||

ಇನಿತು ನುಡಿದು ಕಾದುತಿರ್ಪ ಕ್ಷಣದಿ ದ್ರೋಣನ |
ತನಯ ಧೃಷ್ಟದ್ಯುಮ್ನ ಸೆರೆಯ ಪಿಡಿವೆ ತತ್‌ಕ್ಷಣ |
ಎನುವ ಸಮಯದಲ್ಲಿ ಭೀಮ ಪಾರ್ಥರೀರ್ವರು |
ಘನತರಾಸ್ತ್ರವೆಸೆದು ಬೇಗ ಬಿಡಿಸಿ ನಿಂತರು  || ೩೭೭ ||

ರಾಗ ಶಂಕರಾಭರಣ ಮಟ್ಟೆತಾಳ

ಅಷ್ಟರೊಳಗೆ ಗುರುಸುಪುತ್ರ | ಸಿಟ್ಟಿನಲ್ಲಿ ಪಾರ್ಥಗೆಂದ |
ಇಷ್ಟಶಿಷ್ಯನೆಂದು ಜನಕ | ನಿಟ್ಟ ಪ್ರೀತಿಗೆ  || ೩೭೮ ||

ಇಷ್ಟು ಫಲವ ಧುರದಿ ಪಿತಗೆ | ಕೊಟ್ಟೆಯಲ್ಲ ಶಿಷ್ಯನಾಗಿ |
ಸೃಷ್ಟಿಯೊಳಗೆ ನಿನ್ನ ಪೋಲ್ವ | ದಿಟ್ಟನಾವನು  || ೩೭೯ ||

ದ್ರೋಣತನಯ ನಿಮ್ಮ ಜನಕ | ಗೋಣ ಕೊಯ್ವೆನೆಂದು ಬರಲು |
ತ್ರಾಣ ತೋರ್ದೆವಲ್ಲಿ ನಾವು | ಪ್ರಾಣ ಪೊರೆಯಲು  || ೩೮೦ ||

ಶಕ್ರಸುತನೆ ಸಾಕು ನಿನ್ನ | ವಕ್ರಮಾತು ನಿಲ್ಲಿಸುವೆನು |
ಚಕ್ರಧಾರಿದಯದಿ ಪೇಳ್ದ | ವಿಕ್ರಮಂಗಳ  || ೩೮೧ ||

ಪಾಕಶಾಸನಿಯು ನುಡಿದ | ಲೋಕಧರನು ನಮ್ಮ ಬಿಡನು |
ಕಾಕು ನುಡಿಗಳೇಕೆ ಜಯದ | ಸೋಕು ದೊರೆವುದೆ  || ೩೮೨ ||

ಭಾಮಿನಿ

ಕಿಡಿಯುಗುಳಿ ಕಂಗಳಲಿ ಕಲ್ಪದ |
ಸಿಡಿಲೆರಗಿ ಭೂವಲಯ ಸುಡುವುದೊ |
ಮೃಡನು ಬಂದನೊಯೆನುತ ಗಗ್ಗಡ ನಡುಗೆ ಸೈನಿಕರು ||
ಕೊಡನ ಸುತನಾತ್ಮಜನು ಶುಚಿಯಲಿ |
ಪಿಡಿದು ನಾರಾಯಣಕಳಂಬವ |
ತೊಡಲು  ಸಮರಾಂಗಣವು ಭಯದಲಿ ಚಿತ್ರದಂತಾಯ್ತು  || ೩೮೩ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹರಿಯು ಪಾರ್ಥಗೆ ಪೇಳ್ದ ತನ್ನಯ | ಶರವ ವೈರಿಯು ಬಿಟ್ಟನಿದಕಿಂ |
ದಿರವು ಬೇರಿಲ್ಲಿಂದು ನಮಿಸಿರಿ | ಭರದೊಳೆಂದ  || ೩೮೪ ||

ಪಾರ್ಥ ಮುಂತಾಗಿರುವ ಸೇನೆಯ | ಪಾರ್ಥಿವರು ವಂದಿಸಲು ಭೀಮನು |
ವ್ಯರ್ಥ ಜನಿಸಿದಿರೆಂದ ಕ್ಷತ್ರಿಯ | ಸಾರ್ಥದೊಳಗೆ  || ೩೮೫ ||

ಷಂಡರಂದದೊಳರಿಯ ಶರಗಳ | ಕಂಡು ನಮಿಸುವ ಭೀರು ರಥಿಕರೆ |
ಗಂಡುತನ ಸುಡಲೆನಲು ಭೀಮನ | ಮಂಡೆಯೊಳಗೆ  || ೩೮೬ ||

ಗಿರಿಯ ಶೃಂಗದೊಳರುಣತೇಜದಿ | ಶರವು ಜ್ವಲಿಸಲು ಕಂಡು ಪಾರ್ಥನು |
ಶಿರದ ಸುತ್ತಲು ವಾರುಣಾಸ್ತ್ರದಿ | ಸುರಿಸೆ ನೀರ  || ೩೮೭ ||

ಆ ಕ್ಷಣದಿ ಶರಜ್ವಾಲೆಯಿಂ | ದಕ್ಷೆಹಿಣೀ ಸೈನಿಕರು ಬೀಳಲು |
ಪಕ್ಷಿರಥ ಮಾರುತಿಯ ತನ್ನಯ | ಪಕ್ಷಕಾಗ  || ೩೮೮ ||

ಸೆಳೆಯೆ ದೇಹವು ಬಳುಕಿ ಬಗ್ಗಲು | ತೊಳಕಿಪೋದುದು ಶರವು ಭೀಮನ |
ತಲೆಯ ಕೂದಲ ಕೂಡ ದಹಿಸದೆ | ಸುಲಭದೊಳಗೆ  || ೩೮೯ ||

ಭಾಮಿನಿ

ಹರುಷಗೊಂಡರು ಪಾರ್ಥಿವರು ಮಿಗೆ |
ನರನು ಪುರುಷೋತ್ತಮನ ಮೋಹದೊ |
ಳೆರಗುತಪ್ಪುತ ಕಾಯ್ದಿರೆಂದನು ಪರಮದಯದಿಂದ ||
ಹರಿಯು ಸ್ಮಿತಮುಖನಾಗಿ ಪೇಳ್ದನು |
ಪರಮಭಕ್ತನು ಭೀಮನದರಿಂ |
ತೊರೆದು ಪೋದುದು ರೋಮಗಳ ಸಹ ತರಿಯದಾ ಶರವು  || ೩೯೦ ||

ರಾಗ ಮಾರವಿ ಏಕತಾಳ

ದ್ರೋಣಾತ್ಮಜ ತಾ ರೋಷದಿ ಕಾಣುತ | ದಾನವರಿಪು ಗೆಯ್ದ ||
ಶಾಣೆತನವತಾ ನೋಡುತಲಗ್ನಿಯ | ಬಾಣವ ಮಿಗೆ ಬಿಸುಟ  || ೩೯೧ ||

ಬಂದಾಕ್ಷಣ ಶರ ಸೇನೆಯ ವೇಗದೊ | ಳೊಂದಕ್ಷೆಹಿಣಿಯ ||
ವೃಂದವ ಸುಡುತಿರೆ ಮಂದರಧರ ಗೋ | ವಿಂದನು ನರಗೆಂದ  || ೩೯೨ ||

ಬಂದಿಹ ಶರವಿದಕಾಗದು ವಾರುಣ | ಮುಂದರಿಸಿತು ಶರವು ||
ಕುಂದದೆ ವೈಷ್ಣವಮಂತ್ರದಿ ರಿಪುಶರ | ವೃಂದವ ಶಮಿಸೆಂದ  || ೩೯೩ ||

ಕಂತುಪಿತನ ನುಡಿ ಕೇಳುತ ಧೈರ್ಯದಿ | ಕುಂತಿಯ ಸುತ ತಾನು ||
ನಿಂತಾಕ್ಷಣ ಹರಿಮಂತ್ರವ ಜಪಿಸುತ | ಸಂತೋಷದಿ ಬಿಡಲು  || ೩೯೪ ||

ಭಾಮಿನಿ

ಭರದಿ ವೈಷ್ಣವಶರವು ವಹ್ನಿಯ |
ಹರಿಬಕನುವಾಗುತ್ತ ಶಮಿಸಲು |
ಪರಮಹರುಷದಿ ನುತಿಸೆ ಮಾರ್ಬಲವೆಲ್ಲ ಜಯವೆನುತ ||
ಅರಿತು ದ್ರೋಣನ ತರಳ ಕೋಪದಿ |
ಪರಮ ಋಷಿಗಳು ಪೇಳ್ದ ಮಂತ್ರಗ |
ಳರಿಯೊಳಿಂದಿಲಿ ವ್ಯರ್ಥವಾದುದೆನುತ್ತ ಧನು ಬಿಸುಟು  || ೩೯೫ ||

ತೊಟ್ಟ ಕವಚವ ಬತ್ತಳಿಕೆ ಶರ |
ವೊಟ್ಟಿನಲಿ ಬಿಸುಟೆದ್ದು ನಡೆಯಲು |
ಸೃಷ್ಟಿಪತಿ ಧೃತರಾಷ್ಟ್ರಸುತ ಭೋ ಕೆಟ್ಟೆನೆನುತೆಂದ ||
ಬಿಟ್ಟು ಸಮರಾಂಗಣದಿ ನೀವು ಗ |
ಳಿಷ್ಟು ಸಿಟ್ಟಲಿ ನಡೆದರೆಮ್ಮಯ |
ಕಷ್ಟಗಳ ಪರಿಹರಿಪರಾರಿನ್ನೊಮ್ಮೆ ಬಿಡಿ ಶರವ  || ೩೯೬ ||

ಅಷ್ಟರಲಿ ಗುರುಜಾತ ಕೋಪಿಸಿ |
ಸೃಷ್ಟಿಪತಿಯೊಡನೆಂದ ನಾವುಗ |
ಳೆಷ್ಟು ಸಾಹಸ ತೋರ್ದೆವೀ ರಣದೊಳಗೆ ನಿನ್ನಿದಿರು ||

ಕೃಷ್ಣ ದಯದಲಿ ಸತತ ಪಾಂಡವ |
ರಿಷ್ಟ ಸಲಿಸುವ ಮರುಳೆ ಪುನರಪಿ |
ಬಿಟ್ಟ ಹರಿಶರ ತೊಡಲು ತನಗಧಿಕಾರವಿಲ್ಲೆಂದ  || ೩೯೭ ||

ಕಂದ

ಈ ಪರಿಯೊಳ್ ದ್ರೌಣಿಯು ಕುರು |
ಭೂಪತಿಗರುಹುತ ತೆರಳಲಿಕಿತ್ತಲು ತಿಳಿದುಂ ||
ತಾಪಸ ವೇದವ್ಯಾಸ ಸ್ವ |
ರೂಪಿಯು ಬಂದಾಗ ದ್ರೌಣಿಯಂ ತಡೆದೆಂದಂ  || ೩೯೮ ||

ವಾರ್ಧಿಕ

ಗುರುಸುತನೆ ಕೇಳು ಪಿಂತಿರುಗಿ ಪೋಪೆಯದೆಲ್ಲಿ |
ಗರಿತು ನೋಡಂತರದೊಳಾರೆಂದು ನಿನ್ನ ನಿಜ |
ಧರಣಿಯೊಳು ದುಷ್ಟನಿಗ್ರಹಕಾಗಿ ಪುಟ್ಟಿರುವ ಹರ ಮಹಾದೇವ ನೀನೇ ||
ಕುರುವರನ ಮಧ್ಯಸಂಗರದಿ ಬಿಡಲನುಚಿತವು |
ಧರಿಸು ಚಾಪಾಂಬುಗಳನೆಂದೆನಲು ನಾಳೆ ಸಂ |
ಗರ ಕೊಡುವೆನೆನುತಾತನಾಜ್ಞೆಯಂ ಕೈಗೊಂಡು ತೆರಳಿದಂ ಮೌನದಿಂದ || ೩೯೯ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಶ್ರೀರಮಣ ತಾನಿತ್ತ ಪಾರ್ಥಸ | ಮೀರಸುತರನು ಕಾಣುತಲಿ ಜಯ |
ಭೇರಿ ಹೊಡಿಸೀಗೆಮಗೆ ಜಯ ಕೈ | ಸೇರಿತೆನುತ  || ೪೦೦ ||

ಶಂಖ ಭೇರಿ ಕಹಾಳೆ ಧ್ವನಿಗಳ | ಪಂಕಜಾಂಬಕನಿದಿರು ಪಾರ್ಥನ |
ಕಿಂಕರರು ಗೆಯ್ದಿದರು ಬಲು ನಿ | ಶ್ಶಂಕೆಯಿಂದ  || ೪೦೧ ||

ಭೀಮ ಬಲಭಾಗದಲಿ ಪೊಗಳುತ | ವಾಮಭಾಗದಿ ವಿಜಯನೀಪರಿ |
ಕಾಮಪಿತ ತಾ ನಡುವೆ ನಡೆದನು | ಧಾಮವನ್ನು  || ೪೦೨ ||

ರೋಮಹರ್ಷಣಿ ಪೇಳ್ದ ಗುಣನಿ | ಸ್ಸೀಮ ಜನಮೇಜಯನೊಳೀಪರಿ |
ಶ್ರೀ ಮಹಾಭಾರತದ ಕಥೆಯನು | ಪ್ರೇಮದೊಳಗೆ  || ೪೦೩ ||

ಈ ಜಗದಿ ಗುರುರಾಜ ಸೇವಕ | ರಾಜಗೋಪಾಲಾಖ್ಯ ಸುಜನಸ ||
ಮಾಜಕೊಂದಿಸಿ ಪೇಳ್ದ ಪಾಂಡುಜ | ರಾಜಕಥೆಯ  || ೪೦೪ ||

ಕವಿಗಳಿದ ಮನ್ನಿಪುದುಯೆನ್ನಯ | ಕವಿತೆಯಲಿ ತಪ್ಪಿರಲು ಶ್ರೀ ಮಾ |
ಧವನ ಚರಿತಾಮೃತದ ಮಧುರಸ | ಸವಿಯ ನೋಡಿ  || ೪೦೫ ||

ಮಂಗಳ

ರಾಗ ಢವಳ ಆದಿತಾಳ

ಮಂಗಳ ಮಾಧವಗೆ | ಯದುಕುಲ | ಪುಂಗವ ಶ್ರೀಹರಿಗೆ ||
ಅಂಗನೆ ದ್ರೌಪದಿಗಕ್ಷಯವಹವಸ |
ನಂಗಳನಿತ್ತ ವಿಹಂಗಮಗಮನಗೆ || ಮಂಗಳಂ  || ೪೦೬ ||

ಸಾದರದಲಿ ನಿನ್ನ | ಭಜಿಸುವೆ | ಬಾದರಾಯಣರನ್ನ ||
ಸೋದೆಯ ಮಠದಲಿ ಭಾವಿ ಪ್ರಭಂಜನ |
ವಾದಿರಾಜರಿಗೊಲಿದಿಹ ಹಯವದನಗೆ || ಮಂಗಳಂ  || ೪೦೭ ||

ಭೂದೇವಿಯ ಕರದಿ | ಸುಸೇವ್ಯ | ಶ್ರೀದ ಹರಿಯ ಭರದಿ ||
ಆದಿವರಾಹನ ರೂಪದಿ ಮೋದವ |
ಸೋದೆಯ ಮಠದೊಳನವರತ ಕೊಡುವಗೆ || ಮಂಗಳಂ  || ೪೦೮ ||

ಗೋತ್ರವನೆತ್ತಿಹಗೆ | ಯತಿಗಳ | ಸ್ತೋತ್ರದಿ ಮೋದಿಪಗೆ ||
ಧಾತ್ರಿಯೊಳಗೆ ವಿಧುನಾಮದಿ ಮೆರೆಯುವ |
ಕ್ಷೇತ್ರದೊಳಿರ್ಪ ಶ್ರೀಕೃಷ್ಣಮೂರುತಿಗೆ || ಮಂಗಳಂ  || ೪೦೯ ||

ಯಕ್ಷಗಾನ ದ್ರೋಣಪರ್ವ ಮುಗಿದುದು

or-latd ��s-P���t-family:Calibri;mso-hansi-theme-font: minor-latin’>ಮಹಾಧ್ವನಿ ಕೇಳಿ ಕಲಶಜ |
ಭೂಮಿಯಲಿ ದುರ್ಜಯನು ಸುತನೀ |
ಭೀಮನಾಡಿದ ನುಡಿಯು ನಿಜವಲ್ಲೆಂದು ಯೋಚಿಸಿದ  || ೩೩೨ ||

 

ರಾಗ ಸೌರಾಷ್ಟ್ರ ತ್ರಿವುಡೆತಾಳ

ಆ ಸಮಯದೊಳಗಿತ್ತ ಲೋಕನಿ | ವಾಸಿ ಯಮಜನ ಕರೆದು ಪೇಳಿದ |
ಬೇಸರಿಸದೀ ದ್ರೌಣಿ ಸುರರ ನಿ | ವಾಸಕಯ್ದ  || ೩೩೩ ||

ಎಂದೆನುತ ಪೇಳೆನಲು ಯಮಜನು | ನೊಂದು ಮನದಲಿ ನುಡಿಯದಿರೆ ಗೋ |
ವಿಂದ ನುಡಿದನು ಗಜವ ನೀ ನೋ | ಡೆಂದು ನಗುತ  || ೩೩೪ ||

;mso-Y��ifP���y:Calibri;mso-hansi-theme-font: minor-latin’>ತಾ ನೊಡುತಲಿ ಮನ |
ಕರಗಿ ಬಂದೆಬ್ಬಿಸುತ ಪೇಳಿದ ದೊರೆಗೆ ಮೂದಲಿಸಿ  || ೧೫೯ ||

 

ರಾಗ ಯರಕಲಕಾಂಭೋಜ ಝಂಪೆತಾಳ

ಎಲವೊ ಕೌರವರರಸನರುಹುವುದ ನೀ ಕೇಳು | ಕಲಹದೊಳು ಮಲಗಿರ್ಪ ಸುಭಟರನು ಕಂಡು ||
ಅಳಲದಿರು ಮನದಿ ಕೊಳುಗುಳದೊಳಗೆ ಮೈ ಮರೆವು | ದಿಳೆಯಪಾಲರಿಗೆ ಕೈವಲ್ಯಕಾರಣವು ||೧೬೦||

ಸತತ ಸಂಗರದೊಳಗೆ ಮತಿಗೆಟ್ಟು ಮಲಗಿ ಭೂ | ಪತಿಯಾಗಿ ಮಲಗಿರ್ಪೆಯಲ್ಲೊ ನೀನಿಂದು ||
ಅತುಳ ಬಲಗಳನು ಪರಿಮಿತಿ ತಪ್ಪಿ ಸವರುವ | ಸ್ಥಿತಿ ನೋಡಿ ಬಳಲುತಿಹ ಗತಿಯಾಯಿತಲ್ಲೊ ||೧೬೧||

ನಾವು ಕದನವ ಮಾಡಲೆಂದರೀ ದೊರೆಪತಿಯ | ಸೋವು ನೋಡುತಲಿರ್ಪ ಪಾವಮಾನಿಯನು||
ಆವ ಭೂಪನು ತಡೆಯುವನು ಭೂಪತಿಯನಾರು | ಕಾವಾತ ಭೈಮಿಯನು ಗೆಲುವಾತನಾರು  ||೧೬೨||

ಹೊಳೆಯ ತರಳನು ಪೇಳ್ದ ಸರಳಮಾರ್ಗವ ಬಿಟ್ಟೆ | ಇಳೆಗಾಗಿ ಸಹಜರನು ಅಡವಿಯೊಳಗಿಟ್ಟೆ ||
ಬಳಲುವುದು ನೀನಿಂದು ಕೊಳುಗುಳದಿ ಜಯವೆಂತೊ | ತಿಳಿಯೆ ನಾ ನಳಿನಾಕ್ಷನೊಲವೆಂತೊ ನಿನಗೆ  ||೧೬೩||

ಭಾಮಿನಿ

ರವಿಜನೆಂದುದ ಕೇಳ್ದು ಕೌರವ |
ಪವಿಧರನವೊಲ್ ಧೈರ್ಯದಲಿ ತಾ |
ವಿವಿಧ ವ್ಯಸನವ ಬಿಟ್ಟು ಕರ್ಣನ ಜರೆವುತಿಂತೆಂದ ||
ಅವಿಯ ಹೆಬ್ಬುಲಿಗಿತ್ತ ತೆರದೊಳ |
ಗಿವನ ರಿಪುಬಲದೊಳಗೆ ಸಿಲುಕಿಸು |
ತವನಿಗರ್ಪಿಸುತುಳಿದ ಷಡ್ರಥರಿದ್ದು ಫಲವೇನು  || ೧೬೪ ||

ಕುರುಪತಿಯ ನುಡಿ ಕೇಳುತಲಿ ರವಿ | ತರಳ ಕೋಪದೊಳಾಗ ಧನು ಶರ |
ಕರದಿ ಪಿಡಿದಿಂತೆಂದ ಭೂಪತಿಯೊಡನೆ ಗರ್ಜಿಸುತ ||
ಧುರದೊಳಗೆ ದಾನವನ ಕೊರಳನು | ತರಿದ ಹೈಡಿಂಬಿಯನು ನೈಋತ ||
ಪುರಕೆ ಕಳುಹುವೆನೆಂದು ನಂಬಿಗೆಯಿತ್ತನಾ ಕರ್ಣ  || ೧೬೫ ||

ಕಂದ

ಈ ಪರಿಯಲಿ ರವಿಜಂ ಕುರು |
ಭೂಪನ ಸಂತಯಿಸುತ ಜಯ ಧೈರ್ಯೋಕ್ತಿಗಳಿಂ ||
ದಾ ಪುರುಹೂತಸುತನ ಪ್ರ |
ತಾಪವ ನಿಲಿಸುವೆನೆಂದಾರ್ಭಟಿಸುತಯ್ತಂದಂ  || ೧೬೬ ||