ಭಾಮಿನಿ
ಕಿಡಿಗೆದರಿಕಲ್ಪಾಂತರುದ್ರನ |
ಪಡಿಯೊಳಿನ ಕುಲತಿಲಕ ಶರವೆ |
ಚ್ಚೊಡನೆ ಯಿಕ್ಕಡಿಗೈದನಾಖರಸುತನ ಖಂಡೆಯವ ||
ಪಿಡಿಯೆ ಖಳ ಬೇರೊಂದು ಧನುವದ |
ಕಡಿದನಿಂತೇಳ್ನೂರು ಬಿಲುಕಡಿ |
ವಡೆಯಲವ ಕ್ರೋಧಾಗ್ನಿ ಭುಲ್ಲೆಸಲ್ಕೆಮತ್ತೆಂದ | ||513||
ರಾಗ ಭೈರವಿ ಏಕತಾಳ
ಭಾಪುರೆನೀಬಲುಜಾಣ || ಪೊಸ |
ಚಾಪವಧರಿಸಿದೆ ಕಠಿಣ ||
ಆ ಪರಿಘನತೆಯಝಲ್ಲಿ | ಬಿಡು |
ಕೋಪವತೋರಿದರಿಲ್ಲಿ ||514||
ಸಾಕೆಲೊ ಬಾಯ್ಬಬ್ಬಾಟ | ಇದು |
ಯಾಕೆಲೋ ನೀ ಕೇಳಧಟ ||
ಆ ಕುರಿಪೆರ್ಚಿದರಾನೆ | ಯಹು |
ದೇ ಕೆಡುಕನೆ ನುಡಿತಾನೆ ||515||
ಈಶನು ಪೂರ್ವದಿ ವೊಲಿದು | ಕೊ |
ಟ್ಟಾಶರವೆಸುವೆನು ತೆಗೆದು ||
ಹೂಸಕವಾಡುವರಲ್ಲೆ | ಜೀವ |
ದಾಸೆಯಿರಲು ನಡೆಗೊಳ್ಳೈ | ||516||
ಮಡನಕಳಂಬವೆಬರಲಿ | ಮೇಣ್ |
ಮಡನೇ ಧುರಕೈತರಲಿ ||
ನಡೆಯುವ ಮಾತಂತಿರಲಿ | ಬಿಡು |
ಕಡುಹನುನೋಡೆನೆ ಕೇಳಿ | ||517||
ತರಿಸಿಕೊ ಸಂಜೀವನವ | ಮೇಣ್ ||
ಬರಿಸಿಕೊಳ್ಳುಳಿವಡೆಕಾವ |
ಗುರುಕುಲದೇವಿಯರುಗಳು | ನಿಂ |
ದಿರುನೀ ಬಳಿಕಿನೊಳೇಳ | ||518||
ದುರುಳ ನಿಮ್ಮೆಲ್ಲರತರಿದು | ಮ |
ತ್ತಿರದೆ ಸಂಜೀವನ ತಂದು ||
ಧುರದಿಮಡಿದರೆಬ್ಬಿಸುವೆ | ಮ |
ದ್ಗುರುವನು ನಿತ್ಯಲು ನೆನೆವೆ | ||519||
ಇನಿತುಪರಾಕ್ರಮನಹೆಯ | ನೋ |
ಡೆನುತಲಿ ಶಿವನಶಕುತಿಯ ||
ಘನತರಕೋಪದೊಳೆಸೆದ | ರಘು |
ಜನಪನಸಡಿಪಡಯೆಂದ |
ರಾಗ ಭೈರವಿ ತ್ರಿವುಡೆತಾಳ
ನುಡಿಯಲೇನಾ | ಭಾಪುರೆ | ನುಡಿಯಲೇನಾ | || ಪಲ್ಲವಿ ||
ಘಣಘಣಾಕೃತಿಯಿಂದಲಗ್ನಿಯ |
ಕಣಗಳನೆಸಲೆಕಾರುತ |
ಕಣುಮವಕೋರೈಸೆಶತದಿನ |
ಮಣಿಯಲಹರಿಯಧರಿಸುತ |
ಅಣದ ಜಾಂಡಗಳನ್ನು ಬೆಚ್ಚಿಸಿ |
ಮಣಿಯ ದೈತರೆ ಕಾಣುತ |
ತ್ರಿಣಯನಸ್ತ್ರಕೆ ವಿಶ್ವಕರ್ಮನ |
ಪ್ರಣಿತಶಕ್ತಿಯನೆಚ್ಚಿರಘುಪತಿ | ||520||
ಪಟುಪರಾಕ್ರಮನಹನುರಾಕ್ಷಸ |
ಕಟಕದೊಳಗಿವನೆನ್ನುತ |
ನಿಟಿಲಲೋಚನನಂತೆ ಖತಿಸಂ |
ಘಟಿಸೆರಾಘವ ಮುಳಿವತ |
ಭಟನೆತಾಳಿದನೆಂದು ತಾನು |
ತ್ಕಟದಶರಗಳಸುರಿಸುತ |
ತಟನಿ ಪಿತಹುಂಕರಿಸಿದನು ಶಚಿ |
ವಿಟಮುಖಾಮರವಂದನಲಿವುತ | ||521||
ವಾರ್ಧಕ
ಕೊರೆದವಂಗೋಪಾಂಗಮಂ ರಾಮನಂಬುಗಳು |
ತೆರೆದ ಜಾಳಂಧ್ರ ಧಂತಾಯ್ತುಗಿದ ಬಟ್ಟೆಗಳು |
ಕರೆದಪೇರ್ಮಳೆಯಿಂದ ನೆನೆದ ಜಾಜಿನ ಗಿರಿಯೊಳಿಳಿವಕೆಂಬೋನಲ್ಗಳ ||
ತೆರದಲೆಸೆೆದೌರಕ್ತಧಾರೆಗಳ್ ಕಾಯದೊಳ್ |
ಮರೆದನೊಡಲಂ ಖರಜರಥದಪಳವಿಗೆಯನೆ |
ಮ್ಮಿರೆ ಕಂಡು ಕಾರ್ಪಣ್ಯಮಂ ತಾಳಿ ಶ್ರೀರಾಮನೆಂದ ಖಳಸಾರಥಿಯೊಳು | ||522||
ರಾಗ ಕಾಂಭೋಜಿ ಅಷ್ಟತಾಳ
ಭಳಿರೆಸಾರಥಿ ಕೇಳುಮಾತ | ರಣ |
ದೊಳುನೊಂದನೋಡು ನಿನ್ನಾತ ||
ಕೊಳುಗುಳದೊಳು ಬಲು | ಬಳಲಿದಾವನ ಕೊಲ್ವು |
ದಿಳೆಯ ವೀರರ ಧರ್ಮವಲ್ಲೆ |
ತಿಳುಪುವೆನುಮದರಿಂದಲೊಂದನು || ಭಳಿರೆ | ||523||
ಭುಜಬಲದೊಳು ಕುಂದುಕಾಣೆ | ಶಸ್ತ್ರ |
ವ್ಯಯಕೆ ಜೋಡಿಲ್ಲ ನಿನ್ನಾಣೆ ||
ನಿಜಪರಾಕ್ರಮ ಧೈರ್ಯ ಭುಜಗಭೂಷಣಗಿಲ್ಲ |
ತ್ರಿಜಗದಲಿ ಹೆಸರಾಂತ ಭಟನಿವ |
ಕುಜನಮಾರ್ಗದಿನಡೆವನಾದರು | ||524||
ನಡುಗುವುದದಕೊ ಸರ್ವಾಂಗ | ನೋಡೆ |
ಬಡವಾದುದಕಟಯೆನ್ನಂಗ ||
ನುಡಿವಮಾತುಂಟು ನಿ | ನ್ನೊಡೆಯನೊಳೆನಗೆ ಕೇಳ್ ||
ತಡೆಯದೌಷಧಿಯಿಂದ ಬದುಕುವ |
ಗೊಡವೆನೋಡೈನಿನ್ನರಥಿಕನ | ||525||
ಭಾಮಿನಿ
ಕೇಳಿಸಾರಥಿಬಳಿಕ ಬಾಳದ |
ಬಾಳನುಗಿದಾಗಾಯಕೌಷಧಿ |
ಹೂಳಿಕರದಲಿ ಮತ್ತೆ ಕಲಶೋದಕದ ಧಾರೆಗಳ ||
ಏಳೆನುತಕಂಗಳಿಗೆ ತಿದ್ದುತ |
ಬೋಳವಿಸುವನಿತರೊಳು ಕಾರ್ಮು |
ತಾಳಿದುದುಕೊಂಡೆದ್ದುನಿಲಲಿನ ಕುಲಜಖಳಗೆಂದ | ||526||
ರಾಗ ತುಜಾವಂತು ಝಂಪೆತಾಳ
ಕೇಳಸುರಕುಲಸುಧಾಂಬುಧಿ ಪೂರ್ಣಚಂದ್ರ |
ಪೇಳುವೆನು ಮಾತೊಂದ ಚಾರುಗುಣಸಾಂದ್ರ || ಪಲ್ಲವಿ ||
ಅನುಜೆಗೋಸುಗ ಹಿಂದೆ | ದನುಜಪತಿಕೇಳ್ ನಿನ್ನ |
ಜನಕನೆನ್ನೊಳುಕಾದಿ ಛಲದಿಜೀವವನು ||
ಜಿನುಗಿಸಿದ ದಿವಸದಲಿ ತೀರಿತೈಪಗೆತನವು |
ತನಯಗಡನೀನವಗೆ ಭಳಿರೆ ಮೆಚ್ಚಿದೆನು || ||527||
ನುಡಿವೆನದರಿಂದ ಕೇಳ್ | ನಿನ್ನ ಕೊಲೆಗೆನ್ನ ಮನ |
ವೊಡಬಡುವುದಿಲ್ಲ ಕಪೆಕಡಲುಕ್ಕಿತೀಗ ||
ಅಡಿಗೆರಗೆಕಾವೆ ವಿಧಿಯುಸಿರಿಹನ್ನೆಬರ ತವ |
ದಢವಪೇಳೆನಲೆಂದಕೇಳ್ದು ಖಳನಾಗ | ||528||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಮಂದಮತಿಯೆಲೆರಾಮ ಮುನ್ನೈ |
ತಂದಕಿವಿಯಿಂದಧಿಕವಾಮಿಗೆ |
ಬಂದಕೋಡತಿ ಕಠಿಣವೆಂಬೀ | ದೊಂದನರಿಯಾ | ||529||
ತಂದವೈರದ ಕಿಚ್ಚುನಿನ್ನಲಿ |
ನಂದಿದಡೆ ನಂದುವುದೆ ತನಗೆಲೆ
ಕೊಂದುದಲ್ಲದೆ ಮಾಣೆ ನಿಲುಧುರ | ಕಿಂದು ಮುಳಿದು | ||530||
ಭಳಿರೆ ರಾಘವ ದಿವ್ಯ ಬಾಣಾ |
ವಳಿಯ ಜೈಸಿದೆನೆಂದು ಧಿಟಹೆ |
ಕ್ಕಳಿಸದಿರು ಸುರರಹಿತರದರಿಂ | ತಳುವದೀಗ | ||531||
ತಲೆಯಬರಹವತೊಡೆವೆನೈಕುಂ |
ಭಿಳೆಸುದತ್ತಮಹಾಸ್ತ್ರವಿದರೊಳು |
ಬಲುಮೆಯನುನೀ ತೋರು ಫಡಹಿಂ | ಚಲಿಸದಿಂದು ||532||
ರಾಮಕೋರಣದಾಸುರಾಹ್ವಯ |
ಭೀಮಬಾಣವ ಮರೆಯದೇತಕೆ |
ಕಾಮಹರಕಮಲಾಸನರು ನಿ | ರ್ನಾಮಿಸುವರೈ | ||533||
ವಾರ್ಧಕ
ಪ್ರಾಣವಿರಲಿಕೆನೋಡಿಕೋರಾಮನಿದುವೆಗೀ |
ರ್ವಾಣನಿಕದಕೊರಳ ಕತ್ತರಿಯು ಮಾನುಷ್ಯ |
ಪ್ರಾಣಿಗಳೆನಿಪ್ಪಮೀನ್ಗಳ ಕಠಿಣಗಾಳವಿದು ಕಾಣೆನೆನೆ ಬೇಡಿದರೊಳು ||
ತ್ರಾಣವಿರೆಸೆಣಸುನಿನ್ನುದರಮಂ ಬಗಿದುಬಿಸಿ |
ಶೋಣಿತವಸವಿವಸ್ತ್ರವಿದುವೆನೋಡೆನುತುಬ್ಬಿ |
ಕ್ಷೋಣಿ ಮಂಡಲಬಿರಿಯುವೊಲೆಚ್ಚನಿನಕುಲನಸಚರಾಚರಂಬೆಚ್ಚಲು | ||534||
ರಾಗ ಭೈರವಿ ತ್ರಿವುಡೆತಾಳ
ಏನನೆಂಬೆ | ಸಾಹಸ | ವೇನನೆಂಬೆ | || ಪಲ್ಲವಿ ||
ಕೋಟಿಮಿತ್ರರ ಬರವೊವಿಲಯಕ |
ರೋಟಿಮಾಲೆಯ ಕೋಪಶಿಖಿಯಸು |
ಕೂಟವೋವರ್ಣಿಸುವಕವಿಯಾ |
ರಾಟವೀಚರನಿಕರವದಕ |
ಣ್ಣೋಟದಲೆ ಕೈವಲ್ಯರಾಗಲು |
ದಾಟಿದುದು ಬಲುಬಾಣನಡೆದುನಿ |
ಶಾಟಹರನಿದಿರಾಗಿಯೆಸು ಗೆಯ |
ಸಾಟಿಗೊಳದುರುಭರದಿಭರದಲಿ | ||535||
ಎತ್ತನೋಡಲು ಭದ್ರಕಾಳಿಯು |
ಮೊತ್ತವೆತ್ತಲು ಮಕರಲೋಚನ |
ತೆತ್ತಲುಂ ಪೆರ್ಮಳೆಯ ಸಿಡುಲುಗ |
ಳೆತ್ತಲುಂ ಸುಳಿಗಾಳಿವರಕ |
ಗ್ಗತ್ತಲುಂ ಮತ್ತೆತ್ತ ಪೆರ್ಬುಲಿ |
ಮೊತ್ತಮುಂ ಮರಿಸಿಂಗ ಶರಭಗ |
ಳೆತ್ತಲುಂ ಕವಿವಸುರಸಂಚಯ |
ಮುತ್ತಿಮೂದಲಿಸಿತ್ತು ರಘುಜನ | ||536||
ಭಾಮಿನಿ
ಅರಿಶರಕೆಬೆಚ್ಚುವನೆಸಾಕ್ಷಾ |
ತ್ಕರನಲಾಮೇಣ್ ಕಪಟನಾಟಕ |
ಧರನೆನಲು ರಘುಸೂನುಖತಿ ಮಸಗಿತು ಸುದರ್ಶನವ ||
ತಿರುಗಿ ನೋಡಿದಡಾಗ ಶಿಖಿಹರಿ |
ಹರಿಗಳಯುತಾಯುತ ಸಹಸ್ರದ |
ಕಿರಣದಲಿ ನಿಜ ದುಗ್ರರೂಪದೊಳೈದಿತಾರ್ಭಟಿಸಿ | ||537||
ರಾಗ ಅಖಂಡಮಾರವಿ ಏಕತಾಳ
ಜರಿದುದೊಸುರಗಿರಿ | ಧರಣಿಯು ಕುಗ್ಗಿತೊ |
ಶರಧಿಗಳ್ ಬತ್ತಿತೊ | ಭರದಿಂದುರಿಯಿಂ |
ದರುಹುವಡರಿಯದು | ಉರಗಕಮಠದಿ |
ಕ್ಕರಿಗಳಿಗುಬ್ಬಸ | ಬರಿಸುತ ಘರ್ಜಿಸು | ತೇನನೆಂಬೆ | ||538||
ಹುಟ್ಟಿದ ಕಾಳಿಯ | ಥಟ್ಟುಗಳನು ಎ |
ಬ್ಬಟ್ಟುತ ಖಳರನು | ಮೆಟ್ಟುತ ವಿಧವಿಧ |
ಕುಟ್ಟುತಮಾಯಾ | ಬಟ್ಟೆಗರನು ಬಹ |
ಳಟ್ಟಹಾಸದಿಮಿಗೆ | ಸುಟ್ಟುರುಹಿದುದ | ಏನನೆಂಬೆ | ||539||
ಅರೆರೆಯಿದಚ್ಚರಿ | ಕರವೆನೆ ಬಳಿಕಾ |
ಖರ ಸುತನೋರ್ವನ | ನಿರಿಸುತ ರಾಮನ |
ಚರಣಕೆರಗೆಯೇ | ನ್ಪರಿಮುಂದೆನಲದ |
ಭರದಿಂ ಮನ್ನಿಸಿ | ಜರೆದನುಖಳನ | ಏನೆನೆಂಬೆ | ||540||
ಭಾಮಿನಿ
ಅರರೆಕೇಳ್ ಖಳನಾಯಿಬಗುಳಿದೆ |
ಹರದ್ರುಹಿಣಶಕ್ರಾದ್ಯರಿದರೊಳು |
ಹರಣವಿಡಿಯರೆನುತ್ತ ಕಂಡ್ಯಾನಮ್ಮಕೈಗುಣವ ||
ಅರಿಗಳನು ಸಂಹರಿಪೆನಲ್ಲದೆ |
ತಿರುಗೆವಾವ್ಸಂಗರದಿತಿಳಿನೀ |
ಖರಜನೋ ಮೇಣ್ ಖರನೊ ಪೇಳೈಯೆನೆರಘುಪ್ರಭವ | ||541||
ರಾಗ ಶಂಕರಭರಣ ಮಟ್ಟೆತಾಳ
ನೆಲನಬಿಟ್ಟ ಹೇಡಿ ಮನುಜ |
ಕುಲದಿ ಹೇಡಿವನದಿ ತನ್ನ |
ಲನನೆಯನ್ನು ಕಳೆದ ಹೇಡಿ | ನಿಲದೆ ಕಪಿಗಳ ||
ಬಲವನೆರದ ಹೇಡಿ ಮೋಸ |
ದಲಿಸುರೇಂದ್ರ ಸುತನಕೊಂದ |
ಬಲವಿಹೀನ ನಿನ್ನ ಶೌರ್ಯ | ನೆಲೆಯ ಕಾಂಬೆಲಾ | ||542||
ಮರುಳು ಕಾಗೆ ಬಡಿದ ಹೆಮ್ಮೆ |
ಧುರದಿ ಪಿತನಕೊಂದ ಹೆಮ್ಮೆ |
ಶರಧಿ ಬಲಿದ ಹೆಮ್ಮೆಯಿಂದ | ಮೆರೆಯಬೇಡೆಲಾ ||
ವರವಿಭೀಷಣಾಂಕ ಖೂಳ |
ನಿರದೆ ಶರಣನಾದ ಹೆಮ್ಮೆ |
ಮುರಿಯದಿರೆನಜಾಸ್ತ್ರವಿದ ಕೊ | ಸುರಿದೆಕೊಳ್ಳೆಲಾ | ||543||
ಸುರರಹವಿಯಕಳುವದ್ರೋಹಿ |
ಸುರಪ ಸತಿಯನೆಳೆವ ದ್ರೋಹಿ
ಸುರೆಯಕುಡಿವ ದ್ರೋಹಿ ಪಿತನ || ತೊರೆದ ದ್ರೋಹಿಯೆ ||
ಜರೆವನಮಗೆ ದ್ರೋಹಿನಾಯಿ |
ವೊರಲೆಸ್ವರ್ಗಕೆಡುಗೆ ದ್ರೋಹಿ |
ಬರುವಶರವತರಿದೆ ದ್ರೋಹಿ | ಪರಮ ದ್ರೋಹಿಯೆ | ||544||
ಭಾಮಿನಿ
ಮುಂಚಿತೇನಿನ್ನೆಸುಗೆಸರಳಿನ |
ಸಂಚಯವನೋಡಾದಡೆನುತವಿ |
ರಿಂಚಿಪಿತನೊಂದಂಬಿನಲಿರಿಪುಭಟನ ಸಾರಥಿಯ ||
ವಂಚಿಸಿದನಾತುರಗ ನಾಲ್ಕರ |
ಮಿಂಚಕೆಡಹಿವರೂಥವನು ಹರಿ |
ಹಂಚುಮಾಡಿ ಮದಾಂಧನೆಸುಗೆಯಧನುವ ಖಂಡಿಸಿದ | ||545||
ರಾಗ ಶಂಕರಾಭರಣ ಮಟ್ಟೆತಾಳ
ಒಡನೆ ಕಿಡಿಯನುಗುಳಿ ಖರಜ |
ನುಡಿದನೆಲೆಲೆ ಮನುಜಧನುವ |
ಕಡೆದಡೆಮ್ಮ ಕಲಿತನಕ್ಕೆ | ತೊಡಕದೇನೆಲಾ ||
ಕಡಿದಡೆಮ್ಮ ಕಲಿತನಕ್ಕೆ |
ತೊಡಕದೇನು ನೋಡುಗದೆಯ |
ಕಡುಹನೆಂದು ಗಜರುತಿಟ್ಟ | ಪೊಡವಿ ಪಾಲಗೆ | ||546||
ವೈರಿಗದೆಯ ಕಡಿದುಸಾರು |
ಸಾರುಕುನ್ನಿ ಕೂಗಬೇಡ |
ತೋರುಬಲುಹನೆನ್ನೊಳೆನುತ | ಲಾರು ಭಟಿಸುತ ||
ತೋರುಬಲುಹನೆನ್ನೊಳೆನುತ |
ಲಾರುಭಟಿಸಿದನುಜನಸಿಯ |
ಧಾರೆಯಿಂದತಿವಿಯೆ ಕಡಿದ | ನಾರಘೋತ್ತ ಮ | ||547||
ನಿಂದು ಖಳನು ಬಳಿಕನೊಂದ |
ಹಂದಿಯಂತೆ ಪಲ್ಗಡಿಯುತ |
ಲೆಂದ ಭಲರೆನರಸಮರ್ಥ | ನೆಂದು ಕೋಪದಿ ||
ಎಂದ ಭಲರೆನರಸಮರ್ಥ |
ನೆಂದು ಕೋಪದಿಂದ ಚಕ್ರ |
ದಿಂದಲೆಚ್ಚಡರಿಯೆ ಮುಳಿಸಿ | ನಿಂದಲಾಕ್ಷಣ | ||548||
ಭಾಮಿನಿ
ಏರಿತಧಿಕಕ್ರೋಧಶಿಖಿಕಿಡಿ |
ಹಾರಿದವುಕಂಗಳಲಿ ತನುಕಾ |
ಹೇರಿದುದು ಕಾರ್ಬೊಗೆವಿಟಾಳಿಸಿತುರಿಯ ಚೂಣಿಯಲಿ ||
ಮಾರುಗೊಂಡನು ವಿಲಯರುದ್ರನ |
ತೋರಿಕೆಯ ತಮದುಬ್ಬರವನೆನೆ |
ತೂರಿಗಿಡಗಳದಿವ್ಯ ಶೂಲವನೆತ್ತಿ ಬೊಬ್ಬಿರಿದ | ||549||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಇದು ಕಣಾರಘುನಾಥ ನಿನ್ನಯ |
ಮದ ಶಿಲೋಚ್ಚಯವಜ್ರಸೀತಾ ||
ಸುದತಿಕಾಂಕ್ಷೆಯನಿಪ್ಪರೋಗವ | ನೊದೆವ ಮದ್ದು | ||550||
ಇದು ಕಣಾಮತ್ಪಿತನ ಜಯಫಲ |
ವಿದುವೆರಿಪುವೇತಂಡ ಮೃಗಪತಿ |
ಕದನದಲಿ ನಿಕೈಕೊತಪ್ಪದಿ | ರಿದಕೆಭಳಿರೆ | ||551||
ಸುಡುವುದಿದು ತ್ರೈಭುವನನಿನ್ನು |
ಗ್ಗಡವ ಕೊಂಬುದೆ ಶಿವಕರಾಗ್ರದಿ |
ಪಿಡಿವುದಿದು ನೋಡೆಂದು ಖಳಭೋ | ರ್ಗುಡಿಸಿ ಕೆರಳಿ | ||552||
ಸುಡುಸುಡೆಲೆನಿಶಿಚರ ಪಿಶಾಚಿಯೆ |
ಬಿಡು ತ್ರಿಶೂಲವ ಬಗೆವೆನೇನಾ |
ಸುಡುವೆ ಮುನಿದಡೆಯಜಕಟಾಹವಿ | ದೊಡನೆ ತಿಳಿಯೈ | ||553||
ಆದಡಿದಕೋ ಯೆನುತಲಾಖರ |
ಸೂದನನು ಖರಸೂನು ಶೂಲದ |
ಹಾದಿಗಜಶರವೆಚ್ಚತ್ರಿಜಗ | ನ್ಮೋದಿಸಲ್ಕೆ | ||554||
ವಾರ್ಧಕ
ಉಭಯಭಟರೆಚ್ಚಸ್ತ್ರ ಶಿಖಿಧೂಮಜ್ವಾಲೆಗಂ |
ದಭವಾದಿಸುರರಳ್ಕಿ ಹಾ ರಘೂತ್ತಮನೆನನೆ |
ಲ್ಕಭಯಹಸ್ತವ ತೋರಿಸಚರಾಚರಾತ್ಮಕಕಂ ಖದ್ಯೋತತನುಭವನನು ||
ವಿಭವದೀ ನಿಜಶರದಬೆಂಬಳಿಯನೇಮಿಸಲ್ |
ರಭಸದಿಂದರಿಶೂಲಮಂ ಝಡಿದುರಿಪುಶಿರವ |
ನಭಕೇರಿಸಿತು ಕೂಡೆಸುರರಸುಮ್ಮಾನಮಂಪೊಗಳ್ವಕವಿಯಂ ಕಾಣೆನು | ||555||
ಭಾಮಿನಿ
ಶರಕೆಕಾಣಿಕೆಯಿತ್ತು ನಭದಲಿ |
ಕರವ ಮುಗಿದರು ಸುರರು ಸುಮನೋ |
ವರುಷವನು ಸೂಸಿದರು ಸೀತಾಪ್ರಿಯನ ಸಿರಿಮುಡಿಗೆ ||
ಮೊರೆವದುಂದುಭಿಕಹಳೆಗಳ ಸು |
ಸ್ವರದೊಳಾಗಮರಿಯರು ಪಾಡುತ |
ನೆರೆಸುಳಿಸುತಾರತಿಯ ಜಯವೆಂದರು ರಘೂತ್ತಮಗೆ | ||556||
ರಾಗ ಸಾಂಗತ್ಯ ರೂಪಕತಾಳ
ತರಳರುಕೇಳಿರಾ ಶರಬಂದು ಪುಗೆರಘು |
ವರನ ಹೊಮ್ಮೂಡಿಗೆ ಗಾಗ ||
ಇರದಿತ್ತ ಸೌಮಿತ್ರಾದ್ಯರು ಖಳಬಲವನು |
ತರಿದು ಬಂದೆರಗಲು ಬೇಗ | ||557||
ಬರಸೆಳೆವುತ ರಾಮ ನೊರೆದ ಸರ್ವರು ನೀವು |
ದುರುಳರೊಳಿಂದಿನಾಹವದಿ ||
ಪಿರಿದಾಗಿ ಬಳಲಿಬಂದಿರಿ ಬಳಿರೆನುತುಪ |
ಚರಿಸಿದಡಾಗಸನ್ಮುದದಿ ||558||
ಹರಿನಿನ್ನ ಮಹಿಮೆಯ ನೊರೆಯಲಾರಿಗೆ ಸಾಧ್ಯ |
ಪರಬ್ರಹ್ಮನಹುದು ನೀನೆಂದು |
ತರಣಿಜಾದ್ಯರು ಕೂಡಿ | ತರಣ್ಯಸ್ತಮಯ ನೋಡಿ |
ಸರಿದರ್ಬೀಡಿಕೆಗೆ ರಾಜೇಂದ್ರ | ||559||
ವಾರ್ಧಕ
ಮತ್ತೆಶಕ್ರಾರಿದುರ್ಮದಸು ಪಾರ್ಶ್ವಕರ ಮೇ |
ಲೊತ್ತಿ ರಾವಣನ ಲಂಕೆಯ ವಿಭೀಷಣಗಿತ್ತು |
ಮತ್ತ ಕಾಶಿನಿಯವೊಲಿಸುತ್ತನುಜ ಸಹಿತವರ ಪುಷ್ಪಕಾರೂಢನಾಗಿ ||
ಉತ್ತುಂಗಬಲದೊಡನೆ ಪೊಕ್ಕಯೋಧ್ಯೆಯ ಸಹಜ |
ಮೊತ್ತಮಂ ಮನ್ನಿಸುತ ಕೌಸಲ್ಯೆ ಮೊದಲಾದ |
ಮಾತೃಗಳಿಗೊಂದಿಸುತ ಶುಭಮಜ್ಜನದ ಮೇಲೆ ಮಾಂಗಲ್ಯಸುಮೂರ್ತದಿ | ||560||
ಸರುವರಭಿ ಮತದಿಂದ ಪಟ್ಟಾಭಿಸೇಚನವ |
ಧರಿಸಿದಂಪತಿಸಹಿತರಾಘವಂ ಮಗುಳೆ ಸುರ |
ನರ ಭುಜಂಗಾದಿ ಲೋಕಾಧಿಪರು ಮುನಿವರರು ಕೈಸೇರ್ದರಾ ಸಭೆಯೊಳು ||
ಪರತರಾನಂದ ಸ್ವರೂಪಸುಕಲಾಪಂಗೆ |
ಗುರುವಸಿಷ್ಠಾದಿಗಳು ಮಂತ್ರಾಕ್ಷತೆಯ ತಳಿಯೆ |
ಹರನರಸಿಮುಖ್ಯನಿಬಿಡಸ್ತನೆಯರಾರತಿಯನೆತ್ತಿದರು ಸುಸ್ವರದೊಳು | ||561||
ರಾಗ ಢವಳಾರ ಏಕತಾಳ
ಶ್ರೀ ರಮಾಧವಗೆ ರಾಘವಗೆ |
ನೀರಜಾಕ್ಷಗೆ ಜಗನ್ಮಯಗೆ ||
ಧಾರಿಣಿಸುತೆ ಮುಖಕೈರವಹರಿಗೆ |
ವಾರಿಧಿ ನಿಭಗಂಭೀರವಿಕ್ರಮಗೆ ||
ವಾರಿಧಿಬಲಿದಸುರಾರಿಗೆ ರಾವಣ |
ವೈರಿಗೆ ತೋಷದಿ ಜಾನಕಿರಮಣಗೆ |
ಮೇರು ವೆಯಾರತಿಯ ಬೆಳಗಿರೆ | ಶೋಭಾನೆ ||562||
ಶರಧಿಯೊಳಾಡಿ ಮಂದರವ |
ಧರಿಸಿಸೂಕರನಾಗಿ ಮೆರೆವ ||
ನರಹರಿವಾಮನ ಕೊಡಲಿಯ ಪಿಡಿವ |
ಧರಣಿಪದಶರಥಗುದಿಸಿ ಶೋಭಿಸುವ ||
ಪರಿಪರಿರೂಪದಿ | ಮೆರೆವಮಹಾತ್ಮಗೆ |
ಶರಣರ ಪೊರೆವಸು | ಸ್ಥಿರಕರ ರಾಮಗೆ
ಕುರುಚಿನಾರತಿಯ ಬೆಳಗಿರೆ | ಶೋಭಾನೆ | ||563||
ಭಂಗಾಳಕಿಯರು ತೋಷದಲಿ |
ರಂಗಧಾಮನಪದ ಪೊಗಳುತಲಿ ||
ತುಂಗಕುಚದ ಬಲುಭಾರಂಗಳಲಿ |
ಸಿಂಗನವೋಲ್ಕಟಿ ಸಿಕ್ಕಿ ತೆನುತಲಿ |
ತಿಂಗಳವದನೆಯ ರಂಗಜನಯ್ಯ ಭು |
ಜಂಗಶಯನ ಪಾಂಡು | ರಂಗಶ್ರೀ ರಾಮಗೆ |
ಮಂಗಲಾರತಿಯ ಬೆಳಗಿರೆ | ಶೋಭಾನೆ | ||564||
ಭಾಮಿನಿ
ಬಳಿಕಲಾಸುಗ್ರೀವ ಜಾಂಬವ |
ನಳಹನುಮ ನೀಲಾಂಗದಾದ್ಯರ |
ಕಳುಹಿದನು ಪಲವಿಧದಿ ಮನ್ನಿಸಿಮಿಗೆ ವಿಭೀಷಣನ ||
ತಳುವದುಪಚರಿಸಿಸುತ್ತ ಮರಳಿ ಚು |
ತಿಳೆಯಸುತೆ ಸಹಜಾವಳಿಗಳೊಡ |
ನಿಳೆಯ ಹರುಷದೊಳಾಳುತಿರ್ದನಪಾಲಕುಲರನ್ನ | ||565||
ವಾರ್ಧಕ
ಈ ತೆರದಿ ವಾಲ್ಮೀಕಿ ಕುಶಲವರಿಗೆಂದಕಥೆ |
ಭೂತಳದೊಳಧಿಕ ಬಾಯಾರಗ್ರಾಮದೊಳುವಿ |
ಖ್ಯಾತಹವ್ಯಕದ್ವಿಜೋತ್ತಮ ಜತ್ತಿಕೃಷ್ಣಯ್ಯ ನುದರಾಬ್ದಿಪೂರ್ಣಚಂದ್ರ ||
ಜಾತನೀಶ್ವರನೆಂಬ ಬಾಲನಾಂ ವಿರಚಿಸಿದೆ |
ನೀತೆರದಿ ಗುರುವಿಶ್ವನಾಥ ಪೇಳಿಸಿದಂತೆ |
ಚಾತುರ್ಯಸೊಂಪಿರದಡೇನು ಹರಿನಾಮಮಿರೆ ಪೆರತೆಲ್ಲಮೆರೆಸಿಸಾಂದ್ರ | ||566||
ರಾಗ ಸೌರಾಷ್ಟ್ರ ಏಕತಾಳ
ಮಂಗಲವೆನ್ನಿರೊ ಮಹನೀಯಗೆ |
ಕಂಗಳು ಮೂರುಳ್ಳಕಮನೀಯಗೆ | || ಪಲ್ಲವಿ ||
ಗಂಗೆಯಪೊತ್ತ ಭುಜಂಗಭೂಷಣನಿಗೆ |
ರಂಗನ ಪ್ರಿಯ ಸಾಧು ಸಂಗನಿಗೆ || ಮಂಗಲಂ || || ಅ. ಪ ||
ಫಾಲನೇತ್ರಗೆ ಪರಮೇಶ್ವರಗೆ
ವ್ಯಾಳಭೂಷಣಗೆ ವಿಶೇಷನಿಗೆ
ಬಾಲೇಂದುಧರಸರ್ವೇಶ್ವರಗೆ |
ಬಾಲಾರ್ಕತೇಜ ವಿಶ್ವೇಶ್ವರಗೆ || ಮಂಗಲಂ ||567||
ನಿತ್ಯನಿರಾಮಯ ನಿರ್ಗುಣಗೆ |
ನಿತ್ಯಾತ್ಮರೂಪಚಿದಂಬರಗೆ ||
ಸ್ತುತ್ಯಸುರಾಸುರ ಭತ್ಯಜನೊದ್ದರ |
ಕಾತ್ಯಾಯನಿ ಪ್ರಿಯನಿತ್ಯನಿಗೆ | ಮಂಗಲಂ ||568||
ಈಶಪರೇಶ ಸುರೇಶನಿಗೆ |
ಶೇಶಕುಂಡಲಗೆ ವಿಶ್ವೇಶ್ವರಗೆ ||
ನಾಶರಹಿತಗೆ ಸಂತೋಷಿಗೆ ಮಮಗುರು |
ಕಾಶಿ ವಿಶ್ವೇಶ್ವರ ಶ್ರೀ ಶಿವಗೆ || ಮಂಗಲಂ ||569||
ಸಂಪೂರ್ಣ
Leave A Comment